Can't view this email, click here to view in a browser

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ( ಕೊಯರ್) ಸಂಚಿಕೆ - ಜನವರಿ 14, 2014

ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ; ಇಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು.  


ಕೊಯರ್ ರಚನೆ
ಡಿಸೆಂಬರ್ ಮಾಹೆಯಲ್ಲಿ ಕೊಯರ್ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮತ್ತು ಕೊಯರ್ ಗೆ ನೆರವು ನೀಡುವ ಬಗೆಗಿನ ವಿಷಯ ಶಿಕ್ಷಕರ ವೇದಿಕೆ. ಜಿಲ್ಲಾ ಹಂತದ ಅನುಕ್ರಮ ಕಾರ್ಯಾಗಾರಗಳು 19 ಜಿಲ್ಲೆಗಳಲ್ಲಿ ಮುಂದುವರೆದಿವೆ.

ಗುಲಬರ್ಗಾ ವಿಭಾಗದ ಡಯಟ್/ಸಿಟಿಇ ಉಪನ್ಯಾಸಕರಿಗೆ ಕೊಯರ್ ಸಂಪನ್ಮೂಲ ರಚನೆ, ಬಳಕೆ ಮತ್ತು ನೆರವು ನೀಡುವ ಬಗ್ಗೆ ವೆಬ್ ಆಧಾರಿತ ಕಾರ್ಯಗಾರವನ್ನು ಸಿಟಿಇ ಗುಲಬರ್ಗಾ ದಲ್ಲಿ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸಲಾಯಿತು . ಈ ವರ್ಷದಲ್ಲಿ ಈ ಕೆಳಕಂಡ ಅಂಶಗಳ ಮೇಲೆ ಗಮನವಹಿಸಲಾಯಿತು.

ಶಿಕ್ಷಕರಲ್ಲಿ ಕಂಪ್ಯೂಟರ್ ಕೌಶಲವನ್ನು ಹೆಚ್ಚಿಸಸುವುದು:

  1. ಅಂತರ್ಜಾಲ ಬಳಕೆಯ ಮೂಲಕ ಕಲಿಕಾ ಅವಕಾಶಗಳನ್ನು ಪರಿಸಯಿಸುವುದು

  2. ಇತರರೊಡನೆ ಸಂವಹನ ಸಾಧಿಸಲು ಇಮೇಲ್ ವೇದಿಕೆ ಮತ್ತು ಚರ್ಚಾ ವೇದಿಕೆ ಬಳಸುವುದು
  3. ವಿದ್ಯುನ್ಮಾನ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು
  4. ಕೊಯರ್ ಪ್ರಕ್ರಿಯೆಲ್ಲಿ ಭಾಗವಹಿಸುವುದು ಮತ್ತು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಮತ್ತು ಸಂಪನ್ಮೂಲಗಳ ನೆರವು ನೀಡುವುದು

ಮುಂದಿನ ಕೊಯರ್ ಸಂಚಿಕೆಗಾಗಿ ಜನವರಿ 28 2014ರೊಳಗೆ ನೆರವು ನೀಡಿ . ನಿಮ್ಮ ಲೇಖನಗಳನ್ನು KOER@karnatakaeducation.org.in ಗೆ ಇಮೇಲ್ ಮಾಡಬಹುದು.
ಕೊಯರ್ ನಲ್ಲಿನ ಹೊಸ ವಿಷಯ
ಈ ಕೆಳಕಂಡ ವಿಷಯಗಳ ಸಂಪನ್ಮೂಲಗಳು ಕೊಯರ್ ನಲ್ಲಿ ಲಭ್ಯವಿವೆ.
ವಿಜ್ಞಾನ:
ಆಹಾರ , ಜೀವ_ವಿಕಾಸ , ಜೀವನ_ಕ್ರಿಯೆಗಳು
ಸಮಾಜ ವಿಜ್ಞಾನ:
ಪ್ರಾಕೃತಿಕ_ವಿಭಾಗಗಳು
ಕರ್ನಾಟಕದ ವಾಯುಗುಣ ಮಣ್ಣುಗಳು ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತ
ಕ್ರಾಂತಿ_ಹಾಗೂ_ರಾಷ್ಟ್ರ_ಪ್ರಭುತ್ವಗಳ_ಉದಯ
ಕರ್ನಾಟಕದ ಭೂ ಸಂಪತ್ತು

“ಶಿಕ್ಷಣದಲ್ಲಿ ICT ಬಳಕೆಯ ಮೂಲಕ ಮುಕ್ತ ಸಂಪನ್ಮೂಲ ಅಭಿವೃದ್ದಿ ಮತ್ತು ಕಲಿಕಾ ಸಮುದಾಯದ ಮೂಲಕ ಸಹವರ್ತಿ ಕಲಿಕೆ ಬಗೆಗಿನ” ಸ್ವ-ಅಭಿಪ್ರಾಯಗಳನ್ನು ಕೆಲವು ಭೋದಕ ಶಿಕ್ಷಕರು ಹಂಚಿಕೊಂಡಿದ್ದಾರೆ, ಅವುಗಳಲ್ಲಿ ಶ್ರೀಮತಿ ಶಂಕರಮ್ಮ , ಶ್ರೀ ಶಬಾನಾ ಹಾಗೂ ಶ್ರೀಯುತ ಲಿಂಮ್ಕರ್ ರವರ ವೀಡಿಯೋಗಳನ್ನು ಇಲ್ಲಿ ನೋಡಬಹುದು.


ಜಿಲ್ಲಾ ಹಂತದ ಕಾರ್ಯಗಾರ
ಬೆಂಗಳೂರು ವಿಭಾಗ
ಬೆಂಗಳೂರು ನಗರ , ಚಿಕ್ಕ ಬಳ್ಳಾಪುರ,   ಚಿತ್ರದುರ್ಗಶಿವಮೊಗ್ಗ .   ಬೆಳಗಾವಿ ವಿಭಾಗ
 ಬಾಗಲಕೋಟೆ ಬೆಳಗಾವಿ/ಚಿಕ್ಕೋಡಿ,    ಧಾರವಾಡ
ಗುಲಬರ್ಗಾ ವಿಭಾಗ
ಕೊಪ್ಪಳ,   ರಾಯಚೂರು,  ಯಾದಗಿರಿ.
ಮೈಸೂರು ವಿಭಾಗ
 ಚಿಕ್ಕಮಗಳೂರು ದಕ್ಷಿಣ ಕನ್ನಡ,  ಹಾಸನ ಮಂಡ್ಯ,  ಉಡುಪಿ

ಜಿಲ್ಲಾ ಹಂತದ ಅನುಕ್ರಮ ಕಾರ್ಯಾಗಾರಗಳ ವೇಳಾಪಟ್ಟಿ ಮತ್ತು ವಿವರಗಳನ್ನು ಇಲ್ಲಿ ಕಾಣಬುಹುದು.

ಮುಂದಿನ ಕಾರ್ಯಕ್ರಮಗಳು

ಜಿಲ್ಲಾ ಹಂತದ ಕಾರ್ಯಗಾರಗಳು ಮುಂದುವರೆಯಲಿವೆ . ಕೊಯರ್ ಕಾರ್ಯಗಳ ವಿಶ್ಲೇಷಣೆ ಮತ್ತು ಮುಂದಿನ ಯೋಜನೆ ತಯಾರಿಗಾಗಿ ಸಂಪನ್ಮೂಲ ವ್ಯಕ್ತಿಗಳ 3 ನೇ ಹಂತದ ಕಾರ್ಯಗಾರವನ್ನು ಯೋಜಿಸಲಾಗಿದೆ. ಪ್ರಶ್ನೆ ಪತ್ರಿಕೆಗಳು, ವೀಡಿಯೋಗಳು ಮತ್ತು ಜಿಯೋಜೀಬ್ರಾ ಅನ್ವಯಕಗಳನ್ನು 8,9 & 10 ನೇ ತರಗತಿಯ ಆಯಾ ಅಧ್ಯಾಯಗಳಿಗನುಗುಣವಾಗಿ ಸೇರಿಸಲಾಗುವುದು. .

ಹೊಸ ಅನ್ವಯಕಗಳ ( ಅಪ್ಲಿಕೇಶನ್) ಕಲಿಕೆ

ಟರ್ಟಲ್ ಆರ್ಟ್ ಎಂಬುದು ಸಾರ್ವಜಿಕ ತಂತ್ರಾಂಶದ ಶೈಕ್ಷಣಿಕ ಟೂಲ್ . ಈ ಟೂಲ್ ಮೂಲಕ ವಿಶ್ಯುಯಲ್ ಪ್ರೋಗ್ರಾಮಿಂಗ್ ಕಲಿಯಬಹುದು . ಶಿಕ್ಷಕರು ಮತ್ತು ಮಕ್ಕಳು ಈ ಟೂಲ್ ಬಳಸುವ ಮೂಲಕ ವಿವಿಧ ಆಕಾರಗಳನ್ನು , ಅನಿಮೇಟೆಡ್ ಆಕೃತಿಗಳನ್ನು ರಚಿಸಬಹುದಾಗಿದೆ. ಟರ್ಟಲ್ ಆರ್ಟ ಬಗೆಗಿನ ಪರಿಚಯ ಅದ್ಯಾಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ವಿಶೇಷತೆ

ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮಹಬಲೇಶ್ವರ್ ಭಾಗ್ವತ್ ಸರ್ ರವರು (GHS ಕೆದೂರು, ಕುಂದಾಪುರ, ಉಡುಪಿ) MHRD ವತಿಯಿಂದ ಪ್ರತೀ ವರ್ಷ ನಡೆಸುವ ICT ಪುರಸ್ಕಾರದ , 2012-13ನೇ ಸಾಲಿನ ಜ್ಯೂರಿ ಆಯ್ಕೆ ಸಮಿತಿಯ ಮುಂದೆ “ಭೋದನೆ ಮತ್ತು ಕಲಿಕೆಯಲ್ಲಿ ತಾವು ICT ಅಳವಡಿಸಿಕೊಂಡಿರುವ ” ಬಗ್ಗೆ ಮಂಡನೆಮಾಡಿದ್ದಾರೆ. ಈ ಸಭೆಯು ಡಿಸೆಂಬರ್ 30-31 ರಂದು NCERT ದೆಹಲಿಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಬಗೆಗಿನ ಮಹಾಬಲೇಶ್ವರ್ ರವರ ಅನುಭವ ಲೇಖನವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ, ಹಾಗೂ ಪೋಟೋಗಳನ್ನು ಸಹ ಇಲ್ಲಿ ನೋಡಬಹುದು.
ನಿಮಗಿದು ಗೊತ್ತೆ..?

www.Samachar.com ಎಂಬ ವೆಬ್ ತಾಣದ ಮೂಲಕ ಭಾರತದ ಪ್ರಖ್ಯಾತ ದಿನಪತ್ರಿಕೆಗಳನ್ನು ಓದಬಹುದು http://kannada.samachar.com/ ಎಂಬ ವೆಬ್ ತಾಣದ ಮೂಲಕ ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಓದಬಹುದಾಗಿದೆ.