Can't view this email, click here to view in a browser
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೊಯರ್) ಸಂಚಿಕೆ - ಮಾರ್ಚ್ 6, 2014
ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ ; ಅಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು.

ಕೊಯರ್ ರಚನೆ
ಫೆಬ್ರವರಿ ತಿಂಗಳಿನಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಗೆ 3 ದಿನದ ಕೊಯರ್ ಕಾರ್ಯಾಗಾರ ನಡೆಸಲಾಯಿತು. ಜಿಲ್ಲಾ ಹಂತದ ಅನುಕ್ರಮ ಕಾರ್ಯಗಾರಗಳ ಅನುಭವ ಹಂಚಿಕೆ, 2014-15 ಸಾಲಿನ ವಿಷಯ ಶಿಕ್ಷಕರ ವೇದಿಕೆ ಮತ್ತು ಕೊಯರ್ ಮುಂದಿನ ಹಂತಗಳ ಯೋಜನೆಯ ಬಗ್ಗೆ ಚರ್ಚಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು . ಸಾರಾಂಶಿಕರಿಸಿದ ಅನುಕ್ರಮ ಕಾರ್ಯಗಾರಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳನ್ನು ಈ ಕೆಳಕಂಡ ಲಿಂಕ್ ಗಳಲ್ಲಿ ನೋಡಬಹುದು.

ಗಣಿತ ಕಾರ್ಯಗಾರ ಅಭಿಪ್ರಾಯಗಳು
ವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು
ಸಮಾಜವಿಜ್ಞಾನ ಕಾರ್ಯಗಾರ ಅಭಿಪ್ರಾಯಗಳು

ಕೊಯರ್ ನಲ್ಲಿನ ಹೊಸ ವಿಷಯ
ಈ ಕೆಳಕಂಡ ವಿಷಯಗಳ ಸಂಪನ್ಮೂಲಗಳು ಕೊಯರ್ ನಲ್ಲಿ ಲಭ್ಯವಿವೆ.

ಮುಖ್ಯ ಶಿಕ್ಷಕರ ಸಾಹಿತ್ಯ – ಶಾಲಾ ಕಾಣ್ಕೆ
ಶಾಲಾ ಕಾಣ್ಕೆ ಬಗೆಗಿನ ಸಾಹಿತ್ಯ - ಈ ಲಿಂಕ್ ಮೂಲಕ ಪ್ರೋ.ಕೈ ಮಿಂಗ್ ಚಾಂಗ್ ರವರ “Vision in Quality Schooling” ಪುಸ್ತಕದ ಕನ್ನಡ ಅವತರಣಿಕೆಯನ್ನು ಓದಬಹುದು. ಈ ಕನ್ನಡ ಅವತರಣಿಕೆಯನ್ನು ಚಿತ್ರದುರ್ಗ ಡಯಟ್ ನ ಶ್ರೀಮತಿ. ಸುಧಾ ಮೇಡಮ್ ರವರು ರಚಿಸಿದ್ದಾರೆ.

ಪ್ರಶ್ನೆ ಪತ್ರಿಕೆಗಳು, ನೀಲ ನಕ್ಷೆಗಳು ಮತ್ತು ಸಿ.ಸಿ.ಇ ಸಾಮಗ್ರಿಗಳು

ವಿಜ್ಞಾನ ಸಂಪನ್ಮೂಲಗಳು
GHS.ಯಾದಗಿರಿ ಶಾಲೆಯೆ ಶ್ರೀಮತಿ.ಜ್ಯೋತಿ ಗೊಬ್ಬಿನವರ್ ರಚಿಸಿರುವ "ಎಲೆಗಳ ಅಡ್ಡ ಸೀಳುವಿಕೆಯ ಪ್ರಯೋಗದ" ವೀಡಿಯೋ ಮತ್ತು GHS ಚಂದ್ರಿಕಿ ಶಾಲೆಯ ಶ್ರೀಮತಿ ಖಲೀಮುನ್ನಿಸ್ಸಾ ರವರು ರಚಿಸಿರುವ 'ರಾಸಾಯನಿಕ ಪ್ರತಿಕ್ರಿಯೆಗಳ '. ವೀಡಿಯೋಗಳು ಕೊಯರ್ ನ ವಿಜ್ಞಾನ ಪುಟದಲ್ಲಿ ಲಭ್ಯವಿವೆ.

ಮುಂದಿನ ಕಾರ್ಯಕ್ರಮಗಳು

ಏಪ್ರಿಲ್ /ಮೇ ತಿಂಗಳಿನಲ್ಲಿ ಜಿಯೋಜೀಬ್ರಾ ಮತ್ತು ಟರ್ಟಲ್ ಆರ್ಟ ಬಗೆಗಿನ ವಿಶೇಷ ಕಾರ್ಯಗಾರ ಅಥವಾ ಅಂತರ್ಜಾಲ ಕೋರ್ಸ್ ನಡೆಸಲು ಯೋಜಿಸಲಾಗಿದೆ. ಈ ಕೋರ್ಸ್ ನಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು koer@karnatakaeducation.org.in.

ವಿಳಾಸಕ್ಕೆ ಇಮೇಲ್ ಕಳುಹಿಸಬಹುದು. ಕಲಿಕಾರ್ಥಿಗಳ ಸ್ಪಂದನೆಗನುಗುಣವಾಗಿ ಕೋರ್ಸ್ ಯೋಜಿಸಲಾಗುವುದು.

ಹೊಸ ಅನ್ವಯಕಗಳ ( ಅಪ್ಲಿಕೇಶನ್) ಕಲಿಕೆ

ಥಂಡರ್ ಬರ್ಡ್ ಎಂಬುದು ಒಂದು ಇ-ಮೇಲ್ ಕ್ಲೈಂಟ್ ಆಗಿದ್ದು ನಮ್ಮ ಇಮೇಲ್ ಗಳನ್ನು ನಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನಮ್ಮ ಇ-ಮೇಲ್ ಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಕೊಂಡು ಕಲಿಕಾ ಸಂಪನ್ಮೂಲವಾಗಿ ಬಳಸಬಹುದು. ವಿಷಯ ಶಿಕ್ಷಕರ ವೇದಿಕೆಯು ಇ-ಮೇಲ್ ಆಧಾರಿತ ವೇದಿಕೆ ಯಾಗಿರುವುದರಿಂದ ಈ ಥಂಡರ್ ಬರ್ಡ್ ಬಳಕೆಯು ಬಹಳ ಉಪಯುಕ್ತವಾಗುವುದು. ಥಂಡರ್ ಬರ್ಡ್ ಬಗೆಗಿನ ಸಾಹಿತ್ಯ ಕೈಪಿಡಿ ಗಾಗಿ ಇಲ್ಲಿ ಕ್ಲಿಕ್ ಮಾಡಿ.

ವಿಶೇಷತೆ

ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಮಾಹಿತಿಯನ್ನು ಕಥೆ ರೂಪದಲ್ಲಿ ಬರೆದು ನಂತರ ವಿದ್ಯುನ್ಮಾನ ಮಾದ್ಯಮದಲ್ಲಿ ಹಂಚಿಕೊಳ್ಳುವ ವಿಧಾನ ಬಹಳ ಪರಿಣಾಮಕಾರಿಯಾಗಿದೆ, ಯಾದಗಿರಿ ಜಿಲ್ಲೆಯGHS ಮೋಟನಹಳ್ಳಿ ಮತ್ತು GHS ಹೊನಗೇರಾ ಶಾಲೆಯ ಮಕ್ಕಳು ಭಾಗವಹಿಸಿದ ವಿದ್ಯುನ್ಮಾನ ಕಥೆ ಹಂಚಿಕೊಳ್ಳುವಿಕೆ ಚಟುವಟಿಕೆಯ ವೀಡಿಯೋಗಳನ್ನು ವೀಕ್ಷಿಸಿ.

ನಿಮಗಿದು ಗೊತ್ತೆ..?

ಆಸಕ್ತಿಯುಳ್ಳ ಶಿಕ್ಷಕರು Karnataka School wiki ಯ ಲಾಗಿನ್ ಐಡಿ ಪಡೆಯುವ ಮೂಲಕ ತಮ್ಮದೇ ಶಾಲೆಯ ಸ್ಕೂಲ್ ವಿಕಿ ಪುಟವನ್ನು ರಚಿಸಿ ಕೊಂಡು ಶಾಲೆಯ ಮಾಹಿತಿಯನ್ನು ಈ ಪುಟದಲ್ಲಿ ಹಂಚಿಕೊಳ್ಳಬಹುದಾಗಿದೆ. ತಮ್ಮ ಶಾಲೆಯ ಸ್ಕೂಲ್ ವಿಕಿ ಪುಟ ರಚಿಸಲು KOER@karnatakaeducation.org.in ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು.