ಕನ್ನಡ: ಶಿಕ್ಷಣಶಾಸ್ತ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಭಾರತೀಯ ಶಿಕ್ಷಣ ತಜ್ಞರು

೧.ಮಹಾತ್ಮ ಗಾಂಧೀಜಿ (೧೮೬೯-೧೯೪೮)

ವ್ಯಕ್ತಿ ಪರಿಚಯ

ಗಾಂಧೀಜಿಯವರು ಭಾರತದ ಪಿತಾಮಹ, ಸತ್ಯ, ಅಹಿಂಸೆಗಳ ಪ್ರತೀಕ, ಸ್ವಾತಂತ್ರ್ಯದ ಹೋರಾಟಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ವ್ಯಕ್ತಿ ಮಹಾತ್ಮಾ ಗಾಂಧೀಜಿಯವರು. ಜೀವನಕ್ಕಾಗಿ ಶಿಕ್ಷಣ ಹಾಗೂ ಜೀವನದ ಮುಖಾಂತರ ಶಿಕ್ಷಣ ಎಂದು ಅರಿತ ಮಹಾನ್ ವ್ಯಕ್ತಿ ಗಾಂಧೀಜಿ ಮೂಲ ಶಿಕ್ಷಣದ (ಬೇಸಿಕ್ ಎಜ್ಯುಕೇಶನ್) ಜನಕನೆಂದು ಕರೆಯುತ್ತಾರೆ.

ಜೀವನ ಚರಿತ್ರೆ : ಮಹಾತ್ಮಾ ಗಾಂಧೀಜಿಯವರ ಪೂರ್ಣ ಹೆಸರು ಮೋಹನದಾಸ್ ಕರಮ್‍ಚಂದ ಗಾಂಧಿ ಜನಿಸಿದ್ದು ಗುಜರಾತನ ಪೋರ್ ಬಂದರನಲ್ಲಿ ಅಕ್ಟೋಬರ್ 2, 1869 ರಂದು ಜೀವನ ಪರ್ಯಂತ ಸತ್ಯ, ಧರ್ಮ, ಅಹಿಂಸೆಗಳನ್ನು ಚಾಚೂ ತಪ್ಪದೇ ಪಾಲಿಸಿ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ಸು ಕಂಡರು. ಆದ್ದರಿಂದ ಅವರನ್ನು ಭಾರತದ ‘ರಾಷ್ಟ್ರಪಿತ’ ಎಂದೇ ಕರೆಯಲಾಗುತ್ತದೆ. ಬಾಲ್ಯದಲ್ಲಿ 'ಸತ್ಯ ಹರಿಶ್ಚಂದ್ರ' ನಾಟಕ ನೋಡಿ ಪ್ರಭಾವಿತರಾದ ಅವರು ಸತ್ಯ ಹೇಳುವುದನ್ನು ಜೀವನ ಪರ್ಯಂತ ಪಾಲಿಸಿದರು. ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಉಪ್ಪಿನ ಸತ್ಯಾಗ್ರಹ ನಡೆಸಿ ಯಶಸ್ವಿಯಾದರು. ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ವರ್ಣಬೇಧ ನೀತಿಯನ್ನು ಖಂಡಿಸಿ ಅದನ್ನು ಹೋಗಲಾಡಿಸುವಲ್ಲಿ ಸಫಲರಾದರು. ಎಂದಿಗೂ ಸತ್ಯ, ಧರ್ಮಕ್ಕಾಗಿಯೇ ಹೋರಾಟ ಮಾಡಿದ ಇವರು ಬ್ರಿಟಿಷರಿಂದ ಜೈಲುವಾಸ ಅನುಭವಿಸಬೇಕಾಯಿತು. “ಮೈ ಎಕ್ಸ್ಪೆರಿಮೆಂಟ್ಸ್ ವಿಥ್ ಟ್ರುಥ್” (ಸತ್ಯದೊಂದಿಗೆ ನನ್ನ ಅನುಭವಗಳು) ಪುಸ್ತಕ ಬರೆದರು. ಅದು ಅವರ ಜೀವನ ಚರಿತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ರಾಮಭಕ್ತರಾಗಿದ್ದ, ಅವರು ಜನವರಿ 30, 1948ರಂದು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಹೊರ ಬರುವಾಗ 'ನಾಥೋರಾಮ್ ಗೋಡ್ಸೆ' ಎಂಬ ದೇಶದ್ರೋಹಿಯ ಪಿಸ್ತೂಲಿನಿಂದ ಹಾರಿದ ಗುಂಡಿಗೆ ಬಲಿಯಾದರು. ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಅಹಿಂಸಾ ದಿನಾಚರಣೆ' ಎಂದೂ, ಅವರು ಗುಂಡೇಟಿಗೆ ಬಲಿಯಾದ ದಿನವನ್ನು ‘ಹುತಾತ್ಮರ ದಿನಾಚರಣೆ ಎಂದೂ ಆಚರಿಸಲಾಗುತ್ತದೆ. ಗಾಂಧೀಜಿ ಹಾಗೂ ಶಿಕ್ಷಣ

ಕೃತಿಗಳ ಪರಿಚಯ

  • Indian Home Rule (Hind Swaraj)
  • Satyagraha in South Africa
  • The Story of My Experiments with Truth Vol I
  • The Story of My Experiments with Truth Vol II
  • The Story of My Experiments with Truth
  • Constructive Programme : Its Meaning and Place

ಶೈಕ್ಷಣಿಕ ಸಿದ್ದಾಂತ

ಕ್ರಿ.ಶ. 1935 ರಲ್ಲಿ ಮಹಾತ್ಮಾ ಗಾಂಧೀಜಿಯವರು ಸಾಬರಮತಿ ಎಂಬ ಸ್ಥಳದಲ್ಲಿ ತಮ್ಮದೇ ಆದ ಶೈಕ್ಷಣಿಕ ತತ್ವಗಳನ್ನು ಅನುಷ್ಠಾನಕ್ಕೆ ತರಲು ಮೂಲ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು. ಇದಕ್ಕೆ ವರ್ಧಾ ಯೋಜನೆ ಅಥವಾ ರಾಷ್ಟ್ರೀಯ ಶಿಕ್ಷಣವೆಂದು ಕರೆಯುವರು. ಇದು ಶಿಕ್ಷಣ ಕ್ಷೇತ್ರಕ್ಕೆ ಮಹಾತ್ಮಾ ಗಾಂಧೀಜಿಯವರು ನೀಡಿದ ಮಹಾನ್ ಕೊಡುಗೆಯಾಗಿದೆ.

  • ಶೈಕ್ಷಣಿಕ ತತ್ವಗಳು

ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು.
ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು.
1. ಪ್ರಾಥಮಿಕ ಶಿಕ್ಷಣವು ಉಚಿತವಾಗಿಯೂ ಹಾಗೂ ಕಡ್ಡಾಯವಾಗಿ ಕೊಡಲ್ಪಡಬೇಕು.
2. ಶಿಕ್ಷಣವು ಉತ್ಪಾದಕವಾದ ಕೈ ಕೆಲಸಗಳಲ್ಲಿ ಕೇಂದ್ರಿಕೃತವಾಗಿರಬೇಕು.
3. ಸ್ವಾವಲಂಬನ ಹಾಗೂ ಉದ್ಯೋಗ ಪ್ರಧಾನ ಶಿಕ್ಷಣಕ್ಕೆ ಪ್ರಶಸ್ತ್ಯವಿರಬೇಕು.
4. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕೊಡಬೇಕು.
5. ಅಹಿಂಸೆಯನ್ನು ಶಿಕ್ಷಣದ ತಳಹದಿಯಾಗಬೇಕು.
6. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸಿಬೇಕು.
7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು.

  • ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:-

ಇವರು ನಿಸರ್ಗವು ಜ್ಞಾನ ಸಂಪಾದನೆಯ ಉತ್ತಮಮಾರ್ಗ ಎಂಬುದರಲ್ಲಿ ನಂಬಿಕೆ ಇರಿಸಿದ್ದರು.

ಪ್ರಸಿದ್ದ ಶೈಕ್ಷಣಿಕ ಹೇಳಿಕೆಗಳು

  • ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

ಶೈಕ್ಷಣಿಕ ಗುರಿಗಳು

ಗಾಂಧೀಜಿಯವರ ಶೈಕ್ಷಣಿಕ ಗುರಿಗಳು.
ಗಾಂಧೀಜಿಯವರು ಶೈಕ್ಷಣಿಕ ಗುರಿಗಳು ಅವರ ಸಾಮಾನ್ಯ ಹಾಗೂ ಸಾಮಾಜಿಕ ತತ್ವಶಾಸ್ತ್ರದಿಂದ ಹೊರಹೊಮ್ಮಿದೆ. ಅವುಗಳಲ್ಲಿ ಕೆಳಗಿನವು ಪ್ರಮುಖವಾಗಿವೆ.
1. ಉದರ ನಿರ್ವಹಣೆಯ ಗುರಿ:ಗಾಂಧೀಜಿಯವರ ಪ್ರಕಾರ ಆಹಾರ, ಆಶ್ರಮ ಹಾಗೂ ಅಚ್ಛಾದನೆ ಮುಂತಾದ ಜೀವನವಶ್ಯಕತೆಗಳನ್ನು ವ್ಯಕ್ತಿಯು ಪೂರೈಸಿಕೊಳ್ಳಲು ಸಮರ್ಥನಾಗುವಂತೆ ಅವನಿಗೆ ಸ್ವಾವಲಂಬನೆಯ ತರಬೇತಿ ಕೊಡುವದೇ ಶಿಕ್ಷಣ.
2. ಸಾಂಸ್ಕೃತಿಕ ಗುರಿ:ಮಕ್ಕಳು ತಮ್ಮ ಸಂಸ್ಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಅರಿತುಕೊಂಡು ಅದನ್ನು ಉಳಿಸಿಕೊಳ್ಳುವ ಸಾಮಥ್ರ್ಯವನ್ನು ಶಿಕ್ಷಣವು ಅವರಿಗೆ ನೀಡಬೇಕು.
3. ಸರ್ವತೋಮುಖವಾದ ವ್ಯಕ್ತಿತ್ವದ ವಿಕಾಸ:ಗಾಂಧೀಜಿಯವರ ಪ್ರಕಾರ ಮಗುವಿನ ದೈಹಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳ ವಿಕಾಸವನ್ನು ಏಕಕಾಲದಲ್ಲಿ ಮಾಡುವದೇ ಶಿಕ್ಷಣ.
4. ಸಾಮಾಜಿಕ ಗುರಿ:ಮನುಷ್ಯನು ಸಮಾಜ ಜೀವಿಯಾದುದರಿಂದ ಅವನು ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಶಾಲೆಗಳಲ್ಲಿ ಕಲಿಯಬೇಕು.
5. ನೈತಿಕ ಗುರಿಗಳು:“ನಡತೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ” ಎಂಬುದು ಗಾಂಧೀಜಿಯವರ ಅಭಿಪ್ರಾಯ. ಮಕ್ಕಳಲ್ಲಿ ಧೈರ್ಯ ಆತ್ಮ ವಿಶ್ವಾಸ ಸ್ಪುರಿಸುವುದೇ ಶಿಕ್ಷಣದ ಗುರಿ.

ಈ ರೀತಿಯಾಗಿ ಮಹಾತ್ಮಾ ಗಾಂಧೀಜಿಯವರ ಮೂಲ ಶಿಕ್ಷಣವು ಭಾರತದ ಶೈಕ್ಷಣಿಕ ಪದ್ದತಿಯಲ್ಲಿಯೇ ಒಂದು ನವೀನ ಯುಗವನ್ನು ಪ್ರಾರಂಭಿಸಿದೆ. ಭಾರತದ ಗ್ರಾಮೀಣ ಜನತೆಯ ಉತ್ಥಾನಕ್ಕೆ ಮೂಲ ಶಿಕ್ಷಣವೊಂದು ತಾರಕ. ಭಾರತಲ್ಲಿಯ ಜ್ವಲಂತ ಸಮಸ್ಯೆಯಾದ ನಿರಕ್ಷರತೆಯನ್ನು ಹೋಗಲಾಡಿಸಲು ಇದೊಂದೇ ಪ್ರಾಯೋಗಿಕ ಯೋಜನೆಯಾಗಿದೆ. ಒಟ್ಟಿನಲ್ಲಿ ಮೂಲ ಶಿಕ್ಷಣವು ಕೇವಲ ಬೋಧನೆಯ ಒಂದು ನವೀನ ತಂತ್ರವಾಗಿರದೆ ಅಂದೊಂದು ಮೌನವಾದ ಸಾಮಾಜಿಕ ಕ್ರಾಂತಿಯಾಗಿದೆ ಎಂದು ಹೇಳಬಹುದು.

ಬೋಧನಾ ಪದ್ದತಿ

  1. https://www.newyorker.com/magazine/2018/10/22/gandhi-for-the-post-truth-age
  2. ನಯೀ ತಾಲೀಮ್‌ ಮೇಲಿನ ಮಾಹಿತಿ

ಪಠ್ಯಕ್ರಮ

ಶಿಕ್ಷಕನ ಪಾತ್ರ

೨.ರವೀಂದ್ರನಾಥ ಠಾಕೂರ್‌ (೧೮೬೯-೧೯೪೮)

ವ್ಯಕ್ತಿ ಪರಿಚಯ

ಕೃತಿಗಳ ಪರಿಚಯ

ಶೈಕ್ಷಣಿಕ ಸಿದ್ದಾಂತ

ನೈಸರ್ಗಿಕವಾದ

ಪ್ರಸಿದ್ದ ಶೈಕ್ಷಣಿಕ ಹೇಳಿಕೆಗಳು

ಶೈಕ್ಷಣಿಕ ಗುರಿಗಳು

  1. ಮಗುವುನ ಸರ್ವತೋಮುಖ ಅಭಿವೃದ್ದಿ: ದೈಹಿಕ,ನೈತಿಕ,ಬೌದ್ಧಿಕ
  2. ಸ್ವಾಭಾವಿಕ ಶಕ್ತಿಯ ಅಭಿವೃದ್ಧಿ,
  3. ಅಂತರರಾಷ್ಟ್ರೀಯ ಹೊಂದಾಣಿಕೆ

ಬೋಧನಾ ಪದ್ದತಿ

  • ಚಟುವಟಿಕೆಯ ಮೂಲತತ್ವಗಳು,
  • ವಿಹಾರಿಸುತ್ತಾ ಕಲಿಕೆ,
  • ಪ್ರಶ್ನೋತ್ತರ ಮತ್ತು ಚರ್ಚಾ ಪದ್ದತಿ,
  • ಸ್ವ ಅನುಭವದ ಮೂಲಕ ಕಲಿಕಾ ಚಟುವಟಿಕೆ ಪದ್ದತಿ ಮತ್ತು ಆಟ,
  • ಶೈಕ್ಷಣಿಕ ಪ್ರವಾಸಗಳು,
  • ಚಟುವಟಿಕೆಯ ಮೂಲಕ ಕಲಿಕೆ
  • ಶಾಂತಿನಿಕೇತನದ ವೀಡಿಯೋ
  • Shantiniketan - The Abode of Peace
  • Shantiniketan -The Abode of Peace 2
  • Rare videos of Nobel Laureate Rabindranath Tagore 1861-1941

ಪಠ್ಯಕ್ರಮ

ನಿಸರ್ಗ,ಜೀವನ ಮತ್ತು ಶಿಕ್ಷಕ ಇವುಗಳು ಜ್ಞಾನದ ಮೂಲಗಳು

ಶಿಕ್ಷಕನ ಪಾತ್ರ

ಮಗುವು ಜೀವಂತ ಮಾದರಿ,ಸದಾ ಕಲಿಯುವವ, ಒಂದು ದೀಪ ಮೊದಲು ತಾನು ಉರಿಯದೆ ಮತ್ತೂಂದು ದೀಪವನ್ನು ಬೆಳಗಿಸಲು ಸಾಧ್ಯವಿಲ್ಲ.

೩.ಜಿಡ್ಡು ಕೃಷ್ಣಮೂರ್ತಿ (೧೮೯೫-೧೯೮೬)

ವ್ಯಕ್ತಿ ಪರಿಚಯ

  • ವಿಕಿಪೀಡಿಯದಲ್ಲಿನ ಜಿಡ್ಡು ಕೃಷ್ಣಮೂರ್ತಿರವರ ಪರಿಚಯ
  • ಜಿಡ್ಡು ಕೃಷ್ಣಮೂರ್ತಿರವರ ಪ್ರಸಿದ್ದ ಹೇಳಿಕೆಗಳು

ನಾವು ಧನ. ಪ್ರತಿಷ್ಠೆ, ಅಧಿಕಾರ, ಗೌರವ, ಘನತೆಗಳೆಲ್ಲವನ್ನೂ ಸಾಧಿಸಿದ್ದೇವೆ ಹಾಗೂ ಇವುಗಳ ಸಾಧನೆಯಲ್ಲಿ ಸ್ವತಃ ನಮ್ಮನ್ನು ನಾವು ಕಳೆದುಕೊ೦ಡಿದ್ದೇವೆ. ನಮ್ಮನ್ನು ಸ೦ಪೂರ್ಣವಾಗಿ ಕಳೆದುಕೊ೦ಡಿದ್ದೇವೆ. ಸಾಧನೆಯ ವಿಷಯದ ಬಗ್ಗೆ ನನ್ನನ್ನು ನೀವು ಕೇಳಿದರೆ ನಾನು; 'ನೀವು ಕಳೆದುಕೊಳ್ಳಲು ಸಿದ್ಧರಾಗಿದ್ದಲ್ಲಿ ನಿಮ್ಮನ್ನೇ ನೀವು ಹೊ೦ದುವಿರಿ. ಅದೇ ನೀವು ರಕ್ಷಿಸಿಕೊಳ್ಳಲು ಯತ್ನಿಸಿದರೆ ನಿಮ್ಮನ್ನೇ ನೀವು ಕಳೆದುಕೊಳ್ಳುವಿರಿ, ಸ೦ಪೂರ್ಣವಾಗಿ ಕಳೆದುಕೊಳ್ಳುವಿರಿ.

ಯಾವಾಗ ನೀನು ಪೂರ್ತಿಯಾಗಿ ಅಹ೦ಕಾರದಿ೦ದ ಮುಕ್ತನಾಗುತ್ತೀಯೋ ಆಗ ಒ೦ದು ಅನುಶಾಸನ ನಿನ್ನಲ್ಲಿಯೇ ಬರುತ್ತದೆ. ಒ೦ದು ಆ೦ತರಿಕ ಅನುಶಾಸನ. ಇದು ಯಾವುದೇ ಕಾರಣದಿ೦ದಾಗುವುದಿಲ್ಲ. ಅದು ಏನನ್ನೂ ಬಯಸುವುದಿಲ್ಲ. ಇದು ತನ್ನಷ್ಟಕ್ಕೇ ತಾನೇ ಉ೦ಟಾಗುವುದು. ಹೇಗೆ ನೀನು ಉಸಿರಾಡುತ್ತೀಯೋ, ಹಸಿದಾಗ ಊಟಮಾಡುತ್ತಿಯೋ, ಹೇಗೆ ನಿದ್ದೆ ಬ೦ದಾಗ ಹಾಸಿಗೆಯ ಮೇಲೆ ಮಲಗುತ್ತೀಯೋ ಹಾಗೆ. ಇದು ಒ೦ದು ಸುವ್ಯವಸ್ಥೆ ಮತ್ತು ಆ೦ತರಿಕವಾಗಿರುತ್ತದೆ.

ಈ ಜಗತ್ತಿನಲ್ಲಿ ಯಾವ ಮಹತ್ವಾಕಾ೦ಕ್ಷೆಯಿಲ್ಲದೆ, ನಾವು ಇರುವ ಹಾಗೆ ಬದುಕಲು ಸಾಧ್ಯವಿಲ್ಲವೇನು? ನಿಮ್ಮ ಸದ್ಯದ ಸ್ಥಿತಿಯನ್ನು, ಪರಿವರ್ತನೆಯ ಯಾವ ಪ್ರಯತ್ನವೂ ಇಲ್ಲದೆ ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಅಗ ನಿಮ್ಮ ಇರುವಿಕೆಯಲ್ಲಿಯೇ ರೂಪಾ೦ತರವಾಗುತ್ತದೆ. ಈ ಜಗತ್ತಿನಲ್ಲಿ ನಮ್ಮ ಪಾಡಿಗೆ ನಾವು, ಅನಾಮಿಕರಾಗಿ, ಹೆಸರಿನ ಹ೦ಬಲವಿಲ್ಲದೆ, ಮಹತ್ವಾಕಾ೦ಕ್ಷೆಯಿಲ್ಲದೆ, ಕ್ರೌರ್ಯವಿಲ್ಲದೆ ಬದುಕಲು ಸಾಧ್ಯವೆ೦ದು ನನಗೆ ತೋರುತ್ತದೆ. ಸ್ವ೦ತಕ್ಕೆ ಹೆಚ್ಚಿನ ಮಹತ್ವವನ್ನು ಕೊಡದೆ ಹೋದರೆ ಸ೦ತೋಷವಾಗಿ ಬದುಕಲು ಸಾಧ್ಯ. ಈ ತಿಳುವಳಿಕೆಯೂ ಸರಿಯಾದ ಶಿಕ್ಷಣದ ಭಾಗವೇ ಆಗಿದೆ. ಇಡೀ ವಿಶ್ವವು ಯಶಸ್ಸನ್ನು ಆರಾಧಿಸುತ್ತಿದೆ. ನಮಗೆ ದುಃಖದ ಕಾರಣಗಳನ್ನು ಅರ್ಥಮಾಡಿಕೊ೦ಡು ಪರಿಹರಿಸಿಕೊಳ್ಳುವುದಕ್ಕಿ೦ತ ಯಶಸ್ಸಿನ ಸ೦ಪಾದನೆಯೇ ಮುಖ್ಯವಾಗಿದೆ. ಗುಲಾಬಿ ಅಥವಾ ಲಿಲ್ಲಿ ಎ೦ದಿಗೂ ಇರುವುದಕ್ಕಿ೦ತ ಬೇರೆಯಾಗಿ ಕಾಣಲು ಪ್ರಯತ್ನಿಸುವುದಿಲ್ಲ. ತನ್ನ೦ತೆ ತಾನಿರುವುದೇ ಅವುಗಳ ಸೌ೦ದರ್ಯ.

        • J krishnamurthy

ಕೃತಿಗಳ ಪರಿಚಯ

  1. pdf ಪುಸ್ತಕಗಳನ್ನು ಓದಲು ಕ್ಲಿಕ್ಕಿಸಿರಿ
  2. ಕನ್ನಡ ಪುಸ್ತಕಗಳು

ಶೈಕ್ಷಣಿಕ ಸಿದ್ದಾಂತ

  1. https://sampada.net/article/17357
  2. http://www.prajavani.net/article/ಜಿಡ್ಡು-ನೆನಪಿನಲ್ಲಿ
  3. ಚಲನಶೀಲ ಬದುಕು- ಕಲಿಕೆ (ಜಿಡ್ಡು ಚಿಂತನೆಗಳು)-ಜಿಡ್ಡು ಕೃಷ್ಣಮೂರ್ತಿ-ಅನು: ಡಾ. ಮಹಾಬಲೇಶ್ವರ ರಾವ್-ವಸಂತ ಪ್ರಕಾಶನ, ಬೆಂಗಳೂರು
  4. ಜಿಡ್ಡು ಕೃಷ್ಣಮೂರ್ತಿ ರವರ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಪ್ರಸಿದ್ದ ಶೈಕ್ಷಣಿಕ ಹೇಳಿಕೆಗಳು

  • ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಉತ್ತರ ಅದರ ಒಳಗಿಂದಲೇ ಸಿಗುತ್ತದೆ. ಏಕೆಂದರೆ ಉತ್ತರ ಸಮಸ್ಯೆಯಿಂದ ಬೇರೆಯಲ್ಲ.
  • ನಂಬಿಕೆಗಳಿಗೆ ಅಂಟಿಕೊಂಡ ಮನಸ್ಸು ಸದಾ ಸೆರೆಯಾಳು. ನಂಬಿಕೆಗಳ ಹಿಡಿತದಿಂದ ಮುಕ್ತನಾಗಿರುವ ವ್ಯಕ್ತಿ ಮಾತ್ರವೇ ಎಲ್ಲ ನಂಬಿಕೆಗಳ ಆಚೆ ಇರುವುದನ್ನು ಗ್ರಹಿಸಬಲ್ಲ.
  • ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು. ಜೀವನದಲ್ಲಿ ಮುನ್ನಡೆಸುವ ಸಾಮರ್ಥ್ಯ ನೀಡಬೇಕು.
  • ತಿಳಿಯದೆ ಇರುವುದರ ಬಗ್ಗೆ ಯಾರೊಬ್ಬನೂ ಭಯಪಡಲಾರ; ತಿಳಿದದ್ದು ಕೊನೆಯಾಗುತ್ತಿದೆ ಎಂಬುದರ ಬಗ್ಗೆ ಭಯಭೀತನಾಗುತ್ತಾನೆ.

ಶೈಕ್ಷಣಿಕ ಗುರಿಗಳು

The real purpose of education lies in helping the people to feel free from bondage,guiding people to love each other, feeling pride in helping others and to become what they want to become for realizing themselves

ಬೋಧನಾ ಪದ್ದತಿ

Real education through small schools, curricular activities in democratic way, needed guidance to teacher,chils burden should be reduced

ಪಠ್ಯಕ್ರಮ

ಶಿಕ್ಷಕನ ಪಾತ್ರ

  • Fully educated,Sympathetic and compassionate
  • Understand truth and purpose of human life
  • Protect child from committing mistakes

ವಿದೇಶಿ ಶಿಕ್ಷಣ ತಜ್ಞರು

John Dewey