ರಚನಾ ವಿಜ್ಞಾನ 9 ಒಂಭತ್ತನೆಯ ತರಗತಿ ಪಠ್ಯ ಪುಸ್ತಕದ ಪುನಾರಚನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

1.ಒಂಭತ್ತನೆಯ ತರಗತಿ ಪಠ್ಯ ಪುಸ್ತಕದ ಪುನಾರಚನೆ

ತಾತ್ವಿಕ ಹಿನ್ನೆಲೆ ಮತ್ತು ಆಶಯಗಳು

(ಪರಿಷ್ಕೃತ)

ತರಗತಿ ಪ್ರಕ್ರಿಯೆಗಳು ಮಕ್ಕಳು ತಮ್ಮ ಕಲಿಕೆಯನ್ನು ತಾವೇ ಕಟ್ಟಿಕೊಳ್ಳಲು ಅನುಕೂಲಿಸುವಂತಿರಬೇಕು ಎನ್ನುವುದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಮುಖ್ಯ ಆಶಯ. ಹೀಗಾಗಬೇಕಾದರೆ ಪಠ್ಯಪುಸ್ತಕದ ಮಿತಿಗಳನ್ನು ಮೀರಿ ಬೆಳೆಯುವ ಕಲಿಕಾ ಚಟುವಟಿಕೆಗಳು ಹಾಗೂ ಜೀವನಾನುಭವಕ್ಕೆ ಕಲಿಕೆಯನ್ನು ವಿಸ್ತರಿಸುವ ಸಾಮಥ್ರ್ಯವನ್ನು ಮಕ್ಕಳಲ್ಲಿ ರೂಪಿಸುವುದು ನಮ್ಮ ಗುರಿಯಾಗಬೇಕು. ಎಂತಹ ಪಾಠವಾದರೂ ಅದನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಶಯ, ಜ್ಞಾನ ಕಟ್ಟುವ ಪದ್ಧತಿಯಂತೆ (ರಚನವಾದಿ ತತ್ವ) ಕಲಿಸುವುದಾದರೆ ಅಲ್ಲಿಗೆ ಇಂದು ನಮ್ಮೆದುರಿಗಿರುವ ಬಹಪಾಲು ಸವಾಲುಗಳನ್ನು ನಿವಾರಿಸಿದಂತಾಗುತ್ತದೆ. ಕಲಿಕೆ ಮಕ್ಕಳಿಗೆ ಆಪ್ತವಾಗುತ್ತದೆ ಹಾಗೂ ಅರ್ಥಪೂರ್ಣವಾಗುತ್ತದೆ. ಅಂತಹ ತರಗತಿ ಪ್ರಕ್ರಿಯೆಗಳು ನಮ್ಮ ಸಂವಿಧಾನದ ಮತ್ತು ರಾಷ್ಟ್ರನೀತಿಗಳ ಆಶಯವನ್ನೂ ಪೂರೈಸುತ್ತವೆ.

ಈ ಸಾಹಿತ್ಯ ಓದಿದ ನಂತರ ನೀವು

1. ರಾ ಪ ಚೌ 2005 ಹಾಗೂ ಆರ್ ಟಿ ಇ 2009 ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ತರಗತಿಗಳಲ್ಲಿ ಅರ್ಥಪೂರ್ಣವಾಗಿ ಬಳಸಲು ಅಗತ್ಯ ಸೈದ್ಧಾಂತಿಕ ನೆಲೆಗಟ್ಟನ್ನು ಸಾಧಿಸುವಿರಿ.

2. ಜ್ಞಾನ ರಚನೆ ಪುನಾರಚನೆ ಪ್ರಕ್ರಿಯೆಯನ್ನು ತರಗತಿಗಳಲ್ಲಿ ಅನುಕೂಲಿಸಲು ಅಗತ್ಯ ಕ್ರಮ ಕೈಗೊಳ್ಳುವಿರಿ.

3. ಅನುಭವಾತ್ಮಕ ಕಲಿಕೆಯ ಪ್ರಾಮುಖ್ಯತೆಯನ್ನು ಮನಗಾಣುವಿರಿ.

ಕಲಿಸುವಿಕೆ ಮತ್ತು ಸಂವಿಧಾನಾತ್ಮಕ ಗುರಿಗಳು

ಸಂವಿಧಾನದಂತೆ ನಮ್ಮ ದೇಶಕ್ಕೆ ನಾಲ್ಕು ರಾಷ್ಟ್ರೀಯ ಗುರಿಗಳಿವೆ. ಈ ಗುರಿಗಳನ್ನು ಸಾಧಿಸುವುದು ನಮ್ಮ ಹೊಣೆ.

ಞ ಸ್ವಾತಂತ್ರ್ಯ

ಞ ಸಮಾನತೆ

ಞ ಭಾತೃತ್ವ

ಮತ್ತು ಞ ಸಾಮಾಜಿಕ ನ್ಯಾಯ

ಭಾರತದ ಪ್ರತಿ ಪ್ರಜೆಗೂ ಮೇಲ್ಕಂಡ ಅಂಶಗಳನ್ನು ದೊರಕಿಸುವುದು, ದೊರಕಿದ್ದನ್ನು ಖಾತ್ರಿ ಪಡಿಸಿಕೊಳ್ಳುವುದು, ಮತ್ತು ಅವು ನಿರಂತರವಾಗಿ ಉಳಿಯುವಂತೆ ನೋಡಿಕೊಳ್ಳುವುದು ಸರ್ಕಾರ ಅರ್ಥಾತ್ ನಮ್ಮ ಕರ್ತವ್ಯ. ಸಂವಿಧಾನದ ಪ್ರಸ್ತಾವನೆಯಂತೆ ನಮ್ಮ ಶಿಕ್ಷಣದ ರಾಷ್ಟ್ರೀಯ ಗುರಿಗಳೂ

ಇವೇ ಆಗಿವೆ. ಇವುಗಳೊಂದಿಗೆ ಇನ್ನಷ್ಟು 1986ರ ರಾಷ್ಟ್ರೀಯ ಶಿಕ್ಷಣದ ಹತ್ತು ಆಶಯ ವಿಷಯಗಳಲ್ಲಿ ಸೇರಿವೆ. ಅವುಗಳಲ್ಲಿ ಪ್ರಮುಖವಾದವು ಭಾರತದ ರಾಷ್ಟ್ರೀಯ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು ವೈಜ್ಞಾನಿಕ ಮನೋಭಾವದಿಂದ ಕೂಡಿ ಪರಿಸರ ಕಾಳಜಿಯುಕ್ತ ಜೀವನ ನಡೆಸುವುದು ಇವೂ ಸಹ ಪ್ರಸ್ತುತ ನಮ್ಮ ಶಿಕ್ಷಣದ ಗುರಿಗಳಾಗಿ ಸಾಂವಿಧಾನಿಕ ಗುರಿಗಳ ಜೊತೆ ಸೇರ್ಪಡೆಯಾಗುತ್ತವೆ.

ರಾಷ್ಟ್ರೀಯ ಗುರಿಗಳ ಅಳವಡಿಕೆಯನ್ನು ನಮ್ಮ ಶಾಲೆ ಮತ್ತು ತರಗತಿಗಳಲ್ಲಿ ಗಮನಿಸಿದಾಗ 60 ವರ್ಷಗಳಲ್ಲಿ ನಾವು ನಮ್ಮ ಮಕ್ಕಳಿಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ ಕಡಿಮೆಯೇ. ಕಲಿಕೆ, ಅದರ ವಿಧಾನ, ಅಂದಿನ ತರಗತಿಯ ಗುರಿಗಳು, ಮಕ್ಕಳ ಅಭಿವ್ಯಕ್ತಿ, ಅವರ ಅಭಿಪ್ರಾಯ, ನಮ್ಮನ್ನು ವಿರೋಧಿಸುವ ಸ್ವಾತಂತ್ರ್ಯ ಹೀಗೆ ವಿವಿಧ ಮಜಲುಗಳನ್ನು ಗಮನಿಸುತ್ತಾ ನಮಗೆ ನಾವೇ ಮಕ್ಕಳ ಸ್ವಾತಂತ್ರ್ಯದ ವಿಷಯವನ್ನು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರವು ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಈ ಯೋಚನೆ ನಾವು ಮಕ್ಕಳಿಗೆ ನೀಡಿದ ಸಮಾನತೆ, ಭಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕೂ ಅನ್ವಯಿಸುತ್ತದೆ.

ಮಕ್ಕಳಿಗೆ ಅಭಿವ್ಯಕ್ತಿ ನೀಡಲು (ಅಂದರೆ ತಮ್ಮ ಅನಿಸಿಕೆಗಳನ್ನು ನಿರ್ಭಿತಿಯಿಂದ ಹೇಳಲು ಆಸ್ಪದ ಮಾಡಿಕೊಟ್ಟು ಅವನ್ನೆಲ್ಲಾ ಕ್ರೋಢೀಕರಿಸಿ, ತಿದ್ದುಪಡಿ ಮಾಡಿ, ಪರಿಕಲ್ಪನೆಗಳನ್ನು ರೂಪಿಸುವುದು ವಿಚಾರಮಂಥನ (ಃಡಿಚಿiಟಿ Sಣoಡಿmiಟಿg) ಇದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.

ಪ್ರಸ್ತುತ ಬದಲಾದ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಕ್ಕಳ ಕಲಿಕಾ ಸ್ವಾತಂತ್ರ್ಯ ಮತ್ತು ಉಳಿದ ಗುರಿಗಳ ಸಾಕಾರಕ್ಕಾಗಿ ಪಾಠಗಳನ್ನು ರೂಪಿಸಲಾಗಿದೆ. ಒಂದು ನಿಗದಿತ ಕಾಲದಲ್ಲಿ (ಒಂದು ಘಂಟೆ ಎಂದಿಟ್ಟು ಕೊಂಡರೆ) ಮಕ್ಕಳನ್ನು ಕಲಿಕಾ ಚಟುವಟಿಕೆಯಲ್ಲಿ ತೊಡಗಿಸಿದರೆ ಕೊನೆಯಲ್ಲಿ ನಮಗೆ ನೋಡಲು ಸಿಗುವುದು ಅವರು ಎಷ್ಟು ಕಲಿತಿದ್ದಾರೆಂಬುದಲ್ಲ! ಆದರೆ ಅವರ ವಿವಿಧ ಮನೋ ಸಾಮಥ್ರ್ಯ ಮಾತ್ರ ಇಲ್ಲಿ ಎಷ್ಟು ಕಲಿತರು ಎಂಬ ಪರೀಕ್ಷೆಗಿಂತ ಹೇಗೆ ಕಲಿಯುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳುವುದು ಕಲಿಕೆ ಅನುಕೂಲಿಸುವವರಿಗೆ ಪ್ರಧಾನವಾಗುತ್ತದೆ. ಅರ್ಥಾತ್ ತರಗತಿ ನಿರ್ವಹಣೆಯಲ್ಲಿ ಕಲಿಸುವ ಪ್ರಕ್ರಿಯೆ ಮಹತ್ವದ್ದಾಗಿದೆ. ಇಲ್ಲಿ ಎಷ್ಟು ಕಲಿತರು ಎಂಬ ಮೌಲ್ಯಮಾಪನ ಚಟುವಟಿಕೆ ಅಂತಿಮವೆನಿಸಿಕೊಳ್ಳುವುದಿಲ್ಲ. ಕಲಿಕೆ ಅನುಕೂಲಿಸಿದ ನಂತರ ಮಕ್ಕಳು ಸ್ವತಃ ತಮ್ಮ ಅಭಿಪ್ರಾಯ ರೂಪಿಸಿಕೊಂಡಿರುವುದು, ತಮ್ಮದೇ ರೀತಿಯಲ್ಲಿ ಅಭಿವ್ಯಕ್ತಿಸುವುದು ಪ್ರಮುಖವೆನಿಸುತ್ತದೆಯೇ ಹೊರತು ಶಿಕ್ಷಕರು ಹೇಳಿದಂತೆಯೇ ಮಕ್ಕಳು ಹಿಂಬಾಲಿಸುವುದಲ್ಲ. ಮಗು ಹಿಂಬಾಲಿಸಿದಲ್ಲಿ ಅದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲ ಮತ್ತು ಅಂತಹ ನಿರೀಕ್ಷೆಗಳಿಂದ ಮಗುವಿನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಮಗುವಿನ ಗ್ರಹಿಕೆಯು ನಿರಂತರ ಮೌಲ್ಯಮಾಪನದ ಅಗತ್ಯ ಇಲ್ಲಿಯೇ.

ಕಲಿಸುವಿಕೆ ಮತ್ತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 (ಎನ್.ಸಿ.ಎಫ್. 2005)

ಈಗಾಗಲೇ "ನಿರಂತರ" ಸಾಹಿತ್ಯದಲ್ಲಿ ಚರ್ಚಿಸಿರುವಂತೆ 1986ರ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಹುಟ್ಟುಹಾಕುವ ಪ್ರಯತ್ನ ಆರಂಭಿಸಿತ್ತು. ಈ ಶಿಕ್ಷಣ ವ್ಯವಸ್ಥೆಗೆ ತಳಹದಿಯಾ ಗಿ ಆಗಾಗ ಪಠ್ಯಕ್ರಮದ ನೀತಿ ನಿರೂಪಣೆ ಮಾಡಲಾಗುತ್ತದೆ. ಈ ಎಲ್ಲ ಪಠ್ಯಕ್ರಮಗಳ ಮೂಲದಲ್ಲಿ ಸಂವಿಧಾನದಲ್ಲಿ ಶಿಫಾರಸು


ಮಾಡಲಾದ ಮೌಲ್ಯಗಳೇ ಪ್ರಧಾನ. ಇgಚಿಟiಣಚಿಡಿiಚಿಟಿ, seಛಿuಟಚಿಡಿ, ಠಿಟuಡಿಚಿಟisಣiಛಿ soಛಿieಣಥಿ ಜಿouಟಿಜeಜ oಟಿ soಛಿiಚಿಟ ಎusಣiಛಿe ಚಿಟಿಜ equಚಿಟiಣಥಿ ಈ ಅಂಶಗಳು ರಾ.ಪ.ಚೌ 2005ರ ಮೂಲ ಆಶಯಗಳೂ ಸಹ ಆಗಿರುತ್ತವೆ. ನಾವು ಬೋಧಿಸುವ ವಿಷಯದ ವ್ಯಾಪ್ತಿಯಲ್ಲಿ ಈ ಗುರಿಸಾಧನೆ ನಮ್ಮ ಮುಂದಿರುವ ಸವಾಲು

ಮುಖ್ಯ ಲಕ್ಷಣಗಳು

ಎನ್.ಸಿ.ಎಫ್. 2005ರ ಮುಖ್ಯ ಲಕ್ಷಣಗಳು ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಅದರ ಕೆಲವು ಪ್ರಧಾನವಾದ ಅಂಶಗಳನ್ನು ಈ ಕೆಳಕಂಡಂತೆ ಗುರುತಿಸಿದೆ.

ಟ ಪಠ್ಯದಲ್ಲಿ ಭಾರತ ಸಂವಿಧಾನದಲ್ಲಿ ನೆಲೆಗೊಳಿಸಿರುವ ಮೌಲ್ಯಗಳ ಅಳವಡಿಕೆ

ಟ ಪಠ್ಯಕ್ರಮ ವಿಧಿಸುವ ಹೊರೆಯನ್ನು ಕಡಿಮೆ ಮಾಡುವುದು.

ಟ ಎಲ್ಲರಿಗೂ ಮೌಲ್ಯಾಧಾರಿತ/ಗುಣಾತ್ಮಕ ಶಿಕ್ಷಣ ದೊರಕಿಸುವುದು (ಇ.ಎಫ್.ಎ)

ಟ ವ್ಯಾವಸ್ಥಿಕ ಸುಧಾರಣೆ

ಟ ಸರ್ವ ಸಮಾನ ಶಾಲಾ ವ್ಯವಸ್ಥೆ.

ಇವುಗಳ ಆಧಾರದಲ್ಲಿಯೇ ಶಿಕ್ಷಣದ ಗುರಿಗಳನ್ನೂ ರೂಪಿಸಲಾಗಿತ್ತು. ಇವುಗಳೆಂದರೆ

ಟ ಸ್ವತಂತ್ರ ಚಿಂತನೆ ಹಾಗೂ ಕ್ರಿಯಾಶೀಲತೆಯ ಬೆಳವಣಿಗೆ

ಟ ಇತರರ ಭಾವನೆಗಳಿಗೆ ಸ್ಪಂದಿಸುವಿಕೆ

ಟ ಹೊಸ ಸನ್ನಿವೇಶಗಳಿಗೆ ನಮ್ಮ ಹಾಗೂ ಸೃಜನಶೀಲ ರೀತಿಯಲ್ಲಿ ಸ್ಪಂದಿಸುವಿಕೆ.

ಶಿಕ್ಷಣವು ಪ್ರಜಾಸತ್ತಾತ್ಮಕ ಜೀವನ ಶೈಲಿಯನ್ನು ಗಟ್ಟಿಗೊಳಿಸಬೇಕಾದರೆ ಅದು ಮೊತ್ತಮೊದಲಿಗೆ ಪ್ರಥಮ ತಲೆಮಾರಿನ ಕಲಿಕಾರ್ಥಿಗಳನ್ನು ಶಾಲೆಯಲ್ಲಿಯೇ ಉಳಿಯುವಂತೆ ಮಾಡಬೇಕಾಗಿದೆ. ಶಿಕ್ಷಣ ಈಗ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕು. ಲಿಂಗ, ಮತ, ಜಾತಿ, ಅಂಗವಿಕಲತೆಗಳ ವ್ಯತ್ಯಾಸಗಳನ್ನು ಮೀರಿದ ಶಾಲಾ ವಾತಾವರಣವನ್ನು ನಿರ್ಮಿಸಿ, ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕ ಆಹಾರದ ಬಗ್ಗೆ ನಿಗಾವಹಿಸಬೇಕಾಗಿದೆ.

ಪಠ್ಯಕ್ರಮ ಅಭಿವೃದ್ಧಿಯಲ್ಲಿ ಎನ್.ಸಿ.ಎಫ್ 2005- 5 ಮಾರ್ಗದರ್ಶಿ ತತ್ವಗಳನ್ನು ಅಳವಡಿಸಿದೆ.


ಕಲಿಕೆ ಹೊರೆಯಾಗಿರುವುದು ನಾವು ಶಿಕ್ಷಣದ ಗುರಿಗಳನ್ನು ಈಡೇರಿಸಿಕೊಳ್ಳುವಲ್ಲಿ ಹಾಗೂ ಗುಣಾತ್ಮಕತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ತಪ್ಪಿದ್ದೇವೆ ಎಂಬುದಕ್ಕೆ ಸಾಕ್ಷಿ. ಇದನ್ನು ಸರಿಪಡಿಸಲು ರಾ.ಪ.ಚೌ-2005 ಐದು ಮಾರ್ಗದರ್ಶಿ ತತ್ವಗಳನ್ನು ಮುಂದಿಡುತ್ತದೆ. ಈ ಮಾರ್ಗದರ್ಶಿ ತತ್ವಗಳು ಅತ್ಯಂತ ಆಳವಾದ ಅರ್ಥವನ್ನು ಹೊಂದಿವೆ.

1. ಜ್ಞಾನವನ್ನು ಶಾಲೆಯ ಹೊರಗಿನ ಜೀವನಕ್ಕೆ ಸಂಬಂಧೀಕರಿಸುವುದು.


2. ಬಾಯಿಪಾಠ ಮಾಡುವ ವಿಧಾನಗಳಿಂದ ಕಲಿಕಾ ಪ್ರತ್ರಿಕೆಯನ್ನು ಬೇರೆಯಾಗಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು.

3. ಪಠ್ಯಕ್ರಮವು ಪಠ್ಯಪುಸ್ತಕಗಳನ್ನು ಮೀರಿ ನಿಲ್ಲುವಂತೆ ಸಮೃದ್ಧಿಗೊಳಿಸುವುದು.

4. ಪರೀಕ್ಷೆಗಳನ್ನು ಹೆಚ್ಚು ನಮ್ಯ ಮಾಡುವುದು ಹಾಗೂ ತರಗತಿಯ ಆಗುಹೋಗುಗಳೊಂದಿಗೆ ಸಮ್ಮಿಳಿತಗೊಳಿಸುವುದು.

5. ಪ್ರಜಾಪ್ರಭುತ್ವದ ಆಡಳಿತ ಕ್ರಮದ ವ್ಯಾಪ್ತಿಯಲ್ಲಿಯೇ ಕಾಳಜಿಗಳತ್ತ ಲಕ್ಷ್ಯವಹಿಸುವಂತೆ ಗಮನಾರ್ಹ ಮನ್ನಣೆಯನ್ನು ಪೆÇೀಷಿಸುವುದು. (ಟಿuಡಿಣuಡಿiಟಿg ಚಿಟಿ oveಡಿಡಿiಜiಟಿg iಜeಟಿಣiಣಥಿ iಟಿಜಿoಡಿmeಜ bಥಿ ಛಿಚಿಡಿiಟಿg ಛಿoಟಿಛಿeಡಿಟಿs ತಿiಣhiಟಿ ಣhe ಜemoಛಿಡಿಚಿಣiಛಿ ಠಿoಟiಣಥಿ oಜಿ ಣhe ಛಿouಟಿಣಡಿಥಿ)


ಆಲೋಚಿಸಿ

ಸದ್ಯ ಅನುಷ್ಠಾನದಲ್ಲಿರುವ ಪಠ್ಯಕ್ರಮದಲ್ಲಿ ಈ ಮೇಲೆ ಸೂಚಿಸಿದ ಅಂಶಗಳನ್ನು ಅಳವಡಿಸಿಕೊಳ್ಳಲು ಅವಕಾಶಗಳಿಲ್ಲ ಎನಿಸುತ್ತದೆಯೇ? ನಾವು ಇದುವರೆಗೂ ಇಂತಹ ವಿಚಾರಗಳನ್ನು ಅಳವಡಿಸಿಕೊಳ್ಳದಿರಲು ಕಾರಣಗಳೇನು? ನೀವು ನಿಮ್ಮ ತರಗತಿ ಪ್ರಕ್ರಿಯೆಗಳಲ್ಲಿ ಈ ಅಂಶಗಳನ್ನು ಅಳವಡಿಸಿಕೊಳ್ಳಲು ನಿಮಗೆ ಯಾವ ರೀತಿಯ ಬೆಂಬಲ ಅಗತ್ಯವಿದೆ?

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಶಯಗಳ ಸಾರಾಂಶ

ಮೇಲೆ ತಿಳಿಸಿದ ಐದು ಮಾರ್ಗದರ್ಶಿ ತತ್ವಗಳು ಹೊರೆಯಾಗದ ಕಲಿಕೆಗೂ ಆದ್ಯತೆ ಕೊಡುತ್ತವೆ. ಜ್ಞಾನ ಮತ್ತು ಕಲಿಕೆಯ ಬಗ್ಗೆ ಪ್ರಸ್ತಾಪಿಸುತ್ತಾ ಮಗು ಜ್ಞಾನವನ್ನು ಕಟ್ಟಿಕೊಳ್ಳುವುದು ಎಂಬ ವಿಷಯವನ್ನು ಎನ್.ಸಿ.ಎಫ್. ವಿವರವಾಗಿ ಚರ್ಚಿಸಿದೆ. ಕಲಿಕೆಯು ಮಗುವಿನ ದೈಹಿಕ ಹಾಗೂ ಮಾನಸಿಕ ಮಟ್ಟಕ್ಕೆ ಇದ್ದು ಮಗುವಿಗೆ ಜ್ಞಾನವನ್ನು ಕಟ್ಟಿಕೊಳ್ಳುವಲ್ಲಿ ಪಠ್ಯಕ್ರಮ ಸಹಾಯ ಮಾಡಬೇಕು. ಕಲಿಕೆಯ ಅನುಭವವು ಮಗುವಿನ ಸ್ವಭಾವ ಹಾಗೂ ಪರಿಸರಕ್ಕೆ ಹೊಂದಿಕೆಯಾಗಬೇಕು. ಅನುಭವಕ್ಕೆ ತರ್ಕ ಬೆರೆತು ಪರಿಕಲ್ಪನೆ ರೂಪುಗೊಂಡು, ಆ ಪರಿಕಲ್ಪನೆ ಇತರ ಅನುಭವಗಳಿಗೂ ವಿಸ್ತರಗೊಂಡು ಜೀವನ ಶ್ರದ್ಧೆ ಆಗಬೇಕು. ಜ್ಞಾನ ಮತ್ತು ಮಾಹಿತಿಗಳನ್ನು ಪ್ರತ್ಯೇಕಿಸಬೇಕು. ಬೋಧನೆಯನ್ನು ಒಂದು ವೃತ್ತಿಪರ ಚಟುವಟಿಕೆಯಾಗಿ ಪರಿಗಣಿಸಬೇಕೇ ಹೊರತು ಮಾಹಿತಿ ನೀಡುವ, ನೆನಪು ಶಕ್ತಿ ಬೆಳೆಸುವ ತರಬೇತಿ ಎಂದು ತಿಳಿಯಬಾರದು. ಚಟುವಟಿಕೆಗಳೇ ಮಗುವಿಗೆ ಈ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಇರುವ ಮುಖ್ಯ ಮಾಧ್ಯಮ. ತರಗತಿಯ ಕಲಿಕಾ ಅನುಭವಗಳು/ಚಟುವಟಿಕೆಗಳು ಮಕ್ಕಳಿಗೆ ತಮ್ಮ ಜ್ಞಾನವನ್ನು ಕಟ್ಟಿಕೊಳ್ಳಲು ಸಹಾಯವಾಗುವಂತಿರಬೇಕು.

ಪಠ್ಯವಿಷಯಗಳೊಳಗಿನ ಅಂತರವನ್ನು ಕಡಿಮೆಮಾಡಿ ಸಮ್ಮಿಳಿತ ಪಠ್ಯವಸ್ತುವನ್ನು ಒದಗಿಸಲು ಶಿಫಾರಸ್ಸು ಮಾಡಲಾಗಿದೆ. ಸ್ಥಳೀಯ ಹಾಗೂ ಪಾರಂಪರಿಕ ಕೌಶಲಗಳನ್ನೊಳಗೊಂಡ ಬಹುಪಠ್ಯಪುಸ್ತಕಗಳು ಹಾಗೂ ಇತರ ಸಾಹಿತ್ಯ ಮಗುವಿನ ಮನೆಯ ಹಾಗೂ ಸಮುದಾಯದ ಜೀವನ ಅವಶ್ಯಕತೆಗಳಿಗೆ ಸ್ಪಂದಿಸಬೇಕು. ಮಗುವಿನ ಮಾತೃಭಾಷೆ, ಸ್ಥಳೀಯ, ಬುಡಕಟ್ಟು ಭಾಷೆಗಳನ್ನು ಆರಂಭಿಕ ಹಂತಗಳಲ್ಲಿ ಬೋಧನಾ ಮಾಧ್ಯಮವಾಗಿ ಬಳಸಬೇಕೆಂದು ಸೂಚಿಸಲಾಗಿದೆ.

ಇಂಗ್ಲಿಷ್ ಸೇರಿದಂತೆ ಬಹುಭಾಷಾ ಸಾಮಥ್ರ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು, ಬೆಳೆಸಲು ಸಾಧ್ಯ ಎಂದು ಶಿಫಾರಸ್ಸು ಮಾಡಿದೆ. ಮಾತೃಭಾಷೆಯಲ್ಲಿ ಓದುವ, ಬರೆಯುವ ಕೌಶಲಗಳಿಗೆ ಔಪಚಾರಿಕ ತರಬೇತಿ ಬೇಕು ಆದರೆ ದ್ವಿತೀಯ ಹಾಗೂ ತೃತೀಯ ಭಾಷೆಗಳಿಗೆ ಎಲ್ಲ ಕೌಶಲಗಳಲ್ಲೂ ತರಬೇತಿ ನೀಡಬೇಕು. ಇವೆಲ್ಲವೂ ಮಾತೃಭಾಷೆಯ ಮೇಲೆ ಸರಿಯಾದ ಪ್ರಭುತ್ವ ಸಾಧಿಸುವುದರಿಂದ ಸಾಧ್ಯವಾಗುತ್ತದೆ. ಅದಕ್ಕೆ ಬೇಕಾದ ಬೋಧನಾ ಕ್ರಮ ಅಳವಡಿಸಿಕೊಳ್ಳಬೇಕು. ಓದುವ ಕೌಶಲದ ಬೆಳವಣಿಗೆಗೆ ಒತ್ತು ನೀಡುವುದರಿಂದ ಶಾಲಾ ಕಲಿಕೆಗೆ ಪ್ರಯೋಜನವಾಗುವುದು ಎಂಬುದನ್ನು ಮನಗಾಣಲಾಗಿದೆ.

ಗಣಿತ ವಿಷಯಕ್ಕೆ ಸಂಬಂಧಿಸಿದಂತೆ- ತಾರ್ಕಿಕ ಚಿಂತನಾ ಸಾಮಥ್ರ್ಯ, ಅಮೂರ್ತ ಪರಿಕಲ್ಪನೆಗಳನ್ನು ಮೂರ್ತೀಕರಿಸಿಕೊಳ್ಳುವುದು ಹಾಗೂ ನಿಭಾಯಿಸುವುದು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು. ಇದಕ್ಕಾಗಿ ಗಣಿತವು ತನ್ನ ಮಿತಿಗಳನ್ನು ವಿಸ್ತರಿಸಿಕೊಳ್ಳುವುದು ಮುಖ್ಯ.

ವಿಜ್ಞಾನ ವಿಷಯವು ದಿನನಿತ್ಯದ ಅನುಭವಗಳನ್ನು ಪರೀಕ್ಷಿಸಿ ವಿಶ್ಲೇಷಿಸುವ ಅವಕಾಶ ನೀಡಬೇಕು. ಪರಿಸರಕ್ಕೆ ಸಂಬಂಧಿಸಿದ ವಿಷಯಗಳು, ಚಟುವಟಿಕೆ ಹಾಗೂ ಯೋಜನಾ ಕಾರ್ಯಗಳ (ಪ್ರಾಜೆಕ್ಟ್‍ಗಳ) ಮೂಲಕ ಕಲಿಕೆಯಾಗುವಂತಾಗ ಬೇಕು. ಇಂತಹ ಪ್ರಾಜೆಕ್ಟ್‍ಗಳಿಂದ ಬರುವ ಮಾಹಿತಿ ಭಾರತದ ಪರಿಸರದ ಬಗ್ಗೆ ಒಂದು ದೊಡ್ಡ ಮಾಹಿತಿ ಭಂಡಾರವನ್ನೇ ಸೃಷ್ಠಿಮಾಡಬಲ್ಲದು. ಅನ್ವೇಷಣಾ ಕಲಿಕೆಗೆ ಒತ್ತು ನೀಡಬೇಕು. ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಗೆ ವಿಜ್ಞಾನ ಕಲಿಕೆ ಪೂರಕವಾಗಬೇಕು.

ಇದಲ್ಲದೇ ಎನ್.ಸಿ.ಎಫ್ ಇನ್ನೂ ನಾಲ್ಕು ವಿಷಯಗಳಾದ ಕಾರ್ಯಶಿಕ್ಷಣ, ಲಲಿತ ಕಲೆ ಹಾಗೂ ಪಾರಂಪರಿಕ ಕುಶಲ ಕಲೆ, ಆರೋಗ್ಯ ಮತ್ತು ದೈಹಿಕ ಶಿಕ್ಷಣ ಮತ್ತು ಶಾಂತಿ ಶಿಕ್ಷಣ ವಿಷಯಗಳ ಬಗ್ಗೆ ಚರ್ಚಿಸುತ್ತದೆ. ಐದನೆಯ ಮಾರ್ಗದರ್ಶಿ ತತ್ವದನ್ವಯ ಇವು ಮುಖ್ಯವೂ ಕೂಡ. ಈ ನಾಲ್ಕು ವಿಷಯಗಳಲ್ಲಿ ಶಿಕ್ಷಕರು ಕಲಿಕೆ ಅನುಕೂಲಿಸಬೇಕಾಗುತ್ತದೆ. ಆರ್.ಟಿ.ಇ. 2009 ಕೂಡಾ ಈ ವಿಷಯಗಳನ್ನು ಕಡ್ಡಾಯಗೊಳಿಸಿದೆ.

ಪರೀಕ್ಷಾ ಕ್ರಮಗಳಲ್ಲಿ ಬದಲಾವಣೆ-ಪರೀಕ್ಷೆಗಳು ಹೊರೆ ರಹಿತ ಹಾಗೂ ಒತ್ತಡ ಕಡಿಮೆ ಮಾಡುವಂತಿರಬೇಕು. ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳ ಸ್ವರೂಪದಲ್ಲಿ ಬದಲಾಗಿ ಅವು ತಾರ್ಕಿಕ ಮತ್ತು ಸೃಜನಶೀಲ ಸಾಮಥ್ರ್ಯಗಳಿಗೆ ಹೆಚ್ಚು ಒತ್ತುಕೊಡಬೇಕು. ತರಗತಿಯೊಡನೆ ಪರೀಕ್ಷಾ ಕ್ರಮಗಳು ಮತ್ತು ಮೌಲ್ಯಮಾಪನ ಸಮ್ಮಿಳಿತಗೊಳ್ಳಬೇಕು. ಪಾಸು ಫೇಲು ಎಂಬ ಪದ್ಧತಿ ಹೋಗಿ ಬೇರೆ ಬೇರೆ ಮಟ್ಟದ ಸಾಧನೆ ಎಂದು ಗುರುತಿಸುವಂತಾಗಬೇಕು. ಶಾಲೆ ಹಾಗೂ ಇತರ ಸಾಮಾಜಿಕ ಅಂಗಗಳ ನಡುವೆ ಸಹಭಾಗಿತ್ವ ಸಾಧಿಸುವುದು ಹಾಗೂ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಎಲ್ಲರ ಗುರಿಯಾಗಬೇಕು.


ಈ ಎಲ್ಲಾ ಆಶಯಗಳು ಮತ್ತು ಮಾರ್ಗದರ್ಶಿ ತತ್ವಗಳನ್ವಯವೇ ಪ್ರಸ್ತುತ 5, 6, 8, ಮತ್ತು 9ನೇ ತರಗತಿಯ ಪಠ್ಯಪುಸ್ತಕಗಳನ್ನು ರಚಿಸಲಾಗಿದೆ. ಆರ್‍ಟಿಇ-09 ಆಶಯ/ನೀತಿಗಳನ್ನು ತಿಳಿದುಕೊಂಡ ನಂತರ ಎನ್‍ಸಿಎಫ್ 05 ಮತ್ತು ಆರ್‍ಟಿ 09ರ ನೀತಿಗಳನ್ವಯ ರಚಿತವಾದ ಪಠ್ಯಪುಸ್ತಕ ಮತ್ತು ಅವುಗಳೊಂದಿಗೆ ವ್ಯವಹರಿಸುವ ಸಾಧ್ಯತೆಗಳನ್ನು ಚರ್ಚಿಸೋಣ.


ಕಲಿಕೆ, ಕಲಿಸುವಿಕೆ ಮತ್ತು ಆರ್‍ಟಿಇ 2009

ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಈ ಹಕ್ಕಿನ ಜಾರಿಗಾಗಿ ಭಾರತ ಸರ್ಕಾರ 2009ರಿಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಅಧಿನಿಯಮ 2009 ಅನ್ನು ಅನುಷ್ಟಾನಗೊಳಿಸಿರುವುದು ತಮಗೆ ತಿಳಿದ ವಿಷಯ. ಈ ಅಧಿನಿಯಮದಲ್ಲಿ ವಿವಿಧ ಸೆಕ್ಷನ್‍ಗಳಲ್ಲಿ ಕಲಿಕೆ ಮತ್ತು ಕಲಿಸುವಿಕೆಯ ಅಂಶಗಳು ಅಡಕವಾಗಿದ್ದು ಸದರಿ ಸೆಕ್ಷನ್‍ಗಳನ್ನು ಈ ಕೆಳಗೆ ನೀಡಿದೆ:

ಟ ಸೆಕ್ಷನ್ 9 (ಎಫ್)ರಂತೆ ತರಗತಿ ಕೊಠಡಿ, ಶೌಚಾಲಯ, ನೀರಿನ ಸೌಲಭ್ಯ, ಆಟದ ಮೈದಾನ, ಕಪ್ಪು ಹಲಗೆ, ಪೀಠೋಪಕರಣ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ. ಇವೆಲ್ಲವೂ ಮಗುವಿಗೆ ಶಾಲಾ ಜೀವನವನ್ನು ಹೆಚ್ಚು ಆತ್ಮೀಯಗೊಳಿಸುವ ಅಂಶಗಳಾಗಿವೆ.

ಟ ಸೆಕ್ಷನ್ 19ರನ್ವಯ ಪ್ರತಿ ರಾಜ್ಯವೂ ತಮ್ಮ ಶಿಕ್ಷಣದ ಗುಣಾತ್ಮಕತೆಗೆ ಮಾಪಕ/ಸೂಚಕಗಳನ್ನು ರಚಿಸಿಕೊಂಡು (ಕಿuಚಿಟiಣಥಿ Iಟಿಜiಛಿಚಿಣoಡಿs) ಅದರನ್ವಯ ಕಾರ್ಯ ನಿರ್ವಹಿಸುವುದು.

ಟ ಅನುಸೂಚಿಯ 4ನೇ ಅಂಶದಲ್ಲಿ ಪ್ರತಿ ಶಿಕ್ಷಕರು ತಮ್ಮ ಪೂರ್ವ ಸಿದ್ಧತೆಯ ಅವಧಿಯನ್ನೂ ಸೇರಿದಂತೆ ಒಂದು ವಾರದಲ್ಲಿ 45 ಗಂಟೆಗಳಷ್ಟು ಸಮಯ ಕಾರ್ಯ ನಿರ್ವಹಿಸಬೇಕು.

ಟ 1 ರಿಂದ 5ನೇ ತರಗತಿಯವರೆಗಿನ ಪ್ರತಿ ಮಗು ಕಲಿಯಲು ಪ್ರತಿ ಶೈಕ್ಷಣಿಕ ವರ್ಷಕ್ಕೆ 800 ಬೋಧನಾ ಗಂಟೆಗಳು, 6ರಿಂದ 8ನೇ ತರಗತಿಯವರೆಗೆ 1000 ಬೋಧನಾ ಗಂಟೆಗಳನ್ನು ಮೀಸಲಿರಿಸಬೇಕು.


ಟ ಸೆಕ್ಷನ್ 21 ಮತ್ತು 22 ರಂತೆ ಶಾಲಾ ವ್ಯವಸ್ಥಾಪನ ಸಮಿತಿ ಶಾಲೆಯಲ್ಲಿನ ಕಲಿಕೆಯ ಗುಣಾತ್ಮಕತೆಯನ್ನು ಅವಲೋಕಿಸಿ ಅಗತ್ಯವಿದ್ದಲ್ಲಿ ಈ ಕೆಳಕಂಡ ನೆರವನ್ನು ನೀಡುವುದು.

- ವಿಕೇಂದ್ರೀಕೃತ, ಆಯಾ ಸನ್ನಿವೇಶಕ್ಕೆ ಅನುಗುಣವಾದ ಯೋಚನೆ ತಯಾರಿ, ಅನುಷ್ಠಾನ, ಅನುಪಾಲನೆ ಮತ್ತು ಮೌಲ್ಯಮಾಪನ.

- ಕಲಿಕಾ ಬೋಧನೋಪಕರಣಗಳು, ಸಾಮಗ್ರಿಗಳ ಪೂರೈಕೆ

- ಬಾಹ್ಯ ಮೇಲ್ವಿಚಾರಣೆಯನ್ನು ಬಲಪಡಿಸುವಿಕೆ.

- ಶಾಲಾ ಭೌತಿಕ ಮತ್ತು ತರಗತಿ ಪ್ರಕ್ರಿಯೆಯ ಸಬಲೀಕರಣ ಮಾಡುವುದು.


ಟ ಸೆಕ್ಷನ್ 29 ಮತ್ತು 30ರನ್ವಯ ಮಗುವಿನ ಸರ್ವತೋಮುಖ ಪ್ರಗತಿಯನ್ನು ದಾಖಲಿಸಲು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಮಾಡತಕ್ಕದ್ದು ಮತ್ತು ಪ್ರಮಾಣಪತ್ರ ನೀಡತಕ್ಕದ್ದು. ಆದರೆ ಮಗುವನ್ನು ಯಾವುದೇ ಮಂಡಳಿಯ ಪರೀಕ್ಷೆಗೆ ಒಳಪಡಿಸುವಂತಿಲ್ಲ.

ಟ ಸೆಕ್ಷನ್ 31ರನ್ವಯ ಮಕ್ಕಳ ಹಕ್ಕುಗಳನ್ನು ಜಾರಿಗೊಳಿಸಲು ಶಾಲೆ ಮತ್ತು ಭಾಗೀದಾರರು ಕ್ರಮವಹಿಸುವುದು.

ಇವುಗಳಲ್ಲದೇ ಐದನೆಯ ಅಧ್ಯಾಯದ 29ನೇ ವಿಧಿಯಲ್ಲಿ ಕಲಿಕೆ, ಕಲಿಸುವಿಕೆ, ಪಠ್ಯ ವಿಷಯ ನಿರ್ವಹಣೆಯ ಕುರಿತಾದ ಖಚಿತ ನಿಲುವುಗಳು ಮತ್ತು ನೀತಿಗಳಿವೆ. ಅಧ್ಯಾಯ ಐದರ ಯಥಾವತ್ ಕನ್ನಡ ಅನುವಾದವನ್ನು ಈ ಕೆಳಗೆ ನೀಡಿದೆ.


ಪ್ರಾಥಮಿಕ ಶಿಕ್ಷಣದ ಪಠ್ಯ ವಿಷಯ ಮತ್ತು ಅದರ ಪೂರ್ಣಗೊಳಿಸುವಿಕೆ ............. ಈ ಶೀರ್ಷಿಕೆಯಿಂದ ಅಧ್ಯಾಯ ಆರಂಭವಾಗುತ್ತಿದ್ದ 29ರ ವಿಧಿಯ ವಿವರ ಈ ಕೆಳಗಿದೆ.

29. ಪಠ್ಯ ವಿಷಯ ಮತ್ತು ಪರೀಕ್ಷಾ ಪ್ರಕ್ರಿಯೆ - ಪ್ರಾಥಮಿಕ ಶಿಕ್ಷಣಕ್ಕಾಗಿ ಪಠ್ಯ ವಿಷಯವನ್ನು ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು, ಸಮುಚಿತ ಸರ್ಕಾರದ, ಅಧಿಸೂಚನೆ ಮೂಲಕ ನಿರ್ದಿಷ್ಟಪಡಿಸಿದ ಒಂದು ಶೈಕ್ಷಣಿಕ ಪ್ರಾಧಿಕಾರವು ನಿಗದಿಪಡಿಸತಕ್ಕದ್ದು.

(2) ಶೈಕ್ಷಣಿಕ ಪ್ರಾಧಿಕಾರವು, (1) ನೇ ಉಪ-ಪ್ರಕರಣದ ಅಡಿಯಲ್ಲಿ ಪಠ್ಯ ವಿಷಯದ ಮತ್ತು ಪರೀಕ್ಷಾ ಪ್ರಕ್ರಿಯೆಗಳನ್ನು ನಿಗದಿಪಡಿಸುವಾಗ, ಈ ಮುಂದಿನವುಗಳನ್ನು ಪರಿಗಣಿಸತಕ್ಕದ್ದು ಎಂದರೆ,-

(ಎ) ಸಂವಿಧಾನದಲ್ಲಿ ಪವಿತ್ರ ಸ್ಥಾನ ನೀಡಿರುವ ಮೌಲ್ಯಗಳ ಅನುಸರಣೆ;

(ಬಿ) ಮಕ್ಕಳ ಸರ್ವಾಂಗೀಣ ಅಭಿವೃದ್ಧಿ;

(ಸಿ) ಮಕ್ಕಳ ಜ್ಞಾನ, ಸಾಮಥ್ರ್ಯ ಮತ್ತು ಪ್ರತಿಭೆಯ ವರ್ಧನೆ;

(ಡಿ) ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯಗಳ ವಿಕಸನ;

(ಇ) ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ ಚಟುವಟಿಕೆಗಳು,

ಅನ್ವೇಷಣೆ ಮತ್ತು ಸಾಹಸ ಶೋಧನೆ ಮೂಲಕ ಮಕ್ಕಳು ಕಲಿಯುವುದು;

(ಎಫ್) ಶಿಕ್ಷಣ ಮಾಧ್ಯಮವು ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃ ಭಾಷೆಯಲ್ಲಿರತಕ್ಕದ್ದು;

(ಜಿ) ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸುವುದು ಮತ್ತು ಮಗು ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವುದು;

(ಎಚ್) ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಆತನ ಅಥವಾ ಆಕೆಯ ಸಾಮಥ್ರ್ಯದ ಬಗ್ಗೆ ಮಕ್ಕಳ ಸಮಗ್ರ ಹಾಗೂ ನಿರಂತರ ಮೌಲ್ಯ ನಿರ್ಧರಣೆ.



ಆರ್‍ಟಿಇ 09 ಮತ್ತು ಕಲಿಸುವಿಕೆಯ ಸಾರಾಂಶ

ಆರ್‍ಟಿಇ 09 ಶಿಕ್ಷಣದ ಗುಣಾತ್ಮಕತೆಗೆ ತಿಳಿಸಿದಂತೆ ಕಲಿಕೆ ಮತ್ತು ಕಲಿಸುವಿಕೆಗೆ ನಾವು ನಮ್ಮ ಸೂಚಕಗಳನ್ನು ರೂಪಿಸಿಕೊಳ್ಳಬೇಕು. ಮಗುವಿನ ಕಲಿಕೆಯ ವಾತಾವರಣವು ಭಯ ಮುಕ್ತ, ಆಘಾತ ಹಾಗೂ ಆತಂಕರಹಿತವಾಗಿದ್ದು ಮುಕ್ತ ಅಭಿಪ್ರಾಯಕ್ಕೆ ನೆರವಾಗುವಂತಿರಬೇಕು. ಕಲಿತ ಜ್ಞಾನ ಮತ್ತು ಸಾಮಥ್ರ್ಯಗಳ ಮೌಲ್ಯಮಾಪನಕ್ಕೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವನ್ನು ಜಾರಿಗೊಳಿಸಬೇಕಿದೆ. ಈ ಎಲ್ಲಾ ಅಂಶಗಳು ಒಂದಕ್ಕೊಂದು ಸಮ್ಮಿಳಿತವಾದ ಅಂಶಗಳೇ ಆಗಿವೆ. ಉದಾಹರಣೆಗೆ ಭಯರಹಿತ ವಾತಾವರಣಕ್ಕೂ ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವಿಕೆಗೂ ಹತ್ತಿರದ ಸಂಬಂಧವಿದೆ. ಎಲ್ಲ ಶಾಲಾ ಪ್ರಕ್ರಿಯೆಗಳನ್ನೂ ಮೌಲ್ಯಮಾಪನದ ಹಂತಕ್ಕೆ ಸೀಮಿತಗೊಳಿಸುವುದು ಪ್ರಸ್ತುತ ದುರಂತ. ಮೌಲ್ಯಮಾಪನವು ಭಾಗೀದಾರರಿಗೆ ಹಿಮ್ಮಾಹಿತಿ ಪಡೆಯುವ ಮತ್ತು ಕಲಿಕೆಯ ಒಂದು ಸಾಧನವೇ ಹೊರತು, ಮಗುವನ್ನು ಬ್ರ್ಯಾಂಡ್ ಮಾಡಲು ಅಲ್ಲ ಎನ್ನುವುದಕ್ಕೂ ಮುಕ್ತ ವಾತಾವರಣ ಮತ್ತು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಎನ್ನುವುದಕ್ಕೂ ಸಂಬಂಧವಿದೆ.


ಎನ್.ಸಿ.ಎಫ್. 05 ಮತ್ತು ಆರ್‍ಟಿಇ 09ರ ಆಶಯಗಳ ಪೂರೈಕೆಗೆ ರಾಜ್ಯವು ಕೈಗೊಂಡಿರುವ ಕ್ರಮಗಳು

ಎನ್.ಸಿ.ಎಫ್ ಮತ್ತು ಆರ್‍ಟಿಇ ಆಶಯ ಮತ್ತು ಶಿಫಾರಿಸಿನಂತೆ ರಾಜ್ಯ ಸರ್ಕಾರವು ಹಲವು ಪ್ರಯತ್ನಗಳನ್ನು ಈಗಾಗಲೇ ಮಾಡಿದೆ. ಕಲಿಕಾದಾರರ ಅಗತ್ಯಗಳನ್ನು ಗುರುತಿಸಲಾಗಿದೆ. ಪಠ್ಯಕ್ರಮ ಕುರಿತು ಈ ಕೆಳಗಿನ ಶಿಫಾರಸ್ಸುಗಳನ್ನು ಮಾಡಿದೆ.

ಟ ಕಲಿಯುವ ವಿಧಾನದಲ್ಲಿ ಕಲಿಯುವವರ ಆವಶ್ಯಕತೆ, ಸಾಮಥ್ರ್ಯ ಮತ್ತು ಮಿತಿಗಳ ಮೇಲೆ ಪಠ್ಯಕ್ರಮ ತನ್ನ ಗಮನ ಕೇಂದ್ರಿಕರಿಸಬೇಕು.

ಟ ಪರಿಷ್ಕೃತ ಪಠ್ಯಕ್ರಮವು ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ಮಕ್ಕಳ ಅವಶ್ಯಕತೆಗಳಷ್ಟೇ ಅಲ್ಲದೆ ಎಲ್ಲಾ ಮಕ್ಕಳ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. (ಎಂದರೆ ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗುವ, ಕೆಳ ತರಗತಿಗಳಲ್ಲಿ ಗಣನೀಯ ಸಂಖ್ಯೆಗಳಲ್ಲಿ ಗೈರುಹಾಜರಾಗುವ ಮಕ್ಕಳ ಅವಶ್ಯಕತೆಗಳನ್ನೂ ಗಮನಿಸಬೇಕು)

ಟ ಮಕ್ಕಳು 9ನೆಯ ತರಗತಿಯಿಂದಲೇ ಉಪಜೀವನ ಕಂಡುಕೊಳ್ಳುವ (ಉದ್ಯೋಗಾವಕಾಶಗಳು) ಹೊಸ ಮಾರ್ಗಗಳನ್ನು ಪಠ್ಯಕ್ರಮ ಒಳಗೊಳ್ಳಬೇಕು.

ಟ ವಿವಿಧ ಕಾರಣಗಳಿಂದ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ಹಂತಗಳವರೆಗೆ ಮುಂದುವರಿಯಲಾಗದ ಮಕ್ಕಳಿಗೂ ಪಠ್ಯಕ್ರಮವು ಮುಕ್ತ ಶಾಲಾ ಅವಕಾಶಗಳನ್ನು ತೆರೆದಿಡಬೇಕು.

ಟ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳನ್ನು ರಾಜ್ಯ ಶಿಕ್ಷಣ ನೀತಿಗನುಗುಣವಾಗಿ ತ್ರಿಭಾಷಾ ಸೂತ್ರದನ್ವಯ ರಚಿಸಬೇಕು.

ಟ ಮಕ್ಕಳ ಮೌಲ್ಯಮಾಪನ ಶಾಲಾ ಹಂತದ ಮಕ್ಕಳ ಮೌಲ್ಯಮಾಪನ 1-5 ತರಗತಿಯವರೆಗೆ, ದಕ್ಷತೆಯನ್ನು ಆಧರಿಸಿದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದಾಗಬೇಕು.


ಈ ಎಲ್ಲಾ ಅಂಶಗಳ ಬಗ್ಗೆ ಗಮನಹರಿಸಲಾಗುತ್ತಿದ್ದರೂ ಸಾಗಬೇಕಾದ ದೂರ ಬಹಳ ಹೆಚ್ಚಾಗಿದ್ದು ನಾವು ಸಾಗುವ ವೇಗ ಇನ್ನೂ ಹೆಚ್ಚಿಸಬೇಕಿದೆ.

ಈ ಎಲ್ಲಾ ಅಂಶಗಳ ನಡುವೆ ಪ್ರಮುಖವಾದ ಪ್ರಯತ್ನ 6 ಮತ್ತು 9 ನೇ ತರಗತಿಯ ಪಠ್ಯವಸ್ತುಗಳ ಪುನಾರಚನೆ.

ಆರು ಮತ್ತು ಒಂಬತ್ತನೇ ತರಗತಿಯ ಪಠ್ಯಪುಸ್ತಕಗಳ ಪುನಾರಚನೆಯ ಆಶಯಗಳು ಮತ್ತು ಪಾಠ ನಿರ್ವಹಣೆ


ಈಗಾಗಲೇ ಚರ್ಚಿಸಿದಂತೆ 6 ಮತ್ತು 9 ನೇ ತರಗತಿಯ ಪಠ್ಯಪುಸ್ತಕಗಳ ಪುನಾರಚನೆಯು ರಾಷ್ಟ್ರನೀತಿ ಮತ್ತು ರಾ.ಪ.ಚೌ. 05ರ ಆಶಯಗಳನ್ವಯ ರೂಪಿಸಿದೆ. ಅವುಗಳ ನಿರ್ವಹಣೆಯು ಈ ಕೆಳಕಂಡಂತಾಗಬೇಕು.

ಟ ಪಾಠ ನಿರ್ವಹಣಾ ವಿಧಾನವು ಅನುಭವನಾತ್ಮಕ ಚಟುವಟಿಕೆಗಳಾಗಿ, ಜ್ಞಾನವು ಶಾಲೆಯ ಹೊರಗಿನ ಜೀವನಕ್ಕೆ ಪ್ರಸ್ತುತವಾಗುವಂತೆ ಯೋಜಿಸಿಕೊಳ್ಳುವುದು.

ಟ ಏನನ್ನು ಕಲಿಯುವುದು? ಹೇಗೆ ಕಲಿಯುವುದು? ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸುವಂತೆ ಪೆÇ್ರೀತ್ಸಾಹಿಸಬೇಕು. ತಮ್ಮ ಕಲಿಕೆಗೆ ತಾವೇ ಜವಾಬ್ದಾರರು ಎಂದು ವಿದ್ಯಾರ್ಥಿಗಳು ಅರಿಯುವಂತಾಗಲು ಈ ಪಾಠಗಳಲ್ಲಿ ವಿಪುಲ ಅವಕಾಶಗಳಿವೆ.....

ಟ ವಿದ್ಯಾರ್ಥಿಗಳೇ ನಿರ್ಧರಿಸುವ ಕಲಿಕೆಯು ಶಿಕ್ಷಕರ ಪೂರ್ವಸಿದ್ಧತೆ, ಕಲಿಕಾ ಸಾಮಗ್ರಿ, ಆಕರ ಸಂಪನ್ಮೂಲ, ತರಗತಿ ಕೊಠಡಿಯೊಳಗಿನ ಮೇಲ್ವಿಚಾರಣೆ, ಮೌಲ್ಯಮಾಪನ ವಿಧಾನ ಇವುಗಳನ್ನು ಕೂಡಾ ಪ್ರಭಾವಿಸುತ್ತದೆ. ಇದಕ್ಕಾಗಿ ಶಿಕ್ಷಕರು ಮತ್ತು ಭಾಗೀದಾರರು ಸಜ್ಜಾಗಬೇಕು.

ಟ ಶಿಕ್ಷಕರು ಕೇವಲ ಜ್ಞಾನದ ಸರಬರಾಜುದಾರರಾಗುವುದಕ್ಕಿಂತ ಕಲಿಕೆ ಅನುಕೂಲಿಸುವವರಾಗಿ/ ಸುಗಮಕಾರರಾಗಿ (ಈಚಿಛಿiಟiಣಚಿಣoಡಿ) ತಮ್ಮನ್ನೇ ಮಾರ್ಪಡಿಸಿಕೊಳ್ಳಬೇಕು.

ಟ ಮಾಹಿತಿಯ ಪ್ರದರ್ಶನಕ್ಕಷ್ಟೇ ಶಿಕ್ಷಣವು ಸೀಮಿತಗೊಳ್ಳಬಾರದು. ಮಕ್ಕಳು ತಾವೇ ಸಂರಚಿಸಿಕೊಳ್ಳುವ ಜ್ಞಾನ ಕ್ಷೇತ್ರಗಳಲ್ಲಿ ಅಧ್ಯಾಪಕರು ಸಕ್ರಿಯವಾಗಿ ತೊಡಗಿಸಿಕೊಂಡು ಮಕ್ಕಳು ಮತ್ತು ಸಮುದಾಯದ ಜ್ಞಾನವನ್ನು ತಮ್ಮಲ್ಲಿ ಸ್ವೀಕರಿಸಬೇಕು.,

ಟ ವಿಮರ್ಶಾತ್ಮಕ ಚಿಂತನೆಗೆ ಮಕ್ಕಳನ್ನು ಅಣಿಗೊಳಿಸುವಂತಹ ವಿಧಾನಗಳನ್ನು ಶಿಕ್ಷಕರು ಅನುಸರಿಸಬೇಕು.

ಟ ಸಾಮಾಜಿಕ, ಆರ್ಥಿಕ, ನೈತಿಕ ಕ್ಷೇತ್ರಗಳಲ್ಲಿ ಚಿಂತನಪರ ಬೋಧನೆಗಳು ವರ್ತಮಾನದ ಕಾಳಜಿಗಳನ್ನು ತಾವೇ ವಿಮರ್ಶಿಸಿಕೊಳ್ಳುವ ಅವಕಾಶಗಳನ್ನು ಮಕ್ಕಳಿಗೆ ನೀಡಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಬಹುದೃಷ್ಟಿಕೋನಗಳನ್ನು ಪರಿಚಯಿಸಿಕೊಳ್ಳಲು ವಿಮರ್ಶಾಯುಕ್ತ ಶಿಕ್ಷಣ ಕ್ರಮ ನೆರವಾಗುತ್ತದೆ.


ಟ ಮುಕ್ತವಾದ ಚಚೆರ್Éಗಳನ್ನು ಅನುಕೂಲಿಸುವುದು. ಒಟ್ಟಾಗಿ ಕುಳಿತು ಅನ್ಯೋನ್ಯ ಚರ್ಚೆಗಳಿಂದ ಸಮಾಲೋಚಿಸುವುದು ಅಪೇಕ್ಷಣೀಯ. (ಗುಂಪು ಚರ್ಚೆಗೆ ಪ್ರಾಧಾನ್ಯ)

ಟ ಜ್ಞಾನದ ಮರುರಚನೆಗೆ ವಿಧ್ಯಾರ್ಥಿಗಳನ್ನು ಉತ್ತೇಜಿಸಬೇಕು. ಶಾಲೆಯ ಜ್ಞಾನವನ್ನು ಸ್ಥಳೀಯ ಜ್ಞಾನಕ್ಕೆ ಸಮನ್ವಯಿಸಲು ಅಗತ್ಯ ಮಾರ್ಗದರ್ಶನ ನೀಡಬೇಕು. ಪುಸ್ತಕದಲ್ಲಿ ನೀಡಿದ ಮಾಹಿತಿಗೆ ಭಿನ್ನವಾದ ಸ್ಥಳೀಯ ಜ್ಞಾನವಿದ್ದಲ್ಲಿ ಅದರಿಂದಲೇ ಕಲಿಕೆ ಮತ್ತು ಕಲಿಸುವಿಕೆ ಆಗಲಿ ಮೌಲ್ಯಮಾಪನವೂ ಅದಕ್ಕೆ ಸರಿಹೊಂದುವಂತೆ ಕ್ರಿಯಾತ್ಮಕವಾಗಿ ಆಗಲಿ.

ಗಮನಿಸಿ : ಓದಿದಾಓದು ತಾಮೇದ ಕಬ್ಬಿನಸಿಪ್ಪೆ

ಓದಿನಾ ಒಡಲ ನರಿ ತಿಹರೆ ಸಿಪ್ಪೆ

ಕಬ್ಬಾದಂತೆ ಕಾಣೋ - ಸರ್ವಜ್ಞ


ಪಾಠ ನಿರ್ವಹಣೆ - ಕೆಲವು ಟಿಪ್ಪಣಿಗಳು

ಮೇಲಿನ ಆಶಯಗಳನ್ನು ಗಮನಿಸಿದಾಗ ಬದಲಾದ ಪಠ್ಯ ಪುಸ್ತಕದ ಪಾಠನಿರ್ವಹಣೆಯ ಕೆಲವು ಅಂಶಗಳು ಹೀಗಿರಬಹುದು.

ಟ ಸಾಮಾಜಿಕ, ಆರ್ಥಿಕ, ನೈತಿಕ ಕ್ಷೇತ್ರಗಳಲ್ಲಿ ಚಿಂತನಪರ ಬೋಧನೆಗಳು ವರ್ತಮಾನದ ಕಾಳಜಿಗಳನ್ನು ತಾವೇ ವಿಮರ್ಶಿಸಿಕೊಳ್ಳುವ ಅವಕಾಶಗಳನ್ನು ಮಕ್ಕಳಿಗೆ ನೀಡಲು ಪಾಠಗಳನ್ನು ಬಳಿಸಿಕೊಳ್ಳಿರಿ.

ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಬಹುದೃಷ್ಟಿಕೋನಗಳನ್ನು ಪರಿಚಯಿಸಿಕೊಳ್ಳಲು ವಿಮರ್ಶಾಯುಕ್ತ ಪಠ್ಯಕ್ರಮ ನೆರವಾಗುತ್ತದೆ. ಅದನ್ನು ಸಾಕಷ್ಟು ಬಳಸಿಕೊಳ್ಳಿರಿ.

ಟ ಮುಕ್ತವಾದ ಚರ್ಚೆ, ಒಟ್ಟಾಗಿ ಕುಳಿತು ಅನ್ಯೋನ್ಯ ಚರ್ಚೆಗಳಿಂದ ಸಮಾಲೋಚಿಸಿರಿ.

ಟ ಜ್ಞಾನದ ಮರುರಚನೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸಿರಿ ಮತ್ತು ಶಾಲೆಯ ಜ್ಞಾನವನ್ನು ಸ್ಥಳೀಯ ಜ್ಞಾನಕ್ಕೆ ಸಮನ್ವಯಿಸಲು ಪಾಠಗಳನ್ನು ಬಳಿಸಿಕೊಳ್ಳಿರಿ. ಪುಸ್ತಕದಲ್ಲಿ ನೀಡಿದ ಮಾಹಿತಿಯು ಒಮ್ಮೊಮ್ಮೆ ಸ್ಥಳೀಯ ವೈವಿಧ್ಯಕ್ಕೆ ಹೊಂದಿಕೆಯಾಗದಿದ್ದಲ್ಲಿ, ಸ್ಥಳೀಯ ಜ್ಞಾನದಿಂದಲೇ ಕಲಿಕೆ ಮತ್ತು ಕಲಿಸುವಿಕೆ ಆಗಲಿ. ಈ ರೀತಿ ಸ್ಥಳೀಯ ಅನುಭವಗಳಿಂದ (ಮಕ್ಕಳ, ಇತರ ಭಾಗೀದಾರರ ಅನುಭವಗಳು) ಜ್ಞಾನ ಕಟ್ಟಿಕೊಡುವುದು ಅತ್ಯಂತ ಅಮೂಲ್ಯ ಮೌಲ್ಯಮಾಪನವೂ ಅದಕ್ಕೆ ಸರಿಹೊಂದುವಂತೆ ಕ್ರಿಯಾತ್ಮಕವಾಗಿ ಆಗಲಿ.


ಪಾಠ ನಿರ್ವಹಣೆ

ರಚನಾವಾದಿ ಪದ್ಧತಿಗಳನ್ನು ಆಧರಿಸಿ ನಿರ್ವಹಿಸುವ ತರಗತಿಯು ಕಲಿಕೆಯ ಜವಾಬ್ದಾರಿಯನ್ನು ಕಲಿಕಾದಾರರ ಮೇಲೆ ವರ್ಗಾಯಿಸುತ್ತದೆ. ಪ್ರತಿ ಮಗುವೂ ತನ್ನದೇ ಆದ ರೀತಿಯಲ್ಲಿ, ತನ್ನದೇ

ಅನುಭವಗಳಿಂದ ಜ್ಞಾನ ಕಟ್ಟಿಕೊಳ್ಳುತ್ತದೆ. ಇಲ್ಲಿ ಎಲ್ಲದನ್ನೂ ಶಿಕ್ಷಕರೇ ಹೇಳುವುದಿಲ್ಲವಾದ್ದರಿಂದ ಯೋಜನೆ ಮತ್ತು ಸಂವೇದನಾಶೀಲತೆಯೊಂದಿದ್ದರೆ ತರಗತಿ ನಿರ್ವಹಣೆ ಹಳೆಯ ಪದ್ಧತಿಗಳಿಗಿಂತ ಸುಲಭವಾಗುವುದು. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಕಲಿಕೆಯನ್ನು ಅನುಭವಾತ್ಮಕವಾಗಿಸುವುದು. ಕಲಿಕಾದಾರರಿಗೆ ಪ್ರತಿ ಕಲಿಕೆಯನ್ನೂ ತಮ್ಮ ಅನುಭವಗಳಿಗೆ ಸಂಬಂಧೀಕರಿಸಿ ಕೊಳ್ಳಲು ಸಾಧ್ಯವಾದರೆ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಉದಾಹರಣೆಗೆ ತಾವು ಕಲಿಯುತ್ತಿರುವ ಭಾಷೆಯಲ್ಲಿ ತಮ್ಮ ಸುತ್ತಲಿನ ವಸ್ತುಗಳಿಗೆ ಏನೆಂದು ಹೇಳುತ್ತಾರೆ ಎನ್ನುವುದನ್ನು ತಿಳಿದಿರುವ ಮಗುವಿಗೆ ಭಾಷೆಯ ಕಲಿಕೆ ಆಪ್ತವಾಗುತ್ತದೆ. ತಮ್ಮ ಅನುಭವಗಳ ಪರಿಧಿಯೊಳಗೆ ಬರುವ ವಸ್ತುಗಳಿಂದ, ಘಟನೆಗಳಿಂದ ಕಲಿಕೆ ಆರಂಭಿಸಿ ಹೊಸ ವಿಷಯಗಳತ್ತ ಮುಂದುವರಿದರೆ ಆ ಕಲಿಕೆ ಹೆಚ್ಚು ಅರ್ಥಪೂರ್ಣವಾಗುತ್ತದೆ.

ಆಲೋಚಿಸಿ

1. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಕುರಿತಂತೆ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರೇ? ಈ ಕುರಿತು ನಿಮ್ಮ ವಿಚಾರಗಳೇನು?

2. ಬೋಧನೆ, ಕಲಿಕೆ, ಶಿಕ್ಷಕ, ಅನುಕೂಲಕಾರ, ಬೋಧಿಸುವುದು, ಕಲಿಕೆ ಅನುಕೂಲಿಸುವುದು- ಈ ಎಲ್ಲ ಅಭಿವ್ಯಕ್ತಿಗಳಿಗೆ ಅವುಗಳದೇ ಆದ ಅರ್ಥವಿದೆ, ಮಹತ್ವವಿದೆ. ರಾ ಪ ಚೌ 2005ರ ಹಿನ್ನೆಲೆಯಲ್ಲಿ ಯಾವ ಪರಿಭಾಷೆ ಶಿಕ್ಷಣದ ಕುರಿತು ಚರ್ಚಿಸಲು ಹೆಚ್ಚು ಸೂಕ್ತ ಎಂದು ಭಾವಿಸುತ್ತೀರಿ? ಏಕೆ?