ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಏಕದಳ ಹಾಗು ದ್ವಿದಳ ಸಸ್ಯಗಳ ವರ್ಗೀಕರಣ

ಅಂದಾಜು ಸಮಯ

೧೫ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಏಕದಳ ಹಾಗು ದ್ವಿದಳ ಸಸ್ಯಗಳ ಎಲೆಗಳು, ಬೇರುಗಳು,ಹಾಗು ಬೀಜಗಳು.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ವಿದ್ಯಾ ರ್ಥಿಗಳು ತಮ್ಮ ಪರಿಸರದ ಸುತ್ತ ಮುತ್ತಲಿನ ಏಕದಳ ಹಾಗು ದ್ವಿದಳ ಸಸ್ಯಗಳನ್ನು ವೀಕ್ಷಿಸಿ ಅವುಗಳ ಗುಣಲಕ್ಷಣಗಳನ್ನು ತಿಳಿಯುವುದು .

ಬಹುಮಾಧ್ಯಮ ಸಂಪನ್ಮೂಲಗಳ

೧.jpg೨.jpg೩.jpg೪.jpg೫.jpg

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಕ್ಯೆತೋಟ,ಉದ್ಯಾನವನ,ಜಮೀನು,ಹೊಲ,ಗ್ರಂಥಾಲಯ,

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

https://www.youtube.com/watch?v=xDeei76ii5E

https://www.youtube.com/watch?v=Q41fJqKe7Sg

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಿಸಿ,ಪ್ರತಿ ಗುಂಪಿನ ವಿದ್ಯಾರ್ಥಿಗಳು ತಮಗೆ ಕೊಟ್ಟಿರುವ ಸಸ್ಯಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ಏಕದಳ ಹಾಗು ದ್ವಿದಳ ಸಸ್ಯಗಳನ್ನಾಗಿ ವಿಂಗಡಿಸುವುದು. ರಚನಾತ್ಮ ಕ ಶ್ನೆಗಳು;-

  • ದ್ವಿದಳ ಸ ಸ್ಯಗಳಲ್ಲಿರುವಂತೆ ಏಕದಳ ಸಸ್ಯಗಳಲ್ಲಿ ತಾಯಿ ಬೇರಿನ ವ್ಯವಸ್ಥೆ ಇರುವುದಿಲ್ಲ. ಏಕೆ ?
  • ಬಾಳೆಗಿಡದ ಎಲೆಗಳು ಸುಲಭವಾಗಿ ಗಾಳಿಗೆ ಸೀಳಿ ಹೋಗುತ್ತವೆ .ಏಕೆ?

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  • ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ
  • ಸಸ್ಯಗಳ ವಿಧಗಳನ್ನು ಗುರುತಿಸುವಿಕೆ
  • ಸಸ್ಯಗಳ ವರ್ಗೀಕರಿಸುವಿಕೆ
  • ವರ್ಗೀಕರಿಸುವುದರ ಕಾರಣಕೊಡುವಿಕೆ .
  • ವ್ಯತ್ಯಾಸಗಳ ಪಟ್ಟಿ ಮಾಡುವಿಕೆ

ಪ್ರಶ್ನೆಗಳು

  • ಏಕದಳ ಸಸ್ಯಗಳಿಗೆ ಉದಾಹರಣೆ ಕೊಡಿ.
  • ದ್ವಿದಳ ಸಸ್ಯಗಳಿ ಗೆ ಉದಾಹರಣೆ ಕೊಡಿ.
  • ಏಕದಳ ಸಸ್ಯದ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
  • ದ್ವಿದಳ ಸಸ್ಯಗಳ ಎಲೆಗಳ ವಿನ್ಯಾಸದ ಚಿತ್ರ ಬರೆಯಿರಿ.
  • ಏಕದಳ ಹಾಗು ದ್ವಿದಳ ಸಸ್ಯಗಳ ಬೇರಿನ ಚಿತ್ರ ಬರೆಯಿರಿ
  • ನೀರನ್ನು ಹೀರುವ ಸಸ್ಯದ ಭಾಗ ಯಾವುದು ?
  • ಸಸ್ಯಗಳ ಅಡುಗೆ ಮನೆ ಯಾವುದು?
  • ಏಕದಳ ಹಾಗು ದ್ವಿದಳ ಸಸ್ಯಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ.

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಉನ್ನತ ಸಸ್ಯಗಳು ಮತ್ತು ಪ್ರಾಣಿಗಳು