ಪತ್ರ ರಂಧ್ರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಎಲೆಗಳ ಹೊರದರ್ಮ ಅಂಗಾಂಶದಲ್ಲಿ ಪತ್ರರಂಧ್ರಗಳ ವೀಕ್ಷಣೆ

ಅಂದಾಜು ಸಮಯ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಸೂಕ್ಷ್ಮದರ್ಶಕಯಂತ್ರ,
  2. ಗಾಜಿನ ಸ್ಲೈಡ್
  3. ಕವರ್ ಗ್ಲಾಸ್
  4. ನೀಡಲ್
  5. ವರ್ಣದ್ರವ್ಯ (ಸ್ಯಾಫ್ರನಿನ್),
  6. ಪೆನ್ಸಿಲ್
  7. ನೀರು
  8. ಒತ್ತುಕಾಗದ
  9. ಕ್ಯೂಟಿಕಲ್ ಚೆನ್ನಾಗಿ ಪಡೆಯಬಹುದಾದ ಎಲೆ ( ಕಣಗಲೆ, ಕಾಶಿಕಣಗಲೆ, ಎಕ್ಕ, ಕನ್ನೆಗಿಡ, ಇತ್ಯಾದಿ)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಈ ಪ್ರಯೋಗವನ್ನು ಮಾಡುವಾಗ ಏಪ್ರಾನ್ ಧರಿಸುವುದು
  2. ಈ ಪ್ರಯೋಗದಲ್ಲಿ ವರ್ಣದ್ರವ್ಯ ಎಂಬುದರ ಬದಲಿಗೆ ಬಣ್ಣ ಎಂದು ಉಚ್ಚರಿಸಲಾಗಿದೆ, ವರ್ಣದ್ರವ್ಯ ಎನ್ನುವುದು ಸೂಕ್ತವಾದ ಪದ
  3. ನೀಡಲ್ ಬಳಸುವಾಗ ಎಚ್ಚರಿಕೆಯಿಂದ ಬಳಸಿ
  4. ಸ್ಲೈಡ್ ಮೇಲೆ ಕವರ್ ಗ್ಲಾಸ್ ಹಾಕುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರಿಕೆ ವಹಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಸೂಕ್ಷ್ಮದರ್ಶಕಯಂತ್ರವನ್ನು ಪ್ರಯೋಗ ಶಾಲೆಯ ಕಿಟಕಿ ಬಳಿ ಮೇಜಿನ ಮೇಲೆ ಇಟ್ಟು , ಸೂಕ್ಷ್ಮದರ್ಶಕದ ಮೂಲಕ ಐ ಪೀಸ್ ನ ಮೂಲಕ ಬೆಳಕು ಹಾಯುವಂತೆ ಹೊಂದಾಣಿಕೆ ಮಾಡಿಕೊಳ್ಳುವುದು.
  2. ಗಾಜಿನ ಸ್ಲೈಡ್ ಮೇಲೆ ಒಂದು ಹನಿ ನೀರನ್ನು ಹಾಕಿಡುವುದು
  3. ವೀಕ್ಷಿಸಬಹುದಾದ ಎಲೆಯನ್ನು (ಕಣಗಲೆ ಸಸ್ಯದ ಎಲೆ) ತೋರಿಸುತ್ತಾ , ಎಲೆಯಲ್ಲಿನ ಹೊರದರ್ಮ ಅಂಗಾಂಶದಲ್ಲಿನ ಕ್ಯುಟಿಕಲ್ ಪೊರೆಯನ್ನು ಬಿಡಿಸುವುದು
  4. ಕ್ಯುಟಿಕಲ್ ಪೊರೆಯನ್ನು ತೋರಿಸುತ್ತಾ ಗಾಜಿನ ಸ್ಲೈಡ್ ಮೇಲಿರುವ ನೀರಿನ ಹನಿ ಮೇಲೆ ಹಾಕಿ , ಅದರಲ್ಲಿ ಸಾಂಧ್ರವಾಗಿರುವ ಜೀವಕೋಶಗಳನ್ನು ನೀಡಲ್ ನ ಸಹಾಯದಿಂದ ವಿರಳೀಕರಿಸುವುದು
  5. ವಸ್ತುಕದ ಮೇಲೆ (ಕ್ಯುಟಿಕಲ್) ಒಂದೆರಡು ಹನಿ ಬಣ್ಣ ಹಾಕಿ, ನಿಧಾನವಾಗಿ ಕವರ್ ಗ್ಲಾಸ್ ಬಿಡುವುದು
  6. ಕವರ್ ಗ್ಲಾಸ್ ಬಿಡುವಾಗ ಗಾಳಿಯ ಗುಳ್ಳೆಗಳು ಬರದಂತೆ ಎಚ್ಚರ ವಹಿಸುವುದು
  7. ಈಗ ವಸ್ತುಕ ತಯಾರಾಗಿದ್ದು , ಅದನ್ನು ಸೂಕ್ಷ್ಮದರ್ಶದ ವೇದಿಕೆ ಮೇಲಿಡುವುದು
  8. ಸೂಕ್ಷ್ಮದರ್ಶಕದ ಐ ಪೀಸ್ ನ ಮೂಲಕ ವೀಕ್ಷಿಸುತ್ತಾ , ಕೋರ್ಸ್ ಅಡ್ಜಸ್ಟಮೆಂಟ್ ಮತ್ತು ಪೈನ್ ಅಡ್ಜಸ್ಟ್ ಮೆಂಟ್ ಬಳಸಿ , ವಸ್ತುಕದ ಸ್ಪಷ್ಟವಾದ ಬಿಂಬ ಪಡೆಯವುದು.
  9. ಬಿಂಬವನ್ನು ಮೊದಲು ಆಬ್ಜೆಕ್ಟಿವ್ ನ 10x ಬಳಸಿ ಪತ್ರ ರಂದ್ರ ವೀಕ್ಷಿಸುವುದು ,
  10. ನಂತರ 40x ಬಳಸಿ ಪತ್ರರಂದ್ರಗ ಳ ಬಿಂಬವನ್ನು ದೊಡ್ಡಗಾತ್ರದಲ್ಲಿ ವೀಕ್ಷಿಸುವುದು

{{#ev:youtube|E7qauciuQO4| 500|left }}























೨.jpg೩.jpg

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಸಸ್ಯಗಳ ಲ್ಲಿ ಅನಿಲಗಳ ವಿನಿಮಯ ನಡೆಸಲು ಪತ್ರರಂಧ್ರಗಳು ಸಹಾಯಕವಾಗಿವೆ ಎಂದು ತಿಳಿಯುವುದು
  2. ಬಾಷ್ಪೀಬವನವು ಪತ್ರರಂಧ್ರಗಳ ಮೂಲಕ ನಡೆಯುತ್ತದೆ ಎಂದು ತಿಳಿಯುವುದು
  3. ವಿವಿಧ ಸಸ್ಯಗಳಲ್ಲಿ ವಿವಿಧ ಆಕಾರದ ಮತ್ತು ವಿವಿಧ ಗಾತ್ರದ ಪತ್ರರಂಧ್ರಗಳು ಕಂಡುಬರುತ್ತವೆ ಎಂದು ಕಂಡುಕೊಳ್ಲುವುದು

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಪತ್ರರಂಧ್ರದ ಆಕಾರ ಹೇಗಿದೆ?
  2. ಉಳಿದ ಜಿವಕೋಶಗಳಿಗಿಂತ ಪತ್ರರಂದ್ರಗಳ ಆಕಾರ ವಿಭಿನ್ನವಾಗಿದೆಯೆ?
  3. ಪತ್ರ ರಂದ್ರದ ಚಿತ್ರ ಬಿಡಿಸಿ , ಅದರ ಭಾಗಗಳನ್ನು ಹೆಸರಿಸಿ.

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ