ಪ್ರವೇಶದ್ವಾರ:ಲಿಂಗತ್ವ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
The printable version is no longer supported and may have rendering errors. Please update your browser bookmarks and please use the default browser print function instead.

See in English

ಕಾರ್ಯಕ್ರಮಗಳು

ವಯಸ್ಕರ ಶಿಕ್ಷಣದ ಸವಾಲುಗಳು-ರಾಷ್ಟ್ರೀಯ ಕಾರ್ಯಾಗಾರ ನವೆಂಬರ್ 2014

  1. ಯುನಿಸೆಪ್‌ ರವರ ವಯಸ್ಕರ ಶಿಕ್ಷಣದ ಬಗೆಗಿನ ರಾಷ್ಟ್ರೀಯ ಕಾರ್ಯಗಾರ, 2014 ಈ ಕಾರ್ಯಗಾರದಲ್ಲಿ ಜೋಹಚೀಮ್ ಥೀಸ್ ರವರು ವಯಸ್ಕರ ಅಂಶಗಳ ಬಗ್ಗೆ ಪ್ರಸ್ತುತಿ ನೀಡಿದರು.
  2. ಪ್ರೌಢಶಾಲೆಗಲ್ಲಿ ಹೆಣ್ಣುಮಕ್ಕಳ ವಿಧ್ಯಾಬ್ಯಾಸ-ಯಶೋಗಾಥೆಗಳು ಮತ್ತು ಸವಾಲುಗಳು ಬಗೆಗಿನ ಕಾರ್ಯಗಾರ, ಧಾರವಾಡ ಕರ್ನಾಟಕ ಜೂನ್ ೨೦೧೫

ಮಹಿಳೆಯರ ಮೇಲಿನ ದೌರ್ಜನ್ಯ(VAW)

ಲಿಂಗತ್ವ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗೆಗಿನ ವೀಡಿಯೋ, ಆಡಿಯೋ ಮತ್ತಯ ಪಠ್ಯ ಸಂಪನ್ಮೂಲಗಳು ಮಹಿಳೆಯರ ಮೇಲಿನ ದೌರ್ಜನ್ಯ ಪುಟದಲ್ಲಿ ನೋಡಬಹುದು. ಈ ಸಂಪನ್ಮೂಲಗಳನ್ನು ನಮೂನೆಗಳು ಮತ್ತು ಬಳಕೆಯ ಮೇಲೆ ವರ್ಗೀಕರಣ ಮಾಡಲಾಗಿದೆ.ಈ ಎಲ್ಲಾ ಸಂಪನ್ಮೂಲಗಳನ್ನು ಕರ್ನಾಟಕದಲ್ಲಿ ಲಿಂಗತ್ವ, ಕಾನೂನು ಮತ್ತು ಹಕ್ಕುಗಳ ಬಗ್ಗೆ ಕಾಯರ್ನಿವಹಿಸುತ್ತಿರುವ ಹೆಂಗಸರ ಹಕ್ಕಿನ ಸಂಘ ಸಂಸ್ಥೆ ನಡೆಸಿದ ಕಾರ್ಯಕ್ರಮಗಳಿಂದ ಪಡೆದವಾಗಿವೆ.ಹೆಂಗಸರ ಹಕ್ಕಿನ ಸಂಘವು ಮಹಿಳಾ ಸಮುದಾಯಗಳ ಜೊತೆ, ರಾಜ್ಯ ಇಲಾಖೆಗಳ ಜೊತೆ, ಕಾರ್ಪೊರೇಟ್ ಸಂಸ್ಥೆಗಳ ಜೊತೆ, ಶೈಕ್ಷಣಿಕ ಸಂಸ್ಥೆಗಳ ಜೊತೆ, ಕಾರ್ಮಿಕ ಸಂಗಟನೆಗಳ ಜೊತೆ ಮತ್ತು ಮಾದ್ಯಮಗಳ ಜೊತೆ ಲಿಂಗತ್ವ ಮತ್ತು ಕಾನೂನಿನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ.ಗ್ರಾಮೀಣ ಮಹಿಳಾ ಸಮುದಾಯಗಳಿಗೆ ಲಿಂಗಾಧಾರಿತ ದೌರ್ಜನ್ಯಗಳ ಬಗ್ಗೆ ಸಾಮಾರ್ಥ್ಯಾಭಿವೃದ್ದಿ ಕಾರ್ಯಾಗಾರಗಳು, ಮಹಿಳಾ ದೌರ್ಜನ್ಯದ ಬಗೆಗಿನ ಸಂಶೋದನೆ ಮತ್ತು ವಕಾಲತ್ತುಗಳು, ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳಲ್ಲಿ ಕಾನೂನು ಬೆಂಬಲ ನೀಡುವುದು, ಮಹಿಳಾ ದೌರ್ಜನ್ಯ, ಲಿಂಗತ್ವ ಮತ್ತು ಹಕ್ಕುಗಳ ಬಗೆಗೆ ಸ್ಥಳೀಯ ಭಾಷೆಯ ಬಹುಮಾದ್ಯಮ ಸಂಪನ್ಮೂಲಗಳನ್ನು ಲಭ್ಯವಾಗಿಸುವುದು ಹೆಂಗಸರ ಹಕ್ಕಿನ ಸಂಘದ ಪ್ರಮುಖ ಕಾರ್ಯಗಳಾಗಿವೆ.