CRC Development Savadatti

ಸಿ ಆರ್ ಸಿ ಬಲವರ್ಧನೆ ಪ್ರಕ್ರಿಯೆ

 

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಯ ಸಿ ಅರ್ ಸಿ ಬಲವರ್ಧನೆಯನ್ನು ೨೦೦೮-೦೯ ನೇ ಸಾಲಿನಲ್ಲಿ ಶ್ರೀ ಹಡಪದ್ ಹಾಗು ಶ್ರೀ ಪಡೆಯಪ್ಪನವರ್ ಸಿ ಆರ್ ಪಿ ಗಳ ನೇತೃತ್ವದಲ್ಲಿ ಹಾಗೂ ಎಸ್ ಐ ಸವದತ್ತಿ ಹಾಗು ಎಸ್ ಎಮ್ ಅಂಗಡಿಯವರ ಮಾರ್ಗದರ್ಶನದಲ್ಲಿ ಸಿ ಆರ್ ಸಿ ಬಲವರ್ಧನೆ ಮಾಡಲಾಯಿತು. ತರಬೇತಿ ನಂತರ ಕ್ಷೇತ್ರದಲ್ಲಿ ಸಿ ಆರ್ ಪಿ ಯು ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ಪುನಃ ಭೇಟಿ ನೀಡಿ ಪ್ರೇರಣೆ ಮಾರ್ಗದರ್ಶನ ಸಲಹೆ ಸೂಚನೆ ನೀಡುತ್ತಾ ಸಿ ಆರ್ ಸಿ ಬಲವರ್ದನೆಗೊಳ್ಳಲು ಮುಖ್ಯವಾಗಿ ಭಾಗೀದಾರರನ್ನು ಗುರಿತಿಸಲಾಯಿತು. ಆ ಭಾಗೀದಾರರಲ್ಲಿ ಆಯ್ಕೆಯಾದ ೧. ನಾಲ್ಕು ಜನ ಪ್ರಧಾನ ಗುರುಗಳು ೨. ನಅಲ್ಕು ಜನ ಸಹಶಿಕ್ಷಕರು ೩. ಹಿರಿಯ ತರಗತಿಯ ನಾಲ್ಕು ಜನ ವಿದ್ಯಾರ್ಥಿಗಳು, . ಊರಿನ ಶಿಕ್ಷಣಾಸಕ್ತರು ನಾಲ್ಕು ಜನ ೫. ಯುವಕ ತಂಡದ ಅಧ್ಯಕ್ಷರು ಕಾರ್ಯದರ್ಶಿಗಳು ಇವರನ್ನು ನಿಗದಿತ ದಿನಾಂಕದಂದು ಪ್ರಥಮ ಸಭೆ ಸೇರಿ ಚಿಂತನಾ ಕೂಟ ಏರ್ಪಡಿಸಲಾಗಿತ್ತು. ಮತ್ತೆ ಒಂದು ವಾರ ಕಾಲಾವಕಾಶ ಪಡೆದು ದಿನಾಂಕ ಸ್ಥಳ ಸಮಯ ಗೊತ್ತುಪಡಿಸಿಕೊಂಡು ಸಬೆಯ ಮುಕ್ತಾಯ ಮಾಡಲಾಯಿತು.

 

ಹೇಳಿದ ದಿನಾಂಕದಂದು ಕೂಡಿದ ದ್ವಿತೀಯ ಸಭೆಯಲ್ಲಿ ಭಾಗೀದಾರರಿಂದ ಪ್ರಶ್ನೆಗಳ ಹರಿದುಬಂದವು. "ನಮ್ಮನ್ನೇ ಏಕೆ ಕೇಳುತ್ತೀರಿ? ನಾವೇನು ಮಾಡಬಲ್ಲೆವು? ನಮ್ಮ ಹತ್ತಿರ ಏನಿದೆ? ಅದರ ಚುಕ್ಕಾಣಿ ಹಿಡಿದವರು ನೀವಲ್ಲವೆ?” ಎಂದು ಕೇಳಿದರು. ಆಗ ಸಿ ಆರ್ ಪಿ ಗಳು "ಅದರ ಮುಖ್ಯಸ್ಥರು ನಾವಾದರೂ ಅದರ ನಿಜವಾದ ಫಲಾನುಭವಿಗಳು ನಿವೆಲ್ಲರೂ ಹೌದು ತಾನೆ ? ನಿಮ್ಮ ಸಲಹೆ, ಸೂಚನೆ, ಕನಸು ನಮಗೆ ಸಹಾಯವಾಗುತ್ತೇ ಅಲ್ಲವೇ? ಎಂದಾಗ" ಸಂತೋಷ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಎಲ್ಲರೂ ಸೇರಿಕೊಂಡು ಸಿ ಅರ್ ಸಿ ಯನ್ನು ವೀಕ್ಷಿಸಲಾಯಿತು. ಮತ್ತೇ ಸೆರಿ ಸಿ ಆರ್ ಸಿ ಯಲ್ಲಿ ಕಂಡುಬಂದ ಸಂಗತಿಗಳನ್ನು ಸಂಗ್ರಹಿಸಿ ದಾಖಲಿಸಲಾಯಿತು. ಇದೇ ವೇಳೆಯಲ್ಲಿ ಸಿಆರ್ ಸಿ ಯಲ್ಲಿ ಏನಿರಬೇಕಾಗಿತ್ತು ಎಂದು ಪ್ರಶ್ನೆ ಕೇಳಿದಾಗ ಭಾಗೀದಾರರರು ಮುಕ್ತವಾಗಿ ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನೀವು ಹೇಳಿದ ರೀತಿಯಲ್ಲಿ ಸಿ ಆರ್ ಸಿ ಇರಬೇಕಾದರೆ "ಹೇಗೆ" ಅನ್ನುವ ಪ್ರಶ್ನೆಗೆ ಬಾಗೀದಾರರೆ ನಮ್ಮ ಊರು ನಮ್ಮ ಸಿ ಆರ್ ಸಿ ನಾವೇ ಅದರ ನಿಜವಾದ ಒಡೆಯ, ಮಾಲಿಕರೆಂದು ನಮ್ಮ ಕನಸಿನಂತೆ ಸಿ ಆರ್ ಸಿ ಯನ್ನು ಸಜ್ಜುಗೊಳಿಸೊಣ ಮತ್ತು ಮಾದರಿಯಾಗಿ ಮಾಡಿತೋರಿಸೋಣ ಎಂದರು.

 

ಹೇಗೆ ಅಂದಾಗ ಸರ್ ನೀವು ಮಾರ್ಗದರ್ಶನ ನೀಡಿ , ನಾವೇ ತಂಡ ತಂಡಗಳಲ್ಲಿ ಕೆಲಸ ನಿರ್ವಹಿಸುತ್ತೇವೆ, ಅದರ ಪ್ರಕಾರ ತಂಡಗಳ ರಚನೆ ಆದವು. ಹಣಕಾಸು ಸಂಗ್ರಹಣಾ ತಂಡ , ಕಾರ್ಯನಿರ್ವಹಣಾ ತಂಡ, ಲೆಕ್ಕ ಪತ್ರ ತಂಡ ಸಂಪನ್ನ್ಮೂಲ ವ್ಯಕ್ತಿಗಳ ತಂಡ , ಮೇಲುಸ್ತುವಾರಿ ತಂಡ ರಚಿಸಿ ಕಾರ್ಯಹಂಚಿಕೆ, ಜವಾಬ್ದಾರಿ ನಿಗದಿತ ವೇಳೆ ಗೊತ್ತುಪಡಿಸಲಾಯಿತು.

ಸಂಗ್ರಹಣಾ ತಂಡದವರು ನಲ್ವತೈದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಮತ್ತು ವಸ್ತುಗಳನ್ನು ನಿರ್ವಹಿಸಿ ಕಾರ್ಯನಿರ್ವಹಣಾ ತಂಡಕ್ಕೆ ನೀಡಿದರು. ಸಂಬಂಧಿಸಿದ ತಂಡದವರು ಸಿ ಆರ್ ಸಿ ಗೆ ಪ್ರಥಮವಾಗಿ ಸುಣ್ಣ, ಬಣ್ಣ, ಕಿಡಿಕಿ ರಿಪೇರಿ, ಸೌಚಾಲಯ ನಿರ್ಮಾಣ, ನೀರಿನ ಟಾಂಕ್ ನಿರ್ಮಾಣ, ಮೇಜು, ಕುರ್ಚಿ , ನೆಲ ಹಾಸಿಗೆ ವ್ಯವಸ್ಥೆ, ಸಿ ಆರ್ ಸಿ ಸುತ್ತಲೂ ಸಸ್ಯಗಳ ನೆಡುವಿಕೆ ಮಾಡಿದರು.

 

ಸಿ ಆರ್ ಸಿ ಯು ಈಗ ಶಿಕ್ಷಕರಿಗೆ ನಿಜವಾಗಿಯೂ "ಸಂಪನ್ನ್ಮೂಲ" ಕೇಂದ್ರವಾಗಿ ಮಾರ್ಪಟ್ಟಿದೆ. ಹೇಗೆಂದರೆ, ಅವರಿಗೆ ಬೇಕಾದ ಆದೇಶ ಪ್ರತಿಗಳು, ಸಾಮರ್ಥ್ಯ ಪಟ್ಟಿ, ಗ್ರಂಥಾಲಯದ ವ್ಯವಸ್ಥೆ, ಬೋಧನಾ ಉಪಕರಣಗಳ ಸಂಗ್ರಹ, ಬಳಕೆ, ಮಾದರಿಗಳು, ಅಂಕೆ ಸಂಖ್ಯೆಯ ಮಾಹಿತಿ, ಶಿಕ್ಷಕರ, ಮಕ್ಕಳ ಜನಸಂಖ್ಯೆ , ಪ್ರತಿಭಾನ್ವಿತ ಮಕ್ಕಳ ಪಟ್ಟಿ, ಸಾಧನೆಗೈದ ಸಿಕ್ಷಕರ ಪಟ್ಟಿ ಹೀಗೆ ಯಾವುದೇ ತರಹದ ಮಾಹಿತಿ ಸಿಗುತ್ತದೆ ಎಂದು ಶಿಕ್ಷಕರು ತಮ್ಮ ಬಿಡುವಿನ ಸಮಯದಲ್ಲಿ ಬಂದು ಉಪಯೋಗಿಸುತ್ತಾರೆ ಮತ್ತು ಇತರರಿಗೆ ಉಪಯೋಗಿಸಲು ಪ್ರೇರಣೆ ನೀಡುತ್ತಿದ್ದಾರೆ. ಈ ರೀತಿ ಬದಲಾದ ಸಿ ಆರ್ ಸಿ ಯನ್ನು ನೋಡಲು ಪಕ್ಕದ ಸಿ ಆರ್ ಪಿಗಳು ಬಂದಿದ್ದಾರೆ. ಉದಾಹರಣೆಗೆ ಮುನುವಳ್ಳಿಯ ಸಿ ಆರ್ ಸಿಯ ಸಿ ಆರ್ ಪಿಯಾದ ಸಾಗರ್ ಎನ್ನುವವರು ತಮ್ಮ ಸಿ ಆರ್ ಸಿಯನ್ನು ಬಲವರ್ಧನೆಗೊಳಿಸಿದ್ದು , ಆಸಯ ತರಬೇತಿ ತಂಡದವರು ಬಂದು ವೀಕ್ಷಣೆ ಮಾಡುತ್ತಿದ್ದುದ್ದು ಆ ಸಿ ಆರ್ ಪಿಗಳಿಗೆ ತುಂಬಾ ಹೆಮ್ಮೆಯ ಸಂಗತಿಯಾಗಿದೆ.

 

ಸ್ವತಃ ನಾನು ೨೦೧೧ ಜೂನ್ ತಿಂಗಳ ಸಿಆರ್ ಪಿಯಾದ ನಂತರ ಮೂಡಲಗಿ ವಲಯ ಮೆಳವಂಕಿ ಸಿಆರ್ ಸಿಯನ್ನು ಭೌತಿಕವಾಗಿ ಮತ್ತು ಸಂಪನ್ನ್ಮೂಲ ಕೇಂದ್ರವನ್ನಾಗಿಸಿದ್ದೇನೆ. ಸಿಆರ್ ಸಿಗೆ ಬಂದರೆ ಏನಾದರೂ ನಮಗೆ ಹೊಸದು, ಅನುಭವ, ತಿಳುವಳಿಕೆ ಸಿಗುತ್ತೇ ಎನ್ನುವ ನಿರೀಕ್ಷೆ ಶಿಕ್ಷಕರ ಸಮೂಹದಲ್ಲಿ ಕಂಡುಬಂದಿದ್ದು ನನ್ನ ಗಮನಕ್ಕೆ ಬಂದಿದೆ.

 

 

********************************************************************************