Parent Teacher Dialogue Shailaja Hegde

ಪೋಷಕರ ಮತ್ತು ಶಿಕ್ಷಕರ ಸಂವಾದವನ್ನು ಹೆಚ್ಚಿಸುವ ಮೂಲಕ ಕಲಿಕಾ

ಪ್ರಗತಿಯನ್ನು ಹೆಚ್ಚಿಸುವುದು

 

 

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳ ಕಾರ್ಯಕ್ಷಮತೆಯನ್ನು

ಹೆಚ್ಚಿಸುವ ಮತ್ತು ಶಿಕ್ಷಣದಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಇಲಾಖೆಯಲ್ಲಿ ನಿರ್ವಹಣಾ

ಅಭಿವ್ರದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಯಿತು. ಈ ಉದ್ದೇ ಶದಿಂದ ನಮ್ಮ ಉಡುಪಿ

ಜಿಲ್ಲೆಯಲ್ಲೂ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾ ಯಿತು.ಅದರಲ್ಲಿ ನಾವು ಮಾಡಿದ ಮೊದಲ ಪ್ರಕಲ್ಪವೇ ' ಮಗುವಿನ ಕಲಿಕಾ ಪ್ರಗತಿ ಯಲ್ಲಿ ಪೋಷಕ ಮತ್ತು ಶಿಕ್ಷಕರ ನಡುವಿನ ಸಂವಾದವನ್ನು ಹೆಚ್ಚಿಸುವುದು. 'ಈ ಮೂಲಕ ಶೈಕ್ಷ ಣಿಕ ಗುಣಮಟ್ಟ ಹೆಚ್ಚಿ ಸುವ ಕಾರ್ಯ ಕ್ರಮಕ್ಕೆ ಚಾಲನೆ ದೊರೆಯಿತು .

ನಾನು ಮಾರ್ಗದ ರ್ಶ ಕಳಾಗಿ ಭಾಗವಹಿಸಿದ ಈ ಪ್ರಕಲ್ಪ ಗಾರರು ಸಿಆರ್ಪಿಯವರಾದ

ನಾಗರಾಜ ಮತ್ತು ರಾಘವೇಂದ್ರ . ನಾ ವು ಆಯ್ಕೆ ಮಾಡಿದ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೆಡ್ತರೆ . ಈ ಶಾಲೆಯಲ್ಲಿ ಹೋಗಿ ಸಂದರ್ಶ ನ ಮಾಡಿದೆವು.

ಮುಖ್ಯ ಶಿಕ್ಷ ಕರು ಮತ್ತು ಶಿಕ್ಷಕ ರೊಂದಿಗೆ ಸಮಾಲೋಚನೆ ಮಾಡಿದೆವು .ಇದರೊಂದಿಗೆ

ಶಾಲೆಯನ್ನು ಪರಿಶೀಲಿಸಿದಾಗ ಅಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಿದೆವು .

  • ಪೋಷಕರಿಗೆ ಶಾಲೆಗೆ ಬರಲು ಆಸಕ್ತಿ ಯಿ ಲ್ಲದಿರುವುದು

  • ಸಮಯದ ಅಭಾವವಿರುವು ದು

  • ಕೆಲಸದ ಒತ್ತಡ

  • ನಿರಕ್ಷರತೆ

  • ಶಿಕ್ಷಕರಿಗೆ ಎಲ್ಲಾ ಗೊತ್ತು .ನಮಗೇನೂ ಗೊತ್ತಿಲ್ಲ ಎಂಬ ಭಾ ವನೆ

  • ನಾನೇನಾದ್ರೂ ಶಾಲೆಯಲ್ಲಿ ಹೇಳಿದ್ರೆ ಮಗುವಿಗೇನಾದ್ರೂ ತೊಂದರೆಯಾಹುದು ಎಂಬ

ಭಾ ವನೆ

ವಿಷಯ ತಿಳಿಸಲು ಮುಕ್ತ ವಾತಾವರಣ ಇಲ್ಲದಿರುವುದು

SDMC ಸದಸ್ಯರು , ಪೋಷಕರು, ಶಿಕ್ಷಕರು ಇವರ ಸಭೆ ಕರೆದು ಮನಮಂಥನದ ಮೂಲಕ ಶಾಲೆಯಲ್ಲಿ ಇ ರುವ ಸಮಸ್ಯೆಗಳೇನು? ನಿವಾರಣೆ ಹೇಗೆ? ಎಂಬುದನ್ನು ತಿಳಿದುಕೊಳ್ಳಲಾಯಿತು. ಆ ಮೂಲಕ ಈ ಕೆಳಗಿನ ಕಾರ್ಯ ತಂತ್ರಗಳನ್ನು ರೂಪಿಸಲಾಯಿ ತು

  • ಪೋಷಕರ ಸಭೆಯ ಆಕರ್ಷ ಣೆಯನ್ನು ಹೆಚ್ಚಿಸುವುದು

  • ಪೋ ಷಕರ ಸಭೆಗೆ ಆಮಂತ್ರಣ ನೀಡಿ ಕರೆಯುವುದು

  • ಸಭೆಗೆ ಬಾರದ ಪೋಷಕರ ಮನೆಗೆ ಹೋಗಿ ಕರೆಯುವುದು

  • ಪೋಷಕರಿಗೆ ಸ್ಪ ರ್ಧೆ ಯನ್ನು ಏರ್ಪಡಿಸುವುದು

  • ಪೋಷಕರ ದಿನಾಚರಣೆಯನ್ನು ಮಾಡುವುದು

  • ಪೋಷಕ ,ಶಿಕ್ಷಕ ಮಗು ಕಲಿಕೆಯ ಬಗ್ಗೆ ಮಾತನಾಡುವುದು

  • ಮಗುವಿನ ಕಲಿಕಾ ಪ್ರಗತಿಯನ್ನು ದಾಖಲಿಸಿ ನಿರಂತರ ಅನುಸರಣೆ ಮಾದುವುದು

  • ಮಾತೆಯರ ಸಂಘ ರಚನೆ ಮಾದುವುದು

  • ಮಾತೆಯರು ಶಾಲೆಗೆ ತಂಡವಾಗಿ ಬಂದು ಸಿಹಿ ಹಂಚಿ ಊಟ ಮಾದುತ್ತಾ ಭಾಂಧವ್ಯ

    ವೃದ್ಧಿ ಮಾಡುವುದು

  • ಪ್ರತೀ ಎರಡನೇ ಶನಿವಾರ ಪೋಷಕರ ಸಭೆ ಮಾಡುವುದು

  • ತಾರೇ ಜಮೀನ್ ಪರ್ ಚಲನಚಿತ್ರವನ್ನು ತೋರಿಸುವುದು

  • ಸ್ತ್ರೀ ಶಕ್ತಿ ಸಂಘದಲ್ಲಿ ಮಗುವಿನ ಕಲಿಕೆಯ ಬಗ್ಗೆ ಚರ್ಚಿ ಸಿ ಇತರರ ಸಹಾಯ ಪಡೆಯುವುದು

ಈ ಎಲ್ಲಾ ಕಾರ್ಯ ತಂತ್ರಗ ಳ ಹಿಂದಿನ ಉದ್ದೇ ಶ ಈ ಕೆಳಗಿನಂತಿದೆ.

೧ ಪೋಷಕರು ನಿರಂತರವಾಗಿ ಶಾಲೆಗೆ ಬರುವಂತೆ ಮಾಡುವುದು

೨ ಮಗುವಿನ ಕಲಿಗೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಕಲಿಕಾ ಪೂರಕ ವಾತಾವರಣ

ನಿರ್ಮಿ ಸುವುದು

೩ಮಗುವನ್ನು ಉತ್ತಮ ನಾಗರಿಕನನ್ನಾ ಗಿ ಮಾಡುವುದು

೪ ಆ ಮೂಲಕ ಸಂವಿಧಾನದ ಆಶಯ ಈಡೇರಿಸುವುದು

ಈ ಎಲ್ಲಾ ಕಾರ್ಯಕ್ರಮಗಳ ಪರಿಣಾಮ ಈ ಕೆಳಗಿನಂತಿದೆ

  • ಪೋಷಕರು ಸ್ಪರ್ಧೆ ಯಲ್ಲಿ ಆಸಕ್ತಿ ಯಿಂದ ಭಾಗವಹಿಸಿದರು.ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ಒಪ್ಪಿದರು

  • ತಾರೇ ಜಮೀನ್ಪರ್ ಚಲನಚಿತ್ರ ವೀಕ್ಷ ಣೆಯಿಂದ ಮಗುವನ್ನು ಯಾವ ರೀತಿ ನೋಡಿಕೊಳ್ಳ ಬೇಕು ಎಂಬುದನ್ನು ತಿಳಿದುಕೊಂಡರು.

  • ಸಿಹಿ ಮಾಡಿ ತಂದು ವಿದ್ಯಾ ರ್ಥಿ ಗಳೊಂದಿಗೆ ಉಂಡು ಸಂತಸಗೊಂಡರು

  • ಸ್ತ್ರೀ ಶಕ್ತಿ ಸಂಘದಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಚರ್ಚಿ ಸಿ ಅಕ್ಷರಸ್ಥ ರು ಅನಕ್ಷ ರಸ್ಥ ರಿಗೆ ಕಲಿಸಲು ಒಪ್ಪಿಕೊಂಡರು .

  • ಶಿಕ್ಷಕ ರು ಪೋಷಕರನ್ನು ಗೌರವಿಸಿದಾಗ ಪೋಷಕರು ಶಿಕ್ಷಕರನ್ನು ಗೌರವಿಸಿ ಶಿಕ್ಷ ಕ ದಿನಾಚರಣೆಯನ್ನು ಮಾಡಿದರು.

  • ಪೋಷಕರು ಪ್ರ ತೀ ಎ ರಡನೇ ಶನಿವಾರ ಬಂದು ತನ್ನ ಮಗುವಿನ ಕಲಿಕೆಯ ಬಗ್ಗೆ

    ಕೇಳತೊಡಗಿದರು

  • ಬಿಡುವಿನ ವೇಳೆ ಮಾಡಿಕೊಂಡು ಮನೆಯಲ್ಲಿ ಕಲಿಕೆಯ ಬಗ್ಗೆ ಗಮನ ಹರಿಸತೊಡಗಿದರು'

  • ಸಮುದಾಯದತ್ತ ಕಾರ್ಯ ಕ್ರಮದಲ್ಲಿ ಪೋಷಕರ ಸಂಖ್ಯೆ ಯಲ್ಲಿ ಗಣನೀಯ ಹೆಚ್ಚಳ

    ವಾಯಿ ತು.

  • ನಾವೆಲ್ಲಾ ಇರುವುದು ಮಕ್ಕಳ ಒಳಿತಿಗಾಗಿ ಎಂ ಬ ಭಾವನೆ ಮೂಡತೊಡಗಿತು

  • ಮಕ್ಕಳ ಮೊದಲ ಕಲಿಕೆಗೂ ನಂತರದ ಕಲಿಕೆಗೂ ಅಬಿವೃದ್ಧಿ ಕಂಡು ಬಂತು

  • ಪ್ರತೀ sdmc ಭೆಯಲ್ಲೂ ಕಲಿಕಾ ಅಭಿವೃದ್ಧಿ ಯ ಬಗ್ಗೆ ಚರ್ಚೆ ನಡೆಯತೊಡಗಿತು.

    ಹೀಗೆ ಪರಸ್ಪರ ಗೌರವ . ಮಾತಿನ ವಿನಿಮಯ , ಮುಕ್ತ ವಾತಾವರಣ ನನ್ನ

    ಮಗುವಿಗೆ ಓದು ಯಾಕೆ ಬರುವುದಿಲ್ಲ ? ಎಂ ಬುದನ್ನು ಕೇಳು ವಂತಹ ದಿಟ್ಟ ತನದ

    ಪ್ರಶ್ನೆ ಪೋಷಕರ ಜಾಗೃತಿಗೆ ಹಿಡಿದ ಕೈಗನ್ನಡಿ ಯಾಗಿದೆ.. ಈ ಶಾಲೆಯಲ್ಲಿ ಮಾಡಿದ ಯಶೋಗಾಥೆ ಸಭೆಗಳಲ್ಲಿ ಸಮಾಲೋಚನಾ ಸಭೆಯಲ್ಲಿ ಹೇಳಿದಾಗ ಇತರ ಶಾಲೆಗಳಗೂ ಮಾದರಿಯಾಗಿ ಪ್ರ ಭಾವ ಬೀರಿತು.ಈ ಮೂಲಕ ಉಡುಪಿ ಜಿಲ್ಲೆಯ

    ಹತ್ತು ಶಾಲೆಗಳಲ್ಲಿ ಈ ಕಾರ್ಯ ಕ್ರ ಮ ಗುಣಮಟ್ಟ ದ ಹೆಚ್ಚಳ ವನ್ನು ಉಂಟುಮಾಡಿತು

     

 

ಜೈ ELDP

ಯಿಂದ .ಶೈಲಜಾ ಹೆಗ್ಡೆ