Cluster Development Pushpalatha Chithradurga

ಪುಷ್ಪಲತಾ , ಹಿರಿಯ ಉಪನ್ಯಾಸಕರು,

ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ, ದಾವಣಗೆರೆ.

ಹೊನ್ನಾಳಿ ತಾಲ್ಲೂಕು ಬೆನಕನಹಳ್ಳಿ ಕ್ಲಸ್ಟರ್ ಸಬಲೀಕರಣ ಪ್ರಕ್ರಿಯೆ

 

 

ಹೊನ್ನಾಳೀ ತಾಲ್ಲೂಕು ಬೆನಕನಹಳ್ಳಿ ಕ್ಲಸ್ಟರ್ ಸಬಲೀಕರಣ ಪ್ರಕ್ರಿಯೆ ಯನ್ನು ಕೈಗೆತ್ತಿಕೊಂಡ ಪ್ರಕಲ್ಪಕಾರರಾದ ಶ್ರೀ ಕರಿಬಸಪ್ಪ , ಸಿ.ಆರ್.ಪಿ. ಹಾ ಗೂ ಷಣ್ಮುಖಪ್ಪ , ಸಿ.ಆರ್.ಪಿ. ಅವರುಗಳಿಗೆ ಮಾರ್ಗದರ್ಶನ ಮಾಡಲಾಯಿತು.

ಪ್ರಕಲ್ಪಕಾರರಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳೀಸಲು ಹಿಂದಿನ ಪ್ರಕಲ್ಪ ಪ್ರಕ್ರಿಯೆ ಗಳ ನಿದರ್ಶನ ವನ್ನು ನೀಡಲಾಗಿದ್ದು ಹೆಚ್ಚು ಪ್ರಭಾವವನ್ನು ಬೀರಿತು . ಉದಾಹರಣೆಗೆ ಚಿತ್ತದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೊಮ್ಮನ ಪಟ್ಟಿ ಸರ್ಕಾರಿ ಹಿರಿಯ ಪ್ರಾ. ಶಾಲೆಯ ಲ್ಲಿ ಕೈಗೊಂಡ ನಾಯಕತ್ವ ಸಬಲೀಕರಣ ಪ್ರಕಲ್ಪದಲ್ಲಿ ನ ಒಂದು ಅನುಭವ ಹೀಗಿದೆ:-

ಶಾಲೆಯ ಹಿಂಬಾಗದಲ್ಲಿ ದಾನಿಗಳಿಂದ ಕೊಡುಗೆಯಾದ ಮೂರುನಿವೇಶನಗಳಿದ್ದು ಒಂದು ಮತ್ತು ಮೂರನೇ ನಿವೇಶನಗಳನ್ನು ಶಾಲೆಗೆ ಬಿಟ್ಟುಕೊಡುವುದರಲ್ಲಿ ಯಾವುದೇ ತೊಂದರೆ ಇದ್ದಿರಲಿಲ್ಲ , ಆದರೆ ೨ನೇ ನಿವೇಶನ ವನ್ನು ಕೊಡಲು ಒಪ್ಪಿದ್ದ ಮಾಲಿಕರು ನಂತರ ದ ದಿನಗಳಲ್ಲಿ ನಿರಾಕರಿಸಿದ್ದಲ್ಲದೇ ಯಾರೂ ಸದರಿ ನಿವೇಶನದಮೂಲಕ ಓಡಾಢಬಾರದೆಂದು ನಿಭಂದನೆ ಹೇರಿದ್ದರು. ಈ ಕಾರಣ ಈ ಮೂರು ನಿವೇಶನಗಳನ್ನು ಬಳಸುವುದು ಕಷ್ಟಸಾಧ್ಯವಾಗಿತ್ತು . ಈ ಶಾಲೆಯಲ್ಲಿ ಪ್ರಕಲ್ಪ ತೆಗೆದು ಕೊಂಡ ಹಿನ್ನೆಲೆಯಲ್ಲಿ ನಿವೇಶನದ ಸಮಸ್ಯಯನ್ನು ಪ್ರಕಲ್ಪಕಾರರು ಮಾಲಿಕರನ್ನು ಭೇಟಿಯಾಗಿ ನಕಾರಾತ್ಮಕ ಪ್ರತಿಕ್ರಿಯೆಯನ್ನು ಅನುಭವಿಸಿ ಹಿಂದಿರುಗಿದ್ದರು. ಆ ಸಮಯದಲ್ಲಿ ಶೈಕ್ಷಣೀಕ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕಲಿತ ಅಂಶಗಳನ್ನು ಅವರು ಅಳವಡಿಸಿಕೊಂಡದ್ದು ಇಲ್ಲಿ ಉಲ್ಲೇಖೀಸಲೇ ಭೇಕಾಗಿರುವ ಗಮನಾರ್ಹ ಅಂಶವಾಗಿದೆ, ನಾವು ಸರ್ಕಾರಿ ನೌಕರರು/ ಈಮಾಲಿಕನನ್ನು ಓಲೈಸುವುದು ಅಸಾಧ್ಯ / ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಉಪೇಕ್ಷ ಮಾಡದೇ ಕಾರ್ಯಕ್ರಮದಿಂದ ಪ್ರೇರಿತರಾಗಿ - "ನೀವು ಗೆಲ್ಲಬಲ್ಲಿರಿ" “ಕ್ಷಣಹೊತ್ತು ಆಣಿಮುತ್ತು" ಪುಸ್ತಕಗಳ ಲ್ಲಿನ ಎಷ್ಟೋ ವಿಚಾರಗಳ ಪರಿಚಯ ಮಾನವಸಂಪನ್ಮೂಲ ಅಭಿವೃದಧಿಯ ವಿಚಾರಗಳ ಚರ್ಚೆ ಯಾದ ಹಿನ್ನೆಲೆಯಲ್ಲಿ -ತಾಳ್ಮೆ ಯಿಂದ ವರ್ತಿಸಿ ಹಿಮ್ಮಾಹಿತಿ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಮಾಲಿಕರ ಮನೆಗೇ ಹೋಗಿ ಭೇಟಿಯಾಗಿ ಅವರ ಮನ ಓಲೈಸಿ ವಿನಂತಿಸಲಾಗಿ ಅವರು ಆ ನಿವೇಶನವನ್ನು ಸಂತೋಷದಿಂದ ಶಾಲೆಗೆ ಬಿಟ್ಟುಕೊಟ್ಟಿರುತ್ತಾರೆ.

ಇಂತಹ ಯಶೋಗಾಥೆಗಳ ಪ್ರೇರಣೆಯ ಹಿನ್ನೆಲೆಯಲ್ಲಿ ಸದರಿ ಸಿಆರ್.ಪಿಗಳು ಬೆನಕನಹಳ್ಳೀ ಕ್ಲಸ್ಟರ್ ನ ಸಬಲೀಕರಣಕಕ್ಕೆ ಮುಂದಾದರು. ಸರ್ಕಾರಿ. ಹಿ. ಪ್ರಾ. ಶಾಲೆ ಬೆನಕನಹಳ್ಳಿ ಯಲ್ಲಿ ಮುಖ್ಯಶಿಕ್ಷಕರು ,ಶಿಕ್ಷಕರು, ಎಸ್.ಡಿ.ಎಮ್,ಸಿ. ಯವರ ಸಭೆ ಕರೆದು- ಕ್ಲಸ್ಟರ್ ಸ್ಥಾಪನೆಯ ಉದ್ದೇಶ ಪರಿಚಯಿಸಿ,, ಕ್ಲಸ್ರ್ ಈಗಹೇಗಿದೆ, ? , ಹೇಗಿದ್ದರೆ ಉಪಯುಕ್ತ..... ಎಂಬುದನ್ನು ಅವರಿಂದಲೇ ಬುದ್ದಿಮಂಥನದ ಮೂಲಕ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಹೇಗಿರಬೇಕು ಎಂಬ ಬಗ್ಗೆ ನೀಡಿದ ಉಪಾಯಗಳನ್ನು ಪಟ್ಟಿಮಾಡಿ ಆದ್ಯತೆಗೊಳಿಸಲಾಯಿತು.

 

ಈ ಬುದ್ದಿ ಮಂಥನದ ಆದ್ಯತೀಕರಣ ಪಟ್ಟಿಗನುಗುಣವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಪ್ರಾರಂಭಿಸಲಾಯಿತು, ನಿರಂತರವಾಗಿ ಶಿಕ್ಷಕರ ಸಹಕಾರ ಸಮುದಾಯದವರ ಸಹಕಾರ, ಕ್ಲಸ್ಟರ್ ನ ಇತರೆ ಶಾಲೆಗಳ ಸಹಕಾರ ಪಡೆಯಲು ಈ ಕಾರ್ಯಕ್ರಮದ ವಿವಿಧ ತಂಡನಿರ್ಮಾಣ ,ಚಟುವಟಿಕೆಗಳು, ಆಟಗಳು ಸಹಾಯಕವಾದವು, ಇದರೊಂದಿಗೆ ಪ್ರಕಲ್ಪಕಾ ರರು ತಮ್ಮ ಪ್ರಭಾವವಲಯವನ್ನು ಹೆಚ್ಚಿಸಿಕೊಂಡಿರುವುದು ಇಲ್ಲಿ ಯಶಸ್ಸಿಗೆ ಕಾರಣವಾಗಿದೆ,

ಇದರಿಂದಾಗಿ ಕಂಡುಕೊಳ್ಳಲಾದ ದನಾತ್ಮಕ ಬದಲಾವಣೆಗಳು ಈ ಕೆಳಗಿನಂತೆ ಇವೆ. -----

. ಸಿ. ಆರ್.ಸಿ. ಕೇಂದ್ರವನ್ನು ಸಮುದಾಯದ ಸಕಾರದೊಂದಿಗೆ ಉತ್ತಮವಾದ ಬಣ್ಣ ಗಳಿಂದ ಅಲಂಕರಿಸಲಾಗಿದೆ, ಪ್ರವೇಶದ ಗೋಡೆಯಲ್ಲಿ ಮಿಕ್ಕಿಮೌಸ್, ಚಿತ್ರ , ಉಳಿದಂತೆ ಆಕರ್ಷಕ ಹಾಗೂ ಶೈಕ್ಷಣಿಕ ಪರಿಣಾವಕಾರಿ ಚಿತ್ರಗಳು ಗಮನ ಸೆಳೆಯುವಂತೆ

. ಸಿ.ಆರ್.ಸಿ. ಕೇಂದ್ರದಲ್ಲಿ ಅವಶ್ಯಕ ಪೀಠೋಪಕರಣಗಳನ್ನು ಸಮುದಾಯದ ಸಹಕಾರದೊಂದಿಗೆ ಸಂಗ್ರಹಿಸಲಾಗಿದೆ.

. ಈ ಸಿ.ಆರ್.ಸಿ. ಕೇಂದ್ರದಲ್ಲಿ ಉತ್ತಮ ತೆರೆದ ಗ್ರಂಥಾಲಯವನ್ನು ಸ್ಥಾಪಿಸಗಿದೆ.

. ಶಿಕ್ಷಕರು ಈ ಕೇಂದ್ರಕ್ಕೆ ಭೇಟಿನೀಡಿದಾಗ ಅಪೇಕ್ಷಿಸುವ ಎಲ್ಲ ಕಲಿಕೋಪಕರಣ ಗಳನ್ನು ಶಿಕ್ಷಕರ ಸಹಾಯದೊಂದಿಗೆ ತಯಾರಿಸಿ ಸಂಗ್ರಹಿಸಲಾಯಿತು .

.ಕ್ಲಸ್ಟರ್ ಕೇಂದ್ರವನ್ನು ಉನ್ನತೀ ಕರಿಸುವುದರ ಜೊತೆಗೆ ಒಳಪಟ್ಟ ಶಾಲೆಗಳನ್ನೂ ಉನ್ನತೀಕರಿಸುವುದು ಗುರಿಯಾಗಿಟ್ಟು ಕೊಂಡು ಕಾರ್ಯ ನಿರ್ವಸಲಾಗಿದೆ. LINK BITWEEN THE SCHOOLS AND CLUSTER- ಎಂಬ ಪರಿಕ್ಲಪನೆಗೆ ಆದ್ಯತೆ ನೀಡಿದೆ.

. ಕ್ಲಸ್ಟರ್ ನಿವFಹಣೆ ಗಾಗಿ ಒಂದು ಕ್ಲಸ್ಟರ್ ನಿರ್ವಹಣಾ ಸಮಿತಿಯನ್ನು ರಚಿಸಿದ್ದು ಇದರಲ್ಲಿ ಆ ಕ್ಲಸ್ಟರ್ ನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಸದಸ್ಯರಾಗಿದ್ದು ಕೆಂದ್ರ ಶಾಲೆಯ ಮುಖ್ಯಶಿಕ್ಷಕರು ಅಧ್ಯಕ್ಷಕಾಗಿರುತ್ತಾರೆ, ಸಿ.ಆರ್.ಪಿ. ಇಲ್ಲಿ ಕಾರ್ಯದಶಿF ಮಾತ್ರ. ಇದರಿಂದ ಸಿ.ಆರ್.ಪಿ ಬದಲಾದರೂ ಗುಣಾತ್ಮಕತೆ ಕಡಿಮೆಯಾಗದಂತೆ ನಿರ್ವಹಿಸಬಹುದಾಗಿದೆ.

. ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ಸಿ.ಆರ್.ಜಿ.. ಗುಂಪು. ಇಲ್ಲಿ ಶಿಕ್ಷಕರ ಎಲ್ಲ ಶೈಕ್ಷಣೀಕ ಸಮಸ್ಯಗಳಿಗೆ ಇಲ್ಲಿ ಪರಿಹಾರ ದೊರೆಯಬಹುದೆಂಬ ವಿಶ್ವಾಸವನ್ನು ಉಂಟುಮಾಡಿತು.

. ಈ ಕ್ಲಸ್ಟರ್ ನಿರ್ವಹಣೆಗೆ ಕೇಂದ್ರೀಯ ಶಾಲೆಯ ದೈಹಿಕ ಶಿಕ್ಷಕರಿಗೆ ಜವಾಬ್ದಾರಿ ನೀಡಿ ಸಿ. ಆರ್.ಪಿ.ಯು- ಕೇಂದ್ರ ಸ್ಥಳದಲ್ಲಿ ಇಲ್ಲದಿರುವಾಗ ಶಿಕ್ಷಕರಿಗೆ 'ಕೇಂದ್ರ ಮುಚ್ಚಿದೆ ' ಎನ್ನುವ ಭಾವನೆ ಬರದಂತೆ ನಿವFಹಿಸಲು ಕ್ರಮ ಕೈಗೊಳ್ಳಲಾಗಿದೆ.

. ಕ್ಲಸ್ಟರ್ ಸಮಾಲೋಚನಾ ಸಭೇಗಳನ್ನು ಇಲಾಖಾ ನಿಯಮಾನುಸಾರ ವಿಷಯವಾರು ಮತ್ತು ನಲಿಕಲಿ ಪ್ರಾಧಾನ್ಯವಾಗಿ ನಿವFಹಿಸುವುದರೊಂದಿಗೆ ವಿಶೇಷವಾಗಿ ಶಿಕ್ಷಕರಲ್ಲಿ ಗುಣಾತ್ಮಕತೆ ಪರಿಕಲ್ಪನೆ ಬೆಳೆಸುವಂತಹ ,ಸಂವಾದ ಕಾರ್ಯಕ್ರಮಗಳನ್ನು ಅಂದರೆ ತೊತ್ತೊಚಾನ ಪುಸ್ತಕ ಕುರಿತ ಸಂವಾದ , NCF 2005 ಗೆ ಸಂಬಂಧಿಸಿದ ಚರ್ಚೆಗಳು ಮುಂತಾದವನ್ನು ನಿರ್ವಹಿಸಲಾಗುತ್ತಿದೆ.

೧೦. ಕ್ಲಸ್ಟರ್ ಕೇಂದ್ರ ವು ಆ ಕ್ಲಸ್ಟರ್ನ ಎಲ್ಲ ಶಾಲೆಗಳ ಶಿಕ್ಷಕರು ತಮ್ಮ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಸಂಪಕಿFಸುವಂತೆ ಹಾಗೂ ತಮಗೆ ಅವಶ್ಯವಾದ ಕಲಿಕೋಪಕರಣಗಳ ಮಾಹಿತಿ ಪಡೆಯಲು ಸದಾ ಸಿದ್ದವಿರುವಂತೆ ಇದ್ದು. ಮಾದರಿ ಯಾಗಿದೆ, ಇದಕ್ಕೆ ಅಲ್ಲಿಯ ಎಲ್ಲಾ ಶಿಕ್ಷಕರು, ಸಮುದಾಯದವರು . ಮುಖ್ಯಶಿಕ್ಷಕರು, ಗಳಲ್ಲಿ ಉಂಟಾದ ತಂಡನಿರ್ಮಾಣ ಮನೋಭಾವನೆ, ಹಾಗೂ ಬದ್ದತೆ ಕಾರಣವಾಗಿದೆ. ಇದು ELDP CONSEPT ನಿಂದ ಸಾಧ್ಯವಾಯಿತು.