Cluster Development Kantharajaiah

ಸಮೂಹಸಂಪನ್ಮೂಲ ಕೇಂದ್ರ ದ ಬಲವರ್ಧನೆ

 

೨೦೦೦ ೨೦೦ ೧ ಶೈಕ್ಷಣಿಕ ವರ್ಷ ದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಪ್ರಾರಂಭವಾದ ನಂತರ ಶಿಕ್ಷ ಣ ಇಲಾಖೆಯಲ್ಲಿನ ಕೆಳಸ್ಥರ ದಲ್ಲಿ ಪ್ರಾರಂಭಮಾಡಲಾದ ಕಛೇರಿಗಳೇ ಸಮೂಹ ಸಂಪನ್ಮೂಲ ಕೇಂದ್ರ ಗಳಾಗಿವೆ.

ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಸಮೂಹ ಸಂಪನ್ಮೂಲ ವ್ಯಕ್ತಿಗಳೆಂದು ಕರೆಯಲಾಗುತ್ತದೆ.

 

ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸಂಪನ್ಮೂಲ ಕೇಂದ್ರ ಗಳ ಜವಾಬ್ದಾರಿ ಅಪರಮಿತವಾಗಿದೆ.ಪ್ರತಿ ಕೇಂದ್ರ ಗಳ ವ್ಯಾಪ್ತಿಯಲ್ಲಿ ಕನಿಷ್ಠ ೧೫ರಿಂದ ೨೦ ಶಾಲೆಗಳು ಇರುತ್ತವೆ. ಕೇಂದ್ರಗಳು ಪ್ರಾರಂಭವಾಗಿ ಐದಾರುವರ್ಷಗಳಾಗಿದ್ದರು ಅವುಗಳ ನಿರ್ವಹಣೆ ಅಷ್ಟೇನು ಉತ್ತಮವಾಗಿರಲಿಲ್ಲವಾದ್ದರಿಂದ ಅವುಗಳ ಬಲವರ್ಧನೆ ಮಾಡಬೇಕಾಗಿದ್ದು ಅತ್ಯಂತ ಪ್ರಮುಖವಾಗಿರುತ್ತದೆ, ಈ ಹಿನ್ನಲೆಯಲ್ಲಿ ಗುಣಮಟ್ಟ ಅಭಿವೃದ್ದಿ ಕಾರ್ಯಕ್ರಮದಲ್ಲಿ ಸಮೂಹಸಂಪನ್ಮೂಲ ವ್ಯಕ್ತಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು,ತರುವಾಯ ಪ್ರಕಲ್ಪ ಮಾಡಲು ಆಯ್ಕೆ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲ್ಲೋಕಿನ ಕರ್ತಿ ಕೆರೆ ಯ ಸಮೂಹಸಂಪನ್ಮೂಲ ಕೇಂದ್ರದ ಬಲವರ್ಧನೆಯನ್ನು ಮಾಡಲು ನಿರ್ಧರಿಸಿದರು.

ಕೇಂದ್ರದ ಬಲವರ್ಧನೆಮಾಡಲು ಮೊದಲಿಗೆ ಪ್ರಕಲ್ಪದ ನಿರ್ವಹಣಾಕಾರರು ತಮ್ಮ ಕೇಂದ್ರದ ವ್ಯಾಪ್ತಿಯ ಈ ಪ್ರಕಲ್ಪದ ಬಾಗೀಧಾರರುಗಳಾದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳು ,ಶಿಕ್ಷಣ ಸಂಯೋಜಕರು ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಸಭೆಯನ್ನು ಹಾಲಿ ಇದ್ದ ಕೇಂದ್ರದ ಲ್ಲಿಯೇ ಕರೆದರು, ಬಂದಂತಹ ಎಲ್ಲಾ ಮುಖ್ಯ ಶಿಕ್ಷಕರುಗಳ ನ್ನು ಉದ್ದೇಶಿಸಿ ಪ್ರಸ್ತುತ ಕೇಂದ್ರದ ಸ್ಥಿತಿಯ ಬಗ್ಗೆ ಗಮನಸೆಳೆದರು .ಕೇಂದ್ರದ ಅಭಿವೃದ್ಧಿ ಹೇಗೆ? ಕೇಂದ್ರವು ಹೇಗಿರಬೇಕು? ಎಂ ಬಗ್ಗೆ ಮನಮಂಥನವನ್ನು ಮಾಡಲಾಯಿತು ಅದರಿಂದ ಹೊರಹೊಮ್ಮಿದ ಆಭಿಪ್ರಾ ಯಗಳನ್ನು ಆಧರಿಸಿಯೇ ಗಮನ ಕೇಂದ್ರಿತ ಗುಂಪು ಚರ್ಚೆ ಮೂಲಕ ಆಧ್ಯ ತೀಕರಣಮಾಡಲಾಯಿತು. ಎಲ್ಲಾ ಮುಖ್ಯ ಶಿಕ್ಷಕರುಗಳು ಈ ಚಟುವಟಿಕೆ ಬಗ್ಗೆ ಸಂತೋಷಪಟ್ಟರು ಮತ್ತು ಈ ಕೆಳಕಂಡಂತೆ FGDಯ ಅಂಶಗಳನ್ನು ಹಂತಹಂತವಾಗಿ ಸಾಕಾರಗೊಳಿ ಸು ವ ತಂತ್ರ ಗಳ

ತೀರ್ಮಾನಿಸಿದರು.

  • ಸಮೂಹಸಂಪನ್ಮೂಲ ಕೇಂದ್ರ ವನ್ನು ಸುಣ್ಣ ಬಣ್ಣದಿಂದ ಆಕರ್ಷಣೆ ಗೊಳಿಸುವುದು.

  • C.R.C.ವ್ಯಾಪ್ತಿಯ ಎಲ್ಲಾ ಶಾಲೆಗಳ ಮಾಹಿತಿಗಳನ್ನು ಗೋಡೆ ಬರಹ ಮಾಡಿಸುವುದು.

  • ಗೋಡೆಗಳ ಮೇಲೆ ನೀತಿವಾಖ್ಯಗಳನ್ನು ಬರೆಯಿಸುವುದು.

  • SSAಯ ಗುರಿ ಉದ್ದೇಶಗಳನ್ನು ಮತ್ತು ಇಲಾಖೆಯ ವಿವಿಧ ಸೌಲಭ್ಯಗಳ ಮಾಹಿತಿ ಫಲಕ.

  • ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.

  • ಶೌಚಾಯವನ್ನು ದುರಸ್ಥಿ ಮಾಡುವುದು.

  • ಪೀಠೋಪಕರಣಗಳನ್ನು ಹೊಂದುವುದು.

    ಈ ನಿಟ್ಟಿನಲ್ಲಿ ಕಾರ್ಯ ನಿರತರಾದ ಪ್ರಕಲ್ಪದಾರರು ಈ ಕರ್ಯಗಳನ್ನು ಮಾಡಲು ಬೇಕಾದ ಅನುದಾನ ಅಂದಾಜುಪಟ್ಟಿಯನ್ನು ಭಾಗೀದಾರರುಗಳಿಂದಲೇ ಮಾಡಿಸಿದರು.ನಂತರ ಅನುದಾನದ ಕ್ರೋಢೀಕರಣದ ಬಗ್ಗೆ ಚರ್ಚಿ ಸಿದರು ಇದಕ್ಕೆ ಪ್ರತಿಯಾಗಿ ಭಾಗೀದಾರರು ತಾವು ಮತ್ತು ತಮ್ಮ ಶಾಲೆಗಳ ಶಿಕ್ಷಕರುಗಳಿಂದ ಧನ ಸಹಾಯ ಪಡೆದು ನೀಡುವುದಾಗಿ ಬರವಸೆ ನೀಡಿದರು.

    ಅನುದಾನದ ಸಂ ಗ್ರಹಣೆಯು ಪ್ರಾರಂಭವಾದ ಕೂಡಲೆ ಕೆಲವು ಶಿಕ್ಷಕರುಗಳಿಂದ ವಿರೋಧ ವ್ಯಕ್ತವಾ ಯಿ ತು ಮತ್ತು ಜಿಲ್ಲಾಪಂಚಾಯತ್ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮತ್ತು ಶಿಕ್ಷಕರ ಸಂಘದ ಪ್ರತಿ ನಿಧಿ ಗಳಿಂದಲೂ ದೂರವಾಣಿ ಕರೆ ಮಾಡಿ ಈ ಬಗ್ಗೆ ಅಪಸ್ವರ ವ್ಯಕ್ತಪಡಿಸದರು.ಇದರಿಂದ ಪ್ರಾರಂ ಭದಲ್ಲಿ ವಿಚಲಿತರಾದವರಂತೆ ಪ್ರಕಲ್ಪದಾರರು ಕಂಡರು ನಂ ತರ ಈ ಬಗ್ಗೆ ಪುನಹ ಮುಖ್ಯಶಿಕ್ಷಕರುಗಳಿಗೆ ಶಾಲಾ ಶಿಕ್ಷಕರುಗಳಿಂದ ಒತ್ತಾಯಮಾಡಿ ಹಣ ಸಂಗ್ರಹಣೆ ಬೇಡ ಸ್ವಯಂ ಪ್ರೇರಿತರಾಗಿ ನೀಡಿದಲ್ಲಿಮಾತ್ರ ಪಡೆಯುವಂತೆ ಸೂಚಿಸಿದರು , ಇದರಿಂದ ಬೇಸರ ತಂ ದಿದ್ದ ವಿಷಯವು ತಿಳಿಯಾಯಿತು.

    ಸಂಗ್ರಹಿಸಲಾದ ಹಣದಿಂದ ಕೇಂದ್ರದ ಆಕರ್ಷಣೆಯ ಕಾರ್ಯ ಪ್ರಾರಂಭವಾಯಿತು, ಹಂತಹಂತವಾಗಿ ಭಾಗೀದಾರರ ಅನಿಸಿಕೆಯಂತೆ ಬಲವರ್ಧನೆಯ ಕಾರ್ಯವು ಮುಂದುವರಿಯಿತು. ಸ್ಥಳೀಯ ಕಲಾವಿ ದ ರು ಮತ್ತು ಆಯ್ದ ಕೆಲವು ಶಿಕ್ಷಕರುಗಳು ಶಾಲಾಸಮಯ ಮುಗಿದ ನಂತರ ಸಂಜೆಯ ವೇಳೆ ಕೇಂದ್ರಕ್ಕೆ ಅಗತ್ಯವಾದ ಕಲಿಕಾಸಾಮಗ್ರಿ ಗಳನ್ನು ಸ್ವ ತಹ ಸಿದ್ದಪಡಿಸಿದರು ಹಾಗೆಯೇ ಕೇಂದ್ರಕ್ಕೆ ಕಲಕಾ ಚಪ್ಪರವನ್ನು ನರ್ಮಿಸಿದರು ಸಮಾಲೋಚನಾಸಭೆಗೆ ಅಗತ್ಯವೆನಿಸಿದ ಮಾದರಿಗಳು,ಚಾರ್ಟ್ ಗಳನ್ನು ಉಚಿತವಾಗಿಯೇ ಮಾಡಿಕೊಟ್ಟರು.ಇದರಂತೆಯೇ ಕುಡಿಯುವ ನೀರಿನ ಸೌಲಭ್ಯಕ್ಕೆ ವಾಟರ್ ಪಿಲ್ಟರ್, ಶೌಚಾಲಯ ದ ದುರಸ್ತಿಯ ಕಾರ್ಯ ಮತ್ತು ಕೇಂ ದ್ರಕೆಕ ಆಕರ್ಷಕವಾದ ನಾಮಫಲಕವನ್ನು ಬರೆಯಿಸಲಾಯಿತು. ಭಾಗೀದಾರರ ಅಪೇಕ್ಷೆಯಂತೆ ಕೇಂದ್ರವು ಸುಸಜ್ಜಿತವಾಯಿತು. ಹೀಗಿರುವಾಗ ಶಿಕ್ಷಕ ಸ್ನೇಹಿತರೋರ್ವರು ಅವರಸ್ನೇಹಿತರಾದ ಮರದ ಸಾಮಿಲ್ ನ ಒಡೆಯರಿಂದ ಪೀಠೋಪಕರಣ ಕೊಡುವಂತೆ ಕೋರಿದಾಗ ಅವರು ಇವರ ಆಸೆಯಂತೆಯೇ ಸುಮಾರು ೨೦೦೦೦ರೂಗಳ ನ್ನು ನೀಡಿದರು ಈ ಹಣದಿಂದ ಶಿಕ್ಷಕರು ಕೂರಲು ಕುರ್ಚಿ ಗಳನ್ನು ಖರೀಧಿಸಲಾಯಿತು. ಈ ರೀತಿಯಾಗಿ ಸುಮಾರು ೭೦೦೦೦ರೂಗಳ ವೆಚ್ಚದಲ್ಲಿ ೩ ತಿಂಗಳ ಅವಧಿಯಲ್ಲಿ ಸಮೂಹ ಸಂಪನ್ಮೂಲಕೇಂದ್ರದ ಬಲವರ್ಧನೆಯ ಕಾರ್ಯ ವು ಸಾಗಿತು.ಇನ್ನೂ ಆ ಕೇಂದ್ರವನ್ನು ಗಣಕಯಂತ್ರ ಮತ್ತು ಎಲ್.ಸಿ.ಡಿ.ಯಿಂದ ಸಜ್ಜು ಗೊ ಳಿಸಲು ಮಾಡಿದ್ದ ಚಿಂತನೆಯು ಅನುಷ್ಠಾನಮಾಡುವತ್ತ ಪ್ರಯತ್ನಗಳು ಸಾಗಿರುತ್ತದೆ.

ಇಷ್ಟೆಲ್ಲಾ ಅಭಿವ್ರುದ್ಧಿಗೆ ಕಾರಣರಾಗಿದ್ದ ಭಾಗೀದಾರರುಗಳನ್ನು ಅಭಿ ನಂ ದಿಸಬೇಕೆಂಬ ಬಯಕೆ ಯಿಂ ದ ಒಂದು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದರು. ಈ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಭಾಗೀದಾರರುಗಳನ್ನು ಉದ್ದೇಶಿಸಿ ತಮ್ಮ ಮನದಾಳದಅಭಿನಂದನಾ ಮಾತುಗಳನ್ನು ಅಭಿನಂದನಾ ವ್ಯಕ್ತಪಡಿಸಿದರು.ಹಾಗೆಯೇ ಆಯ್ದ ಕೆಲವು ಭಾಗೀದಾರರು ಪ್ರಕಲ್ಪದಾರರ ಕಾರ್ಯವನ್ನು ಮೆಚ್ಚಿ ಮಾತುಗಳ ನ್ನಾ ಡಿದರು.ಈ ಸಂದರ್ಭದಲ್ಲಿ ಕೇಂದ್ರದ ಪ್ರಗತಿಗೆ ಸಹಕರಿಸಲು ವಿರೋಧವನ್ನು ವ್ಯಕ್ತಪಡಿಸಿದ್ದ ಶಿಕ್ಷಕರುಕೂಡ ಹಾಜರಿದ್ದರು ಇವರು ಕೂಡ ತಮ್ಮ ಮಾತುಗಳಲ್ಲಿ ಪ್ರಾರಂಭದಲ್ಲಿ ತಾವುಮಾಡಿದ ವಿರೋಧಕ್ಕೆ ಪ ಶ್ಚ ತ್ತಾ ಪದ ಮಾತುಗಳನ್ನು ಆಡಿದರು ಹಾಗೂ ಇನ್ನೂ ಬಾಕಿ ಇರುವ ಕಾರ್ಯಗಳಿಗೆ ತಮ್ಮ ಸಹಾಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿರುತ್ತಾರೆ.ಸಮೂಹ ಸಂಪನ್ಮೂಲ ಕೇಂದ್ರವನ್ನು ಆಕರ್ಷಣಾ ಕೇಂದ್ರವನ್ನಾಗಿಮಾಡಿದ ಪ್ರಕಲ್ಪದಾರರು ತಾವು ಮಾಡಿದ ಪ್ರಕಲ್ಪವನ್ನು ಯಶಸ್ವಿಯಾಗಿ ಮಂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

 

ಪ್ರಸ್ತುತ ಈ ಕೇಂದ್ರದ ಸಮೂಹಸಂಪನ್ಮೂಲ ವ್ಯಕ್ತಿಯಾಗಿದ್ದ CRPಯವರು ಈ ಕೇಂದ್ರದಲ್ಲಿ ೩ ವರ್ಷ ಗಳಾಗಿದ್ದರಿಂ ದ ಇಲಾಖೆಯ ಆದೇಶದಂತೆ ಶಾಲೆಗೆ ಶಿ ಕ್ಷಕ ರಾಗಿ ತೆ ರಳಿದ್ದು ಇದೇ ಸ್ಥಳಕ್ಕೆ ನೂತನವಾಗಿ ನೇಮಕ ಗೊ ಂ ಡಿರುವ CRPಯವರಿಗೂ ಸಹ ELDPತರಬೇತಿಯಾಗಿರುವು ದರಿಂದ ಅವರು ಈ ಕೇಂದ್ರದ ಪ್ರಗತಿಗೆ ಅಗತ್ಯವಾದ ಎಲ್ಲಾ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಅರ್ಪಣಾ ಭಾವದಿಂದ ಕಾರ್ಯಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಈ ಕೇಂದ್ರದ ಅಭಿವೃದ್ಧಿಯನ್ನು ವೀ ಕ್ಷಿಸಲು DDPIರವರು ರಾಜ್ಯಮಟ್ಟದ ವಿವಿಧ ಅಧಿಕಾರಿಗಳು ಬಂದಿರುತ್ತಾರೆ ಹಾಗೂ ಮೆಚ್ಚುಗೆಯ ಮಾತುಗಳನ್ನಾಡಿರುತ್ತಾರೆ.ಇದು ಇತರರಿಗೂಸ್ಫೂರ್ತಿ ನೀಡಿರುತ್ತದೆ.

ವರದಿ: ..ಕಾಂತರಾಜಯ್ಯ .BRP-BRC.ತರೀಕೆರೆ.