Library Development and Management Kamalaksha Shet

ಕಮಲಾಕ್ಷ ಶೇಟ್, ಬಿ. ಆರ್.ಪಿ. ಚನ್ನಗಿರಿ

ಶಾಲಾ ಗ್ರಂಥಾಲಯ ಸಬಲೀಕರಣ

 

ದಾವಣಗೆರೆ ಜಿಲ್ಲೆ ಯ ELDP ಕಾರ್ಯಕ್ರಮದಲ್ಲಿ ಅನುಷ್ಠಾನ ಪ್ರಕಲ್ಪವಾಗಿ ಶಾಲಾ ಗ್ರಂಥಾಲಯ ಸಬಲೀಕರ ಣ ಎಂಬ ಪ್ರಕಲ್ಪವನ್ನು ಕೈಗೆತ್ತಿಕೊಂಡ ನಾಗರಾಜ ಬಿ. ಆರ್.ಪಿ. ಹರಿಹರ , ಹಾಗೂ ತಿಪ್ಪೇಸ್ವಾಮಿ ಸಿ. ಆರ್.ಪಿ ಇವರು ಈ ಪ್ರಕಲ್ಪಕ್ಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಕಟ್ಟೆ ಎಂಬ ಶಾಲೆಯನ್ನು ಆರಿಸಿಕೊಂಡಿದ್ದು ಸದರಿ ಶಾಲೆಯಲ್ಲಿ ಗ್ರಂಥಾಲಯವನ್ನು ಸಬಲೀಕರಣ ಗೊಳಿಸಲು ಶಾಲೆಯ ಮುಖ್ಯ ಶಿಕ್ಷಕರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿ ಕಾರ್ಯೋನ್ಮುಖರಾದರು.

ಈ ಶಾಲೆಯಲ್ಲಿ ಈ ಪ್ರಕಲ್ಪವನ್ನು ಜಾರಿಗೊಳಿಸುವ ಮೊದಲು ಅಲ್ಲಿಯ ಎಲ್ಲ ಶಿಕ್ಷಕರನ್ನು ಸಮುದಾಯದ ಮುಖಂಡರನ್ನು ಎಸ್.ಡಿ.ಎಮ್.ಸಿಯವರನ್ನು ಕರೆಯಿಸಿ ಅವರೊಂದಿಗೆ ಬುದ್ದಿ ಮಂಥನ ನಡೆಸಿ ಈ ಬಗ್ಗೆ ಅಭಿಪ್ರಾಯಗಳನ್ನು , ಉಪಾಯಗಳನ್ನು ಸಂಗ್ರಹಿಸಿದರು. ಈ ಸಂದರ್ಭದಲ್ಲಿ ೭ ಜನ ಎಸ್.ಡಿ.ಎಮ್.ಸಿ. ಸದಸ್ಯರು, ಮುಖ್ಯಶಿಕ್ಷಕರು ೪ಜನ ಸಹ ಶಿಕ್ಷಕರು, ಅಲ್ಲದೇ ಇತರೆ ಸಮುದಾಯದ ಮುಖಂಡರು ಹಾಗೂ ಪೋಷಕರು ೮ ಜನ ಒಟ್ಟು ೨೦ ಜನ ಪಾಲ್ಗೊಂಡಿದ್ದರು. ಗ್ರಂಥಾಲಯ ಸಬಲೀಕರಣದ ಬಗ್ಗೆ ಭಾಗೀದಾರರನ್ನೇ ನೇರವಾಗಿ ಕರೆಯಿಸಿ ಅವರಿಂದಲೇ ಉಪಾಯಗಳನ್ನು ಸಂಗ್ರಹಿಸಿರುವುದರಿಂದ ಅವರೆಲ್ಲರಿಗೂ ಈ ಕಾರ್ಯದ ಬಗ್ಗೆ ಆಸಕ್ತಿ ಹೆಚ್ಚಾಯಿತು ಅಲ್ಲದೇ ಅವರಲ್ಲಿ ತಂಡ ಮನೋಬಾವನೆ ಉಂಟುಮಾಡಲು ಪ್ರಕಲ್ಪಕಾರರು ಕೈಗೊಂಡ ವಿವಿಧ ಆಟಗಳು ಹಾಗೂ ತೋರಿಸಿದ ಕ್ಲಿಪ್ಪಿಂಗಗಳು ಅವರಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂಬ ಮನೋಭಾವನೆ ಉಂಟುಮಾಡಿದ್ದವು .

ಈ ಕಾರಣದಿಂದ ೨ನೇ ಬಾರಿ ಎಲ್ಲ ಭಾಗೀದಾರರನ್ನು ಒಟ್ಟಾಗಿ ಕರೆಯಿಸಿ ಗ್ರಂಥಾಲಯ ಸಬಲೀಕರಣ ಗೊಳಿಸುವ ಬಗ್ಗೆ ಹಂತಹಂತವಾಗಿ ಹೇಗೆ ಸಿದ್ದಗೊಳಿಸಬೇಕು ಮತ್ತು ಯಾವ ಸಂಪನ್ಮೂಲ ಗಳನ್ನು ಸಂಗ್ರಹಿಸಬೇಕೆನ್ನುವ ಬಗ್ಗೆ ನಡೆಸಲಾದ ಸಂವಾದದಲ್ಲಿ ಬಾಗೀದಾರರು ತಾವಾಗಿಯೇ ಈ ಕಾರ್ಯಕ್ಕೆ ಮುಂದಾದರು. ಸದರಿ ಗ್ರಂಥಾಲಯವನ್ನು ಸಮುದಾಯದ ಸಹಕಾರದೊಂದಿಗೆ ಸಬಲೀಕರಿಸಲು ಮುಂದಾಗಿದಲ್ಲದೇ ಸಮುದಾಯದವರಿಗೂ ಉಪಯೋಗಿಸಲು ಶಾಲಾ ಅವಧಿಯ ನಂತರ ಅವಕಾಶ ಕಲ್ಪಿಸಲು ತಿರ್ಮಾನಿಸಿದ ಕಾರಣ ಅನೇಕ ದಾನಿಗಳು ಈ ಗ್ರಂಥಾಲಯಕ್ಕೆ ವೃತ್ತ ಪತ್ರಿಕೆಗಳನ್ನು , ಮಾಸಿಕಗಳನ್ನು , ತಮ್ಮ ಹಣದಿಂದ ತರಿಸಲು ಮುಂದೆಬಂದರು. ವಿವಿಧ ಶಾಲೆಗಳ ಯಶೋಗಾಥೆ ಗಳನ್ನು ಈ ಭಾಗೀದಾರರಿಗೆ ತೋರಿಸಿದಾಗ ಅವರಲ್ಲಿ ನಮ್ಮ ಶಾಲೆಯಲ್ಲಿಯೂ ಬಹೂಪಯೋಗಿ ಗ್ರಂಥಾಲಯ ನಿರ್ಮಾಣಮಾಡಬೇಕೆಂದು ಛಲತೊಟ್ಟರು.

ಶಾಲಾ ಗ್ರಂಥಾಲಯ ಸಬಲೀಕರಣ ಗೊಳಿಸಲು ಮುಖ್ಯ ವಾಗಿ ಶಾಲಾ ಗ್ರಂಥಾಲಯ ಕಟ್ಟಡದ ವ್ಯವಸ್ಥೆ ಮುಖ್ಯವಾಗಿದೆ . ಈ ಕಾರಣದಿಂದ ಗಾಳಿ ಬೆಳಕು ಇರುವ ವಿಶಾಲವಾದ ಕೊಠಡಿಯನ್ನು ಸದರಿ ಶಾಲೆಯಲ್ಲಿ ನಿಗದಿಪಡಿಸಿ ಅದನ್ನು ಶಾಲಾ ಗ್ರಂಥಾಲಯ ವೆಂದು ನಾಮಕರಣ ಗೊಳಿಸಲಾಯಿತು. ಸದರಿ ಗ್ರಂಥಾಲಯದಲ್ಲಿ ಎಲ್ಲರೂ ಕುಳಿತು ತಮಗೆ ಅಗತ್ಯವಾದ ಪುಸ್ತಕಗಳನ್ನು ಪಡೆದು ಓದಲು ಅನುಕೂಲಕರವಾಗುವಂತೆ ತೆರೆದ ಗ್ರಂಥಾಲಯ ವನ್ನು ಪ್ರಾರಂಬಿಸಲಾಗಿದೆ. ಅಲ್ಲದೇ ಇದಕ್ಕಾಗಿ ಕೊಠಡಿಯಲ್ಲಿ ಕಲ್ಲುಗಳಿಂದ ಪುಸ್ತಕ ಸ್ಟ್ಯಾಂಡ್ಗಳನ್ನು ನಿರ್ಮಿಸಲಾಗಿದೆ. ಅಲ್ಲದೇಕೊಠಡಿಯ ಒಳಭಾಗದಲ್ಲಿ ಹಾಗೂ ಕೊಠಡಿಯ ಹೊರಭಾಗದಲ್ಲಿ ಕುಳಿತುಕೊಂಡು ಓದಬಹುದಾದ ಕಲ್ಲಿನ ಬೆಂಚುಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯದಲ್ಲಿ ಶಾಲಾ ಶಿಕ್ಷಕರು ಹಾಗೂ ಎಸ್.ಡಿ.ಎಮ್.ಸಿ. ಯವರು ತುಂಬಾ ಉತ್ಸಾಹದಿಂದ ಪಾಲ್ಗೊಂಡರು. ಇದಕ್ಕೆ ಇವರಲ್ಲಿ ಉಂಟಾದ ಧನಾತ್ಮಕ ಮನೋಭಾವವೇ ಕಾರಣ ಇದು ಪ್ರಕಲ್ಪಕಾರರು ನಿರ್ವಹಿಸಿದ ಇ.ಎಲ್.ಡಿ.ಪಿ. ಚಟುವಟಿಕೆಗಳ ಪರಿಣಾಮದಿಂದಾಯಿತು.

ಅಲ್ಲದೇ ಗ್ರಂಥಾಲಯಲ್ಲಿ ಅವಶ್ಯಕ ಸಂಖ್ಯೆಯ ಪುಸ್ತಕಗಳನ್ನು ಸಂಗ್ರಹಿಸಲು ಕಾರ್ಯೋನ್ಮುಖರಾದರು, ಈ ಕಾರಣಕ್ಕಾಗಿ ವಿವಿಧ ಮೂಲಗಳಿಂದ ಅವಶ್ಯಕ ಹಾಗೂ ಮಕ್ಕಳ ಮಟ್ಟಕ್ಕೆ ಸರಿಹೊಂದುವ "ಶೈಕ್ಷಣಿಕಗ್ರಂಥಾಲಯ" ಕ್ಕೆ ಪುಸ್ತಕಗಳನ್ನು , ವೃತ್ತ ಪತ್ರಿಕೆಗಳನ್ನು , ಮಾಸಿಕಗಳನ್ನು ಸಂಗ್ರಹಿಸಲು ತೀರ್ಮಾನಿಸಿದರು ಈ ಬಗ್ಗೆ ಶಾಲೆಗೆ ಎಸ್.ಡಿ.ಎಮ್.ಸಿಯವರು ಹಾಗೂ ಗ್ರಾಮಸ್ತರು ಶಿಕ್ಷಕರು ತಮ್ಮ ಗ್ರಾಮದ ಜನರಿಂದ ಪುಸ್ತಕಗಳನ್ನು ಸಂಗ್ರಹಿಸುವ "ಪುಸ್ತಕ ಜೋಳಿಗೆ" ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಜನರ ಮನೆಗಳಲ್ಲಿರುವ ಹಳೆಯ ಹಾಗೂ ಹೊಸ ಪುಸ್ತಕಗಳನ್ನು ಶಾಲೆಗಾಗಿ ಬೇಡುವ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳು ಹಾಗೂ ಸಮುದಾಯದವರು ಒಟ್ಟಾಗಿ ಪಾಲ್ಗೊಂಡರು. ಅನೇಕ ಪುಸ್ತಕಗಳನ್ನು ಸಂಗ್ರಹಿಸಲಾಯಿತು. ಅಲ್ಲದೇ ಶಾಲಾ ಗ್ರಂಥಾಲಯಕ್ಕೆ ವೃತ್ತಪತ್ರಿಕೆಗಳನ್ನು ಹೊಂದಲು ಭಾಗೀದಾರರು ಕುಳಿತು ಚಚಿFಸಿದಾಗ ವಿವಿದ ವೃತ್ತಪತ್ರಿಗಳಿಗೆ ದಾನಿಗಳನ್ನು ಪ್ರಾಯೋಜಕರಾಗಿ ಸಮುದಾಯದವರನ್ನು ಪ್ರೇರೇಪಿಸಿ ಅವರಿಂದ ವಿವಿಧ ವ್ರತ್ರ ಪತ್ರಿಕೆಗಳನ್ನು ಅಲ್ಲದೇ ಮ್ಯಾಗಜಿನಗಳನ್ನು ತರಿಸಲು ಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ೬ ವಿವಿಧ ವೃತ್ತ ಪತ್ರಿಕೆಗಳಿಗೆ ಸಮುದಾಯದವರು ಪ್ರಾಯೋಜಕರಾಗಿ ಮುಂದೆಬಂದರು, ಅಲ್ಲದೇ ಮೂರು ಮಾಸಿಕಗಳನ್ನು ತರಿಸಲು ದಾನಿಗಳು ವಾಗ್ದಾನ ನೀಡಿದರು. ದಾನಿಗಳೊಬ್ಬರು ತಾವೇ ರೂ.10,೦೦೦ ಬೆಲೆಯ ವಿವಿಧ ಪುಸ್ತಕಗಳನ್ನು ಕೊಡಿಸುವುದಾಗಿ ಹೇಳಿದಲ್ಲದೇ ತಾವೇ ಶಿಕ್ಷಕರೊಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅವಶ್ಯಕ ಪುಸ್ತಕ ಗಳನ್ನು ಕೊಡಿಸಿ ಗ್ರಂಥಾಲಯವನ್ನು ಅಧಿಕೃತವಾಗಿ ಚಾಲನೆ ಗೊಳಿಸಿದರು.

ಅಲ್ಲದೇ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಹೊಂದಿರಬೇಕು ಎಂದು ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಅದಕ್ಕಾಗಿ ಕಂಪ್ಯೂಟರ್ ಹೊಂದಲು ದಾನಿಗಳನ್ನು ಸಂಪರ್ಕಿಸಿದರು. . ಅಲ್ಲದೇ TV ವ್ಯವಸ್ಥೆ ಹೊಂದಲು ಕ್ರಮ ಕೈಗೊಳ್ಳಲಾಯಿತು ಇದಕ್ಕಾಗಿ ದಾನಿಗಳನ್ನು ಅಥವಾ ಸಂಘ ಸಂಸ್ಥೆಗಳನ್ನು ಸಂಪರ್ಕಿಸಲು ತೀರ್ಮಾನಿಸಲಾಯಿತು ವಿವಿದ ಶೈಕ್ಷಣಿಕ ಸಿಡಿ, ಗಳನ್ನು ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ..

ಈ ಗ್ರಂಥಾಲಯವನ್ನು ಶಾಲಾ ಅವಧಿ ಯಲ್ಲಿ ನಿರಂತರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ನಿರ್ವಹಣೆಯ ಜವಾಬ್ದಾರಿಯನ್ನು . ಆ ಶಾಲೆಯ ಒಬ್ಬರು ಶಿಕ್ಷಕರಿಗೆ ನೀಡಬೇಕೆಂದು ಸೂಚಿಸಿದರು ಅದರಂತೆ ಅವರನ್ನು ಗ್ರಂಥಾಲಯದ ಗ್ರಂಥಪಾಲಕರನ್ನಾಗಿ ನೇಮಕ ಮಾಡಲಾಯಿತು . ಈ ಗ್ರಂಥಾಲಯ ಪ್ರತಿದಿನ ಯಾವವೇಳೆಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಹಾಗೂ ಶಾಲಾ ಅವಧಿಯ ನಂತರೆ ಹೇಗೆ ಸಮುದಾಯದವರಿಗೆ ಪ್ರಯೋಜನವಾಗಬೇಕೆಂದು ವೇಳಾಪಟ್ಟಿ ಸಿದ್ದಪಡಿಸಲಾಯಿತು, ಅಲ್ಲದೇ ಮಕ್ಕಳಿಗೆ ವಾರಕ್ಕೊಮ್ಮೆ ಬೇರೆ ಬೇರೆ ಗ್ರಂಥಗಳನ್ನು ವಿತರಿಸಿ ಮರಳಿ ಪಡೆಯುವ ವ್ಯವಸ್ಥೆ ಹಾಗೂ ಇದನ್ನು ಆಯಾ ತರಗತಿ ಶಿಕ್ಷಕರು ನಿರ್ವಹಿಸುವಂತೆ ಕ್ರಮಕೈಗೊಳ್ಳಲಾಗಿದೆ. . ಅಲ್ಲದೇ ಆಯಾ ತರಗತಿಯವರು ಪ್ರತಿದಿನ ನಿಗದಿತ ಬಿಡುವಿನ ಸಮಯದಲ್ಲಿ ಗ್ರಂಥಾಲಯಕ್ಕೆ ಹೋಗಿ ದಿನದ ವ್ರತ್ತ ಪತ್ರಿಕೆಗಳನ್ನು ಮ್ಯಾಗಜಿನ್ಗಳನ್ನು ಓದಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಅದರಂತೆ ನಿರ್ವಹಣೆ ಸಾಗುತ್ತಿದೆ. . ಅಲ್ಲದೇ ಅವಶ್ಯಕತೆಬಿದ್ದಾಗಲೆಲ್ಲ ಅವಶ್ಯಕ ಪುಸ್ತಕಗಳನ್ನು ಪಡೆಯಲು ಸಿಗುವಂತೆ ಇರಬೇಕು. ಅದರಂತೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅವಶ್ಯಕ ಪುಸ್ತಕಗಳನ್ನು ಪಡೆಯಲು ಗ್ರಂಥಾಲಯ ವಿತರಣಾ ಕಾರ್ಡಗಳನ್ನು ನೀಡುವ ವ್ಯವಸ್ಥೆ ಮಾಡಲಾಯಿತು. ಮಕ್ಕಳು ಹಾಗೂ ಶಿಕ್ಷಕರು ಅವಶ್ಯಕ ಪುಸ್ತಕಗಳನ್ನು ಕೂಡಲೇ ಪಡೆಯುವಂತಾಗಲು ಪುಸ್ತಕಗಳನ್ನು ವ್ಯವಸ್ಥಿತವಾಗಿ ವಿಷಯವಾರು ವರ್ಣಮಾಲೆವಾರು ಜೋಡಿಸಿಟ್ಟಿದ್ದು . ಕ್ರಮವಾಗಿ ವಿಷಯವಾರು ಪುಸ್ತಕಗಳ ಕೆಟಲಾಗ್ ನಿ ರ್ವಹಿಸಲಾಗಿದೆ.

ಈ ಗ್ರಂಥಾಲಯವನ್ನು ಸಮುದಾಯದವರು ಬಳಸುವಂತಾಗಲು ಶಾಲಾ ಅವಧಿಯನಂತರ ಸಾಯಂಕಾಲ ೪-೩೦ ರಿಂದ ೬-೦೦ ಗಂಟೆಯವರೆಗೆ ತೆರೆದಿಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸ್ಥಳೀಯ ಶಿಕ್ಷಕರು ತಾವಾಗಿಯೇ ಈ ಸಮಯದಲ್ಲಿ ತಾವು ಗ್ರಂಥಾಲಯದ ನಿರ್ವಹಣೆ ಮಾಡುವುದಾಗಿ ಮುಂದೆಬಂದರು. ಈ ಸಮಯದಲ್ಲಿ ಗ್ರಾಮಸ್ಥರು ಸದರಿ ಗ್ರಂಥಾಲಯಕ್ಕೆ ಬಂದು ಅಂದಿನ ವೃತ್ತಪತ್ರಿಕೆಗಳನ್ನು ಮಾಸಿಕಗಳನ್ನು ಪಡೆದು ಓದಲು ಸಹಾಯಕಾರಿಯಾಗಿದೆ. ಅಲ್ಲದೇ ಇದರಿಂದ ಸಮುದಾಯ ಮತ್ತು ಶಾಲೆಯ ನಂಟು ಇನ್ನಷ್ಟು ಗಟ್ಟಿಯಾಗಿದೆ.

ಗ್ರಂಥಾಲಯದ ಗೋಡೆಗಳು ಗ್ರಂಥಗಳ ವಿವರಗಳು ಲೇಖಕರು, ಕವಿಗಳು ವಿವಿಧ ಪ್ರಸಿಧ್ಧ ಬಗ್ಗೆ ವಿವರಗಳನ್ನು , ಪುಸ್ತಕಗಳ ಮುಖ್ಯಅಂಶಗಳನ್ನು ಹೊಂದಿರುವ ವಿವರಗಳ ಗೊಡೆ ಬರಹಗಳನ್ನು ಹೊಂದಿರುವುದು ಅಪೇಕ್ಷಣೀಯ ಎಂಬಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಗೋಡೆಬರಹಗಳೊಂದಿಗೆ ಆಕರ್ಷಕ ಗೊಳಿಸಲಾಯಿತು. ಗ್ರಂಥಾಲಯ ಸಬಲೀಕರಣ ದಲ್ಲಿ ಮುಖ್ಯಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದ್ದು ಅವರು ಶಿಕ್ಷಕರು, ಸಮುದಾಯದವರು ಹಾಗು ಮಕ್ಕಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಈ ಶಾಲೆಯ ಗ್ರಂಥಾಲಯ ಸಬಲೀಕರಣ ಕಾರ್ಯ ತಕ್ಕ ಮಟ್ಟಿಗೆ ಸಾಧಿಸಲು ಸಾಧ್ಯವಾಯಿತು , ಇದಕ್ಕೆ ಕಾರಣವಾಗಿದ್ದು ಪ್ರಕಲ್ಪಕಾರರು ಪ್ರಯೋಗಿಸಿದ ತಂಡನಿರ್ಮಾಣ ಚಟುವಟಿಕೆಗಳು.

 

ಒಟ್ಟಾರೆಯಾಗಿ ಈ ಪ್ರಕಲ್ಪವು ಶಿಕ್ಷಕರು , ಮಕ್ಕಳು , ಸಮುದಾಯದವರು ಎಲ್ಲರನ್ನು ಒಂದುಗೂಡಿ ತಂಡದಲ್ಲಿ ಕಾರ್ಯನಿರ್ವಹಿಸುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಶಾಲಾ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವೂ ಬಹುಮುಖ್ಯ ಎಂಬ ಭಾವನೆಯನ್ನು ಮೂಡಿಸಿದ್ದಲ್ಲದೇ ಧನಾತ್ಮಕವಾಗಿ ಚಿಂತನೆಮಾಡಲು ಪ್ರೇರೇಪಿಸಿತು. ಇದರಿಂದ ಈ ಶಾಲೆಯಲ್ಲಿ ಯಾವುದೇ ಭಾಗೀದಾರರು ಬದಲಾದರೂ ಉಂಟಾದ ಧನಾತ್ಮಕ ಬದಲಾವಣೆ ನಿರಂತರವಾಗಿ ಮುಂದುವರಿಯಲು ವಾತಾವರಣ ನಿರ್ಮಾಣ ವಾಯಿತು.