ನಿರೀಕ್ಷೆಗಳು ದಿನಾಂಕ-೭-೮-೨೦೧೩

ನಿರೀಕ್ಷೆಗಳು ದಿನಾಂಕ-೭-೮-೨೦೧೩
 
ಶಿಕ್ಷಣ ಇಲಾಖೆಗೆ ಸರ್ಕಾರ ವ್ಯಯಿಸುತಿದೆ,
ಲಕ್ಷಾಂತರ-ಕೋಟ್ಯಾಂತರ ರೂಗಳನು,
ಇದರ ಗುರಿ ಸಕಲರಿಗೂ ಶಿಕ್ಷಣದೊರೆತು,
ನಾಡಿನ ನಾಗರಿಕ ಸತ್ಪ್ರಜೆಗಳಾಗಲೆಂದು.
 
ಒಳ್ಳೆಯ ಸತ್ಪ್ರಜೆಗಳಾಗಿ,
ನಾಡಿನ ಹೆಸರು ಉಳಿಸಿ,
ಹೆತ್ತು ಹೊತ್ತ ತಂದೆತಾಯಿಗಳಿಗೆ,
ಹೆಸರು ತರುವಂತಾಗಲೆಂದು.
 
ಶಿಕ್ಷಣ ಇಲಾಖೆ ನಿರೀಕ್ಷಿಸುತಿದೆ,
ಹೊಸ ಜನಾಂಗ ನಿರ್ಮಾಣವಾಗಿ,
ನಮ್ಮ ನಾಡಿನ ಪರಂಪರೆ,
ಗೌರವ ಉಳಿಸಿ ಬೆಳೆಸಲೆಂದು.
 
ನೆರೆಹೊರೆಯವರು ನಿರಿಕ್ಷಿಸುತ್ತಿದ್ದಾರೆ,
ನಮ್ಮ ಗ್ರಾಮ-ಊರಿನ ಸಮಸ್ಯೆಗಳ,
ಹೋಗಲಾಡಿಸಿ ನಮ್ಮೂರನು ಮಾದರಿ,
ಗ್ರಾಮವಾಗಿಸಲು ಶ್ರಮಿಸಲೆಂದು.
 
 
ನಮ್ಮ ಹಿರಿಯರು ನಿರೀಕ್ಷಿಸುತ್ತಿದ್ದಾರೆ,
ನೊಂದವರ ನೋವ ಮರೆಸಿ,
ಬೆಂದು ಬಳಲಿದವರ ಕಣ್ಣೀರ,
ಒರೆಸುವ ಕುವರ- ಕುವರಿಯಾಗಲೆಂದು.
 
ಸರ್ಕಾರ ನಿರೀಕ್ಷಿಸುತಿದೆ,
ನಾಡು-ನುಡಿ-ಇತಿಹಾಸ,
ಪರಂಪರೆಗಳ ಉಳಿಸಿ ಬೆಳೆಸಲೆಂದು,
ಕಾತರಿಸುತಿದೆ ಅನವರತ.
 
ಸಮಾಜ ನಿರೀಕ್ಷಿಸುತಿದೆ,
ಜಾತಿ-ಮತ ಪಂಥ ಮರೆತು,
ಸರ್ವರಿಗೂ ಸಮಬಾಳು,
ಸಮಪಾಲು ದೊರೆಯಲೆಂದು.
 
ವಿಜ್ಞಾನ ನಿರೀಕ್ಷಿಸುತಿದೆ,
ಪರಿಸರ ಅಭಿವೃದ್ದಿಯಾಗಿ,
ನೆಲ ಜಲ ಸಂಪತ್ತನ್ನುಉಳಿಸುವ,
ಜನಾಂಗ ನಿರ್ಮಾಣವಾಗಲೆಂದು.
 
ಭಾರತ ದೇಶ ನಿರೀಕ್ಷಿಸುತಿದೆ,
ಎಲ್ಲಾ ರಾಜ್ಯಗಳ ಜನರು,
ಒಂದಾಗಿ ಬಾಳಿ ಬದುಕಿ,
ಅಣ್ಣ-ತಮ್ಮಂದಿರ ರೀತಿ ಬಾಳಲೆಂದು,
 
ವಿಜ್ಞಾನ ನಿರೀಕ್ಷಿಸುತಿದೆ,
ಹೊಸಹೊಸ ಅವಿಷ್ಕಾರ ನಡೆಸಿ,
ಭೌತಿಕ ಸಮಸ್ಯೆಗಳ ಬಗೆಹರಿಸಿ,
ಹಸನಾದ ಬಾಳು ನಡೆಸಲೆಂದು.
 
ದೇವರು ನಿರೀಕ್ಷಿಸುತ್ತಿದ್ದಾನೆ,
ಈ ಮನುಜ ಬಾಳಲಿ,
ಅರ್ಥಪೂರ್ಣ ಬದುಕನು,
ಈ ಧರೆಯಲಿ ಅನುದಿನ ಎಂದು.
 
ಲೋಕಾಯುಕ್ತ ಕಛೇರಿ ನಿರೀಕ್ಷಿಸುತಿದೆ,
ಯಾರು ಅನ್ಯಾಯದಿ ಲಂಚರುಷುವತ್ತು ಪಡೆದು,
ಕೊನೆಗೆ ಸಿಕ್ಕಿ ನರಳಾಟದಿಂದ ಕೊರಗಿ,
ತಲೆತಗ್ಗಿಸುವ ರೀತಿ ಆಗಬಾರದೆಂದು.
 
ದೊಡ್ಡಮಲ್ಲಪ್ಪ.ಎಸ್
ಪ್ರಾಚಾರ್ಯರು
ಡಯಟ್-ಕೂಡಿಗೆ
ಕೊಡಗು-ಜಿಲ್ಲೆ.