The learning experience and engagement is as important as the content of the text discuss



ತರಬೇತಿ ಒಂದು ನಿರಂತರ ಪ್ರಕ್ರಿಯೆ. ಇದು ಜ್ಞಾನದ ಬೆಳವಣಿಗೆ, ಕೌಶಲದ ಅಭಿವೃದ್ಧಿ ಜೊತೆಗೆ ಮನೋಭಾವಗಳ ಮೇಲೆ ಗುಣಾತ್ಮಕ ಪರಿಣಾಮಕಾರಿಯಾಗಿ ಅದನ್ನು ಅಳವಡಿಸಿಕೊಂಡು ಕಾರ್ಯಕ್ಷೇತ್ರದಲ್ಲಿ ಉತ್ತಮ ಪಡಿಸಿಕೊಳ್ಳುವುದಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಬರುವ ತರಬೇತಿಗಳು ಕಾಟಾಚಾರವಾಗಿರದೆ ಕಾರ್ಯಾನುಷ್ಟಾಕ್ಕೆ ತರುವಂತದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಎಮ್‌ಡಿಎಫ್‌ ತರಬೇತಿ ಸಹ ಈ ತೆರೆನಾದ ತರಬೇತಿಗಳಲ್ಲಿ ಒಂದಾಗಿದ್ದು ಶಿಕ್ಷಣಾರ್ಥಿಗಳಲ್ಲಿ ಹೆಚ್ಚಿನ ಉರುಪು ತುಂಬಿ ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಸೇವೆಯ ಜೊತೆಗೆ ಸಾಧನೆ ಮಾಡಲು ಸಹಕಾರಿಯಾಗಿರುತ್ತದೆ.

 

ಎಮ್‌ಡಿಪಿ ತರಬೇತಿಯಲ್ಲಿ ಭಾಗವಹಿಸುವ ಶಿಕ್ಷಣಾರ್ಥಿಗಳು ಸರಿ ಸುಮಾರು 5 ರಿಂದ 10 ವರ್ಷಗಳ ಮೇಲ್ಪಟ್ಟು ವೃತ್ತಿಯಲ್ಲಿ ಪರಿಣಿತರಾಗಿರುವ ಇವರಿಗೆ ಅಪಾರವಾದ ಅನುಭವವಿದೆ. ಅಲ್ಲದೆ ಪ್ರತಿದಿನ ಇವರು ಕ್ಷೇತ್ರ ಬೇಟಿ, ಸಭೆ, ವರದಿ, ಮಾಹಿತಿ ಸಂಗ್ರಹಣೆ ಹೀಗೆ ಹತ್ತು ಹಲವು ವಿಚಾರಗಲ್ಲಿ ಭಾಗಾರ್ಥಿಗಳ ಬೇಟಿ ಮಾಡುವುದರಿಂದ ಒಂದಿಲ್ಲೊಂದು ಸಿಹಿ ಅಥವ ಕಹಿ ಘಟನೆಗಳ ಅನುಭವವಾಗಿರುತ್ತದೆ. ಯಾವುದೇ ವ್ಯಕ್ತಿ ಪ್ರತಿ ನಿತ್ಯ ವಿವಿಧ ವಿಧಾನಗಳಿಂದ ತನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾನೆ. ಇದಕ್ಕೆ ಮುಖ್ಯವಾಗಿ ಓದುವ ಹವ್ಯಾಸ, ತರಬೇತಿಗಳಲ್ಲಿ ಪರಿಪೂರ್ಣ ಭಾಗವಹಿಸುವಿಕೆ ಅದನ್ನು ಅರ್ಥೈಸಿಕೊಂಡು ತಮ್ಮ ಜೀವನ ಅಥವಾ ವೃತ್ತಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಪರಿಪಾಠವಿರಬೇಕು, ಇದು ಅತಿ ಮುಖ್ಯವಾದ ಘಟ್ಟವೆಂದು ಅನಿಸುತ್ತದೆ.

 

ಎಷ್ಟೋ ತರಬೇತಿಗಳಲ್ಲಿ ನಾವು ಭಾಗವಹಿಸಿರುತ್ತೇವೆ., ಅದು ಆ ತರಬೆತಿ ವೇಳೆಗೆ ಮಾತ್ರ ಸೀಮಿತ ಮಾಡಿಬಿಡುತ್ತೇವೆ. ಆ ತರಬೇತಿ ಹಿಂದೆ ಇರುವ ಹಲವಾರು ಪ್ರಕ್ರಿಯೆ, ಶ್ರಮಗಳನ್ನು ನಾವು ಅರಿತುಕೊಳ್ಳಬೇಕಾಗಿತ್ತದೆ. ಸುಮ್ಮನೆ ಕಾಲಹರಣ ಮಾಡಿ ಅದರಿಂದ ಯಾವುದೇ ಉಪಯೋಗವಿಲ್ಲದಿದ್ದರೆ, ಅಂತಹ ತರಬೇತಿಗಳಿಗೆ ಹಾಜರಾಗುವ ಬದಲು ಆಸಕ್ತಿ ಉಳ್ಳವರಿಗೆ ಬಿಟ್ಟುಕೊಡುವುದು ಲೇಸೆಂಬುವುದು ನಮ್ಮ ಭಾವನೆ.

 

ಕಲಿಕೆ ಉತ್ತಮವಾಗಬೇಕಾದರೆ ಕಲಿತದ್ದನ್ನು ಅಳವಡಿಸಿಕನೊಂಡು ಅನುಭವಿಸಿದಾಗಲೇ ಮಾತ್ರ , ಅದನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದಾಗದಿದ್ದರೆ ಎಲ್ಲಾ ಮತ್ತು ಎಲ್ಲರ ಶ್ರಮವು ವ್ಯರ್ಥವೆಂದೇ ಭಾವಿಸಬೇಕಾಗುತ್ತದೆ.

 

ಕಲಿಯಿರಿ , ಕಲಿತು ಕಲಿಕೆಯನ್ನು ಅಳವಡಿಸಿಕೊಳ್ಳಿರಿ.