ಈ ಇಮೇಲ್ ವೀಕ್ಷಿಸಲು ಸಾಧ್ಯವಿಲ್ಲವೇ? ಬ್ರೌಸರ್ ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ಸುದ್ದಿ ಪತ್ರ - ಆಗಸ್ಟ್  16, 2013
ಈ ಸಂಚಿಕೆಯಲ್ಲಿ

ಕೋಯರ್ ನ ಬಿಡುಗಡೆ
ಕೋಯೆರ್ ನಲ್ಲಿ ಹೊಸ ವಿಷಯಗಳು
ಇತ್ತೀಚಿನ ಘಟನೆಗಳು
ಇತ್ತೀಚಿನ ಐ ಸಿ ಟಿ ಘಟನೆಗಳು
ನಿಮಗಿದು ಗೊತ್ತೇ?


ಹೊಸಾ ತಂತ್ರಾಂಶವನ್ನು ಕಲಿಯಿರಿ

Gimp Logo'ಜಿಂಪ್' ಎನ್ನುವ ಚಿತ್ರಗಳನ್ನು ಸಂಪಾದಿಸುವ ತಂತ್ರಾಂಶವನ್ನು  ಕಲಿಯಿರಿ. ಚಿತ್ರಗಳ ಗಾತ್ರವನ್ನು ಬದಲಾಯಿಸಲು, ರೆಸಲ್ಯೂಶನ್ ಕಡಿಮೆಮಾಡಲು, ಚಿತ್ರಗಳನ್ನು ತೀಕ್ಷ್ಣಗೊಳಿಸಲು, ಮತ್ತು ಪರಿಣಾಮಗಳನ್ನು ಸೇರಿಸಲು ಜಿಂಪನ್ನು ಬಳಸ ಬಹುದು.  ಜಿಂಪ್ ನ ಕೈಪಿಡಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಕೋಯರ್ ನ ಬಿಡುಗಡೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ವಿಕಿಯು ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಹಾಗು ತರಗತಿಯ ಬೊಧನೆಯಲ್ಲಿ ನೆರವಾಗಿರುವಂತಹ  ಸಂಪನ್ಮೂಲಗಳ ಒಂದು ಸಂಗ್ರಹ. ಈ ವಿಕಿಯನ್ನು ಶಿಕ್ಷಕರ ಒಂದು ಸಮುದಾಯವು ನಿರ್ಮಿಸಿದೆ. ಈ ಸಮುದಾಯವು ಸತತವಾಗಿ ಕಲಿಕೆ-ಬೊಧನೆ ಸಂಪನ್ಮೂಲಗಳನ್ನು ತಂತ್ರಜ್ಞಾನದ ಬಳಕೆಯಿಂದ ತಯಾರಿಸಿ, ಪರಿಶೀಲಿಸಿ, ಉಸ್ತುವಾರಿ ವಹಿಸಿ,  ಪ್ರಕಟಿಸುತ್ತದೆ. ಈ ಸಂಪನ್ಮೂಲಗಳ ವೆಬ್ ಸೈಟ್, ಕರ್ನಾಟಕದ ಪ್ರೌಢಶಾಲಾ ಗಣಿತ, ವಿಜ್ಞಾನ ಹಾಗು ಸಮಾಜ ವಿಜ್ಞಾನ ಶಿಕ್ಷಕರ 'ವಿಷಯ ಶಿಕ್ಷಕರ ವೇದಿಕೆ' ಮೇರೆಗೆ ರಚಿಸಲಾಗುತ್ತಿದೆ.

KOER English Home page

ಸಂಪನ್ಮೂಲಗಳ ರಚನೆಯು, 2013-14 ರ ಸಾಲಿನ, ಒಂಬತ್ತನೇಯ ತರಗತಿಯ ಗಣಿತ, ವಿಜ್ಞಾನ, ಮತ್ತು ಸಮಾಜ ವಿಜ್ಞಾನ ಸಂಪನ್ಮೂಲಗಳ ರಚನೆಯ ಮೇಲೆ ಗಮನ ಹರಿಸುತ್ತದೆ. ಸಂಪನ್ಮೂಲಗಳ ವಿಧಗಳಲ್ಲಿ, ಶಿಕ್ಷಕರಿಗೆ ಹೆಚ್ಚುವರಿ ಒದುವ ವಿಷಯಗಳು, ಚಟುವಟಿಕೆಗಳು ಮತ್ತು ತರಗತಿಯಲ್ಲಿ ವ್ಯವಹಾರದ ವಿಧಾನಗಳು, ಕ್ಲಿಷ್ಟಕರ ಸಮಸ್ಯೆಗಳಿಗೆ ಸುಳಿವುಗಳು, ಯೋಜನೆ ಕಲ್ಪನೆಗಳು, ಸಿ ಸಿ ಇ ಗೆ ಸಂಪನ್ಮೂಲಗಳು, ಪ್ರಶ್ನೆ ಪತ್ರಿಕೆಗಳು ಹಾಗು ವಿದ್ಯಾರ್ಥಿಗೆ ಬೇಕಾಗುವಂತಹ ಮಾಹಿತಿಗಳು ಒಳಗೊಂಡಿರುತ್ತದೆ. ಈ ಸಂಪನ್ಮೂಲಗಳು ಮನೋ ನಕ್ಷೆಗಳು, ಚಲನ ಚಿತ್ರಗಳು, ಮಲ್ಟಿಮೀಡಿಯಾ ಪ್ರಸ್ತುತಿಗಳು, ಸಿಮ್ಯುಲೇಶನ್ ಗಳು, ಮತ್ತು ಸಹವರ್ತಿಸುವಂತಹ ವೆಬ್ ಸೈಟ್ಗಳನ್ನು ಸಹ ಹೊಂದಿರುತ್ತದೆ.

ಕೋಯೆರ್ ನಲ್ಲಿ ಹೊಸ ವಿಷಯಗಳು

8 ನೇ ತರಗತಿ ವಸ್ತುವಿಷಯಗಳು

8ನೇ ತರಗತಿಯ ಗಣಿತ, ವಿಜ್ಞಾನ, ಮತ್ತು ಸಮಾಜ ವಿಜ್ಞಾನದ ಹೊಸ ಪಠ್ಯಪುಸ್ತಕಗಳಿಗೆ ಸಿ‌ ಟಿ ಇ ಮಂಗಳೂರು ತಯಾರಿಸಿದ ವಿಷಯಗಳು ಕೊಯರ್ ನಲ್ಲಿ ಈಗ ಲಭ್ಯವಿದೆ. ಆ ಸಂಪನ್ಮೂಲಗಳಗಳಿಗೆ ಇಲ್ಲಿ ಕ್ಲಿಕ್ಕಿಸಿ

ಕೋಯರ್ ಕಾರ್ಯಾಗರದ ವಸ್ತುವಿಷಯಗಳು

ಕೋಯರ್ ಕಾರ್ಯಾಗಾರದಿಂದ ಬಂದಂತಹ ಶಿಕ್ಷಕರ ಕೊಡುಗೆಗಳನ್ನು ಕೋಯರ್ ನಲ್ಲಿ ಸೇರಿಸಲಾಗಿದೆ. ಆಹಾರ – ಈ ವಿಷಯದ ಸಂಪನ್ಮೂವನ್ನು ರಚಿಸಿ ಸೇರಿಸಲಾಗಿದೆ. ರಚಿಸಿದ ಶಿಕ್ಷಕರು  ಪೀರ್ ಬಾಶ, ವೈಷಂಪಾಯನ ಜೋಷಿ, ವಲ್ಲಿಬಾಬು. ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕೋಯರ್ ಗೆ ಸಂಪನ್ಮೂಲಗಳನ್ನು ಕೊಡಲು, ಇಲ್ಲಿ ಕ್ಲಿಕ್ಕಿಸಿ ಅಥವಾ koer@karnatakaeducation.org.in ಗೆ ಈ-ಮೇಲ್ ಕಳುಹಿಸಿ. ಸಂಪನ್ಮೂಲಗಳು .odt ಫೈಲ್ಗಳು, ಮನೋ ನಕ್ಷೆಗಳು (ಮೈಂಡ್ ಮ್ಯಾಪ್ಸ್), ಚಲನಚಿತ್ರಗಳ ಲಿಂಕ್ಸ್, ಮತ್ತು ಜಿಯೋಜೀಬ್ರಾದ ಫೈಲ್ಗಳಾಗಿರಬಹುದು. ದಯವಿಟ್ಟು  ಕೊಡುಗೆ ನೀಡುವ ಮುನ್ನ ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಯನ್ನು
ನೋಡಿ.
ಇತ್ತೀಚಿನೆ ಘಟನೆಗಳು

ಜುಲೈ ನಲ್ಲಿ 9ನೇ ತರಗತಿ ಗಣಿತ ಮತ್ತು ವಿಜ್ಞಾನ ವಿಷಯಗಳ 'ಸಂಪನ್ಮೂಲ ರಚನೆ ಕಾರ್ಯಾಗಾರವು' ನಡೆಯಿತು. ಈ ಕಾರ್ಯಗಾರದಲ್ಲಿ ಡಯೆಟ್ (DIET) ಮತ್ತು ಡಿ ಎಸ್ ಈ ಆರ್ ಟಿ ಗುರುತಿಸಿದಂತಹ, ವಿಷಯ ಶಿಕ್ಷಕರ ವೇದಿಕೆಯಲ್ಲಿ ತರಬೇತಿ ಹೊಂದಿದಂತಹ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಈ ಕಾರ್ಯಾಗಾರದಲ್ಲಿ, ಶಿಕ್ಷಕರು ಸಂಪನ್ಮೂಲಗಳ ರಚನೆಗೆ ಬೇಕಾಗುವಂತಹ ಮಾದರಿಯನ್ನು ಚರ್ಚಿಸಿ ಅಭಿವೃಧ್ಧಿಸಿದರು. ಶಿಕ್ಷಕರು ಮುಖ್ಯ ವಿಷಯಗಳು ಮತ್ತು ಅವುಗಳನ್ನು ಸಿದ್ಧಪಡಿಸಿ ವಿಮರ್ಶಿಸಲು ಗುಂಪುಗಳನ್ನು ಗುರುತಿಸಿದರು.

ಆಗಸ್ಟಿನ ಕೊನೆಯ ವಾರದಲ್ಲಿ ಎರಡನೆ ಸುತ್ತಿನ ಕಾರ್ಯಾಗರಗಳು, ಸಂಪನ್ಮೂಲಗಳ ವಿಷಯವನ್ನು ಕೋಯರ್ ನಲ್ಲಿ ಉಪ್ಲೋಡ್ ಮಾಡಲು, ನಡೆಯಲಿದೆ. ವಿಜ್ಞಾನದ ಕಾರ್ಯಾಗಾರಗಳು ಆಗಸ್ಟ್ 19ರ ವಾರದಲ್ಲಿ ನಡೆಯಲಿದೆ. ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳ ಕಾರ್ಯಾಗರಗಳನ್ನು ಸೆಪ್ಟಂಬರ್ ನಲ್ಲಿ ಹಮ್ಮಿಕೊಳ್ಳಲಾಗಿದೆ. 
ಇತ್ತೀಚಿನ ಐ ಸಿ ಟಿ ಗೆ ಸಂಬಂಧಿಸಿದಂತಹ ಘಟನೆಗಳು

ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ (NCERT), ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ (MHRD) ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವು (RMSA) ಎರಡು ದಿನಗಳ  ರಾಷ್ಟ್ರೀಯ ಐ ಸಿ ಟಿ ಸಮ್ಮೇಳನವನ್ನು ಆಗಷ್ಟ್ 13-14, 2013 ರಂದು ನವ ದೆಹಲಿಯಲ್ಲಿ ಆಯೋಜಿಸಿತ್ತು.  ಈ ಸಮ್ಮೇಳನದಲ್ಲಿ, ಮುಕ್ತ ಶೈಕ್ಷಣಿಕ ಸಂಪನ್ಮೂಲ ರಾಷ್ಟ್ರೀಯ ರೆಪೊಸಿಟರಿಯನ್ನು (NROER)ಅನ್ನು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಐ ಸಿ ಟಿ ಪಠ್ಯಕ್ರಮದೊಂದಿಗೆ, ಬಿಡುಗಡೆ ಮಾಡಲಾಯಿತು. ಪಠ್ಯಕ್ರಮದ ವೆಬ್ ಸೈಟ್ ಮತ್ತು  ಸಂಪನ್ಮೂಲಗಳ  ವೆಬ್ ಸೈಟ್ಗಾಗಿ ಕ್ಲಿಕ್ಕಿಸಿ.

ನಿಮಗಿದು ಗೊತ್ತೇ?

ಓ ಈ ಆರ್  ಗಳೆಂದರೇನು?

ಮುಕ್ತ ಹಕ್ಕುಸ್ವಾಮ್ಯ ಪರವಾನಗಿ (open copyright license)ಯಡಿಯಲ್ಲಿ ಪರಿಶೀಲನೆಗೆ, ಮರುಬಳಕೆಗೆ, ಬದಲಾವಣೆಗೆ ಮತ್ತು ಮರುಹಂಚಿಕೆಗೆ ಅನುಮತಿ ಹೊಂದಿರುವಂತಹ ಶೈಕ್ಷಣಿಕ ವಸ್ತುವಿಷಯಗಳಾದ  ಪಠ್ಯಪುಸ್ತಕಗಳು, ಸಂಶೋಧನಾ ಲೇಖನಗಳು, ಚಲನ ಚಿತ್ರಗಳು, ಮೌಲ್ಯಮಾಪನಗಳು, ಸಿಮ್ಯುಲೇಷನ್ಗಳು ಇತ್ಯಾದಿಗಳನ್ನು ಓ ಈ ಆರ್  ಎಂದು ವ್ಯಾಖ್ಯಾನಿಸಲಾಗಿದೆ

ಮ್ಯಾಸಚುಸೆಟ್ಟ್ಸ್ ತಾಂತ್ರಿಕ ವಿದ್ಯಾಲಯವು ತಮ್ಮ ಪಠ್ಯವನ್ನು ಉಚಿತವಾಗಿ ಸಾರ್ವಜನಿಕರಿಗೆ ಕೊಡಲಾರಂಭಿಸಿದಾಗ ಓ ಈ ಆರ್  ಪ್ರಚಲಿತವಾಗಲು  ಪ್ರಾರಂಭವಾಯಿತು. ಅನೇಕ ವಿಷಯಗಳನ್ನು ಮುಕ್ತ ಪಠ್ಯ ವಸ್ತುಗಳಾಗಿ ಸಿದ್ಧಪಡಿಸಲಾಯಿತು. ಶಾಲಾ ಶಿಕ್ಷಣದಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಮೊಟ್ಟ ಮೊದಲ ಅತಿ ದೊಡ್ಡ  ಓ ಈ ಆರ್  ಶಿಕ್ಷಕರ ಶಿಕ್ಷಣಕ್ಕೆ ಸಂಪನ್ಮೂಲಗಳನ್ನು ರಚಿಸಲು ಪ್ರಾರಂಭವಾಯಿತು.

ಶಾಲಾ ಶಿಕ್ಷಣದ ಕ್ಷೇತ್ರದಲ್ಲಿ,  ಓ ಈ ಆರ್ ಅನ್ನು ವೃದ್ಧಿಸಿ ಲಭ್ಯವಾಗುವಂತೆ ಮಾಡಲು, ಭಾರತದಲ್ಲಿ  ಇರುವ ಎರಡು ತೊಡಗುವಿಕೆಗಳು, ಕೋಯರ್ (KOER) ಮತ್ತು ಮುಕ್ತ ಶೈಕ್ಷಣಿಕ ರಾಷ್ಟ್ರೀಯ ಸಂಪನ್ಮೂಲ  ರೆಪೊಸಿಟರಿ (NROER). ಕೋಯರ್, ಕರ್ನಾಟಕದ ಪ್ರೌಢಶಾಲಾ ಶಿಕ್ಷಕರಿಗಾಗಿ ತೆಗೆದು ಕೊಂಡಿರುವಂತಹ, ಡಿ ಎಸ್ ಈ ಆರ್ ಟಿ ಯ ಒಂದು ಮೊದಲಹೆಜ್ಜೆ ಯಾಗಿದೆ. ಇನ್ನೊಂದು ತೊಡಗುವಿಕೆ ಎಂದರ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ (NCERT)ಯ NROER.