ಈ ಇಮೇಲ್ ವೀಕ್ಷಿಸಲು ಸಾಧ್ಯವಿಲ್ಲವೇ? ಬ್ರೌಸರ್ ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ( ಕೊಯರ್) ಸಂಚಿಕೆ
ಡಿಸೆಂಬರ್ 09. 2013,  
ನೀಲಿ ಬಣ್ಣದ ಪದಗಳಿಗೆ 'ವೆಬ್ ಹೈಪರ್ ಲಿಂಕ್ ' ಮಾಡಲಾಗಿದೆ; ಇಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಷಯಕ್ಕೆ ಹೆಚ್ಚಿನ ಮಾಹಿತಿ ಪಡೆಯಬಹುದು.

ಕೊಯರ್ ರಚನೆ:
ನವೆಂಬರ್ ತಿಂಗಳು ಕೊಯರ್ ಕಾರ್ಯಕ್ರಮಗಳು ನಿರಂತರವಾಗಿ ನಡೆದಿವೆ. ಜಿಲ್ಲಾ ಹಂತದ ಅನುಕ್ರಮ ವಿಷಯ ಶಿಕ್ಷಕ ವೇದಿಕೆ ಕಾರ್ಯಗಾರಗಳು ಪ್ರಾರಂಭಗೊಂಡಿವೆ. ಈ ಮೂಲಕ ಇನ್ನೂ ಹೆಚ್ಚು ಶಿಕ್ಷಕರು ಈ ಕೊಯರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹೆಚ್ಚಿನ ಸಂಪನ್ಮೂಲವನ್ನು ಸೇರಿಸಲು ಸಾದ್ಯವಾಗಿದೆ. ಜಿಲ್ಲಾ ಹಂತದ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಿಗೆ ಜಿಲ್ಲಾ ಹಂತದ ಅನುಕ್ರಮ ಕಾರ್ಯಾಗಾರ ನೆಡೆಸಲು ನೆರವಾಗುವ ಕೊಯರ್ ಬಳಕೆ ಮತ್ತು ಕೊಯರ್ ಗೆ ನೆರವು ನೀಡುವ ಬಗೆಗಿನ ೨ನೇ ಹಂತದ ಕಾರ್ಯಾಗಾರ ನವೆಂಬರ್ 25 – 30. ರವರೆಗೆ ನಡೆಯಿತು. ಇದರ ಜೊತೆಗೆ ಸಮಾಜ ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳ ೨ನೇ ತಂಡದ ಕಾರ್ಯಗಾರವೂ ನವೆಂಬರ್ 7 – 9. ಬೆಂಗಳೂರಿನಲ್ಲಿ ನಡೆಯಿತು. ಕೊಯರ್ ಸಂಪನ್ಮೂಲ ರಚನೆ, ಬಳಕೆಯ ಬಗೆಗಿನ ವೆಬ್ ಆಧಾರಿತ ಕಾರ್ಯಗಾರವೂ ಬೆಳಗಾವಿ ವಿಭಾಗದ ಡಯಟ್ ಮತ್ತು ಸಿ.ಟಿ.ಇ ಉಪ್ಯನ್ಯಾಸಕರಿಗೆ ಡಯಟ್ ಧಾರವಾಡ ದಲ್ಲಿ ನವೆಂಬರ್ 11-15 ರವರೆಗೆ ನಡೆಯಿತು.
ಕೊಯರ್ ನಲ್ಲಿನ ಹೊಸ ವಿಷಯ
ಶಿಕ್ಷಕರು ಬಳಸಲು, ವಿಶ್ಲೇಷಿಸಲು ಕೊಯರ್ ನಲ್ಲಿ ಈ ಕೆಳಕಂಡ ಸಂಪನ್ಮೂಲಗಳು ಲಭ್ಯವಿವೆ.
ವಿಜ್ಞಾನ:
ಆಹಾರ
ಜೀವ_ವಿಕಾಸ
ಜೀವನ_ಕ್ರಿಯೆಗಳು

ಸಮಾಜ ವಿಜ್ಞಾನ:
ಪ್ರಾಕೃತಿಕ_ವಿಭಾಗಗಳು
ಕರ್ನಾಟಕದ ವಾಯುಗುಣ ಮಣ್ಣುಗಳು ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತ
ಕ್ರಾಂತಿ_ಹಾಗೂ_ರಾಷ್ಟ್ರ_ಪ್ರಭುತ್ವಗಳ_ಉದಯ
ಕರ್ನಾಟಕದ ಭೂ ಸಂಪತ್ತು

ಜಿಲ್ಲಾ ಅನುಕ್ರಮ ಕಾರ್ಯಾಗಾರಗಳ ಸಂಪನ್ಮೂಲ ಪುಟಗಳು
ಗಣಿತ
ವಿಜ್ಞಾನ
ಸಮಾಜ ವಿಜ್ಞಾನ
ಮುಖ್ಯಶಿಕ್ಷಕರು

9ನೇ ತರಗತಿ ರಚನಾ ಸಂಪನ್ಮೂಲ
ಗಣಿತ
ವಿಜ್ಞಾನ
ಸಮಾಜ_ವಿಜ್ಞಾನ

ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾವಾರು ಅನುಕ್ರಮ ಕಾರ್ಯಾಗಾರಗಳ ವೇಳಾಪಟ್ಟಿಯನ್ನು ಇಲ್ಲಿ. ನೋಡಬಹುದು. ಜಿಲ್ಲಾ ಅನಿಕ್ರಮ ಕಾರ್ಯಗಾರಗಳ ವರದಿ, ಪೋಟೋ ಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.

ಕೊಯರ್ ಗೆ ನೆರವು ನೀಡುವುದು ಹೇಗೆ: 

ಸಂಪನ್ಮೂಲ ಹಂಚಿಕೊಳ್ಳಲು ಈ ವೆಬ್ ಲಿಂಕ್ ನ್ನು ಬಳಸಬಹುದು http://www.karnatakaeducation.org.in/?q=node/292 ಅಥವಾ koer@karnatakaeducation.org.in ಗೆ ಇಮೇಲ್ ಮಾಡಬಹುದು ಮುಂದಿನ ಕೊಯರ್ ಸಂಚಿಕೆಗಾಗಿ ಡಿಸೆಂಬರ್ 31 2013ರೊಳಗೆ ನೆರವು ನೀಡಿ.

ಮುಂದಿನ ಕಾರ್ಯಕ್ರಮಗಳು

ವಿಷಯ ಶಿಕ್ಷಕರ ವೇದಿಕೆಯ ಜಿಲ್ಲಾ ಅನುಕ್ರಮ ಕಾರ್ಯಗಾರಗಳು ಎಲ್ಲಾ ಜಿಲ್ಲೆಗಳಲ್ಲಿಯೂ ಆರಂಭಗೊಂಡಿವೆ . ಈ ವರ್ಷದ ವಿಷಯ ಶಿಕ್ಷಕರ ವೇದಿಕೆಯಲ್ಲಿ ಪ್ರಮುಖ ಅಂಶಗಳೆಂದರೆ:
  1. ಪಠ್ಯಪುಸ್ತಕ ಪಠ್ಯಕ್ರಮವನ್ನು ಹೇಗೆ ಭೋದಿಸಬಹುದು- ಏನು ಭೋದಿಸಬೇಕು, ಯಾವ ರೀತಿಯ ಸಂಪನ್ಮೂಲಗಳು ಬೇಕು
  2. ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲವನ್ನು ಹೇಗೆ ಬಳಸಿ ತರಗತಿ ಭೋದನೆಗೆ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು
  3. ವಿದ್ಯುನ್ಮಾನ ಕಂಪ್ಯೂಟರ್ ಕೌಶಲ ಹೆಚ್ಚಿಸಿಕೊಳ್ಳುವುದು- ವಿಷಯ ಶಿಕ್ಷಕರ ಇಮೇಲ್ ವೇದಿಕೆ ಬಳಕೆಯ ಮೂಲಕ ಹಂಚಿಕೆ
  4. ICT ಪರಿಕರಗಳ ಬಳಕೆ- ಭೋದನೆಯಲ್ಲಿ ಪೋಟೋ, ವೀಡಿಯೋಗಳನ್ನು ಬಳಸುವುದು.
  5. ಕೊಯರ್ ನಲ್ಲಿಸಂಪನ್ಮೂಲ ಬಳಕೆ ಹೇಗೆ ಮತ್ತು ಸಂಪನ್ಮೂಲಗಳ ಕುರಿತು ಚಟುವಟಿಕೆಗಳನ್ನು ಹಂಚಿಕೊಳ್ಳುವುದು ಹೇಗೆ ಮತ್ತು ನೆರವು ಎಂಬುದನ್ನು ಅರ್ಥೈಸಿಕೊಳ್ಳುವುದು.
  6. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯದ ಸಿ.ಸಿ.ಇ ಮೌಲ್ಯಮಾಪನ ಚೌಕಟ್ಟನ್ನು ಅರ್ಥೈಸಿಕೊಳ್ಳುವುದು.
ಕೊಯರ್ ರಚನೆ ಮತ್ತು ಬಳಕೆಯ ಬಗೆಗಿನ ಮುಖ್ಯ ಶಿಕ್ಷಕರ ವೇದಿಕೆಯ 2 ನೇ ತಂಡದ ಕಾರ್ಯಾಗಾರವನ್ನು ಡಿಸೆಂಬರ್ 16-21 ರವರೆಗೆ ಬೆಂಗಳೂರಿನಲ್ಲಿ ನಡೆಸಲು ಯೋಜಿಸಲಾಗಿದೆ.

ಹೊಸ ಅನ್ವಯಕಗಳ ( ಅಪ್ಲಿಕೇಶನ್) ಕಲಿಕೆ

ಒಂದು ಪರಿಕಲ್ಪನೆಯನ್ನು ವಿವಿಧ ಆಯಾಮಗಳಲ್ಲಿ ನೋಡಲು ಮತ್ತು ವಿವಿಧ ಆಲೋಚನೆಗಳಿಗೆ ಒಳಪಡಿಸುವಲ್ಲಿ ಪ್ರೀ ಮೈಂಡ್ ಉತ್ತಮ ಪರಿಕರವಾಗಿ ಬಳಕೆಯಾಗುತ್ತದೆ. ಮನಸ್ಸಿನ ಒಳಗೆ ಮತ್ತು ಹೊರಗೆ ಇರುವ ಆಲೋಚನೆಗಲನ್ನು ಹೊರಹಾಕುವ ಸುಲಭ ವಿಧಾನವೇ ಪ್ರೀ ಮೈಂಡ್, ನಮ್ಮ ಯೋಚನೆಗಳನ್ನು ಪರಿಕಲ್ಪನೆಗಳಿಗೆ ಸಂಬಂಧೀಕರಿಸುವಲ್ಲಿ ಪ್ರೀ ಮೈಂಡ್ ಸಹಕಾರಿಯಾಗಿದೆ. ಶಿಕ್ಷಕರು ಈ ವಿಧಾನವನ್ನು ತರಗತಿ ಕೋಣೆಯಲ್ಲಿ ಬಳಸಬಹುದಾಗಿದೆ. ಪ್ರೀ ಮೈಂಡ್ ಬಳಸುವ ವಿಧಾನದ ಕೈಪಿಡಿಗಾಗಿ ಇಲ್ಲಿ ಕ್ಲಿಕ್ಕಿಸಿ.
ನಿಮದಗಿದು ಗೊತ್ತೆ..?

ಜೀಮೇಲ್ ನಲ್ಲಿ ಕೆಲವು ಸಲ ನಮಗೆ ಬರುವ ಮುಖ್ಯವಾದ ಇಮೇಲ್ ಗಳು ಸ್ಯ್ಪಾಮ್ (SPAM) ಪೋಲ್ಡರ್ ಗೆ ಹೋಗುತ್ತವೆ. ಇದರಿಂದ ಕೆಲವು ಮುಖFಯವಾದ ಇಮೇಲ್ ಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಆಗಾಗ್ಗೆ ಸ್ಪ್ಯಾಮ್ ಪೋಲ್ಡರ್ ನ್ನು ಸಹ ನಾವು ಚೆಕ್ ಮಾಡಿಕೊಳ್ಳಬೇಕು . ಸ್ಯ್ಪಾಮ್ ಪೋಲ್ಡರ್ ಗೆ ಹೋದ ಮೇಲ್ ಕೇವಲ 30ದಿನಗಳ ತನಕ ಇರುತ್ತದೆ ನಂತರ ಡಿಲೀಟ್ ಆಗಿಬಿಡುತ್ತದೆ. ಇದನ್ನು ತಪ್ಪಿಸಲು , ಸ್ಪ್ಯಾಮ್ ಪೋಲ್ಡರ್ ನಲ್ಲಿ ಮೇಲ್ ಓಪನ್ ಮಾಡಿದಾಗ ಆ ಮೇಲ್ ನ ಮೇಲ್ಬಾಗದಲ್ಲಿ 'NOT SPAM' ಎಂಬುದನ್ನು ಕ್ಲಿಕ್ ಮಾಡಿ. ಸ್ಪ್ಯಾಮ್ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ. ಕ್ಲಿಕ್ ಮಾಡಿ. ಇಮೇಲ್ ಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ಉಳಿಸಿಕೊಳ್ಳಬಹುದಾಗಿ. ಪೋಲ್ಡರ್ ಮತ್ತು ಇಮೇಲ್ ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಬಗೆಗಿನ ಕೈಪಿಡಿಗಾಗಿ ಇಲ್ಲಿ ಕ್ಲಿಕ್ ಮಾಡಿ.