ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ಸುದ್ದಿ ಪತ್ರ - ಅಕ್ಟೋಬರ್  18, 2013
ಈ ಸಂಚಿಕೆಯಲ್ಲಿ

ಕೋಯರ್ ನ ರಚನೆ
ಕೊಯರ್ ನಲ್ಲಿನ ಹೊಸ ವಿಷಯ
ಮುಂಬರುವ ಕಾರ್ಯಕ್ರಮಗಳು
ನಿಮಗಿದು ಗೊತ್ತೇ?


ಹೊಸ ತಂತ್ರಾಂಶವನ್ನು ಕಲಿಯಿರಿ

ನಮ್ಮ ಫೋಟೋಗಳನ್ನು  ಅಂತರ್ಜಾಲಕ್ಕೆ  ಸುಲಭವಾಗಿ ಅಪ್ ಲೋಡ್ ಮಾಡಲು "ಪಿಕಾಸ" ವನ್ನು ಬಳಸಬಹುದಾಗಿದೆ.  ನಮ್ಮ ಜಿ-ಮೇಲ್ ಐಡಿಯನ್ನು ಬಳಸಿ ಪಿಕಾಸದಲ್ಲಿ ನಮ್ಮದೇ ಹೊಸ ಖಾತೆ ತೆರೆದು ನಮ್ಮ ಪೋಟೋಗಳನ್ನು  ಅಪ್ ಲೋಡ್ ಮಾಡಿಕೊಳ್ಳಬಹುದು. ಮತ್ತು ಇತರರೊಡನೆ ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ.
ಪೋಟೋ ಗಳನ್ನು ಅಪ್ ಲೋಡ್ ಮಾಡುವ " ಕೈಪಿಡಿ ಸಾಹಿತ್ಯ" ಕ್ಕಾಗಿ  ಇಲ್ಲಿ ಕ್ಲಿಕ್ ಮಾಡಿಮಾಡಿ 

ಕೋಯರ್ (KOER) ರಚನೆ

ಸೆಪ್ಟೆಂಬರ್ ಮಾಹೆಯಲ್ಲಿ ದಸರಾ ರಜೆಯ ತನಕವೂ ಕೊಯರ್ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಮಾಜ ವಿಜ್ಙಾನ ಶಿಕ್ಷಕರಿಂದ  ಸಂಪನ್ಮೂಲ ಅಭಿವೃದ್ದಿ ಪಡಿಸುವ  ಮೊದಲ ಕೊಯರ್ ಕಾರ್ಯಾಗಾರವನ್ನು ಸೆಪ್ಟೆಂಬರ್ 10-14 ರವರೆಗೆ  ನಡೆಸಲಾಯಿತು. ಜಿಲ್ಲಾ ಹಂತದ ಕೊಯರ್ ಕಾರ್ಯಾಗಾರಕ್ಕೆ ಉಪಯೋಗವಾಗುವಂತೆ ಸಂಪನ್ಮೂಲ ವ್ಯಕ್ತಿಗಳಿಗೆ 'ಕೊಯರ್ ಬಳಕೆ ಮತ್ತು ಕೊಯರ್ ಗೆ ನೆರವು' ನೀಡುವ ಬಗ್ಗೆ  ಕಾರ್ಯಾಗಾರ ನಡೆಸಲಾಯಿತು, ಈ ವಿಜ್ಙಾನ ಕಾರ್ಯಾಗಾರವು ಸೆಪ್ಟಂಬರ್ 16-21 ರವರೆಗೆ ಮತ್ತು ಗಣಿತ ಕಾರ್ಯಾಗಾರವು ಸೆಪ್ಟಂಬರ್ 23-28 ರವರೆಗೆ ನಡೆಯಿತು.

ಈ ಕಾರ್ಯಗಾರಲ್ಲಿ ವಿಷಯ ಶಿಕ್ಷಕರು ಕೊಯರ್ ಗೆ ಸಂಪನ್ಮೂಲ ರಚಿಸಿ, ಪ್ರತಿ ಅದ್ಯಾಯಗಳಿಗೂ ಸಂಪನ್ಮೂಲ ಸಂಗ್ರಹಾಲಯ  ಅಭಿವೃದ್ದಿಪಡಿವ ಕೆಲಸ ಮಾಡಿದರು. ಈ ಕಾರ್ಯಗಾರದಲ್ಲಿ ಸಿ.ಸಿ.ಇ ಗೆ ಸಂಬಂದಿಸಿದ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸಲಾಯಿತು. ವಿಜ್ಙಾನ  ಮತ್ತು  ಗಣಿತ ವಿಷಯಗಳನ್ನು ಮೌಲ್ಯಮಾಪನ ಮಾಡಲು ಸಿ.ಸಿ.ಇ ಗಾಗಿ ಒಂದು ಚೌಕಟ್ಟನ್ನು  ರಚಿಸಿ ಕೊಯರ್ ನಲ್ಲಿ ಹಂಚಿಕೊಳ್ಳಲಾಗಿದೆ.   ಡಯಟ್ ಮತ್ತು  ಸಿಟಿಇ  ಉಪನ್ಯಾಸಕರಿಗೆ ಕೊಯರ್ ರಚನೆ ಮತ್ತು ಬಳಕೆಯ ಬಗ್ಗೆ  ತರಬೇತಿ ನಡೆಸುವ ಬಗ್ಗೆ  ಸಿ.ಟಿ.ಇ ಗುಲ್ಬರ್ಗಾ  ದಲ್ಲಿ ಕಾರ್ಯಾಗಾರ ನಡೆಸಲಾಯಿತು. ಕೊಯರ್ ರಚನೆ, ಬಳಕೆ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ  ಮುಖ್ಯಶಿಕ್ಷಕರಿಗೆ  ಅಕ್ಟೋಬರ್ 7-12 ರವರೆಗೆ ಮುಖ್ಯ ಶಿಕ್ಷಕ ವೇದಿಕೆಯ ಕೊಯರ್ ಕಾರ್ಯಾಗಾರ ನಡೆಸಲಾಯಿತು .


ಕೊಯರ್ ನಲ್ಲಿನ ಹೊಸ ವಿಷಯ

ಈ ಕೆಳಕಂಡ ಸಂಪನ್ಮೂಲಗಳು ಕೊಯರ್ ನಲ್ಲಿ  ಲಭ್ಯವಿವೆ

NCERT ಪಠ್ಯಪುಸ್ತಕಗಳನ್ನು ಕೋಯರ್ ಗೆ ಲಿಂಕ್ ಮಾಡಲಾಗಿದೆ.
8,9 ಮತ್ತು 10 ತರಗತಿಯ ಸಮಾಜ ವಿಜ್ಞಾನ ಅದ್ಯಾಯಗಳಿಗೆ NCERT ಪಠ್ಯಪುಸ್ತಕಗಳನ್ನು  ಲಿಂಕ್ ಮಾಡಲಾಗಿದ್ದು, ಕೊಯರ್ ನಲ್ಲಿ ಲಭ್ಯವಿವೆ.
ಕೊಯರ್ ನಲ್ಲಿ ಎಲ್ಲಾ ವಿಷಯದ ಪ್ರತಿ ಅದ್ಯಾಯಗಳ ಹೆಸರನ್ನು ಹಂಚಿಕೊಳ್ಳಲಾಗಿದೆ, ನಮಗೆ ಬೇಕಾದ ಅದ್ಯಾಯವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. 

ನಿಮ್ಮ ಕೊಡುಗೆ ಕೋಯರ್ (KOER) ಗೆ ನೀಡುವುದು ಹೇಗೆ?

ಸಂಪನ್ಮೂಲ ಹಂಚಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ, ಅಥವ koer@karnatakaeducation.org.in  ಗೆ ಈಮೇಲ್ ಕಳುಹಿಸಿ . ಮುಂದಿನ ಕೋಯರ್ ಸುದ್ದಿ ಪತ್ರಕ್ಕೆ ನಿಮ್ಮ ಕೊಡುಗೆಗಳನ್ನು  ದಯವಿಟ್ಟು   ನವೆಂಬರ್  1, 2013 ರ ಒಳಗೆ ಕಳುಹಿಸಿ.
ಮುಂಬರುವ ಕಾರ್ಯಕ್ರಮಗಳು

ಕೊಯರ್ ನ ಬಳಕೆ ಮತ್ತು ಮುಕ್ತ ಸಂಪನ್ಮೂಲಗಳ ವಿಮರ್ಶೆ ಮತ್ತು  ಅವಲೋಕನದ ಬಗ್ಗೆ  ಡಯಟ್  ಉಪನ್ಯಾಸಕರಿಗಾಗಿ ಬೆಂಗಳೂರಿನಲ್ಲಿ  ವೆಬ್ ಆಧಾರಿತ ತರಬೇತಿ ಕಾರ್ಯಗಾರವನ್ನು  ಯೋಜಿಸಲಾಗಿದೆ.
ಜಿಲ್ಲಾ ಹಂತದ ತರಬೇತಿ ಕಾರ್ಯಕ್ರಮಗಳು ನವೆಂಬರ್ ಮಾಹೆಯಿಂದ ಆರಂಭವಾಗಲಿವೆ.  ಜಿಲ್ಲಾ ಹಂತದ ತರಬೇತಿಗಳ ಸಂಪನ್ಮೂಲಗಳನ್ನು ಕೊಯರ್ ನಲ್ಲಿ ಹಂಚಿಕೊಳ್ಳಲಾಗುವುದು. 
ನಿಮಗಿದು ಗೊತ್ತೇ?

ಸ್ಪೋಕನ್ ಟ್ಯುಟೋರಿಲ್ ಅಂತರ್ಜಾಲದಲ್ಲಿ   ಇಂದು ಶೈಕ್ಷಣಿಕ ಬಳಕೆಗಾಗಿ ಹಾಗು ಸ್ವ-ಕಲಿಕೆಗಾಗಿ ಹಲವು ಸಾಪ್ಟವೇರ್ ಅಪಲ್ಲಿಕೇಶನ್ ಗಳ  ವಿಡಿಯೋಗಳು ನಮಗೆ ಸುಲಭವಾಗಿ ದೊರೆಯುತ್ತವೆ. ಇದು  'ಮಾನವ ಸಂಪನ್ಮೂಲ     ಅಭಿವೃದ್ದಿ  ಸಚಿವಾಲಯ ದ “ National Mission on Education through ICT ” ಎಂಬ ಮೊದಲ ಉಪಕ್ರಮವಾಗಿದೆ. .   http://spoken-tutorial.org/   ವೆಬ್ ಸೈಟ್ ಮೂಲಕ ,  ಉಬುಂಟು, ಲಿಬ್ರೆ ಆಪೀಸ್, ಜಿಯೋಜೀಬ್ರಾ, ಪೈರ್ ಪಾಕ್ಸ್ ಮತ್ತು ಪೋಟೋ ಎಡಿಟಿಂಗ್ (GIMP) ಗೆ ಸಂಬಂದಿಸಿದ ಸಾಹಿತ್ಯಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ನೀಲಿ ಬಣ್ಣದ ಪಠ್ಯವನ್ನು (ಹೈಪರ್ ಲಿಂಕ್ಗಳನ್ನು) ಕ್ಲಿಕ್ಕಿಸಿ.