ಈ ಇಮೇಲ್ ವೀಕ್ಷಿಸಲು ಸಾಧ್ಯವಿಲ್ಲವೇ? ಬ್ರೌಸರ್ ನಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ಸುದ್ದಿ ಪತ್ರ - ಸೆಪ್ಟೆಂಬರ್ 5, 2013
ಈ ಸಂಚಿಕೆಯಲ್ಲಿ

ಕೋಯರ್ ನ ತಯಾರಿ
ಎನ್ ಸಿ ಈ ಆರ್ ಟಿ  ಪಠ್ಯಪುಸ್ತಕಗಳ ಲಿಂಕ್ ಕೋಯರ್ ನಲ್ಲಿ
ಮುಂಬರುವ ಕಾರ್ಯಕ್ರಮಗಳು
ನಿಮ್ಮ ಗಮನಕ್ಕೆ
ನಿಮಗಿದು ಗೊತ್ತೇ?


ಹೊಸ ತಂತ್ರಾಂಶವನ್ನು ಕಲಿಯಿರಿ

Openshot logoಒಂದು ಸರಳವಾದ ಚಲನ ಚಿತ್ರ ವನ್ನು ಸಂಪಾದಿಸುವ ತಂತ್ರಾಂಶವಾದ ಓಪನ್ ಶಾಟ್ ವಿಡೀಯೋ ಎಡಿಟರ್ ಅನ್ನು ಕಲಿಯಿರಿ. ಓಪನ್ ಶಾಟನ್ನು ಚಿತ್ರಗಳನ್ನು ಜೋಡಿಸಿ ಚಲನ ಚಿತ್ರವನ್ನು ಮಾಡಲು, ಚಲನ ಚಿತ್ರಗಳನ್ನು ಸಂಪಾದಿಸಲು, ಸಂಗೀತವನ್ನು ಸೇರಿಸಲು, ಚಲನಚಿತ್ರಗಳಿಗೆ ಉಪಶೀರ್ಷಿಕೆಗಳನ್ನು ಸೇರಿಸಲು ಬಳಸಬಹುದು. ಈ ತಂತ್ರಾಂಶವನ್ನು ಕೋಯರ್ (KOER) ಸಂಪನ್ಮೂಲಗಳನ್ನು ರಚಿಸಲು ಬಳಸಬಹುದು.

ಕೋಯರ್ (KOER) ನ ತಯಾರಿ

ಆಗಸ್ಟ್ 29 ರಿಂದ 30 ರವರಗೆ ವಿಜ್ಞಾನ ಶಿಕ್ಷಕರಿಗೆ ಕೋಯರ್ (KOER)  ಸಂಪನ್ಮೂಲಗಳನ್ನು ವೃದ್ಧಿಸುವ ಎರಡನೇಯ ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ, ಶಿಕ್ಷಕರು ಪರಿಕಲ್ಪನಾ ನಕ್ಷೆಗಳು, ಹಲವಾರು ಸಂಪನ್ಮೂಲಗಳ ಪುಟಗಳನ್ನು ವಿಕಿಯಲ್ಲಿ ರಚಿಸಿದರು ಮತ್ತು ಇತರೆ ಹಲವು ಸಂಪನ್ಮೂಲಗಳ ಪುಟಗಳನ್ನು ಹೇಗೆ ಜೀವ_ಭೂ_ರಾಸಾಯನಿಕ_ಚಕ್ರಗಳು, ಕೋಶ_ವಿಭಜನೆ, ಜೀವ_ವಿಕಾಸ, ಆಹಾರ, ಜೀವನ_ಕ್ರಿಯೆಗಳು, ಬೆಳಕು, ನೈಸರ್ಗಿಕ_ಸಂಪನ್ಮೂಲಗಳು ಮತ್ತು  ಸೂಕ್ಷ್ಮಜೀವಿಗಳ_ಪ್ರಪಂಚ  ಅಧ್ಯಾಯಗಳಿಗೆ ಲಿಂಕ್ (ಸಂಪರ್ಕ ಕೊಂಡಿ)ಮಾಡುವುದು ಎನ್ನುವುದನ್ನು ಕಲಿತರು. ಸಿ ಸಿ ಇ (CCE) ಅಡಿಯಲ್ಲಿ, ವಿಜ್ಞಾನದ ಮೌಲ್ಯಮಾಪನದ ಚೌಕಟ್ಟನ್ನು ಸಹ, ಶಿಕ್ಷಕರು ರಚಿಸಿದರು.
ಗಣಿತ ಶಿಕ್ಷಕರಿಗೆ ಎರಡನೇಯ ಕಾರ್ಯಾಗಾರವು ಸೆಪ್ಟಂಬರ್ 2 ರಿಂದ 4 ರ ವರಗೆ ನಡೆಯಿತು. ಶಿಕ್ಷಕರು ಬ್ಯಾಂಕ್_ವ್ಯವಸ್ಥೆ , ಬಹುಭುಜಾಕೃತಿಗಳುಗಣಗಳು, ಸಂಖ್ಯಾಶಾಸ್ತ್ರ, ವರ್ಗಮೂಲ ಮತ್ತು ಮಾರ್ಪು, ಈ ವಿಷಯಗಳನ್ನು ಕುರಿತು ಕೆಲಸ ಮಾಡಿದರು.ಎನ್ ಸಿ ಈ ಆರ್ ಟಿ (NCERT) ಪಠ್ಯಪುಸ್ತಕಗಳ ಲಿಂಕ್ ಕೋಯರ್ (KOER) ನಲ್ಲಿ

8, 9, ಮತ್ತು 10 ನೇ ತರಗತಿಯ, ಗಣಿತ ಹಾಗು ವಿಜ್ಞಾನದ, ಎನ್ ಸಿ ಈ ಆರ್ ಟಿ (NCERT) ಪಠ್ಯಪುಸ್ತಕಗಳ ಲಿಂಕ್ ಗಳು ಕೋಯರ್ (KOER) ನಲ್ಲಿ ಲಭ್ಯವಿದೆ.

ಪ್ರತ್ಯೇಕ ಅಧ್ಯಾಯಗಳ ಪಟ್ಟಿ  ಕೋಯರ್ (KOER) ನಲ್ಲಿ ಲಭ್ಯವಿದೆ, ಹೀಗಾಗಿ ನಮಗೆ ಬೇಕಾದ ಅಧ್ಯಾಯವನ್ನು ನಾವು ಆಯ್ದು ಕೊಳ್ಳಬಹುದು. 


ನಿಮ್ಮ ಕೊಡುಗೆ ಕೋಯರ್ (KOER) ಗೆ ನೀಡುವುದು ಹೇಗೆ?

ವಿಷಯಗಳನ್ನು ಮಂಡಿಸಲು ಇಲ್ಲಿ ಕ್ಲಿಕ್ಕಿಸಿ, ಅಥವ koer@karnatakaeducation.org.in  ಗೆ ಈಮೇಲ್ ಕಳುಹಿಸಿ . ಮುಂದಿನ ಕೋಯರ್ ಸುದ್ದಿ ಪತ್ರಕ್ಕೆ ನಿಮ್ಮ ಕೊಡುಗೆಗಳನ್ನು  ದಯವಿಟ್ಟು ಸೆಪ್ಟೆಂಬರ್ 12, 2013 ರ ಒಳಗೆ ಕಳುಹಿಸಿ.

ಮುಂಬರುವ ಕಾರ್ಯಕ್ರಮಗಳು

ಸೆಪ್ಟೆಂಬರ್ 10 ರಿಂದ 14 ರ ವರೆಗೆ, ಸಮಾಜ ವಿಜ್ಞಾನದ ವೆಬ್ ಆಧಾರಿತ ಸಂಪನ್ಮೂಲಗಳನ್ನು ರಚಿಸಲು, ಸಂಪನ್ಮೂಲ ರಚಿಸುವ ಕಾರ್ಯಾಗಾರವನ್ನು ಕೋಯರ್ (KOER) ಸಮಾಜ ವಿಜ್ಞಾನಕ್ಕಾಗಿ  ಹಮ್ಮಿಕೊಳ್ಳಲಾಗಿದೆ.

ವಿಷಯ ಶಿಕ್ಷಕರ ವೇದಿಕೆ ತರಬೇತಿ ಕಾರ್ಯಕ್ರಮವು ಸೆಪ್ಟಂಬರ್ ತಿಂಗಳ ಮೂರನೇ ವಾರದಲ್ಲಿ ಹಮ್ಮಿಕೊಳ್ಳುವ  ಸಾದ್ಯತೆ ಇದೆ.  ಈ ತರಬೇತಿ ಕಾರ್ಯಕ್ರಮದ  ಉದ್ದೇಶವು ಕರ್ನಾಟಕದ ಶಿಕ್ಷಕರಿಗೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಬಳಸುವುದರ ಬಗ್ಗೆ ತರಬೇತಿ ನೀಡುವುದು ಮತ್ತು ಕೋಯರ್ (KOER) ಸಮುದಾಯವನ್ನು ಬೆಳೆಸುವುದಾಗಿದೆ. 
ನಿಮ್ಮ ಗಮನಕ್ಕೆ

Radha and Rajesh ICT Awardವಿಷಯ ಶಿಕ್ಷಕರ ವೇದಿಕೆಯ ಶಿಕ್ಷಕರಾದ ರಾಧಾ ನರ್ವೆ (ಸರ್ಕಾರಿ ಪ್ರೌಢ ಶಾಲೆ, ಬೇಗೂರು) ಹಾಗು ರಾಜೇಶ್ ವೈ ಎನ್ (ಸರ್ಕಾರಿ ಪ್ರೌಢ ಶಾಲೆ, ಮಲ್ಲೂಪುರ), ಇವರು ವಿಷಯ ಶಿಕ್ಷಕರ ವೇದಿಕೆಗೆ ನೀಡಿರುವ ಕೊಡುಗೆಗೆ ಶಿಕ್ಷಕರ ದಿನಾಚರಣೆಯಂದು,  ಎಮ್ ಎಚ್ ಆರ್ ಡಿ (MHRD)ಯು  ಇವರಿಗೆ ರಾಷ್ಟ್ರೀಯ ಐ ಸಿ ಟಿ ಪ್ರಶಸ್ತಿಯನ್ನು ನೀಡಿದೆ.  ಶಿಕ್ಷಕರು ಹೇಗೆ ತಮ್ಮ ಕಲಿಕೆ ಬೊಧನೆಯಲ್ಲಿ ಐ ಸಿ ಟಿ ಯನ್ನು ಸಂಘಟಿಸಿದ್ದಾರೆ ಎನ್ನುವುದರನವಲಂಬಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 

ಸರ್ಕಾರಿ ಪ್ರೌಢ ಶಾಲೆ,  ತ್ಯಾಮಗೊಂಡಲು, ನೆಲಮಂಗಳ, ಒಂದು ಐ ಸಿ ಟಿ ಮೇಳಾ ವನ್ನು ಆಗಷ್ಟ್ 26 ಹಾಗು 27 ರಂದು, 9ನೇ ತರಗತಿಯ 180 ವಿದ್ಯಾರ್ಥಿಗಳೊಡನೆ, ಹಮ್ಮಿಕೊಂಡಿತ್ತು.  ಇಡಿ ತರಗತಿಯು ಹಲವಾರು ಯೋಜನೆಗಳನ್ನು  -ಪ್ರಾಯೋಗಿಕವಾಗಿ  ಮತ್ತು ಐ ಸಿ ಟಿ ಸಂಯೋಜನೆಯೊಂದಿಗೆ - ಯೋಜನೆ ಆಧಾರಿತ ಕಲಿಕೆಗಾಗಿ, ತೆಗೆದುಕೊಂಡಿತು. ಯೋಜನೆಗಳು, ಸ್ಥಳೀಯ ಶಾಲೆಯ ಮತ್ತು ಸಮುದಾಯದ ನಕಾಸೆ ಹಾಗು ಅದರೊಡನೆ ಡಿಜಿಟಲ್ ಸಮೀಕ್ಷಗಳ ಹೋಲಿಕೆ, ಶಾಲೆಯ ಸುತ್ತಲ್ಲಿನ ಜೀವವೈವಿಧ್ಯದ (ಸಸ್ಯಗಳ ಸಮೀಕ್ಷೆ)ಯನ್ನು  ದಾಖಲೆ, ಸಮುದಾಯ ವಿವರಿಸಲು ಹೇಳುವ ಡಿಜಿಟಲ್ ಕಥೆ, ಡೇಟಾ ಸಂಗ್ರಹಣೆ ಮತ್ತು ವಿದ್ಯಾರ್ಥಿಗಳ ಕುಟುಂಬದ ಇತಿಹಾಸದ ವಿಶ್ಲೇಷಣೆಗಳನ್ನು ಒಳಗೊಂಡಿತ್ತು.


ನಿಮಗಿದು ಗೊತ್ತೇ?

ಕ್ರಿಯೇಟಿವ್ ಕಾಮನ್ಸ್ ಪರವಾನಗಿ

ಲೇಖಕರು ಸಂಪನ್ಮೂಲಗಳ ಬಳಕೆಯನ್ನು ನಿರ್ಬಂಧಿಸುತ್ತಾರೆ, ಇದಕ್ಕೆ  'ಹಕ್ಕುಸ್ವಾಮ್ಯ' (copyright) ಎನ್ನುತ್ತಾರೆ ಎಂದು ತಿಳಿದಿದೆ. ಇಂತಹ ನಿರ್ಬಂಧ ಜ್ಞಾನದ ಮುಕ್ತ ಹಂಚಿಕೆಯು ತಡೆಯುತ್ತದೆ.  'Copy Left - ಕಾಪಿ ಲೆಫ್ಟ್  ' ಎನ್ನುವ ಒಂದು ಪರಿಕಲ್ಪನೆ, ಜ್ಞಾನವನ್ನು ಮುಕ್ತವಾಗಿ ಹಂಚಿಕೊಳ್ಳಳು, ಸಹವರ್ತಿಸಿ,ಇನ್ನಷ್ಟು ಸುಧಾರಿಸಲು ಅನುಮತಿ ನೀಡುತ್ತದೆ. ಒಂದು ಅಂತಹ 'Copy Left - ಕಾಪಿ ಲೆಫ್ಟ್ ' ಪರವಾನಗಿ ಎಂದರೆ ಕ್ರಿಯೇಟಿವ್ ಕಾಮನ್ಸ್  , (CC).  ಕ್ರಿಯೇಟಿವ್ ಕಾಮನ್ಸ್  ಬೇರೆಯವರು ಸೃಷ್ಠಿಸಿದ ಜ್ಞಾನವನ್ನು ಬಳಸಲು, ಮಾರ್ಪಡಿಸಲು, ಸೇರಿಸಲು, ಮತ್ತಷ್ಟು ಸುಧಾರಿಸಲು ಅನುಮತಿ ನೀಡುತ್ತದೆ.   CC ಲೇಖಕರ ಕೊಡುಗೆಗೆ ಸ್ವೀಕೃತಿ ಇಲ್ಲ ಎಂದಲ್ಲ; ಲೇಖಕ ಮುಂದಿನ ಪರಿಷ್ಕರಣೆ ಮತ್ತು ಹಂಚಿಕೆಗಾಗಿ ಅವನ / ಅವಳ ಕೆಲಸ ಬಳಸಲು ಇತರರಿಗೆ ಅನುಮತಿ ನೀಡಿರುತ್ತಾರೆ.  OER ಗಳನ್ನು ಬಳಸಬೇಕಾದರೆ, ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಅತ್ಯಂತ ಅನುಕೂಲಕರ.  ಕೋಯರ್ (KOER) ನ ಎಲ್ಲಾ ಸಂಪನ್ಮೂಲಗಳನ್ನು  CC  ಪರವಾನಗಿ ಮೇಲೆ ಹಂಚಿಕೊಳ್ಳಲಾಗಿದೆ. 

ಹೆಚ್ಚಿನ ಮಾಹಿತಿಗೆ ನೀಲಿ ಬಣ್ಣದ ಪಠ್ಯವನ್ನು (ಹೈಪರ್ ಲಿಂಕ್ಗಳನ್ನು) ಕ್ಲಿಕ್ಕಿಸಿ.