File:Kenjagarahalli.odt

From Karnataka Open Educational Resources
Jump to navigation Jump to search

Kenjagarahalli.odt(file size: 33 KB, MIME type: application/vnd.oasis.opendocument.text)

Warning: This file type may contain malicious code. By executing it, your system may be compromised.

ಕಿರಿಯ ಪ್ರಾಥಮಿಕ ಶಾಲೆ, ಕೆಂಜಗರಹಳ್ಳಿಯಲ್ಲಿ ಸಂಪನ್ಮೂಲ ಕ್ರೋಢಿಕರಣ ಮತ್ತು ಸದ್ಬಳಕೆ ಉಪಕ್ರಮವನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಉಪಕ್ರಮದಡಿಯಲ್ಲಿ ಶಾಲೆಗೆ ಫ್ಯಾನ್‌, ಟ್ಯೂಬಲೈಟ್‌, ಕುಕ್ಕರ್‌, ಮಿಕ್ಸಿ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ವಾಟರ್‌ ಫಿಲ್ಟರ್‌ ಕ್ರೋಢಿಕರಿಸಲು ಯೋಜಿಸಲಾಗಿತ್ತು. ಮುಖ್ಯ ಶಿಕ್ಷಕರು ಪ್ರಾರಂಭದಲ್ಲಿ ಇದನ್ನು ಮಾಡಲು ಹೇಗೆ ಸಾಧ್ಯ ಎಂಬ ಚಿಂತನೆಯಲ್ಲಿ ತೊಡಗಿಕೊಂಡಿದ್ದರು. ನಂತರ ಸಹ ಶಿಕ್ಷಕರೊಂದಿಗೆ ಚರ್ಚಿಸಿ ಎಸ್.ಡಿ.ಎಂ.ಸಿ ಅಧ್ಯಕ್ಷರೊಂದಿಗೆ ಈ ವಿಷಯವನ್ನು ಹಂಚಿಕೊಂಡರು. ಎಸ್.ಡಿ.ಎಂ.ಸಿ ಅಧ್ಯಕ್ಷರು ತಾವೇ ಸತಃ ದಾನಿಗಳೊಂದಿಗೆ ಸಂವಾದಿಸಿ ಸಂಪನ್ಮೂಲ ಕ್ರೋಢಿಕರಿಸುವುದಾಗಿ ತಿಳಿಸಿದರು. ಆದರೆ ಹಲವು ದಿನಗಳು ಕಳೆದರು ಯಾವದೇ ರೀತಿಯ ಪ್ರತಿಕ್ರಿಯೆ ಕಾಣದೇ ಮತ್ತೆ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಅಧ್ಯಕ್ಷರಿಗೆ ಕೇಳಿದರು. ಅಧ್ಯಕ್ಷರು ಯಾವುದೇ ರೀತಿಯ ಕಾರ್ಯನಿರ್ವಹಿಸಿರುವುದಿಲ್ಲ ಎಂಬುದು ತಿಳಿದು ಬರುತ್ತದೆ. ನಂತರ ಮತ್ತೆ ಮುಖ್ಯ ಶಿಕ್ಷಕರು ಸಹ ಶಿಕ್ಷಕರೊಂದಿಗೆ ಕುಳಿತು ಸಂಪನ್ಮೂಲ ಕ್ರೋಢಿಕರಿಸಲು ಕೆಲವೊಂದು ಕಾರ್ಯತಂತ್ರಗಳನ್ನು ರೂಪಿಸಿದರು. ಎಸ್.ಡಿ.ಎಂ.ಸಿ ಸದಸ್ಯರಾದ ಪೋಷಕರೊಂದಿಗೆ ಕುಳಿತು ಕೆಲವು ದಾನಿಗಳ ಹೆಸರುಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿದರು, ನಂತರ ತಮ್ಮ ಸ್ನೇಹಿತರ ಬಳಗದಲ್ಲಿ ಕೆಲವರಿಗೆ ತಮಗಾಗುವಷ್ಟು ಸಹಾಯ ಮಾಡಲು ಮನವೊಲಿಸಿದರು. ಆದರೆ ಪೋಷಕರು ಕೊಟ್ಟ ಕೆಲವು ದಾನಿಗಳು ಮುಖ್ಯ ಶಿಕ್ಷಕರಿಗೆ ಸಹಕರಿಸುವುದಿಲ್ಲ. ನಂತರ ಮತ್ತೇ ಚಿಂತನೆ ಮಾಡಿ ಸಮುದಾಯದಲ್ಲಿ ಒಂದು ಜಾಥಾ ಕಾರ್ಯಕ್ರಮ ಮಾಡಲು ನಿರ್ಧರಿಸಿದರು. ಒಟ್ಟು ಕ್ರೋಢಕರಿಸಬೇಕಾದ ಸಂಪನ್ಮೂಲಗಳಲ್ಲಿ ಮೊದಲ ಆದ್ಯತೆಯನ್ನು ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್‌ಗೆ ಕೊಟ್ಟಿದ್ದು "ಶುದ್ಧ ಕುಡಿಯುವ ನೀರಿಗಾಗಿ ಸಹಾಯ ಹಸ್ತ ನೀಡಿ" ಸಮುದಾಯಾಧಾರಿತ ಜಾಥಾ ಕಾರ್ಯಕ್ರಮವನ್ನು ಶಾಲಾ ಅವಧಿಯ ನಂತರ ಸಂಜೆ 04.30 ರಿಂದ 07.30 ರ ವರೆಗೆ ಮನೆ ಮನೆಗೂ ಹೋಗಿ ಮನವೊಲಿಸಿ ಸುಮಾರು ರೂ. 2500/- ಜೊತೆಗೆ ಶಾಲೆಗೆ ದಾನವಾಗಿ ಜಮೀನು ನೀಡಿದವರು ರೂ. 8000/- ಮೌಲ್ಯವುಳ್ಳ ವಾಟರ್‌ ಫಿಲ್ಟರ್‌ ಕೊಡಿಸುವುದಾಗಿ ಒಪ್ಪಿಕೊಂಡರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಂಗನವಾಡಿ ಕಾರ್ಯಕರ್ತರನ್ನು ತೊಡಗಿಸಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರು ಕೈಗೊಂಡರು. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಿಕ್ಸಿಯನ್ನು ಕೊಡಿಸಲು ಒಪ್ಪಿಕೊಂಡರು, ಜೊತೆಗೆ ಮುಖ್ಯ ಶಿಕ್ಷಕರು ತಮ್ಮ ಸಹ ಶಿಕ್ಷಕರ ಮನವೊಲಿಸಿ ಟ್ಯೂಬ್ ಲೈಟ್‌ ಮತ್ತು ಫ್ಯಾನ್‌ನ್ನು ಸಂಗ್ರಹಿಸುವುದರಲ್ಲಿ ಯಶಸ್ವಿಯಾದರು. ನಂತರ ವಾಟರ್‌ ಫಿಲ್ಟರ್‌ ವ್ಯವಸ್ಥೆ ಕೂಡ ಮಾಡುತ್ತಾರೆ. ಹೀಗೆ ಚಿಕ್ಕ ಸಮುದಾಯದಲ್ಲಿ ಭಾಗೀದಾರರ ಮನವೊಲಿಸಿ, ಅವರ ಸಹಕಾರದಿಂದ ಶಾಲೆಗೆ ರೂ. 15000/- ಮೌಲ್ಯವುಳ್ಳ ಸಂಪನ್ಮೂಲ ಕ್ರೋಢಿಕರಿಸುವಲ್ಲಿ ಮುಖ್ಯ ಶಿಕ್ಷಕರು ಯಶಸ್ವಿಯಾದರು. ಸಮುದಾಯಕ್ಕೆ ಮನವರಿಕೆ ಮಾಡಿದರೆ ಖಂಡಿತವಾಗಿ ಸಹಯೋಗ ನೀಡುತ್ತಾರೆ ಎಂಬು ನಂಬಿಕೆ ಅವರಲ್ಲಿ ಮೂಡಿದೆ. ಕೆಲಸಗಳು ಆಗದಿದ್ದಾಗ ಹಾಗೇ ನಿಲ್ಲದೆ ನಿರಂತರ ಯೋಜನೆ ಮಾಡುತ್ತಾ ಕಾರ್ಯ ನಿರ್ವಹಿಸಬೇಕು ಎಂದು ಹೇಳುತ್ತಾರೆ. ಈ ಉಪಕ್ರಮದ ಅನುಷ್ಟಾನದಿಂದ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಲ್ಲಿ ಆತ್ಮವಿಶ್ವಾಸ ಹಾಗೂ ಭಾಗೀದಾರರಲ್ಲಿ ನಂಬಿಕೆ ಗಟ್ಟಿಯಾಗಲು ಸಾಧ್ಯವಾಯಿತು. Case Study Developed by: Sunitha, C-LAMPS, Ramanagara

File history

Click on a date/time to view the file as it appeared at that time.

Date/TimeDimensionsUserComment
current02:44, 13 March 2013 (33 KB)Guru (talk | contribs)MsUpload

There are no pages that use this file.