Upload workshop short report here (in ODT format), or type it in day wise here
+
+
'''1st Day. 05/01/2015'''
+
+
'''2nd Day. 06/01/2015'''
+
+
ಕನ್ನಡ ಸಾಹಿತ್ಯ ಲೋಕದ ಭೀಷ್ಮ ಎಂದೇ ಖ್ಯಾತರಾದ ಡಿ.ವಿ.ಜಿ. ಯವರ ಕಗ್ಗದ ಸಾಲಿನಿಂದ ಈ ವರದಿಯನ್ನು ಪ್ರಾರಂಭಿಸಲು ಹರ್ಷಿಸುತ್ತಿ ದ್ದೇನೆ.
+
+
ಹೊಸ ಬೇರು ಹಳೆ ಬೇರು ಕೂಡಿರಲು ಮರ ಸೊಬಗು
+
+
ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ
+
+
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
+
+
ಜಸವು ಜನಜೀವನಕ್ಕೆ ಮಂಕುತಿಮ್ಮ
+
+
ಅರ್ಥ: ಹಳೆಯ ಬೇರಿನಿಂದ ಕೂಡಿದ ಮರ ಹೊಸ ಚಿಗುರಿನಿಂದ ಕೂಡಿದಾಗ ಸುಂದರವಾಗಿರುವುದು. ಹಳೆಯ ತತ್ತ್ವಗಳಿಂದ ಕೂಡಿದ ಧರ್ಮ ಹೊಸ ಯುಕ್ತಿಯಿಂದ ಕೂಡಿದರೆ ಚೆನ್ನ. ಪ್ರಾಚೀನ ಋಷಿವಾಣಿಯೊಡನೆ ವಿಜ್ಷಾನ ಕಲೆ ಕೂಡಿದರೆ ಜನಜೀವನ ಸುಂದರವಾಗುತ್ತದೆ. ಕನ್ನಡ ಎಸ್. ಟಿ. ಎಫ್. ತರಬೇತಿಯ ಎರಡನೆಯ ದಿನದ ತರಬೇತಿಯು ಡಯಟ್ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ಅವರ ಉತ್ಸಾಹದ ಮಾತುಗಳಿಂದ ಆರಂಭವಾಯಿತು. ಮೊದಲಿಗೆ ಪ್ರಾರ್ಥನೆ ಟಿ. ಕೃಷ್ಣಶೆಟ್ಟಿ ಅವರ ಮಧುರ ಕಂಠದಿಂದ ಮೂಡಿಬಂತು. ನಾಗರಾಜ ಸರ್ ಇವರು ಮುಂದಾಲೋಚನೆಯ ಮಹತ್ವದ ಬಗ್ಗೆ ತಿಲಿಸುವ ಚಿಂತನೆಯನ್ನು ಮಂಡಿಸಿ ವೃತ್ತಿ ಬಾಂಧವರ ಗಮನ ಸೆಳೆದರು. ತದನಂತರ ಶ್ರೀಮತಿ ಮೀನಾಕ್ಷಿ ಇವರು ಮೊದಲ ದಿನದ ಸಮಗ್ರ ಮತ್ತು ಕಾವ್ಯಮಯವಾದ ವಿಸ್ತೃತ ವರದಿಯನ್ನು ಮಂಡಿಸಿದರು. ವರದಿಯ ಬಗ್ಗೆ ಮೆಚ್ಚುಗೆ ಮತ್ತು ಕಿರು ವಿಮರ್ಶೆ ನಡೆಯಿತು. ಎರಡನೇ ದಿನದ ತರಬೇತಿ ಫಕೀರಪ್ಪ ಅವರಿಂದ ಮಿಂಚಂಚೆ ಖಾತೆ ತೆರೆಯುವ ಬಗ್ಗೆ ವೃತ್ತಿ ಬಾಂಧವರಿಗೆ ಮಾರ್ಗದರ್ಶನ ಮಾಡುವ ಮೂಲಕ ಪ್ರಾರಂಭವಾಯಿತು. ನಮ್ಮೆಲ್ಲರ ಮಿಂಚಂಚೆ ಖಾತೆ ತೆರೆದ ನಂತರ ಪ್ರಾಯೋಗಿಕವಾಗಿ ತನ್ನ ಖಾತೆಗೆ ಮಿಂಚಂಚೆ ಕಳುಹಿಸುವಂತೆ ಹೇಳಿ ಅಗತ್ಯ ಮಾರ್ಗದರ್ಶನ ಒದಗಿಸಿದರು. ಈ ದಿನದ ತರಬೇತಿಯ ಬಹುತೇಕ ಅವಧಿ ಗಣಕ ಯಂತ್ರದೊಂದಿಗಿನ ಸರಸಕ್ಕೆ ಮೀಸಲಾಗಿತ್ತು. ಗಣಕ ಯಂತ್ರದಲ್ಲಿ ಕೀಲಿಮಣೆ ಬಳಕೆಯ ಬಗ್ಗೆ ಸುಬ್ರಹ್ಮಣ್ಯ ಭಟ್ ಅವರು ಉಪಯುಕ್ತ ಮಾಹಿತಿ ನೀಡಿದರು. ಕಲಿಕಾರ್ಥಿಗಳ ಕೋರಿಕೆಯ ಮೇಲೆ ಪುನಃ ಪುನಃ ಮಾಹಿತಿ ಒದಗಿಸಿ ಕಲಿಕೆ ದೃಢಗೊಳ್ಳಲು ಸಹಕರಿಸಿದರು. ಬೆಳಗ್ಗಿನ ಟೀ ವಿರಾಮದ ನಂತರ ಮತ್ತೆ ಸೇರಿದಾಗ ಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಸುಬ್ರಹ್ಮಣ್ಯ ಅವರು ಜಂಟಿಯಾಗಿ ಗಣಕಯಂತ್ರವನ್ನು ಬಳಸುವ ಬಗ್ಗೆ ಪ್ರಾಯೋಗಿಕವಾದ ಮಾಹಿತಿಯನ್ನು ನೀಡಿದರು. ಗಣಕಯಂತ್ರದಲ್ಲಿ ನಮಗೆ ಉಪಯುಕ್ತವಾದ ಅಂತರ್ಜಾಲ ತಾಣಗಳನ್ನು ತಲುಪುವ ಮಾರ್ಗವನ್ನು ಎಳೆ ಎಳೆಯಾಗಿ ತಿಳಿಸಿದರು.
+
ಊಟದ ವಿರಾಮದ ನಂತರ ಮತ್ತೆ ಈ ಹವಾನಿಯಂತ್ತಿತ ಕೊಠಡಿಯಲ್ಲಿ ಸೇರಿದೆವು. ಶ್ರೀ ನಾರಾಯಣ ಮಣೂರು ಇವರಿಂದ "ಬಿದಿರು" ಕವಿತೆಯ ಗಾಯ ನವನ್ನು ಸವಿದೆವು.
+
ನಂತರ ಸುಬ್ರಹ್ಮಣ್ಯ ಭಟ್ ಮತ್ತು ಚಂದ್ರಶೇಖರ ಶೆಟ್ಟಿ ಅವರು ಜಂಟಿಯಾಗಿ ಅಂತರ್ಜಾಲ ಬಳಕೆಯ ವಿಧಾನವನ್ನು ತಿಳಿಸಿದರು. ಈ ನಡುವೆ ಭಾರತೀಯತೆ ಪದ್ಯದ ದೃಶ್ಯ ಸಂಯೋಜನೆ ಯೊಂದಿಗಿನ ಗಾಯನವನ್ನು ಕಂಡು ಕೇಳಿ ಸಂತಸಪಟ್ಟೆವು. ಟರ್ನೆಟ್ ನಿಂದ ನಮಗೆ ಬೇಕಾದ ಮಾಹಿತಿಯನ್ನು ಆಯ್ದುಕೊಂಡು ನಮಗೆ ಅಗತ್ಯವಿರುವಲ್ಲಿ ಉಳಿಸುವುದನ್ನು ತಿಳಿಸಿದರು. ಅದರಂತೆ ಶಿಬಿರಾರ್ಥಿಗಳು ಈ ಕಾರ್ಯದಲ್ಲಿ ಯಶಸ್ವಿಯಾದರು. ಸಂಜೆ ಚಹಾ ವಿರಾಮದ ನಂತರ ಸೇರಿದಾಗ ಅಂತರ್ಜಾಲದಲ್ಲಿ ಅಗತ್ಯವಿರುವ ಚಿತ್ರಗಳನ್ನು ಆಯ್ಕೆ ಮಾಡುವ ಮತ್ತು ಅಗತ್ಯವಿರುವಲ್ಲಿ ಬಳಸುವ ಕಲೆಯನ್ನು ತಿಳಿಸಿದರು.
+
ಈ ದಿನದ ಕೊನೆಯ ಕಲಿಕಾಂಶವಾಗಿ ವೆಬ್ ಲಿಂಕ್ ಸೇವ್ ಮಾಡುವುದನ್ನು ಚಂದ್ರಶೇಖರ ಶೆಟ್ಟಿ ಅವರು ತಿಳಿಸುವಾಗ ಸಮಯ ಸರಿದಿದ್ದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡನೇ ದಿನದ ತರಬೇತಿ ಕ್ತಾಯವಾಯಿತು. ಇಲ್ಲಿ ಗೆ ಎರಡನೇ ದಿನದ ವರದಿಗೆ ಪೂರ್ಣ ವಿರಾಮವನ್ನು ಇಡುತ್ತೇನೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"