Anonymous

Changes

From Karnataka Open Educational Resources
18,713 bytes added ,  12:35, 5 February 2015
Line 173: Line 173:     
===Workshop short report===
 
===Workshop short report===
Upload workshop short report here (in ODT format), or type it in day wise here
+
ಮೊದಲ ದಿನ 27/01/2015
 +
ಕಾರ್ಯಕ್ರಮದ ಆರಂಭವು  ಸರಿಯಾಗಿ 9.00 ಗಂಟೆಗೆ ನೊಂದಣಿ ಮೂಲಕ 3ನೇ ತಂಡದ  ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಆರಂಭಗೊಂಡಿತು. ತರಬೇತಿಗೆ ಆಗಮಿಸಿದ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಆರಂಭಿಸಲಾಯಿತು . ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಬಸವರಾಜ ಪೂಜಾರ ಶ್ರೀ.ಸಂತೋಷ ಗುಣಾರಿ  ಶ್ರೀ ಅರ್ಜುನ ಲಮಾನಿ ಭಾಗವಹಿಸಿದ್ದರು.  ಮೊದಲ ಅವಧಿಯಲ್ಲಿ ಕಂಪ್ಯೂಟರ ತರಬೇತಿಗೆ ಹಾಜರಾದ ತರಬೇತಿದಾರರ ಮನಸ್ಸು ಕಂಪ್ಯೂಟರ ಹತ್ತಿರ ಸೆಳೆದುಕೊಳ್ಳುತ್ತಾ ಎಸ್ ಟಿ ಎಫ್ ಎಂದರೇನು ಅದರ ಉದ್ದೇಶ ಮತ್ತು ಗುರಿಗಳನ್ನು ಹೇಳುತ್ತಾ ಶಿಬಿರಾರ್ಥಿಗಳ ಜವ್ಬಾರಿಯನ್ನು ಮನವರಿಕೆ ಮಾಡಿಕೊಡುತ್ತಾ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ ಗುಣಾರೆರವರು ಶಿಬಿರ್ಥಿಗಳನ್ನು ಹುರುದುಂಬಿಸಿದರು ಅಷ್ಟರೊಳಗೆ ಊಟದ ಸಮಯವಾದ್ದರಿಂದ ಊಟಕ್ಕೆ ವಿರಾಮ ನೀಡಲಾಯಿತು ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಸವರಾಜ ಪೂಜಾರ ಕಂಪ್ಯೂಟರ ಎಂದರೇನು ಅದು ಹೇಗೆ ರಚನೆಯಾಗಿದೆ ಅದರಲ್ಲಿರುವ ಭಾಗಗಳು ಮತ್ತು ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬುದನ್ನು ಸ್ಲೈಡಗಳ ಮೂಲಕ ತೋರಿಸಿ ಆಸಕ್ತಿ ಹುಟ್ಟಿಸಿದರು ಅಷ್ಟೇ ಅಲ್ಲದೇ ಅಂತರ್ ಜಾಲ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅದು ಕೆಲಸ ನಿರ್ವಹಿಸುವ ರೀತಿಯನ್ನು  ಹೇಳುತ್ತಾ ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ ನಮ್ಮಿಂದ ಎಲ್ಲರೂ ಇಮೇಲ ಐಡಿ ಹೊಂದುವಂತೆ ಮಾಡಿದರು ಶ್ರೀ ಅರ್ಜುನ ಲಮಾನಿಯವರು ಮಧ್ಯದಲ್ಲಿ ಸಹಕರಿಸಿ ಎಲ್ಲರೂ ಐಡಿ ಹೊಂದಿದಾಗ ನಮ್ಮ ಸಂತೋಷಕ್ಕೆ ಕೊನೆಯೇ ಇರಲಿಲ್ಲಿ ವೇಳೆ ಆಗಿದೆ ಶಡೌನ ಮಾಡಿ ಎಂದಾಗ ನಾವು ನಮ್ಮ ಕೈಗಡಿಯಾರ ನೋಡಿಕೊಂಡು ಮನಸ್ಸಿಲ್ಲದೇ ಮನೆಗೆ ತೆರಳಿದೇವು.
 +
ಎರಡನೇ ದಿನ 28/01/2015
 +
ಎ.ಟಿ.ಎಫ್. ತರಬೇತಿಯ ೨ ನೇಯ ದಿನ. ಶಿಬಿರಾರ್ಥಿಗಳ ಮುಖದಲ್ಲಿ ಕೌತುಕ . ಹಿಂದಿನ ದಿನ ತೆರೆದ ತಮ್ಮ ಮೇಲ್ ಗಳಿಗೆ ಯಾವ ಯಾವ/ ಯಾರಯಾರ ಸಂದೇಶಗಳು ಬಂದಿರಬಹುದೆಂಬ ಕಾತರ. ತೆರೆದು ನೋಡಿದವರ ವದನಗಳಲ್ಲಿ ಸಾರ್ಥಕಥೆಯ ಮಹಾಪೂರ.  ಶ್ರೀ ಸಂತೋಷ ಗುಣಾರೆಯವರು  ಮೇಲ್ ನ್ನು ತೆರೆದು ನೋಡುವ , ಉತ್ತರಿಸುವ, ಉಳಿಸುವ ವಿಧಾನಗಳನ್ನು ಸವಿವರವಾಗಿ ಹಂತ ಹಂತವಾಗಿ ತಿಳಿಸಿದರು. ನಂತರದ ಅವಧಿ ಪ್ರಾಯೋಗಿಕ ಕಾರ್ಯಕ್ಕಾಗಿ. ಚಹಾ ವಿರಾಮದ ನಂತರವೂ ಶಿಬಿರಾರ್ಥಿಗಳು ಅಂತರ್ಜಾಲದಲ್ಲಿರುವ ವಿವರ, ಚಿತ್ರ ಹಾಗೂ ಲಿಂಕ್ ಗಳನ್ನು ಉಳಿಸುವ, ಕಾಪಿ ಮಾಡುವ, ಪೇಸ್ಟ್ ಮಾಡುವ ಕೆಲಸದಲ್ಲಿ ಪೇಸ್ಟ್ ಆಗಿಯೇ ಹೋಗಿದ್ದರು. ಅಷ್ಟರಲ್ಲಿ ಅಂತರ್ಜಾಲದ ಬಲೆ ಹರಿದು ಹೋಗಿದ್ದು ಗಮನಕ್ಕೆ ಬಂದಾಗ ಆತಂಕ ಆಕಳಿಕೆ ಆರಂಭ ವಾದರೂ ಕೆಲವೇ ಕ್ಷಣಗಳಲ್ಲಿ ಬಲೆ ಸರಿಯಾದದ್ದು ತಂತ್ರಜ್ಞರ ಕೈಚಳಕಕ್ಕೆ ಸಾಕ್ಷಿಯಾಗಿತ್ತು. ನಂತರ ಶ್ರೀಯುತ ಅರ್ಜುನ ಲಮಾನಿಯವರು ಬುಕ್ ಮಾರ್ಕ್ ಮತ್ತು ಇತಿಹಾಸಗಳ ಬಗ್ಗೆ ತಿಳಿಸಿಕೊಟ್ಟರು. ಕೊನೆಯಲ್ಲಿ ಕೀಲಿಮಣೆಯಲ್ಲಿ ಎಲ್ಲೆಲ್ಲಿ ಯಾವ ಬೆರಳುಗಳನ್ನು ಇಟ್ಟು ಅಕ್ಷರಗಳನ್ನು ಅಚ್ಚು ಮಾಡಬೇಕೆಂದು ತಿಳಿಸಿದರು.  ಎರಡನೆಯ ದಿನದ ತರಬೇತಿ ಸಾರ್ಥಕವೆನಿಸುವುದರಲ್ಲಿ ಸಮದೇಹವೇ ಇಲ್ಲ. ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು..
 +
ಮೂರನೇ ದಿನ 29/01/2015
 +
ಎಲ್ಲರಿಗೂ ನಮಸ್ಕರಿಸುತ್ತಾ ಎರಡನೇ  ದಿನದ ವರದಿಯನ್ನು ತಂಡದ ಪರವಾಗಿ ವಾಚಿಸುತ್ತಿದ್ದೇನೆ. ಕಳೆದೆರಡು ದಿನಗಳಿಂದ ಅಂತರ್ಜಾಲದ ಮೋಡಿಗೆ ಮರುಳಾಗಿ ಬಹಳ ಅರ್ಥ ಪೂರ್ಣ ಗತಿಯಲ್ಲಿ ಸಾಗಿದ ಈ ಶಿಬಿರ ಮೂರನೇ ದಿನವು ಯಾವ ನಿರಾಸೆಯನ್ನು ಮೂಡಿಸದೆ ಮತ್ತಷ್ಟು ಹುರುಪನ್ನು ತುಂಬಿ ಎಲ್ಲಾ ಶಿಬಿರಾರ್ಥಿಗಳನ್ನು ನವ ಚೈತನ್ಯಗೊಳಿಸಿದುದರಲ್ಲಿ ಅನುಮಾನವಿಲ್ಲ. ಸಂಪನ್ಮೂಲವ್ಯಕ್ತಿಯಾಗಿ ದಿನದ ಮೊದಲ ಅಧಿವೇಶನವನ್ನು ನಡೆಸಿಕೊಟ್ಟ ಶ್ರೀ ಬಸವರಾಜ ಪೂಜಾರ ಇವರು ಉಬುಂಟು ಸಾಫ್ಟವೇರ ಏಕೆ ಬಳಸಬೇಕು ಎಂಬುದನ್ನು ಉದಾಹರಣೆಗಳ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಲ್ಯಾಪ ಟಾಪ್ ಖರೀದಿಸಿ ಇಲ್ಲವೇ ಡೆಸ್ಕಟಾಪ ಖರೀದಿಸಿ ಮತ್ತು ಉಬುಂಟು ಸಾರ್ವಜನಿಕ ತಂತ್ರಾಂಶವನ್ನು ಅಳವಡಿಸಿಕೊಳ್ಳಿ ಎನ್ನುತ್ತಾ ಉಬುಂಟು ಸಾಫ್ಟವೇರನ್ನು ಇನ್ಸ್ಟಾಲ ಮಾಡುವ ವಿಧಾನವನ್ನು ಪ್ರೋಜೆಕ್ಟರ ಮೂಲಕ ತೋರಿಸಿ ಸಂದೇಹ ನಿವಾರಿಸಿದರು  ಶ್ರೀ ಸಂತೋಷ ಗುನಾರೆಯವರು ಗೂಗಲ್ ವೆಬ್ ನಲ್ಲಿ koer ವಿಳಾಸ ನೀಡಿದ್ರೆ ಯಾವೆಲ್ಲಾ ವಿಷಯದ ಮೇಲೆ ಮಾಹಿತಿಗಳ ಲಭ್ಯತೆ ಇವೆ. ಎನ್ನುವುದನ್ನು ತಿಳಿಸುತ್ತ ಉಪಯುಕ್ತ ಹಲವು ಕನ್ನಡ ವೆಬ್ ಸ್ಯೆಟ್ ಗಳನ್ನು ಪರಿಚಯಿಸಿದರು. ನಿಜಕ್ಕೂ ಆ ಗ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆಯ ವಿರಾಡ್ರೂಪ ತನ್ನ ಒಂದೊಂದೇ ಮಜಲುಗಳನ್ನು ತೆರೆದು ಕೊಳ್ಳುತ್ತಾ ಹೋಗುತ್ತಿತ್ತು. ಆಗ ನನಗನ್ನಿಸಿದ್ದು ಇನ್ನು ಕೆಲವೇ ಕೆಲವು ದಶಕಗಳ ಬಳಿಕ ಭವ್ಯ ಗ್ರಂಥಾಲಯವೆಂಬೊಂದು ಕಟ್ಟಡ ಚಲಾವಣೆಯಲ್ಲಿಲ್ಲದ ನಾಣ್ಯದಷ್ಟೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅವಸಾನದ ಅಂಚಿಗೆ ಸರಿಯುತ್ತದಲ್ಲ ಎನ್ನುವ ಸತ್ಯದ ವಿಚಾರ. ಮುಂದಿನ ಅವಧಿಯಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಟ್ಯೆಪು ಮಾಡಲು ಇರುವ ಯುನಿಕೋಡ್ ಸೌಕರ್ಯವನ್ನು ತಿಳಿಯುತ್ತಾ, ಕೀ ಬೋರ್ಡ್ ನ ಶೋರ್ಟ್ ಕಟ್ ಕೀ ನ ಮಾಹಿ ತಿಯನ್ನು ಕಲೆ ಹಾಕಿದೆವು. ಮಧ್ಯಾಹ್ನದ ಊಟದ ಬಳಿಕ ಮೇಯ್ಲ್ ನಲ್ಲಿ ಅಟ್ಯಾಚ್ ಮಾಡಿ, ಕಳುಹಿಸುವುದು.ಹಾಗೂ ಮೇಯ್ಲ್ ಐ.ಡಿಯಲ್ಲಿ ವಿಳಾಸ ನಮೂದಿಸುವುದು ಹಾಗೂ ಬ್ರೌಸ್ ಮುಖಾಂತರ ಚಿತ್ರ ಅಂಟಿಸುವುದನ್ನು ತಿಳಿದುಕೊಂಡೆವು. apps ನಲ್ಲಿ ಬರುವ ಎಲ್ಲಾ ವಿಷಯಗಳನ್ನು ಪರಿಚಯಿಸಲಾಯಿತು. ಹೆಚ್ಚಿನ ಮೆಮೊರಿಯನ್ನು ಸಂಗ್ರಹಿಸಲು ಸಹಾಯ ಮಾಡುವ ಗೂಗಲ್ ಡ್ರ್ಯೆವ್ ಅನ್ನು ಪರಿಚಯಿಸಿದರು. Appsನ ಇನ್ನೊಂದು ಅಂಶವಾದ ಗೂಗಲ್ ಮ್ಯಾಪ್ ಬಳಸಿಕೊಳ್ಳುವುದರ ಮೂಲಕ ಅಪರಿಚಿತ ಸ್ಥ ಳದ ಮಾರ್ಗ ನಕ್ಷೆಯನ್ನು ಸರಳ ರೀತಿಯಲ್ಲಿ ತಿಳಿಯಬಹುದಾದ ವಿಧಾನ ಹೇಳಿದರು. Translate ಸೌಲಭ್ಯವನ್ನು ಬಳಸಿಕೊಳ್ಳುವ ಸರಳ ತಂತ್ರವನ್ನು ತಿಳಿದೆವು. ಹೀಗೆ ಶ್ರೀ ಅರ್ಜುನ ಲಮಾನಿಯವರು  ವಿಷಯ ಪ್ರಸ್ತುತಿಯೊಂದಿಗೆ ಅನುಕೂಲ ಕಲ್ಪಿಸುವ ಪೂರಕ ಮಾಹಿತಿಯನ್ನು ಒದಗಿಸಿ ಶಿಬಿರಾರ್ಥಿಗಳ ಶಿಬಿರದ ಸೆಳೆತ ವನ್ನು ಕಾಯ್ದುಕೊಂಡರು. ಚಹಾದ ಬಳಿಕ ಶ್ರೀ  ಬಸವರಾಜ ಪೂಜಾರ ಅವರು ಪರಿಕಲ್ಪನಾ ನಕ್ಷೆ ಯಲ್ಲಿ ಪಾಠಯೋಜನೆಯ ವಿಧಾನವನ್ನು ತಿಳಿಸಿದರು. ಹೀಗೆ ಈ ಎಲ್ಲಾ ವಿಧಾನವನ್ನು ಶಿಕ್ಷಕರು ತಮ್ಮ ಸಿಸ್ಟಂನಲ್ಲಿ ಹೆಚ್ಚು ಸಮಯವನ್ನು ಪ್ರಾಯೋಗಿಕವಾಗಿ ಕಳೆದರು.  ಒಟ್ಟಿನಲ್ಲಿ ಮೂರನೆ ದಿನದ ಕಾರ್ಯಗಾರವು ಉತ್ತಮ ವಿಷಯ ಮಾಹಿತಿಯೊಂದಿಗೆ ಸೊಗಸಾಗಿತು.
 +
ನಾಲ್ಕನೇ ದಿನ 30/01/2015
 +
"ಕಂಪ್ಯೂಟರ್ ಕಲಿಯುವುದು ಕಷ್ಟ,ಕಲಿತ ಮೇಲೆ ಇಷ್ಟ,ಕಲಿಯದಿದ್ದರೆ ನಷ್ಟ"ಎನ್ನುವ ಪರಿಜ್ಞಾನದ ಹಿನ್ನಲೆಯಲ್ಲಿ ೧೯-೧೨-೨೦೧೪ ರ ನಾಲ್ಕನೇದಿನದ ಪ್ರಥಮ ಅವಧಿಯಲ್ಲಿ ಬಸವರಾಜ ಪೂಜಾರ  ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾದ ಬೋಧನೆಯಲ್ಲಿ ಅಂತರ್ ಜಾಲ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಗದ್ಯ ಮತ್ತು ಪದ್ಯ ಬೋಧನೆಯ ಹಂತಗಳನ್ನು ವಿವರಿಸುತ್ತಾ ಚರ್ಚೆಗೆ ಅವಕಾಶ .ಚಹಾ ವಿರಾಮದ ನಂತರ ೩ ನೇ ಅವಧಿಯಲ್ಲಿ ಗದ್ಯಭಾಗದಲ್ಲಿ "ಎದೆಗೆ ಬಿದ್ದ ಅಕ್ಷರ" ಆಯ್ಕೆ ಮಾಡಿಕೊಂಡು ತಂತ್ರಜ್ಞಾನವನ್ನು ವಿವಿಧ ಹಂತಗಳಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ವಸ್ತುನಿಷ್ಠವಾಗಿ ವಿವರಣೆ ನೀಡಿದರು. ಇದರೊಂದಿಗೆ ಶಿಬಿರಾರ್ಥಿಗಳ ಹೊಸ ಯೋಜನೆ- ಯೋಚನೆಗಳಿಗೆ  ಅವಕಾಶವನ್ನು ಕೊಟ್ಟು ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆಯಲ್ಲಿ ನಾವು ಪಾಲುದಾರರಾದೆವು.ಪದ್ಯಭಾಗದಲ್ಲಿ  "ಹಕ್ಕಿ ಹಾರುತಿದೆ ನೋಡಿದಿರಾ " ಇದಕ್ಕೆ ಸಂಬಂದಿಸಿದ ಪದ್ಯಭಾಗದ ವಿವಿಧ ಹಂತವನ್ನು ತಲುಪಿದ್ದಲ್ಲದೇ ಪದಕ್ಕೆ ಬೇಕಾದ ಭಾವ ,ಅದಕ್ಕೆ ಸಂಬಂಧಿಸಿದ ಚಿತ್ತವನ್ನು  ಕ್ಷಣಾರ್ಧಾದಲ್ಲಿ ಒದಗಿಸಿ ಬೆರಗುಗಣ್ಣಿನ ಭಾವ ನಮ್ಮದಾಯಿತು ನಂತರ ಶಿಬಿರಾರ್ಥಿಗಳು ಮೊದಲೇ ಹಂಚಿಕೊಂಡಂತೆ  ಗದ್ಯ ಮತ್ತು ಪದ್ಯಕ್ಕೆ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಬಳಸಿ ೫ ನೇ ದಿನದ ಪ್ರಾತ್ಯಕ್ಷಿತೆಗೆ ತಯಾರಿಯನ್ನು ಮಾಡುವುದರಲ್ಲಿ ತನ್ಮಯರಾದರು. ಊಟದ ವಿರಾಮದ ನಂತರ ಮೊದಲ ಸಂತೋಷ ಗುಣಾರೆಯವರು ಲಿಬ್ರೆ ಆಫೀಸ ಮತ್ತು ಕ್ಯಾಲ್ಕನ ಪರಿಚಯಸಿ ಚಟುವಟಿಕೆ ನೀಡಿದರು  ನಂತರದ ಅವಧಿಯಲ್ಲಿ ಶಿಬಿರಾರ್ಥಿಗಳು ೫ ನೇ ದಿನದ ಅವಧಿಗೆ  ನೀಡಬೇಕಾದ ಪಾಠದ ತಯಾರಿಯಲ್ಲಿ ಮಗ್ನರಾದಂತೆ ಕಂಡು ಬಂದರೂ ಅದರ ಸಾರ್ಥಕತೆಯ ಭಾವ ೫ ನೇ ದಿನಕ್ಕೆ ಎನ್ನುವ ತವಕ ಕಾಣುವಂತಿತ್ತು. ಕೊನೆಯ ಅವಧಿಯನ್ನು ಪೂಜಾರವರು ಜಿಂಪ ಎಡಿಟರ ಪರಿಚಯ ಮಾಡಿಕೊಟ್ಟರು
 +
 
 +
ಐದನೇ ದಿನ 31/05/2015
 +
ಈ ಮೊದಲೇ ತಂಡಕ್ಕೆ ಹಂಚಿದ ಪಾಠ, ಪದ್ಯ ಭಾಗಗಳನ್ನು ನಾವು ಕಲಿತ ಮೈಂಡ್ ಮ್ಯಾಪ್, ಲಿಂಕ್ , ಟೆಕ್ಷ್ಟ್ ಟೈಪಿಂಗ್, ಅಂತರ್ಜಾಲ , ಗೂಗಲ್ ಮ್ಯಾಪ್, ಕೋಪಿ, ಪೇಸ್ಟ್ ಈ ಮೊದಲಾದ ತಂತ್ರ ಜ್ಞಾನವನ್ನು ಬಳಸಿಕೊಂಡು ಲಿಬ್ರ ಆಫೀಸ್ ರೈಟರ್ ನಲ್ಲಿ ಪಾಠಯೋಜನೆಯನ್ನು ತಂಡದ ಎಲ್ಲಾ ಸದಸ್ಯರು ಸೇರಿ ಬಹಳ ಉತ್ಸುಕತೆಯಿಂದ ತಯಾರಿಸಿದೆವು. ಸಂಪನ್ಮೂಲ ವ್ಯಕ್ತಿಗಳು  ಹಾಕಿ ಕೊಟ್ಟ ಎಲ್ಲಾ ಹಂತಗಳನ್ನು ನಮ್ಮ ಪಾಠದಲ್ಲಿ ಸಮರ್ಪಕವಾಗಿ ಹೊಂದಿಸಿಕೊಂಡೆವು.  ಮೊದಲ ತಂಡದಿಂದ ಹಕ್ಕಿ ಹಾರುತ್ತಿದೆ ನೋಡಿದಿರಾ ಎಂಬ ಪದ್ಯವನ್ನು, ೨ನೇ ತಂಡದಿಂದ ಅಮೇರಿಕಾದಲ್ಲಿ ಗೊರೂರು ಎಂಬ ಗದ್ಯವನ್ನು , ೩ನೇ ತಂಡದಿಂದ ಶಬರಿ ಎಂಬ ಗೀತ ನಾಟಕವನ್ನು , ೪ನೇ ತಂಡದಿಂದ ವಚನ ಸೌರಭ ಎಂಬ ಪದ್ಯವನ್ನು, ೫ನೇ ತಂಡದಿಂದ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯವನ್ನು ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಮಂಡಿಸಿದರು. ಈ ನಡುವೆ ಚಹಾ ವಿರಾಮವನ್ನು ಮುಗಿಸಿದೆವು. ತದ ನಂತರ ಪ್ರತಿ ಪಾಠ ಮತ್ತು ಪದ್ಯದ ಕುರಿತು ಶಿಬಿರಾರ್ಥಿಗಳು ಚರ್ಚಿಸಿದರು. ಪ್ರತೀ ತಂಡದವರಿಗೆ ತಮ್ಮ ಯೋಜನೆಯನ್ನು ಮಿಂಚಂಚೆಯ ಮೂಲಕ ಕಳುಹಿಸಲು ಹೇಳಿದರು. ಅದರಂತೆ ಕೆಲವರು ಪಾಠವನ್ನು, ಕೆಲವರು ಮೈಂಡ್ ಮ್ಯಾಪ್ ನ್ನು ಸಂದೇಶ ರವಾನೆ ಮಾಡಿದರು. ಈ ತನ್ಮಧ್ಯೆ ಶಿಬಿರಾರ್ಥಿಗಳ ಗುಂಪು ಫೋಟೊ ವನ್ನು ಕ್ಲಿಕ್ಕಿಸಲಾಯಿತು. ಊಟದ ವಿರಾಮದ ನಂತರ ಶ್ರೀ ಅರ್ಜುನ ಲಮಾನಿಯವರು  ಸ್ಕ್ರೀನ್ ಶೊಟ್ ಅಥವಾ ತೆರೆ ಚಿತ್ರದ ಬಗ್ಗೆ ತಿಳಿಸಿದರು.. ನಾವು ಕೆಲವು ಚಿತ್ರಗಳನ್ನು, ಬರಹಗಳನ್ನು ,ತೆರೆಚಿಲ್ರದ ಮೂಲಕ ಉಳಿಸಿ ಹೆಸರು ಕೊಟ್ಟೆವು. ಅನಂತರ ಅವರು ರೆಕಾರ್ಡ್ , ಮೈ ಡೆಸ್ಕ್ ಟೊಪ್ ಬಗ್ಗೆ ಕಲಿಸಿದರು. ಅನ್ವಯಕ್ಕೆ ಹೋಗಿ ವೀಡಿಯೋಗಳಿಗೆ ಬೇರೆ ಆಡಿಯೋ ಮುದ್ರಿಸುವುದನ್ನು ತಿಳಿದೆವು. ಮುಂದುವರಿಸುತ್ತಾ ಪೆನ್ ಡ್ರೈವ್ ಮತ್ತು ಮೆಮೊರಿ ಕಾರ್ಡ್ ನಲ್ಲಿರುವ ಮಾಹಿತಿಯನ್ನು ನಮ್ಮ ಕಂಪ್ಯೂಟರ್ರಮತ್ತು ಕಂಪ್ಯೂಟರ್ ನಿಂದ ಪೆನ್ ಡ್ರೈವ್ ಗೆ ವರ್ಗಾಯಿಸುವ ರೀತಿಯನ್ನು ಕಲಿಸಿ ಸಹಕರಿಸಿದರು. ಚಹಾ ವಿರಾಮದ ನಂತರ ಸಂತೋಷ ಗುಣಾರೆಯವರು  ಫೀಡ ಬ್ಯಾಕನಲ್ಲಿ ತಮ್ಮ  ಅಭಿಪ್ರಾಯ ಅನಿಸಿಕೆಯನ್ನು ತುಂಬಲು ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಗಳ ಪಾದರಸದಂತಹ ಓಡಾಟ, ಉತ್ಸಾಹ ನಮ್ಮ ಕಲಿಕೆಯನ್ನು ವೇಗಗೊಳಿಸಿತು. ಅನಿಸಿಕೆಗಳ ವರ್ಗಾವಣೆಯ ನಂತರ  ತರಬೇತಿ ಮುಕ್ತಾಯವಾಯಿತು.ವಂದನೆಗಳೊಂದಿಗೆ
 +
 
    
Add more batches, by simply copy pasting Batch 3 information and renaming it as Batch 4
 
Add more batches, by simply copy pasting Batch 3 information and renaming it as Batch 4