Anonymous

Changes

From Karnataka Open Educational Resources
m
Text replacement - "</mm>" to ""
Line 72: Line 72:     
=ನೀಡಿರುವ ಪದ್ಯಭಾಗದ ಹಿನ್ನಲೆ=
 
=ನೀಡಿರುವ ಪದ್ಯಭಾಗದ ಹಿನ್ನಲೆ=
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
+
ಕೈಲಾಸದಲ್ಲಿ ಈಶ್ವರನ ಸೇವೆಯಲ್ಲಿದ್ದ ಪುಷ್ಪದತ್ತನು ಪಾರ್ವತಿಯ ಇಬ್ಬರು ಸಖಿಯರಿಗೆ ಮನಸೋತನು. ಇದರಿಂದ ಈಶ್ವರನು ಅವರು ಮೂವರನ್ನೂ ಭೂಲೋಕಕ್ಕೆ ಕಳುಹಿಸಿ ಅಲ್ಲಿ ಹುಟ್ಟಿ ಬಾಳುತ್ತ ನಿಮ್ಮ ಆಸೆಗಳು ನೆರವೇರಿದ ಮೇಲೆ ಇತ್ತ ಬನ್ನಿರಿ ಎಂದು ಹೇಳಿ ಕರುಣೆಯಿಂದ ಕಳಿಹಿಸಿದನು. ಅವರು ಭಯಪಟ್ಟು, “ಲೋಕದಲ್ಲಿ ಹುಟ್ಟಿದ ಮೇಲೆ ಅಜ್ಞಾನವಶರಾಗಿ ನಿನ್ನನ್ನೇ ಮರೆತರೇನು ಗತಿ ತಂದೆಯೇ” ಎಂದು ಕೊರಗಿದಾಗ, “ಭಯ ಪಡಬೇಡಿ, ನಾನು ಬಂದು ಎಚ್ಚರಿಸಿ ಕರೆತರುತ್ತೇನೆ” ಎಂದು ಅಭಯವಿತ್ತನು.
 +
ಇತ್ತ ಪುಷ್ಪದತ್ತ ನಂಬಿಯಣ್ಣನಾಗಿ ತಿರುನಾವಲೂರಿನಲ್ಲಿ ಹುಟ್ಟಿದನು. ತನ್ನ ಲೋಕೋತ್ತರವಾದ ಸೊಬಗಿನಿಂದ ತಿರುನಾವಲೂರಿನ ರಾಜನಾದ ನರಸಿಂಗ ಮೊನೆಯವರ ಸಾಕುಮಗನಾಗಿ ಸೌಂದರ ಪೆರುಮಾಳ್ ಎಂಬ ಹೆಸರಿನಿಂದ ಬೆಳೆದನು. ಅವನ ಸುಖ-ಸಂತೋಷಗಳಿಗೆ ಎಣೆಯಿಲ್ಲವೆಂದಾಯಿತು. ಆತನು ಹದಿನಾರು ವರ್ಷದ ಯುವಕನಾದಾಗ ಇಬ್ಬರು ರಾಜಕುಮಾರಿಯರೊಡನೆ ಅವನ ವಿವಾಹ ನಿಶ್ವಿತವಾಯಿತು.
 +
 
 +
ಸೌಂದರ ಪೆರುಮಾಳ್ ಸಹ ಮದುವಣಿಗನಾಗಿ ಅಲಂಕೃತ ನಾಗಿ ಉತ್ಸುಕತೆಯಿಂದ ಊರ ಹೊರಗಿನ ಉದ್ಯಾನದಲ್ಲಿ ದಿಬ್ಬಣ ಹೊರಡಲು ಸಿದ್ಧವಾಗಿದ್ದನು. ಆದರೆ ಪರಮೇಶ್ವರನ ಇಚ್ಛೆಯೇ ಬೇರೆ. ಅವನು ಕಳುಹಿಸಿದ ಪಾರ್ವತಿಯ ಸಖಿಯರು ಪರವೆ, ಶಂಕಿಲೆ ಎಂಬ ಹೆಸರಿನ ಶಿವಭಕ್ತೆಯರಾಗಿ, ಬೆಳೆಯುತ್ತಿರುವರು. ಅವರೊಡನೆ ವಿವಾಹವಾಗಿ ಶಿವಧ್ಯಾನದಲ್ಲಿ ಶೈವಧರ್ಮಾನುಸರಣೆಯಲ್ಲಿ ಬಾಳಬೇಕಾದ ನಂಬಿಯಣ್ಣನು ರಾಜಕುವರಿಯರನ್ನು ಮದುವೆಯಾಗಿ ಲೌಕಿಕನಾಗುವುದೆ?
 +
ಆದ್ದರಿಂದ ಪರಮೇಶ್ವರನು ನೂರರ ಮುದುಕನಂತೆ ಮುಪ್ಪಿನಿಂದ ಕುಗ್ಗಿ ಕೆಮ್ಮುತ್ತ, ಹಿಡಿದವರ ಕೈ ಬಾಯೊಳೆ ಜೀವ ಹೋಗುವುದೆಂಬಂತೆ ನಟಿಸುತ್ತ ವಿವಾಹ ಮಂಟಪಕ್ಕೆ ಬಂದನು. ಶಿವಶಿವ ಎನ್ನುತ್ತ ತೋರಣವನ್ನು ಹರಿದನು. ಇವನಾರು ಅಪಶಕುನಕಾರನೆಂದು ಹಿಡಿಯಬಂದರೆ ಓಡಾಡುತ್ತ ತುಪ್ಪದ ಕೊಡಗಳ ಮೇಲೆ ಬಿದ್ದು ಅವನ್ನೊಡೆದು ಚೆಲ್ಲಿದನು. ಅತ್ತಿತ್ತ ಕುಳಿತ ಸರ್ವಾಲಂಕೃತರಾದ ಪೌರರು ತಮ್ಮ ರೇಶಿಮೆಯ ವಸ್ತ್ರಕ್ಕೆ ಹನಿದ ತುಪ್ಪವನ್ನು ಕೊಡವಿ ಸಿಡಿಮಿಡಿಗೊಂಡರು. ಇನ್ನೇನು ಈ ಮದುವೆ ಹಸನಾಗದೆಂದು ಕಳವಳಗೊಂಡರು. ಆದರೂ ಅರಸನ ಮದುವೆಯಲ್ಲಿ ಈ ಪೀಡೆಯನ್ನು ಪ್ರವೇಶಿಸಲು ಬಿಟ್ಟವರಾರು ಎನ್ನುತ್ತ ಅವನನ್ನು ಹೊತ್ತೊಯ್ದು ಸಭಾಮಂಟಪದಿಂದ ದೂರ ಒಯ್ದುಬಿಟ್ಟು ಬಾಗಿಲು ಹಾಕಿಕೊಂಡು ಬರುವ ವೇಳೆಗೆ ಅವರಿಗಿಂತ ಮುಂದಾಗಿ ಈ ಮುದುಕ ಒಳಗಿದ್ದಾನೆ! ಇದೇನು ಕಾಟ, ಈ ವಿಚಿತ್ರವೇಕೆ ಎಂದವರು ವಿಚಾರಿಸಿದಾಗ ಕೆಮ್ಮುತ್ತ, “ನಂಬಿಯಣ್ಣನದು ತೊತ್ತಿನ ವಂಶ. ತಮ್ಮ ಸೇವಕ ಅವನು, ಅವನಿಗೆ ಹೆಣ್ಣು ಕೊಟ್ಟು ನಿಮ್ಮ ರಾಜಕುಲವನ್ನು ಹಾಳುಮಾಡಿಕೊಳ್ಳಬೇಡಿ” ಎಂದು ಸಾರಿ ಹೇಳಿದನು.
 +
ನಂಬಿಯಣ್ಣ ಇಳಿದುಕೊಂಡಿದ್ದ ಉದ್ಯಾನಕ್ಕೆ ಬಂದನು. ಆತನನ್ನು ಕರೆದು, “ಅಯ್ಯಾ, ನೀನು ಸೌಂದರ ಪೆರುಮಾಳೆಯಾದರೂ ರಾಜಪುತ್ರನಲ್ಲ, ನಮ್ಮ ವಂಶಕ್ಕೆ ತೊತ್ತಾಗಿ ಸಲ್ಲುವವನು. ಹಾಗೆಂದು ನನ್ನ ಹತ್ತಿರ ಪತ್ರವುಂಟು. ನನಗೆ ತಿರುವಗೆನಲ್ಲೂರಿನಲ್ಲಿ ಮನೆಯಿದೆ. ನೀನು ನಂಬು. ನಿಮ್ಮ ತಂದೆ ಬರೆದುಕೊಟ್ಟ ಪತ್ರವಿದೆ. ಊರ ಜನರ ಸಾಕ್ಷಿಯಿದೆ” ಎನ್ನುತ್ತ ಕಾಡಿದ. ಸಿಡಿಮಿಡಿಗೊಂಡ ನಂಬಿಯಣ್ಣ ರಾಜನ ಅಪ್ಪಣೆಯಂತೆ ಇದನ್ನು ಪರೀಕ್ಷಿಸಲು ಹೊರಟನು. ಆನೆಯ ಮೇಲೇರಿಕೊಂಡು ಕಂದಿದ ಮುಖದವನಾಗಿ, ಮುನಿದು ನುಡಿಯದೆ ಬಂದ ರಾಜಕುಮಾರನನ್ನು ತಿರುವಗೆನಲ್ಲೂರಿನಲ್ಲಿ ಪುರಪ್ರಮುಖರು ಬಂದು ಇದಿರುಗೊಂಡರು. ರಾಜಕುಮಾರನಿಗೆ ಮುನಿಸು. ಅದನ್ನು ಕಂಡ ಊರ ಜನರಿಗೆ ಭಯ, ಆತಂಕಗಳು. “ಏಕೆ ಸ್ವಾಮಿ, ನಮ್ಮ ತಪ್ಪಿಲ್ಲವಲ್ಲ” ಎಂದು ಅವರು ಬಿನ್ನವಿಸಿಕೊಂಡಾಗ, “ನಿಮ್ಮೂರಿನ ಒಬ್ಬ ಹಾಳು ಮುದುಕ ಬಂದು ನನ್ನನ್ನು ತೊತ್ತೆನ್ನುತ್ತಾನೆ, ಅದಕ್ಕೆ ನೀವೆಲ್ಲ ಸಾಕ್ಷಿಯಿದ್ದೀರಂತೆ, ಈಗ ವಿನಯದ ಸೋಗು ಹಾಕುತ್ತೀರಾ?” ಎಂದು ಗದರಿದ. ಬೆಚ್ಚಿ ಮುಖಮುಖ ನೋಡುತ್ತಾ ಒಂದನ್ನೂ ಅರಿಯದೆ ಭ್ರಮಿಸಿ ನಿಂತ ಜನರ ನಡುವೆ ಗಡ್ಡನರೆದಲೆಯ ಈಶ್ವರ ಶತವೃದ್ಧನಾಗಿ ಕೊಡೆ ಕಮಂಡಲಗಳನ್ನು ಹಿಡಿದು ಪ್ರತ್ಯಕ್ಷನಾದ. ಅವನನ್ನು ಅರಸುಕುಮಾರ ಊರವರಿಗೆ ತೋರಿಸಿದಾಗ ಅವರು ಈತನನ್ನು ಅರಿಯರು. ಶಿವ ಸುಮ್ಮನೆ ಬಿಟ್ಟಾನೆ? ತನ್ನ ನಾಟಕವನ್ನು ಪ್ರಾರಂಭಿಸಿದ.
 +
“ಏನಿರಿ ಪಶುಪತಿ ಭಟ್ಟರೆ, ಏನಿರಿ ಈಶಾನ ಭಟ್ಟರೆ, ನನ್ನನ್ನು ಅರಿಯರೆ? ನಿಮ್ಮ ತಂದೆಯ ಗೆಳೆಯನಲ್ಲವೆ ನಾನು? ಸ್ಮಶಾನ ಶಯನ ಭಟ್ಟನೆಂದು ನನ್ನ ಹೆಸರು” ಎನ್ನುತ್ತ ಅಳಿದುಹೋದ ಅವರ ತಂದೆಯರನ್ನು ಕುರಿತಾಡುತ್ತ ಬದುಕಿರುವ ಇವರ ರಹಸ್ಯಗಳನ್ನು, ಕುರುಹುಗಳನ್ನು ಎತ್ತಿ ಆಡಿದ. ಇವರೆಲ್ಲ ಸೋಜಿಗದಿಂದ ಇವನ ಮಾತನ್ನು ಒಪ್ಪಿದರು. ಆದರೆ ಇವನನ್ನು ಅರಿಯರು. ಅಲ್ಲಿಗೆ ಬಿಡದ ಶಿವ, “ಬನ್ನಿ, ನಿಮ್ಮೂರಿನ ಗಣಕಗಳು ನನ್ನ ಬಳಿಯಿರುವ ಪತ್ರವನ್ನು ನೋಡಲಿ” ಎಂದು ಪತ್ರವನ್ನು ಹಿಡಿದಾಗ ಆ ಊರಿನ ಗಣಕ ಬಂದು, “ಆಹಾ! ಇದು ನನ್ನ ತಂದೆಯ ಅಕ್ಷರ” ಎನ್ನುತ್ತ ಗುರುತಿಸಿ ಅಳತೊಡಗಿದ. ಅದರಲ್ಲಿ ನಂಬಿಯಣ್ಣ ಈ ಬ್ರಾಹ್ಮಣ ವಂಶಕ್ಕೆ ತೊತ್ತೆಂದು ಬರೆದಿದ್ದಿತು. ನೋಡು ನೋಡೆಂದು ರಾಜಕುಮಾರನಿಗೆ ಹೇಳಿದಾಗ ಅವನು ಕುತೂಹಲಗೊಂಡು ಪತ್ರ ಕೈಗೆ ತೆಗೆದುಕೊಂಡು ಓದಿ ಕೋಪದಿಂದ ಅದನ್ನು ನೂರಾರು ಚೂರಾಗಿ ಹರಿದು ಗಾಳಿಗೆ ತೂರಿ ನಕ್ಕನು.
 +
ಆದರೆ ಚತುರನಾದ ಬ್ರಾಹ್ಮಣ ತಲೆದೂಗುತ್ತ, “ಹೀಗಾಗುವುದೆಂದು ಜಾಣೆಯಾದ ನನ್ನ ಪತ್ನಿ ಹೇಳಿದ್ದಳು. ಇದು ಪತ್ರದ ನಕಲು. ಮೂಲಪತ್ರ ನನ್ನ ಮನೆಯಲ್ಲಿದೆ. ಬಾ ಹೋಗೋಣ” ಎಂದು ನಿಂತ. ಹೇಗೆ ಮಾಡಿಯೂ ಮುದುಕನನ್ನು ನಿವಾರಿಸಲರಿಯದೆ ತನ್ನ ರಾಜಪರಿವಾರವನ್ನು ತೊರೆದು ಈ ಮುದುಕನನ್ನು ಹಿಂಬಾಲಿಸಿದಾಗ ಅವನು ಊರ ದೇವಾಲಯವನ್ನು ಹೊಕ್ಕನು. ಏನಾಶ್ಚರ್ಯ! ಕೆರೆಗಳನ್ನು ಕಳೆಯದೆ ಒಳಹೊಕ್ಕು ಮುದುಕನನ್ನು, ಶನಿಯನ್ನು ನಿವಾರಿಸಿಬಿಡುವೆನೆಂದು ನಂಬಿಯಣ್ಣನು ಖಡ್ಗವನ್ನು ಹೀರಿದ! ಆದರೆ ಒಳಹೊಕ್ಕ ಮುದುಕ ಶಿವಲಿಂಗದಲ್ಲಿ ಸೇರಿಹೋದ.
 +
 
 +
 
 +
ನಂಬಿಯಣ್ಣನ ಮನಸ್ಸಿಗೆ ಫಕ್ಕನೆ ಬೆಳಗಾಯಿತು. ಆಹಾ, ಎಂತಹ ಭಾಗ್ಯ ತಪ್ಪಿಹೋಗುವುದರಲ್ಲಿತ್ತು, ಈಗ ಒದಗಿತು. ನನ್ನ ಒಡೆಯನನ್ನು, ಸ್ವಾಮಿಯನ್ನು ಮರೆತೇ ಬಿಟ್ಟಿದ್ದೆನಲ್ಲ ಎನ್ನುತ್ತ ಈಶ್ವರನನ್ನು ಹಾಡಿ ಭಜಿಸಿದ. ಅವನ ಅದುವರೆಗಿನ ಕಳವಳವೆಲ್ಲ ಕರಗಿ ನೀರಾಯಿತು. ಮನಕ್ಕೆ ತುದಿಮೊದಲಿಲ್ಲದ ನೆಮ್ಮದಿ ದೊರಕಿತು. ಪ್ರತ್ಯಕ್ಷನಾದ ಶಿವ, “ಮಗು, ನನ್ನನ್ನು ಕುರಿತು ಹಾಡಯ್ಯ” ಎಂದನು. “ನಾನ್ಯಾವ ಹಾಡನ್ನು ಬಲ್ಲೆ ತಂದೆಯೇ?” ಎಂಬುದಕ್ಕೆ, “ಹುಚ್ಚನೆಂದು ನನ್ನನ್ನು ನಿನ್ನ ಬಾಲಭಾವದಲ್ಲಿ ಮುಗ್ಧನಾಗಿ ಬೈದೆಯಲ್ಲ, ಅದನ್ನೇ ಹಾಡು” ಎಂದು ಪುತ್ರಮೋಹದಿಂದ ಕೇಳಿಕೊಂಡ.
 +
ಮುಂದಿನದು ಸೋಜಿಗಕರವಾದ ಕಥೆ. ನಂಬಿಯಣ್ಣ ಏನು ಬೇಕೆಂದರೆ ಶಿವ ಅದನ್ನು ಕೊಡುವನು. ಶಿವಭಕ್ತರಿಗೆ ಸಮಾರಾಧನೆಯೋ ದಾನವೋ ಮಾಡಬೇಕಾದರೆ ನಂಬಿಯಣ್ಣನ ಇಚ್ಛೆಯಂತೆ ಶಿವನು ಸಿದ್ಧ. ಅವನ ವಿವಾಹಕ್ಕಾಗಿ ಪರವೆ, ಸಂಕಿಲೆಯಲ್ಲಿ ಈಶ್ವರ ದೂತನೆಂದು ಓಡಾಡಿದ. ಶೈವಧರ್ಮ ಪ್ರಚಾರಕ್ಕೆ ನಂಬಿಯಣ್ಣ ನಿಂತರೆ ಅವನ ಬಲಗೈ ಬಂಟನಾಗಿ ಶಿವ ನಿಂತ. ಅಲ್ಲದಿದ್ದರೆ, “ನೀನೆಂತಹ ಯಜಮಾನ? ನನ್ನನ್ನು ಅಳಲಾರದ ನೀನೆಂತಹ ಸ್ವಾಮಿ? ಕೊಡು ನನ್ನ ಪತ್ರವನ್ನು, ಬಿಡು ನನ್ನ” ಎಂದೆಲ್ಲ ನಂಬಿಯಣ್ಣ ಕೂಗಾಡಿಬಿಡುವನು. ಶಿವನು ಓಡೋಡುತ್ತ ಬಂದು, “ಮಗುವೆ, ಏನಾಗಬೇಕಯ್ಯ?” ಎಂದು ಕೇಳಿ ನಲಿಸುವನು. ಆಹಾ, ಭಕ್ತಪರಾಧೀನನಾದ ಸ್ವಾಮಿಯೇ, ನಿನ್ನ ಕಾಟದ ಹುಯಿಲೇನು, ನಿನ್ನ ಆಟದ ಸವಿಯೇನು! ಎಂದು ಹರಿಹರ ತಲೆದೂಗುವನು. ಭಕ್ತನನ್ನು ಅಳಲು ಹೋಗಿ ಅವನನ್ನೇ ಮಗನಂತೆ ಪಾಲಿಸಿದವರುಂಟೆ? ಅವನು ಸಂಸಾರದಲ್ಲಿ ಮುಳುಗಿ ಹೋದಾನೆಂದು ಭಯಪಟ್ಟು ಮುಪ್ಪಿನ ಮುದುಕನಾಗಿ ಸುಳಿಯುತ್ತ, ಸಾಯುವವನಂತೆ ಅಭಿನಯಿಸುತ್ತ, ಗುಂಪು ಸೇರಿದ ಜನರಲ್ಲಿ ಚಾತುರ್ಯವನ್ನು ತೋರುತ್ತ ಊರತುಂಬೆಲ್ಲ ಸುಳಿದಾಡುವ ಪರಮೇಶ್ವರನನ್ನು ಕಂಡು ಮೈಮರೆಯದ ಭಕ್ತರಾರು?
 +
 
 
=ಪ್ರಸ್ತುತ ಪಾಠಕ್ಕೆ ಪೀಠಿಕೆ=
 
=ಪ್ರಸ್ತುತ ಪಾಠಕ್ಕೆ ಪೀಠಿಕೆ=
 
ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ.
 
ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ.
Line 87: Line 99:     
=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=
 
=ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು=
<mm>[[Kannadigara Thayi.mm|Flash]]</mm>
+
[[File:Kannadigara Thayi.mm|Flash]]
 
=ಪ್ರಸ್ತುತ ಮಾಡಬೇಕಾದ ಪದ್ಯದ ವಿವರ=
 
=ಪ್ರಸ್ತುತ ಮಾಡಬೇಕಾದ ಪದ್ಯದ ವಿವರ=
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''<br>
 
'''ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ'''<br>
1,823

edits