---------------------------------------------------------------------------------------------------------------------- '''೫ನೇ ದಿನದ ತರಬೇತಿಯ ವರದಿ(ದಿನಾಂಕ ೨೦-೧೨-೨೦೧೩)'''
+
+
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್ ), ಉಡುಪಿ ಇಲ್ಲಿ ನಡೆಯುತ್ತಿರುವ ೨ನೇ ಹಂತದ ಎಸ್.ಟಿ.ಎಫ್. ತರಬೇತಿಯು ಕೊನೆಯ ಹಂತಕ್ಕೆ ಬಂದಿದ್ದು, ೫ನೇ ದಿನದ ತರಬೇತಿಯ ವರದಿಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.ದಿನದ ಆರಂಭದಲ್ಲಿ ಶ್ರೀ ಮಹಾಬಲೇಶ್ವರ ಭಾಗ್ವತ್ ರು ಶಿಬಿರಾರ್ಥಿಗಳಿಗೆ ಸ್ವಾಗತ ಕೋರಿದರು. ಸಹಶಿಕ್ಷಕರಾದ ಶ್ರೀರಾಜೇಶ್ ಬಂಗೇರ ಅವರು ಚಿಂತನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ೪ನೇ ದಿನದ ತರಬೇತಿಯ ಸವಿವರವಾದ ವರದಿಯನ್ನು ಶ್ರೀಮತಿ ಜಯಾ ತಂತ್ರಿಯವರು ವಾಚಿಸಿದರು. ನಂತರ ಶ್ರೀ ರಂಗಧಾಮಪ್ಪ, ಡಯಟ್ ನ ಹಿರಿಯ ಉಪನ್ಯಾಸಕರು ೯ನೇ ತರಗತಿಯ ಪಠ್ಯಪುಸ್ತಕದ ಕುರಿತು, ಬೋಧನೆಯ ಕುರಿತು ಶಿಕ್ಷಕರಿಗಿರಬಹುದಾದ ಸಂದೇಹಗಳನ್ನು ಕುರಿತು ಚರ್ಚಿಸಿದರು. ಬ್ರಹ್ಮಾವರ ಬಿ. ಆರ್. ಸಿ. ಕೇಂದ್ರದ ಶ್ರೀ ರಾಜೀವ ಶೆಟ್ಟಿ ಯವರು ಭೂಗೋಳಕ್ಕೆ ಸಂಬಂಧಿಸಿದ ಚಿತ್ರಗಳು, ವಿವರಣೆಗಳನ್ನು ಸಂಗ್ರಹಿಸುವ ಹವ್ಯಾಸ ಇಟ್ಟುಕೊಂಡಿದ್ದು, ಅದನ್ನು ಶ್ಲಾಘಿಸುತ್ತಾ ನಮಗೂ ಕೂಡ ಇಂತಹ ಹವ್ಯಾಸ ಬೆಳೆಸಿಕೊಳ್ಳುವಂತೆ ಸೂಚಿಸಿದರು. ಶಾಲಾ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸುವಲ್ಲಿ ಸಮಾಜ ವಿಜ್ಞಾನ ಶಿಕ್ಷಕನ ಪಾತ್ರ ಹಾಗೂ ಶಾಲಾ ಪ್ರವಾಸದ ಹಂತದಲ್ಲೂ ಕೂಡ ಸಮಾಜ ವಿಜ್ಞಾನ ಬೋಧನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು. ನಂತರ ಶಿಕ್ಷಕರಿಗೆ ತಮಗೆ ಕೊಟ್ಟಿರುವ ಸಂಪನ್ಮೂಲ ಸಂಗ್ರಹ ಣೆ ಕಾರ್ಯವನ್ನು ಪೂರ್ತಿಗೊಳಿಸಲು ಸಮಯ ನೀಡಲಾಯಿತು. ಸುಮಾರು ೧೧.೩೦ಕ್ಕೆ ಚಹಾ ಮತ್ತು ತಿಂಡಿ ತಿಂದೆವು.ಪುನ: ೧೧.೪೫ಕ್ಕೆ ಸಂಪನ್ಮೂಲ ಸಂಗ್ರಹಣೆಯ ಪ್ರಸ್ತುತಿ ಆರಂಭವಾಯಿತು. ಮೊದಲಿಗೆ ನಮ್ಮ ತಂಡದಿಂದ ದ್ವಾರಸಮುದ್ರದ ಹೊಯ್ಸಳರ ಬಗ್ಗೆ ಪ್ರಸ್ತುತಿ ನಡೆಯಿತು. ಇದರಲ್ಲಿ ಪ್ರತಿಯೊಂದು ಅಂಶದ ಬಗ್ಗೆ ಚರ್ಚೆ ನಡೆಸಲಾಯಿತು. ಕಲಿಕೆಯ ಉದ್ದೇಶಗಳು, ಯೋಜನೆಗಳನ್ನು ನೀಡುವುದರ ಬಗ್ಗೆ ಚರ್ಚಿಸಿ ಒಂದಷ್ಟು ತಿದ್ದುಪಡಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಯ್ತು. ಆಮೇಲೆ ಶ್ರೀ ರಂಗಧಾಮಪ್ಪ ಸರ್ ನಮ್ಮ ಸಂಪನ್ಮೂಲಗಳಿಗೆ ವೆಬ್ ಲಿಂಕ್ ಅಳವಡಿಸುವುದರ ಬಗ್ಗೆ ತಿಳಿಸಿ, ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಿದರು. ಸುಮಾರು ೧.೪೫ರ ಹೊತ್ತಿಗೆ ಮಧ್ಯಾಹ್ನದ ಭೋಜನ ಮುಗಿಸಿದೆವು.ಊಟ ಮುಗಿಸಿ ಸುಮಾರು ೨.೧೦ ರ ಹೊತ್ತಿಗೆ ಎಲ್ಲರೂ ಕಂಪ್ಯೂ ಟರ್ ಲ್ಯಾಬಿನಲ್ಲಿ ಸೇರಿದೆವು. ಮೊದಲಿಗೆ ಸಂಪನ್ಮೂಲ ವ್ಯಕ್ತಿಗಳು ಪಿಕಾಸಾ Apps ಮೂಲಕ photo upload ಮಾಡುವುದು, share ಮಾಡಿಕೊಳ್ಳುವುದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ಜೊತೆಗೆ ಸಂಬಂಧಿಸಿದ ಸಂಪನ್ಮೂಲಕ್ಕೆ link ಮಾಡುವುದನ್ನು ಮಾಡಿಸಿದರು. ಎಲ್ಲಾ ಗುಂಪುಗಳು ತಯಾರು ಮಾಡಿದ ಸಂಪನ್ಮೂಲಗಳನ್ನು socialsciencestf@googlegroups.com ಗೆ mail ಮಾಡಲು ತಿಳಿಸಿದರು.ಚಹಾ ವಿರಾಮದ ನಂತರ ಶ್ರೀ ಪ್ರದೀಪ್ ಶೆಟ್ಟಿ ಮತ್ತು ಶ್ರೀ ಮಹಾಬಲೇಶ್ವರ ಭಾಗವತರು&ಸದಾನಂದ ಸರ್ , video editing / mixing ಮಾಡುವುದನ್ನು ತಿಳಿಸಿಕೊಟ್ಟರು. Video clippingಗಳನ್ನು ಪ್ಲೇ ಮಾಡುವುದು, video ಮತ್ತು audioಗಳನ್ನು ಪ್ರತ್ಯೇಕಗೊಳಿಸುವುದು, cut ಮಾಡುವುದು, ವೀಡಿಯೋಗಳಿಗೆ ಬೇರೆ ಬೇರೆ ಧ್ವನಿಗಳನ್ನು ನೀಡುವುದನ್ನು ತಿಳಿಸಿದರು ಮತ್ತು ಶಿಕ್ಷಕರಿಂದ ಮಾಡಿಸಿದರು. ಈ ವೀಡಿಯೋ ಕ್ಲಿಪ್ ಗಳನ್ನು ಸಮಾಜ ವಿಜ್ಞಾನ ಪಾಠದಲ್ಲಿ ಹೇಗೆ ಬಳಸಬಹುದೆಂಬುದನ್ನು ಚರ್ಚಿಸಿದರು.ನಂತರ ವಿಡಿಯೊಗಳನ್ನು ಸೇರಿಸಿ ಒಂದು ಫೈಲ್ ಮಾಡುವುದು, ಒಬುಂಟು ಸಾಫ್ಟ್ ವೇರ್ ಬಳಸಿ ಅಂತರ್ಜಾಲದಲ್ಲಿ video download ಮಾಡುವುದನ್ನು ತೋರಿಸಿದರು. ಕೊನೆಯದಾಗಿ social science STF District Cascade Workshop Feedback Formನ್ನು ತುಂಬಲು ಶಿಬಿರಾರ್ಥಿಗಳಿಗೆ ಸಮಯ ನೀಡಿದರು. ಹೀಗೆ ೨ನೇ ಹಂತದ ಎಸ್.ಟಿ.ಎಫ್. ತರಬೇತಿಯು ಯಶಸ್ವಿಯಾಗಿ ಮುಕ್ತಾಯವಾಯಿತು.
+
'''ವರದಿ: ಶ್ರೀಮತಿ ಅಮೃತಕಲಾ, ಸ.ಶಿ., ಸರಕಾರಿ ಪ್ರೌಢಶಾಲೆ, ಬೇಳೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.'''