Difference between revisions of "STF 2013-14 Shimoga"

From Karnataka Open Educational Resources
Jump to navigation Jump to search
Line 207: Line 207:
  
 
'''== 2 ನೇ ತಂಡ =='''
 
'''== 2 ನೇ ತಂಡ =='''
 +
 
'''ಪ್ರಥಮ ದಿನದ ವರದಿ'''
 
'''ಪ್ರಥಮ ದಿನದ ವರದಿ'''
 
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ  ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
 
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ  ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
 
ಸಂಚಾಲಕರು:-                                 
 
ಸಂಚಾಲಕರು:-                                 
ಶ್ರೀ.ನಾಗರಾಜ್, ಉಪನ್ಯಾಸಕರು, ಡಯಟ್, ಶಿವಮೊಗ್ಗ.                           
+
ಶ್ರೀ.ನಾಗರಾಜ್,ಉಪನ್ಯಾಸಕರು,ಡಯಟ್, ಶಿವಮೊಗ್ಗ.                           
 
                                        
 
                                        
 
ಸಂಪನ್ಮೂಲ ವ್ಯಕ್ತಿಗಳು:-  
 
ಸಂಪನ್ಮೂಲ ವ್ಯಕ್ತಿಗಳು:-  
Line 277: Line 278:
  
 
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 +
 +
 +
== 3 ನೇ ದಿನದ ವರದಿ ==
 +
 +
 +
ದಿನಾಂಕ : 25-12-2013 ರ ಬೆಳಿಗ್ಗೆ ಮಲೆನಾಡ ಹೆಬ್ಬಾಗಿಲು  ಸಿಹಿಮೊಗೆಯ  ಜಿಲ್ಲಾ  ಶಿಕ್ಷಣ  ಮತ್ತು  ತರಬೇತಿ  ಕೇಂದ್ರದ  ಗಣಕಯಂತ್ರ 
 +
ಪ್ರಯೋಗಾಲಯದಲ್ಲಿ  ಶ್ರೀಮತಿ.ಲೀಲಾ ಸಹಶಿಕ್ಷಕಿಯವರು  ತಮ್ಮ  ಮಧು  ರ  ಕಂಠದಿಂದ  ಗಣಕಯಂತ್ರದ  ವರ್ಣನೆಯನ್ನು  ಒಳಗೊಂಡ  ಪ್ರಾರ್ಥನೆಯನ್ನು 
 +
ಹಾಡು ವುದರ ಮೂ  ಲಕ ತರಬೇತಿಗೆ ಚಾಲನೆ ನೀಡಿದರು .
 +
ಪ್ರಾರ್ಥನೆಯ ನಂತರ 2  ನೇ ದಿನದ  ವರದಿ ವಾಚನವನ್ನು  ಶ್ರೀಮತಿ.ಪ್ರಮೀಳಾ  ಸಹ ಶಿಕ್ಷಕಿ  ಇವರು  ಕವಿ  ಜಿ.ಎಸ್.ಶಿವರು ದ್ರಪ್ಪ ನವರ ಸ್ಮರಣೆಯೊಂದಿಗೆ  ಪ್ರಾರಂಭಿಸಿದರು  .
 +
ವರದಿ ವಾಚನದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ.ನರಸಿಂಹಮೂ  ರ್ತಿ ಯವರು  templete ಬಗ್ಗೆ  ಮಾಹಿತಿಯನ್ನು  ಕಲಿಕಾರ್ಥಿಗಳಿಗೆ ತಿಳಿಸಿದರು  . ಚಹಾ ವಿರಾಮದ ನಂತರ  ಎಲ್ಲಾ ಕಲಿಕಾರ್ಥಿಗಳು  templete ಬಗ್ಗೆ ಪ್ರಾಯೋಗಿಕವಾಗಿ  ಕಲಿಯಲು  ನಿರತರಾದರು  .  ಇದಕ್ಕೆ ಸಂಬಂಧಿಸಿದಂತೆ
 +
ಉಳಿದ ಸಂಪನ್ಮೂ ಲ ವ್ಯಕ್ತಿಗಳು  ಕಲಿಕಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡು  ತ್ತಾ  ಕಲಿಕಾರ್ಥಿಗಳಿಗೆ  ಕಲಿಕಾರ್ಥಿಗಳನ್ನು  ಹು ರಿದುಂಬಿಸು ತ್ತಿದ್ದರು .
 +
ಮಧ್ಯಾಹ್ನ ಶು ಚಿ-ರು ಚಿಯಾದ ಊಟವನ್ನು ಸವಿಯು ವುದರ ಮೂ  ಲಕ ಎಲ್ಲಾ  ಕಲಿಕಾರ್ಥಿಗಳು  ಸಂತೃಪ್ತರಾಗು ವುದರ ಮೂ  ಲಕ ಪುನ: ತಮ್ಮ templete creation ಕಾರ್ಯದಲ್ಲಿ ತಲ್ಲೀನರಾದರು  . ಸಂಜೆ 5-30 ಕ್ಕೆ ನಾಳಿನ ಕಾರ್ಯ ಹಂಚಿಕೆಯೊಂದಿಗೆ,  ಕಾರ್ಯಾಗಾರ ಮು ಕ್ತಾಯಗೊಂಡಿತು  .   
 +
ವರದಿ ಮಂಡನೆ: ಶ್ರೀ.ಜಯಪ್ಪ, ಸ.ಶಿ. ತ್ಯಾಗರ್ತಿ, ಸಾಗರ ತಾ
  
 
==ಎರಡನೇ ದಿನದ ವರದಿ (2nd batch)==
 
==ಎರಡನೇ ದಿನದ ವರದಿ (2nd batch)==

Revision as of 16:13, 26 December 2013


Head Teachers

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Shimoga Maths Workshop Report 2013 – 14 ಓದಲು ಈ ಲಿಂಕನ್ನು ಕ್ಲಿಕ್ಕಿಸಿ

ದಿನಾ೦ಕ: ೯-೧೨-೨೦೧೩ ರಿ೦ದ ೧೪-೧೨-೨೦೧೩ ರವರೆಗೆ ಶಿವಮೊಗ್ಗದಲ್ಲಿ ಎಸ್.ಟಿ.ಎಫ್. ತರಬೇತಿಯನ್ನು ೪೧ ಜನ ಪ್ರೌಢಶಾಲಾ ಸಹ ಶಿಕ್ಷಕರಿಗೆ ಎರಡು ತ೦ಡಗಳಲ್ಲಿ ನೀಡಲಾಯಿತು.

ತರಬೇತಿಯ ಮುಖ್ಯಸ್ಥರಾಗಿ ವಿನಾಯಕ ನಾವುಡ ತರಬೇತಿಯನ್ನು ಧನಾತ್ಮಕವಾಗಿ ಕೊಡೊಯ್ಯುತ್ತಿದ್ದರು. ಸ೦ಪನ್ಮೂಲ ವ್ಯಕ್ತಿಗಳಾಗಿ ವಿನಾಯಕ ನಾವುಡ, ಯೋಗಿಶ್ ಕುಮಾರ್, ಮತ್ತು ನಾನು ಜೊತೆ ಜೊತೆಯಲ್ಲಿ ತಮ್ಮವರು ನಮಗೆ ನೀಡಿದ ರೀತಿಯಲ್ಲಿ ತರಬೇತಿಯನ್ನು ನೀಡಲು ಪ್ರಯತ್ನಿಸಿದ್ದೇವೆ.ತರಬೇತಿಯಲ್ಲಿ ಪಾಲ್ಗೊ೦ಡ ಶಿಕ್ಷಕರು ತೃಪ್ತಿಕರವಾದ ಹಿಮ್ಮಾಹಿತಿಯನ್ನು ನೀಡಿದ್ದಾರೆ. ಅವರ ಬಹಳ ಮುಖ್ಯವಾದ ಬೇಡಿಕೆ ಏನೆ೦ದರೆ ಪ್ರತಿಯೊಬ್ಬರಿಗೂ hands on ಗೆ ಪ್ರತ್ಯೇಕವಾದ ಕ೦ಪ್ಯೂಟರ್ ಗಳನ್ನು ಒದಗಿಸಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ನಾವುಡರವರನ್ನು ಸ೦ಪರ್ಕಿಸಿದರೆ ತಮಗೆ ಬೇಕಾದ ಮಾಹಿತಿಯನ್ನು ಅವರು ಕೊಡುವವರಿದ್ದಾರೆ.(ಏಕೆ೦ದರೆ ಅವರ ಹತ್ತಿರ Laptop & net connection facility ಇದೆ). ತರಬೇತಿಯಲ್ಲಿ ಉತ್ತಮವಾಗಿ ಪಾಲ್ಗೊ೦ಡ ಶಿಕ್ಷಕರ ವಿವರ ಈ ಕೆಳಗಿನ೦ತಿರುತ್ತದೆ.

(1) Navada.

(2) Muralidhara D, GHS, Hosasiddapura, Bdvt tq. 9916241938.

(3) Sathyanarayana S. GHS Kargal,Sagar Tq. 9902620267 & 8762953564.

(4) Subramanya S, BRP,BRC,Thirthahalli (pcm), 9449955974.

(5) Yuvaraj G.P., GHS, Arakere, Bhadravathi. 9481033695.

(6) Sampanna.

(7) Shivakumar,H P, GGPUC,Newtown, Bhadravathi. 8147461606.

ಧನ್ಯವಾದಗಳೊ೦ದಿಗೆ, Jeelani, Shimoga.


Upload workshop short report here (in ODT format)

Science

Agenda

If district has prepared new agenda then it can be shared here

See us at the Workshop


Workshop short report

Upload workshop short report here (in ODT format)


Social Science

Agenda

If district has prepared new agenda then it can be shared here

See us at the Workshop


See us at the Workshop

See us at the Workshop


See us at 2nd batch 1st day Workshop


2ನೇ ದಿನದ ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ(2nd batch)


3ನೇ ದಿನದ ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ(2nd batch)

4ನೇ ದಿನದ ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ(2nd batch)

Workshop short report

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಶಿವಮೊಗ್ಗ.ದಿನಾಂಕ : 16-12-2013 ರಿಂದ 20-12-2013 ( 1st Batch ) ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಶಿವಮೊಗ್ಗ ಇಲ್ಲಿ ದಿನಾಂಕ :16-12-2013 ರಿಂದ 20-12-2013 ರವರೆಗೆ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಪ್ರಾರಂಭದ ದಿನದ ವರದಿ ಹೀಗಿದೆ:- ವರದಿಯನ್ನು ವಿದ್ಯಾದೇವತೆಯಾದ ಸರಸ್ವತಿಯ ಸ್ತುತಿಯೊಂದಿಗೆ ಪ್ರಾರಂಭಿಸುತ್ತಿದ್ದೇನೆ.“ ಸರಸ್ವತೀ ಸಮಸ್ತುಭ್ಯುಂ, ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಟಾಮಿ, ಸಿದ್ಧಿ ರ್ ಭವತು ಮೇ ಸದಾ ".ಸಕಲ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳಿಗೆ ವಿದ್ಯೆಯನ್ನು ಸಿದ್ಧಿ ಸುವಂತೆ ಮಾಡುವವಳೇ ಸರಸ್ವತಿ ಮಾತೆ.ಅಂತಹ ಮಾತೆಯ ಮೂರ್ತಿಯನ್ನು ಪ್ರವೇಶ ದ್ವಾ ರದಲ್ಲೇ ಹೊಂದಿರುವ ಭವ್ಯ ಕಟ್ಟಡ ಶಿವಮೊಗ್ಗದ ಜಿಲ್ಲಾ ಮತ್ತು ಶಿವಮೊಗ್ಗದ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ. ಇಲ್ಲಿನ ಕಂಪ್ಯೂ ಟರ್ ಲ್ಯಾಬ್ ನಲ್ಲಿ ದಿನಾಂಕ:16-12-2013 ರಂದು ಔಪಚಾರಿಕ ರೀತಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಕಂಪ್ಯೂ ಟರ್ ಸನಿವಾಸ ತರಬೇತಿಯ ಉದ್ಘಾ ಟನೆ ನಡೆಯಿತು. ಶ್ರೀಮತಿ.ಚಂದ್ರಮ್ಮ ಪ್ರಾಂಶುಪಾಲರು, ಡಯಟ್, ಶಿವಮೊಗ್ಗ ಇವರು ಕಾರಣಾಂತರದಿಂದ ಭಾಗವಹಿಸಲು ಸಾಧ್ಯವಾಗದ ಕಾರಣ ಶಿಬಿರದ ಸಂಯೋಜಕರಾದ ಶ್ರೀ.ನಾಗರಾಜ್,ಉಪನ್ಯಾಸಕರು, ಡಯಟ್, ಶಿವಮೊಗ್ಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ , ಪ್ರಾಸ್ತಾವಿಕ ಮಾತುಗಳನ್ನಾಡುವುದರ ಮೂಲಕ 5 ದಿನಗಳ ಸನಿವಾಸ ತರಬೇತಿಯ ಉದ್ದೇಶಗಳನ್ನು ತಿಳಿಸಿಕೊಟ್ಟರು ಮತ್ತು ಸಂಪನ್ಮೂ ಲ ವ್ಯಕ್ತಿಗಳ ಹಾಗೂ ಶಿಕ್ಷಕರ ಪರಿಚಯ ಕಾರ್ಯಕ್ರಮವೂ ನಡೆಯಿತು . ಮೂರು ತಾಲ್ಲೂ ಕುಗಳ 30 ಜನ ಶಿಕ್ಷಕರಿಗೆ ತರಬೇತಿಯ ಉದ್ದೇಶಗಳನ್ನು ತಿಳಿಸಿಕೊಡುವುದರ ಜೊತೆಗೆ ಸನಿವಾಸ ತರಬೇತಿಗೆ ಡಯಟ್ ಒದಗಿಸಿರುವ ಎಲ್ಲಾ ಸೌಕರ್ಯಗಳ ಬಗ್ಗೆ ಯೂ ಮಾಹಿತಿ ನೀಡಿದರು.ಹಿಂದೆ ಪಡೆದ ಒಬಂಟು ತರಬೇತಿ ಮತ್ತು ಇಂದಿನ ತರಬೇತಿ ಒಳಗೊಂಡಿರುವ ಅಂಶದ ಬಗ್ಗೆಯೂ ಚರ್ಚಿಸಲಾಯಿತು.ತರಬೇತಿಗೆ ಹಾಜರಾದ 30 ಶಿಬಿರಾರ್ಥಿಗಳನ್ನು ತಲಾ 3 ಶಿಕ್ಷಕರಂತೆ 10 ತಂಡಗಳ ರಚನೆ ಮಾಡಲಾಯಿತು. ಪ್ರತಿಯೊಬ್ಬ ಶಿಬಿರಾರ್ಥಿಯೂ ಒಂದು ಕಂಪ್ಯೂ ಟರ್ ಹೊಂದುವಂತೆ ಸೌಕರ್ಯ ಕಲ್ಪಿ ಸಿಕೊಡಲಾಯಿತು. ಶ್ರೀಯುತ. ನಾಗರಾಜ್ ಸರ್ ರವರು ಕಂಪ್ಯೂ ಟರ್ ಬಗ್ಗೆ ಶಿಬಿರಾರ್ಥಿಗಳು ಹೊಂದಿದ ಪೂರ್ವಜ್ಞಾನ ಎಷ್ಟಿದೆ? ಹಿಂದಿನ ವರ್ಷದತರಬೇತಿಯ ಪೂರ್ವಜ್ಞಾನ ವನ್ನು ತಿಳಿಯಲು, ನಿರ್ಧರಿಸಲು ಒಂದು ಪೂರ್ವಪರೀಕ್ಷೆಯನ್ನು ನಡೆಸಿದರು. ನಂತರ ಆ ದಿನದ ವೇಳಾಪಟ್ಟಿ ಯ ಪರಿಚಯವನ್ನು ಶ್ರೀಯುತ.ಶೇಖರ್ ಸಂಪನ್ಮೂ ಲ ವ್ಯ ಕ್ತಿಗಳು ನೀಡಿದರು. ಪ್ರತಿ ಅವಧಿಯಲ್ಲಿಯೂ ಶಿಕ್ಷಕರಿಗೆ ಉಪಯುಕ್ತವಾದ ಮಾಹಿತಿ ಮತ್ತು ಕಂಪ್ಯೂ ಟರ್ ಜ್ಞಾನವನ್ನು ಹೆಚ್ಚಿ ಸಲು ಬೇಕಾದ ಅಂಶಗಳನ್ನೇ ಅಳವಡಿಸಿಕೊಳ್ಳಲಾಗಿತ್ತು. ಹೀಗಾಗಿ ಎಲ್ಲಾ ಶಿಬಿರಾರ್ಥಿಗಳು ಸಂಪನ್ಮೂ ಲ ವ್ಯಕ್ತಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳು ತ್ತಾ ಹೆಚ್ಚಿ ನ ಜ್ಞಾನವನ್ನು ಪಡೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.ಚಹಾ ವಿರಾಮದ ನಂತರ ಶ್ರಿಯುತ.ಪರಶುರಾಮ್ ಭಜಂತ್ರಿ ಇವರು ಪ್ರತಿಯೊಬ್ಬ ಶಿಕ್ಷಕರು ಕಂಪ್ಯೂ ಟರ್ ಮೂಲಕ ವೈಯಕ್ತಿಕ ವಿವರವನ್ನು ಸಲ್ಲಿಸುವ ಬಗ್ಗೆ ತಿಳಿಸಿಕೊಟ್ಟರು. How to open a gmail ID and Submission of messages ವಿಚಾರದ ಬಗ್ಗೆ ತಿಳಿಸಿಕೊಡಲಾಯಿತು. ಈ ಹಿಂದೆ Email ID ಹೊಂದಿದವರು ಜೊತೆಗೆ , ಹೊಸದಾಗಿ ಬಂದ ಶಿಬಿರಾರ್ಥಿಗಳಿಗೂ ಸಹ account creat ಮಾಡಲು ಬೇಕಾದ ಹಂತಗಳ ಬಗೆಗೆ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳಿಂದಲೇ ಕಾರ್ಯ ಮಾಡಿಸಿದರು. Gmail ಖಾತೆಯನ್ನು ಪಡೆದು ತಮ್ಮ – ತಮ್ಮ ಮೇಲ್ ನಿಂದ ಮತ್ತೊಬ್ಬರಿಗೆ ಸಂದೇಶಗಳನ್ನು ಕಳುಹಿಸುವುದು, ತಮಗೆ ಬಂದ ಸಂದೇಶಗಳನ್ನು ಓದುವುದು, ಎಂಬುದನ್ನು ತೋರಿಸಿಕೊಟ್ಟರು. ಹಾಗೆಯೇ ಒಮ್ಮೆ sign in ಆದ ಮೇಲೆ ಮರೆಯದೆ sign out ಮಾಡುವ ಬಗೆಗೆ ತಿಳಿಸಿಕೊಡಲಾಯಿತು. ಶ್ರೀಯುತ.ನರಸಿಂಹಮೂರ್ತಿ ಇವರು ಶಿಬಿರಾರ್ಥಿಗಳ ಸಂದೇಹಗಳ ನಿವಾರಣೆ ಮಾಡಿದರು.ಶಿಬಿರಾರ್ಥಿಗಳು ಮಧ್ಯಾ ಹ್ನ ರುಚಿಕರವಾದ ಊಟ ಮಾಡುವಾಗಲೂ ತಾವು ಕಲಿತ ವಿಷಯಗಳನ್ನು ಅಲ್ಲಲ್ಲಿ ಚರ್ಚಿಸುತ್ತಿದ್ದರು.ಮಧ್ಯಾ ಹ್ನ ದ ಅವಧಿಯಲ್ಲಿ ಮೊದಲು How to create a new folder? ಎಂಬ ವಿಷಯವನ್ನು ಕುರಿತಂತೆ ಆಶಾ ಮೇಡಂ ಇವರು ವಿವರಣೆ ನೀಡಿದರು. Desktop ನಲ್ಲಿ ಹೊಸ ಫೋಲ್ಡರ್ ತೆರೆಯಲು ಮೌಸ್ ನ ಬಲಗಡೆ ಕ್ಲಿಕ್ ಮಾಡಬೇಕು. ಹೊಸದಾಗಿ ರಚನೆಗೊಂಡ folder ಗೆ ಹೆಸರು ನೀಡುವುದು, ಫೋಲ್ಡರ್ ಗೆ ಪ್ರತಿಯೊಬ್ಬರು ಚಿತ್ತಗಳನ್ನು ನಕಲು ಮಾಡಿ ಅಂಟಿಸುವುದು ಹೇಗೆ? libre offfice ನಲ್ಲಿನ ಮಾಹಿತಿ, calc, impress, videos, ಹೀಗೆ ವಿವಿಧ file ನ್ನು ಹೇಗೆ folder ಗೆ ಹಾಕುವುದು ಎಂಬ ಬಗೆಗೆ ತಿಳಿಸಿಕೊಟ್ಟರು.ಮಧ್ಯಾಹ್ನ ಚಹಾ ವಿರಾಮದ ನಂತರ ಶ್ರೀಯುತ ಶೇಖರ್ ರವರು ಹಾಗೂ ಇತರೆ ಸಂಪನ್ಮೂಲ ವ್ಯಕ್ತಿಗಳನ್ನು ತೊಡಗೆಸಿಕೊಂಡು ಶಿಬಿರಾರ್ಥಿಗಳಿಗೆ ಇಂಟರ್ನೆಟ್ ನಿಂದ ಮಾಹಿತೆ ಪಡೆಯುವುದು ಹೇಗೆ? How to download images and videos from internet? ಎಂಬ ವಿಚಾರದ ಬಗ್ಗೆ ಸುದೀರ್ಘವಾಗಿ ತಿಳಿಸಿಕೊಟ್ಟರು. ಇಂಟರ್ ನೆಟ್ ಎಂಬುದು ಜಗತ್ತಿನ ಎಲ್ಲ ಕಂಪ್ಯೂ ಟರ್ ಗಳನ್ನು ಸಂಪರ್ಕಿಸಬಹುದಾದ ಒಂದು ಜಾಲ ಎಂದು ವಿವರಿಸಿದರು. ಕಂಪ್ಯೂ ಟರ್ ನಿಂದ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಭಾಷಣೆ, ಪತ್ರ ವ್ಯವಹಾರ ಕೂಡ ಸಾಧ್ಯವೆಂದರು.ಮಧ್ಯೆ ಶಿಬಿರದ ಸಂಯೋಜಕರಾದ ಶ್ರೀಯುತ.ನಾಗರಾಜ್ ಸರ್ ರವರು ಇಂಟರ್ ನೆಟ್ ನಿಂದ ಪಡೆದ ಹೊಯ್ಸ ಳ ದೇವಾಲಯದ ಚಿತ್ರವನ್ನು ಮಕ್ಕಳ ಕಲಿಕೆಯಲ್ಲಿ ಹೇಗೆ ಉಪಯೋಗಿಸಬಹುದು ಎಂದು ಅನೇಕ ಶಿಬಿರಾರ್ಥಿ ಮಿತ್ರರು ತೋರಿಸಿ ಕೊಟ್ಟ ರು. ಹಾಗೆಯೇ you tube downloader install ಮಾಡುವ ಬಗ್ಗೆ ಹೇಳಿಕೊಟ್ಟರು. ಪ್ರತಿಯೊಬ್ಬರು ಒಂದೊಂದು ವಿಡಿಯೋಗಳನ್ನು ಡೌನ್ ಲೋಡ್ ಮಾಡಿ ತಮ್ಮ ತಮ್ಮ ಫೋಲ್ಡ ರ್ ನಲ್ಲಿ ದಾಖಲಿಸುವ ಮೂಲಕ ಪ್ರಾಯೋಗಿಕವಾಗಿ ಕಂಪ್ಯೂ ಟರ್ ಜ್ಞಾನವನ್ನು ಪಡೆದರು.ಅಭಿಪ್ರಾಯ:- ಮೊದಲನೇ ದಿನದ ತರಬೇತಿ ಆಕರ್ಷಣೀಯವಾಗಿತ್ತು. ನಿಜಕ್ಕೂ ಡಯಟ್ ಕಂಪ್ಯೂ ಟರ್ ಲ್ಯಾಬ್ ಒಂದು ಜ್ಞಾನ ಮತ್ತು ಕೌಶಲ್ಯಗಳ ಭಂಡಾರವೇ ಸರಿ. ಎಲ್ಲಾ ಕಂಪ್ಯೂ ಟರ್ ಗಳು ಅತ್ಯು ತ್ತಮ ಸ್ಥಿ ತಿಯಲ್ಲಿದ್ದು , ಎಲ್ಲರಿಗೂ ಬಳಸಿಕೊಳ್ಳಲು ಅನುಕೂಲವಾಯಿತು. ಇಲ್ಲಿ ಸೇವಾ ಹಿರಿತನ ಅಥವಾ ಕಿರಿತನ , ವಯಸ್ಸಿನ ಹಿರಿತನ ಅಥವಾ ಕಿರಿತನ ಎಂಬುದು ಎಲ್ಲಿಯೂ ಕಂಡುಬರಲ್ಲಿಲ್ಲ. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ವಯಸ್ಸಿನ ಅಂತರ ಕಂಡುಬರಲ್ಲಿಲ್ಲ. ಪ್ರತಿಯೊಬ್ಬರು ಪೂರ್ಣ ಪ್ರಮಾಣದಲ್ಲಿ ಕಂಪ್ಯೂ ಟರ್ ನಲ್ಲಿ ತಲ್ಲೀನರಾಗಿ ತೊಡಗಿಸಿಕೊಂಡಿರುವುದು ಕಂಡುಬರುತ್ತಿತ್ತು. ಶಿಬಿರಾಧಿಕಾರಿಗಳ ಮೇಲುಸ್ತಾವಾರಿಯಲ್ಲಿ ಜೊತೆಗೆ ನಾಲ್ವರು ಸಂಪನ್ಮೂ ಲ ವ್ಯಕ್ತಿಗಳು ಪ್ರತಿಯೊಬ್ಬರಿಗೂ ತಮಗೆ ತಿಳಿದ ವಿಚಾರಗಳನ್ನು ತಿಳಿಸಿಕೊಡುವಲ್ಲಿ ಅತೀವ ಉತ್ಸಾಹದಿಂದ ಪಾಲ್ಗೊಂಡರು.ಮೊದಲ ದಿನದ ತರಬೇತಿಯು "ವಿದ್ಯೆ ಸಾಧಕನ ಸ್ಷತ್ತೇ ಹೊರತು ಸೋಮಾರಿಯ ಸ್ವತ್ತಲ್ಲ" ಎನ್ನು ವ ನುಡಿಯನ್ನು ಒರೆಗೆ ಹಚ್ಚಿ ದಂತೆ ಕಂಡುಬರುತ್ತಿತ್ತು. ಏಕಾಗ್ರತೆ ಮತ್ತು ಆಸ ಕ್ತಿ ಇದ್ದರೆ ಯಾರು ಬೇಕಾದರೂ ಸಾಧಿಸ ಬಹುದು ಎಂಬ ನಿಜವನ್ನು ಇಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಈ ದಿನದ ಕಂಪ್ಯೂ ಟರ್ ತರಬೇತಿ ಆಸಕ್ತಿದಾಯಕ, ಕುತೂಹಲಕಾರಿಯಾಗಿತ್ತು ಎಂದು ಹೇಳುತ್ತ, ಮುಂದಿನ ನಾಲ್ಕು ದಿನಗಳಲ್ಲಿ ಇನ್ನೆಷ್ಟು ಕುತೂಹಲಕಾರಿ ವಿಷಯಗಳಿವೆಯೋ ಎಂಬ ನಿರೀಕ್ಷೆಯಲ್ಲಿ ಈ ದಿನದ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ.ಜೈಹಿಂದ್,ಜೈಕರ್ನಾಟಕ ಮಾತೆ.ಧನ್ಯವಾದಗಳೊಂದಿಗೆ,ವರದಿ ಮಂಡಸಿದವರು,ಭಾಸ್ಕರ್.ಎನ್,ಸಹಶಿಕ್ಷಕರು,ಸರ್ಕಾರಿ ಪ್ರೌಢಶಾಲೆ,ಹುಲಿದೇವರಬನ,ಸಾಗರ ತಾ,ಶಿವಮೊಗ್ಗ.

ದ್ವಿತೀಯ ದಿನದ ವರದಿ :- ದಿನಾಂಕ 17-12-2013 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಶ್ರೀಮತಿ.ಜಯಲಕ್ಷ್ಮಿ ಯವರ ಪ್ರಾರ್ಥನೆ ಮೂಲಕ ತರಬೇತಿ ಆರಂಭಗೊಂಡಿತು.ನಂತರ ಮೊದಲನೇ ದಿನದ ಹಿಮ್ಮಾಹಿತಿಯನ್ನು ಪಡೆಯಲಾಯಿತು.ಶಿಕ್ಷಕರಾದ ಶ್ರೀಯುತ ಪ್ರಶಾಂತ್ ರವರು folder ರಚಿಸುವುದನ್ನು ಪ್ರಾಯೋಗಿಕವಾಗಿ ತೋರಿಸಿದರು.ನಂತರ ಶಿಕ್ಷಕರಾದ ಶ್ರೀಯುತ.ಅನಿಲ್ ರವರು email ಬಗ್ಗೆ ಮಾಹಿತಿಯನ್ನು ಪ್ರಾಯೋಗಿಕವಾಗಿ ನೀಡಿದರು.ಹಾಗೆ ಶಿಕ್ಷಕಿ ಶ್ರೀಮತಿ.ಸವಿತಾರವರು internet ಮೂ ಲಕ images and video download ಮಾಡು ವು ದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.ಈ ಸಂದರ್ಭದಲ್ಲಿ ಎಲ್ಲಾ ಸಂಪನ್ಮೂ ಲ ವ್ಯಕ್ತಿಗಳು ತಮ್ಮ ಕೆಲವು ಹಿಮ್ಮಾಹಿತಿಯನ್ನು ನೀಡಿದರು.ಶ್ರೀಯುತ.ನಾಗರಾಜ್ ತರಬೇತಿ ಸಂಯೋಜಕರು ಈ ದಿನದ ತರಬೇತಿಯನ್ನು ಉದ್ದೇಶಿಸಿ ಮಾತನಾಡು ತ್ತಾ ಶಿನಿರಾರ್ಥಿಗಳಿಗೆ ಕೆಲವೊಂದು ಸಲಹೆ ಸೂಚನೆಯನ್ನು ನೀಡಿದರು.ನಂತರ ಶ್ರೀ.ಶೇಖರರವರು ದಿನದ ಕಾರ್ಯಕ್ರಮಗಳ ವೇಳಾಪಟ್ಟಿ ನೀಡಿ ಚಹಾ ವಿರಾಮವನ್ನು ನೀಡಲಾಯಿತು.ಚಹಾವನ್ನು ಸವಿದ ನಂತರ GIMP image editer ಬಗ್ಗೆ ಮಾಹಿತಿಯನ್ನು ಸಂಪನ್ಮೂ ಲ ವ್ಯಕ್ತಿಯಾದ ಪರಶು ರಾಮ್ ರವರು ಪ್ರಾಯೋಗಿಕವಾಗಿ image ಗಾತ್ರವನ್ನು ಹಿಗ್ಗಿಸು ವುದು , ಕು ಗ್ಗಿಸುವುದು , ಇಮೇಜ್ ನ್ನು cut, copy, paste,background changing , save, ಈ ಬಗೆಗೆ ಮಾಹಿತಿಯನ್ನು ಸಮಗ್ರವಾಗಿ ಅರ್ಥಪೂ ರ್ಣವಾಗಿ ತಿಳಿಸಿದರು . ನಂತರ ಎಲ್ಲಾ ಶಿಬಿರಾರ್ಥಿಗಳು ಅದನ್ನು ಕಲಿಯಲು ಸಮಯವನ್ನು ನೀಡಲಾಯಿತು .. ಶಿಬಿರಾರ್ಥಿಗಳು ಆಸಕ್ತಿಯಿಂದ ಕಲಿತರು . ನಂತರ ಮಧ್ಯಾಹ್ನ ಊಟದ ಸಮಯವಾಗಿತ್ತು.ಎಲ್ಲರು ರುಚಿಯಾದ-ಶು ಚಿಯಾದ ಊಟವನ್ನು ಮು ಗಿಸಿ 2-15 pm ಗೆ ಪುನ: ತರಬೇತಿ ಆರಂಭವಾಯಿತು. ಸಂಪನ್ಮೂ ಲ ವ್ಯಕ್ತಿಯಾದ ಕು.ಆಶಾರಾಣಿಯವರು ಶಿಕ್ಷಕರನ್ನು ಪ್ರೇರಣೆಗೊಳಿಸಲು ಕಲಾವಿದನ ಕಲ್ಪನೆಯ ಕೌಶಲ್ಯವನ್ನು ತಿಳಿಸು ವ ಒಂದು ವಿಡಿಯೋ ಕ್ಲಿಪ್ ನ್ನು ತೋರಿಸಿ , ನಂತರ How to creat mind map ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸವಿವರವಾದ ಮಾಹಿತಿಯನ್ನು , ಅರ್ಥಗರ್ಭಿತವಾಗಿ ನೀಡಿದರು.ಮೊದಲಿಗೆ ಕನ್ನಡ ಭಾಷಾ setting ಮಾಡಿಕೊಳ್ಳು ವ ಬಗೆಗೆ ತಿಳಿಸಿಕೊಟ್ಟರು ನಂತರ mind map ರಚಿಸು ವ ಕು ರಿತು ಮಾಹಿತಿ ನೀಡಿ , ಅದರ ಅನು ಕೂ ಲತೆಗಳ ಬಗ್ಗೆ ಪರಿಚಯಿಸಿ ನಂತರ mind map ನಿಂದ mind map ಗೆ hyperlink ಕೊಡು ವು ದನ್ನು ಸು ದೀರ್ಘವಾಗಿ ಪ್ರತಿಯೊಂದು ಹಂತವನ್ನು ತಿಳಿಸಿಕೊಟ್ಟರು.ನಂತರ ಚಹಾ ವಿರಾಮವನ್ನು ನೀಡಲಾಯಿತು.ಚಹಾ ವಿರಾಮದ ನಂತರ ಸಂಯೋಜಕರಾದ ಶ್ರೀ.ನಾಗರಾಜ್ ರವರು ಹಾಗೂ ಸಂಪನ್ಮೂ ಲ ವ್ಯಕ್ತಿಗಳು 3 ಜನರ ಪ್ರತ್ಯೇಕ ತಂಡಗಳನ್ನು ಮಾಡಿ,ತಂಡಗಳಿಗೆ mind map ಮಾಡಲು 9 ನೇ ತರಗತಿ ಪಾಠಗಳನ್ನು ಹಂಚಿಕೆ ಮಾಡಿದರು . ನಂತರ ಎಲ್ಲಾ ಶಿಕ್ಷಕರು ಅದರಲ್ಲಿ ತೊಡಿಗಿದರು . ತದನಂತರ ಸಂಪನ್ಮೂ ಲ ವ್ಯಕ್ತಿಗಳು ನಾಳಿನ ದಿನದ ಕಾರ್ಯಹಂಚಿಕೆಯನ್ನು ನೀಡು ವುದರೊಂದಿಗೆ ಎರಡನೇಯ ದಿನದ ಕಾರ್ಯಾಗಾರಕ್ಕೆ ವಿದಾಯ ಹೇಳಲಾಯಿತು.ಅಭಿಪ್ರಾಯ: ಒಟ್ಟಿನಲ್ಲಿ ಈ ದಿನದ ತರಬೇತಿಯು ಆಸಕ್ತಿದಾಯಕವಾಗಿ , ಕು ತೂ ಹಲಕಾರಿಯಾಗಿತ್ತು ಎಂದು ಹೇಳು ತ್ತಾ, ಮುಂದಿನ ಮೂ ರು ದಿನಗಳು ಕು ತೂ ಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದು ನಿರೀಕ್ಷಿಸುತ್ತಾ ಈ ದಿನದ ವರದಿಯನ್ನು ಮು ಕ್ತಾಯಗೊಳಿಸುತ್ತಿದ್ದೇನೆ.ವರದಿ ಮಂಡನೆ,ಲಕ್ಷ್ಮ ಣ.H.Pಸರ್ಕಾರಿ ಪ್ರೌಢಶಾಲೆ, ಕೋಡೂರು

ತೃತೀಯ ದಿನದ ವರದಿ :- ತರಬೇತಿಯ 3 ನೇ ದಿನದಂದು ಮೊದಲ ಅವಧಿಯಲ್ಲಿ ಹಿಂದಿನ ದಿನದಂದು ಕಲಿತ ವಿಷಯಗಳ ಕುರಿತು ಪ್ರಾಯೋಗಿಕವಾಗಿ ಕಲಿಕಾರ್ಥಿಗಳು ಮಾಹಿತಿ ಹಂಚಿಕೊಂಡ ನಂತರ 3 ನೇ ದಿನದ ಕಾರ್ಯಕ್ರಮದ ವೇಳಾಪಟ್ಟಿ ಯನ್ನು ಪ್ರದರ್ಶಿಸಲಾಯಿತು. ನಂತರ ಕಲಿಕಾರ್ಥಿಗಳಿಂದ free mind map ನ್ನು ರಚಿಸಿ ಅದರ demo ಕೊಡಿಸಲಾಯಿತು. ಊಟದ ವಿರಾಮದ ನಂತರಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಮೂರ್ತಿ ಯವರು template ರಚನೆಯನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. NCERT ಪಠ್ಯ ಪುಸ್ತಕಗಳ ಬಳಕೆ, ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶ್ರೀಯುತ.ನಾಗರಾಜ್ ರವರು ತರಗತಿಯಲ್ಲಿ ನೈಜ ವಾತಾವರಣವನ್ನು ಸೃಷ್ಟಿಸಿ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ಸ್ವಯಂಮೌಲ್ಯಮಾಪನ ಮಾಡುವ ಕುರಿತು ಮಾಹಿತಿ ನೀಡಿದರು. ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆಶಾರಾಣಿ ಯವರು KOER ವೆಬ್ ಸೈಟ್ ಪ್ರವೇಶ ಪಡೆಯುವ ಬಗ್ಗೆ , ಅದರಲ್ಲಿ ಮಾಹಿತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ತರಬೇತಿಯ ಸ್ಥಳಕ್ಕೆ ಡಯಟ್ ಪ್ರಾಂಶುಪಾಲರಾದ ಶ್ರೀಮತಿ.ಚಂದ್ರಮ್ಮ ಇವರು ಭೇಟಿ ನೀಡಿ ತರಬೇತಿ ಉಪಯುಕ್ತತೆ ಬಗೆಗೆಮಾಹಿತಿ ಪಡೆದರು, ಹಾಗೂ ಕಲಿತ ವಿಷಯಗಳನ್ನು ಶಾಲೆಗಳಲ್ಲಿ ಬಳಸಲು ಸೂಚಿಸಿದರು. ದಿನದ ಕೊನೆಯಲ್ಲಿ 4ನೇ ದಿನದ ವರದಿಯನ್ನು ತಯಾರಿಸಲು ಹಾಗೂ ಕಲಿತ ವಿಷಯಗಳ ವಿಷಯಗಳ ಕುರಿತು demo ನೀಡಲು ತಿಳಿಸಲಾಯಿತು.

ನಾಲ್ಕನೇ ದಿನದ ವರದಿ :- 3 ನೇ ದಿನದಲ್ಲಿ ನಡೆದ ತರಬೇತಿಯಲ್ಲಿ ಕಲಿತ ವಿಷಯಗಳ ಕುರಿತು ಕಲಿಕಾರ್ಥಿಗಳು demo ನೀಡಿದರು. ನಂತರ ಎಲ್ಲಾ ಸಂಪನ್ಮೂ ಲ ವ್ಯಕ್ತಿಗಳು ಹಿಂದಿನ ದಿನ ತಿಳಿಸಿಕೊಟ್ಟ templet ಪೂರ್ಣಗೊಳಿಸಲು ತಿಳಿದರು ಹಾಗೂ ಸಂಪನ್ಮೂ ಲ ವ್ಯಕ್ತಿಯಾದ ಶೇಖರ್ ರವರು ಒಂದೇ folder ಗೆ ಆಯ್ಕೆ ಯಾದ ಪಾಠದ ಹೆಸರನ್ನು ನೀಡಿ ಅದರಲ್ಲಿ mindmap library ಹಾಗೂ templet folder ಗಳನ್ನು ಸೇರುವಂತೆ ತಿಳಿಸಲಾಯಿತು. ನಂತರದ ಅವಧಿಯಲ್ಲಿ ಕಲಿಕಾರ್ಥಿಗಳೇ ತಯಾರು ಮಾಡಿದ 9 ನೇ ತರಗತಿಯ ವಿಷಯವಾರು ಡಿಜಿಟಲ್ ಸಂಪನ್ಮೂ ಲಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಲಾಯಿತು.

ಐದನೇ ದಿನದ ವರದಿ :- 4 ನೇ ದಿನದಲ್ಲಿ ನಡೆದ ತರಬೇತಿಯಲ್ಲಿ ಕಲಿತ ವಿಷಯಗಳ ಕುರಿತು ಕಲಿಕಾರ್ಥಿಗಳು demo ನೀಡಿದರು. ನಂತರ ಎಲ್ಲಾ ಸಂಪನ್ಮೂ ಲ ವ್ಯಕ್ತಿಗಳು ಹಿಂದಿನ ದಿನ ತಿಳಿಸಿಕೊಟ್ಟ templet ಪೂರ್ಣಗೊಳಿಸಲು ತಿಳಿಸಿದರು. ಸಂಪನ್ಮೂ ಲ ವ್ಯಕ್ತಿಗಳಿಂದ ಫೋಟೋಗಳನ್ನು pendrive ಗಳಿಗೆ download ಮಾಡಿಕೊಂಡು, ಅದನ್ನು KOER ಮತ್ತು STF group ಗೆ send ಮಾಡಲಾಯಿತು. ಶೇಖರ್ video editing ಬಗ್ಗೆ ಮಾಹಿತಿ ನೀಡಿದರು. ಪ್ರಾಯೋಗಿಕವಾಗಿ ಕಲಿಕಾರ್ಥಿಗಳು video editing ಮಾಡಿದರು. ಕಲಿಕಾರ್ಥಿಗಳ feed back farm ಗಳನ್ನು ಭರ್ತಿಮಾಡಿ KOER ಗೆ ಕಳುಹಿಸಲಾಯಿತು. ಸಮಾರೋಪ ಸಮಾರಂಭದೊಂದಿಗೆ ತರಬೇತಿ ಮುಕ್ತಾಯಗೊಂಡಿತು.


== 2 ನೇ ತಂಡ ==

ಪ್ರಥಮ ದಿನದ ವರದಿ ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು. ಸಂಚಾಲಕರು:- ಶ್ರೀ.ನಾಗರಾಜ್,ಉಪನ್ಯಾಸಕರು,ಡಯಟ್, ಶಿವಮೊಗ್ಗ.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ.ಶೇಖರಪ್ಪ
  2. ಶ್ರೀ.ನರಸಿಂಹಮೂರ್ತಿ
  3. ಶ್ರೀ.ಪರಶುರಾಮ್ ಭಜಂತ್ರಿ
  4. ಕು.ಆಶಾರಾಣಿ

ಸಮಯ : ಬೆಳಿಗ್ಗೆ 9-30 ರಿಂದ 10-30 ರವರೆಗೆ

ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ

ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್

ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು. ಸಂಚಾಲಕರಾದ ನಾಗರಾಜ್ ರವರು ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.


ಸಮಯ : 10-30 ರಿಂದ 11-00 ರವರೆಗ

ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ

ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನಾಗರಾಜ್

ಕಲಿಕಾಂಶಗಳು : ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.


ಸಮಯ : 11-00 ರಂದ 11-45

ವಿಷಯ : How to creat Folder

ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ

ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ ಮಾಹಿತಿ ನೀಡಿದರು.ನಂತರ ಚಹಾ ವಿರಾಮವನ್ನು ನೀಡಲಾಯಿತು.


ಸಮಯ : ಮಧ್ಯಾಹ್ನ 12-00 ರಿಂದ 12-45

ವಿಷಯ : ಪಾಠಗಳ ಹಂಚಿಕೆ

ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ

ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.


ಸಮಯ : 12-45 ರಿಂದ 1-45

ವಿಷಯ : Email

ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಪರಶುರಾಮ್ ಭಜಂತ್ರಿ

ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.


ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ

ಸಮಯ : 2-45 ರಿಂದ 3-15

ವಿಷಯ : How to download images, videos.

ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ

ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು. ಪ್ರತಿ ಕಲಿಕಾಂಶ ಗಳ ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.

ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು ಹಂಚುವ ಮೂಲಕ ದಿನದ ತರಬೇತಿಗೆ ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.


3 ನೇ ದಿನದ ವರದಿ

ದಿನಾಂಕ : 25-12-2013 ರ ಬೆಳಿಗ್ಗೆ ಮಲೆನಾಡ ಹೆಬ್ಬಾಗಿಲು ಸಿಹಿಮೊಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಗಣಕಯಂತ್ರ ಪ್ರಯೋಗಾಲಯದಲ್ಲಿ ಶ್ರೀಮತಿ.ಲೀಲಾ ಸಹಶಿಕ್ಷಕಿಯವರು ತಮ್ಮ ಮಧು ರ ಕಂಠದಿಂದ ಗಣಕಯಂತ್ರದ ವರ್ಣನೆಯನ್ನು ಒಳಗೊಂಡ ಪ್ರಾರ್ಥನೆಯನ್ನು ಹಾಡು ವುದರ ಮೂ ಲಕ ತರಬೇತಿಗೆ ಚಾಲನೆ ನೀಡಿದರು . ಪ್ರಾರ್ಥನೆಯ ನಂತರ 2 ನೇ ದಿನದ ವರದಿ ವಾಚನವನ್ನು ಶ್ರೀಮತಿ.ಪ್ರಮೀಳಾ ಸಹ ಶಿಕ್ಷಕಿ ಇವರು ಕವಿ ಜಿ.ಎಸ್.ಶಿವರು ದ್ರಪ್ಪ ನವರ ಸ್ಮರಣೆಯೊಂದಿಗೆ ಪ್ರಾರಂಭಿಸಿದರು . ವರದಿ ವಾಚನದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ.ನರಸಿಂಹಮೂ ರ್ತಿ ಯವರು templete ಬಗ್ಗೆ ಮಾಹಿತಿಯನ್ನು ಕಲಿಕಾರ್ಥಿಗಳಿಗೆ ತಿಳಿಸಿದರು . ಚಹಾ ವಿರಾಮದ ನಂತರ ಎಲ್ಲಾ ಕಲಿಕಾರ್ಥಿಗಳು templete ಬಗ್ಗೆ ಪ್ರಾಯೋಗಿಕವಾಗಿ ಕಲಿಯಲು ನಿರತರಾದರು . ಇದಕ್ಕೆ ಸಂಬಂಧಿಸಿದಂತೆ ಉಳಿದ ಸಂಪನ್ಮೂ ಲ ವ್ಯಕ್ತಿಗಳು ಕಲಿಕಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡು ತ್ತಾ ಕಲಿಕಾರ್ಥಿಗಳಿಗೆ ಕಲಿಕಾರ್ಥಿಗಳನ್ನು ಹು ರಿದುಂಬಿಸು ತ್ತಿದ್ದರು . ಮಧ್ಯಾಹ್ನ ಶು ಚಿ-ರು ಚಿಯಾದ ಊಟವನ್ನು ಸವಿಯು ವುದರ ಮೂ ಲಕ ಎಲ್ಲಾ ಕಲಿಕಾರ್ಥಿಗಳು ಸಂತೃಪ್ತರಾಗು ವುದರ ಮೂ ಲಕ ಪುನ: ತಮ್ಮ templete creation ಕಾರ್ಯದಲ್ಲಿ ತಲ್ಲೀನರಾದರು . ಸಂಜೆ 5-30 ಕ್ಕೆ ನಾಳಿನ ಕಾರ್ಯ ಹಂಚಿಕೆಯೊಂದಿಗೆ, ಕಾರ್ಯಾಗಾರ ಮು ಕ್ತಾಯಗೊಂಡಿತು . ವರದಿ ಮಂಡನೆ: ಶ್ರೀ.ಜಯಪ್ಪ, ಸ.ಶಿ. ತ್ಯಾಗರ್ತಿ, ಸಾಗರ ತಾ

ಎರಡನೇ ದಿನದ ವರದಿ (2nd batch)

ಭಾವಜೀವಿ ಕವಿ ಶ್ರೀ ಜಿ ಎಸ್ ಶಿವರುದ್ರಪ್ಪ ರವರ ಅಗಲಿಕೆ ನೋವಿನಭಾರದಿಂದ ಶಿಭಿರಾರ್ಥಿಗಳಲ್ಲಿ ಅನಿವಾರ್ಯವಾಗಿ 2ದಿನದ ತರಬೇತಿಗೆ ಹಾಜರಾಗಿದ್ದರು. . ಶಿಭಿರರ್ಥಿಯವರಿಂದ ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮದ ಮೂ ಲಕ ಆರಂಭವಾಯಿತ್ತು .ಸರಳ, ಸಂಕ್ಷೀಪ್ತ, ಅತ್ಯುತ್ತಮ, ವಿಷಯ ಸಮನ್ವಯತೆಯ ವರದಿ ತಯಾರಿಕೆ & ವರದಿ ವಾಚನ ಮಾಡಿದ ಶ್ರೀ ಡಾಕ್ಯಾ ನಾಯಕ ಸರ್ ರವರಿಗೆ ಸಂಚಾಲಕರಾದ ನಾಗರಾಜ ಸರ್ ರವರಿಂದ ಮೆಚ್ಚುಗೆ ಮಹಾಪೂರ 1&2ನೇ ಅವಧಿಯಲ್ಲಿ ಕ್ರಮವಾಗಿ ರೆಹಮಾನ್ ಶಿಕ್ಷಕರು folder creation ಬಗ್ಗೆ ಶಿಸ್ತು ಬದ್ದವಾಗಿ ,ಧನ್ಯತಾಭಾವ ಡೆಮೋ ಪ್ರದರ್ಶಿಸಿದರು ಶಿಕ್ಷಕರಾದ ಗೋಪಿನಾಥ email ಡೆಮೋ ಸೊಗಸಾಗಿ ಮಾಡಿ ಬಂದಿತು .ಈ ಸಂದರ್ಭದಲ್ಲಿ ನಾಗಪ್ಪ ಸರ್ ಹಾಸ್ಯಭರಿತ ಡೆಮೊ ಸೊಗಸಾಗಿತ್ತು. ಆಮೇಲೆ ರಾಜೇಶ ಸರ್ ಶಿಕ್ಷಕರು ಇಂಟರನೆಟನಿಂದ ಸಂಬಂಧಿಸಿದ ಘಟಕ್ಕೆ ಇಮೇಜುಗಳನ್ನು ಡೌನಲೋಡ್ ಮಾಡುವುದರ ಬಗ್ಗೆ ಅತ್ಯುತ್ತಮಾಗಿ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ನಾಗರಾಜ ಸರ್ ರವರು ನಾಗರಶೈಲಿ, ವೇಸರಶೈಲಿ, & ದ್ರಾವಿಡಶೈಲಿ ಬಗ್ಗೆ ಪರಿಚಯಿಸಿ ಇತಿಹಾಸ ಬೋಧನೆಯಲ್ಲಿ ಹೋಲಿಕೆ ವ್ಯತ್ಯಾಸ ಹಾಗೂ ಸಹಂಬಂಧ ಗಳನ್ನು ಕ್ರೋಢಿಕರಿಸಿ ಇತಿಹಾಸ ಬೋಧನೆಯಲ್ಲಿ ಉದ್ದೇಶಗಳನ್ನು ಸಕಾರಗೊಳಿಸಬೇಕೆಂಬ ಮಾರ್ಗದರ್ಶನವನ್ನು ಮಾಡಿದರು . ಚಹ ವಿರಾಮದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ ಪರಶುರಾಮ ಭಜಂತ್ರಿ ಸರ್ ರವರು GIMP ಇಮೇಜ್ ಎಡಿಟ್ ಎಂಬ ಟೂಲ್ಸನ್ನು ಬಳಿಸಿಕೋಂಡು , ಚತ್ರಕ್ಕೆ ಹೆಸರು ಕೊಡವುದು ,ಗಾತ್ರವನ್ನು ಹಿಗಿಸುವುದು ,ಕುಗಿಸುವುದು , ಬೇಡವಾದ ಚಿತ್ರವನ್ನು ಕತ್ತರಿಸುವುದು ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು . . ಬಿಸಿ ,ಶುಚಿ & ರು ಚಿಯಾದ ಊಟದಸೇವನೆಯ ಜೊತೆಗೆ ವಿಷಯಗಳ ವಿನಿಮಯ ಶಿಬಿರಾರ್ಥಿಗಳಲ್ಲಿ ಕಂಡು ಬಂದಿತು. ಆತುರ ಆತುರವಾಗಿ ಊಟದ ಮು ಗಿಸಿದ ಶಿಬಿರಾರ್ಥಿಗಳು system ಹತ್ತಿರ ಬಳಿ ಬೆಗ್ಗ ದೌಡಾಸಿ path ಸಹಾಯದಿಂದ gimp image ವನ್ನು ಪಾಠಕ್ಕೆ ಸಂಬಂಧಿಸಿದ ಘಟಕ್ಕೆ download ಮಾಡಿಕೋಳ್ಳವುದು ಜೋರಾಗಿತ್ತು .5&7 ಅವಧಿಯವರೆಗೆ ನಡೆಯಿತು . ನಂತರ ಉತ್ಸಾಸದ ಚಿಲು ಮೆ mrp ಆಶಾ ಮೇಡಂ ರವರು mind mapನ 5 ಹಂತಗಳನ್ನು creation mind map, how to set default lohit kannada & path, how to give hyperlink from one mind map to another mind map how to remove hyperlink ಈ ಎಲ್ಲಾ ವಿಷಯಗಳನ್ನು ತಿಳಿಸಿ ಕೊಟ್ಟರು. ಎಲ್ಲಾ ಅನು ಮಾನಗಳನ್ನು ಹೋಗಲಾಡಿಸಿ ಸಂಪೂರ್ಣ ಮಾಹಿತಿ ನೀಡಿದರು. ಚಹಾ ವಿರಾಮದ ನಂತರ ಕಲಿಕಾರ್ಥಿಗಳು mind map creation ಕಾರ್ಯ 5-30 ವರೆಗೂ ಮು oದು ವರೆಯು ತು. . ಕೊನೆಗೆ ಶ್ರೀಯುತ ಸಂಚಾಲಕರು ಮನೆಗೆಲಸವನ್ನು ಶಿಬಿರಾರ್ಥಿಗಳಿಗೆ ಹಂಚಿದರು . ಶಿಬಿರಾರ್ಥಿಗಳಿಗೆ ಬೇಕಾದ ಅವಶ್ಯ & ಮಹತ್ವದ tips ಗಳು ಶೇಖರ್ ನರಸಿಂಹ ಸರ್ ಗಳ ಸಮಯೋಚಿತವಾಗಿ ಮೂಡಿ ಬಂದಿದು “ಸಾಂಬಾರಗೆ ಹಾಕಿದ ಒಗ್ಗರಣೆ " ಎಂತಿದ್ದವು. ಶಿಬಿರಾರ್ಥಿ ಪ್ರಮೀಳಾ .ಕೆ ಸ .ಶಿ ಸರ್ಕಾರಿ ಪ್ರೌಢ ಶಾಲೆ ನಿದಿಗೆ

ಮೂರನೇ ದಿನದ ವರದಿ (2nd batch)