Anonymous

Changes

From Karnataka Open Educational Resources
5,420 bytes added ,  16:07, 11 December 2013
Line 77: Line 77:     
==Workshop short report==
 
==Workshop short report==
Upload workshop short report here (in ODT format)
+
ಇಂದು  ದಿನಾಂಕ 02-12-2013ರ ಬೆಳ್ಳಿಗೆ 10-00ಕ್ಕೆ ಸರಿಯಾಗಿ ಜಿಲ್ಲೆಯ ವಿವಿಧ ತಾಲೂ  ಕು ಗಳಿಂದ ಆಗಮಿಸಿದ ಶಿಕ್ಷಕರು  ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಹಾಜರಿದ್ದರು. ಮೊದಲಿಗೆ ಎಲ್ಲಾ ಶಿಕ್ಷಕರುಗಳು  ನೊಂದಣಿ ಮಾಡಿಸಿಕೊಂಡ ನಂತರ  ಮಾನ್ಯ ಪ್ರಾಚಾರ್ಯರಾದ ಶ್ರೀ ಕೆಂಚನಗೌಡರು  ಹಾಗೂ ನೋಡಲ್‌ ಅಧಿಕಾರಿಗಳಾದ  ಶ್ರೀ ಶ್ರೀಧರ  ಸರ್  ಉದ್ಘಾಟನೆ ಕಾರ್ಯಕ್ರಮವನ್ನು  ನೇರವೇರಿಸಿದರು. ಪ್ರಾಚಾರ್ಯರು ಈ ಕಾರ್ಯಗಾರದಿಂದ ಪಡೆದ ಮಾಹಿತಿಯನ್ನು ತರಗತಿಗಳಲ್ಲಿ ಉಪಯೋಗಿಸು ವಂತೆ  ಸಲಹೆ  ನೀಡಿದರು.
    +
ಮೊದಲನೇ ದಿನ ಹಿಂದಿನ ವರ್ಷ  ಕಲಿತ  ಉಬುಂಟು , PhEt, Freemind, Kalzium, Stellerium, ಮುಂತಾದ ಆಫ್ಲಿಕೇಷನ್‌ಗಳ  ಬಗ್ಗೆ  ಪುನರ್ಮನನ ಮಾಡಲಾಯಿತು. ಎಲ್ಲಾ ಶಿಕ್ಷಕರು KOER ನಲ್ಲಿ ಮಾಹಿತಿಯನ್ನು ತುಂಬಿ ತಮ್ಮ ಇ ಮೇಲ್  ಐಡಿಗಳನ್ನು  ಮತ್ತೊಮ್ಮೆ ಚೆಕ್ ಮಾಡಿಕೊಂಡು  ಹೊಸದಾಗಿ  ಈ ಕಾರ್ಯಗಾರಕ್ಕೆ ಆಗಮಿಸಿದ ಶಿಕ್ಷಕರುಗಳು ಸಹ ತಮ್ಮ ಮಾಹಿತಿಯನ್ನು ತುಂಬಿದರು. ನಂತರದ ನಾಲ್ಕು ದಿನಗಳ ಕಾಲ, KOER ನ ಆಶಯಗಳು ಅದರ ಉಪಯುಕ್ತತೆ, ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. Gimp, OpenShot Vedio Editor,ಗಳನ್ನು ಹೇಗೆ ಬಳಸಬೇಕು ಅವುಗಳಿಂದ ನಮ್ಮ ಸಂಪನ್ಮೂಲವನ್ನು ಹೇಗೆ ವೈವಿದ್ಯಮಯಗೊಳಿಸಬಹುದು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಶಿಕ್ಷಕರು ತಾವುಗಳು ಡೌನ್‌ಲೋಡ್‌ ಮಾಡಿದ ಕೇಲವು ಚಿತ್ರಗಳನ್ನು  ಸಂಕಲನ ಮಾಡುವುದರ ಮೂಲಕ ಆಫ್ಲಿಕೇಷನ್‌ಗಳನ್ನು  ಕಲಿತುಕೊಂಡರು. ಕೋನೆಯ ದಿನ ದಿನಾಂಕ :06-12-2013ರ ಮದ್ಯಾಹ್ನ 3-45ಕ್ಕೆ ಈ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಯಟ್‌ನ ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ಖೈರುನ್ನಿಸಾ ಬೇಗಂ  ಇವರು ಪ್ರತಿ ತಂತ್ರಜ್ಞಾನವು ಹೊಸದೆನಿಸುತ್ತದೆ. ತಂತ್ರಜ್ಞಾನವನ್ನು ಬಳಸಿದಷ್ಟು ಕಲಿಸುತ್ತದೆ. ಎಲ್ಲಾ ಶಿಕ್ಷಕರು ಮುಕ್ತವಾಗಿ ತಂತ್ರಜ್ಞಾನವನ್ನು ಬಳಸಬೇಕು ಹೆದರಿಕೆ, ಸಂಕೋಚ ನಮ್ಮಲ್ಲಿರುವ ಸಂಪನ್ಮೂಲ ಮಕ್ಕಳಿಗೆ  ಸರಿಯಾಗಿ ತಲುಪುದಿಲ್ಲ . ಆದ್ದರಿಂದ ಎಲ್ಲಾ ಶಿಕ್ಷಕರು ಗಣಕಯಂತ್ರದ ಈ ಕಾರ್ಯಗಾರದಿಂದ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಂತೆ ಕರೆ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವಲಿಬಾಬು  ಇವರು ಮಾತಾನಾಡಿ ಈ ಕಾರ್ಯಗಾರದ ಮುಖ್ಯ ಉದ್ದೇಶ ಈಡೇರಿಸುವುದರ ಜೊತೆಗೆ KOER ವೆಬ್‌ ಸೈಟ್‌ನಲ್ಲಿರುವ ವಿಷಯಗಳಿಗೆ ಸಂಪನ್ಮೂಲಗಳನ್ನು ಅಫ್‌ಲೋಡ್‌ ಮಾಡಲು ಕರೆನೀಡಿದರು.
 +
 +
ಈ ಕಾರ್ಯಗಾರದಲ್ಲಿ ಪಾಲ್ಗೋಂಡ ಶಿಕ್ಷಕರುಗಳು ಬಹಳ ಉತ್ಸಾಹದಿಂದ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟ ಆಫ್ಲಿಕೇಷನ್‌ಗಳನ್ನು ಬಳಸಿ ಅನೇಕ  ಫ್ರೀಮೈಂಡ್‌ನಲ್ಲಿ ಮೈಂಡ್‌ ಮ್ಯಾಪ್‌ಗಳನ್ನು , ವಿಡಿಯೋ ತುಣುಕಗಳನ್ನು  KOERಗೆ ಆಪ್‌ಲೋಡ್‌ ಮಾಡಿರುತ್ತಾರೆ.
 +
 +
 +
ಸಂಪನ್ಮೂಲ ವ್ಯಕ್ತಿಗಳು :
 +
# ಶ್ರೀ ಹೆಚ್.ಪೀರ್‌ಬಾಷ  ಸ.ಶಿ. ಸರಕಾರಿ ಪ್ರೌಢಶಾಲೆ, ಮದ್ಲಾಪುರ, ತಾ||.ಮಾನ್ವಿ
 +
# ಶ್ರೀ ವೈಶಂಪಾಯನ ಜೋಶಿ ಸ.ಶಿ., ಸರಕಾರಿ ಬಾಲಕೀಯರ ಪ್ರೌಢಶಾಲೆ, ಸಿರವಾರ ತಾ||.ಮಾನ್ವಿ
 +
# ಶ್ರೀ ವಲಿಬಾಬು ಸ.ಶಿ., ಸರಕಾರಿ ಬಾಲಕರ ಪ್ರೌಢಶಾಲೆ, ಮಾನ್ವಿ.
    
=Social Science=
 
=Social Science=
3

edits