Difference between revisions of "STF 2014-15 Bangalore Urban"
Seema Kausar (talk | contribs) |
Seema Kausar (talk | contribs) |
||
Line 1: | Line 1: | ||
__FORCETOC__ | __FORCETOC__ | ||
19 districts | 19 districts | ||
− | = | + | =Science= |
==Batch 1== | ==Batch 1== | ||
===Agenda=== | ===Agenda=== |
Revision as of 10:24, 13 July 2015
19 districts
Science
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
05/01/2015 to 09/01/2015
Workshop short report
1st Day. 05/01/2015
ದೇವನೂರು ಮಹಾದೇವರು ಹೇಳುವಂತೆ "ಭೂಮಿಗೆ ಬಿದ್ದ ಬೀಜ,ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಡುವುದು"ಎಂಬ ಸಾಲುಗಳಂತೆ ಇಂದು ನಾವು ಕಲಿಯುವ ಕಂಪ್ಯೂಟರ್ ಶಿಕ್ಷಣ ನಮಗೆ ಜೀವನದುದ್ದಕ್ಕು ಬೋಧನೆಯಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಬಹುದು. ದಿನಾಂಕ ೦೫-೦೧-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮೊದಲನೆಯ ತರಗತಿಗೆ ಎಲ್ಲಾ ಶಿಬಿರಾರ್ಥಿರ್ಕಾಗಳು ಹಾಜರಾದೆವು.ಮೊದಲಿಗೆ ಸರ್ಕಾರಿ ಪ್ರೌಢಶಾಲೆ ,ಜೂಗನಹಳ್ಳಿ ಇಲ್ಲಿ ಕನ್ನಡ ಭಾಷಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲಾಕ್ಷಿ ಮೇಡಂರವರು 'ಗಜವದನ ಬೇಡುವೆ ಗೌರಿತನಯ'ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ರಂಜಿತಾ ಮೇಡಂ,ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ,ರಾಜರಾಜೇಶ್ವರಿನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ,ಈ ಕಾರ್ಯಾಗಾರದ ನೋಡಲ್ ಅಧಿಕಾರಿಯಾಗಿದ್ದು ಅವರು ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ಸ,ಶಿ ಸರ್ಕಾರಿ ಪ್ರೌಢಶಾಲೆ ,ಬೇಗೂರು,ಗಂಗರಾಜು ಸ,ಶಿ ತಿಗುಳರಪಾಳ್ಯ ಹಾಗೂ ಅನುರಾಧ ಸ,ಶಿ ಉತ್ತರಹಳ್ಳಿ ಹಾಗೂ ಶಿಬಿರಾರ್ಥಿಗಳಿಗೆ ಸ್ವಾಗತ ಕೋರಿದರು. ೧೧-೩೦ ರ ಅವಧಿಯಲ್ಲಿ ಟೀ ವಿರಾಮವಿತ್ತು ನಂತರ ಶಿಬಿರಾರ್ಥಿಗಳ ಪರಿಚಯವಾಯಿತು. ಶ್ರೀಮತಿ ವಿಸ್ತ್ರತರೂಪ ತಿಳಿಸಿ ಅದರ ಬಗ್ಗೆ ಕೆಲವೊಂದು ಮಾಹಿತಿ ತಿಳಿಸಿದರು. ೧) ಅಂದರೆ ಶಿಕ್ಷಕರು ತರಗತಿಯಲ್ಲಿ ಎದುರಿಸುವ ಸಾವಾಲುಗಳೇನು?ಸಮಸ್ಯೆಗಳೇನು?ಅವುಗಳನ್ನು ಸ್ವೀಕರಿಸಿ ಪರಿಹಾರ ಹುಡುಕುವ ತಂತ್ರವನ್ನು ನಾವು ಈ STF ನ ಮೂಲಕ ಪಡೆಯಬಹುದೆಂದು ತಿಳಿಸಿದರು.
೨) ಈ ಕಾರ್ಯಾಗಾರದ ಮೂಲ ಉದ್ದೇಶ ತಂತ್ರಜ್ಞಾನದ ಮುಖೇನ ಭಾಷೆಯನ್ನು ವಿನೂತನವಾಗಿ ಬೋಧಿಸಿ ಪ್ರಭುದ್ಧತೆಯನ್ನು ಬೆಳೆಸುವುದಾಗಿದೆ.
೩) ಸ್ವಯಂ ಕಲಿಕೆಗೆ ಇದು ಹೆಚ್ಚು ಒತ್ತು ನೀಡಿ ಶಿಕ್ಷಕರ' ಜ್ಞಾನ ಕಣಜ' ವನ್ನು ತುಂಬಿಸಿಕೋಳ್ಳಲು ಈ STF ಸಹಾಯಕವಾಗಿದೆ ಎಂದು ತಿಳಿಸಿದರು.
ನಂತರದ ಅವಧಿಯಲ್ಲಿ ಶ್ರೀಮತಿ ಮಮತ ಭಾಗವತ್ ಮೇಡಂ ರವರು 'ಕೋಯರ್'ಅಂದರೆ 'ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೇಂದ್ರ'ದ ಬಗ್ಗೆ ತಿಳಿಸಿದರು. ೨ ಗಂಟೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಪುನಃ ೨-೩೦ಕ್ಕೆ ಎಲ್ಲರೂ ಒಂದು ಕಡೆ ಸೇರಿದಾಗ ಶ್ರೀಮತಿ ಮಮತ ಭಾಗವತ್ ಮೇಡಂ ರವರು ೨೦೧೪-೧೫ ನೇ ಸಾಲಿನಲ್ಲಿ 'ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿದೆ. ಕಳೆದ ಸಾಲಿನಲ್ಲಿ ಗಣಿತ,ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಲ್ಲಿ STF ಕೇಂದ್ರಗಳು ಸ್ಥಾಪನೆಯಾಗಿದ್ದು ಈ ವರ್ಷ' ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.ಮದ್ಯಾಹ್ನದ ಅವಧಿ ೨-೩೦ಕ್ಕೆ ಶಿಬಿರಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ,ಗಂಗರಾಜು ಹಾಗೂ ಅನುರಾಧ ಮೇಡಂರವರು ಕಂಪ್ಯೂಟರ್ ಬಳಸುವ ವಿಧಾನವನ್ನು ಪ್ರಾರಂಭದಿಂದ ತಿಳಿಸಿದರು ಹಾಗೂ 'ಹ್ಯಾಪ್ 'ಗಳ ಬಗ್ಗೆ ತಿಳಿಸಿದರು ನಂತರ ಮುಖ್ಯವಾಗಿ ಪ್ರತಿಯೊಬ್ಬರು ಅವರವರ E-mail ID ತಯಾರಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಿ E-mail ID ಮೂಲಕ ಒಬ್ಬರಿಗೊಬ್ಬರು ವಿಷಯ ಹಂಚಿಕೊಳ್ಳಲು ಸಹಾಯ ಮಾಡಿದರು.೩ಗಂಟೆಗೆ ಟೀ ವಿರಾಮವಿತ್ತು.ಪುನಃ ಎಲ್ಲರೂ ಕೊಠಡಿಯಲ್ಲಿ ಆಸೀನರಾದಾಗ WYDEA.com ಎಂಬ WWW.Site ನ್ನು Open ಮಾಡಿ ತೋರಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ದಿನ ನಡೆದ ಕಾರ್ಯಾಗಾರ ಸದುದ್ಧೇಶದಿಂದ ಕೂಡಿದ್ದು ಎಲ್ಲಾ ಶಿಬಿರಾರ್ಥಿಗಳು ತಾವೇ ಸ್ವಂತ E-mail ID ರಚಿಸುವ ಸಾಮರ್ಥವನ್ನು ಬೆಳೆಸಿಕೊಂಡರು.ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದರು.ಆಸಕ್ತಿ,ಛಲವಿದ್ದರೆ ಏನನ್ನಾದರರೂ ಸಾಧಿಸಬಹುದೆಂಬ ಭಾವನೆ ಶಿಬಿರಾರ್ಥಿಗಳಲ್ಲಿ ಮೂಡಿತ್ತು.
2nd Day. 06/01/2015
ಎಸ್.ಟಿ.ಎಫ್. ತರಬೇತಿಯ ಎರಡನೇ ದಿನವಾದ ೦೬-೦೧-೨೦೧೫ರಂದು ಮುಂಜಾನೆ ೧೦ ಗಂಟೆಗೆ ತರಬೇತಿಯು ಯಾವುದೇ ವಿಘ್ನವಿರದೆ ಸಾಗಲಿ ಎಂದು ಶ್ರೀಮತಿ ಅನುರಾಧ ರವರು ವಿನಾಯಕನ ಸ್ತುತಿಯನ್ನು ಹಾಡಿ ಸಾಂಪ್ರದಾಯಿಕ ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರು ನಂತರ ಶ್ರೀಮತಿ ಭಾರತಿಯವರು ಎಸ್.ಟಿ.ಎಫ್ ತರಬೇತಿಯ ಮೊದಲ ದಿನದ ಸವಿವರ ವಾದ ವರದಿಯನ್ನು ಓದಿದರು. ನಂತರ ಶ್ರೀಯೋಗೀಶ್ ರವರು ಭಾಷಾಕಲಿಕೆಗೆ ವರ್ಣಮಾಲೆಯಿಂದ ಪ್ರಾರಂಭಿಸುವ ರೀತಿಯಲ್ಲಿ ಕಂಪ್ಯೂಟರ್ ಪ್ರಾರಂಭಿಸುವ ರೀತಿಯಿಂದ ಹಿಡಿದು ಅದರ ಭಾಗಗಳು ಮತ್ತು ಅವುಗಳ ಉಪಯೋಗಗಳನ್ನು ಸವಿವರವಾಗಿ ತಿಳಿಸಿದರು. .ನಂತರ ubuntu ವಿನ ಬಗ್ಗೆ ಮತ್ತು ಕನ್ನಡ ಬರವಣಿಗೆಯನ್ನು ಹೇಗೆ ಪ್ರಾರಂಭಿಸಬೇಕು . ಹಾಗು ಬರವಣಿಗೆಯನ್ನು ಶಿಕ್ಷಕರೇ type ಮಾಡಲು ಕಲಿಸಿದರು. ನಂತರ ಚಹ ವಿರಾಮವನ್ನು ೧೧-೩೦ ರ ಸುಮಾರಿಗೆ ನೀಡಲಾಯಿತು. ವಿರಾಮದ ನಂತರ ಹಿಂದಿನ ದಿನ ನಾವು ರಚಿಸಿಕೊಂಡ ನಮ್ಮ ನಮ್ಮ email I D ಯಿಂದ ಬೇರೆಯವರಿಗೆ mail ಮಾಡುವುದು ಮತ್ತು ನಮಗೆ ಬಂದಂತಹ mail ಗಳನ್ನು ಓದುವುದನ್ನು ಸವಿವರವಾಗಿ ತಿಳಿಸಿದರು . ಶಿಕ್ಷಕರು ತಮ್ಮ ತಮ್ಮಲ್ಲೇ mail ಗಳನ್ನು ಕಳುಹಿಸಿಕೊಳ್ಳಲು ಳಿಸಿಕೊಡಲಾಯಿತು.. ನಂತರ ೧-೩೦ ಕ್ಕೆ ಊಟದ ಸಮಯ.ಊಟದ ಸಮಯದ ನಂತರ ಶ್ರಿಮತಿ ಮಮತ ರವರು ಅಂತರ್ಜಾಲದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಮತ್ತು ಆ ಮಾಹಿತಿಯನ್ನು ನಾವು ಸಂಗ್ರಹಮಾಡಿಕೊಂಡು ಅದನ್ನು email ಮೂ ಲಕ ಇತರರಿಗೆ ಕಳುಹಿಸುವ ವಿಧಾನವನ್ನು ತಿಳಿಸಿ ಶಿಕ್ಷಕರು ಅದನ್ನು ಕಲಿಯುವವರೆಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ಶ್ರೀಮತಿ ರಂಜಿತಾ ರವರು ಬೆಳಗಿನಿಂದ ಸಂಜೆಯವರೆಗೂ ಉಪಸ್ಥಿತರಿದ್ದು ಶಿಕ್ಷಕರಿಗೆ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಸನ್ಮುಖಿಗಳಾಗಿಯೇ ಪರಿಹರಿಸಿದರು. ಚಹ ವಿರಾಮವನ್ನು ೩-೧೫ ಕ್ಕೆ ನೀಡಲಾಯಿತು. ನಂತರ ದಿನವಿಡಿ ಶಿಕ್ಷಕರು ಕಲಿತ ವಿಷಯವನ್ನು ಅಭ್ಯಾಸಿಸಲು ಅವಕಾಶವನ್ನು ಕಲ್ಪಿಸಿಕೊಡಲಾಯಿತು ..ನಂತರ ೫ ಗಂಟೆಯ ಸಮಯದಲ್ಲಿ S T F ತರಬೇತಿಯು ೨ನೇ ದಿನವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
3rd Day. 07/01/2015
ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ . “ಜ್ಞಾನವೇ ಪರಬ್ರಹ್ಮ, ಜ್ಞಾನದಿಂದಲೇ ಬಂಧನ. ಇಡೀ ಜಗತ್ತು ಜ್ಞಾನ ಸ್ವರೂಪ, ಜ್ಞಾನವನ್ನು ಬಿಟ್ಟು ಬೇರೆ ಇಲ್ಲಾ" ಎಂಬುದಕ್ಕೆ ಈ ಎಸ್ ಟಿ ಎಫ್ ತರಬೇತಿಯು ಒಂದು ನಿದರ್ಶನ. ದಿನಾಂಕ ೦೫-೦೧-೨೦೧೫ ರಿಂದ ಪ್ರಾರಂಭವಾದ ತರಬೇತಿಯ ಮೊದಲನೇ ದಿನ ನೀರಸವಾಗಿ, ಎರಡನೇ ದಿನ ಆಸಕ್ತಿಯನ್ನು ಕೆರಳಿಸಿ , ಮೂ ರನೆಯ ದಿನ ಅಂತರ್ಜಾಲವೆಂಬ ಒಂದು ಅದ್ಭುತ ಲೋಕವನ್ನೇ ನಮ್ಮೆದು ರು ತೆರೆದಿಡು ವ ಮೂ ಲಕ ಜ್ಞಾನ ಸಂಪನ್ನರಾದೆವು. ಹಿಂದಿನ ದಿನದ ವರದಿಯನ್ನು ಶ್ರೀಮತಿ. ನಾಗವೇಣಿಯವರು ಓದುವುದರ ಮೂ ಲಕ ಚಾಲನೆ ನೀಡಿದರು . ವ್ಯವಸ್ಥಾಪಕರಾದ ಶ್ರೀಮತಿ ರಂಜಿತ ಮೇಡಂರವರು ಪ್ರತಿಯೊಬ್ಬರೂ ಇ ಮೇಲ್ ವಿಳಾಸ ಹೊಂದಿರುವುದರ ಬಗ್ಗೆ ಖಚಿತಪಡಿಸಿಕೊಂಡರು . ನಂತರ ಪ್ರತಿಯೊಬ್ಬರು ಪರಸ್ಪರ ಮೇಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಸೂ ಚಿಸಿದರು . ಶ್ರೀಮತಿ ಮಮತಾ ಭಾಗ್ವತ್ ಅವರು ಎಲ್ಲರ ಮೇಲ್ ವಿಳಾಸಗಳನ್ನು ಎಸ್ ಟಿ ಎಫ್ ಗ್ರೂ ಪ್ ಗೆ ಸೇರಿಸಿದ ಬಗ್ಗೆ ಪ್ರತಿಯೊಬ್ಬರಿಗೂ ಪರೀಕ್ಷಿಸಲು ಹೇಳಿದರು. ಇನ್ನೂ ಸೇರ್ಪಡೆಗೊಳ್ಳದ ಇ ಮೇಲ್ವಿಳಾಸಗಳನ್ನು ಸಂಗ್ರಹಿಸಿದರು. . ಎಸ್ .ಟಿ. ಎಫ್ ಅಂದರೆ ವಿಷಯ ಶಿಕ್ಷಕರ ವೇದಿಕೆಗೆ ಸದಸ್ಯರಾಗುವುದರಿಂದ ಶಿಕ್ಷಕರು ಹೇಗೆ ತಮ್ಮಲ್ಲಿರು ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಮತ್ತು ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು. ಶ್ರೀ ಗಂಗರಾಜುರವರು ಶಿಬಿರಾರ್ಥಿಗಳಿಗೆ ಆಗಾಗ ಸಲಹೆ ನೀಡುತ್ತ ಮಾರ್ಗದರ್ಶನ ಮಾಡಿದರು. ಊಟದ ವಿರಾಮದ ನಂತರದ ಅವಧಿಯಲ್ಲಿ ಶ್ರೀ ವೆಂಕಟೇಶರವರು ತಂತ್ರಜ್ಞಾನ ಮೂಲಕ ಪರಿಣಾಮಕಾರಿ ಪಾಠಭೋಧನೆ ಹೇಗೆ ಮಾಡಬಹುದು ಎಂಬುದನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟರು. “ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ ಸಂಪನ್ಮೂಲ " ಈ ಅಂತರ್ಜಾಲದಲ್ಲಿ ಏನೆಲ್ಲ ವಿಷಯ ಸಂಗ್ರಹವಿದೆ ಮತ್ತು ಅದು ಶಿಕ್ಷಕರಿಗೆ ನಾನಾಭಿವೃದ್ಧಿಗೆ ಹೇಗೆ ಸಹಾಯಕವಾಗುತ್ತದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು .ಅಲ್ಲದೆ ಉಬಂಟು ಕಲ್ಪವೃಕ್ಷ ತಂತ್ರಜ್ಙಾನವನ್ನು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು . .ಅಂತರ್ಜಾಲದ ಮೂಲಕ ನಮಗೆ ಗೊತ್ತಿರದ ವಿಷಯವನ್ನು ತುಂಬಾ ಸುಲಭವಾಗಿ ,ಶಿಘ್ರವಾಗಿ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಎಳೆಎಳೆಯಾಗಿ ನಮ್ಮ ಮುಂದೆ ಬಿಡಿಸಿಟ್ಟರು . .”ಹೃದಯವಿಶಾಲವಾಗಿದ್ದರೆಮಾತ್ರ ಅಲ್ಲಿ ನಿಜವಾದ ಜ್ಙಾನಹೊಮ್ಮುತ್ತದೆ .” ಎಂಬ ಮಾತಿನಂತೆ ಪ್ರತಿಯೊಬ್ಬ ರೂ ವಿಶಾಲ ಹೃದಯದಿಂದ ಅಂತರ್ಜಾಲವೆಂಬ ವಿಶಾಲ ಜಗತ್ತಿನಲ್ಲಿ ವಿಹರಿಸಿದಾಗ ನಮ್ಮ ಜ್ಞಾನ ಇಮ್ಮಡಿಗೊಳ್ಳುತ್ತದೆ . ಆ ಜ್ಞಾನ ಸಂಪತ್ತನ್ನು ಪಡೆಯಲು ನಾವೆಲ್ಲರೂ ಪಣತೊಡೋಣ ಎಂದು ಹೇಳುತ್ತ ಇವತ್ತಿನ ತರಭೇತಿಯು ತುಂಬಾ ಆಸಕ್ತಿದಾಯಕವಾಗಿ ಮತ್ತು ಸ್ಫೂರ್ತಿದಾಯಕವಾಗಿತ್ತು. ಎಂದು ಹೇಳಬಹುದು
4th Day. 08/01/2015
ಬೆಂಗಳೂರು ನಗರ ಜಿಲ್ಲಾ ಡಯಟ್ ವತಿಯಿಂದ ನಡೆಯುತ್ತಿರುವ STF ೨೦೧೫ ಅಥವಾ ಕನ್ನಡ ಭಾಷಾ ಶಿಕ್ಷಕರ ವೇದಿಕೆ ಗಣಕಯಂತ್ರದ ತರಬೇತಿಯಲ್ಲಿನ ನಿನ್ನೆಯ ಅನುಭವದ ಬುತ್ತಿಯನ್ನು ಬಿಚ್ಚಿಡಲು ಇಚ್ಚಿಸು ತ್ತೇನೆ. ಈ ತರಬೇತಿಯು ೯-೩೦ ಗಂಟೆಗೆ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗಿ ಎಂಬ ಪ್ರಾರ್ಥನೆ ಸಿರಿವಂತ ಬಸವರಾಜುರವರ ಕಂಚಿನಕಂಠದಿಂದ ಹೊರಹೊಮ್ಮಿದಾಗ ನಾವೆಲ್ಲರೂ ಮಂತ್ರಮುಗ್ದ ರನ್ನಾಗಿ ತೇಲಿದಂತಾದದ್ದು ವಿಶೇಷ. ನಂತರ ಹಿಂದಿನ ದಿನದ ಅನುಭವದ ಸಾರವನ್ನು ಸಿರಿವಂತೆ ಲತಾರವರು ಅಚ್ಚುಕಟ್ಟಾಗಿ ನಮ್ಮಲ್ಲರಿಗೂ ಬಡಿಸಿದ್ದು ಮತ್ತೆ ಹಳೆಯ ನೆನಪನ್ನು ಮೆಲುಕು ಹಾಕುವಂತಾಯಿತು.ತದನಂತರ ನಾವೆಲ್ಲರೂ ಗಣಕಯಂತ್ರದ ಒಳಗೆ ಹೋಗಲು ಅಣಿಯಾದೆವು. ಶ್ರೀಯುತ ಯೋಗೆಶ್ ರವರು ನಮ್ಮ ಸಮಸ್ಯೇಗಳನ್ನು ಆಲಿಸಿ ಅವುಗಳನ್ನು ಪರಿಹರಿಸಿದರು. Username ಹಾಗೂ Domine name ಗಳ ವ್ಯತ್ಯಾಸವನ್ನು ತೋರಿಸಿಕೋಟ್ಟರು. ನನಗೆ ಹೆಚ್ಚಿನ ಆಸಕ್ತಿ ,ಆಶ್ಚರ್ಯ ಕಂಡು ಬಂದದ್ದು Google Translate ನಲ್ಲಿ.ತಂತ್ರಜ್ಞಾನವು ಕೈಗೆ ನಿಲುಕಲಾರದಷ್ಷು ಮುಂದಿದೆ.. ಕನ್ನಡದಿಂದ ಇಂಗ್ಲಿಷ್ ಗೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದವಾಗುತ್ತಿದ್ದುದು ನಮಗೆಲ್ಲಾ ಕೂತುಹಲಕರವಾದ ವಿಷಯವಾಗಿತ್ತು. ಮದ್ಯಾಹ್ನದ ಊಟದ ವ್ಯವಸ್ಥೆ ಉತ್ತಮವಾಗಿತ್ತು. ನಂತರದ ಅವಧಿಯಲ್ಲಿ ಅನುರಾಧ ಮೇಡಂರವರು ಪರಿಕಲ್ಪನಾ ನಕ್ಷೆಯನ್ನು ಕಲಿಸಿಕೊಟ್ಟರು. ಇದರಿಂದ ವ್ಯಾಕರಣದ ಪರಿಕಲ್ಪನೆಯನ್ನು ಮಕ್ಕಳಿಗೆ ಮೂಡಿಸಲು ಸಾದ್ಯವಾಗುತ್ತದೆ. ಪ್ರೌಢಶಾಲಾ ಶಿಕ್ಷಕರ ಸಂಘದ ಶ್ರಿಯುತ ಪತ್ತುರ್ ರವರು ಶಿಕ್ಷಕರಿಗೆ ಹೇಗೆ ತರಗತಿ ದಾಖಲೆಗಳನ್ನು ನಿರ್ವಹಿಸಬೇಕೆಂದು ಸಲಹೆ ಸೂಚನೆಗಳನ್ನು ಆತ್ಮೀಯವಾಗಿ ನೀಡಿದರು.
5th Day. 09/01/2015
Batch 2
Agenda
If district has prepared new agenda then it can be shared here
See us at the Workshop
Workshop short report
1st Day. 05/01/2015
2nd Day. 06/01/2015
ದಿನಾಂಕ : 06-01-2015 ರಂದು ಬೆಳಗ್ಗೆ 9.30 ಕ್ಕೆ ಕನ್ನಡ ಭಾಷಾ ಶಿಕ್ಷಕರೆಲ್ಲ ತರಬೇತಿಗೆ ಹಾಜರಾದರು.ಜೀವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ ಶ್ರೀಮತಿ ವಿಶಾಲಾಕ್ಷಿ ಅವರು ದೇವರ ಪ್ರಾರ್ಥನೆಯನ್ನು ಇಂಪಾಗಿ ಹಾಡುವುದರ ಮೂಲಕ ತರಬೇತಿ ಕಾರ್ಯ ಆರಂಭವಾಯಿತು. ತಿಗಳರ ಪಾಳ್ಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಗಂಗರಾಜ್ ಅವರು ನಿರೂಪಣೆ ಮಾಡಿದರು. ಬೇಗೂರಿನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ, ಸಂಪನ್ಮೂಲ ವ್ಯಕ್ತಿಗಳು ಆಗಿರುವ ಶ್ರೀಮತಿ ಮಮತ ಭಾಗವತ್ ಅವರು ಅಂತರ್ಜಾಲದಿಂದ ನಮಗೆ ಬೇಕಾದ ಮಾಹಿತಿಯನ್ನು ಹೇಗೆ ಕಾಪಿ ಮಾಡಿಕೊಂಡು ಗಣಕಯಂತ್ರದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಶಿಕ್ಷಕರಿಗೆ ಅರ್ಥವಾಗುವಂತೆ ಎರೆಡೆರಡು ಬಾರಿ ತಿಳಿಸಿಕೊಟ್ಟರು. ಬೇರೆಯವರಿಗೆ ಇಮೇಲ್ ಕಳುಹಿಸುವಾಗ ಫೈಲ್ ಮತ್ತು ಫೋಲ್ಡರನ್ನು ಹೇಗೆ ಜೋಡಿಸಿ ಕಳುಹಿಸಬೇಕು, ಕಳುಹಿಸಿದನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕರಿಗೆಲ್ಲ ಬೆಳಗ್ಗೆ 11-00ಕ್ಕೆ ಮತ್ತು ಮಧ್ಯಾಹ್ನ 3-30 ಕ್ಕೆ ಚಹಾ ಮತ್ತು ಕಾಫಿಯನ್ನು ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ರಾಗಿಮುದ್ದೆ ಮತ್ತು ಅನ್ನ ಸಾಂಬಾರನ್ನು ನೀಡಲಾಗಿತ್ತು. ಊಟ ಚೆನ್ನಾಗಿತ್ತು. ಮಧ್ಯಾಹ್ನ ಊಟದ ನಂತರ ಶಿಕ್ಷಕರೆಲ್ಲ ಗಣಕಯಂತ್ರದಲ್ಲಿ ಅಂತರ್ಜಾಲದ ಮೂಲಕ ಇಮೇಲ್ ಕಳುಹಿಸುವುದನ್ನು ಕಲಿಯುತ್ತಿದ್ದರು. ಫೊಲ್ಡರನ್ನು ಹೇಗೆ ಹೊಸದಾಗಿ ಸೃಷ್ಠಿ ಮಾಡಬೇಕೆಂಬುದನ್ನು ಕಲಿಯುತ್ತಿದ್ದರು. 8,9,10ನೇ ತರಗತಿ ಪಠ್ಯಕ್ರಮದ ಪಾಠಗಳಿಗೆ ಬೇಕಾದ ಮಾಹಿತಿ ಮತ್ತು ಭಾವಚಿತ್ರಗಳನ್ನು ಅಂತರ್ಜಾಲದಿಂದ ಸಂಗ್ರಹ ಮಾಡುವುದನ್ನು ಕಲಿಯಲಾಯಿತು. ಶ್ರೀಮತಿ ರಂಜಿತಾ ಅವರು (ತರಬೇತಿ ಸಂಯೋಜಕರು) ಶಿಕ್ಷಕರಿಗೆ ಗಣಕಯಂತ್ರದಲ್ಲಿ ಕಡತಗಳನ್ನು ಹೇಗೆ ಸಂಗ್ರಹ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು. ಶಿಕ್ಷಕರು ಪೆನ್‍ಡ್ರೈವ್‍ಗಳನ್ನು ತಂದು ತಮಗೆ ಬೇಕಾದ ಮಾಹಿತಿಯನ್ನು ಕಾಪಿ ಮಾಡಿಕೊಳ್ಳುತ್ತಿದ್ದರು. ಶಿಕ್ಷಕರು ತಾವು ಕಲಿತ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಸಾಯಂಕಾಲ 5.30 ಕ್ಕೆ ತಮ್ಮ ತಮ್ಮ ಮನೆಗಳಿಗೆ ತೆರಳುವುದರ ಮೂಲಕ ಈ ದಿನದ ತರಬೇತಿ ಕಾರ್ಯಕ್ರಮ ಮುಕ್ತಾಯವಾಗಿತ್ತು.
3rd Day. 07/01/2015
ಕನ್ನಡ ವಿಷಯ ಶಿಕ್ಷಕರ STF ತರಬೇತಿ ಮೂರನೇ ದಿನ ಶುಭಾರಂಭವಾದದ್ದು ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆಯೊಂದಿಗೆ. ಹಾಡಿದವರು ಶ್ರಿಯುತ ಬಸವರಾಜುರವರು ಶ್ರೀ ರಾಂಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಇವರ ಮಧುರ ಕಂಠ ಸಿ.ಅಶ್ವಥ್ಅವರನ್ನು ನೆನಪುಮಾಡಿದೆಂದು ಶಿಭಿರಾರ್ಥಿಗ ಅಭಿಪ್ರಾಯ.ಎರಡನೇಯ ದಿನದ ವರದಿ ಮಂಡಿಸಿದವರು ಹರ್ತಿವೀರ ನಾಯಕ್,ಸಿದ್ದಾರ್ಥ ಪ್ರೌಡಶಾಲೆಯ ಶಿಕ್ಷಕರು.ಇವರು ತಮ್ಮ ವರದಿಯ ಕೊನೆಯಲ್ಲಿ ಕೊಟ್ಟ ಹೇಳಿಕೆ 'ಕಲಿತದ್ದು ಕೈಯಗಲ,ಕಲಿಯಬೇಕಾದದ್ದು ಕಡಲಗಲ' ಈ ಹೇಳಿಕೆಯನ್ನು ಅಕ್ಷರಶಃ ಈ ತರಬೇತಿಮ ಅರಿವು ಮೂಡಿಸಿತು. ಈ ತರಬೇತಿ ಅಗತ್ಯವಿತ್ತೆ ಎಂಬ ಪ್ರಶ್ನೆ ಮನದಲ್ಲಿ ಮೂಡಿದ್ದು ಸಹಜ.ಆದರೆ ಮೂರನೇಯ ದಿನದ ತರಬೇತಿ ಮುಗಿಯುವಿದರೊಳಗೆ ಇದು ಆಶ್ಚರ್ಯವಾಗಿ ಮಾರ್ಪಟ್ಟಿತು.ಇದರ ರೂವಾರಿ ಶ್ರೀಯುತ ವೆಂಕಟೇಶ್ I T For Change ಸಂಸ್ಥೆಯಿಂದ ಬಂದಂತಹ ಸಂಪನ್ಮೂಲ ವ್ಯಕ್ತಿ .ಭಾಷಾ ಶಿಕ್ಷಕರಿಗೆ ಪಠ್ಯಪುಸ್ತಕದಷ್ಟೆ ಕಂಪ್ಯೂಟರ್ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.ಶಿಕ್ಷಕ ಮಿತ್ರರಿಗೆ ಕಂಪ್ಯೂಟರ್ ನಿಂದ ದೊರೆಯಬಹುದಾದ ಮಾಹಿತಿಯ ವಿಸ್ತಾರದ ಹರಹನ್ನು ಪರಿಚಯಿಸಿದರು.ಕಂಪ್ಯೂಟರ್ ಬಳಕೆ ಕಡ್ಡಾಯವೆಂಬಂತೆ ಪ್ರಚೋದಿಸಿದರು.Ubuntuಹಾಗೂ Koer ಸಾರ್ವತ್ರಿಕ ತಂತ್ರಾಂಶದ ವಿಸ್ತ್ರತ ಪರಿಚಯ ನೀಡಿದರು.ಪೂರ್ವಾಹ್ನ ಪೂರ್ಣವಾಗಿ ತರಬೇತಿ ಶಿಕ್ಷಕರನ್ನು ತಮ್ಮತ್ತ ಸೆಳೆದುಕೊಂಡು ಪ್ರೋತ್ಸಾಹಿಸಿದರು. ಊಟದ ನಂತರದ ಅವಧಿಯಲ್ಲಿ ಶ್ರೀಮತಿ ಮಮತ,ಅನುರಾಧ ಹಾಗೂ ಗಂಗರಾಜು ರವರು ವಿಷಯ ಪರಿಣಿತರ ಮೇಲ್ವಿಚಾರಣೆಯಲ್ಲಿ ಎರಡು ದಿನಗಳಲ್ಲಿ ಕಲಿತ ವಿಷಯಗಳ ಪುನಾರಾವರ್ತನೆ ನಡೆಯಿತು.ಮಮತ ಮೇಡಂರವರು Cut,Paste,save ಮಾಡುವುದು ಹಾಗೂ ಧ್ವನಿಮುದ್ರಿಸಿಕೊಳ್ಳುವುದು ಇತ್ಯಾದಿ ಮಾಹಿತಿಯನ್ನು ತಿಳಿಸಿಕೊಟ್ಟರು.ನೋಡಲ್ ಅಧಿಕಾರಿ ರಂಜಿತಾರವರ ಮಾರ್ಗದರ್ಶನದಲ್ಲಿ ಮೂರನೇಯ ದಿನದ ತರಬೇತಿ ಸಾರ್ಥಕತೆ ಪಡೆಯಿತು.
4th Day. 08/01/2015
ಎಸ್. ಟಿ. ಎಫ್. ಕನ್ನಡ ತರಬೇತಿಯ ನಾಲ್ಕನೇ ದಿನದ ಪ್ರಾರಂಭವನ್ನು ಬೆಳಿಗ್ಗೆ ೯.೩೦ ಕ್ಕೆ ಶ್ರೀಮತಿ ಅನುರಾಧ ರವರು ಪ್ರಾಥನೆಯನ್ನು ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶ್ರೀಮತಿ ಭಾಗೀರಥೀ ಭಟ್ ರವರು ೩ನೇದಿನದ ವರದಿಯನ್ನು ಮಂಡನೆ ಮಾಡಿದರು ಮತ್ತು ಗಣಕಯಂತ್ರದ ಉಪಯೋಗವನ್ನು ಇಂದಿನ ಜಗತ್ತಿಗೆ ಎಷ್ಟು ಅವಶ್ಯಕತೆ ಎಂದು ತಿಳಿಸಿಕೊಟ್ಟರು. ಬೆಳಿಗ್ಗೆ ೧೦ ಗಂಟೆಗೆ ಶ್ರೀಮತಿ ಮಮತಾ ರವರು ಮನೋ ನಕ್ಷೆಯನ್ನು ರಚಿಸುವ ವಿಧಾನವನ್ನು ಎಲ್ಲಾ ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು ಮತ್ತು ನಾವು ಮಾಡಿದ ಪಾಠದ ಶೇಖರಣೆ ಮಾಡಲು ಮಾಹಿತಿಯನ್ನು ತಿಳಿಸಿಕೊಟ್ಟರು. ಬೆಳಿಗ್ಗರ ೧೧.೩೦ ಕ್ಕೆ ಚಹ ವಿರಾಮದ ನಂತರ ಶಿಬಿರಾರ್ಥಿಗಳು ೧೧.೪೫ ನಿಮಿಷಕ್ಕೆ ಕೊಠಡಿಗೆ ಬಂದು ಮನೋ ನಕ್ಷೆಯ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ವನ್ನು ನಡೆಸಲು ಹೇಳಿದರು. ಅದರಂತೆ ಶಿಬಿರಾರ್ಥಿಗಳು ಸಮಯ ೧`.೩೦ ರ ವರೆಗೆ ಗಣಕಯಂತ್ರದಲ್ಲಿ ಅಭ್ಯಾಸವನ್ನು ನಡೆಸಿದರು. ಸಮಯ ೧.೩೦ ರಿಂದ ಊಟದ ಸಮಯವಾದ ಪ್ರಯುಕ್ತ ಶಿಕ್ಷಕರು ಊಟಕ್ಕೆ ತೆರಳಿದರು . ಊಟದ ನಂತರ ಎಲ್ಲಾ ಶಿಬಿರಾರ್ಥಿಗಳು ಕೊಠಡಿಗೆ ಪ್ರವೇಶ ಮಾಡಿ ನಂತರ ಇ-ಮೇಲ್ ಗೆ ನಮ್ಮ ವಿಳಾಸವನ್ನು ಸೇರಿಸುವ ಬಗ್ಗೆ ಯೋಗೀಶ್ ರವರು ಹೇಳಿಕೊಟ್ಟರು. ಎಲ್ಲಾ ಶಿಬಿರಾರ್ಥಿಗಳು ಕಲಿತರು.. ಮತ್ತು ಪ್ರಾಯೋಗಿಕವಾಗಿ ಅದನ್ನು ಮಾಡಿ ನೋಡಿ ತಮ್ಮ ವಿಳಾಸವನ್ನು ಟೈಪ್ ಮಾಡಿದರು . ಎಸ್.ಟಿ.ಎಫ್ ನ ಎಲ್ಲಾ ಸದಸ್ಯರಿಗೆ ತಮ್ಮ ಸಂದೇಶವನ್ನು ರವಾನಿಸಿದರು.. ಸಮಯ ೩.೩೦ ಕ್ಕೆ ಚಹ ವಿರಾಮ ಮುಗಿಸಿ ಬಂದ ಶಿಕ್ಷಕರು ತಾವು ಕಲಿತಿರುವುದನ್ನು ಮನದಟ್ಟು ಮಾಡಲು ಪುನಃ ಪುನಃ ಮರು ಅಬ್ಯಾಸ ಮಾಡಿದರು. ಸಂಪನ್ಮೂಲ ಶಿಕ್ಷಕರು ಕಲಿಕಾರ್ಥಿಗಳಿಗೆ ಸಂತೋಷದಿಂದ ಕಲಿಸಿಕೊಟ್ಟರು. ಸಮಯ ೫.೩೦ ಕ್ಕೆ ತರಭೇತಿಯ ನಾಲ್ಕನೆಯ ದಿನ ಮು ಕ್ತಾಯವಾಯಿತು.
5th Day. 09/01/2015
ಬೆಂಗಳೂರು ನಗರ ಜಿಲ್ಲಾ ಡಯಟ್ ವತಿಯಿಂದ ನಡೆಯುತ್ತಿರುವ STF ೨೦೧೫ ಅಥವಾ ಕನ್ನಡ ಭಾಷಾ ಶಿಕ್ಷಕರ ವೇದಿಕೆ. ದಿನಾಂಕ ೦೯.೦೧.೨೦೧೫ ರಂದು ಬೆಳಿಗ್ಗೆ ಸರಿಯಾಗಿ ೧೦.೦೦ ರ ವೇಳೆಗೆ ಭಗತ್ ಸಿಂಗ ತಂಡದ ಶ್ರೀಯುತ ಚಂದ್ರು ಅವರು ಗಣೇಶನ ಸ್ತುತಿಯೊಂದಿಗೆ ೫ ನೆಯ ದಿನದ ಕಾರ್ಯಗಾರ ನಿರ್ವಿಘ್ನವಾಗಿ ನಡೆಯುವಂತೆ ಚಾಲನೆಯನ್ನು ನೀಡಿದರು. ಶ್ರೀಯುತ ಗಜೇಂದ್ರ ಮೂರ್ತಿಚಿಂತನೆಯನ್ನು ಮಂಡಿಸಿವುದರ ಮೂಲಕ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಿ ತರಬೇತಿಯಲ್ಲಿ ತಿಳಿಸುವ ವಿಷಯವನ್ನು ಅರ್ಥ ಮಾಡಿಕೊಳ್ಳಲು ಅನವು ಮಾಡಿಕೊಟ್ಟರು. ಅವರು ಹಿಂದಿನ ದಿನದ ವರದಿಯನ್ನು ಅಚ್ಚುಕಟ್ಟಾಗಿ ಓದುವುದರ ಮೂಲಕ ಹಿಂದಿನ ದಿನ ನಾವು ಕಲಿತ ವಿಷಯಗಳನ್ನು ಪುನರ್ ಮನನ ಮಾಡಿಕೊಳ್ಳುವಂತೆ ತಿಳಿಸಿದರು. ಕಾರ್ಯಾಗಾರದ ಪ್ರಾರಂಭದಲ್ಲಿ ಶ್ರೀಮತಿ ಮಮತಾ ಭಾಗವತ್ ರವರು ಬಹಳ ಸರಳವಾಗಿ Short cut key ಗಳನ್ನು ಉಪಯೋಗಿಸುವುದನ್ನು ಕಲಿತ ನಂತರ pen drive ನಿಂದ Desktop ಗೂ Destop ನಿಂದ pen drive ಗೂ copy ಮಾಡುವುದನ್ನು ತಿಳಿಸಿಕೊಟ್ಟರು. ನಂತರ ಶಿಕ್ಷಕರಿಗೆ ಅತಿ ಉಪಯುಕ್ತವಾದ ಅಂಕಪಟ್ಟಿಗಳನ್ನು ಗಣಕ ಯಂತ್ರದಲ್ಲಿ ಕ್ರೊಢಿಕರಿಸುವ ಬಗೆಯನ್ನು ತಿಳಿಸುವುದರ ಜೊತೆಯಲ್ಲಿ ಸ್ವತಃ ಗಣಕ ಯಂತ್ರದಲ್ಲಿ ಅಭ್ಯಾಸವನ್ನು ಮಾಡಿಸಿದರು. ಇಂದು ಕಾರ್ಯಾಗಾರದ ಕೊನೆಯ ದಿನವಾದ್ದರಿಂದ ಪ್ರತಿಯೊಬ್ಬರಿಗೂ ಒಬ್ಬಟ್ಟು , ಪೂರಿ, ಅನ್ನ, ರಸಂ, ಮಜ್ಜಿಗೆ ಊಟದ ವ್ಯವಸ್ಥೆಯಾಗಿತ್ತು. ಊಟದ ವಿರಾಮದ ನಂತರ ಪ್ರತಿಯೊಬ್ಬರು ತರಗತಿಗೆ ಹಾಜರಾದ ನಂತರ ಶ್ರೀಮತಿ ಮಮತಾ ಭಾಗವತ್ ರವರು ವಸ್ತು ವಿಷಯ ಪ್ರವೇಶ ದ್ವಾರದ ಮೂಲಕ Koer page ನ್ನು ತೆರೆದು ಅದರಲ್ಲಿ ಕಲಿಕಾರ್ಥಿಗಳ ಅಭಿಪ್ರಾಯಗಳನ್ನು ದಾಖಲಿಸುವುದನ್ನು ತಿಳಿಸಿಕೊಡುವುದರ ಜೊತೆಗೆ ಹಿಮ್ಮಾಹಿತಿಯ ಹಾಳೆಯನ್ನು ಭರ್ತಿ ಮಾಡಿ ಕಳುಹಿಸುವಂತೆ ಸೂಚಿಸಿದರು. ಒಟ್ಟಿನಲ್ಲಿ ೫ ದಿನದ ತಂತ್ರಾಂಶ ತರಬೇತಿಯು ಎಲ್ಲರಿಗೂ ಚೇತನವನ್ನು ನೀಡುವುದಲ್ಲದೆ , ಗಣಕಯಂತ್ರದ ಬಗ್ಗೆ ಯಾವ ಮಾಹಿತಿಯು ಇಲ್ಲದ ಶಿಕ್ಷಕ / ಶಿಕ್ಷಕಿ ಯರೂ ಕಲಿಯುವಂತೆ ಮಾಡಿದುದಲ್ಲದೆ ಅವರಲ್ಲೂ ಇನ್ನು ಮುಂದೆ ಪ್ರತಿಯೊಂದು ಹಂತದಲ್ಲೂ ಗಣಕಯಂತ್ರವನ್ನು ಬಳಸುವ ಆಸಕ್ತಿಯನ್ನು ಮೂಡಿಸಿದರು . ಒಟ್ಟಿನಲ್ಲಿ ಕಾರ್ಯಾಗಾರವು ಫಲಪ್ರದವಾಗಿ ಮುಕ್ತಾಯವಾಯಿತು.
Batch 3
Agenda
If district has prepared new agenda then it can be shared here
See us at the Workshop
Workshop short report
3rd Day.
ದಿನಾಂಕ ೨೯-೦೧-೨೦೧೫ರಂದು ೩ನೇ ದಿನದ ತರಬೇತಿಯು ಸರಿಯಾದ ಸಮಯಕ್ಕೆ ಬಾಲಕೃಷ್ಣ ಸರ್ ರವರ ೨ನೇ ದಿನದ ವರದಿಯ ವಾಚನದ ಮೂಲಕ ಪ್ರಾರಂಭವಾಯಿತು. ನಂತರ ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ಸರ್ ರವರು ಹಿಂದಿನ ಕಾಲದಲ್ಲಿ ಮಾಹಿತಿ ವಿನಿಮಯಕ್ಕಾಗಿ ಪಾರಿವಾಳವನ್ನು ಬಳಸುತ್ತಿದ್ದರು ನಂತರ ಪತ್ರ ವ್ಯವಹಾರದ ಮೂಲಕ ಮಾಹಿತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಕಳುಹಿಸುತ್ತಿದ್ದರು. ಆದರೆ ಈ ಸಾಧನಗಳ ಮೂಲಕ ಮಾಹಿತಿ ಕಳುಹಿಸುವುದಕ್ಕೆ ಬಹಳ ಸಮಯ ಬೇಕಾಗುತ್ತಿತ್ತು.ಆದರೆ ಈಗ ಕಾಲ ಬದಲಾಗಿದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇ-ಮೇಲ್ ಎಂಬ ತಂತ್ರಜ್ಞಾನದ ಮೂಲಕ ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಒಬ್ಬರಿಂದ ಮತ್ತೊಬ್ಬರಿಗೆ ರವಾನಿಸಬಹುದು ಎಂಬುದರ ಬಗ್ಗೆ ಬಹಳ ಸೊಗಸಾಗಿ ಕಲಿಕಾರ್ಥಿಗಳಿಗೆ ತಿಳಿಸಿದರು.ಇದರ ಮೂಲಕ ಇ-ಮೇಲ್ ನ ಮಹತ್ವವನ್ನು ಕಲಿಕಾರ್ಥಿಗಳಿಗೆ ತಿಳಿಸಲಾಯಿತು. ನಂತರ ವೆಂಕಟೇಶ್ ಸರ್ ರವರು ‘ಸ್ಕೈಪ್ ಕಾಲ್’ ಬಗ್ಗೆ ಸಂಕ್ಷೀಪ್ತ ಮಾಹಿತಿ ನೀಡಿದರು. ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ನಾನು ಈ ಮೂಲಕ ಕೇಳಿಕೊಳ್ಳುತ್ತೇನೆ.ಇದಾದ ನಂತರ ಕಲಿಕಾರ್ಥಿಗಳಿಗೆ ಚಹ ಸೇವಿಸಲು ವಿರಾಮವನ್ನು ಕೊಡಲಾಯಿತು. ಚಹ ವಿರಾಮದ ನಂತರ ಮಾಹಿತಿ ವಿನಿಮಯಕ್ಕಾಗಿ ಇ-ಮೇಲ್ ಐ. ಡಿಯ ಅವಶ್ಯಕತೆ ಇದೆ. ಆದ್ದರಿಂದ ವೆಂಕಟೇಶ್ ಸರ್ ರವರು ಇ-ಮೇಲ್ ಐ ಡಿ ಇಲ್ಲದ ಕಲಿಕಾರ್ಥಿಗಳಿಗೆ ಇ- ಮೇಲ್ ಐ ಡಿ ಯನ್ನು ರಚಿಸಿದರು. ರಚಿಸಿದಂತಹ ಇ-ಮೇಲ್ ಗಳನ್ನು ಕನ್ನಡ ಎಸ್. ಟಿ. ಎಫ್. ಗೂಗಲ್ ಗ್ರೂಪ್ ಗೆ ಸೇರಿಸಿದರು. ನಂತರ ಇ -ಮೇಲ್ ಗೆ ಸೈನ್ ಇನ್ ಆಗುವುದು ಹೇಗೆ? ಇ-ಮೇಲ್ ನ್ನು ನೋಡುವುದು, ಹಾಗೂ ಬೇರೆಯವರಿಗೆ ಇ-ಮೇಲ್ ಕಳುಹಿಸುವುದು ಹೇಗೆ? ಎಂಬುದನ್ನು ಪ್ರಾತ್ಯಕ್ಷಿಕದ ಮೂಲಕ ಸವಿಸ್ತಾರವಾಗಿ ವಿವರಿಸಿದರು . ಹಾಗೆಯೇ ಕಲಿಕಾರ್ಥಿಗಳಿಗೆ ತಮ್ಮ ತಮ್ಮ ಇ- ಮೇಲ್ ಗೆ ಸೈನ್ ಇನ್ ಆಗಿ ಕನ್ನಡ ಎಸ್. ಟಿ . ಎಫ್. ಗ್ರೂಪ್ ಗೆ ಮೇಲ್ ಮಾಡಲು ತಿಳಿಸಿದರು. ಇದಾದ ನಂತರ ಊಟದ ವಿರಾಮಕ್ಕೆ ಬಿಡಲಾಯಿತು. ಊಟದ ವಿರಾಮದ ನಂತರ ವಾಟ್ಸ್ ಆಪ್ ಗ್ರೂಪ್ ರಚಿಸಲು ಎಲ್ಲರ ಹೆಸರು ಮತ್ತು ಮೊಬೈಲ್ ನಂಬರನ್ನು ಪಡೆದುಕೊಂಡರು.ನಂತರ ಯೋಗೇಶ್ ಸರ್ ರವರು ನಮ್ಮ ಇ-ಮೇಲ್ ಗೆ ಬಂದಂತಹ ಮಾಹಿತಿಯನ್ನು ಡೌನ್ ಲೋಡ್ ಮಾಡುವುದು ಹೇಗೆ? ಹಾಗೂ ಅದನ್ನು ಉಳಿಸುವುದು ಹೇಗೆ ಎಂಬುದನ್ನು ಮನದಟ್ಟು ಮಾಡಿದರು. ನಂತರ ಅದನ್ನು ಪ್ರಾಯೋಗಿಕವಾಗಿ ಮಾಡಲು ಹೇಳಿದರು.ಮತ್ತೆ ಸಾಯಂಕಾಲದ ಚಹ ಸೇವಿಸಲು ವಿರಾಮವನ್ನು ನೀಡಲಾಯಿತು. ಚಹ ವಿರಾಮದ ನಂತರ ಎಲ್ಲ ಕಲಿಕಾರ್ಥಿಗಳು ತಮ್ಮ ತಮ್ಮ ಇ-ಮೇಲ್ ಗೆ ಲಾಗ್ ಇನ್ ಆಗಿ ವಿಚಾರ ವಿನಿಮಯದಲ್ಲಿ ತೊಡಗಿದ್ದರು. ಅದೇ ಸಮಯಕ್ಕೆ ಶ್ರೀಯುತ ವಿ. ಜಿ. ಜಯರಾಮಯ್ಯನವರು ಆಗಮಿಸಿ ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಹೇಳಿದರು ಹಾಗೂ ಶಿಕ್ಷಕರು ತಾವು ಮಾಡಬೇಕಾದ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಎಂದು ಹೇಳಿದರು. ಅಲ್ಲದೆ ಶಿಕ್ಷಕರ ಸಮಸ್ಯೆಗಳಿಗೂ ಕೂಡ ತಾವು ಸ್ಪಂದಿಸುವುದಾಗಿ ಆಶ್ವಾಸನೆಯನ್ನು ನೀಡಿದರು. ಒಟ್ಟಾರೆ ಈ ದಿನದ ತರಬೇತಿಯಿಂದ ಇ- ಮೇಲ್ ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.