Difference between revisions of "ಹರಲೀಲೆ ಹರಿಹರ"
Line 35: | Line 35: | ||
ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ. | ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ. | ||
ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ. | ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ. | ||
+ | |||
೨. ಮಂದಾನಿಲ ರಗಳೆ | ೨. ಮಂದಾನಿಲ ರಗಳೆ | ||
Revision as of 13:16, 17 November 2016
ಪಠ್ಯದ ಗುರಿ ಮತ್ತು ಉದ್ದೇಶ
- ಜೀವನ ಕೌಶಲಗಳು
- ಮಾನವನ ಬದುಕಿನಲ್ಲಿನ ದೈವಲೀಲೆಗೆಳು
- ಹರನೇ ಸತ್ಯ
- ಭಾರತೀಯ ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯದ ಪರಿಚಯ
- ಭಾಷಾ ಕೌಶಲಗಳು
- ಮೇರು ಕವಿಯ ಪರಿಚಯ
- ಹಳಗನ್ನಡದ ರಗಳೆಸಾಹಿತ್ಯ ಪರಿಚಯ
- ಕನ್ನಡ ಛಂದಸ್ಸಿನ ಪರಿಚಯ
- ಪೂರ್ವ ಪ್ರಾದೇಶಿಕ ಭಾಷೆಯ ಪರಿಚಯ
- ಸನ್ನಿವೇಶ ಪರಿಚಯದ ಮೂಲಕ ಭಾಷೆ ಬರವಣಿಗೆ ಮತ್ತು ಓದು
ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ.
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ /ಸಾಹಿತ್ಯ ಘಟ್ಟ ಪರಿಚಯ
- ನಡುಗನ್ನಡ*
- ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
- ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್‌ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
- ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದ ಮಣಿ ದರ್ಪಣ.
- ನಡುಗನ್ನಡ*
ರಗಳೆ ಹಳೆ ಕನ್ನಡ ಕಾವ್ಯದ ಛಂದಸ್ಸಿನ ಒಂದು ಪ್ರಕಾರ. ಈ ಛಂದಸ್ಸಿನಲ್ಲಿ ಹರಿಹರನಾದಿಯಾಗಿ ಅನೇಕ ಕವಿಗಳು ಕಾವ್ಯರಚನೆ ಮಾಡಿದ್ದಾರೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಂಖ್ಯೆಯ ಅನಿಯಮಿತ ಪಾದಸಂಖ್ಯೆಗಳೂ ಆದಿ ಅಥವಾ ಅಂತ್ಯ ಪ್ರಾಸಗಳೂ ಎಲ್ಲಾ ರಗಳೆಗಳಿಗೂ ಸಾಮಾನ್ಯ ಅಂಶಗಳು. ಇದರಲ್ಲಿ ಮೂರು ಮುಖ್ಯವಿಧಗಳನ್ನು ಕಾಣಬಹುದು ೧.ಉತ್ಸಾಹ ರಗಳೆ ೨.ಮಂದನಿಲ ರಗಳೆ ೩.ಲಲಿತ ರಗಳೆ
೧.ಉತ್ಸಾಹ ರಗಳೆ
ಇದರಲ್ಲಿ ಮುಖ್ಯವಾಗಿ ಮೂರು ಮಾತ್ರೆಗಳಂತೆ ಗಣ ವಿಂಗಡನೆಯಾಗುತ್ತದೆ. ಇದರಲ್ಲಿಯೂ ಹಲವು ಪ್ರಕಾರಗಳಿವೆ. ಒಂದು ಪ್ರಕಾರದಲ್ಲಿ "೩+೩+೩+೩" ಮಾತ್ರೆಗಳಂತೆ ಗಣವಿಂಗಡನೆಯಾಗುವುದು ಇನ್ನೊಂದು ಪ್ರಕಾರದಲ್ಲಿ "೩+೩+೩+ಗುರು" ಮಾತ್ರೆಗಳಂತೆ ಗಣವಿಂಗಡನೆಯಾಗುವುದು ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ. ಸಾಮಾನ್ಯನಿಯಮದಂತೆ ಯಾವಗಣವೂ ಮೊದಲಲ್ಲಿ ಲಘು ಹಾಗೂ ಅನಂತರ ಗುರು ಇರುವ (U _) ವಿನ್ಯಾಸ ಹೊಂದಿರುವುದಿಲ್ಲ.
೨. ಮಂದಾನಿಲ ರಗಳೆ
ಇದರಲ್ಲಿಯೂ ಹಲವು ಪ್ರಕಾರಗಳಿವೆ. ಮೊದಲನೆಯ ಪ್ರಕಾರದಲ್ಲಿ ಆದ್ಯಂತ ಪ್ರಾಸನಿಯಮಗಳ ಜೊತೆಯಲ್ಲಿ ಪ್ರತಿಪಾದದಲ್ಲಿಯೂ ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುತ್ತವೆ. ಅಂದರೆ ಗಣವಿಭಾಗದಲ್ಲಿ "೪+೪+೪+೪" ಎಂಬ ವಿನ್ಯಾಸವಿರುತ್ತದೆ. ಇನ್ನೊಂದು ಪ್ರಕಾರದಲ್ಲಿ ಮೂರು ಮತ್ತು ಐದು ಮಾತ್ರೆಗಳ ಗಣಗಳು ಎರಡು ಬಾರಿ ಪುನರಾವರ್ತನೆಯಾಗುತ್ತವೆ. ಅಂದರೆ ಗಣವಿಭಾಗದಲ್ಲಿ "೩+೫+೩+೫" ಎಂಬ ವಿನ್ಯಾಸವಿರುತ್ತದೆ. ಈ ವಿಧಗಳಲ್ಲಿಯೂ ಕೂಡ ಮೊದಲು ಲಘು, ಅನಂತರ ಗುರು ಇರುವ ಗಣವಿನ್ಯಾಸ ಬರಬಾರದು. ಈ ಎರಡೂ ಪ್ರಕಾರಗಳೂ ಹಿಂದಿನ ಕವಿಗಳಿಂದ ಪ್ರಯೋಗಿಸಲ್ಪಟ್ಟಿದೆ.
೩.ಲಲಿತರಗಳೆ
ಇದರಲ್ಲಿಯೂ ಬೇರೆ ಬೇರೆ ವಿಧಗಳಿದ್ದರೂ ಮುಖ್ಯವಾಗಿ ನಾಲ್ಕು ಪಂಚಮಾತ್ರಾಗಣಗಳಿಂದ ಕೂಡಿರುತ್ತದೆ. ಎಲ್ಲ ರಗಳೆಗಳ ನಿಯಮದಂತೆ ಇದರಲ್ಲಿಯೂ ಯಾವಗಣದಲ್ಲಿಯೂ ಮೊದಲು ಲಘು, ಅನಂತರ ಗುರು ಇರುವಂತಹ (U _ UU ಅಥವಾ U _ _)ವಿನ್ಯಾಸವಿರಬಾರದು
ಆದ್ಯಂತಪ್ರಾಸಗಳಿರುವ ಉದಾಹರಣೆ:-
ಏನವ್ವ ಸಂಪಗೆಯೆ ಶಿವನ ಸಿರಿಮುಡಿಗಿಂದು ನೀನೀವ ಪೊಸ ಪೂಗಳಂ ನೀಡು ನೀಡೆಂದಂ|| (ಹರಿಹರನ ಪುಷ್ಪರಗಳೆ)
ದವನವೇ ಶಿವನ ಪರಿಮಳದ ಹಬ್ಬವೆ ಭಾರ ಭುವನದೊಳ್ ನಿನಗೆ ಸರಿಯಿಲ್ಲ ಸೌರಭಸಾರ|| (ಹರಿಹರನ ಪುಷ್ಪರಗಳೆ)
ಕವಿ ಪರಿಚಯ
ಕನ್ನಡದ ಮೊದಲ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪೈ ಅವರ ತಂದೆ ಮಂಗಳೂರಿನವರು,ತಾಯಿ ಮಂಜೇಶ್ವರದವರು. ತಮ್ಮ ಹೆಸರಿನ ಹಿಂದಿದ್ದ 'ಎಂ' ಎಂಬ ಇನಿಷಿಯಲ್ ತೋರುತ್ತಾ 'ಎಂ' ಅಂದರೆ ಮಂಗಳೂರೂ ಹೌದು, ಮಂಜೇಶ್ವರವೂ ಹೌದು ಎನ್ನುತ್ತಿದ್ದರು.'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಮುಂದುವರಿದು-ಕನ್ನಡನಾಡಿನಲ್ಲಿ ಹುಟ್ಟಿದೀನಲ್ಲ? ಕನ್ನಡದಲ್ಲಿ ಪದ್ಯ ಬರೀತೀನಲ್ಲ? ನಾನೇ ಪುಣ್ಯವಂತ ಎಂದು ಹೇಳಿಕೊಂಡು ಖುಷಿಪಡುತ್ತಿದ್ದರು ಗೋವಿಂದ ಪೈ. ಆದರೆ, ನ.1ರಂದು ಕರ್ನಾಟಕದ ಏಕೀಕರಣವಾದಾಗ ಅವರಿಗೆ ತುಂಬ ಬೇಸರವಾಗುವಂಥ ಘಟನೆ ನಡೆದುಹೋಯಿತು. ಕರ್ನಾಟಕದ ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು. ಜತೆಗೆ ಮಂಜೇಶ್ವರ ಕೂಡ!ಈ ಸುದ್ದಿ ತಿಳಿದ ಗೋವಿಂದ ಪೈ ಅವರು ಗಳಗಳನೆ ಅತ್ತೇಬಿಟ್ಟರಂತೆ. ನಂತರ ನವೆಂಬರ್ ಒಂದನೇ ತಾರೀಖು ನನ್ನ ಪಾಲಿಗೆ ಶ್ರಾದ್ಧದ ದಿನ. ಏಕೆಂದರೆ, ಅವತ್ತು ನನ್ನ ಕನ್ನಡ ನಾಡಿಗೆ ಅನ್ಯಾಯವಾಗಿದೆ. ಅವಮಾನ ಮಾಡಲಾಗಿದೆ. ಕನ್ನಡಮ್ಮನ ಮನೆಯ ಒಂದು ಭಾಗವನ್ನೇ ಕತ್ತರಿಸಿ ಬೇರೆಯವರಿಗೆ ಕೊಟ್ಟರೆ ಅದನ್ನು ಸಹಿಸುವುದು ಹೇಗೆ ಎಂದರು. ಮುಂದುವರಿದು- 'ನಾನು ಹುಟ್ಟಿದ್ದು ಕನ್ನಡನಾಡಿಗೆ ಸೇರಿದ್ದ ಮಂಜೇಶ್ವರದಲ್ಲಿ. ಆದರೆ ಈಗ ಮಂಜೇಶ್ವರ ಕೇರಳಕ್ಕೆ ಸೇರಿಹೋಗಿದೆ. ನಾನು ಕನ್ನಡದ ನೆಲದಲ್ಲೇ, ಅಂದರೆ ಮಂಗಳೂರಿನಲ್ಲೇ ಸಾಯಲು ಇಷ್ಟಪಡುತ್ತೇನೆ' ಎಂದರು. ಮುಂದೆ 1963ರಲ್ಲಿ ಅವರು ಕೊನೆಯುಸಿರೆಳೆದದ್ದು ಮಂಗಳೂರಿನ ಬಂಧುಗಳ ಮನೆಯಲ್ಲೇ!.
- ಎಂ ಗೋವಿಂದ ಪೈ ರವರ ಹೆಚ್ಚಿನ ಮಾಹಿತಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಷಯ ವಿಶ್ವಕೋಶದಲ್ಲಿನ ಮಾಹಿತಿ
ನೀಡಿರುವ ಪದ್ಯಭಾಗದ ಹಿನ್ನಲೆ
'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ' ಎಂದು ಬರೆದವರು ಎಂ. ಗೋವಿಂದ ಪೈ. ಇವರು ಕನ್ನಡದ ಹೆಮ್ಮೆಯ ಕವಿಗಳಲ್ಲೊಬ್ಬರು. 1956ರ ನವೆಂಬರ್ 1 ರಂದು ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಲಿದೆ ಎಂಬ ಸುದ್ದಿ ಕೇಳಿದಾಕ್ಷಣ ಇವರು ಸಿಹಿ ಹಂಚಿದ್ದರು. ಆ ಸಂಭ್ರಮದಲ್ಲೇ 'ತಾಯೆ ಬಾರ ಮೊಗವ ತೋರ' ಗೀತೆ ರಚಿಸಿದರು.
ಪ್ರಸ್ತುತ ಪಾಠಕ್ಕೆ ಪೀಠಿಕೆ
ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ.
ವಿವಾಹಯೋಗ್ಯನಾದ ಈತನಿಗೆ ಯೋಗ್ಯ ಕನ್ಯೆಯನ್ನು ಗೊತ್ತು ಮಾಡಿದರು. ಮದುವೆಗೆ ಎಲ್ಲ ಸಿದ್ಧತೆಗಳೂ ನಡೆದು ಮದುವೆಯ ದಿಬ್ಬಣವೂ ಹೊರಟಿತು. ಈ ಸಮಯದಲ್ಲಿ ಸಂಸಾರ ಬಂಧನದಲ್ಲಿ ಅನುವಾಗಿರ್ದ ನಂಬಿಯನ್ನು ಎಚ್ಚರಿಸಲು ಶಿವ ಒಂದು ಆಟವನ್ನು ಹೂಡಿದ. ವೃದ್ಧ ಮಾಹೇಶ್ವರನ ವೇಷ ಧರಿಸಿ ವಿವಾಹ ಮಂಟಪಕ್ಕೆ ನೇರವಾಗಿ ಬಂದು, ಅಲ್ಲಿ ನೆರೆದಿದ್ದವರೆಲ್ಲರ ದೃಷ್ಟಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡು ನಂಬಿ ತನ್ನ ತೊತ್ತಿನ ಮಗ ಎಂದು ಸಾರಿ ಹೇಳಿ ಮದುವೆಗೆ ವಿಘ್ನವನ್ನುಂಟು ಮಾಡಿದ. ಆದರೆ ಅಷ್ಟಕ್ಕೇ ತೃಪ್ತನಾಗದೆ ಕೈಯಲ್ಲಿ ಹಿಡಿದುಕೊಂಡಿದ್ದ ಊರುಗೋಲಿಂದ ಅಲ್ಲಿದ್ದ ಕುಂಭಗಳನ್ನೆಲ್ಲ ಒಡೆದು ರಾದ್ಧಾಂತಮಾಡಿದ. ತನ್ನ ತೊತ್ತಿನ ಮಗ ಎಂಬುದಕ್ಕೆ ಸಾಕ್ಷಿಯಾಗಿ ಪತ್ರವುಂಟು ಎಂದ. ಇದನ್ನೆಲ್ಲ ಕೇಳಿ ಬಹಳವಾಗಿ ಕೋಪಗೊಂಡ ನಂಬಿ ಆ ವೃದ್ಧನನ್ನು ಆಚೆಗೆ ನೂಕುವಂತೆ ಆಜ್ಞೆ ಮಾಡಿದ. ಆದರೇನು ನಂಬಿಯ ಮದುವೆ ನಿಂತುಹೋಯಿತು. ಮಂತ್ರಿ ಆ ಪ್ರಮಾಣಪತ್ರವನ್ನು ವೃದ್ಧನಿಂದ ಪಡೆದು ಅದು ನಿಜವಾದ ಪತ್ರವೆಂದು ಖಚಿತಪಡಿಸಿಕೊಂಡು ರಾಜನಿಗೆ ಸಂಗತಿಯನ್ನು ತಿಳಿಸಿದ. ಆ ಪತ್ರದ ಬಗೆಗೆ ಸಂಶಯಗೊಂಡ ನಂಬಿ ಆದರ ಸಾಕ್ಷಿಗಳಿಂದ ಋಜುವಾತು ಪಡೆಯಬೇಕೆಂದು ತಿರುವಣ್ಣಿನಲ್ಲೂರಿಗೆ ಹೊರಟ. ಅಲ್ಲಿ ಆ ವೃದ್ಧ ಪತ್ರದಲ್ಲಿನ ಸಾಕ್ಷಿಗಳ ಪೂರ್ವಾಪರವನ್ನೆಲ್ಲ ವಿವರಿಸಿದಾಗ ನಂಬಿಗೆ ಕೋಪಬಂದು ಆ ಪತ್ರವನ್ನು ಹರಿದು ಬಿಸುಟ. ಆಗ ಆ ಮುದುಕ ನೀನು ಹರಿದು ಹಾಕಿದ್ದು ನಕಲುಪ್ರತಿ. ಮೂಲಪ್ರತಿ ಬೇರೆ ಇದೆ ಎಂದಾಗ ನಂಬಿ ಆ ಮೂಲಪ್ರತಿಯನ್ನು ತೋರಿಸುವಂತೆ ಹೇಳಿ ಆ ವೃದ್ಧನನ್ನು ಹಿಂಬಾಲಿಸಿದ. ಆ ಊರ ಹೊರಗಿನ ಶಿವದೇವಾಲಯದೊಳಕ್ಕೆ ನಂಬಿಯನ್ನು ಕರೆದುಕೊಂಡು ಹೋದ ಆ ವೃದ್ಧ ಅಲ್ಲೇ ಅದೃಶ್ಯನಾದ. ಆಗ ಶಿವಪಾರ್ವತಿಯರು ಪ್ರತ್ಯಕ್ಷವಾಗಿ ನಂಬಿಗೆ ತಾಳಗಳನ್ನೂ ಮತಿಯನ್ನೂ ದನಿಯನ್ನೂ ಕರುಣಿಸಿ ಹಾಡುವಂತೆ ತಿಳಿಸಿದರು. ನಂಬಿಗೆ ಆಗ ಪೂರ್ವಸ್ಮರಣೆಯುಂಟಾಗಿ ಅಂದಿನಿಂದ ಶಿವದೇವಾಲಯಗಳಿಗೆ ಹೋಗಿ ಶಿವನನ್ನು ಸ್ತುತಿಸಿ ಸಹಸ್ರ ಹೊನ್ನುಗಳನ್ನು ಸಂಪಾದಿಸುತ್ತಿದ್ದ.
ಹೀಗೆ ಕಾಯಕ ಹೊತ್ತ ನಂಬಿ ತಿರುವಾಯೂರಿನ ದೇವಾಲಯಕ್ಕೆ ಹೋಗುತ್ತಿದ್ದಾಗ ಉಪ್ಪರಿಗೆಯಲ್ಲಿ ನಿಂತಿದ್ದ ಪರವೆ ಕಣ್ಣಿಗೆ ಬಿದ್ದಳು. ಕೂಡಲೇ ಪೂರ್ವವಾಸನೆ ಮರುಕಳಿಸಿ ಅವರಿಬ್ಬರಲ್ಲೂ ಪ್ರೇಮವಂಕುರಿಸಿತು. ಇಬ್ಬರೂ ಮದುವೆಯಾದರು. ನಂಬಿ ಶಿವನ ಅನುಗ್ರಹದಿಂದ ಪಂಗುನಿ ತಿರುನಾಳ್ ಹಬ್ಬವನ್ನು ವೈಭವದಿಂದ ಆಚರಿಸಿ ಪರವೆಗೆ ಸಂತೋಷವನ್ನುಂಟುಮಾಡಿದ. ಅನಂತರ ಉತ್ತರ ದಿಕ್ಕಿಗೆ ಪ್ರಯಾಣಮಾಡಿ ನಂಬಿ ತಿರುವತ್ತಾಯೂರಿಗೆ ಬಂದ. ಆ ಊರಿನ ದೇವಮಂದಿರದಲ್ಲಿ ಹೂ ಕಟ್ಟುತ್ತಿದ್ದ ಸಂಕಲಿಯನ್ನು ನೋಡಿದ. ಯಥಾಪ್ರಕಾರ ಪೂರ್ವವಾಸನೆಯಂತೆ ಅವರಲ್ಲಿ ಅನುರಾಗ ಬೆಳೆದು ಶಿವನಿಂದಲೇ ಕುಂಟಣೆ ಕೆಲಸವನ್ನು ಮಾಡಿಸಿ ಆಕೆಯನ್ನು ಮದುವೆಯಾದ.
ಕೆಲಕಾಲ ಕಳೆದ ಅನಂತರ ಪ್ರಾಪಂಚಿಕ ಭೋಗಲಾಲಸೆಗಳಲ್ಲೇ ಮುಳುಗಿ ಹೋಗಿದ್ದ ನಂಬಿಯನ್ನು ಶಿವ ಎಚ್ಚರಿಸಿದ. ನಂಬಿಗೆ ಪರವೆಯ ಜ್ಞಾಪಕ ಬಂದು ಸಂಕಲಿಯನ್ನು ತೊರೆದು ಹೊರಟ. ಇತ್ತ ಸಂಕಲಿ ಅಸುನೀಗಿದಳು. ಏತನ್ಮಧ್ಯೆ ನಂಬಿಯ ಕಣ್ಣುಗಳು ಇಂಗಿಹೋದವು. ಪಾರ್ವತಿಯನ್ನು ಸ್ತುತಿಸಿ ಮತ್ತೆ ದೃಷ್ಟಿ ಪಡೆದ.
ತಿರುವಾಯೂರಿಗೆ ಬಂದ ನಂಬಿ ಪರವೆಯ ಸಿಟ್ಟನ್ನು ನಿವಾರಿಸುವುದಕ್ಕೆ ಮಾರ್ಗ ಕಾಣದೆ ಪರವೆಯನ್ನು ಒಲಿಸಿಕೊಡಬೇಕೆಂದು ಶಿವನನ್ನೇ ಬೇಡಿದ. ಕೊನೆಗೆ ಶಿವನೇ ನಂಬಿ-ಪರವೆಯರ ಸಮಾಗಮವನ್ನುಂಟುಮಾಡಿಸಿದ.
ನಂಬಿಯ ಮಹಿಮೆಯನ್ನು ಕೇಳಿದ್ದ ಚೇರಮರಾಯ ಈತನನ್ನು ತನ್ನ ಮನೆಗೆ ಆಹ್ವಾನಿಸಿದ. ಚೇರಮನ ಅರಮನೆಯಲ್ಲಿ ಆರೋಗಣೆ ಮಾಡಿ ಮತ್ರ್ಯದ ಮಣಿಹವನ್ನು ನಂಬಿ ಮುಗಿಸಿದ. ಆ ಕಡೆ ಪರವೆ ಕೈಲಾಸವಾಸಿಯಾದಳು. ಶಿವ ನಂಬಿಗೆ ಹೇಳಿದ್ದ ತಿರುಮಜಕಳ ದೇವಾಲಯ ಗೋಚರವಾಯಿತು. ಅಲ್ಲಿಗೆ ಬಂದಾಗ ಒಂದು ರಾಯಸ ನಂಬಿಗಾಗಿ ಕಾದಿತ್ತು. ಅದರಲ್ಲಿ `ನರಲೋಕದೊಳಗಿರವು ತನಗೆ ಸಾಲ್ವುದು ನಂಬಿ. ಚರಿತದಿಂದ ಬರ್ಪುದೆಮ್ಮಂಘ್ರಿಯಲ್ಲಿಗೆ ನಂಬಿ, ಐರಾವತಂ ಬರ್ಪುದೇನೆ ಬರ್ಪುದು ನಂಬಿ ಎಂಬ ನಿರೂಪವಿತ್ತು. ಅದರಂತೆ ನಂಬಿ ಕೈಲಾಸವನ್ನು ಸೇರಿದ.
ಈ ಪದ್ಯಭಾಗದಿಂದ ಉಗಮಿಸುವ ವಿಚಾರಗಳು
Error: Mind Map file Kannadigara Thayi.mm
not found
ಪ್ರಸ್ತುತ ಮಾಡಬೇಕಾದ ಪದ್ಯದ ವಿವರ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ!
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ!
ನಮ್ಮ ತಪ್ಪನೆನಿತ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನ ಮರೆಯಲಮ್ಮೆವು!
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿ ನಗರ ನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
ಶರ್ವ ಪಂಪ ರನ್ನರ,
ಲಕ್ಷ್ಮೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರ ವರೇಣ್ಯರ,
ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!
ಪದ್ಯದ ಬೆಳವಣಿಗೆ
ಹಿನ್ನಲೆ>ಪ್ರಸ್ತುತ>ನಂತರ ಈ ಪದ್ಯದಲ್ಲಿ ಕನ್ನಡನಾಡಿನ ಹೆಸರನ್ನು ಉತ್ತುಂಗಕ್ಕೆರಿಸಿದ ರಾಜರು,ಕವಿಗಳು, ಯತಿ-ಮುನಿಗಳು-ಪ್ರಾದೇಶಿಕತೆಯ ವರ್ಣನೆ
ಪಾಠದ ಬೆಳವಣಿಗೆ
1. ಪ್ರಾರ್ಥನೆ 2.ಪ್ರಕೃತಿ 3.ಸಂತರು ಶರಣರು 4.ಸ್ಥಳಗಳು 5.ಪ್ರಸ್ತುತ ಸ್ಥಿತಿ 6. ಪ್ರಾರ್ಥನೆ
ಅವಧಿ-೧
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)
ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. ೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
ಮೊದಲನೇ ಅಮೋಘವರ್ಷ
ಜನ್ನ ಕವಿಯ ಕುರಿತಾದ ಮಾಹಿತಿಗೆ
ಬಸವೇಶ್ವರರ ಕುರಿತು
'ಮಧ್ವಾಚಾರ್ಯರು
- ಶ್ರೀಪಾದ-ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮದ್ವಾಚಾರ್ಯ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ರನ್ನ
- ಪಂಪ
- ಲಕ್ಷ್ಮೀಶ
- ಲಕ್ಷ್ಮೀಶ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಷಡಕ್ಷರದೇವ
- ಷಡಕ್ಷರದೇವ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮುದ್ದಣ್ಣ ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಹಳೆಬೀಡು ಬಗೆಗಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಬೇಲೂರು
- ಶ್ರವಣಬೆಳಗೊಳ
ಶಬ್ದಕೋಶ/ಪದ ವಿಶೇಷತೆ
- ಕಾಯೆ - ರಕ್ಷಿಸು
- ಎಮ್ಮ - ನಮ್ಮನ್ನು
- ಕಾಣ - ಕಾಣೆಯ? ಗೊತ್ತಿದೆಯಾ? ಇಲ್ಲ
- ನೀವ - ಈವ - ನೀಡುವ
- ಪರಿಪರಿ - ವಿವಿಧ
- ನಗಾಳಿ - ಬೆಟ್ಟ ಅಮೂಹ...
ವ್ಯಾಕರಣಾಂಶ
ಪ್ರಾಸ ಪದಗಳು
- ಬಲಿಸು- ನೆಲಸು -ಕಲಸು
- ತಾಳ್ವೆ - ನಾಳ್ವೆ - ಬಾಳ್ವೆ
- ತಾಳ್ವೆ-ನಾಳ್ವೆ- ಬಾಳ್ವೆ
- ಮರೆಯಲಮ್ಮೆವು- ಕನ್ನಡವೆಮ್ಮವು
- ಮರಂಗಳೊ -ತರತರಂಗಳೊ
- ಸುಂದರಂ -ಬಂಧುರಂ
- ಹುಡುಕುವ-ಮಿಡುಕುವ
ಚಟುವಟಿಕೆ
- ಚಟುವಟಿಕೆಯ ಹೆಸರು ;ನಮ್ಮ ಹಿರಿಯರ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ
- ಸಮಯ ;೨೦ ನಿಮಿಷ
- ಸಾಮಗ್ರಿಗಳು/ಸಂಪನ್ಮೂಲಗಳು ;
- ವಿಧಾನ/ಪ್ರಕ್ರಿಯೆ ;1. ಶಿಕ್ಷಕರು ಈ ಪದ್ಯವನ್ನು ಮಾಡುವ ಹಿಂದಿನ ದಿನ ಈ ಚಟುವಟಿಕೆಯನ್ನು ಮಕ್ಕಳಿಗೆ ನೀಡುವುದು. ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡುವುದು ಪ್ರತಿಯೊಂದು ಗುಂಪಿನವರು ತಮ್ಮ ಮನೆಯಲ್ಲಿ ಅವರ ಪಾಲಕರು ಮತ್ತು ಅಜ್ಜಿ ಮತ್ತು ತಾತ ಅವರ ಜೊತೆ ಚರ್ಚೆ ಮಾಡಲು ಹೇಳುವುದು. 'ಅಥವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ಗುಂಪಿನಲ್ಲೂ ಮೂರು ರೀತಿಯ ಮಕ್ಕಳು ಇರುವಂತೆ ನೋಡಿಕೊಳ್ಳುವುದು. ಅದರಲ್ಲಿ ಬರೆಯಲು ಬರದೆ ಇರುವ ಮಕ್ಕಳು ತಮ್ಮ ಮನೆಯಲ್ಲಿ ಚರ್ಚೆ ಮಾಡಿದ ಅಂಶಗಳನ್ನು ಅದೇ ಗುಂಪಿನ ಮಕ್ಕಳಿಗೆ ಹೇಳಿದರೆ ಅವರು ಪಟ್ಟಿ ಮಾಡುವರು ಮತ್ತು ತಾವು ಚರ್ಚೆ ಮಾಡಿದ ಅಂಶಗಳನ್ನು ಸೇರಿಸುವರು.2.ಎಲ್ಲಾ ಮ್ಕಕಳಿಗೆ ಈ ಚಟುವಟಿಕೆಯನ್ನು ನೀಡಿ ಚರ್ಚೆ ಮಾಡಿದ ಅಂಶಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬರವಣೆಗೆ ರೂಪದಲ್ಲಿ, ಚಿತ್ರಗಳ ರೂಪದಲ್ಲಿ ಅಥಾವ ತರಗತಿಯಲ್ಲಿ ಹೇಳುವುದುರ ಮೂಲಕ ಪೂರ್ಣ ಮಾಡುವುದು. ನಂತರ ಶಿಕ್ಷಕರು ಈ ಎಲ್ಲಾ ಬರವಣಿಗೆಗಳನ್ನು ಸಾರಾಂಶೀಕರಿಸಿ, ಕನ್ನಡ ನಾಡಿನ ಬಗೆಗಿನ ಚಿತ್ರಣ ವನ್ನು ಮೂಡಿಸುವ ಸಂಪನ್ಮೂಲಗಳನ್ನು ಬಳಸಿ, ಮಕ್ಕಳಿಗೆ ಕನ್ನಡ ನಾಡಿನ ಕೆಲವು ಸಂಗತಿಗಳನ್ನು ತಿಳಿಸುವುದು
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ;ಮಾತನಾಡುವುದು ಪ್ರಶ್ನೆ ಕೇಳುವುದು, ಸಾಮಾಜೀಕರಣ
- ಮೌಲ್ಯಮಾಪನ ಪ್ರಶ್ನೆಗಳು ;
- ನಮ್ಮ ನಾಡನ್ನು ಏಕೆ ಗೌರವಿಸ ಬೇಕು?
- ಭಾಷಾ ಹೆಗ್ಗಳಿಕೆಗಳ ಮೇಲಿನ ಜಗಳ ಎಷ್ಟು ಸರಿ?
೧ನೇ ಅವಧಿ ಮೌಲ್ಯಮಾಪನ
ಅವಧಿ -೨
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨
ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮತೃಷೆಗೆ ದಕ್ಕಿಸು!
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ!
ಕನ್ನಡ ಕಸ್ತೂರಿಯನ್ನ
ಹೊಸತು ಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯಿನೆಬ್ಬಿಸು-,
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!
ನಮ್ಮೆದೆಯಂ ತಾಯೆ ಬಲಿಸು
ಎಲ್ಲರ ಬಾಯಲ್ಲಿ ನಲಿಸು
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ!
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮೆಗೆ ತೋರುವೆ?
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ತತ್ಸಮ - ತದ್ಭವ ತತ್ಸಮ-ತಧ್ವವ ಪದದ ಪರಿಕಲ್ಪನೆಯನ್ನು ಅರ್ಥೈಸಬೇಕು. ಸಂಸ್ಕೃತ ಪದದ ಮೂಲವನ್ನು ನಾವು ತತ್ಸಮ ಎನ್ನುತ್ತೇವೆ. ಸಂಸ್ಕೃತ ರೂಪದ ಪದವನ್ನು ಕನ್ನಡದ ಅರ್ಥದಲ್ಲಿ ನೋಡುವುದೇ ತದ್ಭವ. ಮೊಗ -ಮುಖ , ಜನ್ಮ- ಜನುಮ ,ದಿವ-ದಿವ್ , ಮೃಗ-ಮಿಗ ,ಕಸ್ತೂರಿ-ಕತ್ತುರಿ , ಶ್ರೀ- ಸಿರಿ , ಶಕ್ತಿ- ಸಕುತಿ, ಮೂರ್ತಿ- ಮೂರುತಿ, ಕೀರ್ತಿ-ಕೀರುತಿ
ಚಟುವಟಿಕೆ
- ಚಟುವಟಿಕೆಯ ಹೆಸರು ; ಪದ್ಯ ಗಾಯನ
- ಸಮಯ ; ೨೦ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು ; ಹಾಡಿನ ಧ್ವನಿ ಮುದ್ರಿಕೆ,ಉಪಕರಣ,೨ ಸ್ಪೀಕರ್ (ಪ್ರೊಜೆಕ್ಟರ್ )
- ವಿಧಾನ/ಪ್ರಕ್ರಿಯೆ ; ಸಿರಿ ಗನ್ನಡ ಪದ್ಯ ಸಂಗ್ರಹದಿಂದ ಪಠ್ಯಪುಸ್ತಕವನ್ನು ನೋಡಿಕೊಳ್ಳುತ್ತಾ ಮೊದಲು ಹಾಡು ಕೇಳಿಸುವುದು ನಂತರ ಜೊತೆಗೆ ಹಾಡಿಸುವುದು ಮೂರನೆ ಗುಂಪಿನ ೫ ಮಕ್ಕಳನ್ನು ತಂಡಮಾಡಿ ಹಾಡು ಕಲಿತು ತರಗತಿಯಲ್ಲಿ ಹಾಡಲು ತಿಳಿಸುವುದು.ಸಾಧ್ಯವಾದರೆ ದಾಟಿ ಬದಲಿಸಿ ಹಾಡಲು ತಿಳಿಸುವುದು.
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ;
- ಮೌಲ್ಯಮಾಪನ ಪ್ರಶ್ನೆಗಳು ;
- ನಿಮಗೆ ಹೊಸದೆನಿಸಿದ ಪದಗಳನ್ನು ಪಟ್ಟಿಮಾಡಿ?
- ಕವಿ ಹಾಡಿ ಹೊಗಳಿರುವ ಸಂತರುಗಳು ಯಾರುಯಾರು ?
- ಕವಿ ಪ್ರಸ್ತಾಪಿಸಿರುವ ಕನ್ನಡನಾಡಿನ ಪ್ರಮುಖ ಪ್ರದೇಶಗಳಾವುವು?
೨ನೇ ಅವಧಿಯ ಮೌಲ್ಯಮಾಪನ
ಅವಧಿ -೩
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ದ್ವಿರುಕ್ತಿ ಒಂದೇ ಪದವನ್ನು ಒಟ್ಟಿಗೆ ವಾಕ್ಯದಲ್ಲಿ ಬಳಸುವುದು. ಪರಿ ಪರಿ,
ಚಟುವಟಿಕೆ
- ಚಟುವಟಿಕೆಯ ಹೆಸರು ; 10 ಕನ್ನಡ ಭಾಷೆಯ ಮೇಲಿನ ಪದ್ಯ ಸಂಗ್ರಹ
- ಸಮಯ ; ವಾರದ ಕೆಲಸ
- ಸಾಮಗ್ರಿಗಳು/ಸಂಪನ್ಮೂಲಗಳು ;ಅಂತರ್ಜಾಲ, ಗ್ರಂಥಾಲಯ ಪುಸ್ತಕ,ಶಿಕ್ಷಕರು,ಕುಟುಂಬ
- ವಿಧಾನ/ಪ್ರಕ್ರಿಯೆ ;ಮೊದಲೆರಡು ಗುಂಪಿನ ಪ್ರತಿಯೊಬ್ಬರೂ 2 ಪದ್ಯ ಸಂಗ್ರಹಿಸಿ ಬರೆದು ಪುಸ್ತಕದ ರೂಪ ಕೊಡುವುದು. ಮೂರನೇ ಗುಂಪಿನವರು ಈ ಪಧ್ಯದಲ್ಲಿ ಬಳಸಿರುವ ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಅವುಗಳನ್ನು ಬಿಡಿಸಿ ಬರೆಯಲು ತಿಳಿಸುವುದು. ಗುಂಪು-೩ ಈ ಪಧ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಗುರತಿಸಿ ಅವುಗಳಿಗೆ ಅರ್ಥ ಬರೆಯಿರಿ ಈ ಪಧ್ಯದಲ್ಲಿ ಬಳಸಲಾಗಿರುವ ಕಠಿಣ ಪದಗಳನ್ನು ಆಯ್ದುಕೊಂಡು, ಪ್ರತಿ ಪದದ ಅರ್ಥವನ್ನು ವಾಕ್ಯರೂಪದಲ್ಲಿ ಬರೆಯಲು ತಿಳಿಸುವುದು. ಈ ಪಧ್ಯದಲ್ಲಿ ಬಳಸಿರುವ ವ್ಯಕ್ತಿಗಳ ಹೆಸರುಗಳು(ನಾಮಪದಗಳನ್ನು) ಗುರುತಿಸಿ ಬರೆಯುವುದು. ಈ ಪಧ್ಯದಲ್ಲಿ ಬಳಸಲಾಗಿರುವ ಸ್ವಜಾತಿ ಒತ್ತಕ್ಷರ ಮತ್ತು ವಿಜಾತಿ ಒತ್ತಕ್ಷರಗಳನ್ನು ಗುರುತಿಸಿ ಬರೆಯಲು ತಿಳಿಸುವುದು.
- ಚರ್ಚಾ ಪ್ರಶ್ನೆಗಳು ;
- ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಸಂಗ್ರಹ ಸಾಮರ್ಥ್ಯ,ಚರ್ಚೆ, ಸಾಮಾಜಿಕತೆ ಕೇಳುವುದು ಹಾಡುವುದು
- ಮೌಲ್ಯಮಾಪನ ಪ್ರಶ್ನೆಗಳು ;
ಅವಧಿ ೩ರ ಮೌಲ್ಯಮಾಪನ
ಉಪಸಂಹಾರ
ಇಷ್ಟೊಂದು ಸುಧೀರ್ಘ ಪರಂಪರೆಯ ಹಿನ್ನಲೆಯಲ್ಲಿ ಮಕ್ಕಳಲ್ಲಿ ನಮ್ಮ ಮೇಲಿರುವ ಜವಾಬ್ಧಾರಿಗಳನ್ನು ಅರಿತುಕೊಳ್ಳಲು ಕಲಿಸಬೇಕು . ಅದನ್ನು ಉಳಿಸಿ ಬೆಳೆಸಬೇಕು.ನಾಡು,ನುಡು ಪರಂಪರೆಯನ್ನು ಗೌರವಿಸ ಬೇಕು.ಎಂಬ ನೀತಿಗಳನ್ನು ಮಕ್ಕಳಲ್ಲಿ ಮೊಳೆಯುವಂತೆ ಮಾಡಬೇಕು.
ಪದ್ಯದ ಮೌಲ್ಯಮಾಪನ
- ಕನ್ನಡ ಒಂದು ಭಾಷೆಯಲ್ಲ ಸಂಸ್ಕೃತಿ ಹೇಗೆ ?
- ಭಾಷೆಯ ವಿಷಯದಲ್ಲಿ ಮೇಲು ಕೀಳಿಲ್ಲ, ಹೇಗೆ?
ಮಕ್ಕಳ ಚಟುವಟಿಕೆ
ಮಕ್ಕಳ ಚಟುವಟಿಕೆಯ ಸರಿಯಾದ ಅರ್ಥ ತಿಳಿಯಬೇಕು
1.ಕರ್ನಾಟಕದ ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ಸಂಗ್ರಹಿಸಿ ಬರೆಯಿರಿ
2.ಕರ್ನಾಟಕದಲ್ಲಿ ಪ್ರಸಿದ್ದವಾದ ಸಂತ ಪರಂಪರೆಯ ಠಿಪ್ಪಣಿ ಬರೆಯಿರಿ
ಆಕರ ಸೂಚಿ
ವಿಕಿಪೀಡಿಯಾ
ಕನ್ನಡ ದೀವಿಗೆ
ರಗಳೆ
ಕನ್ನಡ ಸಾಹಿತ್ಯಕ್ಕೆ ರಗಳೆ ಸಾಹಿತ್ಯದ ಕೊಡುಗೆ pdf