Difference between revisions of "Social Science: From the Forum"

From Karnataka Open Educational Resources
Jump to navigation Jump to search
Line 67: Line 67:
 
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
 
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
 
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
 
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
 +
 +
'''ಭಾರತದ ಹೆಮ್ಮೆಯ ಇತಿಹಾಸ'''
 +
 +
ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟ್ರ. ಅದರ  ಹಳಮೆ  ಮತ್ತು  ಹಿರಿಮೆ ಲೋಕದಲ್ಲಿ ಸಾಟಿ ಇಲ್ಲದ್ದು. ಪ್ರಪಂಚದ ಜನಸಂಖ್ಯೆಯ  ಐದನೆಯ ಒಂದು  ಭಾಗ ಇತಿಹಾಸ ಭಾರತದ್ದು. ನೂರು ಕೊ ಜನರ ಸುಮಾರು ಐನೂರು  ತಲೆಮಾರುಗಳ ಸಾಹಸದ ಕಥೆ ಅದು. ಸುಖ, ದುಖಃ ಶಾಂತಿ,  ಜ್ಞಾನ - ಇವುಗಳಿಗಾಗಿ ನಮ್ಮ ಹಿರಿಯರು ಮಾಡಿದ ಸತತ ಪ್ರಯತ್ನಗಳ ಕಥೆ, ಅದು
 +
ವಿಶ್ವದೆಲ್ಲೆಡೆಯ ಜನ ಇಲ್ಲಿಗೆ ಬಂದರು. ಅವರ ಬರುವಿಕೆಯ ರೀತಿ, ಉದ್ದೇಶ ಭಿನ್ನ-ಭಿನ್ನ  ಪ್ರವಾಸಿರಾಗಿ ಬಂದರು. ದುರಾಸೆಯಿಂದ  ದಾಳಿ ಇಟ್ಟರು, ನುಗ್ಗಿದರು, ನುಂಗಿದರು , ಹಿಗ್ಗಿದರು, ಕುಗ್ಗಿದರು, ಕಲಿತೆರು, ಕಲಿಸಿದರು, ಬೆರೆತರು, ಬೇರೆಯಾದರು.ನಮ್ಮ ಹಿರಿಯರೂ ಸುತ್ತ ಮುತ್ತ ಹತ್ತಾರು ದೇಶಗಳಿಗೆ ಹೋದರು.ಬೆಳಕು ಚೆಲ್ಲಿದರು.ಕೂಡಿ ಬದುಕಿದರು. ಇಂತಹ ನೂರಾರು  ಹಿಗ್ಗುತಗ್ಗುಗಳನ್ನು ಒಳಗೊಂಡಿದೆ ಭಾರತದ ಇತಿಹಾಸ.
 +
ನಾಗರಿಕತೆಯ ಅರುಣೋದಯದ ಹೊಂಬೆಳಕುನಲ್ಲೂ ಭಾರತ ಆಗಿನ ಮಾನವ ಸಮುದಾಯದಗಳ ಮುಂಚೂಣೆಯಲ್ಲಿ ಕಂಗೊಳಿಸಿತು. ನಾಗರಕತೆಯೇ ಅಸ್ತಮಿಸಬಹುದೆಂಬುವ ಮಹಾ ಭಯ ಆವರಿಸಿರುವ ಈ ಹೊತ್ತು ಭಾರತ ಅದೇ ಸ್ಥಾನವನ್ನು ಉಳಿಸಿಕೊಂಡಿದೆ. ಅದು ಸನಾತನಕ್ಕೆ ಸನಾತನ ನೂತನಕ್ಕೆ  ನೂತನ. ಜಗತ್ತಿನ ಇತಿಹಾಸದಲ್ಲಿ ಪ್ರಾಚಿನವೆನಸಿ ಎಂದೋ ಕಣ್ಮರೆಯಾದ ಅಸೀರಿಯಾ, ಸುಮೆರೀಯಾ, ಬ್ಯಾಬಿಲೋನಿಯಾ, ಚಾಲ್ಡಿಯಾ.ಐಗುಪ್ತ. ಯವನ ರಾಷ್ಟ್ರಗಳಿಗೂ ಹಿರಿದಾದ  ಭಾರತ, ಇಂದು    ಪ್ರಪಂಚದ  ಅತಿ ನೂತನ ರಾಷ್ಟ್ರಗಳಾದ ಅಮೆರಿಕಾ, ಆಸ್ಟ್ರೇಲಿಯಾಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು, ಚೈತನ್ಯಪೂರ್ಣವಾಗಿ ನಿಂತಿದೆ. ಭಾರತಾಂಬೆ ಚಿರಂಜೀವಿ.
 +
 +
ಕಳೆದ ಎರಡುವರೆ ಸಾವಿರ ವರ್ಷಗಳ ಅವಧಿಯಲ್ಲಿ ನಾವು ಅದಷ್ಟು ಆಕ್ರಮಣಗಳನ್ನಿ ಎದುರಿಸಬೇಕಾಯಿತು. ಹೂಣರು, ಗ್ರೀಕರು, ಕುಶಾಣರು,
 +
ಮೊಗೋಲರು, ಹಬ್ಶಿಗಳು, ತುಕಿ9ಗಳು, ಇರಾನಿಗಳು,ಫ್ರೆಂಚರು, ಢಚ್ಚರು,ಪೋರ್ಚುಗೀಸರು, ಆಂಗ್ಲರು, ಇತ್ಯಾದಿ ಇತ್ಯಾದಿ  ಅಲೆಕ್ಸಾಂಡರ್‍ನಿಂದ ಹಿಡಿದು ಪರವೇಜ್ ಮುಶ್ರಪ್ವರೆಗೆ ಅದೆಷ್ಟು ಮೊದಿಯ ಆಕ್ರಮಣ ನಮ್ಮ ಮೇಲೆ!ಆದರೂ  ಭಾರತ ಸತ್ತಿಲ್ಲ. ನಮ್ಮ ಪರಂಪರೆ ಏನು?
 +
 +
ಆ ಉಳಿದೆಲ್ಲರೂ ಆಕ್ರಮಣದ ಮೊದಲು ಆಘಾತಕ್ಕೆ ಧ್ವಂಸವಾದರೆ, ನಾವೋ ನಿರಂತರ ಹೋರಾಡಿ ರಾಷ್ಟ್ರವನ್ನು ಉಳಿಸಿದ್ದೇವೆ. ಇತಿಹಾಸದ ಈ ಪ್ರೇರಣಾಸ್ಪದ ಸಂಗತಿಯನ್ನು ನಮ್ಮ ಸಂಸ್ಕø ತಿಯ ಈ ಮೃತ್ಯುಂಜಯತ್ವವನ್ನು ನಮ್ಮ ಮಕ್ಕಳಿಗೆ ತಿಳಿಸುತ್ತೇವೆಯೇ?  “ಭಾರತ ಇತಿಹಾ¸”  ಎಂದರೆ ಸೋಲಿನ ಇತಿಹಾಸ ಎಂದೇ  ನಮ್ಮ ಮಕ್ಕಳಿಗೆ ಕಲಿಸಲಾಗುತ್ತಿದೆ  ಒಬ್ಬರಾದ ಬಳಿಕ ಒಬ್ಬ ಆಕ್ರಮಕ  ಬಂದು ನಮಗೆ ನಿರಂತರ ಒದೆಯುತ್ತಿದ್ದ ಎಂದೇ ಮಕ್ಕಳಿಗೆ ಹೇಳುತ್ತಿದ್ದರೆ, ಅವರು ತಲೆ ಎತ್ತುವುದಾದರೂ ಹೇಗೆ? ಅನೇಕ ಬಾರಿ ನಾವು ಸೋತಿದ್ದು ಸತ್ಯ. ಆದರೆ ಸತ್ತಿಲ್ಲ.  ಆಕ್ರಮಣಕಾರರ ಆಳ್ವಿಕೆಗೆ ನಾವು ಮಾನ್ಯತೆ ಕೊಡಲಿಲ್ಲ. ದೇಶದ ಯಾವುದಾದರೂ ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡಿಯುತ್ತಲೇ ಇತ್ತು. ಪುರೂರವನಿಂದ ಮಹಾತ್ಮಾಗಂಧೀಜಿ- ಸುಭಾಷ ಚಂದ್ರ ರವರೆಗೆ ಪ್ರತಿ ಶತಮಾನದಲ್ಲಿ ಹಲವು ಸೇನಾನಿಗಳ ನೇತ್ರತ್ವದಲ್ಲಿ ಸಂಘಷ9 ಜಾರಿಯಲ್ಲಿಟ್ಟೆವು.ಕೊನೆಗೂ ಆಕ್ರಮನಕಾರರ ಧ್ವಜ ಇಳಿಸಲು ಸಫಲರಾದೆವು. ಭಾರತ ಸ್ವಾತಂತ್ರ್ಯವಾಯಿತು. ನಮ್ಮ ಇತಿಹಸ ಸೋಲಿನ ಇತಿಹಾಸವಲ್ಲ, ಸಂಘóಷ9ದಇತಿಹಾಸ ಎಂದು ಎದೆ ತಟ್ಟಿ ಮಕ್ಕಳಿಗೆ  ಹೇಳೋಣ
 +
 +
- ಶ್ರೀ ವಿದ್ಯಾನಂದ ಶೆಣ್ಯೆ. ರವರ  ಬರಹದಿಂದ  ಆಯ್ದ ದ್ದು.

Revision as of 11:53, 7 February 2013

ಶ್ರೀ ಸಿ.ಎಸ್.ತಾಳಿಕೋಟಿಮಠ (C S T)

ಸ್ವಾತ೦ತ್ರ್ಯೋತ್ಸವ ದ ಮೇಲೆ ಒಂದು ಕವಿತೆ


ತ೦ದಿತು ದೇಶಕ್ಕೆ ಅ೦ದೇ  ಸ್ವಾತ೦ತ್ರ್ಯ   !

ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ.

ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ...

ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ...


ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು

ಇದು ನಮ್ಮೆಲ್ಲರ ದುರಾಶೆಯ ಕುರುಹು

ತೊಲಗಬೇಕು ಗೋಮುಖ ವ್ಯಾಘ್ರರ ಸೋಗು

ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು.


ದೇಶದಲ್ಲಿ ರಾಜಕೀಯ ಬಡಿದಾಟ

ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ.

ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ

ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ                                                                                                                                                                                         

   -  ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ

ಶಿಕ್ಷಕರ ದಿನಾಚರಣೆಯಂದು ಒಂದು ಅವಲೋಕನ

ಪರಿಚಯದ ಹಿರಿಯರೊಬ್ಬರು ಹತ್ತು ವರ್ಷದ ತನ್ನ ಮೊಮ್ಮಗನಿಗೆ ಪರೀಕ್ಷಿಸಲೋಸುಗ 'ಶಿಕ್ಷಕರ ದಿನಾಚರಣೆ ಎಂದು?' ಎಂದು ಕೇಳಿದರು. ಸೆಪ್ಟೆಂಬರ್ 15 ಅಂದ! ಬೇಸ್ತು ಬಿದ್ದ ಹಿರಿಯರು "ಕನಿಷ್ಠ ಸೆಪ್ಟೆಂಬರ್ ತಿಂಗಳಾದರೂ ಸರಿಯಾಗಿ ಹೇಳಿದ್ದಾನಲ್ಲ ಎಂದು ಸಮಾಧಾನಪಟ್ಟುಕೊಂಡೆ, ಆದರೆ ಈ ದಿನಾಚರಣೆಯ ಅರಿವಿಲ್ಲದಿದ್ದಕ್ಕೆ ಬೇಜಾರುಪಟ್ಟುಕೊಂಡೆ" ಎಂದು ತುಸು ಅಸಮಾಧಾನದಿಂದಲೇ ಹೇಳಿದರು.

ನಿಜ. ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಲೋಕದಲ್ಲಿ ಮಕ್ಕಳಿಗೆ ಈ ದಿನಾಚರಣೆಯ ಮಹತ್ವದ ಅರಿವೇ ಇರುವುದಿಲ್ಲ. ಒಂದು, ಎರಡು ದಶಕಗಳ ಹಿಂದೆ ಇದ್ದ ಶಿಕ್ಷಕ-ವಿದ್ಯಾರ್ಥಿಯ ನಡುವಿನ ಆತ್ಮೀಯತೆ, ಬಾಂಧವ್ಯ, ಪ್ರೀತಿ ಇಂದು ಮಾಯವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡದೇ ಇರದು. ಇದಕ್ಕೆ ಕಾರಣಗಳೂ ಹಲವಾರಿರಬಹುದು.

ಕಚ್ಚೆ ಪಂಚೆ ಧರಿಸಿ, ತಲೆಮೇಲೆ ಟೋಪಿ ಧರಿಸಿ, ಕೈಯಲ್ಲಿ ಬೆತ್ತ ಹಿಡಿದ ಪ್ರೀತಿಯ ಮೇಷ್ಟ್ರು ಇಂದು ಕಾಣಸಿಗಲಿಕ್ಕಿಲ್ಲ. ಇಂದಿನ ಶಿಕ್ಷಣ, ಶಿಕ್ಷಕನ ಚೆಹರೆಯೇ ಬದಲಾಗಿದೆ. ನಗರಗಳಲ್ಲಿ ಲಕ್ಷಗಟ್ಟಲೆ ಫೀಸು ಕೊಡುವ ಶಾಲೆಯಲ್ಲಿ ಇಂದು ವಿದ್ಯಾರ್ಥಿಯನ್ನು ದಾರಿತಪ್ಪಿದಾಗ ಥಳಿಸುವುದಿರಲಿ ಮೈ ಮುಟ್ಟಲೂ ಸಾಧ್ಯವಿಲ್ಲ. ನಾವು ಎಷ್ಟು ಮುಂದುವರಿದಿದ್ದೇವೆಂದರೆ, ಶಾಲೆಯಲ್ಲಿ ಮಗು ಏನು ಮಾಡುತ್ತಿದೆಯೆಂದು ಪಾಲಕರು ಇಂಟರ್ನೆಟ್ ಮುಖಾಂತರ ಮನೆಯಲ್ಲಿ ಕುಳಿತೇ ಎಲ್ಲ ವಿವರ ತಿಳಿಯಬಹುದಾಗಿದೆ. ಮಕ್ಕಳಿಗೂ ಕಡಿಮೆಯಿಲ್ಲದ ತಲೆಕೆಲಸ, ಶಿಕ್ಷಕರಿಗೂ ಬಿಡುವಿಲ್ಲದ ದುಡಿಮೆ. ಹೀಗಿರುವಾಗ ಮಕ್ಕಳು-ಶಿಕ್ಷಕರ ಬಾಂಧವ್ಯಕ್ಕಾದರೂ ಜಾಗ ಅಥವಾ ಸಮಯವೆಲ್ಲಿದೆ? ಆದರೂ ವಿದ್ಯಾರ್ಥಿಗಳು ಅಕ್ಷರ ಕಲಿಸುವ ಶಿಕ್ಷಕರನ್ನು ನೆನೆಯುವುದು, ಮಕ್ಕಳಿಗೆ ಗುರುವಂದನೆ ಕುರಿತು ತಿಳಿವಳಿಕೆ ನೀಡುವುದು ಪಾಲಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಜೀವನದಲ್ಲಿ ಬಂದ ಆತ್ಮೀಯ ಮೇಷ್ಟ್ರು, ಆದರ್ಶ ಶಿಕ್ಷಕನನ್ನು ನೆನೆದು ಮಕ್ಕಳಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುವುದು ಇಂದಿನ ಅಗತ್ಯ.

ಶಿಕ್ಷಕನಾಗಲು ಅದೇಕೆ ಅಸಡ್ಡೆ?

ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಕೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?

ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!

ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.

ಅದೇಕೋ ಸದ್ಗುರುಗಳಾಗುವ ಹಂಬಲ ಇಂದಿನ ಪೀಳಿಗೆಯಲ್ಲಿ ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು ಅಪ್ಪ-ಅಮ್ಮ ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!

ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !

ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್‌ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ! ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್‌ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.

ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.

ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ ಅದಕ್ಕೇ. ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.

ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವುರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರುತೊಂದರೆಯಲ್ಲಿಸಿಲುಕಿಕೊಂಡಾಗಲೆಲ್ಲಆಚಾರ್ಯರುಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.

ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ. ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?

ಭಾರತದ ಹೆಮ್ಮೆಯ ಇತಿಹಾಸ

ಭಾರತ ವಿಶ್ವದ ಅತ್ಯಂತ ಪ್ರಾಚೀನ ರಾಷ್ಟ್ರ. ಅದರ ಹಳಮೆ ಮತ್ತು ಹಿರಿಮೆ ಲೋಕದಲ್ಲಿ ಸಾಟಿ ಇಲ್ಲದ್ದು. ಪ್ರಪಂಚದ ಜನಸಂಖ್ಯೆಯ ಐದನೆಯ ಒಂದು ಭಾಗ ಇತಿಹಾಸ ಭಾರತದ್ದು. ನೂರು ಕೊ ಜನರ ಸುಮಾರು ಐನೂರು ತಲೆಮಾರುಗಳ ಸಾಹಸದ ಕಥೆ ಅದು. ಸುಖ, ದುಖಃ ಶಾಂತಿ, ಜ್ಞಾನ - ಇವುಗಳಿಗಾಗಿ ನಮ್ಮ ಹಿರಿಯರು ಮಾಡಿದ ಸತತ ಪ್ರಯತ್ನಗಳ ಕಥೆ, ಅದು ವಿಶ್ವದೆಲ್ಲೆಡೆಯ ಜನ ಇಲ್ಲಿಗೆ ಬಂದರು. ಅವರ ಬರುವಿಕೆಯ ರೀತಿ, ಉದ್ದೇಶ ಭಿನ್ನ-ಭಿನ್ನ ಪ್ರವಾಸಿರಾಗಿ ಬಂದರು. ದುರಾಸೆಯಿಂದ ದಾಳಿ ಇಟ್ಟರು, ನುಗ್ಗಿದರು, ನುಂಗಿದರು , ಹಿಗ್ಗಿದರು, ಕುಗ್ಗಿದರು, ಕಲಿತೆರು, ಕಲಿಸಿದರು, ಬೆರೆತರು, ಬೇರೆಯಾದರು.ನಮ್ಮ ಹಿರಿಯರೂ ಸುತ್ತ ಮುತ್ತ ಹತ್ತಾರು ದೇಶಗಳಿಗೆ ಹೋದರು.ಬೆಳಕು ಚೆಲ್ಲಿದರು.ಕೂಡಿ ಬದುಕಿದರು. ಇಂತಹ ನೂರಾರು ಹಿಗ್ಗುತಗ್ಗುಗಳನ್ನು ಒಳಗೊಂಡಿದೆ ಭಾರತದ ಇತಿಹಾಸ. ನಾಗರಿಕತೆಯ ಅರುಣೋದಯದ ಹೊಂಬೆಳಕುನಲ್ಲೂ ಭಾರತ ಆಗಿನ ಮಾನವ ಸಮುದಾಯದಗಳ ಮುಂಚೂಣೆಯಲ್ಲಿ ಕಂಗೊಳಿಸಿತು. ನಾಗರಕತೆಯೇ ಅಸ್ತಮಿಸಬಹುದೆಂಬುವ ಮಹಾ ಭಯ ಆವರಿಸಿರುವ ಈ ಹೊತ್ತು ಭಾರತ ಅದೇ ಸ್ಥಾನವನ್ನು ಉಳಿಸಿಕೊಂಡಿದೆ. ಅದು ಸನಾತನಕ್ಕೆ ಸನಾತನ ನೂತನಕ್ಕೆ ನೂತನ. ಜಗತ್ತಿನ ಇತಿಹಾಸದಲ್ಲಿ ಪ್ರಾಚಿನವೆನಸಿ ಎಂದೋ ಕಣ್ಮರೆಯಾದ ಅಸೀರಿಯಾ, ಸುಮೆರೀಯಾ, ಬ್ಯಾಬಿಲೋನಿಯಾ, ಚಾಲ್ಡಿಯಾ.ಐಗುಪ್ತ. ಯವನ ರಾಷ್ಟ್ರಗಳಿಗೂ ಹಿರಿದಾದ ಭಾರತ, ಇಂದು ಪ್ರಪಂಚದ ಅತಿ ನೂತನ ರಾಷ್ಟ್ರಗಳಾದ ಅಮೆರಿಕಾ, ಆಸ್ಟ್ರೇಲಿಯಾಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು, ಚೈತನ್ಯಪೂರ್ಣವಾಗಿ ನಿಂತಿದೆ. ಭಾರತಾಂಬೆ ಚಿರಂಜೀವಿ.

ಕಳೆದ ಎರಡುವರೆ ಸಾವಿರ ವರ್ಷಗಳ ಅವಧಿಯಲ್ಲಿ ನಾವು ಅದಷ್ಟು ಆಕ್ರಮಣಗಳನ್ನಿ ಎದುರಿಸಬೇಕಾಯಿತು. ಹೂಣರು, ಗ್ರೀಕರು, ಕುಶಾಣರು, ಮೊಗೋಲರು, ಹಬ್ಶಿಗಳು, ತುಕಿ9ಗಳು, ಇರಾನಿಗಳು,ಫ್ರೆಂಚರು, ಢಚ್ಚರು,ಪೋರ್ಚುಗೀಸರು, ಆಂಗ್ಲರು, ಇತ್ಯಾದಿ ಇತ್ಯಾದಿ ಅಲೆಕ್ಸಾಂಡರ್‍ನಿಂದ ಹಿಡಿದು ಪರವೇಜ್ ಮುಶ್ರಪ್ವರೆಗೆ ಅದೆಷ್ಟು ಮೊದಿಯ ಆಕ್ರಮಣ ನಮ್ಮ ಮೇಲೆ!ಆದರೂ ಭಾರತ ಸತ್ತಿಲ್ಲ. ನಮ್ಮ ಪರಂಪರೆ ಏನು?

ಆ ಉಳಿದೆಲ್ಲರೂ ಆಕ್ರಮಣದ ಮೊದಲು ಆಘಾತಕ್ಕೆ ಧ್ವಂಸವಾದರೆ, ನಾವೋ ನಿರಂತರ ಹೋರಾಡಿ ರಾಷ್ಟ್ರವನ್ನು ಉಳಿಸಿದ್ದೇವೆ. ಇತಿಹಾಸದ ಈ ಪ್ರೇರಣಾಸ್ಪದ ಸಂಗತಿಯನ್ನು ನಮ್ಮ ಸಂಸ್ಕø ತಿಯ ಈ ಮೃತ್ಯುಂಜಯತ್ವವನ್ನು ನಮ್ಮ ಮಕ್ಕಳಿಗೆ ತಿಳಿಸುತ್ತೇವೆಯೇ? “ಭಾರತ ಇತಿಹಾ¸” ಎಂದರೆ ಸೋಲಿನ ಇತಿಹಾಸ ಎಂದೇ ನಮ್ಮ ಮಕ್ಕಳಿಗೆ ಕಲಿಸಲಾಗುತ್ತಿದೆ ಒಬ್ಬರಾದ ಬಳಿಕ ಒಬ್ಬ ಆಕ್ರಮಕ ಬಂದು ನಮಗೆ ನಿರಂತರ ಒದೆಯುತ್ತಿದ್ದ ಎಂದೇ ಮಕ್ಕಳಿಗೆ ಹೇಳುತ್ತಿದ್ದರೆ, ಅವರು ತಲೆ ಎತ್ತುವುದಾದರೂ ಹೇಗೆ? ಅನೇಕ ಬಾರಿ ನಾವು ಸೋತಿದ್ದು ಸತ್ಯ. ಆದರೆ ಸತ್ತಿಲ್ಲ. ಆಕ್ರಮಣಕಾರರ ಆಳ್ವಿಕೆಗೆ ನಾವು ಮಾನ್ಯತೆ ಕೊಡಲಿಲ್ಲ. ದೇಶದ ಯಾವುದಾದರೂ ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡಿಯುತ್ತಲೇ ಇತ್ತು. ಪುರೂರವನಿಂದ ಮಹಾತ್ಮಾಗಂಧೀಜಿ- ಸುಭಾಷ ಚಂದ್ರ ರವರೆಗೆ ಪ್ರತಿ ಶತಮಾನದಲ್ಲಿ ಹಲವು ಸೇನಾನಿಗಳ ನೇತ್ರತ್ವದಲ್ಲಿ ಸಂಘಷ9 ಜಾರಿಯಲ್ಲಿಟ್ಟೆವು.ಕೊನೆಗೂ ಆಕ್ರಮನಕಾರರ ಧ್ವಜ ಇಳಿಸಲು ಸಫಲರಾದೆವು. ಭಾರತ ಸ್ವಾತಂತ್ರ್ಯವಾಯಿತು. ನಮ್ಮ ಇತಿಹಸ ಸೋಲಿನ ಇತಿಹಾಸವಲ್ಲ, ಸಂಘóಷ9ದಇತಿಹಾಸ ಎಂದು ಎದೆ ತಟ್ಟಿ ಮಕ್ಕಳಿಗೆ ಹೇಳೋಣ

- ಶ್ರೀ ವಿದ್ಯಾನಂದ ಶೆಣ್ಯೆ. ರವರ  ಬರಹದಿಂದ  ಆಯ್ದ ದ್ದು.