STF 2015-16 Bengaluru South

From Karnataka Open Educational Resources
Revision as of 06:03, 30 December 2015 by Venkatesh (talk | contribs) (→‎See us at the Workshop)
(diff) ← Older revision | Latest revision (diff) | Newer revision → (diff)
Jump to navigation Jump to search

_FORCETOC__

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಮೊದಲನೇ ದಿನದ 16-11-2015ರ ವರದಿ
ಸರ್ ಸಿ. ವಿ. ರಾಮನ್ ತಂಡದಿಂದ ವರದಿವಾಚನ
ಅತ್ಮೀಯ ಶಿಕ್ಷಕ ಬಂಧುಗಳೆ , ದಿನಾಂಕ ೧೬.೧೧.೨೦೧೫ರಿಂದ ಪ್ರಾರಂಭವಾದ Sಖಿಈಕಾರ್ಯಗಾರದ ಮೊದಲನೆ ದಿನದ ವರದಿ ಈ ಕೆಳಗಿನಂತಿದೆ.
ಬೆಳಗ್ಗೆ ೧0 ಘಂಟೆ ಗೆ ಎಲ್ಲಾ ಶಿಕ್ಷಕರು ಕೊಠಡಿಯಲ್ಲಿ ಅಸೀನರಾದರು .ಡಯಟ್ ನ ಉಪಾನ್ಯಸಕಿ ಶ್ರೀಮತಿ ಸೌಮ್ಯರವರು ಎಲ್ಲರಿಗೂ ಸ್ವಾಗತವನ್ನು ಕೊರುತ್ತಾ ಕಾರ್ಯಗಾರಾದ ಉದ್ದೇಶವನ್ನು ತಿಳಿಸಿದರು ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀರಂಗನಾಥ್ ಮತ್ತು ಶ್ರೀಲಕ್ಷ್ಮೀಪ್ರಸಾದ್ ರವರು ೫ ದಿನಗಳ ಕಾರ್ಯಯೋಜನೆಯನ್ನು ವಿಸ್ತಾರವಾಗಿ ತಿಳಿಸಿದರು .ಎಲ್ಲಾ ಶಿಕ್ಷಕರು ೧೨ ಘಂಟೆಗೆ ಚಹಾ ವಿರಾಮಕ್ಕೆ ತೆರಳಿದರು.
೧೨;೩೦ಕ್ಕೆ ಶ್ರೀ ರಂಗನಾಥರವರು ಕೊಯರ್ ಬಗ್ಗೆ ತಿಳಿಸಿದರು ನಂತರ ನಾವೆಲ್ಲಾರು ಗಣಕಯಂತ್ರದಲ್ಲಿ ತಿಳಿಸಿದ ಹಾಗೆ ಕೊಯರ್ ನ ಬಗ್ಗೆ ಅನ್ವೇಷಣೆ ಮತ್ತು ಅಭ್ಯಾಸವನ್ನು ಮಾಡಿದೆವು. ೧;೧೫ಕ್ಕೆ ಭೋಜನ ವಿರಾಮಕ್ಕೆ ತೆರಳಿದೆವು
ಊಟದನಂತರ ಶ್ರೀ ರಂಗನಾಥರವರು ubuntu ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು . ತದನಂತರ ubuntu ವಿನಲ್ಲಿ ಕನ್ನಡ ಅಕ್ಷರ ಮಾಲೆಗಳು ಮತ್ತು ಕಾಗುಣಿತವನ್ನು ಟೈಪ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಚಹಾ ವಿರಾಮದ ನಂತರ ನಾವೆಲ್ಲರೂ ಗಣಕಯಂತ್ರದಲ್ಲಿ ಕನ್ನಡ ಅಕ್ಷರ ಮಾಲೆಗಳು ಮತ್ತು ಕಾಗುಣಿತವನ್ನು ಟೈಪ್ ಮಾಡುವ ವಿಧಾನವನ್ನು ಅಭ್ಯಾಸವನ್ನು ತುಂಬಾ ಉತ್ಸಾಹ ದಿಂದ ಅಭ್ಯಾಸಿಸಿದೆವು. ಸಂಜೆ ೫.೩೦ಕ್ಕೆ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ಮನೆಗೆ ತೆರಳಿದೆವು.

2nd Day
ದಿನಾಂಕ ೧೭. ೧೧. ೨೦೧೫ - ಎರಡನೇ ದಿನದ ವರದಿ ದಿನದ ಶುಭಾರಂಭ ಶ್ರೀಮತಿ ಶೈಲಜ ಬಿ ಎ ರವರ ಪ್ರಾರ್ಥನೆಯೊಂದಿಗೆ, ಶ್ರೀಮತಿ ರತ್ನಮ್ಮರವರ ಶುಭ ಚಿಂತನೆ, ಶ್ರೀಮತಿ ಶಾಂತಲ ರವರ ವಿಙ್ಞಾನ ವಿಷಯ ಮಂಡನೆ ಮತ್ತು ಮೊದಲನೆ ದಿನದ ವರದಿಯನ್ನು ಶ್ರೀ ಚರಣ್ ಸಿಂಗ್ ಮಂಡಿಸುವುದರೊಂದಿಗೆ ಪ್ರಾರಂಭವಾಯಿತು. ಶ್ರೀ ಅಶೋಕ್ ರವರು ಕ್ಯಾ ಲ್ಜಿಯಂ ಬಳಕೆ ಮಾಡುವ ವಿಧಾನವನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳು ಅದನ್ನು ಅಭ್ಯಾಸ ಮಾಡಿದರು. ಶ್ರೀ ರಂಗನಾಥ್ ರವರು ಫೆಟ್ ಸಿಮ್ಯುಲೇಷನ್ ಬಳಕೆ ತಿಳಿಸಿದರು. ಶ್ರೀ ಲಕ್ಷ್ಮಿಪ್ರಸಾದ್ ನಾಯಕ್ ರವರು ವಿಡಿಯೋ ಚಿತ್ರಣಗಳೊಂದಿಗೆ ಚಟುವಟಿಕೆಗಳ write ups ಮಾಡುವುದನ್ನು ಅಭ್ಯಾಸ ಮಾಡಿಸಿದರು. ನಂತರ ಶ್ರೀ ಅಶೋಕ್ ರವರು screen shot ಮತ್ತು hyperlink ನೀಡುವುದನ್ನು ಕಲಿಸಿದರು. ಊಟದ ವಿರಾಮದ ನಂತರ ಪ್ರತಿಯೊಬ್ಬರೂ ಚಟುವಟಿಕೆಗಳ ರೂಪುರೇಷೆಗಳನ್ನು ತಯಾರಿಸಿದರು. ಈ ಮೇಲ್ ಐ ಡಿ ತೆರೆಯುವುದನ್ನು ಶ್ರೀ ಲಕ್ಷ್ಮಿ ಪ್ರಸಾದ್ ರವರು ಕಲಿಸಿದರು. ಎಲ್ಲರೂ ತಮ್ಮ ಈ ಮೇಲ್ ಐ ಡಿ ತೆರೆದರು. ನಂತರ maths science stf groupಗೆ ಎಲ್ಲರ ಐ ಡಿ ಸೇರಿಸಿ ಮೇಲ್ ಕಳುಹಿಸುವುದನ್ನು ಕಲಿತೆವು. ನಂತರ ಮೇಲ್ ತೆರೆದು ನೋಡುವುದು, reply ಮಾಡುವುದು, attachments ತೆರೆಯುವುದು, ಇವುಗಳನ್ನು ಅಭ್ಯಾಸ ಮಾಡುವುದರೊಂದಿಗೆ ದಿನದ ಚಟುವಟಿಕೆಗಳು ಮುಕ್ತಾಯಗೊಂಡವು.

3rd Day
ದಿನಾಂಕ 18-11-2016 ರ ವರದಿಯನ್ನು 3ನೇ ತಂಡದವರಿಂದ ಮಂಡಿಸಲಾಯಿತು. ಮೊದಲನೆಯದಾಗಿ ತಾರೆ ಹೆಗಡೆಯವರ ಪಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು. 4 ನೇ ತಂಡದವರು ಶುಭಚಿಂತನೆಯನ್ನು ಹೇಳಿದರು. 2ನೇ ತಂಡದಿಂದ ವರದಿ ವಾಚನ. 1ನೇ ತಂಡದಿಂದ ವಿಜ್ಙಾನ ವಿಷಯ ಮಂ ಡನೆ . ರಂಗನಾಥ ಅವರು mind map ತಯಾರಿಸುವುದರ ಬಗ್ಗೆ ಸವಿಸ್ತ್ತಾರವಾಗಿ ಹೇಳಿಕೊಟ್ಟರು. ನಾವು ತುಂಬಾ ಆಸಕ್ತಿಯಿಂದ mind map ತಯಾರಿಸಿ maths science STF group ಗೆ mail ಕಳುಹಿಸಿಕೊಟ್ಟೆವು. ಮಧ್ಯಾಹ್ನದ ಅವಧಿಯಲ್ಲಿ phet simulation ಬಳಸಿ 4ನೇ ತಂಡದವರು ವಸ್ತುಗಳ ಮೇಲೆ ಗುರುತ್ವ ಪ್ರಭಾವ, 1ನೇ ತಂಡದವರು ದ್ರವ್ಯದ ಸ್ವಭಾವ, 2ನೇ ತಂಡದವರು ಹಸಿರು ಮನೆ ಪರಿಣಾಮ ಇವುಗಳ ಮೇಲೆ ತಯಾರಿಸಿದ ಚಟುವಟಿಕೆಗೆ Demo class ನೀಡಿದರು. ಕೊನೆಯದಾಗಿ ಅಶೋಕ ರವರು stellerium ಬಗೆ ಸವಿಸ್ತಾರವಾಗಿ ಹೇಳಿಕೊಟ್ಟರು.ಎಲ್ಲರೂ ಅದರ ಬಗ್ಗೆ practice ಮಾಡುತ್ತ ಕಾರ್ಯಾಗಾರ ಮುಕ್ತಾಯಗೊಳಿಸಲಾಯಿತು.
4th Day
ದಿನಾಂಕ – 19-11-2015
ಪ್ರಾರ್ಥನೆ :- ತಂಡ 4 ಶ್ರೀಮತಿ ರಮಾಮಣಿ
ಶುಭಚಿಂತನೆ :- ತಂಡ 1 ಶ್ರೀ ಗಣೇಶಾರಾಧ್ಯ
ವರದಿ :- ತಂಡ 3 ಶ್ರೀಮತಿ ಸವಿತ
ವಿಜ್ಞಾನ ವಿಷಯ :- ತಂಡ 2 ಶ್ರೀಮತಿ ಶೈಲಜ
ದಿನಾಂಕ – 19-11-2015 ರಂದು ನಡೆದ ಕಾರ್ಯಾಗಾರದಲ್ಲಿ ಶ್ರೀಮತಿ ಶಶಿಕಲ ಹಿರಿಯ ಉಪನ್ಯಾಸಕರು ಆಗಮಿಸಿ ಪಾಲ್ಗೊಂಡಿದ್ದರು.ನಂತರ ಶ್ರೀಯುತ ಲಕ್ಷ್ಮಿಪ್ರಸಾದ್ ನಾಯಕ್ ರವರು youtubeನಿಂದ download ಮಾಡುವ ಬಗ್ಗೆ ಹಾಗೂ ಅದರಲ್ಲಿ ನಮಗೆ ಅವಶ್ಯಕವಿರುವ ಮಾಹಿತಿಯ ಕೋರಿಕೆ ಸಲ್ಲಿಸಿ ಅದನ್ನು ಪಡೆದುಕೊಳ್ಳುವ ವಿಧಾನ ವಿವರಿಸಿದರು. ಅಲ್ಲದೆ ಅದನ್ನು save ಮಾಡುವ ವಿಧಾನ ತಿಳಿಸಿದರು. ನಂತರ ನಾವೆಲ್ಲರೂ ಹತ್ತಿರವಿರುವ ರಾಜರಾಜೇಶ್ವರಿ ಪ್ರೌಢಶಾಲೆಗೆ ತೆರಳಿ ಅಲ್ಲಿ ವಿಜ್ಞಾನ ಪ್ರಯೋಗಗಳನ್ನು ನಿರ್ವಹಿಸಿದೆವು. ಶ್ರೀಯುತ ಲಕ್ಷ್ಮಿಪ್ರಸಾದ್ ನಾಯಕ್ ರವರು youtube video ವೀಕ್ಷಿಸುವ ವಿಧಾನ ,strategies of science ಬಗ್ಗೆ ರಚನಾತ್ಮಕ ಕಲಿಕೆಯಲ್ಲಿ 5Eಗಳ ಪಾತ್ರವನ್ನು ವಿವರಿಸಿದರು. . ಉಪನ್ಯಾಸಕ ಪದ್ಧತಿಯಲ್ಲಿ ವಿಜ್ಞಾನ ಬೋಧನೆಗಿಂತ ಚಟುವಟಿಕೆ ಆಧಾರಿತ ಬೋಧನೆ ಹೇಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕಲಿಕೆಯನ್ನು ಉಂಟುಮಾಡುತ್ತದೆ ಎಂದು ವಿವರಿಸಿದರು. ಮಧ್ಯಾಹ್ನ ದ ಊಟದ ಅವಧಿಯ ನಂತರ youtube ನಲ್ಲಿ ಮಾಹಿತಿ ಪಡೆದುಕೊಳ್ಳುವ ವಿಧಾನವನ್ನು ಅಭ್ಯಾಸ ಮಾಡಿದೆವು.
ನಂತರ googleನಿಂದ ಮಾಹಿತಿ ಭಾಷಾಂತರಿಸುವ ಹಾಗೂ ಮಾಹಿತಿಯನ್ನು compress ಮಾಡಿ zip file ನಲ್ಲಿ ಹಾಕುವ ವಿಧಾನ ತಿಳಿಸಿದರು. Gmail ನ signature text ಸೇರಿಸುವ ವಿಧಾನ ,password ಬದಲಾಯಿಸುವ ,ಮರೆತುಹೋದರೆ ಹೊಸ password ಪಡೆಯುವ ಹಂತಗಳನ್ನು ತಿಳಿಸಿದರು. ನಂತರ ಶ್ರೀ ಅಶೋಕ್ ರವರು ubuntu soft ware install ಮಾಡುವ ಹಂತಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಕೊನೆಯದಾಗಿ ಮಾರನೇದಿನದ ಕಾರ್ಯಹಂಚಿಕೆ ಮಾಡುವುದರೊಂದಿಗೆ ದಿನದ ಕಾರ್ಯಕ್ರಮ ಮುಕ್ತಾಯವಾಯಿತು.

5th Day
ಶ್ರೀಮತಿ . ಸಾವಿತ್ರಿರವರು ಪ್ರಾಥನೆಯನ್ನು ಮಾಡಿದರು.
ಶ್ರೀಮತಿ .ಶೈಲಜಾರವರು ಶುಭಚಿ೦ತನೆಯನ್ನು ನಡೆಸಿದರು
ವಿಙ್ಞಾನ ವಿಷಯ download ಮಾಡುವುದು,ಧ್ವನಿಕೊಡುವುದನ್ನು ತಿಳಿಸಿದರು. ವಿಜ್ಞಾನ ಪ್ರಯೋಗಗಳನ್ನು ಮಾಡುವಾಗ ತೆಗೆದ ವಿಡಿಯೊ ಗಳನ್ನು ಪ್ರದರ್ಶಿಸಲಾಯಿತು. ಪ್ರತಿ ವಿಡಿಯೋ ವೀಕ್ಷಿಸಿದ ನಂತರ ಉತ್ತಮ ಅಂಶಗಳ ಹಾಗೂ ನ್ಯೂನ್ಯತೆಗಳ ಬಗ್ಗೆ ಚರ್ಚಿಸಲಾಯಿತು. ಚಹಾ ವಿರಾಮದ ನ೦ತರ ಎಲ್ಲರನ್ನು ಹಿಂದಿನ ದಿನದ ಚಟುವಟಿಕೆಗಳನ್ನು ವಿರ್ಮಶಿಸಿದರು. ಅದರಲ್ಲಿನ ಮುಖ್ಯ ಅಂಶಗಗಳನ್ನು ಚರ್ಚಿಸಿದರು. ಪ್ರತಿಯೊಂದು ತಂಡದವರು ಅವರ ಚಟುವಟಿಕೆಗಳನ್ನು ಪ್ರರ್ದಶಿಸಿದರು. ತಂಡ -೧, ವಿರಾಮದ ನ೦ತರ feed back formಗಳನ್ನು ತು೦ಬಿಸಿ koerಗೆ ಸಲ್ಲಿಸುವ ಬಗ್ಗೆ ತಿಳಿಸಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ದಿ. ೨೩ .೧೧ .೧೫ ರ ಸೋಮವಾರದಂದು ತರಬೇತಿಯ ಬೆಳಗ್ಗೆ ೧೧ ಗಂ. ಗೆ ಪ್ರಾರಂಭವಾಯಿತು.ಮೊದಲನೇ ದಿನದ ತರಬೇತಿಯು ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ಶಶಿಕಲಾ ರವರ ಮಾತುಗಳೊಂದಿಗೆ ಪ್ರಾರಂಭವಾಯಿತು. ಇವರು ಎಸ್ ಟಿ ಎಫ್ ತರಬೇತಿಯ ಉದ್ದೇಶಗಳನ್ನು ವಿವರಿಸಿದರು. ತರಬೇತಿಗೆ ಹಾಜರಾದ ಶಿಕ್ಷಕರ ನೊಂದಣಿಯಾದ ನಂತರ ಟೀ ವಿರಾಮ ನೀಡಲಾಯಿತು. ವಿರಾಮದ ಬಳಿಕ ಶ್ರೀಯುತ ಲಕ್ಷ್ಮೀಪ್ರಸಾದ್ ನಾಯಕ್ ರವರು ಉಬಂಟು ತಂತ್ರಾಂಶದಲ್ಲಿ ಫೋಲ್ಡರ್, ಡಾಕ್ಯುಮೆಂಟ್ ಕ್ರಿಯೇಟ್ ಮಾಡುವುದು , ಇ ಮೇಲ್ ಐಡಿ ಕ್ರಿಯೇಟ್ ಮಾಡುವುದು ಸವಿವರವಾಗಿ ತಿಳಿಸಿದರು. ತರಬೇತಿಗೆ ಹಾಜರಾದ ಶಿಕ್ಷಕರನ್ನು ೫ ಗುಂಪುಗಳಾಗಿ ವಿಂಗಡಿಸಿ ಪ್ರತಿದಿನದ ಕಾರ್ಯಹಂಚಿಕೆ ಮಾಡಿ ಓಟದ ವಿರಾಮ ನೀಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ಶ್ರೀಯುತ ರಂಗನಾಥ ರವರು koer ಬಳಕೆ ಉದ್ದೇಶ ಅದನ್ನು ಬಳಸುವ ವಿಧಾನವನ್ನು ಬಳಸುವ ಕ್ರಮ ತಿಳಿಸಿ ಕೊಟ್ಟರು. . koer ಇಂದ down load ಮಾಡಿದ images videos share ಮಾಡುವ ಹಾಗು ಅದನ್ನು hyperlink ಮಾಡುವ ವಿಧಾನ ಸವಿವರವಾಗಿ ತಿಳಿಸಿದರು. ನಂತರ e mail use ,kannada typing ,koer browsing ಅಭ್ಯಾಸ ಮಾಡಲಾಯಿತು. ಈ ಎಲ್ಲಾ ಸಂದರ್ಭಗಳಲ್ಲು ಶ್ರೀಮತಿ ಶೈಲಜಾ ರವರು ಎಲ್ಲರಿಗೂ ಸಲಹೆ , ಸೂಚನೆಗಳನ್ನು ನೀಡಿದರು. ಮೊದಲನೇ ದಿನದ ತರಬೇತಿಯು ಸಂಜೆ ೫ ಗಂಟೆಗೆ ಮುಕ್ತಾಯಗೊಳ್ಳಿತು. ದಿನದ ತರಬೇತಿಯನ್ನು ಆಸಕ್ತಿದಾಶಯಕ ಹಾಗು ಅರ್ಥಪೂರ್ಣ ಮಾಡಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೂ ಧನ್ಯವಾದಗಳನ್ನು ಸಲ್ಲಿಸುತ್ತವೆ.
2nd Day
ಎಲ್ಲರಿಗೂ ವಂದನೆಗಳು
ದಿನಾಂಕ24.11.2015ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ರೋಹಿಣಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಶುಭ ಚಿಂತನ, ವಿಜ್ಜಾನ ವಿಷಯ, ವರದಿ ವಾಚನ ಮಾಡಲಾಯಿತು. LIBRA OFFICE ನ್ನು ಪರಿಚಯಿಸುವುದರೋಂದಿಗೆ ಕಾರ್ಯಕ್ರಮ ಪ್ರಾರಂಭ. . ನಿನ್ನೆ ತಿಳಿಸಿಕೊಟ್ಟ hyper link ಬಗ್ಗೆ ಪುನರ್ಮನನ ಮಾಡಲಾಯಿತು. Libra Office ನ್ನು ಹೇಗೆ ಹುಡುಕಬಹುದೆಂದು ತಿಳಿಸಿಕೊಟ್ಟರು ಮತ್ತು ಸ್ವತಃ computer ಪರದೆಯ ಮೇಲೆ ತೋರಿಸಿಕೊಟ್ಟರು. ನಂತರ classic periodic table ಬಗ್ಗೆ ತಿಳಿಯಲು kalziumನ್ನು open ಮಾಡುವುದನ್ನು ತೋರಿಸಿಕೊಟ್ಟರು. ಇದರಿಂದ periodic table ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಅನುಕೂಲವಾಯಿತು. ನಂತರ Mind mapನ ಬಗ್ಗೆ ಮಾಹಿತಿ ನೀಡಲಾಯಿತು . ಪ್ರತಿಯೊಂದು ವಿವರಣೆಗೂ ಬಿನ್ನವಾದ ಬಣ್ಣ ನೀಡಿ ಸ್ಪಷ್ಟ ವಾಗಿ ತಿಳಿಯಲು ಅನುಕೂಲ ಕಲ್ಪಿಸಲಾಯಿತು. ಅದಕ್ಕೆ ಬಳಸುವ ಗೆರೆಗಳ ಅಗಲ ಮತ್ತು ದಪ್ಪಗಳ ಬಗ್ಗೆ ತಿಳಿಸಲಾಯಿತು. ಇಲ್ಲಿಗೆ ಊಟದ ಸಮಯವಾಯಿತು. ಊಟದ ನಂತರ challenge for science teacher ಮತ್ತು ವಿಜ್ಜಾನವನ್ನು ಬೋಧಿಸುವ ಬಗ್ಗೆ ಮೇಲೆ ತೋರಿಸಿ ವಿವರಿಸಲಾಯಿತು. 5E, sಗಳ ಬಗ್ಗೆ ತಿಳಿಸಲಾಯಿತು. ನಂತರ ಚಟುವಟಿಕೆಗಳ ಬಗ್ಗೆ ತಿಳಿಸಲಾಯಿತು ಉದಾಹರಸಹಿತ. ನಂತರ 5 ತಂಡಗಳಿಗೂ ಚಟುವಟಿಕೆಗಳನ್ನು ಮಾಡಲು ಮತ್ತು ಪ್ರಯೋಗಗಳನ್ನು ಮಾಡುವ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಪ್ರತಿಯೊಂದು ತಂಡವು ಒಂದು phet simulation ಮತ್ತು ಒಂದು screen shot ಪ್ರಯೋಗ ಮಾಡಲು ತಿಳಿಸಲಾಯಿತು. ಇಲ್ಲಿಗೆ ಇಂದಿನ ದಿನದ ಕಾರ್ಯಕ್ರಮಗಳು ಮುಕ್ತಾಯವಾದವು.

3rd Day
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ತಂಡ
ದಿನಾಂಕ ೨೫/೧೧/೨೦೧೫ ಎಸ್. ಟಿ. ಎಫ್ ತರಬೇತಿ ವರದಿ
ಈ ದಿನದ ತರಬೇತಿಯು ಶ್ರೀಯುತ ಚಿಕ್ಕಣ್ಣರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀ ಪುರುಷೋತ್ತಮ್ ರವರು ಶುಭಚಿಂತನೆಯಲ್ಲಿ ನಗುವಿನ ಬಗ್ಗೆ ತಿಳಿಸುತ್ತಾ ನಗುತ್ತಾ ಇರುವುದನ್ನು ಹಾಗೂ ನಗಿಸುತ್ತಾ ಇರುವುದನ್ನು ಕಲಿತು ಕಲಿಸುವುದನ್ನು ತಿಳಿಸಿದರು. ತದನಂತರ ಶ್ರೀಮತಿ ನಾಗವೇಣಿರವರು ಜಿ. ಎನ್. ಆರ್. ಗೋಪಾಲಸಮುದ್ರಂ ನಾರಾಯಣ ರಾಮಚಂದ್ರನ್ ರವರು ಪ್ರೋಟೀನ್ ನ ರಚನೆಯನ್ನು ಮೊದಲ ಬಾರಿಗೆ ಬಿಡಿಸಿದರು. ಅದಕ್ಕೂ ಮುನ್ನ ರಚನೆಯು ಬಿಡಿಸಲಾರದ ಕಗ್ಗಂಟಾಗಿತ್ತು ಎಂಬುದನ್ನು ತಿಳಿಸಿದರು. ನಂತರ ಶ್ರೀ ಶಾಂತಕುಮಾರ್ ರವರು ೨೪/೧೧/ ೨೦೧೫ರ ವರದಿಯನ್ನು ಸೊಗಸಾಗಿ ಮಂಡಿಸಿದರು. ನಂತರ ರಚನಾ ತರಬೇತಿಯಲ್ಲಿ ನಡೆಸುವ ಸರಳ ಪ್ರಯೋಗಗಳನ್ನು ವೀಕ್ಷಿಸಲು ಕೆಳಗಿನ ಹಾಲ್ ನಲ್ಲಿ ಸೇರಿದೆವು. ಶ್ರೀ ಪ್ರಚೇತ್ ಹಾಗೂ ಶ್ರೀ ವಿಶಾಲ್ ರವರು ಅನೇಕ ವಿಜ್ಞಾನ ಪ್ರಯೋಗಗಳನ್ನು , ಅತಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಆಟಿಕೆಗಳನ್ನು ತೋರಿಸಿ ,ತರಗತಿ ಕೋಣೆಯಲ್ಲಿ ಅವುಗಳನ್ನು ತೋರಿಸಿ ನಿರೂಪಿಸುವ ಬಗೆ ವಿವರಿಸಿದರು. ಉದಾಹರಣೆಗೆ ಚಪ್ಪಲಿ ಹಾಗೂ ಮಾರ್ಬಲ್ ನ್ನು ಬಳಸಿ ವೃತ್ತೀಯ ಚಲನೆಯ ಪ್ರಯೋಗ, ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿ ಅನೇಕ ಸರಳ ವಿಜ್ಞಾನ ಪ್ರಯೋಗಗಳನ್ನು ವಿವರಿಸಿದರು. ಹಾಗೆಯೇ ಗಾಳಿಯ ಒತ್ತಡಕ್ಕೆ ಸಂಬಂಧಿಸಿದ ಪ್ರಯೋಗ, ಗುರುತ್ವಕ್ಕೆ ಸಂಬಂಧಿಸಿದ ಪ್ರಯೋಗ ಕವಾಟಗಳು ಕಾರ್ಯ ನಿರ್ವಹಿಸುವ ಬಗೆ, ರಾಕೆಟ್ ಉಡಾವಣೆ ಪ್ರಯೋಗ, ಪ್ಯಾಸ್ಕಲ್ ರವರ ತತ್ವವನ್ನು ಮಂಡಿಸುವ ಪ್ರಯೋಗಗಳನ್ನು ಅತ್ಯಂತ ಸರಳವಾಗಿ, ಕುತೂಹಲವನ್ನು ಕಾಯ್ದಿರಿಸಿಕೊಳ್ಳುತ್ತಾ ತೋರಿಸಿದರು. ಊಟದ ವಿರಾಮದ ನಂತರ ಫೆಟ್ ಸಿಮ್ಯುಲೇಷನ್ ಚಟುವಟಿಕೆ ಹಾಗೂ ಅದನ್ನು ಮಂಡಿಸಲು ಅಗತ್ಯವಾದ ಹಂತಗಳ ಬಗ್ಗೆ ಸವಿವರವಾಗಿ ಹೇಳಲಾಯಿತು. ನಾವೆಲ್ಲರೂ ಈ ಚಟುವಟಿಕೆಗಳನ್ನು ಅನುಸರಿಸಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿ ಟೀಬ್ರೇಕ್ ನ ನಂತರ ಹಂತಗಳಲ್ಲಿ ಅದನ್ನು ಜೋಡಿಸಿ ನಂತರ ಈ ದಿನದ ತರಬೇತಿಗೆ ವಿದಾಯ ಹೇಳಿದೆವು.
4th Day
ದಿನಾಂಕ :26/11/2015 ರಂದು ನಡೆದ STF ತರಬೇತಿಯ ವರದಿ
ತರಬೇತಿಯು ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು.ಕಾರ್ಯಕ್ರಮವು ಈ ಕೆಳಗಿನಂತೆ ಇದೆ:
೧.ಪ್ರಾರ್ಥನೆ-- ತಂಡ ೦೪-- ಶ್ರೀ.ಪುರುಷೋತಮ್ ರವರಿಂದ.
2.ಶುಭ ಚಿಂತನೆ-- ತಂಡ ೦೫--ಶ್ರೀ.ರಾಜಶೇಖರ್ ರವರಿಂದ.
೩.ವಿಜ್ಞಾನ ವಿಷಯ--ತಂಡ ೦೧—ಶ್ರೀಮತಿ.ಸುಮನ ರವರಿಂದ.
೪.ವರದಿ-----ತಂಡ ೦೨--- ಶ್ರೀ.ಕಿರಣ್.ಬಿ.ಎಂ.ರವರಿಂದ.
ಮೊದಲನೆದಾಗಿ ನಮ್ಮ ತರಬೇತಿಯ ಸಂಪನ್ಮೊಲ ವ್ಯಕ್ತಿಯಾದ ಶ್ರೀಯುತ.ರಂಗನಾಥ್ ರವರು ಈ ದಿನದ ದಿನಚರಿಯನ್ನು ತಳಿಸಿದರು.ತದನಂತರ ಶಬಿರಾರ್ತಿಗಳಿಗೆ Google translate ನ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದರು,ಹಾಗೆಯೇ slide shareನ ಬಗ್ಗೆ ppt.ಯೊಂದಿಗೆ ವಿವರಿಸದರು.
ಹಾಗೊ ಶಿಬಿರಾರ್ತಿಗಳು ಅದನ್ನು ಅಭ್ಯಾಸ ಮಾಡಿದರು,ನಂತರ ಮಾಡಿದ ಚಟುವಟಿಕೆ,ಮೈಂಡ್ ಮ್ಯಾಪ್,ಫೆಟ್ ಚಟುವಟಿಕೆಯನ್ನು STF group ಗೆ, ಮೇಲ್ ಮಾಡಲು ಸೊಚಿಸಲಾಯಿತು. ಅಪರಾಹ್ನ 12.00ಗಂಟೆಯ ನಂತರ K-star,Stellarium ಬಗ್ಗೆ ವಿವರಿಸಿದ್ದರು,ಹಾಗೊ ಅಭ್ಯಾಸಿಸಲು ತಳಿಸಿದರು.ಇದರ ನಂತರ ಊಟದವಿರಾಮ ನೀಡಲಾಯಿತ್ತು. ಮಧ್ಯಾಹ್ನಾದ ಅವಧಿಗೆ k-star,Stellarium ಕುರಿತು ಅಭ್ಯಾಸ ಮಾಡಿಸಲಾಯಿತು,ಸುಮಾರು 02.30 ಗಂಟೆಯ ನಂತರ ತರಬೇತಿ ಕೇಂದ್ರದ ಪಕ್ಕದಲ್ಲಿರುವ ರಾಜರಾಜೇಶ್ವರಿ ಶಾಲೆಗೆ ನಮ್ಮಲ್ಲಾರನ್ನು ಕರೆದು ಕೊಂಡು ಹೋಗಿ,ಪೊರ್ವನ್ವಿತವಾಗಿ ಸೊಚಿಸಲಾದ ಪ್ರಯೋಗಲಯದ ಚಟುವಟಿಕೆಯ ಪ್ರಾದರ್ಶಿಕೆಯನ್ನು ತಂಡವಾರು ನೆರೆವೆರಿಸಲಾಯಿತ್ತು ಹಾಗೊ ಪ್ರಾಯೋಗದ ವಿವರವನ್ನು STF groupಗೆ ಮೇಲ್ ಮಾಡಲು ಸೊಚಿಸಲಾಯಿತ್ತು.ಕೊನೆಯದಾಗಿ Phet simulations ಕುರಿತು ತಂಡವಾರು ವಿವರಣೆಗಳನ್ನು ನೀಡಲು ಅವಕಾಶ ಮಾಡಿ ಕೊಡಲಾಯಿತ್ತು,ಎಲ್ಲಾ ತಂಡದವರು ಮೇಲಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ, ಸಂಜೆ 05.00 ಗಂಟೆಗೆ ತರಬೇತಿ ಮುಕ್ತಾಯಗೊಂಡಿರುತ್ತದೆ.

5th Day
S T F ತರಬೇತಿಯ 5 ನೇ ದಿನವಾದ ದಿನಾಂಕ 27-11-2015 ರಂದು ಬೆಳಗಿನ ಅವಧಿಯು smt. ರೋಹಿಣಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. smt.ಸುಜಾತಾರವರು ಆತ್ಮಗೌರವ ಮತ್ತು ಆತ್ಮನಿಂದನೆ ಬಗ್ಗೆ ತಮ್ಮ ಶುಭಚಿಂತನೆಯಲ್ಲಿ ಸರಳವಾಗಿ ತಿಳಿಸಿದರು. ಈ ದಿನದ ವರದಿಯನ್ನು smt.ಸುಪರ್ಣಾರವರು 26-11-15 ರ ವರದಿಯನ್ನು ಸುಂದರವಾಗಿ ಮಂಡಿಸಿದರು. ನಂತರ smt. ರೋಹಿಣಿಯವರು ವಿದ್ಯಾರ್ಥಿಗಳಿಗೆ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಗುರುತಿಸುವುದು,pH ಕಾಗದದ ಬಳಕೆ ಮತ್ತು ಅಯಾನಿಕ ವಾಹಕತೆಯನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಂಗನಾಥ್ ರವರು ಶ್ರೀಮತಿ ರೋಹಿಣಿಯವರ ಚಟುವಟಿಕೆಯನ್ನು ಪುಷ್ಠಿ ಕರಿಸುವಂತೆ ವಿಜ್ಞಾನ ಪಠ್ಯದಲ್ಲಿರುವ ಘಟಕಗಳಲ್ಲಿ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರ ಜೊತೆಗೆ ಬಾಹ್ಯ ಪರೀಕ್ಷೆ ಹಾಗು ರೂಪಣಾತ್ಮಕ ಮೌಲ್ಯ ಮಾಪನ ಮಾಡುವುದಕ್ಕೆ ಅನುಕೂಲವಾಗುವಂತಿರಬೇಕು ಎಂದು ತಿಳಿಸಿದರು. ನಂತರ ಶಿಬಿರಾರ್ಥಿಗಳಲ್ಲಿ ಒಬ್ಬರಾದ ಶ್ರೀಯುತ ಚಂದ್ರಕಾಂತ್ ರವರು ಪ್ರಚ್ಛನ್ನ ಶಕ್ತಿ ಯನ್ನು ಚಲನಾಶಕ್ತಿಯನ್ನಾ ಗಿ ಪರಿವರ್ತಿಸುವ ಒಂದು ಆಟಿಕೆಯನ್ನು ಮಾಡಿತೋರಿಸಿದರು. ಚಹಾ ವಿರಾಮದ ನಂತರ ಶ್ರೀಯುತ ರಂಗನಾಥ್ ರವರು stellerium toolನಲ್ಲಿ ನಕ್ಷತ್ರಗಳ ಚಲನೆ ,ಆಕಾಶದಲ್ಲಿ ಗ್ರಹಗಳನ್ನು ಗುರುತಿಸುವುದು ಮತ್ತು ಸೂ ರ್ಯ ಗ್ರಹಣ,ಚಂದ್ರಗ್ರಹಣ ಆಗುವಿಕೆಯನ್ನು ನೈಜವಾಗಿ ವೀಕ್ಷಿಸಬಹುದು ಎಂಬುದನ್ನು ವಿವರವಾಗಿ ತೋರಿಸಿಕೊಟ್ಟರು. ನಂತರ ಶ್ರೀಮತಿ ಸುಮನ ರವರು ಅನಿಲಗಳ ವರ್ತನೆ ಯನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು. ನಂತರ ಶ್ರೀಮತಿ ನಾಗವೇಣಿಯವರು ವಿದ್ಯುತ್ ಕಾಂತೀಯ ಪ್ರೇರಣೆ ಪ್ರಯೊಗವನ್ನು phEt ಮೂಲಕ ಹೇಗೆ ಚಟುವಟಿಕೆ ಮಾಡಬಹುದೆಂದು ಸೊಗಸಾಗಿ ತಿಳಿಸಿದರು. ನಂತರ ಶ್ರೀಯುತ ಮಂಜುನಾಥ್ ರವರು ಪ್ರಯೊಗ ಶಾಲೆಯಲ್ಲಿ ತೋರಿಸಿದ "ಅಯಾನಿಕ ವಾಹಕತೆ"ಯ ಸರಳ ಪ್ರಯೋಗದ ವರದಿಯನ್ನು ಮಂಡಿಸಿದರು. ಭೋಜನ ವಿರಾಮದ ನಂತರ koer ನಲ್ಲಿ feed back form ಭರ್ತಿ ಮಾಡುವುದನ್ನು ತಿಳಿಸಿಕೊಟ್ಟರು ಹಾಗೆ ಎಲ್ಲ ಶಿಬಿರಾರ್ಥಿಗಳು feed back form ಭರ್ತಿ ಮಾಡಿದರು. ಮಧ್ಯಾಹ್ನದ ಚಹಾ ವಿರಾಮದ ನಂತರ ಶ್ರೀಯುತ ರಂಗನಾಥ್ ರವರು Audocityಮತ್ತು open shot video editor tool ಬಗ್ಗೆ ತಿಳಿಸಿಕೊಟ್ಟರು. ಶಿಬಿರಾರ್ಥಿಗಳು ಈ ಟೂಲನ್ನು ಬಳಸಿಕೊಂಡು ಸಂಜೆ ೫ ಗಂಟೆಯ ತನಕ ಅಭ್ಯಾಸದಲ್ಲಿ ತೊಡಗಿಕೊಂಡರು.ಕೊನೆಯಲ್ಲಿ ಸಾಫಲ್ಯ ಪರೀಕ್ಷೆಯನ್ನು ನೀಡಲಾಯಿತು. ನಂತರ ೫ ಗಂಟೆಗೆ ೫ ದಿನಗಳ ಕಾಲ ಉತ್ತಮವಾಗಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಎಲ್ಲ ಶಿಬಿರಾರ್ಥಿಗಳಿಗೆ ವಂದನೆ ಸಲ್ಲಿಸುವುದರ ಮೂಲಕ ಯಶಸ್ವಿಯಾಗಿ ಶಿಬಿರವನ್ನು ಮುಕ್ತಾಯಗೊಳಿಸಲಾಯಿತು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Hindi

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.