ಲಿಬ್ರೆ ಆಫೀಸ್ ಅನುಸ್ಥಾಪನ ಮತ್ತು ಸಂರಚನೆ

From Karnataka Open Educational Resources
Jump to navigation Jump to search

ಪರಿಚಯ

ಲಿಬ್ರೆ ಆಫೀಸ್ ಉಚಿತ ಮತ್ತು ಮುಕ್ತ-ಮೂಲ ಸಾಫ್ಟ್‌ವೇರ್ ಪ್ಯಾಕೇಜ್ ಆಗಿದೆ. ಲಿಬ್ರೆ ಆಫೀಸ್ ಮೈಕ್ರೋಸಾಫ್ಟ್ ಆಫೀಸ್ ಅನ್ನು ಹೋಲುತ್ತದೆ. ಉಬುಂಟು, ವಿಂಡೋಸ್ ಮತ್ತು ಮ್ಯಾಕ್‌ನಲ್ಲಿ ಲಿಬ್ರೆ ಆಫೀಸ್ ಅನ್ನು ಹೇಗೆ ಅನುಸ್ಥಾಪನ ಮಾಡುವುದು ಮತ್ತು ಸಂರಚನೆ ಮಾಡುವುದು ಎಂಬುದನ್ನು ಇಲ್ಲಿ ನಾವು ಕಲಿಯುತ್ತೇವೆ.

ಅನುಸ್ಥಾಪನ

ಉಬುಂಟುನಲ್ಲಿ ಅನುಸ್ಥಾಪನದ ಕ್ರಮಗಳು

  1. ಅಪ್ಲಿಕೇಶನ್ ಉಬುಂಟು ಕಸ್ಟಮ್ ವಿತರಣೆಯ ಭಾಗವಾಗಿದೆ.
  2. ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಲಿಬ್ರೆ ಆಫೀಸ್ ಕಂಡುಹಿಡಿಯದಿದ್ದರೆ, ಉಬುಂಟು ಸಾಫ್ಟ್‌ವೇರ್ ಕೇಂದ್ರದಲ್ಲಿ "ಲಿಬ್ರೆ ಆಫೀಸ್" ಅನ್ನು ಆಯ್ಕೆ ಮಾಡುವ ಮೂಲಕ ನೀವು ಅನುಸ್ಥಾಪಿಸಬಹುದು.
  3. ನೀವು ಟರ್ಮಿನಲ್ ಮೂಲಕ ಅನುಸ್ಥಾಪಿಸಲು ಬಯಸಿದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ:
    1. (Ctrl+Alt+T), ಕ್ಲಿಕ್ ಮಾಡುವ ಮೂಲಕ ಟರ್ಮಿನಲ್ ತೆರೆಯಿರಿ
    2. ವಿಂಡೋ ಪುಟ ತೆರೆದ ನಂತರ, ಡಾಲರ್ ($) ಚಿಹ್ನೆಯ ಮುಂದೆ ಕೇವಲ ಕೆಳಗಿನ ಆಜ್ಞೆಯನ್ನು ಟೈಪ್ ಮಾಡಿ.
    3. sudo apt-get install libreOffice

ಉಬುಂಟುನಲ್ಲಿ ಲಿಬ್ರೆ ಆಫೀಸ್ ಅನ್ನು ಹೇಗೆ ಸ್ಥಾಪಿಸುವುದು ಎಂಬುದರ ಉಲ್ಲೇಖಕ್ಕಾಗಿ ದಯವಿಟ್ಟು ಕೆಳಗಿನ ವೀಡಿಯೊ ಲಿಂಕ್ ಅನ್ನು ನೋಡಿ

ವೀಡಿಯೊ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವಿಂಡೋಸ್‌ನಲ್ಲಿ ಅನುಸ್ಥಾಪನದ ಕ್ರಮಗಳು