STF 2015-16 Bengaluru Rural
Science
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ,
ರಾಜಾಜಿನಗರ ಬೆಂಗಳೂರು.
ಜಿಲ್ಲಾ ಹಂತದ ಕನ್ನಡ ವಿಷಯ ವೇದಿಕೆ (Kannada STF) ತರಬೇತಿ ಕಾರ್ಯಾಗಾರದ ವರದಿ :
ಎರಡನೆಯ ಬ್ಯಾಚ್ - ೨೦೧೫-೧೬.
ಅವಧಿ : ದಿನಾಂಕ : ೦೨-೧೧-೨೦೧೫ ರಿಂದ ೦೬-೧೧-೨೦೧೫.
ಮೊದಲನೆಯ ದಿನದ ವರದಿ : (ದಿನಾಂಕ : ೦೨-೧೧-೨೦೧೫)
ದಿನಾಂಕ : ೦೨-೧೧-೨೦೧೫. ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇಲ್ಲಿ ಬೆಳಗ್ಗೆ ೧೦ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ಕಲಿಕಾ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಬಳಕೆಯ ಜ್ಞಾನವನ್ನು ಪಡೆದು ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಳ್ಳುವ ಉತ್ಸಾಹದಿಂದ ತರಬೇತಿಗೆ ಹಾಜರಾದರು. ಪ್ರಾರ್ಥನೆ, ಉದ್ಘಾಟನೆ ಶಿಬಿರಾರ್ಥಿಗಳ ಪರಿಚಯ ಕಾರ್ಯಹಂಚಿಕೆಯ ನಂತರ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ರತ್ನಮ್ಮರವರು ಶ್ರೀ ಶಂಕರೇಗೌಢರು,ಶ್ರೀ ರಮೇಶ್ ರವರು ಶಿಬಿರಾರ್ಥಿಗಳಿಗೆ ತರಬೇತಿಯ ಸದುಪಯೋಗ ಮಾಡಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಿದರು. ಅದರಂತೆ ಸಂಪನ್ಮೂಲ ವ್ಯಕ್ತಿಗಳಾದ ಶ್ರಿ ರಾಜು ಅವಳೇಕರ ಹಾಗೂ ಶ್ರೀ ಗಂಗರಾಜು ರವರು ತಮ್ಮ ಜ್ಞಾನವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿ ಕಲಿಯುವ ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿದರು. ಹೊಸ ಫೋಲ್ಡರ್ ತಯಾರಿಸುವುದು ಸಂಪನ್ಮೂಲ ಸಂಗ್ರಹಣೆ ತಯಾರಿಕೆಯ ಎಸ್.ಟಿ.ಎಫ್. ನ ಉದ್ದೇಶಗಳು ಕಾರ್ಯಾಗಾರದ ಉದ್ದೇಶಗಳನ್ನು ತಿಳಿಸಿಕೊಡಲಾಯಿತು. ಅಂತರ್ಜಾಲದ ಸಹಾಯದಿಂದ ಮಾಹಿತಿ ಸಂಗ್ರಹಣೆ ಹಂತಗಳ ಪರಿಚಯ ಮಾಡಿಕೊಳ್ಳುವುದರಲ್ಲಿ ಸಮಯ ಜಾರಿದುದೇ ತಿಳಿಯಲಿಲ್ಲ, ಸಂಜೆ ದಿನವಿಡೀ ಕಲಿತ ವಿಚಾರಗಳ ಮೆಲಕುಹಾಕುತ್ತ ದಿನದ ಕಾರ್ಯಾಗಾರಕ್ಕೆ ಮುಕ್ತಾಯ ಹೇಳಲಾಯಿತು.
ವರದಿ ಸಿದ್ಧಪಡಿಸಿದವರು ಶ್ರೀ : ದಿನೇಶ್ ಎಂ.ಜಿ. ಜಿ.ಜೆ.ಸಿ. ದೇವನಹಳ್ಳಿ.
2nd Day
ದಿನಾಂಕ : ೦೩-೧೧-೨೦೧೫.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ ,
ಕೂಡಲ ಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ
ಎಂಬಂತೆ ವಿಷಯ ಶಿಕ್ಷಕರ ವೇದಿಕೆಯಲ್ಲಿ ಭಾಗವಹಿಸಿದ ಶಿಕ್ಷಕರ ಕಂಪ್ಯೂಟರ್ ಬಳಕೆಯ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ. ದಿನಾಂಕ ೦೩-೧೧-೨೦೧೫ ರ ಎರಡನೇ ದಿನದ ಕಾರ್ಯಾಗರವನ್ನು ಬೆಳ್ಳಿಗ್ಗೆ ೧೦ ಗಂಟೆಗೆ ಶ್ರೀಮತಿ ತ್ರಿವೇಣಿ .ಎಂ G H S ಬರದಿ ಯವರ ಪ್ರಾರ್ಥ ನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು. ನಂತರ ಶ್ರೀಯುತ ಪ್ರಕಾಶ್ ಮನ್ವಾಚಾರಿ ಜಿ.ಹೆಚ್.ಎಸ್ ಹೊಸಹಳ್ಳಿ ರವರಿಂದ ಚಿಂತನೆ "ನಹಿ ಜ್ಞಾನೇನ ಸದೃಶಂ "ಎಂಬ ವಾಕ್ಯವನ್ನು ಕೇಳಿ ಜ್ಞಾನದ ಮಹತ್ವವನ್ನು ತಿಳಿಸಿದರು.ನಂತರ ಮೊದಲನೆ ದಿನದ ವರದಿ ಮಂಡನೆಯನ್ನು ಶ್ರೀಯುತ ದಿನೇಶ್ ರವರು ಜಿ ಜೆ ಸಿ ದೇವನಹಳ್ಳಿ ಸಂಪೂರ್ಣವಾದ ವರದಿನ್ನು ಮಂಡಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಅವಳೇಕರ್‌ರವರು ubuntu ಎಂಬ software ನಿಂದ ಆಗುವ ಅನುಕೂಲಗಳನ್ನು ಈ ಹಿಂದೆ ಇದ್ದ windows ಗೆ ಹೋಲಿಸುತ್ತ ವಿಸ್ತಾರಾವಾಗಿ ವಿವರಿಸಿದರು .ಅವರು ಹೇಳಿದ ಮಾತುಗಳನ್ನು ಕೇಳಿ ನಮಗು ubuntu ವನ್ನು ಬಳಸುವುದನ್ನು ಕಲಿಯ ಬೇಕೆಂಬ ಆಸೆ ಉಂಟಾಯಿತು . ತದನಂತರ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಂಗರಾಜು ಎಂ ರವರು STF ನ ಗುರಿ ಉದ್ದೇಶಗಳನ್ನು ಇಂದಿನ ಪರಿಸ್ಥಿತಿಗಳಿಗೆ ಹೋಲಿಕೆ ಮಾಡಿ ಸುಂದರವಾಗಿ ವಿವರಿಸಿದರು. ಅಷ್ಟರಲ್ಲಿ ವಿದ್ಯುತ್ ಬಂದಿತು. ಎಲ್ಲಾ ಶಿಬಿರಾರ್ಥಿಗಳು ತಮಗೆ ಹಿಂದಿನ ದಿನ ನೀಡಿದ ಪಾಠಗಳಿಗೆ ವಿಷಯ ಸಂಗ್ರಹ ಮಾಡುವುದಕ್ಕಾಗಿ ತಮಗೆ ನೀಡಿದ ಗಣಕಯಂತ್ರಗಳಲ್ಲಿ ಕಾರ್ಯಾನಿರತರಾದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಾಜು ಅವಳೇಕರ್‌ರವರು libro office writer ನಲ್ಲಿ ಟೈಪ್ ಮಾಡುವುದು, ಉಳಿಸುವುದು, ಭಾಷೆ ಆಯ್ಕೆ, ಅಕ್ಷರಗಳ ಗಾತ್ರ ಬದಲಾವಣೆ ಮುಂತಾದ ವಿಷಯಗಳನ್ನು ವಿವರಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಅವರು ಹೇಳಿದಂತೆ ತಮ್ಮ ಕಂಪ್ಯೂಟರ್ ಗಳಲ್ಲಿ ಅಭ್ಯಸಿಸಿದರು. ಮದ್ಯಾಹ್ನ ೧.೩೦ಕ್ಕೆ ಊಟದ ವಿರಾಮ, ೨.೧೫ಕ್ಕೆ ಪುನಃ ಅಪರಾಹ್ನದ ಕಾರ್ಯಾಗಾರ ಎಲ್ಲಾ ಶಿಬಿರಾರ್ಥಿಗಳು ತಮ್ಮ ಕಂಪ್ಯೂಟರ್ ಗಳಲ್ಲಿ ಕಾರ್ಯನಿರತರಾದರು ನಂತರ ಚಹಾವಿರಾಮ ನಂತರ ಸಂಪನ್ಮೂಲ ವ್ಯಕ್ತಿಗಳು ಪ್ರೋಜೆಕ್ಟರ್ ಮೂಲಕ ಜಿ-ಮೇಲ್ ಮಾಡುವ ಅಕೌಂಟ್ ತೆಗೆಯುವಲ್ಲಿ ಅನುಸರಿಸಬೇಕಾದ ಹಂತಗಳನ್ನು, ಮೇಲ್ ಕಳುಹಿಸಬೇಕಾದ ಹಂತಗಳನ್ನು, ಹೊಸ ಐ.ಡಿ. ತೆರೆಯುವ ವಿಧಾನವನ್ನು ತಿಳಿಸಿದರು. ಅಷ್ಟು ಹೊತ್ತಿಗೆ ಸಂಜೆಯ ೫ಗಂಟೆ ಸಮಯ. ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.
ವರದಿ ಸಿದ್ಧತೆ :
ಶ್ರೀ. ಹರೀಶ್ ಆರ್. ಕನ್ನಡ ಭಾಷಾ ಶಿಕ್ಷಕರು,
ಸ.ಪ್ರೌ.ಶಾಲೆ, ಬೆಂಡಿಗಾನಹಳ್ಳಿ, ಹೊಸಕೋಟೆ ತಾಲ್ಲೂಕು.
3rd Day
ಮೂರನೆಯ ದಿನದ ವರದಿ : (ದಿನಾಂಕ : ೦೪-೧೧-೨೦೧೫)
ಬೆಂಗಳೂರು ಡಯಟ್ ನ ಎಸ್,ಟಿ ,ಎಫ್ ಹಾಲ್ ನಲ್ಲಿ ಉಬಂಟುದೊಂದಿಗೆ ಗೂಗಲ್ ಭೋಜನದ ಐದು ದಿನದ ಕಾರ್ಯಕ್ರಮದ ಮೂರನೇ ದಿನ ವರದಿ ದಿನಾಂಕ : ೦೪-೧೧-೨೦೧೫ರಂದು ಎಂದಿನಂತೆ ತರಗತಿ ಆರಂಭವಾಯಿತು. ಶ್ರೀಮತಿ ಶಾರದಾಬಾಯಿ ಅಂಗಡಿಯವರ ಮಧುರ ವಚನಗಾಯನದೊಂದಿಗೆ ಪ್ರಾರಂಭವಾದ ಕಾರ್ಯಾಗಾರ ಶ್ರೀ. ಆನಂದಗೌಡರ ಸಮಯೊಚಿತ ಚಿಂತನ ಹಾಗೂ ಶ್ರೀ ಹರೀಶ್ ರವರ ವರದಿವಾಚನ ಕಾರ್ಯಕ್ರಮದ ಚಾಲನೆಗೆ ನಾಂದಿಹಾಡಿತು. ಚಂತನೆಯಲ್ಲಿ ಸ್ನೇಹದ ಮಹತ್ವವನ್ನು ಸಾರುವ Friendship’ ಪದದಲ್ಲಿ ಸ್ನೇಹಿತ ಮತ್ತು ಹಡಗು ಇರುವಿಕೆಯ ಸ್ವಾರಸ್ಯವನ್ನು ಸಾರಿ ಹೇಳಿತು.
"ನೀವು ಚೈತನ್ಯವಾಗಿರಬಹುದು ಆದರೆ ನಿಧಾನಗತಿಯಲ್ಲಿ ಓಡಿದರೆ ಮಾತ್ರ ಕೊನೆಯವರೆಗೆ ಓಡಲು ಸಾಧ್ಯ.” ಎಂಬಂತೆ ನಿಧಾಮವಾಗಿ ಕಲಿಯುವಿಕೆ ಕಲಿಸುವಿಕೆಯಿಂದ ಪ್ರಭುತ್ವ ಸಾಧ್ಯ ಎಂದು ಎಲ್ಲಾ ಶಿಭಿರಾರ್ಥಿಗಳು ಕಲಿಕೆಯಲ್ಲಿ ತೊಡಗಿದರು. ಈ ಅವಧಿಯಲ್ಲಿ ವಿದ್ಯುತ್ ಅಭಾವದಿಂದಾಗಿ ಏನು ಮಾಡುವುದು ಎಂದು ಚಿಂತಿಸುತಿದ್ದ ಶಿಬಿರಾರ್ಥಿಗಳಿಗೆ ಸಮಪನ್ಮೂಲವ್ಯಕ್ತಿ ಶ್ರಿ ಗಂಗರಾಜುರವರು ಭಾಷಾ ಬೋಧನೆಯ ಸವಾಲುಗಳನ್ನು ಕಂಪ್ಯೂಟರ್ ಕಲಿಕೆಯ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಸಂಗ್ರಹಿಸುವ ಮಾಹಿತಿಯನ್ನು ತಿಳಿಸಿದರು. ಇದು ಸಂಪನ್ಮೂಲ ವ್ಯಕ್ತಿಗಳ ಗಟ್ಟಿತನವನ್ನು ಮತ್ತೇ ಪರೀಕ್ಷಿಸಿದ ವಿದ್ಯುತ್ ಕಂಪ್ಯೂಟರ್ ಕಲಿಕೆಯಲ್ಲಿ ತೊಡಗಿದರು. ನಂತರ .ಶ್ರೀಯುತ ರಾಜು ಅವಳೇಕರ್ ರವರು ಡಾಕ್ಯೂಮೆಂಟ್ ಸೇವ್ ,ಕಾಪಿ ಮತ್ತು ಪೇಸ್ಟ ಮಾಡುವ ವಿವರಗಳನ್ನು ಮತ್ತು ಅಂತರ್ಜಾಲದ ಬಳಕೆ ಮಹತ್ವ ಜಿ-ಮೇಲ್ ಬಳಕೆ, ಗೂಗಲ್ ಉತ್ಪನ್ನಗಳ ಪ್ರಾಯೋಗಿಕವಾಗಿ ತಿಳಿಸುತ್ತಾ ಸಾಗಿದರು. ಶಬಿರಾರ್ಥಿಗಳು ಮತ್ತೊಮ್ಮೆ ವಿವರ ಬಯಸಿದಾಗ ಪ್ರಾಯೋಗಿಕವಾಗಿ ಶಬಿರಾರ್ಥಿಗಳಿಂದಲೇ ಕಲಿಸಲು ಪುಸಲಾಯಿಸಿದರು. ಈ ಮಧ್ಯದಲ್ಲಿ ಚಹಾ ವಿರಾಮ ದಣಿದ ಕಣ್ಣುಗಳಿಗೆ ವಿಶ್ರಾಂತಿ ರಿಫ್ರೇಷ್ ನೀಡಿ ತಮ್ಮ ಕಾರ್ಯಗಳಲ್ಲಿ ತೊಡಗಲು ಶಿಬಿರಾರ್ಥಿಗಳಿಗೆ ಸಹಕಾರಿಯಾಯಿತು. ತಮಗೆ ವಹಿಸಿದ ಗದ್ಯ ಪದ್ಯ ಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಸಂಗ್ರಹದಲ್ಲಿ ತೊಡಗಿದರು ಹಸಿದ ಹೊಟ್ಟೆಯು ಅಲ್ಪ ಊಟದ ಕಡೆ ಎಲ್ಲರ ಗಮನ ಸೆಳೆಯಿತು.
ನಂತರ ಊಟದ ವಿರಾಮದ ನಂತರ ಮತ್ತೇ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಂಗರಾಜು ಎಲ್ಲರನ್ನು ಮತ್ತೇ ಗಣಕಮಹಾಶಯನ ಕಡೆಗೆ ಸೆಳೆದು ಸ್ವಾಗತ ಕೋರಿದರು ಕಲಿಯುವ ಕಲಿಸುವ ತವಕದಲ್ಲಿ ಶಿಬಿರಾರ್ಥಿಗಳು ಹರಸಾಹಸ ಪಡುತ್ತಿದ್ದಕ್ಕೆ ಮತ್ತೇ ಪುನಃರ್ಮನನ ಮಾಡಿಸಿದರು ನಂತರ ಶ್ರೀ ರಾಜು ಅವಳೇಕರ್ ರವರು ಮೈಂಡ್ ಮ್ಯಾಪ್ (ಫ್ರೀ ಮೈಂಡ್ ) ತಯಾರಿಸುವ ಹಂತಗಳನ್ನು ಪ್ರಾಯೋಗಿಕವಾಗಿ ತೋರಿಸುತ್ತ ಶಿಬಿರಾರ್ಥಿಗಳಿಗೆ ತಿಳಿಸುತ್ತ ಅನುಮಾನಗಳನ್ನು ನಿವಾರಿಸುತ್ತ ಸಾಗಿದರು ಅದನ್ನು ಇ-ಮೇಲ್ ಮುಖಾಂತರ ಹಂಚುವ ರೀತಿಯನ್ನು ತಿಳಿಸಿದರು. ಶಿಬಿರಾರ್ಥಿಗಳು ಅಂತ್ಯದಲ್ಲಿ ಎಸ್, ಟಿ,ಎಫ್ ಗ್ರೂಫ್ ಗೆ ಇ ಮೇಲ್ ಮುಖಾಂತರ ತಾವು ಮಾಡಿದ ಫ್ರೀ ಮೈಂಡ್ ಕಡತವನ್ನು ಕಳುಹಿಸಿ, ಸೆಂಡ್ ಮಾಡಿ ಕಲಿತ ಆನಂದದ ಹೆಮ್ಮೆಯ ಉಸಿರು ಬಿಟ್ಟು ಶಡೌನ್ ಮಾಡಿ, ಸ್ವಿಚ್ ಆಫ್ ಸುರಿಯುವ ಮಳೆಯಲ್ಲಿ ತಮ್ಮ ತಮ್ಮ ಮನೆಯ ಕಡೆ ಪಯಣ ಬೆಳೆಸಿದರು.
ತಯಾರಿಸಿದವರು.
ಶ್ರೀ ಗಿರೀಶ್.
ಕನ್ನಡ ಭಾಷಾ ಶಿಕ್ಷಕರು.
ಸ.ಪ್ರೌ.ಶಾಲೆ, ತೂಬಗೆರೆ, ದೊ.ತಾ||
4th Day
ಕನ್ನಡ ಎಸ್.ಟಿ.ಎಫ್ ಐದು ದಿನದ ಕಾರ್ಯಕ್ರಮದ ನಾಲ್ಕನೆಯ ದಿನದ ವರದಿ ದಿನಾಂಕ : ೦೫-೧೧-೨೦೧೫ರಂದು ಎಂದಿನಂತೆ ತರಗತಿ ಆರಂಭವಾಯಿತು. ಶ್ರೀಮತಿ ಜಾನಕಿ ಹೆಗಡೆ ಯವರ ಮಧುರ ಪ್ರಾರ್ಥನೆ ಹಾಗೂ ಶ್ರೀ ಫಾಲನೇತ್ರ ಎಸ್ ರವರ ಸಮಯೊಚಿತ ಚಿಂತನ, ನಂತರ ವರದಿವಾಚನ ಕಾರ್ಯಕ್ರಮದ ಚಾಲನೆಗೆ ನಾಂದಿಹಾಡಿತು. ಸಂಪನ್ಮೂಲ ವ್ಯಕ್ತಿಗಳಾದ ರಾಜು ಅವಳೇಕರ ರವರು Libre Office Calc (Excel) ಬಗ್ಗೆ ಮಾಹಿತಿ ನೀಡಿದರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಇ-ಮೇಲ್ ಐ.ಡಿ.ಗಳಿಗೆ ಸಹಿ ಹಾಕುವ ಹಾಗೂ ಇಮೇಜ್ ಅಳವಡಿಸುವುದನ್ನು ತಿಳಿಸಿಕೊಡಲಾಯಿತು. ಪ್ರಾಯೋಗಿಕವಾಗಿ ಕಲಿತ ಶಿಬಿರಾರ್ಥಿಗಳು ಸಂತಸವ್ಯಕ್ತಪಡಿಸಿದರು. ಆದರೂ ಸಂಪನ್ಮೂಲ ವ್ಯಕ್ತಿಗಳು ಅಂತರ್ಜಾಲದ ಸಿಂಧುವಿನಿಂದ ನಾವುಗಳು ಕಳಿತಿರುವುದು ಕೇವಲ ಬಿಂದು ಎಂಬುದನ್ನು ಹೇಳುವುದನ್ನು ಮರೆಯಲಿಲ್ಲ. ಚಹಾ ವಿರಾಮದ ನಂತರ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ (ಕೋಯರ್) ಪರಿಚಯ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು. ಕೋಯರ್ ಗೆ ನೆರವು ಹಾಗೂ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಬಗೆಗೆ ತಿಳಿಸಿದರು. ಮದ್ಯಾಹ್ನದ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಂಗರಾಜುರವರು ಪವರ್ ಪಾಯಿಂಟ್ ಬಗ್ಗೆ Libre Office Impress ಬಗ್ಗೆ ತಿಳಿಸಿದರು, ನಂತರ ಶಿಬಿರಾರ್ಥಿಗಳು ತಮಗೆ ವಹಿಸಲಾದ ಪಾಠಗಳಿಗೆ ಸಂಪನ್ಮೂಲ ಸಂಗ್ರಹಿಸಿ ಅದನ್ನು ಗ್ರೂಪ್ ನೊಂದಿಗೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.
ವರದಿ ಸಿದ್ಧತೆ :
ಶ್ರೀ. ಎಂ.ಬಿ. ಕಳ್ಳಿ ಮನಿ
ಕನ್ನಡ ಬಾಷಾ ಶಿಕ್ಷಕರು.
5th Day
ಈ ೫ ನೇ ದಿನದ ಎಸ್.ಟಿ.ಎಫ್ ತರಬೇತಿ ಕಾರ್ಯಾಗಾರಕ್ಕೆ ಸ್ವಾಗತವನ್ನು ಶಿಬಿರದ ಸಂಪನ್ಮೂಲವ್ಯಕ್ತಿಯಾದಂತಹ ಶ್ರೀಯುತ ರಾಜು ಅವಳೇಕರ್ ರವರು ಕೋರಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆಯನ್ನು ಶಿಬಿರಾರ್ಥಿಯಾದ ಶ್ರೀಮತಿ ಜಾನಕಿ ಮೇಡಂರವರು ಸೊಗಸಾದ ದೇವರ ಹಾಡಿನೊಂದಿಗೆ ನಡೆಸಿಕೊಟ್ಟರು. ಕಾರ್ಯಕ್ರಮದ ಚಿಂತನೆಯನ್ನು ಶಿಬಿರಾರ್ಥಿಯಾದ ಎ.ಸಿ.ಕೆಂಪೇಗೌಡರು ಉತ್ತಮ ಮಾನವೀಯ ಮೌಲ್ಯಗಳನ್ನೊಂದಿದ ವಿಷಯದೊಂದಿಗೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಈ ದಿನ ಅಂತರ್ಜಾಲದಲ್ಲಿ ಕೊಯರ್ ಬ್ಲಾಗ್ ನಿಂದ ಕನ್ನಡ ಭಾಷಾವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ ಪಡೆಯುವುದು ಎಂದು ಈ ದಿನ ಕಲಿಯೋಣ ಎನ್ನುವಷ್ಟರಲ್ಲಿ , ಶ್ರೀಮತಿ ಜಾನಕಿ ಮೇಡಂ ರವರು ಊಟಕ್ಕೆ ಉಪ್ಪಿನಕಾಯಿಯಿದ್ದಂತೆ ಒಂದು ದೇವರ ಪದ್ಯದ ಸಾಲಿನೊಂದಿಗೆ ಕಂಪ್ಯೂಟರ್ ಇಂದಿನ ವಿದ್ಯಾರ್ಥಿ ಶಿಕ್ಷಕರಾದಿಯಾಗಿ ಹೇಗೆಲ್ಲಾ ಹಾಸುಹೊಕ್ಕಾಗಿದೆ ಎಂಬುದರ ಮಹತ್ವವನ್ನೊಂದಿದ ಪದ್ಯ ವಾಚಿಸಿದರು. ಈ ಪದ್ಯವನ್ನು ಆಲಿಸಿದ ಶಿಬಿರಾರ್ಥಿಯೋರ್ವರು ಸ್ಥಳದಲ್ಲೇ ಜಾನಕಿ ಮೇಡಂ ರವರ ಪದ್ಯಕುರಿತು ಆಶುಗವಿತೆಯಾದ
ದೇವಿಗೀತೆಯೊಂದಿಗೆ ಪದ್ಯವೆಂದು ಹೇಳಿದ ಜಾನಕಿ
ರಾತ್ರಿಪೂರ ಚಿಂತನೆ ಮಾಡಿ ರಚಿಸಿದ್ದಾರೆ ಈ ಜಾನಕಿ.
ಕಂಪ್ಯೂಟರ್ , ಸಂಸಾರದ ಸಾರಗಳನೆಲ್ಲಾ ಕೆದಕಿ
ಸಂಕ್ಷಿಪ್ತವಾಗಿ ಸೂಚಿಸಿದ ಈ ಶಿಕ್ಷಕಿ.ಎಂಬುದನ್ನು ಸುಂದರವಾಗಿ ರಚಿಸಿ ವಾಚಿಸಿದರು.
ಆ ನಂತರ ಸಂಪನ್ಮೂಲ ವ್ಯಕ್ತಿಗಳು ಕೊಯರ್ ನಿಂದ ಕನ್ನಡ ಭಾಷಾ ವಿಷಯದ ಮಾಹಿತಿಗಳನ್ನು ಯಾವ ರೀತಿ ಪಡೆಯುವುದು. ಮತ್ತು ಈ ವರ್ಷದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಪಠ್ಯಕ್ರದಲ್ಲಿನ ಬದಲಾವಣೆಗನ್ನು ಈ ಕುರಿತ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿದರು. ಹಾಗೂ ಕೊಯರ್ ಗೆ ಶಿಕ್ಷಕರು ಹೇಗೆ ಅಪ್ ಲೋಡ್ ಮಾಡುವದೆಂಬುದನ್ನು ತಿಳಿಸಿ ಕೊಟ್ಟರು. ಟೀ ವಿರಾಮದ ನಂತರ ಎಲ್ಲರೂ ತಮ್ಮ ತಮ್ಮ ಗಣಕಯಂತ್ರಗಳಲ್ಲಿ ಮಗ್ನರಾಗುತ್ತಾ ತಮ್ಮ ಕಾರ್ಯದಲ್ಲಿ ಏನಾದರೂ ಅನುಮಾನಗಳು ಬಂದರೂ ಸಂಪನ್ಮೂಲಗಳನ್ನು ಸ್ಥಳದಲ್ಲಿಯೇ ಕೇಳಿ ನಿವಾರಿಸಿಕೊಳ್ಳುತ್ತಿದ್ದುದು ಕಂಡುಬಂದಿತು. ಆ ನಂತರ ಹೈಪರ್ ಲಿಂಕ್ ನ್ನು ಅಂತರ್ಜಾಲದಲ್ಲಿ ಹುಡುಕುವುದು ಹೇಗೆ ಎಂಬುದರ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ಗಂಗರಾಜು ರವರು ಸವಿವರವಾಗಿ ತಿಳಿಸಿಕೊಟ್ಟರು. ಅಂದರೆ ಪ್ರಮುಖ ವ್ಯಕ್ತಿಯ ಬಗ್ಗೆ ಮಾಹಿಯನ್ನು ನೋಡಿ ನಂತರ ಓದಿ ಅದನ್ನು ಇತರರೊಂದಿಗೆ ನೀವು ಹಂಚಿಕೊಳ್ಳಬೇಕೆನಿಸಿದರೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತೆ ಯ್ಯೂ ಬ್ ನಲ್ಲಿನ ಮಾಹಿತಿಯನ್ನು ಹೇಗೆ ಹೈಪರ್ ಲಿಂಕ್ ಮಾಡಿ ಇತರರೊಂದಿ ಹಂಚಿಕೊಳ್ಳುವುದೆಂಬುದರ ಬಗ್ಗೆ ಶಿಬಿರಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಎರಡೆರಡು ಸಾರಿ ತಿಳಿಸಿಕೊಟ್ಟರು. ಊಟದ ವಿರಾಮದ ನಂತರ ಶಿಬಿರಾರ್ಥಿಗಳು ಓಡಿಟಿ ಯಲ್ಲಿ ಸಿದ್ಧಪಡಿಸಿರುವ ಮಾಹಿತಿಯನ್ನು ಉಳಿಸಿಕೋಳ್ಳಲು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು. ನಂತರ ನೀವು ಸೇವ್ ಮಾಡಿರುವ ಮಾಹಿತಿಯನ್ನು ಎಸ್.ಟಿ.ಎಫ್ ಗ್ರೂಪ್ ಗೆ ಶೇರ್ ಮಾಡಲು ತಿಳಿಸಿದರು.ನಂತರ ಪಿ.ಪಿಟಿ ಬಗ್ಗೆ ತಿಳಿಸಿದರು. ವೀಡಿಯೋ ಎಡಿಟಿಂಗ್ ಬಗ್ಗೆ ತಿಳಿಸಿಕೊಟ್ಟರು. ಆ ನಂತರ ತರಬೇತಿಯ ಬಗ್ಗೆ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಶಿಬಿರಾರ್ಥಿಗಳ ಜಿಮೈಲ್ ನಿಂದ ಕಳುಹಿಸುವ ವ್ಯವಸ್ಥೆ ಮಾಡಿ ಎಲ್ಲರಿಗೂ ಸಹಕರಿಸು ಹಿಮ್ಮಾಹಿತಿ ಮತ್ತು ಶಿಬಿರದ ಬಗ್ಗೆ ಅನಿಸಿಕೆಗಳನ್ನು ಎಲ್ಲ ಶಿಬಿರಾರ್ಥಿಗಳೂ ಬರೆದು ಮೇಲ್ ಮಾಡಿದರು. ನಂತರ ಶಿಬಿರದ ನಿರ್ದೇಶಕರು ಎಲ್ಲ ಶಿಬಿರಾರ್ಥಿಗಳಿಗೆ ಟಿ.ಎ ಮತ್ತು ಡಿ.ಎ ಗಳನ್ನು ಎಲ್ಲ ಶಿಬಿರಾರ್ಥಿಗಳಿಗೂ ಹಾಜರಾತಿ ಪತ್ರ ವಿತರಿಸುವ ಮೂಲಕ ನೀಡಿದರು. ಇದಾದ ನಂತರ ಶಿಬಿರದ ನಿರ್ದೇಶಕರು ಮುಂದಿನ ತರಬೇತಿಗಳಿಗೆ ತಮ್ಮ ತಮ್ಮ ಶಾಲೆಗಳ ಯಾವ ಶಿಕ್ಷಕರನ್ನು ಕಳುಹಿಸಿಕೊಡಬೇಕೆಂಬ ಮಾಹಿತಿಯನ್ನು ನೀಡಿದರು.
ಅಂತಿಮವಾಗಿ ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಧನ್ಯವಾದಗಳೊಂದಿಗೆ ತರಬೇತಿಯನ್ನು ಸಮಾರೋಪಗೊಳಿಸಲಾಯಿತು.
ವರದಿ ಸಿದ್ಧಪಡಿಸಿದವರು.
ಶ್ರೀ. ಐ. ಟಿ. ಪ್ರಕಾಶ್
ಸ.ಪ್ರೌ.ಶಾ. ಕೊರಟಿ. ಹೊಸಕೋಟೆ ತಾ//
Batch 3
Agenda
If district has prepared new agenda then it can be shared here
See us at the Workshop
Workshop short report
1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಜಿಲ್ಲಾ ಹಂತದ ಎಸ್.ಟಿ.ಎಫ್. ತರಬೇತಿ ಬ್ಯಾಚ್ -೩.
ಕನ್ನಡಭಾಷಾ ಶಿಕ್ಷಕರ ವಿಷಯ ವೇದಿಕೆ (STF) ತರಬೇತಿ ೨೦೧೫-೧೬
-: ಮೊದಲನೇ ದಿನದ ವರದಿ :-
ದಿನಾಂಕ ೧೬-೧೧-೨೦೧೫ ರ ಸೋಮವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ರಾಜಾಜಿನಗರ ಇಲ್ಲಿ ವಿಷಯ ಶಿಕ್ಷಕರ ವೇದಿಕೆ ೩ನೇ ಬ್ಯಾಚ್ ನ ತರಬೇತಿ ಕಾರ್ಯಾಗಾರ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಉಪನ್ಯಾಸಕಿಯಾದ ಶ್ರೀಮತಿ ರತ್ನಮ್ಮನವರು , ಹಿರಿಯ ಉಪನ್ಯಾಸಕರಾದ ಶ್ರೀಯುತ ಶಂಕರೇಗೌಡರು ಹಾಗೂ ಶ್ರೀಯುತ ರಮೇಶ ರವರು ಹಾಜರಿದ್ದು ತರಬೇತಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿ ತರಬೇತಿ ಸದುಪಯೋಗವನ್ನು ಪಡೆಯಲು ಆಶಿಸಿದರು. ಈ ಕಾರ್ಯಕ್ರಮವು ಶಿಕ್ಷಕರಾದ ಶ್ರಿ ಎಸ್.ಮೂರ್ತಿರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಅವಳೇಕರ ರವರು ತಮ್ಮ ಪರಿಚಯ ಹಾಗೂ ಎಲ್ಲ ಶಿಬಿರಾರ್ಥಿಗಳ ಪರಿಚಯ ಮಾಡಿಕೊಂಡು ಕಲಿಯುವ ಕಲಿಸುವ ಮಹತಿಯನ್ನು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ರಾಜು ಅವಳೆಕರ್ ರವರು ಉಬಂಟು, ಈಮೇಲ್ , ಪಿಪಿಟಿ, ಫೋಲ್ಡರ್, ವಿಂಡೋ ಮುಂತಾದ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ಪ್ರತಿಯೊಬ್ಬ ಶಿಕ್ಷಕರಿಗೆ ಗದ್ಯ ಹಾಗೂ ಒಂದು ಪದ್ಯ ಕೊಟ್ಟು ಇವುಗಳಿಗೆ ಸಂಬಂದಿಸಿದಂತೆ ಅಂತರ್ಜಾಲ ಬಳಸಿ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ದಾಖಲಿಸುವಂತೆ ತಿಳಿಸಲಾಯಿತು.
ಊಟದ ವಿರಾಮದ ನಂತರ ಇದೇ ಪ್ರಕ್ರಿಯೆ ಮುಂದುವರೆಯಿತು .ರಾಜು ಅವಳೇಕರ್ ರವರು ಎಸ್.ಟಿ.ಎಫ್. ನ ಉದ್ಧೇಶಗಳು gmail create ಮಾಡುವುದು ಹೇಗೆಂಬುದನ್ನು ಸವಿಸ್ತಾರವಾಗಿ ತಿಳಿಸಿದರು . ಹಾಗೂ ಎಲ್ಲಾ ಶಿಕ್ಷಕರ ಜಿ.ಮೇಲ್ ಐ.ಡಿ. ಗಳನ್ನು ತೆರೆಯಲಾಯಿತು. ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರಿಗೆ ಇದಕ್ಕೆ ಸಂಬಂದಿಸಿದಂತೆ ಮಾರ್ಗದರ್ಶನ ನೀಡಿದರು. ಡೆಸ್ಕಟಾಪ್ ಮೇಲೆ ತಮಗೆ ನೀಡಲಾದ ಗದ್ಯ ಪದ್ಯಕ್ಕೆ ಸಂಬಂಧಿಸಿದಂತೆ ಫೋಲ್ಡರ್ ಗಳನ್ನು ತಯಾರಿಸಿಕೊಳ್ಳಲಾಯಿ ಮತ್ತು ಅದರ ಒಳಗೆ ಮತ್ತೇ ಉಪಕಡತಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಅಂತರ್ಜಾಲದಿಂದ ಸಂಗ್ರಹಿಸಲಾದ ವಿಷಯಗಳನ್ನು ಆಯಾಯ ಫೋಲ್ಡರ್ ಗಳಲ್ಲಿ ಸಂಗ್ರಹಿಸುವುದನ್ನು ಕಲಿಯುವ ಶ್ರಮದಲ್ಲಿ ನಿರತರಾದರು. ಚಹಾ ವಿರಾಮದ ನಂತರ ಇದೇ ಪ್ರಕ್ರಿಯೆ ಮುಂದುವರೆಯಿತು ನಂತರ ದಿನದ ಅಂತ್ಯದಲ್ಲಿ ಕಲಿತ ವಿಷಯಗಳ ಮೆಲುಕು ಹಾಕುತ್ತ ಸಂಜೆ ೫:೦೦ ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಕ್ತಾಯವಾಯಿತು .
ವರದಿ ತಯಾರಿ ಮತ್ತು ಮಂಡನೆ :
ಶ್ರೀ. ಸಿದ್ಧರಾಜಯ್ಯ ಆರ್,
ಕನ್ನಡ ಭಾಷಾ ಶಿಕ್ಷಕರು,
2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ರಾಜಾಜಿನಗರ ಬೆಂಗಳೂರು .
ಕನ್ನಡ ಎಸ್.ಟಿ.ಎಫ್. ತರಬೇತಿ ಮೂರನೆಯ ತಂಡ.
ದಿನಾಂಕ : ೧೬-೧೧-೨೦೧೫ ರಿಂದ ೨೦-೧೧-೨೦೧೫.
ಎರಡನೆಯ ದಿನದ ಚಿಂತನ :-
ದಿನಾಂಕ : ೧೭-೧೧-೨೦೧೫.
ಉಣಲೆಂದು ಬಂದು ಸುಖಉಂಡಲ್ಲದೆ ಹರಿಯದು
ಕಾಣಲೆಂದು ಬಂದ ಸುಖಕಂಡಲ್ಲದೆ ಹರಿಯದು
ತನುವಂಗೆ ಬಂದ ಕ ಹರಿವಕಾಲಕ್ಕೆ
ಚೆನ್ನ ಮಲ್ಲಿಕಾರ್ಜನ ದೇವರು ಕಡೆಗಣ್ಣಿನಿಂದ ನೋಡಿದರು.
ಪಾತಾಳವಿತ್ತತ್ತ, ಪದಂಗಳತ್ತತ್ತ,
ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ,
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಚೆನ್ನಮಲ್ಲಿಕಾರ್ಜುನಯ್ಯ
ನೀವೆನ್ನ ಕರಸ್ಥಳಕೆ ಬಂದು ಚುಳುಕಾದಿರಲ್ಲಾ ಲಿಂಗವೆ
ಇಂದಿನ ಈ ತರಬೇತಿಯ ಸದುದ್ದೇಶವನ್ನು ಮನಗಂಡು ಈ ಮೇಲಿನ ವಚನಕಾರರ ಸೂಳ್ನುಡಿಯ ಮಹತಿಯನ್ನು ತಿಳುಹುವ ಈ ಚಿಂತನ ನಮ್ಮ ಬದುಕಿನ ಉದ್ಧೇಶವನ್ನು ತಿಳಿಸುತ್ತದೆ. ಅದಲ್ಲದೆ ಮಾನವ ತನ್ನ ಅಹಂಕಾರದಿಂದ ಈ ಪರಿಸರವನ್ನು ತನನ್ ಮನಸೋ ಇಚ್ಛೆ ಬಳಸಿ ಹಾಳು ಮಾಡುತ್ತಿದ್ದಾನೆ, ತನ್ನ ಕಾಲ ಮೇಲೆ ಕಲ್ಲು ಚೆಲ್ಲಿಕೊಳ್ಳುತ್ತಿದ್ದಾಬೆ, ಅದರಂತೆ ಪರಿವರ್ತನೆಯ ದಿನಗಳಲ್ಲಿ ಮನುಷ್ಯ ಬದಲಾಗುವುದನ್ನು ಕಲಿಯಬೇಕು.ತಮ್ಮ ಕರ್ಮದ ಗುರಿಯನ್ನು ಮರೆಯಬಾರದು ಎಂಬುದೇ ಈ ಚಿಂತನದ ಉದ್ಧೇಶ...
ಸಿದ್ಧಪಡಿಸಿದವರು :
ಅಶ್ವತ್ತನಾರಾಯಣಪ್ಪ.ಜಿ. ಸಹ ಶಿಕ್ಷಕರು,
ಮಹಾತ್ಮ ಪ್ರೌಢಶಾಲೆ ವಿಜಯಪುರ, ದೇವನಹಳ್ಳಿ ತಾ. ಬೆಂ.ಗ್ರಾ.ಜಿ.
3rd Day
ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಮೂರನೆಯ ತಂಡದ
ಕನ್ನಡ ಭಾಷಾ ಶಿಕ್ಷಕರ ವೇದಿಕೆ ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರ.
ಸ್ಥಳ : ಡಯಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ.
೨ ನೇ ದಿನದ ಕಾರ್ಯಾಗಾರದ ವರದಿ.
ದಿನಾಂಕ:- ೧೮-೧೧-೨೦೧೫
ಜೀವನದಲ್ಲಿ ಯಶಸ್ಸಿಗಿಂತ ಆತ್ಮತೃಪ್ತಿಯೆ ಮುಖ್ಯ
ಯಾಕೆಂದರೆ ಯಶಸ್ಸನ್ನು ಬೇರೆಯವರು ಅಳೆಯುತ್ತಾರೆ
ಆದರೆ ಆತ್ಮತೃಪ್ತಿಯನ್ನು ನಾವೇ ಅಳೆದುಕೊಳ್ಳಬೇಕು ".
ದಿನಾಂಕ : ೧೭-೧೧-೨೦೧೫ ರ ಎರಡನೇ ದಿನದ ಕಾರ್ಯಾಗಾರವನ್ನು ಬೆಳ್ಳಿಗ್ಗೆ ೧೦ ಗಂಟೆಗೆ ಶ್ರೀ ಕಂಬದರಂಗಯ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭವಾಯಿತು. ನಂತರ ಶ್ರೀಯುತ ಅಶ್ವತ್ ನಾರಾಯಣಪ್ಪನವರು ದಿನದ ಚಿಂತನೆಯಲ್ಲಿ ವಚಕಾರರ ವಚನಗಳ ಮಹತಿಯನ್ನು ತಿಳಿಸುತ್ತ ಸಕ್ರೀಯವಾಗಿ ಎಲ್ಲರೂ ಕಲಿಕೆಯಲ್ಲಿ ತೊಡಗಿ ಸಾಧನೆಯ ದಾರಿಯಲ್ಲಿ ಸಾಗಬೇಕೆಂದು ತಿಳಿಸಿದರು.ನಂತರ ಶ್ರೀ. ಸಿದ್ಧರಾಜುರವರು ಮೊದಲ ದಿನದ ತರಬೇತಿಯ ಮೆಲುಕುಹಾಕುವ ವರದಿಯನ್ನು ಮಂಡಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಅವಳೇಕರ ರವರು ನಿಜಗುಣರ ಸೂಳ್ನುಡಿಯನ್ನು ತಿಳಿಸುತ್ತ ಜ್ಞಾನದ ಮಹತ್ವವನ್ನು ತಿಳಿಸಿದರು. libro office writer ನಲ್ಲಿ ಸಂಪನ್ಮೂಲ ರಚನೆಯ ಹಂತಗಳನನ್ನು ತಿಳಿಸಿ ಪ್ರಾಯೋಗಿಕವಾಗಿ ತಿಳಿಸುತ್ತ ಸಂದೇಹಗಳನ್ನು ಪರಿಹರಿಸುತ್ತ ಸಾಗಿದರು, ಟೈಪು ಮಾಡುವುದು ಅಕ್ಷರಗಳ ಜೋಡಣೆ, ಗಾತ್ರ ಬಲಿಸುವುದು, ಕಡತವನ್ನು ಉಳಿಸುವುದು. ಭಾಷೆ ಆಯ್ಕೆ , ಆಕ್ಷರಗಳ ಗಾತ್ರ ಬದಲಾವಣೆ ಮುಂತಾದ ವಿಷಯಗಳನ್ನು ತಮ್ಮ ಪ್ರೊಜೆಕ್ಟರ್ ಮುಖಾಂತರ ವಿವರಿಸಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಅವರು ಹೇಳಿದಂತೆ ತಮ್ಮ ಕಂಪ್ಯೂಟರ್ ಗಳಲ್ಲಿ ಅಭ್ಯಸಿಸಿದರು.
ಅಂತರ್ಜಾಲದಿಂದ ಪಠ್ಯವನ್ನು ಪಡೆದುಕೊಳ್ಳುವ ರೀತಿಯನ್ನು ತಿಳಿಸುವುದರೊಂದಿಗೆ ಹೈಪರ್ ಲಿಂಕ್ ಮಾಡುವುದನ್ನು ತಿಳಿಸಿದರು. ಇದನ್ನು ಪ್ರತಿಯೊಬ್ಬ ಶಿಕ್ಷಕರು ಕಲಿಯುವ ಸರ್ಕಸ್ ನಲ್ಲಿ ತೊಡಗಿದರು.
ಮದ್ಯಾಹ್ನ ೧.೩೦ಕ್ಕೆ ಊಟದ ವಿರಾಮ, ೨.೧೫ಕ್ಕೆ ಪುನಃ ಅಪರಾಹ್ನದ ಕಾರ್ಯಾಗಾರ ಪ್ರಾರಂಭ. ಶಿಬಿರಾರ್ಥಿಗಳು ತಮಗೆ ವಹಿಸಿದ ಗದ್ಯ ಪದ್ಯ ಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಿಂದ ಮಾಹಿತಿಗಳನ್ನು ಸಂಗ್ರಹಸಿದರು. ಮತ್ತು ತಮ್ಮಕಡತಗಳಲ್ಲಿ ಸೇವ್ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳು ಜಿ.ಮೇಲ್ ಐ,ಡಿ. ಅಕೌಂಟ್ ಬಗ್ಗೆ ಮತ್ತೆ ತಿಳಿಸುತ್ತ ಅಕೌಂಟ್ ಗೆ ಸಹಿ ಅಳವಡಿಸುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ನಂತರ ಚಹಾವಿರಾಮ ನಂತರ ಸಂಪನ್ಮೂಲ ವ್ಯಕ್ತಿಗಳು ಪ್ರೋಜೆಕ್ಟರ್ ಮೂಲಕ ಚಿತ್ರಗಳನ್ನು ಅಂತರ್ಜಾಲದಿಂದ ಸಂಗ್ರಹಿಸುವ ಮತ್ತು ಕಡತದಲ್ಲಿ ಅಂಟಿಸುವ ಮಾಹಿತಿಯನ್ನು ತಿಳಿಸಿದರು. ಚಿತ್ರಗಳನ್ನು ಡೌನ್ ಲೋಡ್ ಮಾಡುವ ರೀತಿಯನ್ನು ತಿಳಿಸಿದರು, ಜಿ-ಮೇಲ್ ಮಾಡುವ ಅಕೌಂಟ್ ತೆಗೆಯುವಲ್ಲಿ ಅನುಸರಿಸಬೇಕಾದ ಹಂತಗಳನ್ನು, ಮೇಲ್ ಕಳುಹಿಸಬೇಕಾದ ಹಂತಗಳನ್ನು, ಹೊಸ ಐ.ಡಿ. ತೆರೆಯುವ ವಿಧಾನವನ್ನು ತಿಳಿಸಿದರು. ಅಷ್ಟು ಹೊತ್ತಿಗೆ ಸಂಜೆಯ ೫ಗಂಟೆ ಸಮಯ. ದಿನದ ಕಾರ್ಯಾಗಾರವನ್ನು ಮುಗಿಸಲಾಯಿತು.
ವರದಿ ಸಿದ್ಧತೆ :
ಶ್ರೀ. ಕಂಬದರಂಗಯ್ಯ ಸಿ.ಆರ್. ಕನ್ನಡ ಭಾಷಾ ಶಿಕ್ಷಕರು,
ಕೊಂಗಾಡಿಯಪ್ಪ ಪ್ರೌಢಶಾಲೆ, ದೊಡ್ಡಬಳ್ಳಾಪುರ.
4th Day
ನಾಲ್ಕನೇ ದಿನದ ವರದಿ (೧೯-೧೧-೨೦೧೫)
ಕನ್ನಡ ನುಡಿಯೇ, ನೀನೆಷ್ಟು ಚಂದ
ಏನು ಗೀಚಿದರೂ ಆಗುವುದು ಶ್ರೀಗಂಧ
ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು
ಬಂಗಾರಕ್ಕಿಂತಲೂ ಶ್ರೇಷ್ಟ ಸಂಪತ್ತು
ಎಂಬ ದಿನಕರ ದೇಸಾಯಿಯವರ ಕನ್ನಡಾಭಿಮಾನದ ನುಡಿಗಳನ್ನು ಸ್ಮರಿಸುತ್ತಾ ನಾಲ್ಕನೇ ದಿನದ ವರದಿಯನ್ನು ಪ್ರಸ್ತುತಪಡಿಸುತ್ತಿದ್ದೇನೆ.
ದಿನಾಂಕ : ೧೯-೧೧-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ತರಬೇತಿ ಕಾರ್ಯಕ್ರಮವು ಶ್ರೀ. ಆಂಜನಯ್ಯ ರವರ ಪ್ರಾರ್ಥನೆ ಮತ್ತು ಶ್ರೀ. ಕಂಬದರಂಗಯ್ಯರವರ ಚಿಂತನೆ ಹಾಗೂ ಶ್ರೀ ರೇಣುಕಾರಾಧ್ಯರವರ ಮೂರನೆಯ ದಿನದ ವರದಿ ಮಂಡನೆಯೊಂದಿಗೆ ತರಬೇತಿ ಪ್ರಾರಂಭವಾಯಿತು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜು ಅವಳೇಕರ್ ರವರು ಅಂದು ನಡೆಯಬೇಕಾದ ಕಾರ್ಯಕ್ರಮಗಳ ಪಕ್ಷಿನೋಟವನ್ನು ಬೀರಿದರು.
ಮತ್ತೆ ಕಲಿಕೆಯಲ್ಲಿ ತೊಡಗಿದರು. ಮತ್ತು ಇ.ಮೇಲ್ ಮುಖಾಂತರ ಗ್ರೂಪ್ ಗೆ ಹಂಚಿದರು. ಇದಾದ ನಂತರ ಊಟದ ಕರೆ.
ಕಿನ್ನರಲೋಕದ ಅರಿವು ,ಆಳ,ವಿಸ್ತಾರತೆಯನ್ನು ಕಂಡಾಗ `ಬದಲಾವಣೆಯೇ ಜಗದ ನಿಯಮ 'ಎಂಬ ಕವಿವಾಣಿಯನ್ನು ನೆನಪಿಸಿತು.ಬೇಂದ್ರೆಯವರ `ಹಕ್ಕಿ ಹಾರುತಿದೆ ನೋಡಿದಿರಾ ' ಎಂಬ ಕವಿತೆಯು ಈ ತರಬೇತಿಗೆ ಧ್ವನಿಯಾಗಿ ಹೊಮ್ಮಿರುವುದೊ ಎಂಬಂತೆ ಭಾಸವಾಯಿತು.
ನಂತರ ಈ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳ ಗುಂಪಿನ ಭಾವಚಿತ್ರವನ್ನು ಕ್ಲಿಕ್ಕಿಸಲಾಯಿತು. ನಂತರ ಟೀ ಬ್ರೇಕ್ ನೀಡಲಾಯಿತು.
ಮತ್ತೆ ಕಂಪ್ಯೂಟರ್ ಕಿನ್ನರ ಲೋಕಕ್ಕೆ ಬಂದ ಶಿಬಿರಾರ್ಥಿಗಳು ಗೂಗಲ್ ಜಗತ್ತನ್ನು ಪ್ರವೇಶಿಸಿದರು. ನಂತರ ಶ್ರೀ ರಾಜು ಅವಳೇಕರ್ ರವರು ವಿಡಿಯೋ ಡೌನ್ ಲೋಡ್ ಮಾಡುವುದು ವಿಡಿಯೋ ಸಂಪನ್ಮೂಲ ಸಂಗ್ರಹಾಲಯದ ಬಗ್ಗೆ ಮಾಹಿತಯನ್ನು ನೀಡಿದರು. ಓಪನ್ ಶಾಟ್ ಎಡಿಟರ್ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತ ಮನವರಿಕೆ ಮಾಡಲು ಯತ್ನಿಸಿದರು. ಶಿಬಿರಾರ್ಥಿಗಳು ವಿಡಿಯೋ ಸಂಗ್ರಹದಲ್ಲಿ ತೊಡಗಿದರು.
ಸಂಜೆ ೫ಗಂಟೆಗೆ ತರಬೇತಿ ಅಂತ್ಯ ಕಂಡಿತು.
ವರದಿ ಸಿದ್ದತೆ :
ಶ್ರೀ. ರಮೇಶಾಚಾರ್.
ಕನ್ನಡ ಭಾಷಾ ಶಿಕ್ಷಕರು.
5th Day
ಐದನೆಯ ದಿನದ ವರದಿ (೨೦-೧೧-೨೦೧೫)
ಕೋರಿದರು. ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆಯನ್ನು ಶಿಬಿರಾರ್ಥಿಯಾದ ಶ್ರೀ ರೇಣುಕಾರಾಧ್ಯರವರು ಸೊಗಸಾದ ದೇವರ ಹಾಡಿನೊಂದಿಗೆ ನಡೆಸಿಕೊಟ್ಟರು. ಕಾರ್ಯಕ್ರಮದ ಚಿಂತನೆಯನ್ನು ಶಿಬಿರಾರ್ಥಿಯಾದ ಸಿದ್ಧರಾಜಯ್ಯ ಆರ್ ಉತ್ತಮ ಮಾನವೀಯ ಮೌಲ್ಯಗಳನ್ನೊಂದಿದ ವಿಷಯದೊಂದಿಗೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಈ ದಿನ ಅಂತರ್ಜಾಲದಲ್ಲಿ ಕೊಯರ್ ಬ್ಲಾಗ್ ನಿಂದ ಕನ್ನಡ ಭಾಷಾವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ ಪಡೆಯುವುದು ಹೇಗೆ ಎಂಬುದನ್ನು ಪುನಃ ನೆನಪಿಸಿಕೊಟ್ಟರು,ನಂತರ ನಾಲ್ಕನೆಯ ದಿನ ನಡೆದ ಕಲಿಕೆಯಲ್ಲಿಯ ಸಂದೇಹಗಳನ್ನು ನಿವಾರಿಸಿ, ಪಿಪಿಟಿ. ಬಗ್ಗೆ ತಿಳಿಸಿದರು.
ಬದಲಾವಣೆಗನ್ನು ಈ ಕುರಿತ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿದರು.
ಟೀ ವಿರಾಮದ ನಂತರ ಎಲ್ಲರೂ ತಮ್ಮ ತಮ್ಮ ಗಣಕಯಂತ್ರಗಳಲ್ಲಿ ಮಗ್ನರಾಗುತ್ತಾ ತಮ್ಮ ಕಾರ್ಯದಲ್ಲಿ ಏನಾದರೂ ಅನುಮಾನಗಳು ಬಂದರೂ ಸಂಪನ್ಮೂಲಗಳನ್ನು ಸ್ಥಳದಲ್ಲಿಯೇ ಕೇಳಿ ನಿವಾರಿಸಿಕೊಳ್ಳುತ್ತಿದ್ದುದು ಕಂಡುಬಂದಿತು. ಯುಟ್ಯೂ ಬ್ ನಲ್ಲಿನ ಮಾಹಿತಿಯನ್ನು ಹೇಗೆ ಹೈಪರ್ ಲಿಂಕ್ ಮಾಡಿ ಇತರರೊಂದಿ ಹಂಚಿಕೊಳ್ಳುವುದೆಂಬುದರ ಬಗ್ಗೆ ಶಿಬಿರಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಎರಡೆರಡು ಸಾರಿ ತಿಳಿಸಿಕೊಟ್ಟರು.
- 1-30ಕ್ಕೆ ಊಟದ ವಿರಾಮ *
ಊಟದ ವಿರಾಮದ ನಂತರ ಶಿಬಿರಾರ್ಥಿಗಳು ಓಡಿಟಿ ಯಲ್ಲಿ ಸಿದ್ಧಪಡಿಸಿರುವ ಮಾಹಿತಿಯನ್ನು ಉಳಿಸಿಕೋಳ್ಳಲು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು. ನಂತರ ನೀವು ಸೇವ್ ಮಾಡಿರುವ ಮಾಹಿತಿಯನ್ನು ಎಸ್.ಟಿ.ಎಫ್ ಗ್ರೂಪ್ ಗೆ ಶೇರ್ ಮಾಡಲು ತಿಳಿಸಿದರು. ವೀಡಿಯೋ ಎಡಿಟಿಂಗ್ ಬಗ್ಗೆ ತಿಳಿಸಿಕೊಟ್ಟರು. ನಂತರ ತಮ್ಮ ಪಾಠ ಪದ್ಯಗಳ ಪರಿಕಲ್ಪನಾನಕ್ಷೆ ತಯಾರಿಕೆಯಲ್ಲಿ ಮಗ್ನರಾದರು.
ಆ ನಂತರ ತರಬೇತಿಯ ಬಗ್ಗೆ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿಯನ್ನು ಆನ್ ಲೈನ್ ನಲ್ಲಿಯೇ ಶಿಬಿರಾರ್ಥಿಗಳ ಜಿಮೈಲ್ ನಿಂದ ಕಳುಹಿಸುವ ವ್ಯವಸ್ಥೆ ಮಾಡಿ ಎಲ್ಲರಿಗೂ ಸಹಕರಿಸುವ ಹಿಮ್ಮಾಹಿತಿ ಮತ್ತು ಶಿಬಿರದ ಬಗ್ಗೆ ಅನಿಸಿಕೆಗಳನ್ನು ಎಲ್ಲ ಶಿಬಿರಾರ್ಥಿಗಳೂ ಬರೆದು ಮೇಲ್ ಮಾಡಿದರು.
ಅಂತ್ಯದಲ್ಲಿ ಎಲ್ಲಾ ಶಿಬಿರಾರ್ಥಿಗಳಿಂದ ಹಿಮ್ಮಾಹಿತಿ ಮತ್ತು ಐ.ಸಿ.ಟಿ. ಹಾಳೆಯನ್ನು ಭರ್ತಿ ಮಾಡಿಸಲಾಯಿತು. ನಂತರ ಶಿಬಿರದ ನಿರ್ದೇಶಕರು ಎಲ್ಲ ಶಿಬಿರಾರ್ಥಿಗಳಿಗೆ ಟಿ.ಎ ಮತ್ತು ಡಿ.ಎ ಗಳನ್ನು ಎಲ್ಲ ಶಿಬಿರಾರ್ಥಿಗಳಿಗೂ ಹಾಜರಾತಿ ಪತ್ರ ವಿತರಿಸುವ ಮೂಲಕ ನೀಡಿದರು.ಇದಾದ ನಂತರ ಶಿಬಿರದ ನಿರ್ದೇಶಕರು ಮುಂದಿನ ತರಬೇತಿಗಳಿಗೆ ತಮ್ಮ ತಮ್ಮ ಶಾಲೆಗಳ ಯಾವ ಶಿಕ್ಷಕರನ್ನು ಕಳುಹಿಸಿಕೊಡಬೇಕೆಂಬ ಮಾಹಿತಿಯನ್ನು ನೀಡಿದರು. ಅಂತಿಮವಾಗಿ ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಧನ್ಯವಾದಗಳೊಂದಿಗೆ ತರಬೇತಿಯನ್ನು ಸಮಾರೋಪಗೊಳಿಸಲಾಯಿತು.
ವರದಿ ಸಿದ್ಧಪಡಿಸಿದವರು.
ಶ್ರೀ ಆಂಜನಯ್ಯ ಎಸ್.ಸಿ
ಕನ್ನಡಭಾಷಾ ಶಿಕ್ಷಕರು,
ಬಿ.ಎಸ್.ಎ.ಪ್ರೌಢಶಾಲೆ.