Protien test
Activity No # 1 - ಪ್ರೋಟೀನ ಪರೀಕ್ಷೆ
==Estimated Time== 40 min
Materials/ Resources needed
- ನಳಿಕೆ ,
- ನಳಿಕೆ ಹಿಡಿಕೆ,
- ಬೈಯುರೆಟ್ ದ್ರಾವಣ
- ಪ್ರೋಟೀನ್ ಇರುವ ಯಾವುದೆ ಆಹಾರ ಪದಾರ್ಥ (ಹಾಲು).
Prerequisites/Instructions, if any
Multimedia resources
Website interactives/ links/ simulations
Process (How to do the activity)
ಮೋದಲಿಗೆ ನಳಿಕೆಯನ್ನು ತೆಗೆದುಕೊಂಡು ಹಿಡಿಕೆಯ ಸಹಾಯದಿಂದ 5 ml ಬೈಯುರೆಟ್ ದ್ರಾವಣವನ್ನು ಹಾಕಲಾಯಿತು . ಹಾಕಿದ ನಂತರ ಮಕ್ಕಳಿಗೆ ಕೆಲವು ಪ್ರಶ್ನೇಗಳನ್ನು ಕೇಳಲಾಯಿತು ಅವು ಹೀಗಿವೆ .
- ನಳಿಕೆಯಲ್ಲಿ ಇರುವ ಬಣ್ಣ ಯಾವುದು ?
ಉತ್ತರ : ಆಕಾಶ ಬಣ್ಣ, ನೀಲಿ ಬಣ್ಣ , ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ , ಇತರೆ .
ಅದಾದ ನಂತರ ಅದಕ್ಕೆ ಕೆಲವು ಹನಿಗಳಷ್ಟು ಹಾಲನ್ನು ಹಾಕಲಾಯಿತು . ಅವಾಗ ನಿಧಾನವಾಗಿ ಬಣ್ಣದಲ್ಲಿ ಬದಲಾವಣೆಯಗುತ್ತಾ ಬಂತು . ಅದು ಕೆಳಗಡೆಯಿಂದ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು .
\ಇದಾದನಂತರ ಮತ್ತೆ ಮಕ್ಕಳಿಗೆ ಪ್ರಶ್ನೇಗಳನ್ನು ಕೇಳಲಾಯಿತು .
- ನಳಿಕೆಯಲ್ಲಿ ಇರುವ ಬಣ್ಣ ಯಾವುದು ?
ಉತ್ತರ : ನೀಲಿ, ಸ್ಕೈ ಬ್ಲ್ಯೂ , ಸ್ವಲ್ಪ ನೀಲಿ ಬಣ್ಣ, ನಿಧಾನವಾಗಿ ಬದಲಾದಗ ನಳಿಕೆಯ ಕೆಳಗಡೆ ನೋಡಿ ಸ್ವಲ್ಪ ಸ್ವಲ್ಪ ಗುಲಾಬಿ ಬಣ್ಣಕ್ಕೆ ಬರುತ್ತಿದೆ ,
- ನಳಿಕೆಯಲ್ಲಿ ಇರುವ ಬಣ್ಣದಲ್ಲಿ ಏನಾದರು ವ್ಯತ್ಯಾಸ ಆಯಿತೆ ?
ಉತ್ತರ : ಆಯಿತು ಸರ್ .
- ಗುಲಾಬಿ ಬಣ್ಣಕ್ಕೆ ಬಂದರೆ ಅದು ಏನನ್ನು ಸೂಚಿಸುತ್ತದೆ ?
ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ಬಂದರೆ ಅದರಲ್ಲಿ ಪ್ರೋಟೀನ್ ಇದೆ ಎಂದು ಅರ್ಥ .
- ಎಲ್ಲಾ ಆಹಾರ ಪದಾರ್ಥಗಳು ಗುಲಾಬಿ ಬಣ್ಣಕ್ಕೆ ಬರುತ್ತವೆಯಾ?
ಉತ್ತರ : ಇಲ್ಲಾ ಸರ್ , ಹೌದು ಸರ್, ನಂತರ - ಯಾವುದು ಪ್ರೋಟೀನ್ ಅಂಶ ಇರುತ್ತದೆ ಅದು ಗುಲಾಬಿ ಬಣ್ಣಕ್ಕೆ ಬರುತ್ತದೆ .
- ಇದರಿಂದ ಏನು ಗೊತ್ತಾಗುತ್ತೆ ?
ಉತ್ತರ : ಪ್ರ್ರೋಟೀನ ಇರುವ ಆಹಾರ ಪದಾರ್ಥ ಹೇಗೆ ಪರಿಕ್ಷೆ ಮಾಡಬಹುದು ಎಂದು ತಿಳಿದುಕೊಳ್ಳಲಾಯಿತು .
ಯಾವುದೆ ಪದಾರ್ಥದಲ್ಲಿ ಪ್ರ್ರೋಟೀನ ಇರುವ ಆಹಾರ ಪದಾರ್ಥವನ್ನು ಪರಿಕ್ಷೆ ಮಾಡಬೇಕಾದರೆ ನಮಗೆ ಮುಖ್ಯವಾಗಿ ಬೈಯುರೇಟ್ ದ್ರವಣ ಬೇಕಾಗುತ್ತದೆ ಮತ್ತು ನೀಲಿ ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಿರುಗಿತು ಎಂದರೆ ಅದರಲ್ಲಿ ಪ್ರೋಟೀನ್ ಇದೆ ಎಂಬುವದನ್ನು ಸುಲಬವಾಗಿ ತಿಳಿದು ಕೊಳ್ಳಬಹುದು .
Developmental Questions (What discussion questions)
Evaluation (Questions for assessment of the child)
Question Corner
To link back to the topic page Give the link of the page name from where activity was given Back