Maths: Curriculum and Syllabus
NCF Mathematics Position Papers
- NCF 2005 - Position paper on Mathematics in Kannada(PDF)
- NCF 2005 - Position paper on Mathematics in Kannada(ODT)
Comment by Radha Narve, GHS Begur on Kannada NCF Mathematics Position Paper
NCF papers ಬಗೆಗೆ ನನ್ನ ಅನಿಸಿಕೆಗಳು ೧ . ತರಗತಿಯ ಪ್ರತಿಯೊಂದು ಮಗುವಿನಲ್ಲೂ ಗಣಿತದ ಕಲಿಕೆಯಾಗಬೇಕೆಂಬ ಗುರಿಯನ್ನು ಶಿಕ್ಷಕರು ಹೊಂದಿರಬೇಕು.ಈ ಅಂಶವು ನನಗೆ ಬಹಳ ಇಷ್ಟವಾಯಿತು. ೨. ಗಣಿತ ಭೋಧನೆಯ ಕಠಿಣತೆ ಮತ್ತು ಸಮಸ್ಯೆಗಳನ್ನು ವಿಷದವಾಗಿ ಚರ್ಚಿಸಲಾಗಿದೆ. 3 . ಈ ಕೆಳಗಿನ ಅಂಶವು ಗಣಿತ ಶಿಕ್ಷಕಿಯಾದ ನನಗೆ ಒಪ್ಪಿಗೆ ಆಗಲಿಲ್ಲ. ಅದು ಹೀಗಿದೆ
ಗಣಿತ ವಿಷಯವನ್ನು ಗೈಡ್ ಬಳಸುವುದರಿಂ ದ ಉಳಿದವುಗಳಂತೆ ಕಲಿಸಲು ಸಾಧ್ಯವಿಲ್ಲ.
೪. ಗಣಿತ ವಿಷಯದಲ್ಲಿ ಶಿಕ್ಷಕರಿಗೆ ಹಿಡಿತವಿರುವುದಿಲ್ಲ, ಎಂದು ತಿಳಿಸಲಾಗಿದೆ. ಆದರೆ ಇದು ಗಣಿತ ವಿಷಯದಲ್ಲಿ ಅಷ್ಟೇ ಅಲ್ಲ,ಎಲ್ಲ ವಿಷಯ ಗಳಲ್ಲಿನ ಶಿಕ್ಷಕರಿಗಿರುವ ಕೊರತೆಯಾಗಿದೆ. ೫. ಶಿಕ್ಷಕರು ತಾವು ಕಲಿತದ್ದಕ್ಕಿಂತ ಹೆಚ್ಚಿನ ವಿಷಯ ಕಲಿಸಬೇಕಾಗಿದೆ ಎಂಬುದು ಸಮಂಜಸವಲ್ಲ.ಹಿಂದಿನ ಶಿಕ್ಷಣದ ಪಠ್ಯವಸ್ತುವನ್ನು ಹೋಲಿಸಿದಾಗ ಈಗಿನ ಪಠ್ಯವಸ್ತುವು ಯಾವ ರೀತಿಯಲ್ಲಿಯೂ ಸಾಟಿ ಯಾಗಲಾರದು.ಆದ್ದರಿಂದ ನನಗೆ ಅನಿಸುವುದೇನೆಂದರೆ ಶಿಕ್ಷಕರು ತಾವು ಕಲಿತದ್ದಕ್ಕಿಂತ ಹೆಚ್ಚಿನ ವಿಷಯ ಕಲಿಸಬೇಕಾಗಿರುವುದೇನಿಲ್ಲ.ಹಿಂದೆ ಶಿಕ್ಷಣ ಪಡೆದ ಶಿಕ್ಷಕರ ಬುಧ್ಧಿ ಸಾಮರ್ಥ್ಯ ಉನ್ನತ ಮಟ್ಟದ್ದಾಗಿದೆ ಎಂಬುದು ನನ್ನ ಅಭಿಪ್ರಾಯ ೬. ಪ್ರಾಥಮಿಕ ಮತ್ತು ಪ್ರೌಢ ಶಿ ಕ್ಷಣದಲ್ಲಿ ನಿರಂತರ ಕಲಿಕೆಯಿದೆ ಎಂದು ತಿಳಿಸಲಾಗಿದೆ. ಅದರೆ ಇಂದಿಗೂ ಸೇತುಬಂಧ ಶಿಕ್ಷಣದಲ್ಲಿ ಶಿಕ್ಷಕರು ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುತ್ತಿಲ್ಲ. ೭. ಹತ್ತನೇ ತರಗತಿಯ ಮಕ್ಕಳಿಗೆ board exam ನಿಂದ ಆಗುವ ಒತ್ತಡ , ಜೊತೆಗೆ ಶಿಕ್ಷಕರಿಗೂ , ಫಲಿತಾಂಶ ಕೊಡುವಲ್ಲಿ ಉಂಟಾಗುವ ಒತ್ತಡದ ಬಗೆಗೆ NCF paper ನಲ್ಲಿ ಪ್ರಸ್ತಾಪವಾಗಿಲ್ಲ.ಇದರಿಂದಾಗಿ ಶಿಕ್ಷಕರು ೮ ಮತ್ತು ೯ ನೇ ತರಗತಿಯಲ್ಲಿ ಕಲಿಕೆಯ ಬಗ್ಗೆ ನಿರುತ್ಸಾಹ ತೋ ರುತ್ತಿರುವುದರ ಬಗ್ಗೆ ಪ್ರಸ್ತಾಪವಾಗಿಲ್ಲ