STF 2015-16 Gadag
Science
Batch 1
Agenda
If district has prepared new agenda then it can be shared here
See us at the Workshop
Workshop short report
1st Day
ಜಿಲ್ಲಾ ಶಿಕ್ಷಣ & ತರಬೇತಿ ಸಂಸ್ಥೆ, ಗದಗ
2015-16ನೇ ಸಾಲಿನ RMSA ಯೋಜನೆ ಅಡಿಯಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ STF ತರಬೇತಿ.
ದಿ:- 23-11-2015 ರಿಂದ 27-11-2015
ತರಬೇತಿಯ ವರದಿ
ಕಂಪ್ಯೂಟರ ಆಧಾರಿತ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (SCIENCE SUBJECT TEACHER FORUM) ದಿ:23-11-2015 ರಂದು ಡಯಟ್,ಗದಗನಲ್ಲಿ ಪ್ರಾರಂಭವಾಯಿತು.
ಬೆಳಿಗ್ಗೆ 9-00ಗಂಟೆಗೆ ಎಲ್ಲ ಶಿಬಿರಾರ್ಥಿಗಳು ತರಬೇತಿ ಸ್ಥಳಕ್ಕೆ ಸೇರಿದರು. ಮೊದಲಿಗೆ ಹಾಜರಾತಿ ಹಾಗೂ ನೊಂದಣಿ ಕಾರ್ಯ ಪ್ರಾರಂಭವಾಯಿತು.
ನಂತರ 10:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಕೆ.ವಿ. ಪಾಟೀಲ ಹಿರಿಯಪನ್ಯಾಸಕರು, ತರಬೇತಿಯಲ್ಲಿರುವ ಸರ್ವರನ್ನು ಸ್ವಾಗತಿಸಿದರು. ಇನ್ನೋರ್ವ ಹಿರಿಯಪನ್ಯಾಸಕರಾದ ಶ್ರೀ S.N.ಹಳ್ಳಿಗುಡಿ ಸರ್ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನ್ಯ ಶ್ರೀ B.S. ರಘುವೀರ ಪ್ರಾಚಾರ್ಯರು ಡಯಟ್, ಗದಗ ತರಗತಿಯಲ್ಲಿ ತಂತ್ರಜ್ಞಾನದ ಬಳಕೆ ಕುರಿತು ತಿಳಿಸಿದರು.
ನಂತರ ಚಹಾ ವಿರಾಮದ ನಂತರ ತರಬೇತಿಯ ಪರಿಚಯವನ್ನು ಶ್ರೀ M.S. ಗಾರವಾಡ ಹಾಗೂ ಶ್ರೀ J.S.ದಿನ್ನಿ ಸಂಪನ್ಮೂಲ ವ್ಯಕ್ತಿಗಳು ಮಾಡಿದರು.
- )STF ತರಬೇತಿಯ ಉದ್ದೇಶ
- ) STF ತರಬೇತಿಯ ಅನುಕೂಲತೆ
- )UBUNTU ತಂತ್ರಜ್ಞಾನದ ಹಿನ್ನೆಲೆ & ಉಪಯುಕ್ತತೆ ಕುರಿತು ಪರಿಚಯ ನೀಡಿದರು.
ನಂತರ LibreOffice Writer ನಲ್ಲಿ Document ಬರೆಯುವ ರೀತಿಯನ್ನು ತಿಳಿಸಿದರು. ನಂತರ ಎಲ್ಲ ಶಿಬಿರಾರ್ಥಿಗಳು LibreOffice Writer ನಲ್ಲಿ Document ಬರೆಯಲು ಪ್ರಾರಂಭಿಸಿದರು. ಇದರಲ್ಲಿ ಮಗ್ನರಾದ ಶಿಬಿರಾರ್ಥಿಗಳು ಹಸಿವನ್ನು ಮರೆತು ಬಿಟ್ಟಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳು ಊಟ ಬಂದಿದೆ ಊಟದ ನಂತರ ಮತ್ತೆ Document ಬರೆಯಲು ಮುಂದುವರೆಸಿರಿ ಎಂದು ಊಟಕ್ಕೆ ಆವ್ಹಾನಿಸಿದರು.
ಊಟದ ನಂತರ ಸರಿಯಾಗಿ 2:30ಕ್ಕೆ ಮತ್ತೆ ತರಬೇತಿ ಪ್ರಾರಂಭವಾಯಿತು. ಈ ಅವಧಿಯನ್ನು ಶ್ರೀ R.H. ನದಾಫ ಸರ್ ಇವರು ಕಂಪ್ಯೂಟರನ ಭಾಗಗಳನ್ನು ಹಾಗೂ ಬೇಸಿಕ್ಸ ಕುರಿತು ತಿಳಿಸಿದರು. ನಂತರ ಎಲ್ಲ ಶಿಬಿರಾರ್ಥಿಗಳು LibreOffice Writer ನಲ್ಲಿ Document ಬರೆಯಲು ಮುಂದುವರೆದರು.
ಚಹಾ ವಿರಾಮದ ನಂತರ ಶ್ರೀ R.H. ನದಾಫ ಸರ್ ಇವರು ಇ-ಮೇಲ್ ೈಡಿ ಕುರಿತು ತಿಳಿಸಿಕೊಟ್ಟರು. ಈ ರೀತಿ ಮೊದಲ ದಿನದ ತರಬೇತಿ ಮುಕ್ತಾಯವಾಯಿತು.
2nd Day
ಜಿಲ್ಲಾ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ,ಗದಗ
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ
2 ನೇ ದಿನದ ವರದಿವಾಚನ . ದಿ ;- 24-11-2015
ದಿನಾಂಕ 24-11-2015 ರಂದು ಬೆಳಗಿನ ಸಮಯ 9.45 ಕ್ಕೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಕೆ .ವಿ .ಪಾಟೀಲ , ಹಿರಿಯ ಉಪನ್ಯಾಸಕರು ಇವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಶ್ರೀ S N ಹಳ್ಳಿಗುಡಿ ,ಹಿರಿಯ ಇವರು ಉಪನ್ಯಾಸಕರಾಗಿ ಭಾಗವಹಿಸಿದ್ದರು.
ಮೊದಲಿಗೆ ಶ್ರೀ ಪಾಟೀಲ ಶಿಕ್ಷಕರಿಂದ ಹಾರುವ ತಟ್ಟೆಗಳ ಕುರಿತು ಚಿಂತನ ಮಾಡಿದರು. ತದನಂತರ ಶ್ರೀಮತಿ s ಸುನಿತಾ ಅವರಿಂದ ಹಿಂದಿನ ದಿನದ ವರದಿವಾಚನವನ್ನು ಕೂಲಂಕಷವಾಗಿ ಪುನರಮನನ ಮಾಡವಮೂಲಕ ಹಿಮ್ಮಾಹಿತಿ ನೀಡಿದರು. ನಂತರ ಶ್ರೀ ಕೆ .ವಿ .ಪಾಟೀಲ , ಹಿರಿಯ ಉಪನ್ಯಾಸಕರು ಇವರು ಅಧ್ಯಕ್ಷೀಯ ಭಾಷಣದ ಮೂಲಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಕೇಳಿದ ಪ್ರತಿಯೊಂದನ್ನು ದಾಖಲೀಖರಣ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಆ ನಂತರ ಶ್ರೀ S N ಹಳ್ಳಿಗುಡಿಯವರಿಂದ ಉಪನ್ಯಾಸ ಪ್ರಾರಂಭವಾಯಿತು.ಇವರು ಸರಕಾರದ
ಪ್ರಕಟಿಸಿರುವ 10ಅ ಂಶಗಳ ಸೂತ್ರಗಳನ್ನು ಒ ಂದೊಂದಾಗಿ ಶಿಬಿರರ್ಥಿಗಳ ಮೂಲಕವೇ ಹೇಳಿಸುವ ಮೂಲಕ ವಿವರಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಾರವಾಡ & ಶ್ರೀ ದಿನ್ನಿ ರವರುಗಳು ಓಬಂಟು ತಂತ್ರಾಂಶದಲ್ಲಿ ಕೆಲ್ಜಿಯಂ ತಂತ್ರಾಂಶ ಬಳಸಿ ವಿವಿಧ ಧಾತುಗಳ ಸಂಶೋಧನೆ , ಗುಣಲಕ್ಷಣಗಳು, ರಾಸಾಯನಿಕ ಸಮೀಕರಣ , ಸರಿದೂಗಿಸುವಿಕೆ ಮುಂ..
ಗಳ ಪ್ರಾತ್ಯೆಕ್ಷಿಕೆ ನೀಡಿದರು , ನಂತರ ನಮ್ಮಿಂದ ಮಾಡಿಸಿದರು. ಚಹಾದ ವಿರಾಮದಲ್ಲಿ ಚಹಾ ಸೇವಿಸಿದೆವು , ನಂತರ ತರಬೇತಿಯ ಪೂರ್ವ ಪರೀಕ್ಷೇ ಯಲ್ಲಿ ಭಾಗವಹಿಸಿದೆವು , ತದ ನಂತರ ವಿವರಣೆ ಮುಂದುವರೆಯಿತು ಸುಮಾರು 5.40 ಕ್ಕೆ ತರಬೇತಿಯಿಂದ ನಿರ್ಗಮಿಸಿದೆವು.
3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಗದಗ
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯ ತರಬೇತಿ-2015 ರ ವರದಿ
ದಿನಾಂಕ : 25-11-2015
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿಯ 3 ನೇಯ ದಿನ 10 ಘಂಟೆಗೆ ಸರಿಯಾಗಿ ಡಯಟ್ ನ ಉಪ ಪ್ರಾಂಶು ಪಾಲರಾದ ಶ್ರೀಯುತ ಕೆ. ವಿ. ಪಾಟೀಲ ಇ ವರ ಉ ಪಸ್ಥಿತಿಯಲ್ಲಿ ಆರಂಭಗೊಂಡಿತು. ಶಿಬಿರಾರ್ಥಿ ಶ್ರೀಮತಿ . ಸೀಮಾ ಅ ಂಕೊಲೆಕರ ಇವರಿಂದ ಅ ಂಜೂರ ಸಸ್ಯದ ಹೂವಿನಲ್ಲಿ ಪರಾಗಸ್ಪರ್ಶ ಕ್ರಿಯೆ Wasp (ಕಂಜರಗಿ) ಎಂಬ ಕೀಟದಿಂದ ಜರಗುತ್ತದೆ ಎಂಬ ಸ್ವಾರಸ್ಯಕರ ವಿಜ್ಞಾನ ಚಿಂತನೆ ಮೂಡಿಬಂತು. ನಂತರ ಶ್ರೀಯುತ ಬಂಡಾ ಗುರುಗಳು ತರಬೇತಿಯ 2 ನೇ ದಿನದ ವರದಿಯನ್ನು ಸವಿಸ್ತಾರವಾಗಿ ಮಂಡಿಸಿದರು. ತರಬೇತಿಯ ಸಂಪನ್ಮೂಲ ಶಿಕ್ಷಕರಾದ ಶ್ರೀಯುತ ಜಗದೀಶ ದಿನ್ನಿಯವರು “ರೋಗ ರಕ್ಷಾ ಶಾಸ್ತ್ರ "( vaccination) ಲೂಯಿ ಪಾಶ್ಚರ್ ರವರಿಂದ ಹೇಗೆ ಆವಿಷ್ಕಾರಗೊಂಡಿತು, ಎಂಬುದನ್ನು ಕಥೆಯ ರೂಪದಲ್ಲಿ ನಿರೂಪಿಸಿದರು. ಎಲ್ಲಾ ಶಿಬಿರಾರ್ಥಿಗಳು ತರಬೇತಿಯಲ್ಲಿ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಡಯಟ್ ನ ಉಪ ಪ್ರಾಂಶು ಪಾಲರಾದ ಶ್ರೀಯುತ ಕೆ. ವಿ. ಪಾಟೀಲ ಇ ವರು ಕಿವಿಮಾತು ಹೇಳಿದರು.
ತರಬೇತಿಯ ಮೊದಲ ಅವದಿಯನ್ನು ಶ್ರೀಯುತ ಜಗದೀಶ ದಿನ್ನಿಯವರು koer( karnataka open educational resources) ಎಂಬ ವೆಬ್ ಸೈಟನ್ನು ಪರಿಚಯಿಸುವ ಮೂಲಕ ಆರಂಭಿಸಿದರು. ಈ ವೆಬ್ ಸೈಟ ಸುಮಾರು 3600 ವೆಬ್ ಪೇಜಗಳನ್ನು ಒಳಗೊಂಡಿದ್ದು , ಬೋಧನೆ ಮತ್ತು ಕಲಿಕೆಗೆ ಅಗತ್ಯವಾದ ಪಠ್ಯಕ್ರಮ, ಪಠ್ಯವಸ್ತು, ಪರಿಕಲ್ಪನಾ ನಕ್ಷೆಗಳು ,ಟೆಂಪಲೇಟಗಳು, ಆನಿಮೇಶನಗಳು, ಪ್ರಯೋಗಗಳ ವಿಡಿಯೊ, ಪಾವರಪಾಯಿಂಟ್ ಸ್ಲ್ೈಡ್ ಪ್ರದರ್ಶನ ಇನ್ನೂ ಅನೇಕ ವಿಷಯಗಳನ್ನು ಒ ಳಗೊಂಡಿದ್ದು ಇವೆಲ್ಲವುಗಳನ್ನು ಹೇಗೆ ಬಳಸಿಕೊಳ್ಳಬಹುದೆಂದು ಉ ದಾಹರಣೆಗಳ ಮೂಲಕ ತೋರಿಸಿ ಶಿಬಿರಾರ್ಥಿಗಳಲ್ಲಿ ಕುತೂಹಲ ಕೆರಳಿಸಿದರು.
ಮುಂಜಾನೆಯ 2 ನೇಯ ಅವಧಿ ಯು ಇನ್ನೊರ್ವ ಸಂಪನ್ಮೂಲ ಶಿಕ್ಷಕರಾದ ಶ್ರೀಯುತ ಎಮ್ ಎ ಸ್ ಗಾರವಾಡ ಹಾಗೂ ಶಿಬಿರಾರ್ಥಿಗಳಾದ ಶ್ರೀಯುತ ಧಾರವಾಡ ಗುರುಗಳು ನಿರ್ದಿಷ್ಟ ಪದವೊಂದಕ್ಕೆ Hyperlink ಅಳವಡಿಸುವ ವಿಧಾನ ತಿಳಿಸಿ ಉ ಬುಂಟು ಸಾಪ್ಟವೇರ್ ನ್ನು ಕಲಿಯುವ ಆಸಕ್ತಿಯನ್ನು ಇನ್ನೂ ಹೆಚ್ಚಾಗುವಂತೆ ಮಾಡಿದರು.
Screenshot ಹಾಗೂ Hyperlink ಆಯ್ಕೆಗಳನ್ನು ಬಳಸಿಕೊಂಡು ವಿಡಿಯೋ, ಆನಿಮೇಶನ್ ಸಹಿತ ಸಚಿತ್ರ ಪಾಠಯೋಜನೆ ತಯಾರಿಸುವ ಉತ್ಸುಕತೆಯಿಂದ ಲಗುಬಗೆಯಿಂದ ಊಟವನ್ನು ಮುಗಿಸಿಕೊಂಡು ಪುನಃ ಎಲ್ಲರೂ ತರಬೇತಿಗೆ ಹಾಜರಾದೆವು. ಅಂತರ್ಜಾಲದಿಂದ ಮಾಹಿತಿಯನ್ನು ಹುಡುಕಿ ಪಾಠಯೋಜನೆಗೆ ಅಳವಡಿಸುವಲ್ಲಿ ಶಿಬಿರಾರ್ಥಿಗಳು ಎಷ್ಟು ತಲ್ಲೀನರಾಗಿದ್ದರೆಂದರೆ ಮಧ್ಯಾಹ್ನದ 2 ಅವಧಿಗಳು ಕಳೆದಿದ್ದೇ ಗೊತ್ತಾಗಲಿಲ್ಲ.
ಚಹಾ ಅವಧಿಯ ನಂತರ ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ಅವಧಿ ಮುಂದುವರೆಯಿತು. ಸಂಪನ್ಮೂಲ ಶಿಕ್ಷಕರು ಶಿಬಿರಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಲೇ, ಎಲ್ಲರ E Mail ID ಗಳನ್ನು STF ವೆಬ್ ಸೈಟ್ ಗೆ ಲಿಂಕ್ ಮಾಡುವ ಕಾರ್ಯಕೈಗೊಂಡರು.
ಒಟ್ಟಿನಲ್ಲಿ ಯೋಜಿಸಿದಂತೆ 3 ನೇ ದಿನದ ತರಬೇತಿ ಕಾರ್ಯ ಯಶಸ್ವಿಯಾಗಿ ನಡೆಯಿತು, ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿದೆ.
ಧನ್ಯವಾದಗಳು.
4th Day
4ನೇ ದಿನದ ವರದಿ
ತರಬೇತಿಯು ವಿಜ್ಙಾನ ಚಿಂತನೆಯೊಂದಿಗೆ ಪ್ರಾರಂಭವಾಯಿತು.ಶ್ರೀ ಗಿರಿಶ ದಾಸರ ರವರು ಆರೋಗ್ಯವೇ ಭಾಗ್ಯದ ಸಂಸ್ಕ್ರತ ಸ್ಲೋಕದೋಂದಿಗೆ ಹಿತ ಮಿತ ಮಾತ್ತು ಋತು ಗಳಿಗೆ ಅನುಸಾರವಾಗಿ ನಮ್ಮ ಆಹಾರ ಪದ್ದತಿಯನ್ನು ಕುರಿತು ವಿವರಿಸಿದರು.
ಶ್ರೀಮತಿ. ಸಂಗೀತಾ ಪಾಟೀಲ ೨೫-೧೧-೨೦೧೫ ರಂದು ನಡೆದ ಕಾರ್ಯಗಳ ವರದಿ ವಾಚನ ಮಾಡಿದರು. ಡಯಟ್ ನ ಉಪ ಪ್ರಾ೦ಶುಪಾಲರಾದ ಶ್ರೀ. ಕೆ. ವ್ಹಿ. ಪಾಟೀಲ ವಿಜ್ಞಾನ ಚಿಂತನೆಯನ್ನು ವಿವರಿಸುವತ್ತಾ, ತರಗತಿ ಕೋಣಿಯಲ್ಲಿ ಮಕ್ಕಳಿಗೆ ಶಿಕ್ಷಕರು ಕಲಿಯಲು ಪ್ರೇರಿಪಿಸುವಂತೆ ತಿಳಿಸಿದರು. ನಂತರ ಶ್ರೀ. ಜಗದೀಶ ದಿನ್ನಿ ಇವರು ಕಪ್ಪೆಗಳ ಕತೆಯೊಂದರ ಮೂಲಕ ಧನಾತ್ಮಕ ಚಿಂತನೆ ಮಾಡಲು ತಿಳಿಸಿದರು. ನಂತರ ಶ್ರೀ.ಮುತ್ತು ಗಾರವಾಡ ಸರ್ ಇವರು ತಮ್ಮ ಇಮೇಲ್ ಐಡಿಗೆ ಎಲ್ಲಾ ಶಿಭಿರಾರ್ಥಿಗಳು ತಮ್ಮ ಓಡಿಟಿ ಪೈಲುಗಳನ್ನು ಅಟ್ಯಾಚ್ ಮಾಡಿ ಮೇಲ್ ಮಾಡಲು ತಿಳಿಸಿದರು. ನಂತರ ಚಂದ್ರಶೇಖರ ಅಂಬಿಗೇರ ಇವರು ಇಂಪ್ರೇಸ್ ಹಾಗೂ ಮೈಂಡ್ ಮ್ಯಾಪ್ ಬಗ್ಗೆ ತಿಳಿಸಿ ಎಲ್ಲಾ ಶಿಭಿರಾರ್ಥಿಗಳು ತಲಾ ಎರಡು ಪಿ.ಪಿ.ಟಿ. ಗಳನ್ನು ತಯಾರಿಸುವಲ್ಲಿ ಮಾರ್ಗದರ್ಶನ ಮಾಡಿದರು.
ಕೊನೆಯ ಅವಧಿಯಲ್ಲಿ ಶ್ರೀ. ಮುತ್ತು ಗಾರವಾಡ ಸರ್ ಇವರು ಫೆಟ್ ತಂತ್ರಾಂಶದಲ್ಲಿರುವ ವಿಜ್ಞಾನ ಪ್ರಯೋಗಗಳ ಬಗ್ಗೆ (ಸಿಮ್ಯುಲೇಷನ್ಸ್) ಅನೇಕ ಉದಾಹರಣೆಗಳೊಂದಿಗೆ ವಿವರಿಸಿ ಪ್ರತಿ ಗುಂಪಿನವರು ಎರಡು ಸಿಮ್ಯುಲೇಷನ್‌ಗಳನ್ನು ವೀಕ್ಷಿಸಿ ಎಲ್ಲಾ ಶಿಭಿರಾರ್ಥಿಗಳನ್ನು ಉದ್ದೇಶಿಸಿ ವಿಶ್ಲೇಷಣೆ ಮಾಡಿದರು.
5th Day
೫ನೇ ದಿನದ ವರದಿ
ತರಬೇತಿಯು ವಿಜ್ಙಾನ ಚಿಂತನೆಯೊಂದಿಗೆ ಪ್ರಾರಂಭವಾಯಿತು. ಶ್ರೀ. ಲಕ್ಷ್ಮಣ ಮೇಲ್ಮನಿ ರವರು ವಾಯು ಮಾಲಿನ್ಯ ಮತ್ತು ಜಾಗತೀಕ ತಾಪಮಾನ ಏರಿಕೆ ತಡೆಗಟ್ಟುವಲ್ಲಿ ತಂತ್ರಜ್ಞಾನದ ಮಹತ್ವದ ಕುರಿತು ವಿವರಿಸಿದರು..
ಶ್ರೀಮತಿ. ಎಸ್. ಎ. ಖಾನ ಇರುವ ೨೬-೧೧-೨೦೧೫ ರಂದು ನಡೆದ ಕಾರ್ಯಕ್ರಮದ ಸವಿಸ್ತಾರ ವರದಿ ವಾಚನ ಮಾಡಿದರು. ನಂತರ ಶ್ರೀ.ಮುತ್ತು ಗಾರವಾಡ ಸರ್ ಹಾಗೂ ಶ್ರೀ. ಜಗದೀಶ ದಿನ್ನಿ ಇವರು ಕೆಲವು ಸ್ವಾರಸ್ಯಕರ ಸಣ್ಣ ಕಥೆಗಳನ್ನು ಹೇಳುವ ಮೂಲಕ ಶಿಕ್ಷಕರ ವೃತ್ತಿ ಮಹತ್ವ ತಿಳಿಸಿದರು.
ತಮ್ಮ ಇಮೇಲ್ ಐಡಿಗೆ ಎಲ್ಲಾ ಶಿಭಿರಾರ್ಥಿಗಳು ತಮ್ಮ ಓಡಿಟಿ ಪೈಲುಗಳನ್ನು ಅಟ್ಯಾಚ್ ಮಾಡಿ ಮೇಲ್ ಮಾಡಲು ತಿಳಿಸಿದರು. ನಂತರ ಚಂದ್ರಶೇಖರ ಅಂಬಿಗೇರ ಇವರು ಇಂಪ್ರೇಸ್ ಹಾಗೂ ಮೈಂಡ್ ಮ್ಯಾಪ್ ಬಗ್ಗೆ ತಿಳಿಸಿ ಎಲ್ಲಾ ಶಿಭಿರಾರ್ಥಿಗಳು ತಲಾ ಎರಡು ಪಿ.ಪಿ.ಟಿ. ಗಳನ್ನು ತಯಾರಿಸುವಲ್ಲಿ ಮಾರ್ಗದರ್ಶನ ಮಾಡಿದರು.
ಎರಡನೇ ಅವಧಿಯಲ್ಲಿ ಶ್ರೀ. ಮುತ್ತು ಗಾರವಾಡ ಸರ್ ಇವರು ಫೆಟ್ ತಂತ್ರಾಂಶದಲ್ಲಿರುವ ವಿಜ್ಞಾನ ಪ್ರಯೋಗಗಳ ಬಗ್ಗೆ (ಸಿಮ್ಯುಲೇಷನ್ಸ್) ಅನೇಕ ಉದಾಹರಣೆಗಳೊಂದಿಗೆ ವಿವರಿಸಿ ಪ್ರತಿ ಗುಂಪಿನವರು ಎರಡು ಸಿಮ್ಯುಲೇಷನ್‌ಗಳನ್ನು ವೀಕ್ಷಿಸಿ ಎಲ್ಲಾ ಶಿಭಿರಾರ್ಥಿಗಳನ್ನು ಉದ್ದೇಶಿಸಿ ವಿಶ್ಲೇಷಣೆ ಮಾಡಿದರು.
ಮೂರನೇ ಅವದಿಯstellerium ಪರಿಚಯ ಮಾಡಿಕೊಡಲಾಯಿತು.ನಂತರ ಶಿಬಿರಾರ್ಥಿಗಳು stellerium ದಲ್ಲಿ ಆಕಾಶಕಾಯಗಳು,ಸೂರ್ಯ ಗ್ರಹಣ,ಚಂದ್ರಗ್ರಹಣ,ಮಾತ್ತು ಆಕಾಶಕಾಯಗಳ ಚಲನೆಯ ಕುರಿತು ರೂಡಿಸಿಕೊಂಡರು.ನಂತರ Kstar ಅಪ್ಲಿಕೇಷನನ ಬಳಕೆ ವಿಧಾನದ ಕುರಿತು ತಿಳಿಸಿದರು.
ಎಲ್ಲಾ ಶಿಬಿರಾರ್ಥಿಗಳು ಕೋಯರ್‌ನಲ್ಲಿ ಹಿಮ್ಮಾಹಿತಿಯನ್ನು ತುಂಬಿದರು. ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.