STF 2013-14 Udupi

From Karnataka Open Educational Resources
Jump to navigation Jump to search


Head Teachers

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Social Science

Agenda

If district has prepared new agenda then it can be shared here ಮೊದಲ ದಿನ- ಹಿನ್ನೋಟ -stf ತರಬೇತಿ, ಶಾಲೆಯಲ್ಲಿ ಸಂಪನ್ಮೂಲಗಳ ಬಳಕೆ ಬಗ್ಗೆ ಹಿಮ್ಮಾಹಿತಿ. ಕನ್ನಡ ಟೈಪಿಂಗ್ 5ನೇ ದಿನ-Kdenlive, Sound Record,೯ನೇ ತರಗತಿ ಹೊಸಪಠ್ಯದ ಬಗ್ಗೆ ಚರ್ಚೆ.

See us at the Workshop



Social Science Stf 2nd Batch December 2013

Workshop short report

ಸಮಾಜ ವಿಜ್ಞಾನ stf ತರಬೇತಿ ಉಡುಪಿ ಮೊದಲ ಹಂತ-ದಿನಾಂಕ:02/12/2013-06/12/2013

1ನೇ ದಿನ

ಸಮಾಜ ವಿಜ್ಞಾನ S T F ತರಬೇತಿ ಮೊದಲ ದಿನದ ವರದಿ ಡಯಟ್, ಉಡುಪಿ- 576101 ಸಮಾಜ ವಿಜ್ಞಾನ ಶಿಕ್ಷಕರಿಗೆ ೨ ನೇ ಹಂತದ S T F ತರಬೇತಿಯನ್ನು ದಿನಾಂಕ 02-12-2013 ರಿಂದ 06-12-2013 ರ ವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 02-12-2013 ರಂದು ಬೆಳಗ್ಗೆ 9.30 ಗೆ ಸರಿಯಾಗಿ ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇಂದಿನ ಬದಲಾಗುತ್ತಿರುವ ಪ್ರಪಂಚದಲ್ಲಿ ಶಿಕ್ಷಕರು ಕೂಡ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಸೂಚಿಸಿದರು. ಶ್ರೀಮತಿ ಶಾಲಿನಿ ಮೇಡಮ್ ಅವರ ಸುಶ್ರಾವ್ಯ ಕಂಠದಲ್ಲಿ ಪ್ರಾರ್ಥನೆಯು ಮೂಡಿ ಬಂತು. ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಶಾಂತ ಜತ್ತನ್ನ ಅವರು ಇಡೀ ದಿನದ ಕಾರ್ಯಕ್ರಮದ ಪಕ್ಷಿನೋಟ ನೀಡಿದರು.. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರದೀಪ್ ಮತ್ತು ಶ್ರೀ ಮಹಾಬಲೇಶ್ವರ ಭಾಗವತ್ ಅವರು ಇ- ಮೇಲ್ ಐಡಿಯನ್ನು ಸೃಷ್ಟಿಸುವುದು ಹಾಗೂ ಇ- ಮೇಲ್ ಕಳುಹಿಸುವುದನ್ನು ಶಿಕ್ಷಕರಿಂದ ಪ್ರಾಯೋಗಿಕವಾಗಿ ಮಾಡಿಸುವುದರ ಮೂಲಕ ತಿಳಿಸಿಕೊಟ್ಟರು. ಜೊತೆಗೆ ಶ್ರೀ ರಂಗಧಾಮಪ್ಪ ಇವರು ಉತ್ಸಾಹದಿಂದ ಶಿಕ್ಷಕರಿಗೆ ಸಹಕಾರ ನೀಡುತ್ತಿದ್ದರು. ಇದು ಶಿಕ್ಷಕರಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬುತಿತ್ತು. ಅಲ್ಲದೇ ಕನ್ನಡ ಟೈಪಿಂಗ್ ಕೂಡ ಪ್ರಾಯೋಗಿಕವಾಗಿ ಮಾಡಿ ಕಲಿತುಕೊಂಡೆವು. ಅಂತರಜಾಲದ ಬಗ್ಗೆ , ಚಿತ್ರಗಳು ಮತ್ತು ಮಾಹಿತಿಗಳನ್ನು ಡೌನ್ ಲೋಡ್ ಮಾಡುವುದನ್ನು ಮತ್ತು ಸೇವ್ ಮಾಡುವುದನ್ನು ತಿಳಿಸಿಕೊಟ್ಟರು. ಇದರಿಂದ ನಮಗೆ ತರಗತಿ ಪಾಠಕ್ಕೆ ಅಗತ್ಯವಾದ ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದುಕೊಳ್ಳಲು ಸಹಾಯವಾಗುತ್ತದೆ. AKSHATHA KINI P ASSISTANT TEACHER GOVERNMENT HIGH SCHOOL KOODABETTU-MALA KARKALA TALUK UDUPI DISTRICT Mobile:9343146469


2ನೇ ದಿನ

ಸಮಾಜ ವಿಜ್ಞಾನ ಎಸ್. ಟಿ. ಎಫ್ .ತರಬೇತಿಯ ಎರಡನೆ ದಿನದ ವರದಿ.ದಿನಾಂಕ 03/12/2013 ಇಂದಿನ ದಿನದ ನಮ್ಮ ತರಬೇತಿ ಕಾರ್ಯಕ್ರಮವು ಶ್ರೀಮತಿ ವಿನಯ ,ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಎಣ್ಣೆಹೊಳೆ ಕಾರ್ಕಳ ಇವರ ಚಿಂತನೆಯೊಂದಿಗೆ ಆರಂಭವಾಯಿತು. ನಂತರ ನಿನ್ನೆ ದಿನದ ವರದಿಯನ್ನು ಶ್ರೀಮತಿ ಅಕ್ಷತಾ ರವರು ವಾಚಿಸಿದರು. ಇವತ್ತಿನ ತರಬೇತಿ ಕಾರ್ಯಕ್ರಮ ದಲ್ಲಿ ಡಯಟ್ ಹಿರಿಯ ಉಪನ್ಯಾಸಕರು& ನಮ್ಮ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಯುತ ರಂಗಧಾಮಪ್ಪ ಸರ್ ರವರು ಕಂಪ್ಯೂಟರಿನಲ್ಲಿ ನಮ್ಮ ಕಲಿಕೆಯ ವೇಗ ಕಡಿಮೆಯಾಗಿರುವುದಕ್ಕೆ ಕಾರಣ ಕಂಪ್ಯೂಟರಿನ ಬಳಕೆ ನಾವು ಕಡಿಮೆಮಾಡಿರುವುದು ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಶಾಂತ ಸರ್ ರವರು ಕೊಯರ್ ನ ಅರ್ಥ, ಉದ್ದೇಶಗಳು, ಯೋಜನೆಯ ಮುಖ್ಯ ತತ್ವಗಳು, ಕೊಯರ್ ನ ಮೊದಲ ವರ್ಷದ ಕಾರ್ಯಗಳು, ಸಂಪನ್ಮೂಲಗಳ ಸ್ವರೂಪ ಮತ್ತು ನಿರ್ಮಾಣ ಇವುಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.ನಂತರ ಕೊಯರ್ ನಲ್ಲಿ ನಿನ್ನೆ ದಿನದ ತರಬೇತಿಯ ಫೋಟೊಗಳನ್ನು ಅಫ್ ಲೋಡ ಮಾಡಿರುವುದನ್ನು ತೋರಿಸಲಾಯಿತು. ಭಾಗವತ್ ಸರ್ ರವರು ಕೊಯರ್ ನಲ್ಲಿ School Wiki , ಜಿಲ್ಲೆಯ ಶಾಲೆಯ ಶಾಲೆಯ ಮಾಹಿತಿಯನ್ನು , ಅಫ್ ಲೋಡ ಮಾಡುವುದರ ಕುರಿತು ಮಾಹಿತಿ ನೀಡಿದರು.ನಂತರ ಸಂಪನ್ಮೂಲಗಳಿಗೆ ಹೈಪರ್ ಲಿಂಕ್ ಮಾಡುವ ವಿಧಾನವನ್ನು ತಿಳಿಸಿದರು. ಶಿಬಿರಾರ್ಥಿಗಳಿಂದ ಹೈಪರ ಲಿಂಕ್ ನಲ್ಲಿ ಪ್ರಾಕ್ಟಿಸ್ ಮಾಡಲು ತಿಳಿಸಿದರು. ನಂತರ ಪ್ರದೀಪ ಸರ್ ರವರು ಲಿಂಕ್ ಮಾಡುವಾಗ ಶಾರ್ಟ ಕಟ್ ವಿಧಾನಗಳಾದ ಕಂಟ್ರೋಲ್ ಸಿ,ಕಂಟ್ರೋಲ್ ವಿ ಇವುಗಳ ಮಾಹಿತಿಯನ್ನು ನೀಡಿದರು. ಅದನ್ನು ಎಲ್ಲರಿಂದ ಪ್ರಾಯೋಗಿಕವಾಗಿ ಮಾಡಿಸಿದರು.ತದನಂತರ ಒಂದೊಂದು ವಿಷಯದ ಬಗ್ಗೆ ಮಾಹಿತಿಯನ್ನು ಹೈಪರ್ ಲಿಂಕ್ ನಲ್ಲಿ ಅಳವಡಿಸಿ ಅದನ್ನು ರಂಗಧಾಮಪ್ಪ ಸರ್ ರವರಿಗೆ Email ಮಾಡಲಾಯಿತು. ತದನಂತರ ಪ್ರತಿಯೊಂದು ಗುಂಪಿಗೆ ಸಂಪನ್ಮೂಲ ರಚನೆ ಮಾಡಲು ಪೂರ್ವಭಾವಿಯಾಗಿ ಒಂದೊಂದು ವಿಷಯವನ್ನು ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ಭಾಗವತ್ ಸರ್ ರವರು ಕೊಯರ್ ಗಾಗಿ ಸಂಪನ್ಮೂಲ ರಚನೆ ಮಾಡುವ ವಿವಿಧ ಹಂತಗಳನ್ನು ಅರ್ಥವತ್ತಾಗಿ ತಿಳಿಸಿದರು. ನಂತರ ಅವರು ತಯಾರಿಸಿದ ಅಮೇರಿಕಾ ಕ್ರಾಂತಿಗಳು ಎಂಬ ಪಾಠದ ಬಗ್ಗೆ ಮಾಡಿದ ಸಂಪನ್ಮೂಲ ರಚನೆಯನ್ನು ಹಂತ ಹಂತವಾಗಿ ತೋರಿಸಿದರು. ನಂತರ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ರಚಿಸಲು ಪೂರಕವಾಗಿ ಮೈಂಡ ಮ್ಯಾಫ್ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ನಮ್ಮಿಂದ ಮಾಡಿಸಿದರು. ವರದಿ ಜ್ಯೋತಿ ನಾಯಕ್ ಸಹಶಿಕ್ಷಕಿ ಸರಕಾರಿ ಪದವಿಪೂರ್ವ ಕಾಲೇಜು ಗೋಳಿಯಂಗಡಿ ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.

3ನೇ ದಿನ

ಉಡುಪಿ ಸಮಾಜ ವಿಜ್ಞಾನ ಕೊಯರ್ ತರಬೇತಿದಿನಾಂಕ- 04/12/2013ರಂದು ನಡೆದ STF ತರಬೇತಿಯ 3ನೇ ದಿನದ ವರದಿ ಇಂದಿನ ದಿನ ತರಬೇತಿಯ ಶಿಬಿರಾರ್ಥಿಗಳಿಗೆ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ ರಂಗಧಾಮಪ್ಪ ಸರ್ ಇವರು ಆತ್ಮೀಯವಾಗಿ ಸ್ವಾಗತ ಕೋರಿಕೊಂಡು ತರಬೇತಿ ದಿನಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ಜತ್ತನ್ ಹಾಗೂ ಶ್ರೀ ಮಹಾಬಲೇಶ್ವರ್ ಭಾಗವತ್ ಸರ್ ಉಪಸ್ಥಿತಿ ಇದ್ದರು.ಆರಂಭದಲ್ಲಿ ಶ್ರೀಮತಿ ಭಾರತಿ ಪ್ರಭು ಸ.ಪ.ಪೂ.ಕಾಲೆಜು ಉಡುಪಿ ಇವರು ಶೈಕ್ಷಣಿಕ ಚಿಂತನೆಯನ್ನು ನಿರ್ವಹಿಸಿದರು.ಸ್ವಾರಸ್ಯಕರ ಕತೆಯ ಮೂಲಕ ಚಿಂತನವನ್ನು ರಸವತ್ತಾಗಿ ಪ್ರಸ್ತುತ ಪಡಿಸಿದರು. ನಂತರ ೨ನೇ ದಿನದ ವರದಿಯನ್ನು ಶ್ರೀಮತಿ ಜ್ಯೋತಿ ಮೇಡಮ್ ಸ.ಪ್ರೌ.ಶಾ. ಗೋಳಿಯಂಗಡಿ ಇವರು ಕೊಯರನಲ್ಲಿ ದಾಖಲಿಸಿದ ವರದಿಯನ್ನು ವಾಚಿಸಿದರು.ಪೂರ್ವ ದಿನದ ವರದಿಯು ಮತ್ತೋಮ್ಮೆ ಶಿಭಿರಾರ್ಥಿಗಳನ್ನು ಹಿಂದಿನ ದಿನದ ಕಲಿಕೆಗಳನ್ನು ನೆನಪಿಸುವಂತೆ ಮಾಡಿತು.ನಂತರ ನೋಡಲ್ ಅಧಿಕಾರಿಯವರಾದ ಶ್ರೀರಂಗದಾಮಪ್ಪ ಸರ್ 3ನೇದಿನದ ಅಧಿವೇಶನವನ್ನು ಪ್ರಾರಂಭಿಸಿದರು.ಬೆಳಗಿನ ದಿನದ ಮೊದಲ ಅಧಿವೇಶನವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಾಬಲೇಶ್ವರ್ ಭಾಗ್ವತ್ ಸರ್ ಇವರು ಘಟಕ ರೂಪುರೇಷೆ ಮೈಂಡ್ ಮ್ಯಾಪ್ ತಯಾರಿಸುವ ಬಗ್ಗೆ ತಿಳಿಸಿದರು. ಪ್ರತಿ ತಂಡದವರಿಗೆ ಮಾರ್ಗದರ್ಶನ ನೀಡಿದರು.ಪ್ರತಿ ತಂಡದ ಶಿಬಿರಾರ್ಥಿಗಳು ತಾವು ತೆಗೆದುಕೊಂಡ 9ನೇ ತರಗತಿಯ ಪಾಠಕ್ಕೆ ಸಂಬಂಧಿಸಿದಂತೆ ಒಂದು ವಿಷಯದಲ್ಲಿ ಮನೋನಕ್ಷೆ ಸಿದ್ದ ಪಡಿಸಿ ಸಂಪನ್ಮೂಲ ವ್ಯಕ್ತಿಯರಿಗೆ Mail ಕಳುಹಿಸಲಾಯಿತು. ಮನೋನಕ್ಷೆ ತಯಾರಿಕೆ ಹಂತ ಹಾಗೂ ಲಿಂಕ್ ಗಳನ್ನು ಹೈಪರ್ ಲಿಂಕ್ ಮೂಲಕ ಸಂಪರ್ಕಪಡೆಯುವ ಬಗ್ಗೆ ಶಿಭಿರಾರ್ಥಿಗಳಿಗೆ ತಿಳಿಸಿ ಆ ಮೂಲಕ ಶಿಭಿರಾರ್ಥಿಗಳಿಂದ ಮಾಡಿಸಲಾಯಿತು. ಬೆಳಗಿನ ಚಹ ವಿರಾಮದ ನಂತರ ದಿನದ ಎರಡನೆ ಅಧಿವೇಶನದಲ್ಲಿ ಒಂದು ಪಾಠ ತಯಾರಿಕೆ ಹಂತಗಳಾದ ಮನೋನಕ್ಷೆ, ಪಠ್ಯ ಪುಸ್ತಕ, ಮತ್ತಷ್ಟು ಮಾಹಿತಿ,ಕಲಿಕಾಉದ್ದೇಶಗಳು,ಪರಿಕಲ್ಪನೆ,ಬೋಧನೆಯ ರೂಪುರೇಷೆ,ಟಿಪ್ಪಣಿಗಳು,ಚಟುವಟಿಕೆ,ಯೋಜನೆ ಹಾಗೂ ಯೋಜನಾ ಕಾರ್ಯ ಸಿದ್ಧಪಡಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಹಬಲೇಶ್ವರ್ ಭಾಗವತ್ ಸರ್ ಶಿಭಿರಾರ್ಥಿಗಳಿಗೆ ಸರಳವಾಗಿ ತಿಳಿಸಿದರು. ಇವರಿಗೆ ಪ್ರಶಾಂತ ಸರ್ ಸಹಕರಿಸಿ ಮತ್ತಷ್ಟು ಮಾಹಿತಿ ತಿಳಿಸಿದರು.ಬೆಳಗಿನ ಎರಡನೇ ಅಧಿವೇಶನದ ನಂತರ ಊಟದ ವಿರಾಮ ನೀಡಲಾಯಿತು.ಸರಳವಾದ ಬೋಜನವನ್ನು ಸವಿದ ಶಿಭಿರಾರ್ಥಿಗಳು ಆಸಕ್ತಿಯಿಂದ ದಿನದ ಮದ್ಯಾಹ್ನದ ಮೂರನೆ ಅವಧಿಗೆ ಸಿದ್ಧರಾದೆವು. ಬೆಳಗಿನ ಅವಧಿಯಲ್ಲಿ ಹಂಚಿದ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಣ ಮಾಡುವಲ್ಲಿ ನಾವು ಸಿದ್ಧರಾದೆವು.ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಹಂತ ಹಂತವಾಗಿ ರೂಪಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಅಂತರ್ಜಾಲ ತಾಣದ ಸಹಕಾರ ಪಡೆಯುತ್ತ ಶಿಭಿರಾರ್ಥಿಗಳು ಮನೋನಕ್ಷೆ ಸಹಿತ ಪಾಠ ಯೋಜನೆ ಸಿದ್ಧ ಪಡಿಸಿದರು.ಪಾಠಕ್ಕೆ ಸಂಬಂಧಿಸಿದಂತೆ ಫೋಟೊಗಳನ್ನುಫೋಲ್ಡರ್ ನಲ್ಲಿ ಹಾಕಿಕೊಂಡು ಪಿಕಾಸಾದಲ್ಲಿ ಅಪ್ಲೋಡ್ ಮಾಡಿ ಫೋಟೋಲಿಂಕ್ ಬಳಸುವ ಬಗ್ಗೆ ಪ್ರಶಾಂತ್ ಸರ್ ವಿವರ ನೀಡಿದರು.ಇತರ ಸಂಪನ್ಮೂಲ ಶಿಕ್ಷಕರು ನಮಗೆ ಸಹಕರಿಸಿದರು.ಮದ್ಯಾಹ್ನದ ಚಹ ವಿರಾಮದ ನಂತರ ಮನೋನಕ್ಷೆ ತಯಾರಿಸಿ ಸಿದ್ಧ ಪಡಿಸಿದ ಭಕ್ತಿ ಪಂಥ,ರಾಷ್ಟ್ರೀಯ ಭಾವೈಕ್ಯತೆ,ಮತಪ್ರವರ್ತಕರು,ವಿಷಯಕ್ಕೆ ಸಂಬಂಧಿಸಿದಂತೆ ಶಿಭಿರಾರ್ಥಿಗಳು ಸಾಮೂಹಿಕ ಚರ್ಚೆ ಮೂಲಕ ಸಾಕಷ್ಟು ವಿಷಯಗಳನ್ನು ಸೇರಿಸುವ ಮೂಲಕ ಇನ್ನಷ್ಟು ಮನದಟ್ಟಾಯಿತು. ಯೋಜನಾಧಿಕಾರಿ ರಂಗಧಾಮಪ್ಪ ಸರ್ ವಿಷಯದ ಕುರಿತು ಮತ್ತಷ್ಟು ಮಾಹಿತಿ ನೀಡಿದರು.ನಂತರ ಶಿಭಿರದ ಯೋಜನಾಧಿಕಾರಿಗಳು ದಿನದಲ್ಲಿ ನಡೆದ ವಿಷಯದ ಬಗ್ಗೆ ಮತ್ತೊಮ್ಮೆ ಅವಲೋಕನಕ್ಕೆ ವೇದಿಕೆ ಕಲ್ಪಿಸಿದರು. ದಿನದ ತರಬೇತಿಯನ್ನು ಮುಕ್ತಾಯಗೊಳಿಸುವ ಮೂಲಕ ಸಾಕಷ್ಟು ವಿಷಯಗಳನ್ನು ತಿಳಿದು ಕೊಂಡೆವು .ಜೈಹಿಂದ್, ಜೈ ಕರ್ನಾಟಕ ವರದಿಗಾರರು, ಶ್ರೀಮತಿ ಯಶೋದ,ಸಹಶಿಕ್ಷಕರು, ಸ.ಪ್ರೌ.ಶಾ.ಕಾಳಾವರ. ಶ್ರೀ ಹೆರಿಯ, ಸಹಶಿಕ್ಷಕರು, ಸ.ಪ್ರೌ.ಶಾ.ವಡ್ಡರ್ಸೆ ಶ್ರೀಮತಿ ಬಾಬಿ. ಸಹಶಿಕ್ಷಕರು, ಸ.ಪ್ರೌ.ಶಾ.ಹಾಲಾಡಿ

4ನೇ ದಿನ

ಡಯೆಟ್ ಉಡುಪಿ ಇಲ್ಲಿ ನಡೆದ STF ಸಮಾಜ ವಿಜ್ಞಾನ ತರಬೇತಿಯ 4ನೆಯ ದಿನದ ವರದಿ ಡಯೆಟ್ ಉಡುಪಿ ಇಲ್ಲಿ ನಡೆಯುತ್ತಿರುವ STF ಸಮಾಜವಿಜ್ಞಾನ ತರಬೇತಿಯ 4ನೆಯ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಎಲ್ಲರನ್ನೂ ಸ್ವಾಗತಿಸುವುದರೊಂದಿಗೆ ಆರಂಭವಾಯಿತು. ಶ್ರೀಮತಿ ಶಾಲಿನಿ B.S ಸ.ಪ್ರೌ.ಶಾಲೆ ಕಲ್ಯ ಇವರು ನಮ್ಮಲ್ಲಿರುವ Egoಗೆ ಸಂಬಂಧಿಸಿದ ವಿಚಾರವನ್ನೊಳಗೊಂಡ ಚಿಂತನವನ್ನು ನಡೆಸಿಕೊಟ್ಟರು. ಶ್ರೀಯುತ ಹಿರಿಯಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಇವರು ಹಿಂದಿನ ದಿನದ ತರಬೇತಿಯ ವರದಿಯನ್ನು ಮಂಡಿಸಿದರು. ಆ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಡಯೆಟ್ ಹಿರಿಯಉಪನ್ಯಾಸಕರಾದ ಶ್ರೀಯುತ ರಂಗಧಾಮಪ್ಪ ಸರ್,ವರದಿಯನ್ನುಇನ್ನಷ್ಟು ಉತ್ತಮವಾಗಿ ತಯಾರಿಸುವ ಬಗ್ಗೆ ಸಲಹೆ ನೀಡಿದರು. ಬೆಳಿಗ್ಗೆಯ ತರಬೇತಿಯ ಮೊದಲ ಅವಧಿಯಲ್ಲಿ ಹಿಂದಿನ ದಿನದ ಸಂಪನ್ಮೂಲ ರಚನೆಗೆ ಸಂಬಂಧಿಸಿದ ಚರ್ಚೆಯು ಮುಂದುವರಿಯಿತು. ಭಕ್ತಿ ಪಂಥದ ಬಗ್ಗೆ ಸಪನ್ಮೂಲ ರಚನೆಯಲ್ಲಿ ಸಿದ್ಧಪಡಿಸಿದ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಈ ಚರ್ಚೆಯಲ್ಲಿ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ಕಲಿಕಾ ಉದ್ಧೇಶಗಳಿಗೂ , ಚಟುವಟಿಕೆಗಳಿಗೂ ಸಂಬಂಧ ಇರಬೇಕಾದ ಅಗತ್ಯತೆ ಬಗ್ಗೆ ತಿಳಿಸಿದರು ಹಾಗೂ ಚಟುವಟಿಕೆಗಳ ಹಂತಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಂಪನ್ಮೂಲವನ್ನು ಸಲಹೆಗಳನ್ನಾದರಿಸಿ ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ್ ಭಾಗವತ್ ಸರ್ ಸಂಪನ್ಮೂಲವನ್ನು ಕೊಯೆರ್ ಗೆ ಸೇರಿಸುವ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಯುತ ವೆಂಕಟೇಶ್ ನಾಯಕ್ ಭೇಟಿ ನೀಡಿದರು. ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಅವರು ವಿಷಯ ಪರಿವೀಕ್ಷಕರಿಗೆ ತರಬೇತಿಯ ಬಗ್ಗೆ ಸ್ಥೂಲವಾಗಿ ತಿಳಿಸಿದರು. ಬೆಳಗ್ಗಿನ ಲಘು ಉಪಹಾರದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಮಹಾಬಲೇಶ್ವರ್ ಭಾಗ್ವತ್ ಸರ್ ಪೋಟೋದ ಗಾತ್ರವನ್ನು ಚಿಕ್ಕದಾಗಿಸುವುದು, edit ಮಾಡುವುದು ಮತ್ತು Ubuntu software centre, Interenetನಲ್ಲಿ Thunder bird mail ಬಗ್ಗೆ ತಿಳಿಸಿದರು.ಅದರ ಬಗ್ಗೆ ಪ್ರಾಯೋಗಿಕವಾಗಿ ಸಾಕಷ್ಟು ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮಹಾಬಲೇಶ್ವರ್ ಭಾಗ್ವತ್ ಮತ್ತು ಶ್ರೀಯುತ ಪ್ರಶಾಂತ್ ಮಾರ್ಗದರ್ಶನ ನೀಡಿದರು. ಮಧ್ಯಾಹ್ನದ ಊಟದ ನಂತರದ ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳು ರೂಪಿಸಿದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಇನ್ನಷ್ಟು ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.ಚಟುವಟಿಕೆಗಳು ಜ್ಞಾನ ಮತ್ತು ಜ್ಞಾನದ ರಚನೆ ಮತ್ತು ಪುನರ್ ರಚನೆ ಗೆ ಸಹಾಯಕವಾಗುವ ಬಗ್ಗೆ ವಿವರವಾಗಿ ತಿಳಿಸಲಾಯಿತು.ಆ ನಂತರ ಸಿದ್ಧಪಡಿಸಿದ ಶ್ರಮ ಮತ್ತು ಉದ್ಯೋಗದ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆಗಳು,ಉದ್ದೇಶಗಳು ಮತ್ತು ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಚರ್ಚೆ ಮಾಡಲಾಯಿತು.ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ ತಮ್ಮ ಉಪಯುಕ್ತ ಸಲಹೆಗಳನ್ನು ನೀಡಿದರು.ಇದೇ ರೀತಿ 'ಕುಟುಂಬ',ಪ್ರಾಕೃತಿಕ ವಿಭಾಗಗಳು'climate,soil, Natural vegetation and animals of Karnataka ಪಾಠಗಳಿಗೆ ಸಂಬಂಧಿಸಿದಂತೆ ಸಿದ್ಧ ಪಡಿಸಿದ ಸಂಪನ್ಮೂಲಗಳ ಬಗ್ಗೆ ಚರ್ಚಿಸಲಾಯಿತು. ಮಧ್ಯಾಹ್ನದ ಚಹಾ ವಿರಾಮದ ನಂತರ ನೋಡಲ್ ಅಧಿಕಾರಿ ಶ್ರೀಯುತ ರಂಗಧಾಮಪ್ಪ ಸರ್ CCE ಬಗ್ಗೆ ಚರ್ಚೆ ಆರಂಭಿಸಿದರು. CCE ಯ ಉದ್ದೇಶಗಳು, ಅದನ್ನು ಸರಿಯಾಗಿ ಅಳವಡಿಸಿಕೊಳ್ಳುವ ಬಗ್ಗೆ ,ಕೃತಿ ಸಂಪುಟ ದ ರೂಪುರೇಷೆ ಅದು ಒಳಗೊಂಡಿರಬೇಕಾದ ಅಂಶಗಳ ಬಗ್ಗೆ, spreadsheet ತಯಾರಿಸಿ ಅದನ್ನು ಬಳಸಿಕೊಳ್ಳುವುದರ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಮೊಘಲರು ಪಾಠವನ್ನು ಉದಾಹರಣೆಯಾಗಿ ತೆಗೆದುಕೊಂಡು ,ಅಲ್ಲಿ cceಯನ್ನು ಗಮನದಲ್ಲಿರಿಸಿಕೊಂಡು ಅಳವಡಿಸಿಕೊಳ್ಳಬಹುದಾದ ಚಟುವಟಿಕೆಗಳು,ಮೌಲ್ಯಮಾಪನ ವಿಧಾನದಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.ತದನಂತರ ಸಂಪನ್ಮೂಲ ವ್ಯಕ್ತಿ ಮಹಾಬಲೇಶ್ವರ ಭಾಗ್ವತ್ ರವರು you tube ನಿಂದ ವೀಡಿಯೋವನ್ನು download ಮಾಡಿಕೊಳ್ಳುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.ಇದರೊಂದಿಗೆ STF ತರಬೇತಿಯ ಮೂರನೆಯ ದಿನದ ತರಬೇತಿಯು ಸಂಪನ್ನಗೊಂಡಿತು. ವರದಿಗಾರರು. ಶೇಖರಬೋವಿ ಸಹಶಿಕ್ಷಕರು ಬಾಲಕಿಯರ ಸ.ಪ.ಪೂ ಕಾಲೇಜು ಉಡುಪಿ ಶ್ರೀಮತಿ ಭಾರತಿ ಎಸ್. ಸ.ಪ.ಪೂ ಕಾಲೇಜು ಉಡುಪಿ ಶ್ರೀ ರತ್ನಾಕರ್ ಸ.ಫ್ರೌ. ಶಾಲೆ ಬಿಜೂರು .

5ನೇ ದಿನದ ತರಬೇತಿ

ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಡಯಟ್, ಉಡುಪಿ, ದಿನಾಂಕ:06-12-2013 ಈ ದಿನದ ತರಬೇತಿಯು ಶ್ರೀಮತಿ ವಿಮಲ, ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬೆಳಪು, ಉಡುಪಿ ಇವರ ಚಿಂತನ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ನಾವು ನಕಾರಾತ್ಮಕ ಯೋಚನೆಗಳ ಬದಲು ಸಕಾರತ್ಮಕವಾಗಿ ಯೋಚನೆ ಮಾಡಿದರೆ ಫಲಿತಾಂಶ ಕೂಡ ಸಕಾರಾತ್ಮಕವಾಗಿರುತ್ತದೆ. ಮಕ್ಕಳನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡಿದಾಗ ಕೂಡ ಕೀಳರಿಮೆ ಭಾವನೆ ಬೆಳೆಯುತ್ತದೆ. ಹಾಗಾಗಿ ಮಕ್ಕಳನ್ನು ಪ್ರೋತ್ಸಾಹಿಸಬೇಕೇ ಹೊರತು ಹೋಲಿಕೆ ಮಾಡಬಾರದು ಎಂಬ ವಿಚಾರಗಳು ಚಿಂತನೆಯಲ್ಲಿ ಮೂಡಿ ಬಂತು. ಶ್ರೀ ಶೇಖರ ಭೋವಿ, ಸಹಶಿಕ್ಷಕರು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಉಡುಪಿ ಇವರು ನಾಲ್ಕನೇ ದಿನದ ಸವಿವರ ವರದಿಯನ್ನು ವಾಚಿಸಿದರು. ಮೊದಲ ಅವಧಿಯಲ್ಲಿ ಹಿಂದಿನ ದಿನಗಳಲ್ಲಿ ತಯಾರಿಸಿದ ಸಂಪನ್ಮೂಲಗಳಿಗೆ ಅಂತಿಮ ರೂಪುರೇಷೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಭಾಗ್ವತ್ ಹಾಗೂ ಶ್ರೀಯುತ ಪ್ರದೀಪ ರವರು ಶಿಬಿರಾರ್ಥಿಗಳಿಗೆ ಸಹಕರಿಸಿದರು. ಅಲ್ಪಕಾಲದ ಚಹಾ ವಿರಾಮದ ನಂತರ ನಮ್ಮ ಸಂಪನ್ಮೂಲವನ್ನು ಕೋಯರ್ ಗೆ ಮತ್ತು ಎಸ್ ಟಿ ಎಫ್ ಸಮಾಜ ವಿಜ್ಞಾನ ಗ್ರೂಪ್ ಗೆ ಮತ್ತು ತರಬೇತಿಯ ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರಿಗೆ ಮೇಲ್ ಮಾಡುವುದನ್ನು ನಮ್ಮಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಇವರು ನಾವು ಕಳುಹಿಸಿದ ಮೇಲ್ ಗಳನ್ನು ಪರಿಶೀಲಿಸಿದರು. ಸಂಪನ್ಮೂಲ ವ್ಯಕ್ತಿಗಳು ಮೇಲ್ ಗಳಿಗೆ ವಿವಿಧ ಫೈಲ್ ಗಳನ್ನು ಅಟೇಚ್ಮೆಂಟ್ ಮತ್ತು ಗೂಗಲ್ ಡ್ರೈವ್ ನ ಮೂಲಕ ಅಟೇಚ್ ಮಾಡುವುದನ್ನು ಮತ್ತು ಮೇಲ್ ನಲ್ಲಿರುವ ಅಟೇಚ್ಮೆಂಟ್ ಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿಸಲಾಯಿತು. ನಂತರ ಕೊಯರ್ ನಲ್ಲಿರುವ ವಿವಿಧ ವಿಷಯಗಳನ್ನು ತೋರಿಸುತ್ತಾ ಮತ್ತಷ್ಟು ತಿಳಿದುಕೊಳ್ಳಲು ಆಸಕ್ತಿ ಮೂಡಿಸಿದರು. ಕೊಯರ್ ಗೆ ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ಊಟದ ವಿರಾಮದ ನಂತರ Youtube ನಲ್ಲಿ ವೀಡಿಯೋಗಳನ್ನು ಸರ್ಚ್ ಮಾಡಿ ಅದನ್ನು ನೋಡುವುದು ಮತ್ತು ಡೌನ್ ಲೋಡ್ ಮಾಡುವುದರ ಬಗ್ಗೆ ತಿಳಿಸಿಕೊಟ್ಟರು. ವಿಡಿಯೋಗಳನ್ನು edit ಮಾಡುವುದನ್ನು ಪ್ರಾಯೋಗಿಕವಾಗಿ ಮಾಡಿಸಿದರು. ವಿಡಿಯೋಗಳಲ್ಲಿ ನಮಗೆ ಬೇಕಾದಷ್ಟನ್ನೇ ಬಳಸಿಕೊಳ್ಳುವ ಬಗ್ಗೆ, ಎರಡು ವಿಡಿಯೋಗಳನ್ನು ಸೇರಿಸುವ ಬಗ್ಗೆ , ಆಡಿಯೋ ವಿಡಿಯೋಗಳನ್ನು ಬೇರ್ಪಡಿಸುವ ಬಗ್ಗೆ ಇತ್ಯಾದಿಗಳ ಬಗ್ಗೆ ತಿಳಿಸಲಾಯಿತು. ಸೌಂಡ್ ರೆಕಾರ್ಡ್ ಮಾಡುವ ಬಗ್ಗೆ ಮತ್ತು ಅದನ್ನು ಬಳಸುವ ಬಗ್ಗೆ ತಿಳಿಸಿಕೊಟ್ಟರು. ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿ ಪರೀಕ್ಷಿಸುವುದರ ಮೂಲಕ ನಮಗೆ ತಿಳಿಸಿಕೊಡಲಾಯಿತು. ರೆಕಾರ್ಡ್ ಮಾಡಿದ ಧ್ವನಿಯನ್ನು ಬೇರೆ ವಿಡಿಯೋಗಳಿಗೆ ಹಿನ್ನೆಲೆ ಯಾಗಿ ಕೊಡುವುದನ್ನು ಕೂಡ ಶ್ರೀಯುತ ಪ್ರದೀಪ್ ಸರ್ ಅವರು ಚೆನ್ನಾಗಿ ವಿವರಿಸಿದರು. ಚಹಾ ವಿರಾಮದ ನಂತರ ಕಾರ್ಯಾಗಾರದ ಬಗೆಗಿನ ಅಭಿಪ್ರಾಯ ದಾಖಲಿಸಲು ಎಲ್ಲಾ ಶಿಬಿರಾರ್ಥಿಗಳಿಗೂ ಸೂಚಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಯಿತು. ತದನಂತರ ಯಾದಗಿರಿ ತಂಡದೊಂದಿಗೆ G-TALK ಮಾಡಲಾಯಿತು. ೯ ನೇ ತರಗತಿಯ ಹೊಸ ಪಠ್ಯಪುಸ್ತಕದ ಕುರಿತು ಶಿಕ್ಷಕರ ನಿರೀಕ್ಷೆಗಳನ್ನು ಚರ್ಚಿಸಲಾಯಿತು. ಸಮಸ್ಯೆಗಳನ್ನು ಮತ್ತು ಉತ್ತಮ ಅಂಶಗಳನ್ನು ಪಟ್ಟಿ ಮಾಡಿ ಕೊಯರ್ ಗೆ ಅಪ್ಲೋಡ್ ಮಾಡಲಾಯಿತು. ಕೊನೆಯಲ್ಲಿ ನಡೆದ ಸರಳ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಯಪ್ರಕಾಶ್ ನಾಯಕ್, ಸರ್ಕಾರಿ ಪ್ರೌಢಶಾಲೆ, ತೆಂಕನಿಡಿಯೂರು ಮತ್ತು ಸರ್ಕಾರಿ ಪ್ರೌಢಶಾಲೆ, ಕಾಳಾವರದ ಶಿಕ್ಷಕಿ ಶ್ರೀಮತಿ ಯಶೋದಾ ಅವರು ಅನಿಸಿಕೆಯನ್ನು ಹಂಚಿಕೊಂಡರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಮಹಾಬಲೇಶ್ವರ ಭಾಗ್ವತ್ ಶಿಬಿರಾರ್ಥಿಗಳು ಕಂಪ್ಯೂಟರ್ ನಲ್ಲಿ ಅನ್ವೇಷಣಾ ಮನೋಭಾವನೆಯನ್ನು ಬೆಳೆಸಿಕೊಂಡರೆ ನಾವು ಮುಂದುವರೆಯಲು ಸಾಧ್ಯ ಎಂಬ ಸಲಹೆ ನೀಡಿದರು&ವೇದಿಕೆ ಜೊತೆ ನಿತ್ಯ ಸಂಪರ್ಕದಲ್ಲಿರಲು&ಕೊಯರ್ ಸಂಪನ್ಮೂಲದ ಹಂಚಿಕೆ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ಪ್ರದೀಪ್ ಸರ್ ಅವರು ಅಂತರ್ಜಾಲವನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ತಿಳಿಹೇಳಿದರು. ನೋಡಲ್ ಅಧಿಕಾರಿಯಾಗಿರುವ ಶ್ರೀಯುತ ಶ್ರೀರಂಗಧಾಮಪ್ಪ ಸರ್ ಅವರು ಕೊಯರ್ ಗೆ ಮತ್ತಷ್ಟು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡಲು ಕರೆ ನೀಡಿದರು. ಈ ದಿನ ಕಲಿತ ಎಲ್ಲಾ ವಿಚಾರಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬಂತೆ ನಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ ಬೋಧನೆ ಆಕರ್ಷಕವಾಗುವುದರ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂಬ ಆಶಯದೊಂದಿಗೆ ವರದಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ವರದಿಗಾರರು: ಅಕ್ಷತಾ ಕಿಣಿ ಪಿ, ಸರ್ಕಾರಿ ಪ್ರೌಢಶಾಲೆ, ಕೂಡಬೆಟ್ಟು- ಮಾಳ, ಕಾರ್ಕಳ ತಾ. ಅಖಿಲಾ ಶೆಟ್ಟಿ ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆ, ಎಣ್ಣೆಹೊಳೆ- ಕಾರ್ಕಳ ತಾ. ವೀಣಾ ಆರ್.ಎನ್ ಸರ್ಕಾರಿ ಪ್ರೌಢಶಾಲೆ, ಹೊಸ್ಮಾರು , ಕಾರ್ಕಳ ತಾ.

ಸಮಾಜ ವಿಜ್ಞಾನ stf ತರಬೇತಿ ಹಂತ;02

1 ನೇ ದಿನ,ದಿನಾಂಕ:16/12/2013

ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯ ಮೊದಲ ದಿನದ ವರದಿ. ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯನ್ನು ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್ ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ ಇಮೇಲ್ ID ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ತದನಂತರದಲ್ಲಿ ಶಿಬಿರಾರ್ಥಿಗಳು ತಮ್ಮದೇ ಆದ ಫೊಲ್ಡರ್ ಓಪನ್ ಮಾಡಿಕೊಂಡು ದಾಖಲೆಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಲಾಯಿತು.ಲಿಬೆರಾ ರೈಟರ್ ಬಳಸಿ ಕನ್ನಡ ಟೈಪಿಂಗ್ ನಡೆಸಲಾಯಿತು.ಮದ್ಯಾಹ್ನದ ಅವಧಿಯಲ್ಲಿ ಉಪನ್ಯಾಸಕರಾದ ರಂಗಧಾಮಪ್ಪ ಸರ್ ಮೇಲ್ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರು.ನಂತರ ಅಂತರ್ಜಾಲದಿಂದ ಚಿತ್ರಗಳನ್ನು save ಮಾಡುವ ಬಗ್ಗೆ,ಮಾಹಿತಿಗಳನ್ನು saveಮಾಡುವ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ವರದಿ:ಶ್ರೀಮತಿ ಶಾಲಿನಿ ಶೆಟ್ಟಿ ಸರಕಾರಿ ಪ್ರೌಢಶಾಲೆ ಅಜ್ಜರಕಾಡು,ಉಡುಪಿ