Anonymous

Changes

From Karnataka Open Educational Resources
13,549 bytes added ,  14:01, 17 December 2013
Line 56: Line 56:  
If district has prepared new agenda then it can be shared here
 
If district has prepared new agenda then it can be shared here
   −
==See us at the Workshop==
+
==See us at the Workshop==“ ಡಿಸೆಂಬರ್ ತಿಂಗಳಲ್ಲಿ ಈ ಟ್ರೈನಿಂಗ್ ಗಳು  ಯಾಕಾದ್ರೂ ಬರು ತ್ವಪ್ಪಾ .......... ? ಇದರಿಂದ ಏನಾದ್ರೂ ಉಪಯೋಗ ಉಂಟಾ  ....? ” ,
 +
  ಎಂಬ ಗೊಣಗಾಟದೊಂದಿಗೆ ಉಡು ಪಿ ಡಯಟ್ ನಲ್ಲಿ ಆರಂಭವಾದ  5 ದಿನಗಳ ವಿಜ್ಞಾನ ಶಿಕ್ಷಕರ STF  ತರಬೇತಿಯ ಇಣು ಕು ನೋಟ  ಹಾಗೂ  ಅನಿಸಿಕೆಗಳು ......... ,
 +
  ಎಸ್ ಟಿ ಎಫ್  ತರಬೇತಿಯು ದಿನಾಂಕ: 09-12-13  ರಿಂದ 14-12-13 ೩ರ ವರೆಗೆ ನಡೆಯಿತು. 5 ದಿನಗಳ ತರಬೇತಿಯ ಮಧ್ಯದಲ್ಲಿ 11-12-13 ರಂ ದು ಮೈಸೂರಿನ  ಅರಸು ಮನೆತನದ ಕೊನೆಯ ಕೊಂಡಿಯಾದ ಶ್ರೀ ಶ್ರೀಕಂಠದತದತ್ತ ಒಡೆಯರ್ ರವರು  ದೈವಾಧೀನರಾದ್ದರಿಂದ ಒಂದು ದಿನದ ರಜೆಯ ನಿಮಿತ್ತ ಆರು ದಿನಗಳ ಸಮಯ ಹಿಡಿಯಿತು.
 +
ಆರಂಭದ ಕ್ಷಣ ..........
 +
        ಮೊದಲ ದಿನ ದಿನಾಂಕ 09-12-13 ರಂದು ನೋಡಲ್ ಅಧಿಕಾರಿಯಾದ ಶ್ರೀ ಶಂಕರ್ ಖಾರ್ವಿಯವರು ಶಿಬಿರಾರ್ಥಿಗಳನ್ನು ಸ್ವಾಗತಿಸಿದ ನಂತರ ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಸನ್ನಕುಮಾರ್ ಶೆಟ್ಟಿ,  ಶ್ರೀ ಗುರುಪ್ರಸಾದ್,  ಶ್ರೀ ಗಿರೀಶ್ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಪ್ರದೀಪ್ ಶೆಟ್ಟಿಯವರ ಸಹಯೋಗದೊಂದಿಗೆ ತರಬೇತಿಯು ಆರಂಭಗೊಂಡಿತು.
 +
      ಮೊದಲ ದಿನ ........ ದಂದು  koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ  ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು  . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು  . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು  . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು  .
 +
 
 +
    ಎರಡನೇ ದಿನ......ದ ತರಬೇತಿಯನ್ನು  Free mind tool  ಬಳಸಿ ತಾವು ಆಯ್ಕೆ ಮಾಡಿದ topic ಗೆ    mind map ರಚಿಸಿ ,ವಿವಿಧ ಪರಿಕಲ್ಪನಾ ನಕ್ಷೆಯನ್ನು  ರಚಿಸಿ ಅವುಗಳಿಗೆ  hyperlink ಮಾಡಿದನ್ನು ಕಲಿತೆವು .  ಅಪರಾಹ್ನದ ವೇಳೆಯಲ್ಲಿ ವಿವಿಧ  ಛಾಯಾಚಿತ್ರಗಳನ್ನು  GIMP image editor  Tool ಬಳಸಿ ,ಅದರ ಗಾತ್ರ, ಅಳತೆ ಯನ್ನು ಮತ್ತು crop  ಮಾಡುವ  ವಿಧಾನಗಳನ್ನು ತಿಳಿದು ಅದರ ಉಪಯೋಗಗಳ ಕುರಿತು ಚರ್ಚಿಸಲಾಯಿತು .
 +
      ಮೂರನೇ ದಿನ ,  KOER website ನ್ನು  ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಕ್ಕೆ ಅನುಗುಣವಾಗಿ ,ಹಿಂದಿನ ದಿನ ರಚಿಸಿದ  ಪರಿಕಲ್ಪನೆ  ನಕ್ಷೆಗಳಿಗೆ ಅನುಗುಣವಾಗಿ  ಶಿಕ್ಷಕರ ಟಿಪ್ಪಣಿ, ಅಗತ್ಯವಾದ ಚಟುವಟಿಕೆಗಳು, ಯೋಜನೆಗಳು, ಇತ್ಯಾದಿಗಳನ್ನು ಸಮರ್ಪಕವಾಗಿ ನಮ್ಮಿಂದ ಮಾಡಿಸಲಾಯಿತು . ಅಪರಾಹ್ನ ಪ್ರತಿಯೊಂದು ಗುಂಪಿನವರು ತಾವು ಮಾಡಿದ ಸಂಪನ್ಮೂಲದ ಪಟ್ಟಿಯನ್ನು ಪ್ರೊಜೆಕ್ಟ ಮೂಲಕ ಪ್ರದರ್ಶಿಸಿ ಪರಸ್ಪರ ಚರ್ಚಿಸಿದೆವು  .
 +
    ನಾಲ್ಕನೇ ದಿನ ......ದಂದು  Open Shot Video Editor  Tool ಬಳಸಿ ಸಂಪನ್ಮೂಲ ವಿಡಿಯೋವನ್ನು ಮೊಡಿಫೈ ಮಾಡಿ ನಮ್ಮದೇ ಆದ video  ಹಾಗೂ audio  ಸೇರಿಸುವುದನ್ನು ಕಲಿತೆವು .  sound & videoದ Kdenlive ನಲ್ಲಿ ವಿಡಿಯೋ ತಂದು, ವಿಡಿಯೋ ಮತ್ತು ಆಡಿಯೋ ಭಾಗಗಳನ್ನು ಬೇರ್ಪಡಿಸಿ, ವಿಭಿನ್ನ ಟೂಲ್ ಗಳ ಮೂಲಕ ಎಡಿಟ್ ಮಾಡಿದೆವು. 
 +
ಅಪರಾಹ್ನ ಶ್ರೀ ಶಂಕರ್ ಖಾರ್ವಿಯವರು CCE ಯ ಕುರಿತು power point presentation  ಮಾಡಿ, CCE ವಿಧಾನವನ್ನು ಶಾಲೆಗಳಲ್ಲಿ  ಅನುಷ್ಟಾನಗೊಳಸಿರುವ ಶಿಕ್ಷಕರಿಂದ ಹಿಮ್ಮಾಹಿತಿ , ಅನುಭವಗಳನ್ನು ಪಡೆದು ಸಮಸ್ಯೆ ಹಾಗೂ ಸಂಶಯಗಳನ್ನು ಪರಿಹರಿಸಿದರು .
 +
 
 +
    ಐದನೇ ದಿನ ...... ದಲ್ಲಿ ಸಂಪನ್ಮೂಲದ ತಾಳೆಪಟ್ಟಿಗೆ  header ಮತ್ತು  footer  ಉಪಯೋಗಿಸಿ ಸಂಪನ್ಮೂಲ ವಿಷಯ, ರಚಿಸಿದವರ ಹೆಸರು ಹಾಗೂ ಪುಟ ಸಂಖ್ಯೆಯನ್ನು ಹಾಕಿದೆವು. ನಂತರ ತಾಳೆಪಟ್ಟಿಗೆ format ನ್ನು ಉಪಯೋಗಿಸಿ heading ಮತ್ತು  numbering ಮಾಡಿ ಒಂದು ಅರ್ಥಪೂರ್ಣ ಪರಿವಿಡಿ  ರಚಿತವಾಯಿತು. ಈ ಕಲಿಕೆಯಿಂದ  ನಮಗೆ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ರಚನೆಗೆ ಸಹಾಯವಾಗುತ್ತದೆ.
 +
ಅಪರಾಹ್ನ Picasa tool  ಬಳಸಿ ಛಾಯಾಚಿತ್ರಗಳನ್ನು upload ಮಾಡುವ ವಿಧಾನ ಮತ್ತು ಅದರ link ನ್ನು  email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ಪ್ರಸನ್ನಕುಮಾರ್ ಶೆಟ್ಟಿ,ಯವರು ತಿಳಿಸಿದರು .
 +
      ನಂತರ video ಗಳನ್ನು  youtube  ಗೆ upload ಮಾಡುವ ವಿಧಾನವನ್ನು  ಗುರುಪ್ರಸಾದ್ ರವರು ತಾವು ರಚಿಸಿದ THE SUN  video ವನ್ನು  youtube  ಗೆ upload  ಮಾಡಿ ಅದರ link ನ್ನು  email-id ಗೆ copy - paste ಮಾಡಿ ಇತರರೊಂದಿಗೆ ಹಂಚಿಕೊಳ್ಳುವ ವಿಧಾನವನ್ನು ತಿಳಿಸಿದರು .ನಂತರ ತರಬೇತಿ ತಂಡದ`  group  photo  ತೆಗೆದು ಸಮಾರೋಪದೊಂದಿಗೆ ತರಬೇತಿಯನ್ನು ಮುಗಿಸಲಾಯಿತು .
 +
 
 +
                          ****          ಸು ಚೇತಾ, ವೀಣಾ ಮತ್ತು ಪ್ರತಿಮಾ                  ****
 +
 
 +
        The STF training for science teacher of udupi district was really amazing. Yes! It made us to look the teaching learning process  in a different perspective.  In the training we came to know about many subjects like openshot video, zimp editor,hyperlinking the documents,linking photos and videos etc, which improved our knowledge &skills.The most amazing thing we have learnt is the openshot video technique,with this we can edit the video &add our own voice to that.This will made our teaching  very effective and easy.So we need not have to worry about the completion of syllabus.one more thing we learnt is the zimp editor,using this we can shape the pictures as we wish.It will help us in many cases.So we can say that the things we learnt in the training will definitely strengthen our teaching if we use it in the classroom.Overall the training was very informative.Thanks for the training.we expect manymore trainings like this in future days.
 +
     
 +
                        ****    Nalini Bhat & Prema 
 +
 
 +
 
 +
 
 +
ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಕಿರು ಅನಿಸಿಕೆ ......
 +
        ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ  ಒಟ್ಟು ೩೦ STFವಿಜ್ಞಾನ ಶಿಕ್ಷಕರು ಈ ಸಾಲಿನ  ಮೊದಲ ಬ್ಯಾಚ್ ನ ೫ ದಿನಗಳ  ತರಬೇತಿಯನ್ನು  ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು  DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು .
 +
 
 +
ಕಳೆದ ಸಾಲಿನ ತರಬೇತಿಗೆ ಹೋಲಿಸಿದರೆ , ಈ ಸಾಲಿನ ತರಬೇತಿಗೆ ಬಂದ ಅದೇ ಶಿಕ್ಷಕರ computer aided science teaching  ಕುರಿತಾದ ಮನೋಭಾವನೆಯು ಧನಾತ್ಮಕವಾಗಿರುವುದು ಗಮನಾರ್ಹ . ಶಾಲಾ  computer ಗಳ ಸ್ಥಿತಿ ಅಯೋಮಯವಾಗಿದ್ದರೂ , ಅದನ್ನು ಬದಿಗಿಟ್ಟು ತಮ್ಮದೇ ಆದ LAPTOP ಖರೀದಿಸಿ ,  OBUNTU instal  ಮಾಡಿ ವಿವಿಧ Tool ಗಳನ್ನು ಬಳಸುವ ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.
 +
ಇಡೀ ೫ ದಿನಗಳ ತರಬೇತಿಯ agenda ದ ಪ್ರತೀ ಅಂಶಗಳ  ಕಲಿಕೆಯಲ್ಲಿ  ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ರೀತಿ , ನಾವು ರಾಜ್ಯ ಮಟ್ಟದಲ್ಲಿ ಪಡೆದ ತರಬೇತಿ ಹಾಗೂ ನಮ್ಮ ಸಂಪನ್ಮೂಲ ಕಡಿಮೆಯೇ ಅನಿಸುತಿತ್ತು . ಅಷ್ಟರ ಮಟ್ಟಿಗೆ ನಮ್ಮ ಸಂಪನ್ಮೂಲ ಶಿಕ್ಷಕರ ತಂಡವನ್ನು ತರಬೇತಿ ಶಿಕ್ಷಕರು ಬಳಸಿಕೊಂಡರು .
 +
ತರಬೇತಿಯ ಅವಧಿಯಲ್ಲಿ ಅನೇಕ ಶಿಕ್ಷಕರು ಹೊಸ  LAPTOP ಖರೀದಿಸಿ ತಂದದ್ದು, ಈಗಾಗಲೇ ತಮ್ಮಲ್ಲಿರುವ  LAPTOP ಗಳಿಗೆ OBUNTU instal  ಮಾಡಲು ಹಾತೊರೆಯುತಿದ್ದ ರೀತಿ ನೋಡುತಿದ್ದರೆ .....  OBUNTU ಬಗ್ಗೆ ಮೂಗು ಮುರಿಯುವ ಈ ಹಿಂದಿನ  ಭಾವನೆ ತೊಲಗಿ , ಅದು teacher's friendly software ಆಗುತ್ತಿರುವುದು ಸಂತಸ ತಂದಿದೆ  .  ಶಿಕ್ಷಕರು ತಂದ ಎಲ್ಲಾ  LAPTOP ಗಳಿಗೆ OBUNTU instalation ಮಾಡಿದ ಪ್ರಸನ್ನಕುಮಾರ್ ಶೆಟ್ಟಿ,  ಹಾಗೂ  ಪ್ರದೀಪ್ ಶೆಟ್ಟಿ  ಕಾರ್ಯ ಶ್ಲಾಘನೀಯ .
 +
ಕೊನೆಯ ದಿನದ ಸಮಾರೋಪದ .......ತರಬೇತಿ ಶಿಕ್ಷಕರ ಅನಿಸಿಕೆಯಲ್ಲಿ , ಸ.ಪ್ರೌ ಶಾಲೆಯ ಶಿಕ್ಷಕ ಸದಾನಂದ ಶೆಟ್ಟಿ  ಯವರು ಮಾರ್ಮಿಕವಾಗಿ  ಶಿಕ್ಷಕರಿಗೆ computer aided science teaching ನ ಇಂದಿನ ಅಗತ್ಯ ಹಾಗೂ ಇತರ ಹೊಸ ಶಿಕ್ಷಕರಿಗೂ ಈ ತರಬೇತಿಯ ವಿಸ್ತರಣೆಯ ಬೇಡಿಕೆಯನ್ನು ಮಂಡಿಸಿದರು .
 +
ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಸ್ವಂತ computer ಖರೀದಿಗೆ ಇರುವ ಇಲಾಖಾ ಸುತ್ತೋಲೆಯ ಪ್ರತಿಯನ್ನು ಸಂಗ್ರಹಿಸಿ ಸಮಾರೋಪದಂದು ಶಿಕ್ಷಕರಿಗೆ ನೀಡಿದ ಶ್ರೀ ಶಂಕರ್ ಖಾರ್ವಿಯವರ ಕಾಳಜಿಯನ್ನು  ಪ್ರಂಶಸಿಸಲೇಬೇಕು.
 +
MRP ಯಾಗಿ ಭಾಗವಹಿಸಿದ್ದ ನಾನು , ನನಗೆ ಸಮರ್ಪಕವಾಗಿ ತಿಳಿದಿರದ ವಿಚಾರಗಳನ್ನು ಇತರ  MRP ಶಿಕ್ಷಕ ರುಗಳಾದ  ಗಿರೀಶ್ ಕುಮಾರ್ , ಪ್ರಸನ್ನಕುಮಾರ್ ಶೆಟ್ಟಿ,  ಹಾಗೂ ಪ್ರದೀಪ್ ರವರಿಂದ ತಿಳಿಯಲು ಸಹಕಾರಿಯಾಯಿತು .
 +
                                 
 +
                                *******  ಗು ರು ಪ್ರಸಾದ್ ಹೆಚ್ ********
 
{{#widget:Picasa
 
{{#widget:Picasa
 
|user=
 
|user=
29

edits