Changes
From Karnataka Open Educational Resources
12,910 bytes added
, 13:57, 7 January 2014
Line 48: |
Line 48: |
| | | |
| ==Workshop short report== | | ==Workshop short report== |
− | Upload workshop short report here (in ODT format)
| |
| | | |
| + | ಗಣಿತ ವಿಷಯ ಶಿಕ್ಷಕರ ವೇದಿಕೆ (STF) ಕಾರ್ಯಾಗಾರದ ವರದಿ 2013 - 14 |
| + | |
| + | ಸ್ಥಳ:ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಉಡುಪಿ |
| + | |
| + | STF ತರಬೇತಿ ತಂಡ : 01 |
| + | |
| + | ಶಿಬಿರಾರ್ಥಿಗಳ ಸಂಖ್ಯೆ :25 |
| + | |
| + | ವರದಿ ದಿಕ್ಸೂಚಿ :ವರದಿ-1 ವರದಿ-2 ವರದಿ-3 ವರದಿ-4 ವರದಿ-5 |
| + | |
| + | '''ಮೊದಲನೇ ದಿನದ ವರದಿ : 23-12-2013 ಸೋಮವಾರ''' |
| + | |
| + | ದಿನಾಂಕ: 23-12-2013 ರಂದು ಬೆಳಿಗ್ಗೆ 9:30ಕ್ಕೆ ಶಿಬಿರಾರ್ಥಿಗಳು ಆಗಮಿಸಿದರು. ಶ್ರೀ ಗಣೇಶ್ ಶೆಟ್ಟಿಗಾರ್ ರವರು ಆಗಮಿಸಿರುವ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ್ ಶೆಟ್ಟಿಗಾರ್, ಶ್ರೀ ಉಮೇಶ್ ಹಾಗೂ ಶ್ರೀ ಪ್ರದೀಪ್ ರವರು ಶಿಬಿರಾರ್ಥಿಗಳಿಗೆ ತಮ್ಮ ಇ-ಮೇಲ್ ಚೆಕ್ ಮಾಡಲು ತಿಳಿಸಿದರು. ಇ-ಮೇಲ್ ಐಡಿ ಇಲ್ಲದವರಿಗೆ ಐಡಿ creat ಮಾಡಲು ತಿಳಿಸಿದರು. ನಂತರ participation form ಭರ್ತಿ ಮಾಡಿ send ಮಾಡುವುದನ್ನು ತಿಳಿಸಿಕೊಟ್ಟರು. ನಂತರ ಗಣೇಶ್ ಶೆಟ್ಟಿಗಾರ್ ತರಬೇತಿಯ ಉದ್ದೇಶ ಮತ್ತು KOER ನ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ನಂತರ ಶಿಬಿರಾರ್ಥಿಗಳಿಗೆ mind map ತಯಾರಿಸಲು 9ನೇ ತರಗತಿಯ ಪ್ರಸ್ತುತ ಪಠ್ಯಕ್ರಮದ ಅಧ್ಯಾಯಗಳನ್ನು ಹಂಚಲಾಯಿತು |
| + | |
| + | ಶ್ರೀ ಉಮೇಶ್ ಹಾಗೂ ಶ್ರೀ ಪ್ರದೀಪ್ ರವರು ಶಿಬಿರಾರ್ಥಿಗಳಿಗೆ ಅವರ ಮೇಲ್ ಗಳನ್ನು ಪರೀಕ್ಷಿಸಲು ತಿಳಿಸಿದರು. ಅವಶ್ಯವಿರುವ ಮಾಹಿತಿಗಳನ್ನು save ಮಾಡುವುದು, star ಗುರುತಿನಿಂದ ಗುರುತಿಸುವುದು. ಬೇಡವಾದ ಮಾಹಿತಿಗಳನ್ನು delete ಮಾಡುವುದು ಇದನ್ನೆಲ್ಲಾ ತಿಳಿಸಿದರು. ಹಾಗೆಯೇ file attach ಮಾಡಿ ಮೇಲ್ ಕಳುಹಿಸುವುದನ್ನು ತಿಳಿಸಿದರು. |
| + | |
| + | ಶ್ರೀ ಗಣೇಶ್ ಶೆಟ್ಟಿಗಾರ್ ರವರು ತಾವು ತಯಾರಿಸಿದ GeoGebra file ಗಳನ್ನು ಪ್ರಸ್ತುತ ಪಡಿಸಿದರು. ಹಾಗಯೇ ನಮಗೆಲ್ಲರಿಗೂ GeoGebra tool ಅನ್ನು recall ಮಾಡಿಕೊಟ್ಟು , ಅಭ್ಯಾಸ ಮಾಡುವಂತೆ ತಿಳಿಸಿದರು. ಹಾಗಯೇ ನಾವು ತಯಾರಿಸಿದ file ಗಳನ್ನು attach ಮಾಡಿ ಮೇಲ್ ಮಾಡಲು ತಿಳಿಸಿದರು. ಸಮಯ ಸಂಜೆ 5.30ಕ್ಕೆ ಮೊದಲ ದಿನದ ತರಬೇತಿಯು ಮುಕ್ತಾಯವಾಯಿತು. |
| + | |
| + | '''ಎರಡನೇ ದಿನದ ವರದಿ : 26-12-2013 ಗುರುವಾರ''' |
| + | |
| + | S.T.F. ತರಭೇತಿಯ ಎರಡನೇ ದಿನವಾದ ಇಂದಿನ ಪೂರ್ವಾಹ್ನದ ಅವಧಿಯನ್ನು 9.30ಕ್ಕೆ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ ಶೆಟ್ಟಿಗಾರ ಇವರು ಎಲ್ಲರನ್ನೂ ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು.ಕಂಪ್ಯೂಟರ್ faculty ಪ್ರದೀಪ್ ಸರ್ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಉಮೇಶ ಅವರ ಉಪಸ್ಥಿತಿಯಲ್ಲಿ ಪ್ರತಿ ಗುಂಪಿಗೂ ಒಂದೊಂದು ಘಟಕವನ್ನು ನೀಡಿ,ಮೈಡ್ ಮ್ಯಾಪ್‌ನ್ನು ರಚಿಸಲಾಯಿತು. ಪಾಠ ಬೋಧನೆಯ ಸಂದರ್ಭದಲ್ಲಿ ಬೇಕಾಗುವ web linkನ್ನು ಹಾಗೂ pictures ನ್ನು libra office ನಲ್ಲಿ paste ಮಾಡುವ ವಿಧಾನವನ್ನು ತಿಳಿದೆವು.ವೆಬ್ ಲಿಂಕನ್ನು openಮಾಡುವ ವಿಧಾನ ತಿಳಿದೆವು. page ನ್ನು desktop ನಲ್ಲಿ ಸೇವ್ ಮಾಡುವ ವಿಧಾನ ಕಲಿತೆವು.picturesನ್ನು libra officeನಲ್ಲಿ incert ಮಾಡುವ ವಿಧಾನ ತಿಳಿಸಿಕೊಡಲಾಯಿತು.Geogebra ದಲ್ಲಿ ಚತುರ್ಮುಖ ಘನ ಹಾಗೂ ಪೈಥಾಗೋರಸನ ಪ್ರಮೇಯವನ್ನು ರಚಿಸಿ, stf group ಗೆ ಮೇಲ್ ಮಾಡಲಾಯಿತು.Geogebratube ನ ಬಳಕೆ,ಸಂಪನ್ಮೂಲಗಳನ್ನು ಹುಡುಕುವ ಬಗೆ ಹಾಗೂ download ಮಾಡಿ save ಮಾಡುವ ವಿಧಾನವನ್ನು ತಿಳಿಸಿಕೊಡಲಾಯಿತು. |
| + | |
| + | '''ಮೂರನೇ ದಿನದ ವರದಿ : 27-2-2013 ಶುಕ್ರವಾರ''' |
| + | |
| + | ತರಬೇತಿಯ 3ನೇ ದಿನ ಬೆಳಗ್ಗಿನ ಮೊದಲ ಅವಧಿಯಲ್ಲಿ ಶ್ರೀ ಉಮೇಶ್ ಸರ್ KOER ಕುರಿತಾದ ಮಾಹಿತಿಯನ್ನು ಸವಿವರವಾಗಿ ನೀಡಿದರು.ಈ ಅವಧಿಯಲ್ಲಿ KOER ಎಂದರೇನು?ಅದನ್ನು ತೆರೆದು ಮಾಹಿತಿಯನ್ನು ಪಡೆಯುವ ವಿಧಾನ ಮತ್ತು ನಮ್ಮ ಕೊಡುಗೆಯನ್ನು ನೀಡುವ ವಿಧಾನವನ್ನು ಸವಿಸ್ತಾರವಾಗಿ ತಿಳಿಸಿದರು.ಇವರೊಂದಿಗೆ ಶ್ರೀ ಗಣೇಶ್ ಶೆಟ್ಟಿಗಾರ್ ಹಾಗೂ ಶ್ರೀ ಪ್ರದೀಪ್ ಈ ನಡುವೆ ಶಿಬಿರಾರ್ಥಿಗಳಿಗೆ ಸೂಕ್ತಸಲಹೆ ಸೂಚನೆಗಳನ್ನು ನೀಡುತ್ತಿದ್ದರು.ಎರಡನೇ ಅವಧಿಯಲ್ಲಿ ಶಿಬಿರ ನಿರ್ದೇಶಕರಾದ ಶ್ರೀ ಶಂಕರ ಖಾರ್ವಿಯವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ,ಶಿಕ್ಷಕರಿಗೆ ಪಾಠ ಚಟುವಟಿಕೆಯಲ್ಲಿ KOER ನ ಮಹತ್ವದ ಕುರಿತು ತಿಳಿಸಿದರು.ನಂತರ ಪಾಠ ಚಟುವಟಿಕೆಯಲ್ಲಿ ಸಂಪನ್ಮೂಲಗಳ ಕ್ರೋಢೀಕರಣದ ಹಂತಗಳನ್ನು ಉಮೇಶ್ ಸರ್ ವಿವರಿಸಿದರು. |
| + | |
| + | ಊಟದ ವಿರಾಮದ ನಂತರ ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು ತಮ್ಮ ತಂಡದಲ್ಲಿ 9 ನೇ ತರಗತಿಯ ಒಂದೊಂದು ಘಟಕದ ಘಟಕ ರೂಪುರೇಷೆಗಳನ್ನು ಸಿದ್ಧಪಡಿಸಿದರು.5.30ಕ್ಕೆ ಸರಿಯಾಗಿ ಮೂರನೇ ದಿನದ ಅವಧಿಯು ಮುಕ್ತಾಯವಾಯಿತು. |
| + | |
| + | '''ನಾಲ್ಕನೇ ದಿನದ ವರದಿ : 28-12-2013 ಶನಿವಾರ''' |
| + | |
| + | ನಾಲ್ಕನೇ ದಿನದ ಮೊದಲನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಗಣೇಶಶೆಟ್ಟಿಗಾರರವರು ಜಿಯೊಜಿಬ್ರಾದಲ್ಲಿ ಕೋನಗಳ ವಿಧಗಳನ್ನು ಯಾವ ರೀತಿಯಲ್ಲಿ ತರಗತಿಯಲ್ಲಿ ಪ್ರಸ್ತುತ ಪಡಿಸುವದೆಂದು ಉದಾಹರಣೆಯೊಂದಿಗೆ ವಿವರಿಸಿದರು. |
| + | |
| + | ಚಹಾದ ವಿರಾಮದ ನಂತರ ಶ್ರೀ ಪ್ರದೀಪರವರು ಇಂಟರನೆಟ್ ಮೂಲಕ ವಿಡಿಯೊವನ್ನು modify ಮಾಡಿ ನಮ್ಮದೇ ಆದ video ಹಾಗೂ audio ಸೇರಿಸುವುದನ್ನು ತಿಳಿಸಿದರು. Sound and video ದಿಂದ Kdenline ನಲ್ಲಿ video ತಂದು video and audio ಭಾಗಗಳನ್ನು ಬೇರ್ಪಡಿಸಿ ವಿಭಿನ್ನ ಟೂಲ್ಗಳ ಮೂಲಕ edit ಮಾಡುವ ವಿಧಾನ ತಿಳಿಸಿದರು.ಬಳಿಕ ಅವರು stellarium ಬಳಸಿ ಗ್ರಹಗಳ ಮಾಹಿತಿ ನೋಡುವುದನ್ನು ತಿಳಿಸಿದರು. |
| + | |
| + | ಮಧ್ಯಾಹ್ನದ ಮೊದಲ ಆವಧಿಯಲ್ಲಿ formula ವನ್ನು geogebra ದಲ್ಲಿ ಯಾವ ರೀತಿ ಬಳಸುವುದು ಎಂಬುದನ್ನು 3 ಚಟುವಟಿಕೆಗಳ ಮೂಲಕ ವಿಸ್ತಾರವಾಗಿ ತಿಳಿಸಿಕೊಟ್ಟರು. |
| + | |
| + | ನಂತರದ ಅವಧಿಯಲ್ಲಿ ಶ್ರೀ ಗಣೇಶ ಶೆಟ್ಟಿಗಾರರವರು CCE records ಅನ್ನು micro soft excel software ಬಳಸಿ ಸರಳವಾಗಿ ನಿಭಾಯಿಸುವುದನ್ನು ತಿಳಿಸಿಕೊಟ್ಟರು. |
| + | |
| + | '''ಐದನೇ ದಿನದ ವರದಿ : 29-12-2013 ಭಾನುವಾರ''' |
| + | |
| + | ದಿನಾಂಕ :29-12-2013 ರಂದು 5ನೇ ದಿನದ ತರಬೇತಿಯು ನಡೆಯಿತು. ಪೂರ್ವಾಹ್ನದ ಅವಧಿಯಲ್ಲಿ DIETನ ಉಪ ಪ್ರಾಂಶುಪಾಲರು ಹಾಗೂ ತರಬೇತಿಯ ಮಾರ್ಗದರ್ಶಕರಾದ ಶ್ರೀಯುತ ಶಂಕರ್ ಖಾರ್ವಿ ಯವರನ್ನು ವಿಷಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಗಣೇಶ್ ಶೆಟ್ಟಿಗಾರ್ ರವರು ಸ್ವಾಗತಿಸಿದರು. |
| + | |
| + | ಪೂರ್ವಾಹ್ನದ ಮೊದಲ ಅವಧಿಯಲ್ಲಿ ಶ್ರೀಯುತ ಶಂಕರ್ ಖಾರ್ವಿ ಯವರು CCE ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದರೇನು ? ಏಕೆ ? ಎಂಬುದನ್ನು ಶಿಬಿರಾರ್ಥಿಗಳ ಜೊತೆ ಚರ್ಚಿಸಿ ವಿಷಯ ಮಂಡನೆ ಮಾಡಿದರು. ಶಿಕ್ಷಕರು ತರಗತಿ ಬೋಧನೆಗೆ ಮೊದಲು ಉದ್ದೇಶಗಳ ಬಗ್ಗೆ ಪರಿಣತಿ ಹೊಂದಿರಬೇಕು, ಈ ಉದ್ದೇಶಗಳು ವಿದ್ಯಾರ್ಥಿಗಳಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ತಂದಿರುತ್ತದೆ ಎಂಬುದನ್ನು ತಿಳಿಯಲು ಈ ಮೌಲ್ಯಮಾಪನ ವಿಧಾನವು ಸಹಕಾರಿಯಾಗಿದೆ ಎಂಬುದನ್ನು ಮನದಟ್ಟು ಮಾಡಿದರು.” Education is not learning ;Education is exercise and development of mind.”- Princeton Review. ಹಾಗೂ ನಮ್ಮ ಸಂವಿಧಾನದ ಧ್ಯೇಯ ವಾಕ್ಯಗಳನ್ನು ಉದಾಹರಿಸುತ್ತಾ PPT ಮೂಲಕ ವಿವರಣಾತ್ಮಕ ಉಪನ್ಯಾಸ ನೀಡಿದರು. |
| + | |
| + | ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಉಮೇಶ್ ರವರು Photo upload ಮಾಡಿ email ಮೂಲಕ ಕಳುಹಿಸುವ ಬಗ್ಗೆ ಹಾಗೂ ಶ್ರೀ ಗಣೇಶ್ ಶೆಟ್ಟಿಗಾರ್ ರವರು Hyperlink ನೀಡುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಿಬಿರಾರ್ಥಿಗಳೆಲ್ಲರೂ ಲವಲವಿಕೆಯಿಂದ ಚಟುವಟಿಕೆಯಲ್ಲಿ ತೊಡಗಿಕೊಂಡರು. |
| + | |
| + | ಅಪರಾಹ್ನದ ಅವಧಿಯಲ್ಲಿ ಶ್ರೀ ಗಣೇಶ್ ಶೆಟ್ಟಿಗಾರ್ ರವರು Document ನಲ್ಲಿ Video upload ಮಾಡುವ ವಿಧಾನವನ್ನು ವಿವರಿಸಿದರು.ಶಿಬಿರಾರ್ಥಿಗಳ ಗುಂಪು ಛಾಯಾಚಿತ್ರವನ್ನು ತೆಗೆದ ನಂತರ ಸಮಾರೋಪ ಸಮಾರಂಭ ವನ್ನು ಏರ್ಪಡಿಸಲಾಯಿತು. ಅಧ್ಯಕ್ಷತೆಯನ್ನು DIETನ ಉಪ ಪ್ರಾಂಶುಪಾಲರು ಹಾಗೂ ತರಬೇತಿಯ ಮಾರ್ಗದರ್ಶಕರಾದ ಶ್ರೀಯುತ ಶಂಕರ್ ಖಾರ್ವಿ ಯವರು ವಹಿಸಿದರು. ಶಿಬಿರಾರ್ಥಿಗಳು ತಮ್ಮ ತೃಪ್ತಿಕರ ಅನಿಸಿಕೆ ವ್ಯಕ್ತಪಡಿಸುವುದರೊಂದಿಗೆ ತರಬೇತಿ ಕಾರ್ಯಾಗಾರವು ಯಶಸ್ವಿ ಯಾಗಿ ಮುಕ್ತಾಯವಾಯಿತು. |
| | | |
| =Science= | | =Science= |