STF 2014-15 Bangalore Rural

From Karnataka Open Educational Resources
Jump to navigation Jump to search

Head Teachers

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

ಮೊದಲ ದಿನದ ವರದಿ

ದಿನಾಂಕ;೦೮-೧೨-೨೦೧೪ ರಂದು ಬೆಳಗ್ಗೆ ೧೧ ಗಂಟೆಗೆ ಮಾನ್ಯ ಉಪನಿರ್ದೇಶಕರಾದ ಶ್ರೀ.ಮಾದೇಗೌಡರವರು ಕಾರ್ಯಾಗಾರವನ್ನು ಉದ್ಘಾಟನೆ ಮಾಡುವ ಮೂಲಕ ಮುಖ್ಯ ಶಿಕ್ಷಕರ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ನಂತರದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಮಂಜುನಾಥ ಮತ್ತು ಶ್ರೀ.ಮೋಹನ್ ಕುಮಾರ್ ರವರು ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಸದ್ಬಳಕೆಯ ಕುರಿತು ಇಂದಿನ ಪೀಳಿಗೆಗೆ ಅವಶ್ಯಕತೆಯಿರುವ ಸಂದರ್ಭಗಳು ಮತ್ತು ಬಳಸಿಕೊಳ್ಳುತ್ತಿರುವ ಕ್ಷೇತ್ರಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮದ್ಯಾಹ್ನದ ಅವಧಿಯಲ್ಲಿ ಪ್ರತಿಯೊಬ್ಬ ಮುಖ್ಯ ಶಿಕ್ಷಕರ ಇ ಮೇಲ್ ಐ ಡಿ ಯನ್ನು ತೆರೆಯುವ ಮತ್ತು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿ ಪ್ರತಿಯೊಬ್ಬರಿಂದ ಪ್ರಾಯೋಗಿಕವಾಗಿ ಸ್ವತಃ ತಾವೇ ಕಂಪ್ಯೂಟರ್ ನಲ್ಲಿ ಮೇಲ್ ಮಾಡುವಂತೆ ತರಬೇತಿ ನೀಡಿ ಕಲಿಕೆಯ ಕಾರ್ಯಗತಗೊಳಿಸಲಾಯಿತು. ಸಂಜೆ ೫.೩೦ ಕ್ಕೆ ತರಬೇತಿ ಗುಂಪುಗಳಿಗೆ ೫ ದಿನಗಳ ವಿಷಯವನ್ನು ಹಂಚಿಕೆ ಮಾಡಿ , ಒಂದೊಂದು ದಿನದ ತರಬೇತಿಯ ವರದಿಯನ್ನು ಮರು ದಿನ ತರಬೇತಿಯಲ್ಲಿ ಮಂಡಿಸುವಂತೆ ಮಾರ್ಗದರ್ಶನ ನೀಡಿ ಈ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

ಮೂರನೇ ದಿನದ ವರದಿ

ದಿನಾಂಕ 10.12.14 ರ ಬೆಳಿಗ್ಗೆ 10 ಗಂಟೆಗೆ ತರಬೇತಿ ಆರಂಭವಾಯಿತು. ಹಿಂದಿನ ದಿನದ ಹಿಮ್ಮಾಹಿತಿಯನ್ನು ಪಡೆದ ನಂತರ, ದಿನದ ಪ್ರಕ್ರಿಯೆ ಪ್ರಾರಂಭವಾಯಿತು.. ಶ್ರೀ ವೀರೇಂದ್ರ ತೋಟಗಾರ್ ರವರು TCT ,DCT ಗಳ ರಚನೆಯನ್ನು ತಿಳಿಸಿದರು. ಿದು ಹತ್ತನೇ ತರಗತಿಯ ಮುಖ್ಯವಾದ ಕಲಿಕಾಂಶ ಆಗಿದೆ. ಪ್ರತೀ ಪ್ರಶ್ನೆ ಪತ್ರಿಕೆ ಗಳಲ್ಲಿ ಕಡ್ಡಾಯವಾಗಿ ಕೇಳಲಾಗುವ ಪ್ರಶ್ನೆ ಆಗಿದೆ. ಮಧ್ಯಾಹ್ನದ ಾವಧಿಯಲ್ಲಿ ಕೋನಗಳ ರಚನೆ, ತ್ರಿಭುಜಗಳ ರಚನೆ, ಕೋನಗಳನ್ನು ಾಳೆಯುವುದು. ಾವುಗಳ ಾನಿಮೇಷನ್, ಬಗ್ಗೆ ಶ್ರೀ ಕೊಟ್ರೇಶ್ ರವ ರು ತಿಳಿಸಿದರು. ನಂತರ ಬಹುಭುಜಾಕ್ರುತಿಗಳ ಬಗ್ಗೆ ತಿಳಸಿದರು. ಾವುಗಳ ಾನಿಮೇಷನ್ ನಿಂದ ಬೋಧಿಸಿದರೆ ಬೋಧನೆ ಕಲಿಕೆ ಸುಲಭವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದ್ ,ಶ್ರೀ ಸತೀಷ್ ರವ ರು ಶಿಕ್ಷಕರಿಗೆ ಸದರಿ ಟೂಲ್ ಗಳ ಬಳಕೆಯಲ್ಲಿ ಸಹಕರಿಸಿದರು. KOER ನ ುಪಯುಕ್ತತೆ ಬಗ್ಗೆ ಶ್ರೀ ವೀರೇಂದ್ರ ತೋಟಗಾರ್ ರವರು ತಳಿಸಿದರು. ೆಂದಿನಂತೆ ಚಹ ಭೋಜನದ ವ್ಯವಸ್ಥ ು್ತ್ತಮವಆಗಿತ್ತು. ನಾಲ್ಕನೇ ದಿನದಲ್ಲಿ ಕಲಿಕಾಂಶ ಗಳ ಬಗ್ಗೆ ಕುತೂಹಲದಿಂದ 3ನೇ ದಿನದ ತರಬೇತಿ ಮುಗಿಯಿತು.

4ನೇ ದಿನದ ವರದಿ

ದಿನಾಂಕ: 11/12/2014 ರಂದು ಬೆಳಗಿನ ಅವಧಿಯಲ್ಲಿ ಶ್ರೀ ಮೋಹನ್ ಕೂಮಾರ್. ಮು.ಶಿಕ್ಷಕರು/ಸಂ.ಶಿಕ್ಷಕರು,ಸ.ಪ್ರೌ.ಶಾಲೆ, ಎಲೆಕ್ಯಾತನಹಳ್ಳಿ. ರವರು ಶಿಭಿರಾರ್ಥಿಗಳನ್ನು 4ನೇ ದಿನದ ತರಬೇತಿಗೆ ಸ್ವಾಗತಿಸುತ್ತಾ ,ವಿಷಯ ವೇದಿಕೆಯಲ್ಲಿ ಶ್ರೀ ತಿಪ್ಪೇಶ್ ಮುಖ್ಯಶಿಕ್ಷಕರು, ಕಾಳಜಿವಲಯ & ಪ್ರಭಾವ ವಲಯದ ಬಗ್ಗೆ ಹಾಗೂ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಇವುಗಳನ್ನು ಅನ್ವಯಿಸಿಕೊಳ್ಳುವ ಬಗ್ಗೆ ವಿಷಯ ಮಂಡಿಸಿದರು. ಅನಂತರ ಶ್ರೀಮತಿ ಗಾಯಿತ್ರಿ ಮು. ಶಿ ರವರು ಶಾಲಾಕಾಣ್ಕೆ ಬಗ್ಗೆ ಸವಿವರವಾಗಿ ಚರ್ಚೆಸಿ`ವಿಚಾರ ಮಂಡಿಸಿದರು.ನಂತರ ಶ್ರೀ ಮಂಜುನಾಥ ಮು.ಶಿ. ರವರು ಇಂಟರ್ನಟ್ ಗೂಗಲ್ನಲ್ಲಿ ಭಾಷಾಂತರ ಮಾಡುವುದರ ಬಗ್ಗೆ ಪಿ. ಪಿ. ಟಿ ಯ ಮೂಲಕ ತಿಳಿಸಲಾಯಿತು. ಎಲ್ಲರೂ ಗೂಗಲ್ ಪೆಟ್ ತೆರೆಯುವ ವಿಧಾನವನ್ನು ಕಲಿತರು.ನಂತರ ಮೋಹನ್ ಮು.ಶಿ. ರವರು ಒಬಂ ಟು ನಲ್ಲಿ ಎಜುಕೇಶನ್ ಮುಖಾಂತರ ಜಿಯೋಜಿಬ್ರಾ ,ಕೆ ಜಿಯೋಗ್ರಪಿ ಇತ್ಯಾದಿಗಳನ್ನು ಶಾಲಾತರಗತಿಯಲ್ಲಿ ಯವಿಷಯಕ್ಕನುಗುಣವಾಗಿ ಬಳಕೆ ಮಾಡುವುದನ್ನು ತಿಳಿಸಿದರು.ಮಧ್ಯಾಹ್ನದ ಅವಧಿಯಲ್ಲಿ ಮೊದಲಿಗೆ ಗಂಗರಾಮಯ್ಶ ಮು. ಶಿ ರವರು ೩ನೇ ದಿನದ ವರದಿಯನ್ನು ಓದಿದರು. ಶ್ರೀಮತಿ ಲಲಿತಮ್ಮ ಮು.ಶಿರವರು "ಶಾಲಾ ಮತ್ತು ತರಗತಿ ವಾತಾವರಣ " ಈ ವಿಷಯ ಬಗ್ಗೆ ಮಂಡಿಸಿದರು. ಇದೇ ವೇಳೆ ನರಸಿಂಹಮೂರ್ತಿರವರುತಮ್ಮ ೨ನೇ ತಂಡಕ್ಕೆ ನೀಡಲಾದ ಶಿಕ್ಷಣದಗುರಿಗಳು & ಸಿ.ಸಿ. ಇ.ಯ ಬಗ್ಗೆ ವಿಷಯ ಮಂಡನೆ ಮಾಡಿದರು.ಅಲ್ಲದೆ ೫ನೇತಂಡಕ್ಕೆನೀಡಲಾದ ವಿಷಯ 'ಶಿಕ್ಷಣದಲ್ಲಿ ಭಾಗೀದಾರರು & ಸಹಭಾಗಿತ್ವ" ದ ಬಗ್ಗೆ ಯೂ ಮಂಡನೆ, ಚರ್ಚೆಗಳು ನಡೆದವು. ಕೊನೆಯಲ್ಲಿ ಒಬಂಟು ಇನ್ಸ್ಠಾಲೇಷನ್ ನ ಬಗ್ಗೆ &ಶಾಲಾ ವಿಕೀ ನೋಂದಣಿಯ ಬಗ್ಗೆ ಶ್ರೀ ಮಂಜುನಾಥ ಮು.ಶಿ. ರವರು ತಿಳಿಸಿದರು. ಇಂದಿನ ದಿನದಲ್ಲಿ ಎಲ್ಲಾ ಶಿಕ್ಷಕರು ಲವಲವಿಕೆಯಿಂದ ಭಾಗವಹಿಸಿದ್ದರಿಂದ ಚೇತೋಹಾರಿಯಾಗಿತ್ತು .ಸಾಯಂಕಾಲ ೫.೩೦ಕ್ಕೆ ವಂದನಾರ್ಪಣೆಯೊಂದಿಗೆ ಈ ದಿನದ ತರಬೇತಿಮುಕ್ತಾಯವಾಯಿತು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day.

ದಿ: 22.12.2014 ರ ಸೋಮವಾರದಂದು ಜಿಲ್ಲೆಯ ಐಸಿಟಿ ಫೇಸ್ 1 2 ಮತ್ತು 3 ಶಾಲೆಗಳ ಮುಖ್ಯೋಪಾಧ್ಯಾರುಗಳಿಗೆ 5 ದಿನಗಳ ಹೆಚ್ ಟಿ ಎಫ್ ತರಬೇತಿ ಆಯೋಜಿಸಲಾಗಿದ್ದು ಕಾರ್ಯಕ್ರಮವನ್ನು ಸಮಯ 9.30ಕ್ಕೆ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ರತ್ನಮ್ಮ ಎಮ್ ಹಾಗೂ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಉಪನ್ಯಾಸಕರಾದ ರಮೇಶ್ ರವರು ಸ್ವಾಗತ ಮಾಡಿದರು. ಪ್ರಸ್ತುತ ದಿನಗಳಲ್ಲಿ ಶಾಲಾ ಮುಖ್ಯಸ್ಥರುಗಳಿಗೆ ಆಡಳಿತದಲ್ಲಿ ಇಲಾಖೆಯೊಂದಿಗೆ ಸಂವಹನ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಂಪ್ಯೂಟರ್ ಹಾಗೂ ಅಂತರ್ಜಾಲ ಬಳಕೆ ಎಷ್ಟೊಂದು ಪ್ರಮುಖ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಹಿರಿಯ ಉಪನ್ಯಾಸಕರಾದ ರತ್ನಮ್ಮರವರು ತಿಳಿಸಿಕೊಟ್ಟರು. ದಿನದ ಮೊದಲನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಕಾಂತ್ ರವರು ಕಂಪ್ಯೂಟರ್ ಸ್ಥೂಲ ಪರಿಚಯ ಹಾಗೂ gmail ಉಪಯೋಗಿಸಿ email id ತಯಾರಿಸುವ ವಿಧಾನ ಪ್ರಾಯೋಗಿಕವಾಗಿ ನಿರೂಪಿಸಿದರು ನಂತರದಲ್ಲಿ ಶಿಬಿರಾರ್ಥಿಗಳು ತಮ್ಮ ಕಂಪ್ಯೂಟರ್ ಗಳಲ್ಲಿ ಸ್ವತಃ ಅವರುಗಳೇ ತಮ್ಮ email id ಗಳನ್ನು ತಯಾರಿಸಿದರು. ಶಿಬಿರಾರ್ಥಿಗಳು email ಕಳುಹಿಸುವ ಅಭ್ಯಾಸದ ಸಲುವಾಗಿ ತಮ್ಮ ಸಹ ಶಿಬಿರಾರ್ಥಿಗಳ email ವಿಳಾಸಕ್ಕೆ mail ಕಳುಹಿಸಿ email ತಲುಪಿರುವ ಬಗ್ಗೆ ಖಾತ್ರಿಪಡಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಶಿಶೇಖರ್ ರವರು gmail ನ ಪ್ರತಿಯೊಂದು menu & icon ಗಳ ಕಾರ್ಯವನ್ನು ವಿವರಿಸಿದರು. ಶಿಬಿರಾರ್ಥಿಗಳಿಗೆ ಅಭ್ಯಾಸದ ಅವಧಿಯನ್ನು 4ಗಂಟೆಯವರೆಗೆ ವಿಸ್ತರಿಲಾಯಿತು. ನಂತರದ ಅವಧಿಯಲ್ಲಿ ಎಲ್ಲಾ ಶಿಬಿರಾರ್ಥಿಗಳ email id ಯನ್ನು HTF google groups ನಲ್ಲಿ ನೊಂದಣಿಮಾಡಲಾಯಿತು. ದಿನದ ಕೊನೆಯ ಅವಧಿಯಲ್ಲಿ Koer website ನ ಪ್ರಾಮುಖ್ಯತೆ ಮತ್ತು ಅದರ ಕಾರ್ಯವಿಧಾನ ಮಹತ್ವವನ್ನು ಲಕ್ಷ್ಮೀಕಾಂತ್ ರವರು ವಿವರಿಸಿದರು ಮತ್ತು Koer website ನ್ನು ಉಪಯೋಗಿಸಿ ಮಾಹಿತಿಯನ್ನು ಪಡೆಯುವ ವಿಧಾನವನ್ನು ತಿಳಿಸಿಕೊಟ್ಟರು. Koer ನ ಪ್ರತಿಯೊಂದು menu & icon ಗಳ ಕಾರ್ಯವನ್ನು ವಿವರಿಸಿದರು. ಶಶಿಶೇಖರ್ರವರು ಶಿಬಿರಾರ್ಥಿಗಳಲ್ಲಿ ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೂ ಒಂದೊಂದು ವಿಷಯಗಳನ್ನು ನೀಡಿ ಚರ್ಚಿಸಿ ಮಂಡಿಸಲು ತಿಳಿಸಿದರು. ನೆಲಮಂಗಲ ತಂಡ 1 ರವರು ಕಾಣ್ಕೆ ಎಂದರೇನು? ಕಾಣ್ಕೆ ಮತ್ತು ಸಂಪನ್ಮೂಲ, ಸಂಪನ್ಮೂಲದಿಂದಾಚೆ ಕಾಣ್ಕೆ ಇತ್ಯಾದಿಗಳ ಬಗೆಗೆ ತಮ್ಮ ಚರ್ಚೆಯನ್ನು ಮಂಡಿಸಿದರು. ದಿನದ ತರಬೇತಿ ಸಂಜೆ 5.30ಕ್ಕೆ ಮುಕ್ತಾಯವಾಯಿತು.

2nd Day.

ಡಯಟ್ ನ ಹಿರಿಯ ಉಪನ್ಯಾಸಕರಾದಂತಹ ಶ್ರೀಮತಿ ರತ್ನಮ್ಮ ರವರು ತರಬೇತಿಗೆ ಔಪಚಾರಿಕವಾಗಿ ಚಾಲನೆ ನೀಡಿ ಹಿಂದಿನ ದಿನ ನಡೆದಂತಹ ತರಬೇತಿಯ ಹಿಮ್ಮಾಹಿತಿಯನ್ನು ಪುನರಾವರ್ತಿಸಿ ಈ ದಿನ ಕಲಿಯಬೇಕಾಗಿರುವ ವಿಷಯವನ್ನು ತಿಳಿಸುತ್ತಾ ಎಲ್ಲರೂ ವೇಳೆಗೆ ಸರಿಯಾಗಿ ಹಾಜರಿದ್ದು ತರಬೇತಿಯ ಧ್ಯೇಯೋದ್ದೇಶವನ್ನು ತಿಳಿಸಿದರು. ನಂತರ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ರಮೇಶ್ ಹಾಜರಿದ್ದು ಶಿಭಿರಾರ್ಥಿಗಳ ಜೊತೆಯಲ್ಲಿ ತರಬೇತಿಯ ಪ್ರಾಮುಖ್ಯತೆಯ ಬಗ್ಗೆ ಚರ್ಚಿಸಿದರು ಮತ್ತು ಹಾಜರಾತಿಯನ್ನು ಪಡೆದರು. ನಂತರ ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಲಕ್ಷ್ಮೀಕಾಂತ್ ಮತ್ತು ಶಶಿಶೇಖರ್ ರವರು ತರಬೇತಿಯನ್ನು ಪ್ರಾರಂಭಿಸಿದರು ಮತ್ತು ತರಬೇತಿಯ ವಿವರ ಕೆಳಕಂಡಂತಿದೆ:

  • ಹಿಂದಿನ ದಿನ ನಡೆದ ತರಬೇತಿಯಲ್ಲಿ ಕಲಿತ ವಿಷಯಗಳನ್ನು :- ಇ ಮೇಲ್ ಐ ಡಿ , ಇ ಮೇಲ್ ಸಂದೇಶವನ್ನು ಕಳುಹಿಸುವುದು, ಇತ್ಯಾದಿಗಳ ಬಗೆಗೆ ಪುನರಾವರ್ತಿಸಿ ಈ ದಿನ ಸಂದೇಶಗಳ ವಿನಿಮಯ ಮಾಡಿಕೊಳ್ಳಲಾಯಿತು.
  • folder creation ಮಾಡುವುದರ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ಶಿಬಿರಾರ್ಥಿಗಳಿಗೆ folder creat ಮಾಡಲು ತಿಳಿಸಲಾಯಿತು ಅದರಂತೆ ಶಿಬಿರಾರ್ಥಿಗಳೆಲ್ಲರೂ ತಮ್ಮ folder creation ಮಾಡಿದರು.
  • ಅಂತರ್ಜಾಲವನ್ನು ಉಪಯೋಗಿಸಿ ಭಾವಚಿತ್ರಗಳನ್ನು, ಮಾಹಿತಿಗಳನ್ನು ಪಡೆದು ಆ ಮಾಹಿತಿಯನ್ನು ತಮ್ಮ folder ಗೆ ಕಾಪಿ ಮಾಡುವುದನ್ನು ಕಲಿಸಲಾಯಿತು ಮತ್ತು ಕಲಿಕೆಯ ಖಾತ್ರಿ ಮಾಡಿಕೊಳ್ಳಲಾಯಿತು.
  • ಮದ್ಯಾಹ್ನನ ಅವಧಿಯಲ್ಲಿ ಒಬಂಟು ತಂತ್ರಾಂಶದಲ್ಲಿ ಲಿಬ್ರೆ ಆಫೀಸ್ ಬಳಸಿ ಪತ್ರ ವನ್ನು ಟೈಪ್ ಮಾಡುವುದು , ಸೇವ್ ಮಾಡುವುದು , ರವಾನಿಸುವುದನ್ನು ಕಲಿಸಲಾಯಿತು.
  • pen drive ನ ಬಳಕೆಯ ಬಗ್ಗೆ ತಿಳಿಸಲಾಯಿತು.
  • www.school education.kar.nic.in ಬಗ್ಗೆ ಮಾಹಿತಿ ನೀಡಲಾಯಿತು.

3rd Day.

ಹೆಚ್ ಟಿ ಎಫ್ ಮೂರನೇ ದಿನದ ತರಬೇತಿಯನ್ನು ಶ್ರೀಯುತರಮೇಶ್,ಉಪನ್ಯಾಸಕರು, DIET, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರ ಸ್ವಾಗತ ಕಾಯ೯ಕ್ರಮದೊಂದಿಗೆ ಪ್ರಾರ೦ಭ ವಾಯಿತು. ಸ೦ಪನ್ಮೂಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಶ್ರೀ ಸಿದ್ದೇಶ್ವರ , ಮುಖ್ಯಶಿಕ್ಷಕರು ರವರು ನೀರನ್ನು ಯಾವಾಗ ಕುಡಿಯಬೇಕು ಎಂಬ ವಿಷಯದ ಬಗ್ಗೆ ಚಿಂತನೆ ನಡೆಸಿದರು. ನಂತರ ಶಿಬಿರಾರ್ಥಿಗಳಿಗೆ ಧ್ಯಾನದ ಮೂಲಕ ಮನಸ್ಸಿಗೆ ಚುರುಕು ನೀಡಿದರು. ಶ್ರೀನಿವಾಸ್ , ಮುಖ್ಯಶಿಕ್ಷಕರು ರವರು ಹಿಂದಿನ ದಿನದ ವರದಿಯನ್ನು ವಾಚಿಸಿದರು . ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀಕಾಂತ್ ರವರ google drive ನಲ್ಲಿ ಮಾಹಿತಿಯನ್ನು load ಲೋಡ್ ಮಾಡುವುದು, ಮತ್ತು ಗೂಗಲ್ ಡ್ರೈವ್ ನಿಂದ ಡೌನ್ ಲೋಡ್ ಮಾಡುವ ವಿಧಾನ ಮತ್ತು you tube ಬಳಕೆ , ವಿಡಿಯೋಗಳನ್ನು upload ಮಾಡುವುದು, ವೀಕ್ಷಿಸುವುದು ಸೇರಿದಂತೆ ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು ಶಿಬಿರಾರ್ಥಿಗಳು ಪರಸ್ಪರ ಚರ್ಚಿಸಿ ಮಾಹಿತಿ ವಿನಿಮಯ ಮಾಡಿಕೊಂಡರು.ಗೂಗಲ್ ಮ್ಯಾಪ್ ಮೂಲಕ ಐತಿಹಾಸಿಕ ಸ್ಥಳಗಳ ( ತಾಜ್ ಮಹಲ್ , ವಿಧಾನ ಸೌಧ ಇತ್ಯಾದಿ) ಪತ್ತೆಮಾಡುವುದು ಮತ್ತು ನ್ಯಾವಿಗೇಷನ್ ಉಪಯೋಗಿಸುವ ವಿಧಾನಗಳನ್ನು ತಿಳಿಸಿದರು. ಮಧ್ಯಾಹ್ನದ ಅವಧಿಯಲ್ಲಿ.

  • Koer ವೆಬ್ ಸೈಟ್ ನಲ್ಲಿನ ಶೈಕ್ಷಣಿಕ ಮಾಹಿತಿಗಳನ್ನು, ಪಡೆಯುವ ವಿಧಾನಗಳನ್ನು ಪ್ರಾಯೋಗಿಕ ವಿಧಾನಗಳ ಮೂಲಕ ಅರಿಯಲಾಯಿತು.
  • Koer ವೆಬ್ ಸೈಟ್ ನಲ್ಲಿ ಎಲ್ಲಾ ವಿಷಯಗಳಲ್ಲಿ ಚಟುವಟಿಕೆಗಳನ್ನು ಬಳಸುವ ಬಗ್ಗೆ /ಉಪಯೋಗಾಹ೯ತೆ ಅರಿಯಲಾಯಿತು. ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ * Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ ಎಂಬ ಬಗ್ಗೆ ತಿಳಿಸಲಾಯಿತು.
  • ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ , ಕಲ್ಪವೃಕ್ಷ ಡಿ ವಿ ಡಿ ಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು.
  • Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.
  • additional optional readings

1. NCF 2005 ಆಶಯದಂತೆ ಕನ್ನಡ , ಇಂಗ್ಲೀಷ್ , ವಿಜ್ಞಾನ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

  • ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ ಮೂಲಕ ಸರ್ಕಾರದ ಮತ್ತು ಇಲಾಖಾ ಆದೇಶಗಳು , ರಾಜ್ಯಪತ್ರಗಳನ್ನು download ಮಾಡುವುದರ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಸಂಪನ್ಮೂಲ ವ್ಯಕ್ತಿಗಳಾದ ಶಶಿಶೇಖರ್ ಜಿ ರವರು ತಿಳಿಸಿದರು.
  • ಚಹಾ ವಿರಾಮದ ನಂತರ ಗೂಗಲ್ ಪಿಕಾಸಾ ದಲ್ಲಿ ಫೋಟೋಗಳನ್ನು ಅಪ್ ಲೋಡ್ ಮಾಡುವ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಲಾಯಿತು.

4th Day

ಬೆಳಿಗ್ಗೆ 9.30ಕ್ಕೆ 4ನೇ ದಿನದ ತರಬೇತಿ ಕಾರ್ಯಗಾರವು ಆರಂಭಗೊಂಡಿತು. ಸಂಪನ್ಮೂಲ ವ್ಯಕ್ತಿಗಳು ಎಲ್ಲರನ್ನು ಸ್ವಾಗತಿಸಿದರು. ಮೂರನೇ ದಿನದ ವರದಿಯನ್ನು ನೆಲಮಂಗಲ ತಾಲ್ಲೂಕಿನ ಸಿದ್ದೇಶ್ ರವರು ಮಂಡಿಸಿದರು. ನಂತರ ಸಂಪನ್ಮೂ ವ್ಯಕ್ತಿಗಳಾದ ಶಶಿಶೇಖರ್ ರವರಿಂದ ಧ್ಯಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು , ನಂತರ ಹೆಚ್ ಆರ್ ಎಂ ಎಸ್ ಬಗ್ಗೆ ತರಬೇತಿಯನ್ನು ನೀಡಲು ಆಗಮಿಸಿದ್ದ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಶಾಲೆಯ ಶಿಕ್ಷಕರಾದಂತಹ ವೆಂಕಟೇಶ್ ರವರನ್ನು ಸ್ವಾಗತಿಸಿ ಅವರ ಬಗ್ಗೆ ಲಕ್ಷ್ಮೀಕಾಂತ್ ರವರು ಪರಿಚಯ ಮಾಡಿಕೊಟ್ಟರು. ವೆಂಕಟೇಶ್ ರವರು HRMS ಬೆಳೆದುಬಂದ ಬಗೆ ಹಿನ್ನೆಲೆಯೊಂದಿಗೆ ವಿವರಿಸಿದರು ನಂತರ ಮುಖ್ಯಶಿಕ್ಷಕರಾದ ನಾವುಗಳು ಡಿ ಡಿ ಓ ಗಳಾಗಿ HRMS ನಿರ್ವಹಣೆಯಲ್ಲಿ ನಮ್ಮ ಪಾತ್ರದ ಬಗ್ಗೆ ತಿಳಿಸಿದರು.

  • HRMS ಗೆ ಲಾಗಿನ್ ಆಗುವ ವಿಧಾನ ,
  • ಡಿ ಡಿ ಓ ಕೋಡ್ , ಪಾಸ್ ವರ್ಡಗಳ ನಿರ್ವಹಣೆ,
  • HRMS ನಲ್ಲಿ sub menu ಗಳಾದ employee service register, payroll , tranfer , promotions , arrears , history, misreport , nps , problems query request ಇತ್ಯಾದಿಗಳ ಬಗ್ಗೆ ವಿವರಿಸಿದರು.
  • pay bill generate ಬಗ್ಗೆ view bill , draft bill , approve bill , view final bill ಇವುಗಳ ಬಗ್ಗೆ ಶಿಬಿರಾರ್ಥಿಗಳ ಸಾಕಷ್ಟು ಅನುಮಾನಗಳ ಬಗ್ಗೆ ಪರಿಹಾರವನ್ನು ನೀಡಿದರು.
  • Employee SR details ನಲ್ಲಿ ಸಕಾಲದಲ್ಲಿ ವಿವರಗಳನ್ನು update ಮಾಡುವ ಬಗ್ಗೆ ತಿಳಿಸಿಕೊಟ್ಟರು.

ಅಂತಿಮವಾಗಿ ಬಹಳ ಮುಖ್ಯವಾಗಿ ಶಿಕ್ಷಕರಿಗೆ ಅವಶ್ಯಕವಾಗಿ ನೀಡಬೇಕಾದ payslip ಹೇಗೆ ತೆಗೆಯುವುದು ಎಂಬ ಬಗ್ಗೆ ತಿಳಿಸಿಕೊಟ್ಟರು . ಒಟ್ಟಾರೆ 4ನೇ ದಿನದ ತರಬೇತಿ ಬಹಳ ಉಪಯುಕ್ತವಾಗಿದ್ದು ಶಿಬಿರಾರ್ಥಿಗಳಿಗೆ ಈ ವಿಷಯದ ಬಗ್ಗೆ ಮತ್ತೊಂದು ದಿನದ ತರಬೇತಿಯ ಅವಶ್ಯಕತೆ ಬಹಳವಾಗಿ ಇರುತ್ತದೆ . ತರಬೇತಿಯನ್ನು ಎಂದಿನಂತೆ 5.30 ಮುಗಿಸಲಾಯಿತು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

1st Day. 15/12/2014

ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಎಸ್ ಟಿ ಎಫ್ ಎ೦ದರೇನು? ಎಸ್ ಟಿ ಎಫ್ ತರಬೇತಿಯ ಗುರಿಗಳನ್ನು ತಿಳಿಸಿದರು. ಉಬ೦ಟು ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು .

5th Day. 19/12/2014

ಬೆಂಗಳೂರು ಗ್ರಾಮಾಂತರ ಡಯಟ್ ನಲ್ಲಿ ನಡೆದ STF ಗಣಿತ ತರಬೇತಿಯ ಐದನೇ ದಿನವಾದ ದಿ:19.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ವೈದ್ಯ ಯವರು SKYPE ಮುಖಾಂತರ ವಿಡೀಯೋ ಕಾಲ್ ಮಾಡುವುದು ತಿಳಿಸಿ ಕೊಟ್ಟರು. ಶಿಬಿರಾಥಿ೯ಗಳು ಇದನ್ನು ಅರಿತುಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿಜಯ R D ಇವರು ಪಿಕಾಸದ ಮೂಲಕ photo uploading ಮಾಡುವ ವಿಧಾನವನ್ನು ತಿಳಿಸಿದರು. ಅಪರಾಹ್ನದ ಅವಧಿಯಲ್ಲಿ feedback form ನ್ನು ಶಿಬಿರಾಥಿ೯ಗಳು ತುಂಬಿ send ಮಾಡಿದರು. ಶಿಬಿರಾಥಿ೯ಗಳು ತರಬೇತಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ತರಬೇತಿ ಸಂಯೋಜಕರಾದ ಶ್ರೀಮತಿ ರತ್ನಮ್ಮ ಅವರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ವಿದ್ಯಾಥಿ೯ಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶಿಬಿರಾಥಿ೯ಗಳಿಗೆ ಮಾಗ೯ದಶ೯ನ ಮಾಡಿದರು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day. 29/12/2014

ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು. ಎಸ್ ಟಿ ಎಫ್ ಎ೦ದರೇನು? ಎಸ್ ಟಿ ಎಫ್ ತರಬೇತಿಯ ಗುರಿ & ಮಹತ್ವಗಳನ್ನು ಶ್ರೀಯುತ ವೆಂಕಟೇಶ ವ್ಯದ್ಯ ಎಲ್ ರವರು ತಿಳಿ ಸಿದರು. ಉಬ೦ಟು ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿಯನ್ನು ಶ್ರೀಮತಿ ಸುಚೇತಾ ರವರು ನೀಡಿದರು. ಸಂಪನ್ಮೂಲ ವ್ಯಕ್ತಿಗಳು Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ Koer ವೆಬ್ ಸೈಟ್ ನ ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು

2nd Day. 30/12/2014

ಬೆಳಗ್ಗೆ 9.30 ರಿ೦ದ ಎರಡನೇ ದಿನದ ಎಸ್ ಟಿ ಎಫ್ ತರಬೇತಿ ಮೊದಲ ದಿನ ಕಲಿತ ವಿಷಯಗಳ ಪುನರಾವಲೋಕನದೊಂದಿಗೆ ಪ್ರಾರಂಬವಾಯಿತು.ಕಲಿಕಾಥಿ೯ಗಳ ಸ೦ದೇಹಗಳನ್ನು ಚಚಿ೯ಸಲಾಯಿತು.ಮ್ಯಂಡ್ ಮ್ಯಾಪ್ ನ ಬಗ್ಗೆ ಚಚಿ೯ಸಲಾಯಿತು.ಈ ಮೇಲ್ ಕುರಿತು ಮತ್ತಷ್ಟು ಚಿಂತಿಸಲಾಯಿತು.ಆಟ್ಯಾಚ್ ಮೆಂಟ್ ಗಳ ನ್ನು ಸೇರಿಸುವ, ಮೇಲ್ ಮಾಡುವ ಬಗೆ ಅರಿಯಲಾಯಿತು.ಗುರುಗಳ ಕ್ಯಾಸ್ಕೇಡ್ ಗೆ ಮೇಲ್ ಮಾಡುವ ಬಗೆ ವಿವರಿಸಲಾಯಿತು. ಆನ೦ತರ ಹ್ಯಾಂಡ್ಸ್ ಆನ್ ಗೆ ಅವಕಾಶ ಮಾಡಿಕೊಡಲಾಗಿತ್ತು.ನಂತರ ಜಿಯೋಜೀಬ್ರಾ ದ ವಿವರಣಾತ್ಮಕ ಆರಂಭಕ್ಕೆ ನಾಂದಿ ಹಾಡಲಾಯಿತು.ಕಲಿಕಾಥಿ೯ಗಳು ಜಿಯೋಜೀಬ್ರಾದೊಂದಿಗೆ ಆಡುವ/ಕಲಿಯುವ ಹುಮ್ಮಸ್ಸು ಉತ್ತೇಜನಕಾರಿಯಾಗಿತ್ತು. ತರಬೇತಿಯನ್ನು ಸಂಜೆ 5.30ಕ್ಕೆ ಮುಕ್ತಾಯಗೊಳಿಸಲಾಯಿತು.

3rd Day. 31/12/2014

4th Day. 01/01/2015

5th Day. 02/01/2015

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4