STF 2015-16 Shivamogga

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ಶಿವಮೊಗ್ಗ ದಿನಾಂಕ-22-09-2015

ಎಸ್ ಟಿ ಎಫ್ ತರಬೇತಿಯ ಎರಡನೇ ದಿನದ ಕಾರ್ಯಚಟುವಟಿಕೆಗಳ ವರದಿ
“ಪ್ರತಿ ಕೆಲಸದಲ್ಲೂ ಆಟದ ಒಂದು ಗುಣ ಇರುತ್ತದೆ.
ಪ್ರತಿ ಆಟದಲ್ಲೂ ಕೆಲಸದ ಒಂದು ಗುಣ ಇರುತ್ತದೆ.”
9.30ರಿಂದ 10 ಗಂಟೆಯವರೆಗೆ ಶಿಬಿರಾರ್ಥಿಗಳ ಹಾಜರಿ, ಕೊಠಡಿ, ಗಣಕಯಂತ್ರ ಸಿದ್ದತೆ ನಡೆದು ಸಂಪ್ರಯದಾಯದಂತೆ ಶಿಬಿರ ನಿರ್ದೇಶಕರು, ನೋಡಲ್ ಅಧಿಕಾರಿಗಳಿಂದ ಸಲಹೆ ಸೂಚನೆ ಮೂಡಿಬಂದಿತು.ಹಿಂದಿನ ದಿನದ ಕಾರ್ಯ ಚಟುವಟಿಕೆಯನ್ನು ಶ್ರೀಯುತ ರಾಜ್ ಕುಮಾರ್ ರವರು ಸಂಕ್ಷಿಪ್ತವಾಗಿ ಮಂಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಧು ಎನ್ ಮತ್ತು ತಂಡದವರಿಂದ ಎರಡನೇ ದಿನದ ಚಟುವಟಿಕೆಯ ಬಗ್ಗೆ ಚಾಲನೆ ದೊರೆಯಿತು.
ನೆಟ್ ನಲ್ಲಿರುವ ವಿಷಯ ಸಂಬಂದಿತ ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ ತಿಳಿಸಲಾಯಿತು. ಅದರಂತೆ ಪ್ರಾಯೋಗಿಕವಾಗಿ ಶಿಬಿರಾರ್ಥಿಗಳು ತಮ್ಮ ಅಭಿರುಚಿಯ ವಿಷಯದ ಚಿತ್ರಗಳನ್ನು ಡೌನ್ ಲೋಡ್ ಮಾಡಿ ಸಂಗ್ರಹಿಸಿದರು.. ನಂತರ ವೀಡಿಯೋಗಳನ್ನು ನೆಟ್ ನಿಂದ ಡೌನ್ ಲೋಡ್ ಮಾಡುವ ಬಗ್ಗೆ ಸ್ಕ್ರೀನ್ ನಲ್ಲಿ ಪ್ರಾತ್ಯಕ್ಷಿಕೆ ಸಹಿತ ವಿವರಣೆ ಸಂಪನ್ಮೂಲ ವ್ಯಕ್ತಿಗಳಿಂದ ಮೂಡಿಬಂತು.ಶಿಬಿರಾರ್ಥಿಗಳು ತುಂಬಾ ಆಸಕ್ತಿಯಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಕೆಲವು ವೀಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡರು. ಕೋಯರ್ ಬಗ್ಗೆ ಪರಿಚಯಾತ್ಮಕ ವಿವರಣೆ ಕೇಳಿಬಂತು. ಶಿಕ್ಷಕರೇ ಅಭಿವೃದ್ದಿ ಪಡಿಸುತ್ತಿರುವ ಅದರಲ್ಲಿನ ಅಂಶಗಳನ್ನು ತಿಳಿಸಲಾಯಿತು.
ಕೋಯರ್ ಬಳಸಿ ಚಟುವಟಿಕೆಗಳನ್ನು ಹೇಗೆ ಮಾಡಬಹುದು, 10 ಅಂಶಗಳನ್ನು ಆದರಿಸಿ CCE ಯಂತೆ ಚಟುವಟಿಕೆ ಹೇಗೆ ಮಾಡಬಹುದು ಎಂಬುದನ್ನು ನಿರೂಪಿಸಲಾಯಿತು.ತಂಡಗಳನ್ನು ಮಾಡಿ ಶಿಕ್ಷಕರೇ ತಮ್ಮ ಆಸಕ್ತಿಯ ವಿಷಯ ಆಧರಿಸಿ ಚಟುವಟಿಕೆ ರೂಪಿಸಲು ತಿಳಿಸಲಾಯಿತು. ಅದರಂತೆ ಎಲ್ಲಾ ತಂಡದವರು ತಲಾ ಒಂದೊಂದು ಚಟುವಟಿಕೆ ರೂಪಿಸಿ STF GROUPಗೆ ಈಮೇಲ್ ಮಾಡಿದರು.
ಈ ಚಟುವಟಿಕೆಗೆ ಪೂರಕವಾದ ಚಿತ್ರ ಮತ್ತು ವೀಡಿಯೋಗಳನ್ನು ಹೈಪರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಯಿತು.ಶಿಕ್ಷಕರಿಂದ ಹೈಪರ್ ಲಿಂಕ್ ಮಾಡಿಸಲಾಯಿತು.
ಗಣಕಯಂತ್ರ ಬಳಸುವಲ್ಲಿ ಪ್ರಾಥಮಿಕ ಜ್ಞಾನ ದೊರೆಯುತ್ತಾ ಹೋದ ಹಾಗೆ ಶಿಕ್ಷಕರಲ್ಲಿ ತಾವು ಗಣಕಯಂತ್ರ ಸಾಕ್ಷರರಾಗುತ್ತಿರುವ ಬಗ್ಗೆ ಮಂದಹಾಸ ಹಾಗೂ ಆತ್ಮವಿಶ್ವಾಸ ಮೂಡುತ್ತಾ ಇರುವುದು ಗಮನಕ್ಕೆ ಬಂತು. ಒಟ್ಟಾರೆಯಾಗಿ ತರಬೇತಿ ಮಾಹಿತಿ ಪೂರ್ಣವೂ ಉಪಯುಕ್ತವೂ ಆಗಿದ್ದುದರಿಂದ ಎಲ್ಲಾ ಶಿಕ್ಷಕರೂ ಆಸಕ್ತಿ, ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದರಿಂದ ಸಮಯ ಸರಿದು ಹೋದದ್ದು ಅರಿವಿಗೆ ಬರಲೇ ಇಲ್ಲ ಆಗಲೇ 5 ಗಂಟೆ ಆಗುತ್ತಾ ಬಂದಿದ್ದು ಅಂದಿನ ಕಾರ್ಯ ಪೂರೈಸಿದ ತೃಪ್ತಿಯೊಂದಿಗೆ ಗಣಕ ಯಂತ್ರಕ್ಕೆ ವಿರಾಮ ಕೊಡಲಾಯಿತು.
“ಗಣಕಯಂತ್ರ ಸಾಕ್ಷರರಾಗುವತ್ತ ನಮ್ಮ ನಡುಗೆ"
ವಂದನೆಗಳೊಂದಿ

3rde Day
3 ನೇ ದಿನದ ಎಸ್ ಟಿ ಎಫ್ ಕಾರ್ಯಗಾರದ ವರದಿ
ದಿನಾಂಕ.24.09.15
ಸ್ವಾಗತ;- ಫಾತಿಮಾ ಬೇಗಂ
೨ನೇ ದಿನದ ವರದಿ ವಾಚನ ;-ರಾಮಮೂರ್ತಿ ಹೆಗ್ಗಡೆ
ಈ ದಿನದ ಕಾರ್ಯಕ್ರಮದ ಬಗ್ಗೆ ಶ್ರೀಯುತ ನಾಗರಾಜ್ ರವರು ಸಂಕ್ಷಿಪ್ತ ವಾಗಿ ತಿಳಿಸಿದರು , ಹಾಗೂ ಡಯಟ್ ಉಪನ್ಯಾಸಕರಾದ ಶ್ರೀಮತಿ ಫಾತಿಮಾ ಬೇಗಂ ಅವರು NCF 2005 ರ ಆಶಯವೇನು ಹಾಗೂ ಕಾನ್ಸೆ ಪ್ಟ್ ಮ್ಯಾಪ್ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಸಿದರು.
ಶ್ರೀ ಮಧುರವರು PHET ಬಗ್ಗೆ ಮಾಹಿತಿ ನೀಡಿದರು . ಇದು ಎಲ್ಲಾ ವಿಷಯಗಳಿಗೆ ಸಂಬಂದಿಸಿದ ವಿಡೀಯೋ ಮತ್ತು ಚಟುವಟಿಕೆಗಳನ್ನೊಳಗೊಂಡ ತಂತ್ರಾಂಶವಾಗಿದ್ದು ಇದನ್ನು ಅಳವಡಿಸಿಕೊಳ್ಳುವ ಬಗ್ಗೆ ಪತ್ರಿ ಗುಂಪಿಗೆ ಒಂದೊಂದು ಚಟುವಟಿಕೆ ಮಾಡಲು ತಿಳಿಸಿ ದರು ಮತ್ತು ಅದರಲ್ಲಿ ಬರುವ ಸಿಮ್ಯುಲೇಶನ್ ಗಳನ್ನು ಲಿಂಕ್ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಸಹ ನಿರ್ದೇಶಕರಾದ ಶ್ರೀಯತ ಎನ್.ಎಸ್.ಕುಮಾರ್ ಅವರು ನಮ್ಮೊಂದಿಗೆ ವಿಜ್ಞಾನದ ವಿಷಯದ ಕುಂದುಕೊರತೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮದ್ಯಾಹ್ನ ಕೋಯರ್ ವೆಬ್ ನಲ್ಲಿರುವ ಈಗಾಗಲೇ ಅಪ್ ಲೋಡ್ ಆಗಿರುವ 8.9.10 ನೇ ತರಗತಿಗಳ ವಿಜ್ಞಾನ ವಿಷಯಕ್ಕೆ ಸಂಬಂದಿಸಿದ ಪ್ರಯೋಗದ ವಿಡಿಯೊಗಳನ್ನು ನೋಡಿ ಅವುಗಳ ಗುಣ ಮತ್ತು ಅವಗುಣಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಹಾಗೂ ಡಯಟ್ ನ ಉಪಪ್ರಾಣಶುಪಾಲರು ಹಿಮ್ಮಾಯಿತಿ ಸಂಗ್ರಹಿಸಿದರು.
ಪ್ರತಿ ಗುಂಪಿನವರು ಒಂದೊಂದು ಪ್ರಯೋಗವನ್ನು ಆಯ್ಕೆಮಾಡಿಕೊಂಡು ಅದಕ್ಕೆ ಬೇಕಾಗಿರುವ ಉಪಕರಣಗಳ ಪಟ್ಟಿಯನ್ನು ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದೆವು. ಆ ಪ್ರಯೋಗದ ವಿಡಿಯೋವನ್ನು ಚಿತ್ರಿಕರಿಸಿ ಅದನ್ನು ಕೋಯರ್ ವೆಬ್ ಸೈಟಿಗೆ ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದರು.
ಡಯಟ್ ಉಪನ್ಯಾಸಕರಾದ ಶ್ರೀಮತಿ ಫಾತಿಮಾ ಬೇಗಂ ಅವರು ತರಗಿತಿ ಪ್ರಕ್ರಿಯೆಯಲ್ಲಿ ಬಳಸಬಹುದಾದ ಹತ್ತು ಅಂಶಗಳನ್ನು ಮತ್ತೊಮ್ಮೆ ನೆನಪಿಸಿ ಅವುಗಳನ್ನು ಅನ್ವಯಿಸುವುದರ ಬಗ್ಗೆ ಮಾರ್ಗದರ್ಶಿಸುವುದರ ಮುಖಾಂತರ ಈ ದಿನದ ಕಾರ್ಯಗಾರವು ಅಂತ್ಯಗೊಂಡಿತು.
ವಂದನೆಗಳೊಂದಿಗೆ
6ನೇ ತಂಡ
೧) ನಾಗರಾಜಪ್ಪ.ಬಿ.ಪಿ
೨) ಪರಮೇಶ್ವರಪ್ಪ .ಎಂ
೩)ಕಿರಣ್. ಎಂ.ಜೆ
೪) ಶರಾವತಿ.ಟಿ
೫) ಶಿವಕುಮಾರ್.ಜಿ.ಎನ

4th Day ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಸ್ಥೆ, ಶಿವಮೊಗ್ಗ.
ಕಂಪ್ಯೂಟರ್ (ಎಸ್. ಟಿ.ಎಫ್ ) ತರಬೇತಿ.
4 ನೇ ದಿನದ ತರಬೇತಿಯ ವರದಿ
4 ನೇ ದಿನದ ತರಬೇತಿಯನ್ನು ೩ನೇ ದಿನದ ಅನಿಸಿಕೆಯನ್ನು ಟೈಪ್ ಮಾಡುವುದರೊಂದಿಗೆ ಪ್ರಾರಂಭಿಸಿದೆವು. ಸಂಪನ್ಮೂಲ ವ್ಯಕ್ತಿಗಳ ನಿರ್ದೇಶನದಂತೆ ಬೆಳಿಗ್ಗೆ 9.30 ರಿಂದ 11.00 ಗಂಟೆಯವರೆಗೆ ಹಿಂದಿನ ದಿನ ಆಯ್ದುಕೊಂಡ ಪ್ರಯೋಗದ ತಯಾರಿ ಹಾಗೂ ಪ್ರಯೋಗದ ವಿವರಣೆಯನ್ನು ಕಂಪ್ಯೂಟರ್ ನಲ್ಲಿ type ಮಾಡುವುದರಲ್ಲಿ ಮಗ್ನರಾದೆವು. 11.15ಕ್ಕೆ ಟೀ ವಿರಾಮ. ಟೀ ವಿರಾಮದ ನಂತರ ಮೊರಾರ್ಜಿ ಪ್ರೌಢಶಾಲೆ, ಆನವೇರಿಯ ಸಹಶಿಕ್ಷಕರಾದ ಶ್ರೀಯುತ ಕಿರಣ್. ಎಮ್ ರವರು ೩ ನೇ ದಿನದ ವರದಿಯನ್ನು ಮಂಡಿಸಿದರು. ನಂತರ ಮತ್ತೆ ಗುಂಪಿನಲ್ಲಿ ಕುಳಿತು ಪ್ರಯೋಗದ ತಯಾರಿಯನ್ನು ಮುಂದುವರೆಸಿದೆವು. 12.15ಕ್ಕೆ ಸರಿಯಾಗಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಫಾತೀಮಾ ಮೇಡಮ್ ರವರು Libre Office Calc ನಲ್ಲಿ ಮಾರ್ಕ್ಸ್ ಲಿಸ್ಟ್ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು. Libre Office Calc ನಲ್ಲಿ ಬರುವ Rows, column, menu bar, graph, percentage, ..ಇತ್ಯಾದಿ ವಿವರಗಳನ್ನು ಒಂದು ಮಾದರಿ ಅಂಕಪಟ್ಇ ತಯಾರಿಸುವುದರ ಮೂಲಕ ತಿಳಿಸಿಕೊಟ್ಟರು. ಅಂಕಗಳನ್ನು Total ಮಾಡುವ ವಿಧಾನ, Libre Office Calc ಫೈಲನ್ನು save ಮಾಡುವುದನ್ನು ಶಿಬಿರಾರ್ಥಿಗಳಿಗೆ ಅರ್ಥೈಸಿದರು. ಇದರ ಜೊತೆಗೆ Mind map / free mind map application ಬಗ್ಗೆ ಕೂಡಾ ಸವಿವರವಾಗಿ ತಿಳಿಸಿಕೊಟ್ಟರು. Mind map ನಲ್ಲಿ ಬರುವ child node, sibling node, cloud, bubble, blinking, insert, format, ಇತ್ಯಾದಿ options ಗಳನ್ನು ಬಳಸಿ ನಾವೂ ಕೂಡಾ ಒಂದೊಂದು ಆಕರ್ಷಕವಾದ Mind mapನ್ನು ರಚಿಸಿದೆವು. ಪ್ರಯೋಗದ ತಯಾರಿ , Libre Office Calc ಮತ್ತು Mind map ರಚಿಸುವ ಅಭ್ಯಾಸದಲ್ಲಿ ನಿರತರಾದ ಶಿಬಿರಾರ್ಥಿಗಳಿಗೆ ಊಟದ ಸಮಯ ಆದದ್ದು ಅರಿವೇ ಆದಂತಾಯಿತು.
ಸಮಯ ಮಧ್ಯಾಹ್ನ 1.15 ರಿಂದ 1.45 ಊಟದ ವಿರಾಮ
ಮಧ್ಯಾಹ್ನದ ಭೋಜನದ ವಿರಾಮದ ನಂತರ 2.00 ಗಂಟೆಗೆ ಸರಿಯಾಗಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮಧು ರವರು Science application ನಲ್ಲಿ ಬರುವ Kalzium ಬಗ್ಗೆ ತಿಳಿಸಿಕೊಟ್ಟರು. Kalzium ಬಳಸಿ periodic table ನಲ್ಲಿ ಬರುವ spdf ಬ್ಲಾಕ್ ಗಳು, ಧಾತುಗಳ ಉಪಯೋಗಗಳು, ಅವುಗಳ boiling point, atomic mass, structure, isotope, ಇತ್ಯಾದಿ ವಿವರಗಳನ್ನು ನೋಡುವ ವಿಧಾನ ತಿಳಿಸಿಕೊಟ್ಟರು.
ಮಧ್ಯಾಹ್ನ 3.00 ರಿಂದ 3.15 ಟೀ ವಿರಾಮ.
ನಂತರ 3.15ರಿಂದ ಸರ್ಕಾರಿ ಉರ್ದು ಪ್ರೌಢಶಾಲೆ, ಶಿವಮೊಗ್ಗ ಇಲ್ಲಿನ ಪ್ರಯೋಗ ಶಾಲೆಯಲ್ಲಿ ಶಿಬಿರಾರ್ಥಿಗಳು ತಾವು ಆಯಾ ಗುಂಪಿನಲ್ಲಿ ತಯಾರು ಮಾಡಿಕೊಂಡ ಪ್ರಯೋಗಗಳನ್ನು ಒಂದೊಂದಾಗಿ ಮಾಡಿದರು.
1. ಸಿ.ವಿ.ರಾಮನ್ ತಂಡ -ಬೆಳಕಿನ ಕೇಂದ್ರೀಕರಣ ಪ್ರಯೋಗ
2. ಎ.ಪಿ.ಜೆ. ಅಬ್ದುಲ್ ಕಲಾಂ ತಂಡ-ದ್ರವಗಳ ಸಾಂದ್ರತೆ ಪ್ರಯೋಗ
3. ಹೋಮಿ ಜಹಾಂಗೀರ್ ಬಾಬಾ-ವಿಸರಣೆ ಪ್ರಯೋಗ
4. ವಿಕ್ರಮ್ ಸಾರಾಭಾಯಿ ತಂಡ-ರಾಸಾಯನಿಕ ದ್ವಿ ಸ್ಥಾನಪಲ್ಲಟ ಪ್ರಯೋಗ
5. ಸರ್ ಐಸಾಕ್ ನ್ಯೂಟನ್ ತಂಡ- ರಾಸಾಯನಿಕ ವಿಭಜನೆ ಪ್ರಯೋಗ
6. ಜೆ.ಸಿ.ಬೋಸ್ ತಂಡ -ರಾಸಾಯನಿಕ ಸಂಯೋಗ
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಶ್ರೀನಿವಾಸ ಹಾಗೂ ಶ್ರೀಯುತ ನಾಗರಾಜ್ ರವರು ಶಿಬಿರಾರ್ಥಿಗಳು ಮಾಡಿದ ಪ್ರಯೋಗದ ವೀಕ್ಷಣಾ ವಿವರದ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು KOER ಗೆ upload ಮಾಡಿದರು. ಪ್ರಯೋಗ ಮಾಡುವ ಭರಾಟೆಯಲ್ಲಿ ಸಮಯ ಸರಿದದ್ದೇ ತಿಳಿಯದಂತಾಗಿತ್ತು. ಅದಾಗಲೇ ಸಮಯ 4.45 pm. ಎಲ್ಲಾ ಶಿಬಿರಾರ್ಥಿಗಳು ಪ್ರಯೋಗ ಸಫಲವಾದ ತೃಪ್ತಿಯೊಂದಿಗೆ ಮನೆಯ ದಾರಿ ಹಿಡಿದರು.
ವಂದನೆಗಳೊಂದಿಗೆ,
ಶ್ರೀಮತಿ ಚೇತನ. ಆರ್
ಸ.ಶಿ, ಸರ್ಕಾರಿ ಪ್ರೌಢಶಾಲೆ,
ಅರಕೆರೆ.
5th Day
ಐದನೇ ದಿನದ ತರಬೇತಿ ವರದಿ
ಐದನೇ ದಿನದ ತರಬೇತಿಯು ನಾಲ್ಕನೇ ದಿನದ ತರಬೇತಿಯ ಅನಿಸಿಕೆಯೊಂದಿಗೆ ಡಯಟ್ ಉಪ ಪ್ರಾಂಶುಪಾಲರಾದ ಶ್ರೀಮತಿ ಗಾಯಿತ್ರಿ ಇವರ ಸಮ್ಮುಖದಲ್ಲಿ ಸರಿಯಾಗಿ ೯;೩೦ ಕ್ಕೆ ಪ್ರಾರಂಭವಾಯಿತು. ನಾಲ್ಕನೇ ದಿನದ ವರದಿಯನ್ನು ಶ್ರೀ ಮತಿ ಚೇತನ ಅವರು ಮಂಡಿಸಿದರು ನಂತರ ಹಿಂದಿನ ದಿನದ ಹಿಮ್ಮಾಹಿತಿಯನ್ನು ಟೈಪ್ ಮಾಡಿದೆವು.ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಯುತ ನಾಗರಾಜರವರು gimp ನಲ್ಲಿ imageನ್ನು edit ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
11 ಗಂಟೆಗೆ ಸರಿಯಾಗಿ ಟೀ ವಿರಾಮದ ನಂತರ gimp ನ ಪ್ರಾಯೋಗಿಕ ಚಟುವಟಿಕೆ ಮಾಡಿದೆವು. ನಂತರ ಸಂಪನ್ಮೂಲ ವ್ಯಕ್ತಿಯಾದ ಶ್ರೀನಿವಾಸ್ ರ ವರು open shot video editor app ನ್ನು ಪರಿಚಯಿಸಿಕೊಟ್ಟರು. ನಾವೆಲ್ಲರು ಈ app ನ್ನು ಬಳಸಲು ಕಲಿತೆವು, ಸಂಪನ್ಮೂಲ ವ್ಯಕ್ತಿಗಳೆಲ್ಲರು ಈಚಟುವಟಿಕೆ ಮಾಡಲು ಸಹಕರಿಸಿದ,
ಮಧ್ಯಾಹ್ನದ ಊಟದ ನಂತರ stellarium app ನ ಬಳಸುವ ವಿಧಾನವನ್ನು ಕಲಿತೆವು
. ನಂತರ 5 ದಿನದ ತರಭೇತಿಯ ಮುಖ್ಯಾಂಶಗಳನ್ನು ವಿಶ್ಲೇಶಿಸಲಾಯಿತು.
ಶಿಭಿರಾರ್ಥಿಗಳ ಹಿಮ್ಮಾಹಿತಿಯನ್ನು koer ಗೆ ಸೇರಿಸಲಾಯಿತು,
ಕೊನೆಗೆ ಸಮಾರೋಪ ಸಮಾರಂಭದೊಂದಿಗೆ ಎಲ್ಲರನ್ನು ಬೀಳ್ಕೊಡಲಾಯಿತು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

1st Day

2nd Day ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಶಿವಮೊಗ್ಗ.
ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರ
ದಿನಾಂಕ : 03-11-2015 ರಿಂದ 07-11-2015
ಎರಡನೇ ದಿನದ ತರಬೇತಿಯ
ಸ್ವ-ಅವಲೋಕನ ವರದಿ.
- ರಾಘವೇಂದ್ರ ಭಟ್.
ಚುಮು ಚುಮು ಚಳಿಯಲ್ಲೂ ಶಿಕ್ಷಕರು ಮೊದಲದಿನದ ಕಲಿಕೆಯನ್ನು ಪುನರಾವರ್ತಿಸುವ ಆಸಕ್ತಿಯಿಂದ 9.30 ಕ್ಕೆ ಗಣಕಯಂತ್ರದ ಮುಂದೆ ಹಾಜರಾಗಿದ್ದರು.ಎರಡನೇ ದಿನದ ತರಬೇತಿ ಶ್ರೀಮತಿ ಶಾಂತಾ ರವರ ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ವರದಿ ವಾಚನದ ನಂತರ ಶಿಬಿರದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಗಾಯಿತ್ರಿ ಮತ್ತು ಶ್ರೀಮತಿ ಫಾತಿಮಾರವರು ಸೂಕ್ತ ಹಿಮ್ಮಾಹಿತಿ ನೀಡಿದರು.
ನಂತರ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮಧುಕುಮಾರ್ ಈ ದಿನದ ತರಬೇತಿಯ ವೇಳಾಪಟ್ಟಿಯನ್ನು ಶಿಕ್ಷಕರ ಮುಂದಿಟ್ಟು ಅದರ ಅನುಪಾಲನೆಯೊಂದಿಗೆ ಹೆಚ್ಚಿನ ಅಂಶಗಳನ್ನು ಕಲಿಯಬೇಕೆಂದು ತಿಳಿಸಿದರು.
ಎರಡನೇ ದಿನದ ಮೊದಲ ಅವಧಿಯಲ್ಲಿ ಶಿಕ್ಷಕರೆಲ್ಲರು ಹಿಂದಿನ ದಿನದ ಸ್ವ ಅವಲೋಕನ ವರದಿಯನ್ನು ಲಿಬ್ರಾ ಆಫೀಸ್ ನಲ್ಲಿ ಟೈಪ್ ಮಾಡಿದರು.
ನಂತರ ಯೂ ಟ್ಯೂಬ್ ನಲ್ಲಿ ಲಭ್ಯವಿರುವ ವಿಷಯ ಸಂಬಂಧಿತ ವಿಡಿಯೋಗಳನ್ನು ಡೌನ್ ಲೋಡ್ ಮಾಡುವ ವಿಧಾನವನ್ನು ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮಧುಕುಮಾರ್ ವಿವರಿಸಿದರು. ಎಲ್ಲ ಶಿಕ್ಷಕರೂ ವಿವಿಧ ವಿಷಯ ಸಂಬಂಧೀ ವಿಡಿಯೋಗಳನ್ನು ಆಸಕ್ತಿಯಿಂದ ವೀಕ್ಷಿಸಿ ತಮ್ಮ ತರಗತಿ ಬಳಕೆಗೆ ಸೂಕ್ತವಾದವುಗಳನ್ನು ಡೌನ್ ಲೋಡ್ ಮಾಡಿದರು.
ಚಹಾ ವಿರಾಮದ ನಂತರ ದಿನದ ಎರಡನೇ ಅವಧಿ ಪ್ರಾರಂಭವಾಯಿತು, ತರಬೇತಿಯ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀ ನಾಗರಾಜ್ ರವರು ಏಔಇಖ ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕುರಿತು ಮಾಹಿತಿ ನೀಡಿದರು. ಏಔಇಖ ಸೈಟ್ ಪ್ರವೇಶಿಸುವ ವಿಧಾನ , ಅದರ ವಿವಧ ಕಿಟಕಿಗಳ ತೆರೆಯುವಿಕೆ ಮತ್ತು ಅದರಲ್ಲಿನ ವಿವಿಧ ಸಂಪನ್ಮೂಲಗಳ ಬಳಕೆ , ಸಂಪನ್ಮೂಲಗಳ ಸೇರ್ಪಡೆಯಿಂದ ಈ ಸೈಟ್ ಅನ್ನು ಶ್ರೀಮಂತಗೊಳಿಸುವ ಮುಕ್ತ ಅವಕಾಶ ಇರುವುದನ್ನು ವಿಸ್ತ್ರತವಾಗಿ ತಿಳಿಸಿದರು. ನಂತರ ಶಿಕ್ಷಕರು ಸೈಟ್ ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಅವಲೋಕಿಸಿದರು.
ಭೋಜನ ವಿರಾಮದ ನಂತರ ಶ್ರೀ ಮಧುಕುಮಾರ್‍ರವರು ಸಿ.ಸಿ.ಇ ಆಧರಿತ ಚಟುವಟಿಕೆಗಳನ್ನು 10 ಹಂತಗಳಲ್ಲಿ ಕೈಗೊಳ್ಳುವ ಮತ್ತು ದಾಖಲೀಕರಣ ಮಾಡುವ ವಿಧಾನವನ್ನು ಉದಾಹರಣೆ ಸಹಿತ ವಿವರಿಸಿದರು. ಶಿಕ್ಷಕರನ್ನು ತಲಾ ಐದು ಜನರ ಗುಂಪುಗಳಾಗಿ ವಿಂಗಡಿಸಿ ಒಂದೊಂದು ಚಟುವಟಿಕೆಯನ್ನು ಗಣಕಯಂತ್ರ ಮತ್ತು ಅಂತರ್ಜಾಲದ ಸಹಾಯದಿಂದ ರಚಿಸುವಂತೆ ಹೇಳಿದರು.
ಉತ್ಸಾಹದಿಂದ ಕಾರ್ಯಪ್ರವರ್ತರಾದ ಶಿಬಿರಾರ್ಥಿಗಳು ಅತ್ಯಂತ ಯಶಸ್ವಿಯಾಗಿ ಕಾರ್ಯ ಪೂರೈಸಿದ್ದಲ್ಲದೇ ಓಡಿಟಿ ಫಾರ್ಮೆಟ್ ನಲ್ಲಿಯೇ ಅವುಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿದ್ದು ಈ ತರಬೇತಿಯ ಪರಿಣಾಮ ಮತ್ತು ಭವಿಷ್ಯದ ಸೂಚಕವಾಗಿತ್ತು.
ಈ ಸಂದರ್ಭದಲ್ಲಿ ತರಬೇತಿ ಸ್ಥಳಕ್ಕೆ ಆಗಮಿಸಿದ್ದ ಎಸ್.ಟಿ.ಎಫ್ ನ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಅನುಭವ ಹೊಂದಿರುವ ಶ್ರೀ ಸುನೀಲ್ ರವರು ತಮ್ಮ ಅನುಭವಗಳನ್ನು ಶಿಬಿರಾರ್ಥಿಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಕರು ಸಂಪನ್ಮೂಲಗಳನ್ನು ಹಂಚಿಕೊಳ್ಳಲು Wಚಿಣsಚಿಠಿಠಿ & ಊiಞe ಗಳನ್ನು ಬಳಸುವಂತೆ ನಿವೃತ್ತಿಯ ಅಂಚಿನಲ್ಲಿದ್ದರೂ ತಂತ್ರಜ್ಞಾನ ಬಳಕೆಯ ಕುರಿತು ಸದಾ ಉತ್ಸಾಹಿಯಾಗಿರುವ ಶಿಬಿರ ನಿರ್ದೇಶಕರೂ ಆಗಿರುವ ಶ್ರೀಮತಿ ಗಾಯತ್ರಿ ಮೇಡಂ ಎಲ್ಲರನ್ನು ಹುರಿದುಂಬಿಸಿದರು.
ಮೂರನೇ ದಿನದ ತರಬೇತಿಯಲ್ಲಿ ಇನ್ನಷ್ಟು ವಿಷಯಗಳನ್ನು ಕಲಿಯುವ ಉತ್ಸಾಹದಿಂದ ಈ ದಿನದ ತರಬೇತಿ ಸ್ಥಳದಿಂದ ಶಿಬಿರಾರ್ಥಿಗಳು ತೆರಳುವಾಗ ಸಮಯ 5.30 ನ್ನು ದಾಟಿತ್ತು.

3rd Day 4th Day 5th Day

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಶಿವಮೊಗ್ಗ
ಮೊದಲದಿನದ ಕನ್ನಡ ಎಸ್.ಟಿ.ಎಫ್ ತರಬೇತಿಯ ವರದಿ
ನನ್ನ ಕನ್ನಡ ನುಡಿಯೆ ನೀನೆಷ್ಟು ಚೆಂದ, ಏನು ಗೀಚಿದರೂ ಆಗುವುದು ಸಿರಿಗಂಧ
ದಿನಾಂಕ ೨೩/೧೧/೨೦೧೫ ರಂದು ಬೆಳಗ್ಗೆ ೧೦.೩೦ಕ್ಕೆ ಡಯಟ್ ಶಿವಮೊಗ್ಗ ಇಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಕನ್ನಡ ಭಾಷಾ ಶಿಕ್ಷಕರಿಗೆ ೫ ದಿನಗಳ ಕಂಪ್ಯೂಟರ್ ತರಬೇತಿಯು ಶ್ರೀ ಗಣಪತಿ ಉಪನ್ಯಾಸಕರು ಟಯಟ್ ಇವರ ಅಧ್ಯಕ್ಷತೆಯಲ್ಲಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ಗವಿರಂಗಪ್ಪ,ಶ್ರೀ ಶಿವಾನಂದ ಹೆಚ್ ಜೆ. & ಶ್ರೀ ಗೋಪು ಇವರ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಯಿತು.
ಮೊದಲ ಅವಧಿಯಲ್ಲಿ ಆಗಮಿಸಿದ ಎಲ್ಲಾ ಶಿಕ್ಷಕರ ಪರಸ್ಪರ ಪರಿಚಯ ಕಾರ್ಯಕ್ರಮ ನಡೆಯಿತು..ಶ್ರೀಗೋಪು ಇವರು ಎಸ್.ಟಿ.ಎಫ್ ಅಂದರೆ ಏನು? ಅದರ ಉಪಯೋಗಗಳಾವುವು? ಅದು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು.೧೧.೪೫ಕ್ಕೆ ಟೀ ವಿರಾಮ ನೀಡಲಾಯಿತು.
ಎರಡನೇ ಅವಧಿಯಲ್ಲಿ ಶ್ರೀ ಶಿವಾನಂದ ರವರು ಒಬಂಟುನಲ್ಲಿ ಜಿ ಮ್ಯೆಲ್ ಅಕೌಂಟ್ ತೆರೆಯುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ನಂತರ ಪ್ರತಿಶಿಕ್ಷಕರಿಂದ ಜಿ ಮ್ಯಲ್ ಅಕೌಂಟ್ ತೆರೆಯಲು ಸಹಕರಿಸಿದರು.೧ .೩೦ಕ್ಕೆ ಊಟಕ್ಕೆ ಬಿಡಲಾಯಿತು.
ಮಧ್ಯಾಹ್ನದ ಅವಧಿಯಲ್ಲಿ ತೆರೆಯುವ ಉದ್ದೇಶಗಳು @ ಪ್ರಯೋಜನಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತಿಳಿಸಿಕೊಟ್ಟರು. ಪ್ರತಿ ಶಿಕ್ಷಕರೂ ಜಿ ಮ್ಯೆಲ್ ಅಕೌಂಟ್ ತೆರೆದು ಅದರಲ್ಲಿ ಮೆಸೇಜ್ಗಳನ್ನು ಓದುವ ,ಬರೆಯುವ ಬಗ್ಗೆ ಶ್ರೀ ಶಿವಾನಂದರವ ತಿಳಿಸಿಕೊಟ್ಟರು.
ಕೊನೆಅವಧಿಯಲ್ಲಿ ಶ್ರೀಗವಿರಂಗಪ್ಪನವರು ಜಿ-ಮ್ಯೆಲ್ ಅಕೌಂಟ್ ಈಗಾಗಲೇ ಹೊಂದಿರುವವರಿಗೂ ಸಹ ಹೇಗೆ ಅಕೌಂಟ್ ಗಳನ್ನು ಮುಂದುವರೆಸುವಬಗ್ಗೆ ಮೆಸೇಜ್ ಗಳನ್ನು ಡಿಲಿಟ್ ಮಾಡುವಬಗ್ಗೆ ತಿಳಿಸಿಕೊಟ್ಟರು. ಶಿಬಿರದ ಎಲ್ಲಾ ಶಿಕ್ಷಕರೂ ಪ್ರಾತಕ್ಷಿಕೆಯನ್ನು ನೋಡಿ ಕಂಪ್ಯೂಟರ್ನಲ್ಲಿ ಕಾರ್ಯ ನಡೆಸಿದರು, ಮೊದಲ ದಿನಕ್ಕೆ ೫.೩೦ಕ್ಕೆ ಮಂಗಳ ಹಾಡಲಾಯಿತು.
2nd Day
2nd Day Report

3rd Day
3rd Day Report

4th Day
4th Day Report

5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗದಲ್ಲಿ ನಡೆದ ಐದನೇ ದಿನದ ಕನ್ನಡ ಎಸ್ ಟಿ ಎಫ್ ತರಬೇತಿಯ ವರದಿ
ತಂಡ- ಜಿ. ಎಸ್. ಶಿವರುದ್ರಪ್ಪ ಶಿಕಾರಿಪುರ
ದಿನಾಂಕ-೨೭-೧೧-೨೦೧೫
ವರದಿವಾಚನ
ಎಲ್ಲ ಬಲ್ಲವರಿಲ್ಲ ಬಲ್ಲಿದರು ಬಹಳಿಲ್ಲ
ಬಲ್ಲವರಿದ್ದು ಬಲವಿಲ್ಲ ಸಾಹಿತ್ಯ
ಎಲ್ಲರಿಗಲ್ಲ - ಸರ್ವಜ್ಞ
ಎಲ್ಲರಿಗೂ ನನ್ನ ನಮಸ್ಕಾರಗಳು
ಈ ದಿನ ಭದ್ರಾವತಿ ಎರಡನೆಯ ತಂಡದ ಚಂಪಾ ಹೆಗಡೆಯವರು ಡಿ.ವಿ.ಜಿಯವರ ಕಗ್ಗದ ನುಡಿಯನ್ನು ವಾಚಿಸುತ್ತ ಹಿಂದಿನ ದಿನದ ತರಬೇತಿಯ ಎಲ್ಲ ಮಾಹಿ ತಿಯನ್ನು ಒಳಗೊಂಡ ಸಮಗ್ರ ವರದಿಯನ್ನು ಮಂಡಿಸಿದರು
ಮೊದಲ ಅವಧಿ
ಸಂಪನ್ಮೂಲ ಶಿಕ್ಷಕರಾದ ಗವಿರಂಗಪ್ಪನವರು ಪಠ್ಯಪೂರಕ ಸಂಪನ್ಮೂಲಕ್ಕೆ ಔಚಿತ್ಯವಾಗಿ ಧ್ವನಿಮುದ್ರಣ ಮಾಡುವ ವಿಧಾನವನ್ನು Record my desktop ಅನ್ನುವ toolನಲ್ಲಿ record ಮಾಡುವುದು ಹೇಗೆ ಮತ್ತು ಅದನ್ನು ತರಗತಿ ಕೊಣೆಯಲ್ಲಿ ಹೇಗೆ ಅಭಿವ್ಯಕ್ತಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.ನಂತರ ಇದೆ ಅವಧಿಯಲ್ಲಿ ಶ್ರೀ ಗೊಪರವರು ಸಂಚಾರದ ಮಾರ್ಗಗಳನ್ನು ಗುರುತಿಸಲು ಸಹಾಯವಾಗುವ google map ವಿಷಯದ ಬಗ್ಗೆ ಮಾಹಿತಿ ಕೊಟ್ಟ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ಶಿವಮೊಗ್ಗದಿಂದ ಹೊಸನಗರಗಳಿಗೆ ಹೊಗುವ ಮಾರ್ಗಗಳನ್ನು ತೊರಿಸುವುದರ ಮೂಕಾಂತರ ಪರಿಚಯಿಸಿಕೊಟ್ಟರು.
ಎರಡನೆಯ ಅವಧಿ
ಈ ಅವಧಿಯಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಗಣಪತಿಯವರು ಎಲ್ಲ ಶಿಭಿರಾರ್ಥಿಗಳಿಗೂ ಅತಿ ಮುಖ್ಯವಾದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಕಂಡುಹಿಡಿಯಲು ಅನುಕೂಲವಾಗುವ libiro office calc ವಿಷಯದ ಬಗ್ಗೆ ಮಾಹಿತಿ ನೀಡಲು ಪ್ರಾರಂಬಿಸಿದರು
ಭೋಜನ ವಿರಾಮ
ವಿರಾಮದ ಈ ಅವಧಿಯಲ್ಲಿ ಶಿಭಿರಾರ್ಥಿಗಳು ಸಿಹಿಯಾದ ಹೋಳಿಗೆ ಊಟವನ್ನು ತುಪ್ಪದೊಂದಿಗೆ ಸವಿದರು. ಈ ಊಟವು ಶಿಭಿರಾರ್ಥಿಗಳಿಗೆ ದೀಪಾವಳಿ ಹಬ್ಬದ ಸವಿಯನ್ನು ನೆನಪಿಸುವಂತಿತ್ತು
ಮೂರನೇ ಅವಧಿ
ಊಟದ ಸವಿಯೊಂದಿಗೆ ಬಂದ ಶಿಭಿರಾರ್ಥಿಗಳಿಗೆ ಶ್ರೀ ಗಣಪತಿ ಉಪನ್ಯಾಸಕ libro office calc ಮುಂದುವರಿದ ಭಾಗವನ್ನು ಮತ್ತು ವಿವಿಧ formula ಗಳನ್ನು ತಮ್ಮ ಉತ್ತಮವಾದ ಭೋಧನಾ ಸಾಮರ್ಥ್ಯದಿಂದ ತಿಳಿಸಿಕೊಟ್ಟರು.ನಂತರ ಶಿಭಿರಾರ್ಥಿಗಳು ಅಭ್ಯಾಸ ಮಾಡುವ ಮೂಕಾಂತರ ಕಲಿತರು
ನಾಲ್ಕನೇ ಅವಧಿ
ಚಹಾವಿರಾಮವನ್ನು ಪೂರೈಸಿದ ಶಿಭಿರಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಾನಂದ ರವರು ಪೋಟೊ ಲಿಂಕ್ ಶೇರ್ ಮಾಡುವ ಬಗ್ಗೆ ವಿವರಿಸಿದರು. ಶ್ರೀಯುತ ಗವಿರಂಗಪ್ಪರವರು ವೀಡಿಯೋ ಎಡಿಟಿಂಗ್ ಬಗ್ಗೆ ಮಾಹಿತಿ ನೀಡಿದರು.
ಧನ್ಯವಾದಗಳು

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.