MDRS Ganjigatti
ನಮ್ಮ ಶಾಲೆಯ ಬಗ್ಗೆ / About MDRS Ganjigatti
ನಮ್ಮ ಶಾಲೆಯು ಹಾವೇರಿ ಜಿಲ್ಲೆಯ ಪ್ರತಿಷ್ಠಿತ ಶಿಗ್ಗಾಂವ್ ತಾಲೂಕಿನಲ್ಲಿ ಒಂದಾದ ಗಂಜಿಗಟ್ಟಿಯಲ್ಲಿ ನೆಲೆಗೊಂಡಿದೆ. ಇದು 01-07-1982 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಆರಂಭವಾಗಿದೆ. ವಿಶಾಲವಾದ ಮೈದಾನದ ಸೌಲಭ್ಯವನ್ನು ಹೊಂದಿದ್ದು ಮಕ್ಕಳ ಸಹ ಪಠ್ಯ ಚಟುವಟಿಕೆಗಳಿಗೂ ಪೂರಕವಾಗಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಜೊತೆಗೆ ಸಂಗೀತದ ಶಿಕ್ಷಣ , ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳಲಾಗುತ್ತಿದೆ,ಗಣಕಯಂತ್ರದ ಮೂಲಕ ವಿಶೇಷ ಕಲಿಕೆಗಳನ್ನು ಪಠ್ಯಕ್ರಮದ ಜೊತೆ ಕಲಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಶಾಲೆಗಳಲ್ಲಿ ಇದು ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.,
ಗಂಜಿಗಟ್ಟಿ ಶಾಲೆ ನೆಲೆಸಿರುವ ನಕ್ಷೆ / Ganjigatti School Location Map
Loading map...
ವಿದ್ಯಾರ್ಥಿಗಳ ನುಡಿ / Student speak
ಶಿಕ್ಷಕರುಗಳ ನುಡಿ / Teacher speak
ಕಲಾವತಿ
ಕಳೆದ 2 ವರ್ಷಗಳಿಂದ IT For Change ನವರು ನಮ್ಮ ಶಾಲೆಯಲ್ಲಿ ಶಿಕ್ಷಕರ ಕಲಿಕಾ ಸಮುದಾಯದಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ೮ ಮತ್ತು ೯ ನೇ ತರಗತಿಗೆ ಕನ್ನಡ ಮತ್ತು ಗಣಿತ ವಿಷಯದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿಯಲ್ಲಿ ಬೋಧಿಸುವ ಪ್ರಕ್ರಿಯೆಯಲ್ಲಿ ಸಹಾಯಮಾಡುತ್ತಿದ್ದಾರೆ.
ವಾರದಲ್ಲಿ ೧ ದಿವಸ ೨ ಅವದಿಗಳನ್ನು ನಮ್ಮ ಜೊತೆಯಲ್ಲಿ ಕೈ ಜೋಡಿಸುತ್ತಿದ್ದಾರೆ.
ಕಳೆದ ವರ್ಷ ಕನ್ನಡದಲ್ಲಿ ಹೊಸ- ಹೊಸ ಚಟುವಟಿಕೆಯನ್ನು ಬಳಸಲಾಗಿದೆ.
ಉದಾ;
- ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
- ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡಿವುದು. ಈ ಮೂಲಕ ಮಾತನಾಡಿವ ಕೌಶಲವನ್ನು ವೃದ್ದಿಸುವುದು
- ಶಾಲಾ ಭಿತ್ತಿ ಪತ್ರಿಕೆ- ಈ ಮೂಲಕ ಮಕ್ಕಳಲ್ಲಿ ಯಾವವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಈ ಗೋಡೆ ಪತ್ರಿಕೆಯ ಮೂಲಕ ಪ್ರಕಟಿಸುವುದು (ವಿದ್ಯಾರ್ಥಿಗಳೇ ಸಂಪಾದಕರು ಮತ್ತು ಉಪ ಸಂಪಾದಕರು)
- ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಷೇಶ ವಿಷಯಗಳನ್ನು ಮಕ್ಕಳಿಂದ ಸಾದರ ಪಡಿಸುವುದು
- ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
- ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
- ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ
ಕಲಾವತಿ
ಸಹಶಿಕ್ಷಕರು
ದೊಮ್ಮಲೂರು ಶಾಲೆ
ಶಿವ ಪ್ರಕಾಶ್
೨೦೧೬-೧೭ ನೇ ಸಾಲಿನಲ್ಲಿ IT For Change ಸ್ವಯಂ ಸೇವಾ ಸಂಸ್ಥೆ ೯ ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಷತ ಶಿಕ್ಷಕರ ನೇತೃತ್ವದಲ್ಲಿ ಇದನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ
ಮುಖ್ಯ ಶಿಕ್ಷಕರ ನುಡಿ / Head Teacher speak
ಶಾಲಾ ಪ್ರೊಫೈಲ್ / School Profile
ವಿದ್ಯಾರ್ಥಿಗಳ ಸಂಖ್ಯಾಬಲ / Student Strength
Class | Medium | Girls | Boys | Total! |
---|---|---|---|---|
6th | English | 22 | 28 | 50 |
7th | English | 22 | 35 | 57 |
8th | English | 22 | 26 | 48 |
9th | English | 23 | 34 | 57 |
10th | English | 24 | 26 | 50 |
Total | English | 149 | 113 | 262 |
ಶಿಕ್ಷಕರ ಮಾಹಿತಿ / Teacher Profile
ಹೆಸರು Name |
ಹುದ್ದೆ Designation |
ವಿದ್ಯಾರ್ಹತೆ Qualification |
ಬೋಧನಾ ಅನುಭವ Teaching Experience |
additional ಇತರೆ |
---|---|---|---|---|
ಶ್ರೀ ಶಂಭುಲಿಂಗಪ್ಪ ಸಿ. ಹಿತ್ತಲಮನಿ Sri Shambulingappa C Hittalamani |
ಪ್ರಾಂಶುಪಾಲರು Principal |
ಎಂ.ಎಸ್ಸಿ,ಬಿ ಎಡ್ B A B.Ed |
ವರ್ಷ year |
ನಿಯೋಜನೆ Deputation |
ಶ್ರೀ ಎಸ್. ಎಸ್.ಹೆಬ್ಬಳಿ Sri S S Hebbali |
ಪ್ರಭಾರ ಪ್ರಾಂಶುಪಾಲರು I/C Principal |
ಎಂ.ಎ,ಬಿ ಎಡ್ M.A.B.Ed |
ವರ್ಷ year |
|
ಶ್ರೀ ಮಂಜುನಾಥ ಸಿ.ಪುರದ Sri Manjunath C Purad |
ಕನ್ನಡ ಸ.ಶಿ Assistant teacher (Kannada) |
ಬಿ ಎ,ಬಿ ಎಡ್ B A B.Ed |
ವರ್ಷ year |
ನಿಯೋಜನೆ Deputation |
ಶ್ರೀ ನಿಂಗಪ್ಪ ಟಿ. ಲಮಾಣಿ Shri Ningappa T Lamani |
ಸಹ ಶಿಕ್ಷಕರು (ದೈ.ಶಿ) Assistant teacher (Physical education) |
ಬಿ ಎ,ಬಿ ಪಿ.ಇಡಿ B A B.PEd |
ವರ್ಷ year |
|
ಶ್ರೀ ಎಸ್. ಎಮ್. ಮನಿಯಾರ Shri S.M. Maniyar |
ಸಹಶಿಕ್ಷಕರು (ಗಣಿತ) Assistant Teacher (English) |
ಎಂ ಎಸ್.ಸಿ,ಬಿ ಎಡ್ MSc,Bed |
ವರ್ಷ year |
|
ಶ್ರೀಮತಿ ಸುಮಾ ಆರ್. ಮಗದೂರ Suma R Magadur |
ಸಹಶಿಕ್ಷಕರು (ವಿಜ್ಞಾನ) Assistant Teacher (Science) |
ಎಂ ಎಸ್.ಸಿ,ಬಿ ಎಡ್ MSc,Bed |
ವರ್ಷ year |
ನಿಯೋಜನೆ Deputation |
ಶ್ರೀಮತಿ ಪೂರ್ಣಿಮಾ ನಂದಿಹಳ್ಳಿ Smt Purnima Nandihalli |
ಸಹಶಿಕ್ಷಕರು (ಕಂಪ್ಯೂಟರ) Assistant Teacher (Computer) |
ಬಿ.ಸಿ.ಎ , ಎಂ.ಸಿ.ಎ BCA MCA |
ವರ್ಷ year |
ನಿಯೋಜನೆ Deputation |
ಶ್ರೀ ಬಸಯ್ಯ. ಎಚ್. ಹೀರೆಮಠ Sri Basayya H Hiremath |
ಸಹಶಿಕ್ಷಕರು (ಸಂಗೀತ) Assistant Teacher (Music) |
ಎಂ.ಎ (ಸಂಗೀತ) M.A (Music) |
ವರ್ಷ year |
|
ಶ್ರೀಮತಿ ಲತಾ ರಜಪೂತ Smt Lata Rajaput |
ಸ್ಟಾಫ್ ನರ್ಸ್ Staff Nurse |
ಜಿ.ಎನ್.ಎಂ GNM |
ವರ್ಷ year |
|
ಶ್ರೀ ರವಿ.ಸಿ Sri Ravi.C |
ಸಹಶಿಕ್ಷಕರು (ಸಮಾಜ ವಿಜ್ಞಾನ) Assistant Teacher (Social science) |
ಎಂ ಎ ಬಿ ಎಡ್ M.A Bed |
ವರ್ಷ year |
|
ಶ್ರೀ ಅಶೋಕ ಎಂ.ಪೂಜಾರಿ Sri Ashok M Pujari |
ಸಹಶಿಕ್ಷಕರು (ವಿಜ್ಞಾನ) Assistant Teacher (Science) |
ಎಂ.ಎಸ್ಸಿ,ಬಿ ಎಡ್ M.Sc,Bed |
ವರ್ಷ year |
ನಿಯೋಜನೆ Deputation |
ಶ್ರೀ ಮುತ್ತಪ್ಪ ಫ. ಕೆಳಗಿನಮನಿ Smt UMA K N |
ಸಹಶಿಕ್ಷಕರು (ಕನ್ನಡ) Assistant Teacher (Hindi) |
ಎಂ ಎ,ಬಿ ಎಡ್ MA,Bed |
ವರ್ಷ year |
ನಿಯೋಜನೆ Deputation |
ಶ್ರೀ ದಯಾನಂದ ಎಸ್. ಹಿರೇಮಠ Sri Baktappa Sumamala |
ಸಹಶಿಕ್ಷಕರು (ಹಿಂದಿ) Assistant Teacher (P.E) |
ಎಂ ಎ,ಬಿ ಎಡ್ MA,Bed |
ವರ್ಷ year |
ನಮ್ಮ ಸಮುದಾಯ/ My Community
ಎಸ್ಡಿಎಮ್ಸಿ ಸದಸ್ಯರು /SDMC Members
SDMC ಸದಸ್ಯರ ಹೆಸರು | ಪದನಾಮ |
---|---|
ರಮೇಶ್ | ಅಧ್ಯಕ್ಷರು |
ಅಲಮೇಲಮ್ಮ | ಸದಸ್ಯರು |
ಚಿಕ್ಕಪ್ಪ | ಸದಸ್ಯರು |
ನಾಗರಾಜು | ಸದಸ್ಯರು |
ನಿರ್ಮಲ | ಸದಸ್ಯರು |
ಮಹಾಲಿಂಗ್ವ | ಸದಸ್ಯರು |
ಮಂಜುಳ | ಸದಸ್ಯರು |
ಮೇರಿ | ಸದಸ್ಯರು |
ಕವಿತ | ಸದಸ್ಯರು |
ಕೃಷ್ಣಪ್ಪ | ಸದಸ್ಯರು |
ಉಷಾ | ಸದಸ್ಯರು |
ರಾಮು | ಸದಸ್ಯರು |
ಶ್ರೀನಿವಾಸ | ಸದಸ್ಯರು |
ಬಸಪ್ಪ | ಸದಸ್ಯರು |
ಫಯಾಜ್ | ಸದಸ್ಯರು |
ರೆಡ್ದಪ್ಪ | ಸದಸ್ಯರು |
ಗಂಗಾವತಿ | ಸದಸ್ಯರು |
ಹೆಸರು | ಹುದ್ದೆ | ಪದನಾಮ |
---|---|---|
ಲಕ್ಷ್ಮೀ ನಾರಾಯಣ | ಕಾರ್ಪೋರೇಟರ್ | ಪದನಿಮಿತ್ತ |
ಎಮ್ ಜಿ ಅವಧಾನಿ | ಮುಖ್ಯ ಶಿಕ್ಷಕರು | ಪದನಿಮಿತ್ತ |
ಸುಮಿತ್ರ | ಅಂಗನವಾಡಿ ಶಿಕ್ಷಕಿ | ಆರೋಗ್ಯ |
ಪರಂಜ್ಯೋತಿ | ಸೀನಿಯರ್ ಸಿಟಿಜನ್ | ಯೋಗ |
ಕೆ ಎನ್ ಉಮಾ | ಶಿಕ್ಷಕಿ | ಪದನಿಮಿತ್ತ |
ಖಾದರ್ | ವಿದ್ಯಾರ್ಥಿ | ಪದನಿಮಿತ್ತ |
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school
- ಸೀನಿಯರ್ ಸಿಟಿಜನ್,ಇಂದಿರಾನಗರ್,ಬೆಂಗಳೂರು
Senior Citizens - Indira Nagara,Bengaluru - ಸಿಎಮ್ಸಿಎ ದೊಮ್ಮಲೂರು, ಬೆಂಗಳೂರು
CMCA Dommaluru,Bengaluru - ದೊಮ್ಮಲೂರು ಲೇಔಟ್ ಅಸೋಷಿಯೇಷನ್,ಬೆಂಗಳೂರು
Dommaluru layout associations,Bengaluru - ಸಿ ಹೆಚ್ ಇ ಕಂಪನಿ,ಬೆಂಗಳೂರು
C.H.E Company Bengaluru - ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್,ಬೆಂಗಳೂರು
Swamy Vivekananda Youth Movement,Bengaluru - ರೋಟರಿ,ಇಂದಿರಾನಗರ,ಬೆಂಗಳೂರು
Rotary Indiranagar,Bengaluru - ಆರ್ಟ್ ಆಫ್ ಲೀವಿಂಗ್,ಬೆಂಗಳೂರು
Art of Living,Bengaluru - ಟಾರ್ಗೆಟ್ ರೋಟರಿ,ಬೆಂಗಳೂರು
Target Rotary,Bengaluru
ಶಾಲಾ ಮೂಲಭೂತ ವ್ಯವಸ್ಥೆ / Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms
ಆಟದ ಮೈದಾನ / Playground
ಗ್ರಂಥಾಲಯ / Library
ವಿಜ್ಞಾನ ಪ್ರಯೋಗಾಲಯ / Science Lab
ICT ಪ್ರಯೋಗಾಲಯ / ICT Lab
This school has implemented IVRS and Fedena.
ಶಾಲಾ ಅಭಿವೃದ್ಧಿ ಯೋಜನೆ / School Development Plan
MDRS Ganjigatti/School Admission Banner 2015-16
ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme
School time table
8th | 1 | 2 | 3 | 4 | 5 | 6 | 7 | 8 |
Monday | English | Hindi | Maths | Craft | computer | Social | Kannada | Science |
Tuesday | English | Hindi | Social | Maths | Kannada | Craft | Science | P.E |
Wednesday | English | Hindi | Library | Maths | Science | Kannada | Social | P.E |
Thursday | English | Science | Maths | Hindi | Social | Maths | Kannada | Kannada |
Friday | Maths | Social | P.E | Science | Kannada | Craft | P.E | English |
Saturday | Mass P.T | English | Social | Hindi | Maths |
ಕನ್ನಡ /Kannada
ಕಳೆದ ಎರಡು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯ ವಿಷಯದಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ ಶ್ರೀಯುತ ಅವಧಾನಿಯವರು,ಶ್ರೀಮತಿ ಕಲಾವತಿಯವರು,ಶ್ರೀಯುತ ಶಿವಪ್ರಕಾಶ್ರವರು ಕಾರ್ಯೋನ್ಮುಖರಾಗಿದ್ದಾರೆ.ಬಹುಭಾಷಾ ಪರಿಸರದ ಶಾಲೆಯಾದ್ದರಿಂದ ಇಲ್ಲಿ ICTಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕಲಿಕೆಗೆ ಪೂರಕವಾಗಿದೆ. ವಿವಿಧ ರೀತಿಯ ಕನ್ನಡ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.'ಭಿತ್ತಿ' ಎಂಬ ಹೆಸರಿನ ಗೋಡೆಪತ್ರಿಕೆಯನ್ನು ಆರಂಭಿಸಿದ್ದು, ಇದು ಮಕ್ಕಳ ಸಾಹಿತ್ಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪತ್ರಿಕೆ ಪ್ರಸ್ತುತ ಮಾಸಿಕವಾಗಿ ಪ್ರಕಟವಾಗುತ್ತಿದ್ದು ಇದನ್ನು ಪಾಕ್ಷಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ.
ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ
ಇಂಗ್ಲೀಷ್ / English
ಹಿಂದಿ / Hindi
ಗಣಿತ / Mathematics
ಕಳೆದ ಎರಡು ವರ್ಷಗಳಿಂದ ಗಣಿತ ವಿಷಯ ಬೋಧನೆಯಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ .ಶ್ರೀಮತಿ ಜಯಂತಿಯವರು, ಶ್ರೀಮತಿ ಶೀಲಾ ಭಟ್ರವರು ಕಾರ್ಯೋನ್ಮುಖರಾಗಿದ್ದಾರೆ.KAlgebra ನಂತಹ ಅನೇಕ ಗಣಿತ ಬೋಧನೆಗೆ ಉಪಯೋಗವಾಗುವ ಟೂಲ್ಗಳನ್ನು ಬಳಸಿ ಬೋಧಿಸಲಾಗುತ್ತಿದೆ.
ವಿಜ್ಞಾನ / Science
ದಿನಾಂಕ 05.12.2015 ರಂದು ಗಣಿತ ಮತ್ತು ವಿಜ್ಞಾನ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ "ಮಾಹಿತಿ,ಸಂವಹನ ಮತ್ತು ತಂತ್ರಜ್ಞಾನಾಧಾರಿತ ಗಣಿತ ಮತ್ತು ವಿಜ್ಞಾನ ವಸ್ತುಪ್ರದರ್ಶನ" ಆಯೋಜಿಸಲಾಗಿತ್ತು.
ಈ ಒಂದು ದಿನದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮಕ್ಕಳು ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು, ವೀಡಿಯೋಗಳನ್ನು, ರಸಪ್ರಶ್ನೆಗಳನ್ನು ಪ್ರಸ್ತುತಿಪಡಿಸಿದರು.
ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದ್ದು.
ಇಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪೂಜಾರ್ ಸರ್ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಜಕ್ಕನಕಟ್ಟಿಯವರು ಆಗಮಿಸಿದ್ದರು. ಅಲ್ಲದೆ ನಿರ್ಣಾಯಕರಾಗಿ ಶ್ರೀ ಅವರುಗಳು ಆಗಮಿಸಿ ಶಾಲೆಯ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದರು ಅವರಿಂದ ತುಂಬಾ ಒಳ್ಳೇಯ ಅಭಿಪ್ರಾಯಗಳು ವ್ಯಕ್ತವಾದವು .
ಇಲ್ಲಿ ಸುಮಾರು ೪ ಕೋಣಗಳಲ್ಲಿ ವಸ್ತು ಪ್ರದರ್ಶನ ಮತ್ತು ೩ ಕೋಣೆಗಳಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ಸಂಭಂದಿಸಿದ ರಂಗೋಲಿ ಚಿತ್ರವನ್ನು ಬಿಡಿಸಲಾಗಿತ್ತು ಅಲ್ಲದೆ ವಿಜ್ಞಾನ ಸಲಕರಣೆಗಳನ್ನು ವಿಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು .
ಇನ್ನೊಂದು ಕೋಣೆಯಲ್ಲಿ ಗ್ರಂಥಾಲಯದ ಉದ್ಘಾಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು ಇಲ್ಲಿ ಸುಮಾರು ೧೦೦೦ಕ್ಕಿಂತ ಹೆಚ್ಚಿನ ಪುಸ್ತಕವನ್ನು ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು .
ಕಂಪ್ಯೂಟರ ಕೋಣೆಯಲ್ಲಿ ವಿಜ್ಞಾನಕ್ಕೆ ಸಂಭಂದಿಸದಂತೆ ಪ್ರೋಜೆಕ್ತರ್ ನ ಸಹಾಯದಿಂದ ವಿಜ್ಞಾನದ ವರ್ಚ್ಯೂವಲ್ ಪ್ರಯೋಗಗಳನ್ನು ಮಾಡಲಾಯಿತು . ಜೋತೆಗೆ ಉಪಯುಕ್ತ ವಿಡಿಯೋಗಳನ್ನು ಸಹ ತೋರಿಸಲಾಯಿತು.
ಈ ಶಾಲೆಯ ಪ್ರಾಂಶುಪಾಲರು, ಗಣಿತ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರು ತಮ್ಮ ವಲಯದ ಇತರೇ ಶಾಲೆಗಳ ಶಿಕ್ಷಕರೊಡನೆ ನಿರಂತರವಾಗಿ ವಾಟ್ಸಪ್, ಟೆಲಿಗ್ರಾಮ್ ಮತ್ತು ಇಮೇಲ್ಗಳ ಮೂಲಕ ತಮ್ಮ ಸಂಪನ್ಮೂಲಗಳನ್ನು, ಬೋಧನಾ ಆಲೋಚನೆಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನಾಧಾರಿತ ಬೋಧನೆಯ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ ಮತ್ತು ಅವರ ಭಾಗವಹಿಸುವಿಕೆ ಪರಿಣಾಮಕಾರಿಯಾಗಿದೆ ಎಂಬುದನ್ನು ಈ ಕಾರ್ಯಕ್ರಮದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಶಿಕ್ಷಕರು ಸಹ ತಮ್ಮಸಂಪನ್ಮೂಲಗಳನ್ನು ಮತ್ತು ಬೋಧನಾ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿರುವುದರಿಂದ ಶಿಕ್ಷಕ-ಶಿಕ್ಷಕರ ನಡುವೆ ಸಹಯೋಜಿತ ಮತ್ತು ಸಹವರ್ತಿ ಕಲಿಕೆ ಸಾಧ್ಯವಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಗಂಜಿಗಟ್ಟಿ ಶಾಲೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಭಂದಿಸಿದಂತೆ ಹಲವಾರು ಚಟುವಟಿಕೆಗಳನ್ನು ಮಾಡುವುದರ ಮೂಲಕ ತರಗತಿ ಕೋಣೆಯ ಭೊಧನಾ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ . ಅದು ಈ ಕೆಳಗಿನಂತಿದೆ.
- ರಸಪ್ರಶ್ನೇ ಕಾರ್ಯಕ್ರಮ ಮಾಡುವುದರ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ
- ಕಠಿಣ ಸಮಸ್ಯೆಯನ್ನು ಪರಿಹರಿಸುವುದು
- ಚಟುವಟಿಕೆಗಳ ಮೂಲಕ ಹಾಸ್ಟೇಲ್ ಕೆಲಸ ನೀಡುವುದು
- ಶಿಕ್ಷಕರೊಂದಿಗೆ ಸಂಪನ್ಮೂಲವನ್ನು ಹಂಚಿಕೊಳ್ಳುವುದರ ಮೂಲಕ
- ವಿಭಿನ್ನ ರೀತಿಯ ಚಟುವಟಿಕೆಗಳನ್ನು ತರಗತಿ ಕೋಣೆಯಲ್ಲಿ ಮಾಡುವುದರ ಮೂಲಕ
- ಪ್ರೋಜೆಕ್ಟರನ ಸಹಾಯದಿಂದ ಪ್ರಸ್ತುತಿಯನ್ನು ಪ್ರಸ್ತುತ ಪಡಿಸುವುದು ಮತ್ತು ಮಕ್ಕಳಿಂದ ಚಟುವಟಿಗೆಗಳನ್ನು ಮಾಡಿಸುವುದು .
- ತರಗತಿಯ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ .
- SSLC ವಿಧ್ಯಾರ್ಥಿಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಅವರ ಫಲಿತಾಂಶ ಸುಧಾರಣೆಯಲ್ಲಿ ವಿವಿಧ ಚಟುವಟಿಗಳನ್ನು ಹಮ್ಮಿಕೊಳ್ಳುವುದು .
- ಸುತ್ತಮುತ್ತಲಿನ ಪರಿಸರದೊಂದಿಗೆ ಪಾಠ ಭೋಧನೆಯನ್ನು ಹಮ್ಮಿಕೊಳ್ಳಲಾಗಿದೆ .
ಸಮಾಜ ವಿಜ್ಞಾನ / Social Science
ಐಟಿಸಿ ತರಗತಿ / ICT Classes
School events
2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು
1. ವನಮೊಹತ್ಸವ ೨೦೧೬
2. ವ್ಯಕ್ತಿತ್ವ ವಿಕಸನ ಶಿಬಿರ-2016
- ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲುಇಲ್ಲಿ ಕ್ಲಿಕ್ಕಿಸಿರಿ
- ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
- ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
- ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಲಾವತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲುಇಲ್ಲಿ ಕ್ಲಿಕ್ಕಿಸಿರಿ
- ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
- ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು
2016 ಜನವರಿ 16 ಮತ್ತು 17 ರಂದು ನಮ್ಮ ಸುತ್ತಲಿನ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳಿಗಾಗಿ ನಮ್ಮ ಶಾಲೆಯ ಪ್ರೌಢಶಾಲೆಯಿಂದ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಏರ್ಪಡಿಸಿದ್ದೆವು.ಸುಮಾರು ಏಳು ಶಾಲೆಗಳ 78 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದಕ್ಕೆ ಇದೇ ಶಾಲೆಯಲ್ಲಿ ಮತ್ತು ನಿಕಟ ಪೂರ್ವದಲ್ಲಿ ಕೆಲಸಮಾಡಿದ್ದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸೀನಿಯರ್ ಸಿಟಿಜನ್ಸ್ ಸಂಸ್ಥೆಯವರು ಸಹಾಯ ಮಾಡಿದರು.ನನ್ನ ಈ ಕನಸಿನ ಕಾರ್ಯಕ್ರಮಕ್ಕೆ ಎಸ್ ಡಿ ಎಂ ಸಿ ಸದಸ್ಯರು ಸಹ ಬೆನ್ನೆಲಿಬಾಗಿ ನಿಂತಿದ್ದರು. ನನ್ನ ದೃಷ್ಟಿಕೋನದಂತೆ ಈ ಶಿಬಿರದ ಉದ್ದೇಶ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾಗಿಯೂ ಸಹ 8ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದು. ಮತ್ತು ಕನ್ನಡ ಮಾದ್ಯಮ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸಾಧ್ಯವಾದಷ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು. ಮತ್ತು ನಮ್ಮ ಶಾಲೆಯ ಕಲಿಕಾ ಪರಿಸರದ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಶಾಲೆಯ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡುವುದೇ ಆಗಿತ್ತು. ಈ ನಿಟ್ಟಿನಲ್ಲಿ ಯೋಗ ತರಗತಿ,ಮಕ್ಕಳಿಗಾಗಿ ಕ್ವಿಜ್,ವ್ಯಕ್ತಿತ್ವ ವಿಕಸನ ಉಪನ್ಯಾಸ, ಪ್ರಾರ್ಥನೆ, ಆಟ, ಕಲಿಕಾ ಚಟುವಟಿಕೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಲ್ಲಾ ಮಕ್ಕಳು ಒಂದು ರಾತ್ರಿ ಶಾಲೆಯಲ್ಲಿಯೇ ತಂಗಿದ್ದದ್ದು ವಿಷೇಶವಾಗಿತ್ತು. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ೨೦೧೬-೧೭ ನೇ ಸಾಲಿಗೆ ಭಾಗವಹಿಸಿದ ಈ ೭೮ ಮಕ್ಕಳಜೊತೆಗೆ ಮತ್ತಷ್ಟನ್ನು ಸೇರಿಸಿ ೧೦೦ ಶಾಲೆಯ 8ನೇ ತರಗತಿಯ ದಾಖಲಾತಿಯನ್ನು ಗಡಿದಾಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಶಿಬಿರದ ಪ್ರತಿಪಲವನ್ನು ನಿರೀಕ್ಷಿಸಲು ಮುಂದಿನ ಶೈಕ್ಷಣಿಕ ಸಾಲಿನ ಆರಂಭದವರೆಗೂ ಕಾದು ನೋಡಬೇಕಾಗಿದೆ ಹಾಗು ಈ ಪ್ರಕ್ರಿಯೆಯಲ್ಲಿ ಸಫಲತೆಯನ್ನು ಕಾಣುವ ನಂಬಿಕೆಯನ್ನು ಇಟ್ಟಿದ್ದೇನೆ.
#Teachers day celebration and Aptha salaha samithi
- Prathiba Karanji-2015 (cluster level)
- Swachcha baratha abhiyana
- Plantation
- Makkala suraksha sapthaha
- CCE Workshop for aided and unaided School Teachers.
- SDMC Meeting SDP and Hand wash day
- Shala samshathu
- Health check up-Bosch
- Big celebrations and SSLC Topper 2014-15
- Importance of milk and Lab
IVRS Implementation
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು
ಶಾಲೆಯ ಮುಖ್ಯ ಶಿಕ್ಷಕರು ಪರೀಕ್ಷೆಗೆ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, ಇಲ್ಲಿ ಕೇಳಿ