BBMP HM School development projects 2017-18
'ಶಾಲಾ ಅಭಿವೃದ್ಧಿ ಮತ್ತು ನಾಯಕತ್ವ' - ಪ್ರಕಲ್ಪ ಕಾರ್ಯಯೋಜನೆ.
ವ್ಯವಸ್ಥೆ, ಸಮಸ್ಯೆ ಅಥವ ಪ್ರಕ್ರಿಯೆಗಳನ್ನು ಗುಣಮಟ್ಟ, ಸುಧಾರಣಾ ಸಾಧನ ಸಲಕರಣೆಗಳು ಹಾಗೂ ತಂತ್ರಗಳ ಮೂಲಕ ವ್ಯವಸ್ಥಿತವಾಗಿ ವಸ್ತುನಿಷ್ಟವಾಗಿ ಅಧ್ಯಯನ ಮಾಡಿ, ಸುಧಾರಣೆ ಕೈಗೊಳ್ಳುವ ವಿಧಾನವೇ`ಪ್ರಕಲ್ಪ’. ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ
ಐಟಿ ಫಾರ್ ಚೇಂಜ್ ಮತ್ತು ಟೆಕ್ ಮಹೇಂದ್ರ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ 'ಶಾಲಾ ಅಭಿವೃದ್ಧಿ ಮತ್ತು ನಾಯಕತ್ವ' ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಶಾಲೆಯ ಮುಖ್ಯಸ್ಥರು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಇತರ ಸಹೋದ್ಯೋಗಿ ಮಿತ್ರ ಜೊತೆ ಚರ್ಚಿಸಿ ಕಂಡುಕೊಂಡರು. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂತಿಮವಾಗಿ ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಐದು ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು. ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ ಸುಧಾರಣೆಯ ಸಾಧ್ಯತೆಗಳು, ಸಮಸ್ಯೆಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು. ಉಳಿದ ಶಾಲಾ ಶಿಕ್ಷಕರ ಪ್ರಸ್ತುತಿ ಮತ್ತು ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಬೇಗ ಸೇರಿಸಲಾಗುವುದು.
ಪ್ರಸ್ತುತಿಯಲ್ಲಿ ಪಾಲ್ಗೊಂಡಿದ್ದ ಶಾಲೆಗಳ ವಿವರ ಮತ್ತು ಸಂಪನ್ಮೂಲವು ಈ ಕೆಳಕಂಡಂತೆ ಇರುತ್ತದೆ.
ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪನಪಾಳ್ಯ, ಬೆಂಗಳೂರು.
View the slide here and download it from here.
ಬಿಬಿಎಮ್‌ಪಿ ಉರ್ದು ಹಿರಿಯ ಪ್ರಾಥಮಿಕ ಶಾಲೆ,ಭಾರತಿನಗರ, ಬೆಂಗಳೂರು.
View the slide here and download it from here.
ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ನೀಲಸಂದ್ರ, ಬೆಂಗಳೂರು.
View the slide here and download it from here.
|
|
|
|
|
ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಜೋಗಪಾಳ್ಯ , ಬೆಂಗಳೂರು.
View the slide here and download it from here.
ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಪಂಚಶೀಲನಗರ, ಬೆಂಗಳೂರು.
View the slide here and download it from here.
|
|
|