ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ ಮಾರಪ್ಪನಪಾಳ್ಯ ಬೆಂಗಳೂರು

From Karnataka Open Educational Resources
Revision as of 13:13, 23 February 2018 by Anand (talk | contribs) (Anand moved page ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪನಪಾಳ್ಯ, ಬೆಂಗಳೂರು. to [[ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶ...)
Jump to navigation Jump to search

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಚಿಗುರು'- ವಾರ್ಷಿಕ ಕರ ಸಂಚಿಕೆ-2018. ಇದರಲ್ಲಿ ವಿವಿಧ ಚಿತ್ರಗಳು ಮತ್ತು ಪಠ್ಯ ಸಂಯೋಜಿತ ಪುಟಗಳನ್ನು ಮಕ್ಕಳೇ ಸೃಷ್ಟಿಸಿದ್ದದ್ದು ಬಹಳ ಸೊಗಸಾಗಿತ್ತು. ಇದು ಸುಮಾರು ಎರಡು ನೂರು ಪುಟಗಳನ್ನು ಹೊಂದಿರುವ ಸಂಚಿಕೆಯಾಗಿದ್ದು ಶಿಕ್ಷಕರೆಲ್ಲ ಸೇರಿ ಚರ್ಚಿಸಿ ಸುಮಾರು ಹದಿನಾರು ವಿಭಾಗಗಳಾಗಿ ಮಾಡಿದ್ದರು. ಮತ್ತು ಪ್ರತಿ ವಿಭಾಗದಲ್ಲಿ ನಿರ್ಧಿಷ್ಟ ಅಂಶಗಳನ್ನು ವ್ಯಸ್ಥಿತವಾಗಿ ಸೇರಿಸಿದ್ದರು. ಉದಾರಣೆಗೆ : ಕಲಾ ಕುಂಚ, ಕಲಾ ಸೌರಭ, ಜ್ಞಾನ ದೀವಿಗೆ, ಕನ್ನಡ ಕಸ್ತೂರಿ, ಬದುಕಿನ ಹೆಜ್ಜೆಗಳು. ಇತ್ಯಾದಿ...

ಇದರಿಂದ ಶಿಕ್ಷಕರ ಮತ್ತು ಮಕ್ಕಳ ಜ್ಞಾನದ ಮೇಲೆ ಪರಿಣಾಮ ಬೀರಿದೆ, ಕಲಿಕೆ ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅಂದರೆ ಪ್ರಾಥಮಿಕ ಶಾಲಾ ಮಕ್ಕಳನ್ನು ಸಂಘಟಿಸಿ ಇಂತಹ ಒಂದು ಸಂಚಿಕೆಯನ್ನು ಹೊರ ತರುವುದು ನಿಜಕ್ಕು ಸಾಧನೆಯ ಸಂಗತಿ. ಅಲ್ಲದೆ ಶಾಲೆಯಲ್ಲಿನ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಸಂಚಿಕೆಯನ್ನು ರೂಪಿಸ ಬಹುದು ಎಂಬುದಕ್ಕೆ ಇದು ಮಾದರಿಯಾಗಿದೆ. ಈ ಪ್ರಕಲ್ಪವನ್ನು ಶಾಲೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಉಮಾದೇವಮ್ಮ ರವರು ಪ್ರಸ್ತುತಿ ಪಡಿಸಿದರು. ಇದರಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ.


View the slide here and download it from here.