ಬಿಬಿಎಮ್‌ಪಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಭಾರತಿನಗರ ಬೆಂಗಳೂರು
ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ'. ಈ ಶಾಲೆಯ ಕಟ್ಟಡ ಸುಮಾರು ಒಂದು ಶತಮಾನದಷ್ಷು ಹಳೆಯದು ಮತ್ತು ಶಾಲಾ ಆವರಣದಲ್ಲಿ ಗಜಗಾತ್ರದಲ್ಲಿ ಬೆಳೆದ ಮರಗಳು ಮತ್ತು ದುರಸ್ಥಿ ಸ್ಥಿತಿಯಲ್ಲಿನ ಖಾಲಿ ಕೊಠಡಿಗಳು ಇವೆಲ್ಲಾ ಶಾಲಾ ಕಲಿಕಾ ಪರಿಸರದ ಮೇಲೆ ಪರಿಣಾಮ ಬೀರಿತ್ತು. ಅಲ್ಲದೆ ಶಾಲೆಯ ಆರ್ಥಿಕ ಸಮಸ್ಯೆಯಿಂದಾಗಿ ಶಾಲಾ ಸ್ವಚ್ಚತೆಯನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿಯಲ್ಲಿತ್ತು.
ಈ ಪ್ರಕಲ್ಪವನ್ನು ಕೈಗೆತ್ತಿಕೊಂಡ ಮುಖ್ಯ ಶಿಕ್ಷಕರು ಮೊದಲಿಗೆ ಅವರ ಶಾಲಾ ಶಿಕ್ಷಕರನ್ನು ಸಂಘಟಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚಿಸಿದರು. ಸ್ವಚ್ಚತೆಯ ನಿರ್ವಹಣೆಗಾಗಿ ನಂತರ ದಾನಿಗಳ ಸಹಾಯವನ್ನು ಕೋರಿಕೊಂಡರು ಮತ್ತು ಸ್ವತಹ ಉತ್ತಮ ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಲಾಯಿತು. ಮತ್ತು ಮಕ್ಕಳ ಸ್ವಚ್ಚತೆಯ ಅರಿವು ಮೂಡಿಸಿದರು. ಈಗ ಶಾಲಾ ಪರಿಸರವು ಬಹಳ ಸುಧಾರಿಸಿದ್ದು ಮರದ ಎಲೆಗಳನ್ನು ಕಾಲ ಕಾಲಕ್ಕೆ ತೆರವುಗೊಳಿಸಿ ಸಂಗ್ರಹಿಸಿ ಗಿಡಗಳಿಗೆ ಗೊಬ್ಬರವಾಗಿ ರೂಪಿಸಲಾಗುತ್ತಿದೆ. ಉನ್ನತ ಅಧಿಕಾರಿಗಳಲ್ಲಿ ಅವರ ಸಮಸ್ಯೆಯನ್ನು ಬಿನ್ನಹಮಾಡಿಕೊಂಡಿದ್ದು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. ಪಾಠಕಲಿಕೆಯ ಜೊತೆಗೆ ಕೈತೋಟ ನಿರ್ವಹಣೆ, ಸುತ್ತಲಿನ ಪರಿಸರದ ನಿರ್ವಹಣೆ ಯನ್ನು ಕಲಿಸಿಕೊಟ್ಟಿದ್ದು ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ತರಗತಿ ಕೊಠಡಿ ಸಹ ಸ್ವಚ್ಚವಾಗಿದೆ. ಕಸದ ಬುಟ್ಟಿಗಳಲ್ಲಿ ಅಲ್ಲಲ್ಲಿಗೆ ಇರಿಸಿ ನಿರ್ವಹಿಸಲಾಗುತ್ತಿದೆ.
ಶಿಕ್ಷಕರಲ್ಲಿ ಸಂಘಟಿಸಿದುದರ ಫಲವಾಗಿ ಅವರುಗಳು ಸಹ ದಾನಿಗಳ ಸಹಕಾರದ ಆಯೋಜನೆ , ವಿದ್ಯಾರ್ಥಿಗಳ ನಿರ್ವಹಣೆ ಮತ್ತು ಸ್ವಚ್ಚತೆಯ ನಿರ್ವಹಣೆಯಲ್ಲಿ ಮುಂದಾಳತ್ವ ತೆಗೆದುಕೊಂಡಿದ್ದಾರೆ. ಅಂದರೆ ಶಾಲೆಯ ಲಘು ಸಂಪನ್ಮೂಲವನ್ನೇ ಬಳಸಿ ಉತ್ತಮವಾಗಿ ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳಲಾಗುತ್ತಿದೆ.
ಈ ಪ್ರಕಲ್ಪವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಲೋಕೇಶಪ್ಪರವರು ಪ್ರಸ್ತುತಿ ಪಡಿಸಿದರು. ಇದರಲ್ಲಿ ಶಿಕ್ಷಕರ ಮತ್ತು ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ.
View the slide here and download it from here.
School leadership program for BBMP HMs 2017 - ಮುಖ್ಯಪುಟಕ್ಕೆ ಹಿಂದಿರುಗಲು ಇಲ್ಲಿ ಕ್ಲಿಕ್ಕಿಸಿ