BBMP HM School development projects 2017-18

From Karnataka Open Educational Resources
Jump to navigation Jump to search

'ಶಾಲಾ ಅಭಿವೃದ್ಧಿ ಮತ್ತು ನಾಯಕತ್ವ' - ಪ್ರಕಲ್ಪ ಕಾರ್ಯಯೋಜನೆ.

ವ್ಯವಸ್ಥೆ, ಸಮಸ್ಯೆ ಅಥವ ಪ್ರಕ್ರಿಯೆಗಳನ್ನು ಗುಣಮಟ್ಟ, ಸುಧಾರಣಾ ಸಾಧನ ಸಲಕರಣೆಗಳು ಹಾಗೂ ತಂತ್ರಗಳ ಮೂಲಕ ವ್ಯವಸ್ಥಿತವಾಗಿ ವಸ್ತುನಿಷ್ಟವಾಗಿ ಅಧ್ಯಯನ ಮಾಡಿ, ಸುಧಾರಣೆ ಕೈಗೊಳ್ಳುವ ವಿಧಾನವೇ`ಪ್ರಕಲ್ಪ’. ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಐಟಿ ಫಾರ್‌ ಚೇಂಜ್‌ ಮತ್ತು ಟೆಕ್‌ ಮಹೇಂದ್ರ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ 'ಶಾಲಾ ಅಭಿವೃದ್ಧಿ ಮತ್ತು ನಾಯಕತ್ವ' ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಶಾಲೆಯ ಮುಖ್ಯಸ್ಥರು ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಇತರ ಸಹೋದ್ಯೋಗಿ ಮಿತ್ರ ಜೊತೆ ಚರ್ಚಿಸಿ ಕಂಡುಕೊಂಡರು. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂತಿಮವಾಗಿ ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಐದು ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು. ಈ ಪ್ರಸ್ತುತಿಯಿಂದ ಅನೇಕ ಚರ್ಚೆಗಳು, ಹೊಸ ವಿಷಯಗಳು, ಶಾಲಾ ಸುಧಾರಣೆಯ ಸಾಧ್ಯತೆಗಳು, ಸಮಸ್ಯೆಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು. ಉಳಿದ ಶಾಲಾ ಶಿಕ್ಷಕರ ಪ್ರಸ್ತುತಿ ಮತ್ತು ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಬೇಗ ಸೇರಿಸಲಾಗುವುದು.

ಪ್ರಸ್ತುತಿಯಲ್ಲಿ ಪಾಲ್ಗೊಂಡಿದ್ದ ಶಾಲೆಗಳ ವಿವರ ಮತ್ತು ಸಂಪನ್ಮೂಲವು ಈ ಕೆಳಕಂಡಂತೆ ಇರುತ್ತದೆ.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪನಪಾಳ್ಯ, ಬೆಂಗಳೂರು.

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಚಿಗುರು'- ವಾರ್ಷಿಕ ಕರ ಸಂಚಿಕೆ-2018. ಇದರಲ್ಲಿ ವಿವಿಧ ಚಿತ್ರಗಳು ಮತ್ತು ಪಠ್ಯ ಸಂಯೋಜಿತ ಪುಟಗಳನ್ನು ಮಕ್ಕಳೇ ಸೃಷ್ಟಿಸಿದ್ದದ್ದು ಬಹಳ ಸೊಗಸಾಗಿತ್ತು. ಇದು ಸುಮಾರು ಎರಡು ನೂರು ಪುಟಗಳನ್ನು ಹೊಂದಿರುವ ಸಂಚಿಕೆಯಾಗಿದ್ದು ಶಿಕ್ಷಕರೆಲ್ಲ ಸೇರಿ ಚರ್ಚಿಸಿ ಸುಮಾರು ಹದಿನಾರು ವಿಭಾಗಗಳಾಗಿ ಮಾಡಿದ್ದರು. ಮತ್ತು ಪ್ರತಿ ವಿಭಾಗದಲ್ಲಿ ನಿರ್ಧಿಷ್ಟ ಅಂಶಗಳನ್ನು ವ್ಯಸ್ಥಿತವಾಗಿ ಸೇರಿಸಿದ್ದರು. ಉದಾರಣೆಗೆ : ಕಲಾ ಕುಂಚ, ಕಲಾ ಸೌರಭ, ಜ್ಞಾನ ದೀವಿಗೆ, ಕನ್ನಡ ಕಸ್ತೂರಿ, ಬದುಕಿನ ಹೆಜ್ಜೆಗಳು. ಇತ್ಯಾದಿ...

ಇದರಿಂದ ಶಿಕ್ಷಕರ ಮತ್ತು ಮಕ್ಕಳ ಜ್ಞಾನದ ಮೇಲೆ ಪರಿಣಾಮ ಬೀರಿದೆ, ಕಲಿಕೆ ಕೇವಲ ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅಂದರೆ ಪ್ರಾಥಮಿಕ ಶಾಲಾ ಮಕ್ಕಳನ್ನು ಸಂಘಟಿಸಿ ಇಂತಹ ಒಂದು ಸಂಚಿಕೆಯನ್ನು ಹೊರ ತರುವುದು ನಿಜಕ್ಕು ಸಾಧನೆಯ ಸಂಗತಿ. ಅಲ್ಲದೆ ಶಾಲೆಯಲ್ಲಿನ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಉತ್ತಮ ಸಂಚಿಕೆಯನ್ನು ರೂಪಿಸ ಬಹುದು ಎಂಬುದಕ್ಕೆ ಇದು ಮಾದರಿಯಾಗಿದೆ. ಈ ಪ್ರಕಲ್ಪವನ್ನು ಶಾಲೆಯ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಉಮಾದೇವಮ್ಮ ರವರು ಪ್ರಸ್ತುತಿ ಪಡಿಸಿದರು. ಇದರಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ.


View the slide here and download it from here.


ಬಿಬಿಎಮ್‌ಪಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಭಾರತಿನಗರ, ಬೆಂಗಳೂರು.

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ'. ಈ ಶಾಲೆಯ ಕಟ್ಟಡ ಸುಮಾರು ಒಂದು ಶತಮಾನದಷ್ಷು ಹಳೆಯದು ಮತ್ತು ಶಾಲಾ ಆವರಣದಲ್ಲಿ ಗಜಗಾತ್ರದಲ್ಲಿ ಬೆಳೆದ ಮರಗಳು ಮತ್ತು ದುರಸ್ಥಿ ಸ್ಥಿತಿಯಲ್ಲಿನ ಖಾಲಿ ಕೊಠಡಿಗಳು ಇವೆಲ್ಲಾ ಶಾಲಾ ಕಲಿಕಾ ಪರಿಸರದ ಮೇಲೆ ಪರಿಣಾಮ ಬೀರಿತ್ತು. ಅಲ್ಲದೆ ಶಾಲೆಯ ಆರ್ಥಿಕ ಸಮಸ್ಯೆಯಿಂದಾಗಿ ಶಾಲಾ ಸ್ವಚ್ಚತೆಯನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿಯಲ್ಲಿತ್ತು.

ಈ ಪ್ರಕಲ್ಪವನ್ನು ಕೈಗೆತ್ತಿಕೊಂಡ ಮುಖ್ಯ ಶಿಕ್ಷಕರು ಮೊದಲಿಗೆ ಅವರ ಶಾಲಾ ಶಿಕ್ಷಕರನ್ನು ಸಂಘಟಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚಿಸಿದರು. ಸ್ವಚ್ಚತೆಯ ನಿರ್ವಹಣೆಗಾಗಿ ನಂತರ ದಾನಿಗಳ ಸಹಾಯವನ್ನು ಕೋರಿಕೊಂಡರು ಮತ್ತು ಸ್ವತಹ ಉತ್ತಮ ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಲಾಯಿತು. ಮತ್ತು ಮಕ್ಕಳ ಸ್ವಚ್ಚತೆಯ ಅರಿವು ಮೂಡಿಸಿದರು. ಈಗ ಶಾಲಾ ಪರಿಸರವು ಬಹಳ ಸುಧಾರಿಸಿದ್ದು ಮರದ ಎಲೆಗಳನ್ನು ಕಾಲ ಕಾಲಕ್ಕೆ ತೆರವುಗೊಳಿಸಿ ಸಂಗ್ರಹಿಸಿ ಗಿಡಗಳಿಗೆ ಗೊಬ್ಬರವಾಗಿ ರೂಪಿಸಲಾಗುತ್ತಿದೆ. ಉನ್ನತ ಅಧಿಕಾರಿಗಳಲ್ಲಿ ಅವರ ಸಮಸ್ಯೆಯನ್ನು ಬಿನ್ನಹಮಾಡಿಕೊಂಡಿದ್ದು ಶೀಘ್ರವಾಗಿ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ. ಪಾಠಕಲಿಕೆಯ ಜೊತೆಗೆ ಕೈತೋಟ ನಿರ್ವಹಣೆ, ಸುತ್ತಲಿನ ಪರಿಸರದ ನಿರ್ವಹಣೆ ಯನ್ನು ಕಲಿಸಿಕೊಟ್ಟಿದ್ದು ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ತರಗತಿ ಕೊಠಡಿ ಸಹ ಸ್ವಚ್ಚವಾಗಿದೆ. ಕಸದ ಬುಟ್ಟಿಗಳಲ್ಲಿ ಅಲ್ಲಲ್ಲಿಗೆ ಇರಿಸಿ ನಿರ್ವಹಿಸಲಾಗುತ್ತಿದೆ.

ಶಿಕ್ಷಕರಲ್ಲಿ ಸಂಘಟಿಸಿದುದರ ಫಲವಾಗಿ ಅವರುಗಳು ಸಹ ದಾನಿಗಳ ಸಹಕಾರದ ಆಯೋಜನೆ , ವಿದ್ಯಾರ್ಥಿಗಳ ನಿರ್ವಹಣೆ ಮತ್ತು ಸ್ವಚ್ಚತೆಯ ನಿರ್ವಹಣೆಯಲ್ಲಿ ಮುಂದಾಳತ್ವ ತೆಗೆದುಕೊಂಡಿದ್ದಾರೆ. ಅಂದರೆ ಶಾಲೆಯ ಲಘು ಸಂಪನ್ಮೂಲವನ್ನೇ ಬಳಸಿ ಉತ್ತಮವಾಗಿ ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳಲಾಗುತ್ತಿದೆ.

ಈ ಪ್ರಕಲ್ಪವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಲೋಕೇಶಪ್ಪರವರು ಪ್ರಸ್ತುತಿ ಪಡಿಸಿದರು. ಇದರಲ್ಲಿ ಶಿಕ್ಷಕರ ಮತ್ತು ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ.


View the slide here and download it from here.


ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ನೀಲಸಂದ್ರ, ಬೆಂಗಳೂರು.

ಈ ಶಾಲೆಯ ವತಿಯಿಂದ ಮುಖ್ಯ ಶಿಕ್ಷಕರು ಆಯ್ಕೆ ಮಾಡಿಕೊಂಡಿದ್ದ ಪ್ರಕಲ್ಪದ ವಿಷಯ ' ಬಿಸಿ ಊಟದ ವ್ಯವಸ್ಥಿತ ಅನುಷ್ಠಾನ'. ಇಲ್ಲಿನ ಶಾಲಾ ಪರಿಸರ ಸಾಮಾನ್ಯ ಶಾಲೆಯಂತಿರದೆ ವಿಭಿನ್ನವಾಗಿರುವುದೇ ಈ ಪ್ರಕಲ್ಪದ ಆಯ್ಕೆಗೆ ಕಾರಣವಾಗಿದೆ. ಅಂದರೆ ಈ ಶಾಲೆಯಲ್ಲಿ ಸ್ಥಳದ ಕೊರತೆಯೇ ಇದರೆ ಮುಖ್ಯ ಕಾರಣ. ಆದರಿಂದ ಅಕ್ಷರ ದಾಸೋಹದಿಂದ ಸರಬರಾಜಾಗುತ್ತಿರುವ ಮದ್ಯಾಹ್ನದ ಬಿಸಿ ಊಟವನ್ನು ಮಕ್ಕಳಿಗೆ ತಲುಪಿಸುವುದೇ ಇಲ್ಲಿನ ಸವಾಲಿನ ಸಂಗತಿಯಾಗಿತ್ತು.

ನಂತರ ಮುಖ್ಯಶಿಕ್ಷಕರು ಎಲ್ಲಾಶಿಕ್ಷಕರೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡರು. ಇರುವ ಸ್ಥಳದಲ್ಲಿಯೇ ಮಕ್ಕಳು ಸಾಲಾಗಿ ಮಕ್ಕಳು ಊಟವನ್ನು ಪಡೆಬೇಕು, ಅವರವರ ತರಗತಿಯಲ್ಲಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಊಟವನ್ನು ಚೆಲ್ಲದಂತೆ ತಿನ್ನಬೇಕು. ತರಕಾರಿಯನ್ನು ಮಿಶ್ರಣ ಮಾಡಿಯೇ ನೀಡುವುದರಿಂದ ತಿನ್ನದೆ ತರಕಾರಿಯನ್ನು ಚೆಲ್ಲುವುದು ತಪ್ಪಿತು. ಮತ್ತು ಉಳಿದ ಆಹಾರವನ್ನು ಮತ್ತು ತ್ಯಾಜ್ಯವನ್ನು ನಿರ್ದಿಷ್ಟ ಬುಟ್ಟಿಯಲ್ಲಿಯೇ ಹಾಕುವಂತೆ ಯೋಜನೆ ರೂಪಪಿಸಲಾಗಿ ಈಗ ಮಕ್ಕಳಲ್ಲಿ ಊಟದ ಮಹತ್ವದ ಅರಿವಾಗಿ ಮಕ್ಕಳು ಸ್ವಯಂ ಪ್ರೇರಿತರಾಗಿ ಯಾರು ಮೇಲ್ವಚಾರಕರು ಇಲ್ಲದಿದ್ದರು ಸಹ ಶಿಸ್ತನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ.

ಶಾಲೆಯ ಮೇಲೆ ಛಾವಣಿಯನ್ನು ಕಟ್ಟಿಸಿ ಊಟಕ್ಕೆ ಕುಳಿತುಕೊಳ್ಳುಲು ಸಹಾಯಮಾಡಿಕೊಳ್ಳುವ ಯೋಜನೆಯಲ್ಲಿದ್ದು ಇದನ್ನು ಅಧಿಕಾರಿಗಳ ಜೊತೆ ಮತ್ತು ದಾನಿಗಳ ಜೊತೆ ಚರ್ಚಿಸಿ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯು ಅನುಷ್ಠಾನದ ಹಂತದಲ್ಲಿದೆ. ಈಗಾಗಲೇ ಕುಡಿವ ನೀರು ಮತ್ತು ಇತರೆ ಅವಶ್ಯಕತೆಗಳನ್ನು ಪೂರೈಸಿಕೊಂಡಿದ್ದು ಹೊಂದಿರುವ ಸ್ಥಳದಲ್ಲಿಯೇ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ.

ಈ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿ ಪ್ರಕಲ್ಪ ಪ್ರಸ್ತುತಿಯ ಸಂಪನ್ಮೂಲವನ್ನು ಈ ಕೆಳಗೆ ನೀಡಲಾಗಿದ್ದು ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗಿನ ಪ್ರಸ್ತುತಿಯ ಜಾರುಕಗಳು ಮತ್ತು ವೀಡಿಯೋವನ್ನು ಗಮನಿಸಬಹುದಾಗಿದೆ. ಇದರಲ್ಲಿ ವಿದ್ಯಾರ್ಥಿಗಳ ಅನಿಸಿಕೆ, ಶಿಕ್ಷಕರ ಅನಿಸಿಕೆ, ಶಾಲಾ ಸಿಬ್ಬಂದಿಗಳ ಅನಿಸಿಕೆ ಮತ್ತು ಪೋಷಕರ ಅನಿಸಿಕೆಯನ್ನು ನೀಡಲಾಗಿದೆ.
View the slide here and download it from here.






ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಜೋಗಪಾಳ್ಯ , ಬೆಂಗಳೂರು.


View the slide here and download it from here.

ಬಿಬಿಎಮ್‌ಪಿ ಹಿರಿಯ ಪ್ರಾಥಮಿಕ ಶಾಲೆ, ಪಂಚಶೀಲನಗರ, ಬೆಂಗಳೂರು.


View the slide here and download it from here.