GHS Jayanagara ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ 2015-16

From Karnataka Open Educational Resources
Revision as of 06:48, 17 May 2016 by Sunil (talk | contribs) (Created page with "=ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ= ==''''ಸರ್ಕಾರಿ ...")
(diff) ← Older revision | Latest revision (diff) | Newer revision → (diff)
Jump to navigation Jump to search

ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ

'ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಬೋಧನೆಗೆ ತಂತ್ರಜ್ಞಾನ ಅಳವಡಿಕೆ '

ಜಯನಗರ 9ನೇ ಬ್ಲಾಕ್‌ ಮತ್ತು ಈಜಿಪುರ ಸರ್ಕಾರಿ ಫ್ರೌಡಶಾಲೆ ಗಳು ಜಂಟಿಯಾಗಿ, ದಿನಾಂಕ 9 & 10 ನೇ ಫೆಬ್ರವರಿ 2016 ರಂದು ಜಯನಗರ 9ನೇ ಬ್ಲಾಕ್‌ನ ಸರ್ಕಾರಿ ಫ್ರೌಡಶಾಲೆಯಲ್ಲಿ"ಮಾಹಿತಿ,ಸಂವಹನ ಮತ್ತು ತಂತ್ರಜ್ಞಾನಾಧಾರಿತ ಗಣಿತ ಮತ್ತು ವಿಜ್ಞಾನ ವಸ್ತುಪ್ರದರ್ಶನ" ಆಯೋಜಿಸಲಾಗಿತ್ತು.

ಈ ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು, ವೀಡಿಯೋಗಳನ್ನು, ರಸಪ್ರಶ್ನೆಗಳನ್ನು ಪ್ರಸ್ತುತಿಪಡಿಸಿದರು.

ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದ್ದು. ಮಕ್ಕಳಿಂದಲೇ ಉತ್ತಮ ಪ್ರಯೋಗವನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.ನೆರೆಹೊರೆಯ 16 ಸರ್ಕಾರಿ ಶಾಲೆಗಳಿಂದ ಮತ್ತು ವಿವಿಧ ಅನುದಾನಿತ ಶಾಲೆಗಳಿಂದ ಸುಮಾರು 550 ಕ್ಕೂ ಹೆಚ್ಚು ಮಕ್ಕಳು ಈ ಪ್ರದರ್ಶನ ವೀಕ್ಷಿಸಿದರು. ಅದೇ ರೀತಿ ವಿವಿಧ ಶಾಲೆಗಳ ಶಿಕ್ಷಕರು ಸಹ ಆಗಮಿಸಿ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಸುದ್ದಿ ನೋಡಿ ಕೆಲವು ಸಾರ್ವಜನಿಕರೂ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದರು. ಮಕ್ಕಳಿಂದಲೇ ಉತ್ತಮ ಪ್ರಯೋಗವನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.

ಈ ಕಾರ್ಯಕ್ರಮವು, ತರಗತಿಕೋಣೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬಳಕೆ/ಅಳವಡಿಕೆಗಾಗಿ ಬೆಂಗಳೂರು ನಗರ ಜಿಲ್ಲೆಯ ವಲಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನದಲ್ಲಿರುವ "ಶಿಕ್ಷಕರ ಕಲಿಕಾ ಸಮುದಾಯ" ಕಾರ್ಯಕ್ರಮದ ಎರಡು ವರ್ಷಗಳ ಪ್ರತಿಫಲನವಾಗಿತ್ತು. "ಶಿಕ್ಷಕರ ಕಲಿಕಾ ಸಮುದಾಯ" ಕಾರ್ಯಕ್ರಮವೂ "ಐಟಿ ಫಾರ್ ಚೇಂಜ್ " ಎಂಬ ಸಂಸ್ಥೆಯ ಮೂಲಕ ಕಾಗ್ನಿಜೆಂಟ್ ಟೆಕ್ನಾಲಜಿ ಸೆಲ್ಯೂಶನ್ ಕಂಪನಿರವರ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ "ಕಾಗ್ನಿಜೆಂಟ್ ಫೌಂಡೇಷನ್" ರವರ ಸಹಭಾಗಿತ್ವದಲ್ಲಿ ಅನುಷ್ಟಾನಗೊಳ್ಳುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿನ ದಕ್ಷಿಣ ವಲಯ-3 ರ 16 ಸರ್ಕಾರಿ ಫ್ರೌಡಶಾಲೆಗಳಲ್ಲಿ 3 ವರ್ಷಗಳ "ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮವನ್ನು" ಐಟಿ ಫಾರ್ ಚೇಂಜ್ ಸಂಸ್ಥೆಯು 2014-15 ನೇ ಶೈಕ್ಷಣಿಕ ವರ್ಷದಿಂದ ಹಮ್ಮಿಕೊಂಡಿದೆ. ಈ ಮೂಲಕ , ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವಾಗಿಸುವಲ್ಲಿ ಮತ್ತು ಶಾಲಾ ಆಡಳಿತ ಮತ್ತು ಅಭಿವೃದ್ದಿ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಬಗ್ಗೆ ಶಿಕ್ಷಕರಿಗೆ ತಿಳಿಸಿಕೊಡಲಾಗುತ್ತಿದ್ದು, ಶಾಲೆಯ ತರಗತಿ ಕೋಣೆ ಪ್ರಕ್ರಿಯೆಯಲ್ಲಿ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಬಳಕೆಗೆ ಶಿಕ್ಷಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

ಈ ಕಾರ್ಯಕ್ರಮದಡಿಯಲ್ಲಿ ಪರಿಣಾಮಕಾರಿ ಬೋಧನೆ ಕಲಿಕೆ ಮತ್ತು ಶಿಕ್ಷಕರ ವೃತ್ತಿಪರ ಬೆಳವಣಿಗೆಗ ವಿವಿಧ ಕಾರ್ಯತಂತ್ರಗಳನ್ನು ಶಿಕ್ಷಕರಿಗೆ ಪರಿಚಯಿಸಲಾಗುತ್ತಿದೆ. ದೊಮ್ಮಲೂರು, ಈಜಿಪುರ ಮತ್ತು ಬೇಗೂರು ಸರ್ಕಾರಿ ಫ್ರೌಡಶಾಲೆಗಳ ಕನ್ನಡ ಮತ್ತು ಗಣಿತ ಶಿಕ್ಷಕರು ತಮ್ಮ ತರಗತಿ ಭೋದನೆಗೆ ಗಣಕಯಂತ್ರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಗಣಿತ ಭೋದನೆಯಲ್ಲಿ ಸೂಕ್ತ ಪರಿಕಲ್ಪನಾ ಕೌಶಲ ವೃದ್ದಿಪಡಿಸಲು ವಿವಿಧ ರೀತಿಯ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಅಪ್ಲೀಕೇಶನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ಭಾಷಾ ಬೋಧನೆಗೆ ಪೂರಕವಾಗಿ ತಂತ್ರಜ್ಞಾನ ಬಳಸುವ ಮೂಲಕ ಮಕ್ಕಳನ್ನು ಭಾಷಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಲಾಗುತ್ತಿದೆ.

ಈ ಮೂಲಕ ಮಕ್ಕಳು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮ್ಯಾಗಜಿನ್‌ಗಳನ್ನು ಸಿದ್ದಪಡಿದಿ ಪ್ರಸಾರ ಮಾಡುತ್ತಿದ್ದಾರೆ. ಹಾಗೆಯೇ ತಮ್ಮ ತರಗತಿ ವಿಷಯಗಳಿಗೆ ಪೂರಕವಾದ ತಂತ್ರಜ್ಞಾನಧಾರಿತ ಸಂಪನ್ಮೂಲಗಳನ್ನು ಸಂಗ್ರಹಿಸಿ ಡಿಜಿಟಲ್ ಸಂಪನ್ನೂಲಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಮಕ್ಕಳಲ್ಲಿ ಸಂವಹನ ಕೌಶಲವನ್ನು ವೃದ್ದಿಸಲು ಸಾಧ್ಯವಾಗುವಂತೆ, ಮಕ್ಕಳು ತಾವು ಸಂಗ್ರಹಿಸಿದ ಸಂಪನ್ಮೂಲಗಳನ್ನು ಇತರರೊಡನೆ ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಈ ಕಾರ್ಯಕ್ರಮದಡಿಯಲ್ಲಿ ದಕ್ಷಿಣ ವಲಯ-3 ರ 16 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್‌ ಸ್ಥಾಪಿಸಲಾಗಿದ್ದು, ಶಿಕ್ಷಕರು ತಮ್ಮ ತಮ್ಮ ವಿಷಯಗಳ ಬೋಧನೆ ಈ ಲ್ಯಾಬ್‌ಗಳನ್ನು ಬಳಸುತ್ತಿದ್ದಾರೆ.

ಈ ಶಾಲೆಗಳ ಮುಖ್ಯ ಶಿಕ್ಷಕರು, ಗಣಿತ ಶಿಕ್ಷಕರು ಮತ್ತು ಕನ್ನಡ ಶಿಕ್ಷಕರು ತಮ್ಮ ವಲಯದ ಇತರೇ ಶಾಲೆಗಳ ಶಿಕ್ಷಕರೊಡನೆ ನಿರಂತರವಾಗಿ ವಾಟ್ಸಪ್, ಟೆಲಿಗ್ರಾಮ್ ಮತ್ತು ಇಮೇಲ್‌ಗಳ ಮೂಲಕ ತಮ್ಮ ಸಂಪನ್ಮೂಲಗಳನ್ನು, ಬೋಧನಾ ಆಲೋಚನೆಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನಾಧಾರಿತ ಬೋಧನೆಯ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ ಮತ್ತು ಅವರ ಭಾಗವಹಿಸುವಿಕೆ ಪರಿಣಾಮಕಾರಿಯಾಗಿದೆ ಎಂಬುದನ್ನು ಈ ಕಾರ್ಯಕ್ರಮದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಶಿಕ್ಷಕರು ಸಹ ತಮ್ಮಸಂಪನ್ಮೂಲಗಳನ್ನು ಮತ್ತು ಬೋಧನಾ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿರುವುದರಿಂದ ಶಿಕ್ಷಕ-ಶಿಕ್ಷಕರ ನಡುವೆ ಸಹಯೋಜಿತ ಮತ್ತು ಸಹವರ್ತಿ ಕಲಿಕೆ ಸಾಧ್ಯವಾಗಿದೆ.



Exhibition Banner .JPG

ಪೇಪರ್ ನಲ್ಲಿ ಬಂದಿರುವ ವರದಿ

ಇದರ ವರದಿಯನ್ನು ನೋಡಲು ಈ ಕೆಳಗಿನ ಲಿಂಕನ್ನು ನೋಡಬಹುದು .

The Hindu paper
http://www.thehindu.com/todays-paper/tp-national/tp-karnataka/easier-to-learn-from-fellow-students/article8220710.ece

The Deccanherald paper
http://www.deccanherald.com/content/528030/bright-ideas-science-expo-govt.html

ಅಭಿಪ್ರಾಯಗಳು

ಶಿಕ್ಷಕರು , ವಿಧ್ಯಾರ್ಥಿಗಳು ಮತ್ತು ಜನಸಾಮಾನ್ಯರಿಂದ ವಸ್ತು ಪ್ರದರ್ಶನದ ಬಗ್ಗೆ ಅಭಿಪ್ರಾಯಗಳು :

Response 1 :The science & Maths fair conducted by the school is really very good. The students did their very best in explaining the concept , over all program me was wonderful, it gives wonder full experience.

Response 2 : first of all many thanks to all the co ordinators and teaching staff for conducting such a great exhibition to encourage high school childrens for science and maths.
It was really nice experience the new generation which is so keen towards these models of science. There are some childrens who are very good in presenting the model they made.
It is really well equiped and helping children to learn throuh it.
Overall very good experience.
Photo 2016-02-19 16-29-01.jpgPhoto 2016-02-19 16-28-57.jpgPhoto 2016-02-19 16-28-54.jpgPhoto 2016-02-19 16-28-50.jpgPhoto 2016-02-19 16-28-44.jpg

ಸರ್ಕಾರಿ ಪ್ರೌಢ ಶಾಲೆ ಈಜೀಪುರ ಶಾಲೆಯ ಶಿಕ್ಷಕರ ಅಭಿಪ್ರಾಯ

ಬೆಂಗಳೂರು ದಕ್ಷಿಣ ವಲಯ-೦೩
ವಿಜ್ಞಾನ ವಸ್ತು ಪ್ರದರ್ಶನ ವರದಿ

೨೦೧೫-೧೬ ನೇ ಸಾಲಿನಲ್ಲಿ , ದಿನಾಂಕ ೦೯-೦೨-೨೦೧೬ಮತ್ತು ೧೦-೦೨-೨೦೧೬ ರಂದು ವಿಜ್ಞಾನ ವಸ್ತು ಪ್ರದರ್ಶನ IT for change ರವರ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ , ಈಜಿಪುರ ಮತ್ತು ಸರ್ಕಾರಿ ಪ್ರೌಢ ಶಾಲೆ, ೯ನೇ ಬ್ಲಾಕ್ ಜಯನಗರ ಇಲ್ಲಿ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಲು cognizent ಕಂಪನಿಯವರು ಬಸ್ಸಿನ ವ್ಯವಸ್ಥೆಯನ್ನು ಬಹಳ ಚೆನ್ನಾಗಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿ ಗಳು ಬಹಳ ಉತ್ಸಾಹದಿಂದ ಹೊರಟಿದ್ದರು. ೮ನೇ ಮತ್ತು ೯ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾವೇ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂದಿಸಿದ ವಸ್ತುಗಳನ್ನು ತಯಾರಿಸಿ , ಉತ್ಸಾಹದಿಂದ ಈ ವಸ್ತು ಪ್ರದರ್ಶನದಲ್ಲಿ ಬಹಳ ಉತ್ತಮವಾಗಿ ವಿವರಣೆ ನಡುತ್ತಾ, ಪ್ರಯೋಗವನ್ನು ಮಾಡಿ ತೋರಿಸಿದರು. ವಿದ್ಯಾರ್ಥಿಗಳಿಗೆ ಇದು ಒಂದು ರೀತಿಯ ಹೊಸ ಅನುಭವವಾಗಿತ್ತು. ಶಾಲೆಯಲ್ಲಿ ತಾವು ಮಾಡಿದ ವಸ್ತು ಅಥವಾ ಚಟುವಟಿಕೆಗಳನ್ನು ಕೇವಲ ನಮ್ಮ ಸಹಪಾಠಿಗಳು ಮಾತ್ರ ವೀಕ್ಷಿಸುತಿದ್ದರು, ಆದರೆ ವಸ್ತು ಪ್ರದರ್ಶನದಲ್ಲಿ ನೂರಾರು ಬೇರೆ ಬೇರೆ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಭಾಗವಹಿಸಿದ ನಮ್ಮ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ಚೇತನವನ್ನು ನೀಡಿತು. ತಾವು ಏನಾದರು ಮಾಡಬಲ್ಲೆವು ಎಂಬ ಆಸಕ್ತಿ ಮಕ್ಕಳಲ್ಲಿ ಉಂಟು ಮಾಡಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಮತ್ತು ಶಾಲೆಗೆ ದ್ವಿತೀಯ ಬಹುಮಾನ ಬಂದಿತು. ನಮ್ಮ ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶೋಭ . ಜೆ ಮತ್ತು ಗಣಿತ ಶಿಕ್ಷಕಿಯಾದ ಎಮ್. ಎಲ್. ಗಿರಿಜ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಬಹಳ ಆಸಕ್ತಿಯಿಂದ ಮಾರ್ಗದರ್ಶನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಸಹಯೋಗದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು..

ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಷಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಬಹಳ ಸಹಕಾರಿಯಾಗಿದೆ. ಆದ್ದರಿಂದ ಈ ತರಹದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ IT for change ರವರಿಗೆ ಧನ್ಯವಾದಗಳನ್ನು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವರ್ಗದವರು ತಿಳಿಸುತ್ತಾರೆ.

ಸರ್ಕಾರಿ ಪ್ರೌಢ ಶಾಲೆ ಜಯನಗರ ೯ನೇ ಬ್ಲಾಕ್ ಶಾಲೆಯ ಶಿಕ್ಷಕರ ಅಭಿಪ್ರಾಯ

ದಿನಾಂಕ 09.02.2016 ಮತ್ತು 10.02.2016 ರಂದು ನಮ್ಮ ಶಾಲೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಜಯನಗರ ೯ನೇ ಬ್ಲಾಕ್ ನಲ್ಲಿ ಈಜೀಪುರ ಮತ್ತು ನಮ್ಮ ಶಾಲೆಯ ಮಕ್ಕಳಿಂದ ಜಂಟಿಯಾಗಿ ಐ.ಸಿ.ಟಿ ಅಧಾರಿತ ವಿಜ್ಞಾನ ವಸ್ಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು . ಹಿಂದಿನ ೬ ದಿನಗಳಿಂದ ಮಕ್ಕಳು ವಸ್ತು ಪ್ರದರ್ಶನಕ್ಕೆ ತಯಾರಿಯನ್ನು ಬಹಳ ಕಾತುರ ಮತ್ತು ಸಂಭ್ರಮದಿಂದ ಹಾಗೂ ಶ್ರಧ್ದೆಯಿಂದ ಮಾಡುತ್ತಿದ್ದರು. ಅವರಿಗೆ ವಹಿಸಿದ್ದ ಮಾದರಿ ತಯಾರಿಕೆ ಅದರ ಹಿಂದಿನ ವೈಜ್ಞಾನಿಕ ಕಾರಣ ಬಗ್ಗೆ ತಿಳಿಯಲು ಕಾತರದಿಂದಿದ್ದರು . ದಿನಾಂಕ 08.02.2016 ರಂದು ನಮ್ಮ ಶಾಲೆಯ ಮುಖ್ಯ ಗುರುಗಳು ಟೆಬಲ್ ವ್ಯವಸ್ಥೆಯನ್ನು ಮಾಡಿಸಿದರು ಮತ್ತು ಪ್ರಶಸ್ತಿ ಪತ್ರಗಳನ್ನು ಸಹ ದಾನಿಗಳ ಸಹಾಯದಿಂದ ವ್ಯವಸ್ಥೆಯಾಗಿತ್ತು . ಹಿಂದಿನ ದಿನವೆ ಎಲ್ಲಾ ಕೊಠಡಿಗಳನ್ನು ಸ್ವಚ್ಛ ಮಾಡಿಸಿ ಟೆಬಲ್ ಮತ್ತು ಚೇರ್ ಹಾಕಿಸಿ ವ್ಯವಸ್ಥೆ ಮಾಡಿಸಿದೆ .
ದಿನಾಂಕ : 09-02-2016 ರಂದು ನನ್ನ ಶಾಲೆಯ Science Exhibition ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭೂತವಾದ ದಿನವಾಗಿತ್ತು ಒಬ್ಬೊ ಬ್ಬರಾಗಿ ತಮ್ಮ ಮಾದರಿಯೊಂದಿಗೆ 9 ಗಂಟೆಗೆ ಶಾಲೆಗೆ ಬಂದಿರುವ ತಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಮಾದರಿ ಮತ್ತು chart ನೊಂದಿಗೆ ಸಿದ್ದವಾದರು 8-9 ನೇತರಗತಿಯ ವಿದ್ಯಾರ್ಥಿಗಳನ್ನು ಮಾತ್ರ Exhibition ನಲ್ಲಿ Participate ಮಾಡಲು ಅವಕಾಶ ನೀಡಲಾಗಿತ್ತು 8ನೇ ತರಗತಿಯ ಎಲ್ಲಾ ಮಕ್ಕಳು ಕಡ್ಡಾಯವಾಗಿ ಭಾಗವಹಿಸಿದ್ದರು. 10 ಗಂಟೆಗೆಸರಿಯಾಗಿ ಈಜಿಪುರ ಶಾಲೆಯ 61 ವಿದ್ಯಾರ್ಥಿಗಳು ತಮ್ಮ ಮಾದರಿಯೊಂದಿಗೆ ಹಾಗೂ ಶೋಭಾ ಮೇಡಮ ಮತ್ತು ಗೀರಿಜಾ ಮೇಡಮ್ ಅವರ ಜೊತೆಯಲ್ಲಿ ಬಂದರು.
ಒಟ್ಟು 6 ಕೊಠಡಿಗಳನ್ನು ಸಿದ್ದ ಪಡಿಸಲಾಗಿತ್ತು ಒಂದು ಕೊಠಡಿಯಲ್ಲಿ Motivational Vedios ಇನ್ನೊಂದರಲ್ಲಿ Phet Simulation EXPT ಬಗ್ಗೆ ತಿಳಿಯಲು ಇನ್ನೊಂದರಲ್ಲಿ Quiz – LCD Projector ಬಳಸಿಕೊಂಡು ವ್ಯವಸ್ಥೆಯಲ್ಲಿ IT For change ಸಂಸ್ಥೆಯ ರಂಜನಿ ಮೆಡಮ್ ನೇತ್ರತ್ವದಲ್ಲಿ Ashok, Nandeesh, Yogish, Anand ಹಾಗೂ ಇತರ ಸದಸ್ಯರು ಒಂದುವಾರದಿಂದ ಬಹಳ ಇನ್ ವೊಲ್ವಾಗಿ Prepare ಮಾಡಿದ್ದರು. ಒಂದು ದೊಡ್ಡಹಾಲ್ ನಲ್ಲಿ physics, chemistry, Biology ಮೂರು ವಿಭಾಗಗಳನ್ನು ಮಾಡಲಾಗಿತ್ತು ಇನ್ನು ಎರಡು ಕೊಠಡಿಗಳಲ್ಲಿ ಗಣಿತಕ್ಕೆ ಸಂಬಂಧ ಪಟ್ಟ ಮಾದರಿಗಳನ್ನು ಜೋಡಿಸಲು ಅವಕಾಶ ಮಾಡಿದ್ದೆವು ನನ್ನ ಶಾಲೆಯ 85 ವಿದ್ಯಾರ್ಥಿಗಳು ಹಾಗೂ ಈಜಿಪುರ ಶಾಲೆಯ 61 ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ ಆಯಾ ವಿಭಾಗಗಳಲ್ಲಿ ಬೋದಿಸಿ ಕೊಂಡು ತಯಾರಾದರು. ಸರಿಯಾಗಿ 11.30 ಕ್ಕೆ ಉದ್ಘಾಟನಾಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನನ್ನ ಶಾಲೆಯ ದೇವೇಂದ್ರನಾಯಕ್ ತಯಾರಿಸಿದ ROCKET ಮಾದರಿಯನ್ನು ಉಡಾವಣೆಮಾಡುವುದರ ಮೂಲಕ ನಮ್ಮ ಶಾಲೆಯ ಮುಖ್ಯೊಪಾದ್ಯಾಯರಾದ ಶ್ರೀ ಗುರುಮೂರ್ತಿಯವರು ವಿಜ್ಞಾನ ಗಣಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ Primary ಹಾಗೂ High school ವಿದ್ಯಾರ್ಥಿಗಳಿಗೆ ಮೊದಲೇ ಆಹ್ವಾನ ನೀಡಿದ್ದೆವು .
ಯಾವುದೇ ಕಾರ್ಯಕ್ರಮವು ಒಳ್ಳೆಯ Plan ಇಲ್ಲದಿದ್ದರೆ success ಆಗುವುದಿಲ್ಲ. ಆದರೆ ಈಕಾರ್ಯಕ್ರಮವು IT FOR CHANGE ರವರು ಒಳ್ಳೆಯ Plan ಮಾಡಿ ಮಕ್ಕಳಿಗೆ ಯಾವ ಕೊಠಡಿಗೆ ಎಷ್ಟು ಜನ? ಯಾವದನ್ನು ಮೊದಲು ನಂತರ ಯಾವುದು? ನೋಡಿದ ನಂತರ ಅವರ ಕೈಯಲ್ಲಿ colour mark ಹಾಕುವುದು ಎಂದು ನಿಗದಿ ಮಾಡಿದ್ದರು.

ಚಟುವಟಿಕೆಗಳು

ಸರ್ಕಾರಿ ಪ್ರೌಢ ಶಾಲೆ ಈಜೀಪುರ

  1. ಅಭಿಸರಣೆ
  2. ಕುಟ್ಯತೆ ಮತ್ತು ತನ್ಯತೆ
  3. ಲಿಟ್ಮಸ್ ಪರೀಕ್ಷೆ
  4. ಸಾಂದ್ರತೆ
  5. ಮೆದು ನೀರು ಮತ್ತು ಗಡಸು ನೀರು
  6. ಸಾಂದ್ರತೆ - ತೇಲುವ ಮೊಟ್ಟೆ
  7. ಅನಿಲಗಳ_ದ್ರವ್ಯರಾಶಿ
  8. ಅಣುಗಳ ಜೋಡಣೆ


ಸರ್ಕಾರಿ ಪ್ರೌಢ ಶಾಲೆ ಜಯನಗರ ೯ನೇ ಬ್ಲಾಕ್