ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ

From Karnataka Open Educational Resources
Jump to navigation Jump to search

ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ

'ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ಬೋಧನೆಗೆ ತಂತ್ರಜ್ಞಾನ ಅಳವಡಿಕೆ '

ಜಯನಗರ 9ನೇ ಬ್ಲಾಕ್‌ ಮತ್ತು ಈಜಿಪುರ ಸರ್ಕಾರಿ ಫ್ರೌಡಶಾಲೆ ಗಳು ಜಂಟಿಯಾಗಿ, ದಿನಾಂಕ 9 & 10 ನೇ ಫೆಬ್ರವರಿ 2016 ರಂದು ಜಯನಗರ 9ನೇ ಬ್ಲಾಕ್‌ನ ಸರ್ಕಾರಿ ಫ್ರೌಡಶಾಲೆಯಲ್ಲಿ"ಮಾಹಿತಿ,ಸಂವಹನ ಮತ್ತು ತಂತ್ರಜ್ಞಾನಾಧಾರಿತ ಗಣಿತ ಮತ್ತು ವಿಜ್ಞಾನ ವಸ್ತುಪ್ರದರ್ಶನ" ಆಯೋಜಿಸಲಾಗಿತ್ತು.

ಈ ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು, ವೀಡಿಯೋಗಳನ್ನು, ರಸಪ್ರಶ್ನೆಗಳನ್ನು ಪ್ರಸ್ತುತಿಪಡಿಸಿದರು.

ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದ್ದು. ಮಕ್ಕಳಿಂದಲೇ ಉತ್ತಮ ಪ್ರಯೋಗವನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.ನೆರೆಹೊರೆಯ 16 ಸರ್ಕಾರಿ ಶಾಲೆಗಳಿಂದ ಮತ್ತು ವಿವಿಧ ಅನುದಾನಿತ ಶಾಲೆಗಳಿಂದ ಸುಮಾರು 550 ಕ್ಕೂ ಹೆಚ್ಚು ಮಕ್ಕಳು ಈ ಪ್ರದರ್ಶನ ವೀಕ್ಷಿಸಿದರು. ಅದೇ ರೀತಿ ವಿವಿಧ ಶಾಲೆಗಳ ಶಿಕ್ಷಕರು ಸಹ ಆಗಮಿಸಿ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಸುದ್ದಿ ನೋಡಿ ಕೆಲವು ಸಾರ್ವಜನಿಕರೂ ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದರು. ಮಕ್ಕಳಿಂದಲೇ ಉತ್ತಮ ಪ್ರಯೋಗವನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.

ಈ ಕಾರ್ಯಕ್ರಮವು, ತರಗತಿಕೋಣೆ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬಳಕೆ/ಅಳವಡಿಕೆಗಾಗಿ ಬೆಂಗಳೂರು ನಗರ ಜಿಲ್ಲೆಯ ವಲಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನದಲ್ಲಿರುವ "ಶಿಕ್ಷಕರ ಕಲಿಕಾ ಸಮುದಾಯ" ಕಾರ್ಯಕ್ರಮದ ಎರಡು ವರ್ಷಗಳ ಪ್ರತಿಫಲನವಾಗಿತ್ತು. "ಶಿಕ್ಷಕರ ಕಲಿಕಾ ಸಮುದಾಯ" ಕಾರ್ಯಕ್ರಮವೂ "ಐಟಿ ಫಾರ್ ಚೇಂಜ್ " ಎಂಬ ಸಂಸ್ಥೆಯ ಮೂಲಕ ಕಾಗ್ನಿಜೆಂಟ್ ಟೆಕ್ನಾಲಜಿ ಸೆಲ್ಯೂಶನ್ ಕಂಪನಿರವರ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ "ಕಾಗ್ನಿಜೆಂಟ್ ಫೌಂಡೇಷನ್" ರವರ ಸಹಭಾಗಿತ್ವದಲ್ಲಿ ಅನುಷ್ಟಾನಗೊಳ್ಳುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿನ ದಕ್ಷಿಣ ವಲಯ-3 ರ 16 ಸರ್ಕಾರಿ ಫ್ರೌಡಶಾಲೆಗಳಲ್ಲಿ 3 ವರ್ಷಗಳ "ಶಿಕ್ಷಕರ ಕಲಿಕಾ ಸಮುದಾಯ ಕಾರ್ಯಕ್ರಮವನ್ನು" ಐಟಿ ಫಾರ್ ಚೇಂಜ್ ಸಂಸ್ಥೆಯು 2014-15 ನೇ ಶೈಕ್ಷಣಿಕ ವರ್ಷದಿಂದ ಹಮ್ಮಿಕೊಂಡಿದೆ. ಈ ಮೂಲಕ , ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯವಾಗಿಸುವಲ್ಲಿ ಮತ್ತು ಶಾಲಾ ಆಡಳಿತ ಮತ್ತು ಅಭಿವೃದ್ದಿ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಬಗ್ಗೆ ಶಿಕ್ಷಕರಿಗೆ ತಿಳಿಸಿಕೊಡಲಾಗುತ್ತಿದ್ದು, ಶಾಲೆಯ ತರಗತಿ ಕೋಣೆ ಪ್ರಕ್ರಿಯೆಯಲ್ಲಿ ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಬಳಕೆಗೆ ಶಿಕ್ಷಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

ಈ ಕಾರ್ಯಕ್ರಮದಡಿಯಲ್ಲಿ ಪರಿಣಾಮಕಾರಿ ಬೋಧನೆ ಕಲಿಕೆ ಮತ್ತು ಶಿಕ್ಷಕರ ವೃತ್ತಿಪರ ಬೆಳವಣಿಗೆಗ ವಿವಿಧ ಕಾರ್ಯತಂತ್ರಗಳನ್ನು ಶಿಕ್ಷಕರಿಗೆ ಪರಿಚಯಿಸಲಾಗುತ್ತಿದೆ. ದೊಮ್ಮಲೂರು, ಈಜಿಪುರ ಮತ್ತು ಬೇಗೂರು ಸರ್ಕಾರಿ ಫ್ರೌಡಶಾಲೆಗಳ ಕನ್ನಡ ಮತ್ತು ಗಣಿತ ಶಿಕ್ಷಕರು ತಮ್ಮ ತರಗತಿ ಭೋದನೆಗೆ ಗಣಕಯಂತ್ರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಗಣಿತ ಭೋದನೆಯಲ್ಲಿ ಸೂಕ್ತ ಪರಿಕಲ್ಪನಾ ಕೌಶಲ ವೃದ್ದಿಪಡಿಸಲು ವಿವಿಧ ರೀತಿಯ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಅಪ್ಲೀಕೇಶನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ಭಾಷಾ ಬೋಧನೆಗೆ ಪೂರಕವಾಗಿ ತಂತ್ರಜ್ಞಾನ ಬಳಸುವ ಮೂಲಕ ಮಕ್ಕಳನ್ನು ಭಾಷಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಲಾಗುತ್ತಿದೆ.

ಈ ಮೂಲಕ ಮಕ್ಕಳು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಮ್ಯಾಗಜಿನ್‌ಗಳನ್ನು ಸಿದ್ದಪಡಿದಿ ಪ್ರಸಾರ ಮಾಡುತ್ತಿದ್ದಾರೆ. ಹಾಗೆಯೇ ತಮ್ಮ ತರಗತಿ ವಿಷಯಗಳಿಗೆ ಪೂರಕವಾದ ತಂತ್ರಜ್ಞಾನಧಾರಿತ ಸಂಪನ್ಮೂಲಗಳನ್ನು ಸಂಗ್ರಹಿಸಿ ಡಿಜಿಟಲ್ ಸಂಪನ್ನೂಲಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಮಕ್ಕಳಲ್ಲಿ ಸಂವಹನ ಕೌಶಲವನ್ನು ವೃದ್ದಿಸಲು ಸಾಧ್ಯವಾಗುವಂತೆ, ಮಕ್ಕಳು ತಾವು ಸಂಗ್ರಹಿಸಿದ ಸಂಪನ್ಮೂಲಗಳನ್ನು ಇತರರೊಡನೆ ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಈ ಕಾರ್ಯಕ್ರಮದಡಿಯಲ್ಲಿ ದಕ್ಷಿಣ ವಲಯ-3 ರ 16 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್‌ ಸ್ಥಾಪಿಸಲಾಗಿದ್ದು, ಶಿಕ್ಷಕರು ತಮ್ಮ ತಮ್ಮ ವಿಷಯಗಳ ಬೋಧನೆ ಈ ಲ್ಯಾಬ್‌ಗಳನ್ನು ಬಳಸುತ್ತಿದ್ದಾರೆ.

ಈ ಶಾಲೆಗಳ ಮುಖ್ಯ ಶಿಕ್ಷಕರು, ಗಣಿತ ಶಿಕ್ಷಕರು ಮತ್ತು ಕನ್ನಡ ಶಿಕ್ಷಕರು ತಮ್ಮ ವಲಯದ ಇತರೇ ಶಾಲೆಗಳ ಶಿಕ್ಷಕರೊಡನೆ ನಿರಂತರವಾಗಿ ವಾಟ್ಸಪ್, ಟೆಲಿಗ್ರಾಮ್ ಮತ್ತು ಇಮೇಲ್‌ಗಳ ಮೂಲಕ ತಮ್ಮ ಸಂಪನ್ಮೂಲಗಳನ್ನು, ಬೋಧನಾ ಆಲೋಚನೆಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನಾಧಾರಿತ ಬೋಧನೆಯ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ ಮತ್ತು ಅವರ ಭಾಗವಹಿಸುವಿಕೆ ಪರಿಣಾಮಕಾರಿಯಾಗಿದೆ ಎಂಬುದನ್ನು ಈ ಕಾರ್ಯಕ್ರಮದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಶಿಕ್ಷಕರು ಸಹ ತಮ್ಮಸಂಪನ್ಮೂಲಗಳನ್ನು ಮತ್ತು ಬೋಧನಾ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿರುವುದರಿಂದ ಶಿಕ್ಷಕ-ಶಿಕ್ಷಕರ ನಡುವೆ ಸಹಯೋಜಿತ ಮತ್ತು ಸಹವರ್ತಿ ಕಲಿಕೆ ಸಾಧ್ಯವಾಗಿದೆ.



Exhibition Banner .JPG

ಪೇಪರ್ ನಲ್ಲಿ ಬಂದಿರುವ ವರದಿ

ಇದರ ವರದಿಯನ್ನು ನೋಡಲು ಈ ಕೆಳಗಿನ ಲಿಂಕನ್ನು ನೋಡಬಹುದು .

The Hindu paper
http://www.thehindu.com/todays-paper/tp-national/tp-karnataka/easier-to-learn-from-fellow-students/article8220710.ece

The Deccanherald paper
http://www.deccanherald.com/content/528030/bright-ideas-science-expo-govt.html

ಅಭಿಪ್ರಾಯಗಳು

ಶಿಕ್ಷಕರು , ವಿಧ್ಯಾರ್ಥಿಗಳು ಮತ್ತು ಜನಸಾಮಾನ್ಯರಿಂದ ವಸ್ತು ಪ್ರದರ್ಶನದ ಬಗ್ಗೆ ಅಭಿಪ್ರಾಯಗಳು :

Response 1 :The science & Maths fair conducted by the school is really very good. The students did their very best in explaining the concept , over all program me was wonderful, it gives wonder full experience.

Response 2 : first of all many thanks to all the co ordinators and teaching staff for conducting such a great exhibition to encourage high school childrens for science and maths.
It was really nice experience the new generation which is so keen towards these models of science. There are some childrens who are very good in presenting the model they made.
It is really well equiped and helping children to learn throuh it.
Overall very good experience.
Photo 2016-02-19 16-29-01.jpgPhoto 2016-02-19 16-28-57.jpgPhoto 2016-02-19 16-28-54.jpgPhoto 2016-02-19 16-28-50.jpgPhoto 2016-02-19 16-28-44.jpg

ಸರ್ಕಾರಿ ಪ್ರೌಢ ಶಾಲೆ ಈಜೀಪುರ ಶಾಲೆಯ ಶಿಕ್ಷಕರ ಅಭಿಪ್ರಾಯ

ಬೆಂಗಳೂರು ದಕ್ಷಿಣ ವಲಯ-೦೩
ವಿಜ್ಞಾನ ವಸ್ತು ಪ್ರದರ್ಶನ ವರದಿ

೨೦೧೫-೧೬ ನೇ ಸಾಲಿನಲ್ಲಿ , ದಿನಾಂಕ ೦೯-೦೨-೨೦೧೬ಮತ್ತು ೧೦-೦೨-೨೦೧೬ ರಂದು ವಿಜ್ಞಾನ ವಸ್ತು ಪ್ರದರ್ಶನ IT for change ರವರ ಸಹಯೋಗದೊಂದಿಗೆ ಸರ್ಕಾರಿ ಪ್ರೌಢ ಶಾಲೆ , ಈಜಿಪುರ ಮತ್ತು ಸರ್ಕಾರಿ ಪ್ರೌಢ ಶಾಲೆ, ೯ನೇ ಬ್ಲಾಕ್ ಜಯನಗರ ಇಲ್ಲಿ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದುಕೊಂಡು ಹೋಗಲು cognizent ಕಂಪನಿಯವರು ಬಸ್ಸಿನ ವ್ಯವಸ್ಥೆಯನ್ನು ಬಹಳ ಚೆನ್ನಾಗಿ ಮಾಡಿದ್ದರು. ಎಲ್ಲಾ ವಿದ್ಯಾರ್ಥಿ ಗಳು ಬಹಳ ಉತ್ಸಾಹದಿಂದ ಹೊರಟಿದ್ದರು. ೮ನೇ ಮತ್ತು ೯ನೇ ತರಗತಿಯ ಎಲ್ಲಾ ವಿದ್ಯಾರ್ಥಿ