ಅಣುಗಳ ಜೋಡಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಅಣುಗಳ ಜೋಡಣೆ

ಅಂದಾಜು ಸಮಯ

೩೦ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

3 ಪಾರದರ್ಶಕ ಬಾಟಲ್ಗಳು ಹಾಗೂ ಥರ್ಮಾಕೋಲ್ ಬಣ್ಣದ ಚೆಂಡುಗಳು,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

arrengement%2Bof%2Bmolecules.png

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಒಂದನೇ ಬಾಟಲಿನಲ್ಲಿ ಥರ್ಮಾಕೋಲ್ ಚೆಂಡುಗಳನ್ನು ಪೂರ್ತಿಯಾಗಿ ತುಂಬುವುದು ಹಾಗೂ ಅದನ್ನು ಮುಚ್ಚಳದ ಸಹಾಯದಿಂದ ಮುಚ್ಚುವುದು ನಂತರ ಆ ಬಾಟಲ್ ಅನ್ನು ಚೆನ್ನಾಗಿ ಕುಲುಕುವುದು. ಮಾಡಿದನಂತರ ಅದರಲ್ಲಿ ಯಾವುದೇ ರೀತಿಯ ಚಲನೆ ಉಂಟಾಗುವುದಿಲ್ಲ, ಏಕೆಂದರೆ ಘನದಲ್ಲಿ ಅಣುಗಳ ಒತ್ತಾಗಿ ಇರುವುದರಿಂದ ಅಲ್ಲಿ ಯಾವುದು ರೀತಿಯ ಚಲನೆ ಆಗುವುದಿಲ್ಲ,

ಎರಡನೇ ಬಾಡಲಿನಲ್ಲಿ 10-15 ಥರ್ಮಾಕೋಲ್ ಚಿಣ್ಣದ ಚೆಂಡನ್ನು ಹಾಕಿ ಅದನ್ನು ಶೇಕ್ ಮಾಡುವುದು. ಹೀಗೆ ಮಾಡಿದಾಗ ಒಳಗಿರುವ ಚೆಂಡುಗಳು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತದೆ. ಏಕೆಂದರೆ ದ್ರವದಲ್ಲಿ ಅಣುಗಳ ನಡುವಿನ ಅಂತರ ಘನಗಳಲ್ಲಿರುವುದಕ್ಕಿಂತ ಹೆಚ್ಚು ಸ್ವಾತಂತ್ರ್ಯ ಪಡೆದಿರುತ್ತದೆ ಪರಮಾಣುಗಳ ಘನ ವಸ್ತುವಿಗಿಂತ ಹಚ್ಚು ಚಲನೆ ಶಕ್ತಿಯನ್ನು ಪಡೆದಿರುತ್ತದೆ.

ಮೂರನೇ ಬಾಟಲಿನಲ್ಲಿ 3-4 ಥರ್ಮಾಕೋಲ್ ಚಿಣ್ಣದ ಚೆಂಡನ್ನು ಹಾಕಿ ಶೇಕ್ ಮಾಡಿದಾಗ ಅಣುಗಳು ಸ್ವತಂತ್ರವಾಗಿ ಚಲಿಸುವುದನ್ನು ಕಾಣಬಹುದು. ಏಕೆಂದರೆ ಅನಿಲಗಳಲ್ಲಿ ಪರಮಾಣುಗಳ ಸ್ವತಂತ್ರವಾಗಿ ಚಲಿಸಬಲ್ಲವು. ಏಕೆಂದರೆ ಅನಿಲಗಳಲ್ಲಿ ಅಣುಗಳು ತುಂಬ ವಿರಳವಾಗಿ ಇರುವುದರಿಂದ ಚಲನೆಗೆ ಮಿತಿಯಿರುವುದಿಲ್ಲ, ತಿಳಿದುಕೊಂಡಿರುವ ಅಂಶ:- ಇಂತಹ ಪರಮಾಣು ರಚನೆ ಇರುವುದರಿಂದ ಘನಕ್ಕೆ ನಿರ್ದಿಷ್ಟ ಆಕಾರ, ದ್ರವಕ್ಕೆ ಸಂಗ್ರಾಹಕದ ಆಕಾರ ಮತ್ತು ಅನಿಲಗಳಿಗೆ ನಿರ್ಧಷ್ಟ ಆಕಾರವಿಲ್ಲ ಎಂದು ಹೇಳಬಹುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ [ದ್ರವ್ಯದ ಸ್ಥಿತಿಗತಿಗಳು]