ಅನಿಲಗಳ ಗುಣಲಕ್ಷಣಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಅನಿಲಗಳ ಗುಣಲಕ್ಷಣಗಳು

ಅಂದಾಜು ಸಮಯ

20 Min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಚಟುವಟಿಕೆಯ ಉದ್ದೇಶ:

  1. ಅನಿಲಗಳು ಸುಲಭವಾಗಿ ಸಂಕುಚಿಸುತ್ತವೆ.
  2. ಅನಿಲಗಳು ವಿವಿಧ ಆಕಾರಗಳ ಆಕರಗಳನ್ನು ಆಕ್ರಮಿಸಿ ಕೊಳ್ಳುತ್ತದೆ.
  3. ಘನ ಮತ್ತು ದ್ರವಗಳಿಗೆ ಹೋಲಿಸಿದಾಗ ಅನಿಲದ ಅಣುಗಳು ಅವಕಾಶವನ್ನು ಹೆಚ್ಚು ಆಕ್ರಮಿಸಿ ಕೊಳ್ಳುತ್ತವೆ.

2..png

  • ಚಿತ್ರದಲ್ಲಿ ತೋರಿಸಿರುವಂತೆ ಸಿಲಿಂಡರನ್ನು ಪಂಪ್‌ಗೆ ಜೋಡಿಸಿ ಸ್ಥಿರ ತಾಪಮಾನ ಮತ್ತು ಸ್ಥಿರ ಒತ್ತಡದಲ್ಲಿ ಅನಿಲವನ್ನು ಸಿಲಿಂಡರಗೆ ತಂಬುವುದು.

ಆರಂಭದ ಸ್ಥಿತಿಯಲ್ಲಿ ಅನಿಲದ ಅಣುಗಳ ಪ್ರಮಾಣ ಕಡಿಮೆ ಇರುವುದರಿಂದ ಸ್ಥಿರ ತಾಪಮಾನ ಮತ್ತು ಸ್ಥಿರ ಒತ್ತಡ ಇರುವುದರಿಂದ ಸಿಲಿಂಡರನ ಒಳಗೆ ಅವಕಾಶ ಹೆಚ್ಚು ಇರುವುದರಿಂದ ಅಣುಗಳ ಚಲನೆ ಹೆಚ್ಚಾಗಿರುತ್ತದೆ.

  • ಈ ಚಟುವಟಿಕೆಯಲ್ಲಿ ತಾಪಮಾನವನ್ನು ಮಂಜುಗೆಡ್ಡೆಯ ಸಹಾಯದಿಂದ ಕಡಿಮೆ ಮಾಡುತ್ತಾ ಹೋದಂತೆ ಅಣುಗಳ ನಡುವಿನ ಅವಕಾಶ ಮತ್ತು ಚಲನೆ ಕಡಿಮೆಯಾಗುತ್ತದೆ. ಹಾಗೂ ಅಣುಗಳು ಒತ್ತಾತ್ತಾಗಿ ಜೋಡಣೆಯಾಗುತ್ತಾ ಹೋಗುತ್ತವೆ, ಒತ್ತಡ ಕಡಿಮೆಯಾಗುತ್ತದೆ.

3..png

  • ಈ ಚಟುವಟಿಕೆಯಲ್ಲಿ ಸಿಲಿಂಡರನ್ನು ಕಾಯಿಸುತ್ತಾ ಹೋದಂತೆ ಒಳಗಿರುವ ಅಣುಗಳ ನಡುವಿನ ಅವಕಾಶ ಮತ್ತು ಚಲನೆ ಹೆಚ್ಚಾಗುತ್ತದೆ. ಹಾಗೂ ಅಣುಗಳು ದೂರ ಸರಿಯಲು ತೊಡಗುತ್ತವೆ.

4..png

  • ಸಿಲಿಂಡರಗೆ ಅನಿಲದ ಪ್ರಮಾಣವನ್ನು ಹೆಚ್ಚು ತುಂಬಿ ತಾಪಮಾನ ಮತ್ತು ಒತ್ತಡವನ್ನು ಹೆಚ್ಚು ಮಾಡುತ್ತಾ ಹೋದಂತೆ ಅಣುಗಳ ಚಲನೆಯ ವೇಗ ಹೆಚ್ಚಿ ಒತ್ತಡವು ಹೆಚ್ಚಾಗಿ ಸಿಲಿಂಡ್ ಸಿಡಿಯುತ್ತದೆ. ಅನಿಲದ ಅಣುಗಳು ಹೊರ ಬರುತ್ತದೆ.

5..png

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಅನಿಲಗಳಲ್ಲಿ ಅಣುಗಳ ಜೋಡಣೆ ಹೇಗೆ ಇರುತ್ತದೆ?
  2. ಅನಿಲಗಳ ಗುಣಲಕ್ಷಣಗಳನ್ನು ತಿಳಿಸಿ.
  3. ಮುಚ್ಚಿದ ಸಿಲಿಂಡರನ ಒಳಗೆ ಕಡಿಮೆ ಅನಿಲವನ್ನು ತುಂಬಿದಾಗ ಅವುಗಳ ಚಲನೆ ಹೇಗಿರುತ್ತದೆ ಹಾಗು ಹೆಚ್ಚು ತುಂಬಿದಾಗ ಏನಾಗುತ್ತದೆ.?
  4. ಉಷ್ಣಾಂಶವನ್ನು ಹೆಚ್ಚು ಮಾಡುತ್ತಾ ಹೋದಾಗ ಅಣುಗಳ ಚಲನೆ ಏನಾಗುತ್ತದೆ.? ಮತ್ತು ಒತ್ತಡದಲ್ಲಾಗುವ ಬದಲಾವಣೆಗಳೇನು?
  5. ಉಷ್ಣಾಂಶವನ್ನು ಸ್ಥಿರಗೊಳಿಸಿ ಒತ್ತಡವನ್ನು ಹೆಚ್ಚುಮಾಡಿದಾಗ ಏನಾಗುತ್ತದೆ.?
  6. ಮಂಜುಗೆಡ್ಡೆ ಸಹಾಯದಿಂದ ಸಿಲಿಂಡರನ್ನು ತಂಪುಗೊಳಿಸುತ್ತಾ ಹೋದಾಗ ಅನಿಲ, ಒತ್ತಡ, ಉಷ್ಣಾಂಶ ಇವುಗಳ ಮೇಲಿನ ಪರಿಣಾಮಗಳೇನು.?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್