ಅಮ್ಮ ಬರೋದು ಯಾವಾಗ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ರೋಜಾಳ ಅಮ್ಮ ಬೆಳಗ್ಗೆಯೇ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ಮಲಗುವ ಮೊದಲೇ ಬರುತ್ತೇನೆ ಎಂದು ಮಾತು ಕೊಡುತ್ತಾರೆ. ಅಮ್ಮ ಇಲ್ಲದೇ ಇಡೀ ದಿನವನ್ನು ರೋಜಾ ಹೇಗೆ ಕಳೆಯುತ್ತಾಳೆ? ಈ ಕಥೆಯ ಮೂಲಕ ನೋಡೋಣ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಸಮಯ ಮತ್ತು ಗಡಿಯಾರದ ಬಗ್ಗೆ ಮಾಹಿತಿಯನ್ನು ನೀಡಬಹುದು. ವಿವಿಧ ಭಾವನೆಗಳ ಕುರಿತಾಗಿ ಮಕ್ಕಳಿಗೆ ಪರಿಚಯಿಸಬಹುದು.

ಕಥಾ ವಸ್ತು :ಕುಟುಂಬ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಆರೊಗ್ಯ ಮತ್ತು ಸ್ವಚ್ಚತೆ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Amma%20Barodu%20Yavaga.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದಾಗ, ಅವರಿಗೆ ಇಷ್ಟವಾಗುವ ಮತ್ತು ದುಃಖವನ್ನುಂಟು ಮಾಡುವ ಅಂಶಗಳ ಕುರಿತು ಚರ್ಚಿಸುವುದು?
  2. ಮಕ್ಕಳು ಮನೆಗೆಲಸದಲ್ಲಿ ತಮ್ಮ ಪೋಷಕರಿಗೆ ಹೇಗೆ ನೆರವಾಗುತ್ತಾರೆ ಎಂಬುದನ್ನ ಚರ್ಚಿಸುವುದು?
  3. ದಿನನಿತ್ಯ ಮಕ್ಕಳು ಹ್ಸಾಲಯನ್ನು ಹೊರತು ಪಡಿಸಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಚಟುವಟಿಕೆಗಳ ಕುರಿತು ಚರ್ಚಿಸುವುದು
  4. ಮನೆಯಲ್ಲಿ ಒಬ್ಬರೇ ಇದ್ದಾಗ ನಿಮ್ಮಲ್ಲಿ ಉಂಟಾಗುವ ಭಾವನೆಗಳು ಯಾವುವು? ಹಾಗೂ ನೀವು ಆಗ ಏನು ಮಾಡುತ್ತೀರಿ ಎಂಬುದನ್ನು ಗುಂಪಿನಲ್ಲಿ ಚರ್ಚಿಸುವುದು
  5. ಮಕ್ಕಳು ಆಡಲು ಇಚ್ಛಿಸುವ ಆಟಗಳಾವುವು, ಎಲ್ಲಿ ಮತ್ತು ಯಾರೊಂದಿಗೆ ಆಡಲು ಇಚ್ಛಿಸುತ್ತಾರೆ ಎಂದು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.

ಸಂಪೂರ್ಣ ದೈಹಿಕ ಚಟುವಟಿಕೆ

ಮಕ್ಕಳಿಗೆ ಚಟುವಟಿಕೆ ಆಧಾರಿತ ಹಾಡನ್ನು ಹಾಡಿಸುವುದು. ಹಾಡು "ಅಮ್ಮ ನನಗೊಂದು ಪುಟ್ಟದೊಂದು ಗೊಂಬೆ ತಂದುಕೊಡೆ"

ಕಥೆಗಳ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡುವುದು.

ಆಲಿಸುವ ಪೂರ್ವದ ಚಟುವಟಿಕೆ

  • ಪರಿಸರದಲ್ಲಿ ಕಂಡುಬರುವ ವಿವಿಧ ರೀತಿಯ ತರಕಾರಿ ಹಣ್ಣು ಹಂಪಲುಗಳನ್ನು ಪಟ್ಟಿ ಮಾಡುವುದು.
  • ಸಂತೆಯಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ಪಟ್ಟಿ ಮಾಡುವುದು.
  • ಕೆಲಸದ ಮಹತ್ವದ ಬಗ್ಗೆ ಮಾತನಾಡಲು ಹೇಳುವುದು.
  • ನಮ್ಮ ದಿನನಿತ್ಯದ ಜೀವನದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸುವುದು.

ಆಲಿಸುವ ಸಮಯದ ಚಟುವಟಿಕೆ

  • ಅಮ್ಮ ಎಲ್ಲಿಗೆ ಹೋಗಿದ್ದರು? ಅವರ ಉದ್ದೇಶ ಏನಾಗಿತ್ತು?
  • ರಾಜು ತನ್ನ ಬಯಕೆಗಳನ್ನು ಹೇಗೆ ವ್ಯಕ್ತಪಡಿಸುತ್ತಾನೆ?
  • ಮನೆಯಲ್ಲಿ ಯಾರೂ ಇಲ್ಲದಾಗ ನಿಮ್ಮಲ್ಲುಂಟಾಗುವ ಭಾವನೆಗಳೇನು?
  • ನಿಮ್ಮ ದಿನಿತ್ಯದ ವೇಳಾಪಟ್ಟಿ ಹೇಗಿದೆ?

ಆಲಿಸಿದ ನಂತರದ ಚಟುವಟಿಕೆಗಳು

  • ನಿಮ್ಮ ಪೋಷಕರೊಡನೆ ಹೊರಗೆ ಹೋದಾಗ ನಿಮಗಾದ ಅನುಭವಗಳೇನು?
  • ಕುಟುಂಬದ ಮಹತ್ವದ ಬಗ್ಗೆ ಬರೆಸುವುದು.
  • ನಿಮ್ಮ ಬೇಸಿಗೆ ರಜೆಯಲ್ಲಿ ನೀವು ಮಾಡುವ ಕೆಲಸಗಳೇನು?
  • ಸಮಯದ ಮಹತ್ವದ ಬಗ್ಗೆ ತಿಳುಸುವುದು.
  • ನಿಮಗೆ ಲಭ್ಯವಿರುವ ತರಕಾರಿಗಳು ಹಾಗೂ ಅವುಗಳ ಮಹತ್ವದ ಬಗ್ಗೆ ಚರ್ಚಿಸಿ ಬರೆಯಿರಿ.
  • ಪೋಷಕಾಂಶಗಳ ಬಗ್ಗೆ ತಂಡದೊಂದಿಗೆ ಚರ್ಚಿಸಿ.
  • ಮನೆಯಲ್ಲಿ ಅಜ್ಜಿ ತಾತನ ಮಹತ್ವವೇನು ಎಂಬುದನ್ನ ತಿಳಿಸಿ.