ಆಮೆ ಮತ್ತು ಮೊಲ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮೊಲ ಮತ್ತು ಆಮೆ ನಡುವೆ ಓಟದ ಪಂದ್ಯದ ಹಳೆಯ ಕಥೆ ನೆನಪಿದೆಯಾ? ಇದು ಅಂತಹುದೇ ಪಂದ್ಯದ ಹೊಸ ಕಥೆ. ಪೈಪೋಟಿಯಲ್ಲ, ಸಹಯೋಗದ ಸ್ಪರ್ಧೆ ಏನಾಯಿತೆಂದು ಮೊಲ ಮತ್ತು ಆಮೆ ಕತೆ ಓದಿ ತಿಳಿಯಿರಿ.
ಉದ್ದೇಶಗಳು :
ಕಥೆಯ ಮೂಲಕ ಹೊಸ ಪದಗಳ ಪರಿಚಯ, ಸರಳ ವಾಕ್ಯಗಳ ರಚನೆ ಮತ್ತು ಪರಸ್ಪರ ಸಹಾಯ ಮಾಡಬೇಕೆಂಬ ನೀತಿಯನ್ನ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು : ಸ್ನೇಹ,ಸಹಾಯ - ಸಹಕಾರ,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Aame%20Mattu%20Mola.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
ಕಪ್ಪೆ ಓಟದ ಆಟ ಆಡಿಸುವುದು
ಆಲಿಸುವ ಪೂರ್ವದ ಚಟುವಟಿಕೆ
- ಮಕ್ಕಳೇ ಕಪ್ಪೆ ಓಟದ ಆಟ ಚನ್ನಾಗಿತ್ತೇ ?
- ಈ ಆಟದಲ್ಲಿ ನೀವೆಲ್ಲಾ ಏನಾಗಿದ್ದಿರಿ?
- ಇದೇ ರೀತಿ ಬೇರೆ ಪ್ರಾಣಿಗಳು ಆಟ ಆಡಿರುವ ಕಥೆ ನಿಮಗೆ ತಿಳಿದಿದಿಯೇ? (ಮರಕೋತಿ ಆಟ, ಹುಲಿ ಹಸು ಆಟ, ಮರಕೋತಿ ಆಟ, ಆಮೆ ಮೊಲದ ಓಟ)
- ಆಮೆ ಮತ್ತು ಮೊಲದ ಓಟದ ಸ್ಪರ್ಧೆಯಲ್ಲಿ ಯಾರು ಸೋಲುತ್ತಾರೆ?
- ಸೋತ ನಂತರ ಏನಾಗಿರಬಹುದು ನಿಮಗೆ ತಿಳಿದಿದಿಯೇ? ಏನಾಗಿರಬಹುದೆಂಬ ಮುಂದಿನ ಭಾಗದ ಕಥೆಯನ್ನು ಕೇಳೋಣವೇ?
ಆಲಿಸುವ ಸಮಯದ ಚಟುವಟಿಕೆ
- ಓಟದ ಸ್ಪರ್ಧೆಯ ನಂತರ ಎರಡೂ ಪ್ರಾಣಿಗಳು ಹೇಗೆ ವರ್ತಿಸುತ್ತಿದ್ದವು?
- ಸಿಂಹರಾಜನಿಗೆ ಪಕ್ಕದ ರಾಜ್ಯದ ರಾಜನ ಜೊತೆ ಏನು ಮಾತುಕಥೆ ಇರಬಹುದು?
- ರಾಜ ಇಬ್ಬರಲ್ಲಿ ಒಬ್ಬರು ಹೋಗಿ ಎಂದು ಹೇಳಿದಾಗ ಆಮೆ ಮತ್ತು ಮೊಲ ಏನಲ್ಲಾ ಮಾತನಾಡಿಕೊಂಡಿರಬಹುದು?
- ನೆಲದ ಮೇಲೆ ನಡೆವಾಗ ಮೊಲವೇ ಏಕೆ ಆಮೆಯನ್ನು ಹೊತ್ತುಕೊಂಡು ಹೋಗುತ್ತದೆ?
ಆಲಿಸಿದ ನಂತರದ ಚಟುವಟಿಕೆಗಳು
- ಆಮೆ ಮತ್ತು ಮೊಲದ ಓಟದ ಸ್ಪರ್ಧೆಯನ್ನು ಅಣುಕು ಮಾಡುವುದು.
- ಆಮೆ ಮತ್ತು ಮೊಲದ ಓಟದ ಸ್ಪರ್ಧೆಯ ಕಾಲ್ಪನಿಕ ಚಿತ್ರ ಬರೆಯವುದು.
- ಕಾಡು ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ಪಟ್ಟಿ ಮಾಡುವುದು.
- ಭೂಚರ, ಜಲಚರ ಮತ್ತು ಉಭಯವಾಸಿಗಳನ್ನು ಪಟ್ಟಿ ಮಾಡುವುದು.
- ಚಿಪ್ಪನ್ನು ಹೊಂದಿರುವ ಪ್ರಾಣಿಗಳನ್ನು ಪಟ್ಟಿ ಮಾಡುವುದು.
- ತೆಂಗಿನ ಕಾಯಿ ಚಿಪ್ಪು ಮತ್ತು ಜೇಡಿಮಣ್ಣನ್ನು ಬಳಸಿ ಆಮೆಯನ್ನೂ ಹಾಗೂ ಸ್ಪಾಂಜ್ ಬಳಸಿಕೊಂಡು ಮೊಲದ ಮಾದರಿಯನ್ನು ತಯಾರಿಸುವುದು.
ಪಠ್ಯ ಪುಸ್ತಕಕ್ಕೆ ಸಂಪರ್ಕಿಸಬಹುದು
- ಎರಡನೇ ತರಗತಿ ಸವಿಕನ್ನಡ
- ಒಂಟೆ ಕುದುರೆಯ ಸ್ಪರ್ಧೆ